MADHWA · sulaadhi · Vijaya dasaru

Appattu pariharaka Suladi

ಧ್ರುವತಾಳ
ಹಗರಣ ಮಾಡದಿರು ಹರಿಯೆ ನಿನಗೆ ಕರವ
ಮುಗಿದು ಬೇಡಿಕೊಂಬೆ ಭಕ್ತ ಜನರ
ಬಗೆಬಗೆಯಿಂದ ಬಂದ ಕ್ಲೇಶವ ಕಳದು ನಂ
ಬಿಗೆಯೆತ್ತು ಪಾಲಿಸುವ ಗುಣವಾರಿಧಿ
ಜಗದೊಳು ನಿನಗಿದೆ ವ್ಯಾಪಾರವಲ್ಲದೆ
ಮಿಗಿಲೇನೊ ಕಾಣೆ ಸರ್ವದ ನೋಡಲು
ಪಗೆವುಳ್ಳವನಾದರು ಬಂದು ನಿನ್ನ ಚರಣ
ಯುಗಳ ನಂಬಲು ಕಾಯುವೆನೆಂಬೊ ಬಿರಿದು
ಅಗಣಿತವಾಗಿ ದಶದಿಕ್ಕಿಲಿ ಒಪ್ಪುತಿದೆ
ನಿಗಮವಿನುತ ನಿಷ್ಕಳಂಕ ಮಹಿಮ
ಸೊಗಸೋದೆ ಸರಿ ಸಜ್ಜನರ ಪ್ರತಿಪಾಲಿಪುದು
ಮಗುಳೆ ಉತ್ತರವುಂಟೆ ಎಲೊ ದೇವನೆ
ಖಗರಾಜಮಣಿಯಿರೆ ಪನ್ನಗ ಗರಳದ ಭಯವೇನು
ಹಗಲು ಇರಳು ಒಡನಿದ್ದರಾಗೆ
ಭಗವಂತ ಹಲವು ಮಾತಿನ ಫಲವೇನು ಭ
ಕ್ತಗೆ ಬಂದಾಪತ್ತು ಪರಿಹರಿಸಿ ನೋಡು ಕರುಣಾದಲ್ಲಿ
ನಗೆಗೆಡೆಗಾಗಗೊಡದೆ ರಾಹುವಿನಿಂದಲಿ ಹೊರ
ದೆಗದ ಇಂದುವಿನಂತೆ ಮಾಡು ಜೀಯಾ
ನೆಗಳಿಯ ಕತ್ತರಿಸಿ ಗಜವ ಕಾಯ್ದದದು ಮನ
ಸಿಗೆ ಯಾಗುತಿದೆ ಸಿದ್ದವೆಂಬೋದಿಂದಲಾ
ತ್ರಿಗುಣಾತೀತ ಕೃಷ್ಣ ವಿಜಯ ವಿಠ್ಠಲ ನಿನ್ನ
ಪೊಗಳುವ ದಾಸನ್ನ ತಡಮಾಡದೆ ಕಾಯೊ ||1||

ಮಟ್ಟತಾಳ
ಹರಿಯೆ ನರಹರಿಯೆ ಕರುಣಾಸಾಗರ ಸಿರಿಯೆ
ಪರರ ಕುರುಹನರಿಯೆ ನಿರುತ ನಿನ್ನ ಮರಿಯೆ
ದುರಿತ ಕದಳಿ ಕರಿಯೆ ಸುರಗಣದಾ ಧೊರಿಯೆ
ಬರಿದೆ ಸೌಖ್ಯಕೆ ಕರಿಯೆ ದುರವಾರ್ತಿಯ ಬರಿಯೆ
ದುರುಳರಲ್ಲಿ ಬೆರೆಯೆ ಪರಮದಿಂದಲಿ ಬರಿಯೆ
ಸರಿಗಾಣೆನೀ ಪರಿಯೆ ಸ್ಮರಣೆಯಲ್ಲಿ ಸರಿಯೆ
ಪೊರೆವ ನೀನೆ ಮಂದರ ಗುಣವೆಣಿಸದೆ
ಧರೆಯೊಳು ಮತ್ತೊಬ್ಬರುಳ್ಳವರಾರು
ತುರುಗಳ ಕಾಯಿದಾ ಶ್ರೀ ವಿಜಯ ವಿಠ್ಠಲ ಕೃಷ್ಣ
ಎರವು ಮಾಡದೆ ಈ ಉತ್ತರವನು ಮನ್ನಿಸಬೇಕು ||2||

ತ್ರಿವಿಡಿತಾಳ
ನೀನೆ ಉಳಿಪೆನೆಂದು ನಿಂದರಾದಡೆ ಸು –
ಪ್ರಾಣರು ಆರೈಸಿ ನಿಲಲಾಪರೆ
ಏನೆಂಬೆನೊ ನಿನ್ನ ನಾಮದಾಚರಣಿಗೆ
ನಾನಾ ವಿಪತ್ತುಗಳು ನಿಲಬಲ್ಲವೆ
ಕಾಣೆನಿದಕೆ ಒಂದುಪಾಯವ ಆವಲ್ಲಿ
ಮೇಣು ಪೇಳುವುದೇನು ಪರಮಪುರುಷ
ನೀನಾಳಿದ ಬಂಟಂಗೆ ಮಹಾತಾಪಗಳು ಬಂದು
ಬ್ಯಾನೆ ಬಡಿಸಲಾಪವೆ ಕ್ಷಣಮಾತುರ
ಜ್ಞಾನ  ಸಂಪನ್ನರು ದಾಸರಂದೇ ನಮ್ಮ
ಪಾಣಿಗ್ರಹವ ಮಾಡಿಪ್ಪರಯ್ಯಾ
ಮಾಣಾದೆ ಈ ಸೊಲ್ಲು ಮನ್ನಿಸಿದರೆ ಕೀರ್ತಿ
ಕ್ಷೋಣಿಯೊಳಗೆ ನಿನಗೆ ಬರುತಲಿದೇ
ನೀನೆ ಪರದೈವ ಲೋಕಕ್ಕೆ ಗುರುಮುಖ್ಯ
ಪ್ರಾಣನೆ ನಿಜವೆಂಬೊದಾದರಿಂದು
ನಾನು ಬರೆದ ಬರಹ ಸತ್ಯವಾದರೆ ಖರಿಯಾ
ಮಾನಾಭಿಮಾನದೊಡಿಯಾ ಧನ್ವಂತ್ರಿ
ನೀನೊಲಿದದಕ್ಕೆ ಮಾಣಿಸು ಅಪವಾದಾ ನಿ-
ರ್ವಾಣಗಿಂತಧಿಕ ಎನಗಿತ್ತದಯ್ಯಾ
ಧ್ಯಾನಾದಿಗಳು ತಿಳಿಯೆ ಬಾಯಿಗೆ ಬಂದಂತೆ
ಗಾನ ರೂಪದಲಿ ಕೊಂಡಾಡಿದೆನೊ
ಹೀನವಾಗಗೊಡದೆ ಹಿತವ ಚಿಂತಿಸು ಕ-
ಲ್ಯಾಣವ ಕೊಡುತಲಿ ಸಹಾಯವಾಗಿ
ಪ್ರಾಣಧಾರನೆ ವಿಜಯ ವಿಠ್ಠಲರೇಯ
ದೀನ ಬಾಂಧವ ಸತತ ಸಾಧು ನರನ ಕಾಯೊ||3||

ಅಟ್ಟತಾಳ
ಉದ್ಧವನ್ನ ಶಾಪದಿಂದ ಮುಕ್ತನಮಾಡಿ
ಉದ್ಧರಿಸಿದೆ ತತ್ವವ ಉಪದೇಶಿಸಿ
ಶುದ್ಧ ವೈಷ್ಣವನಿವ ನಿರ್ಮತ್ಸರದವ
ಮಧ್ವರಾಯರ ಪಾದ ಪದ್ಮವ ಪೊಂದಿದ
ತದ್ದಾಸರ ದಾಸರ ಭೃತ್ಯನೆನಿಸು
ಶ್ರದ್ಧೆಯುಳ್ಳವನಿವ ಸೌಮ್ಯ ಗುಣದವ
ಸಿದ್ಧಾಂತ ಪ್ರಮೇಯಗಳ ಪದ್ಧತಿ ಬಲ್ಲವ
ಉದ್ದಂಡನಲ್ಲವೊ ಕರ್ಮನಿಷ್ಠನಿವ
ಕ್ಷುದ್ರನಾದರೆ ನಾ ನಿನಗೆ ಪ್ರಾರ್ಥಿಸುವೆನೆ
ಹಾರ್ದವ ತಿಳಿದು ಪೇಳಿದೆ ಭವರೋಗದ
ವೈದ್ಯ ವೈಕುಂಠ ರಮಣ ರಾಮಚಂದ್ರಾ
ವಿದ್ಯಾ ಕರ್ಮಾಲಂಬನದವ ನಾನಲ್ಲ
ಶುದ್ಧ ವೈಷ್ಣವರ ಚರಣರೇಣು ತಾನಾಗಿ
ಬದ್ಧ ಪ್ರಯಕ್ತದಿ ಇನಿತು ತುತಿಸಿದೆನು
ಛಿದ್ರವಾಗಿದ್ದರು ಪೂರ್ಣವಾಗುವುದು ನೀ-
ನಿದ್ದ ಕಡೆಗೆ ಒಮ್ಮೆ ಶಿರಬಾಗಿ ನಮಿಸಲು
ಅದ್ರಿಧರ ನಿನ್ನ ನಂಬಿದ ದಾಸಗೆ
ಭದ್ರವಲ್ಲದೆ ಸರ್ವದಾ ಎನ್ನಸ್ವಾಮಿ
ಮುದ್ದು ಮೋಹನರಾಯ ವಿಜಯ ವಿಠ್ಠಲರೇಯ
ಒದ್ದು ಕಳೆಯೊ ಬದ್ಧ ತಾಪಂಗಳ ತಡಿಯದೆ||4||

ಆದಿತಾಳ
ಅಪಕೀರ್ತಿ ತಾರದಿರು ಎನ್ನ ಪಾಲಿಗೆ
ಅಪರಿಮಿತ ಮಹಿಮ ಅಂಬರೀಷ ವರದ
ಅಪಾರಗುಣನಿಲಯ ಅಭಯವನೀಯೊ ಇವಗೆ
ಸ್ವಪನಾವಸ್ಥಿಯಂತೆ ಕಡೆಗಾಗಲಿ ಕ್ಲೇಶ
ಉಪಚಾರ ನಿನಗೆ ನಾನು ಏನು ಪೇಳಲಸಾಧ್ಯ
ಅಪವಾದ ಬಂದಿದೆ ಅದನು ಪರಿಹರಿಸು
ಕೃಪೆಮಾಡು ಅರ್ಥಿಯಲ್ಲಿ ಅನನ್ಯ ಶರಣನೆಂದು
ಕೃಪಣನಾದರು ನಿನ್ನ ದಾಸನೆನಿಸಿ ಇಪ್ಪೆ
ಅಪಹಾಸಕಿಕ್ಕದಿರು ಅನಂತ ಜನುಮದ
ಉಪಕಾರ ಎನಗಿದೆ ಮತ್ತೊಂದಾವುದು ಒಲ್ಲೆ
ಜಪತಪ ಸ್ವಾಧ್ಯಾಯ ಮತ್ತೆ ದಾನ ಧರ್ಮ
ಸಫಲವಿದ್ದರು ಅವಗೆ ಅಡಸಿ ಬಂದಟ್ಟಿದ
ಅಪಮೃತ್ಯು ತೊಲಗಿಸು ತವಕದಿಂದಲಿ ಒಲಿದು
ಗುಪುತಮಹಿಮೆ ನಮ್ಮ ವಿಜಯ ವಿಠ್ಠಲರೇಯ
ವಿಪರೀತವಾಗಗೊಡದೆ ಬಲವಾಗಿ ರಕ್ಷಿಪುದು ||5||

ಜತೆ
ಆರೋಗ್ಯವನೆ ಮಾಡು ಆಲಸ್ಯಗೈಸದೆ
ವೈರಾಗ್ಯನಿಧಿ ವಿಜಯ ವಿಠ್ಠಲ ಮಹವೈದ್ಯ ||6||
dhruvatALa
hagaraNa mADadiru hariye ninage karava
mugidu bEDikoMbe Bakta janara
bagebageyinda banda klESava kaLadu naM
bigeyettu pAlisuva guNavAridhi
jagadoLu ninagide vyApAravallade
migilEno kANe sarvada nODalu
pagevuLLavanAdaru bandu ninna caraNa
yugaLa naMbalu kAyuveneMbo biridu
agaNitavAgi daSadikkili opputide
nigamavinuta niShkaLanka mahima
sogasOde sari sajjanara pratipAlipudu
maguLe uttaravunTe elo dEvane
KagarAjamaNiyire pannaga garaLada BayavEnu
hagalu iraLu oDaniddarAge
Bagavanta halavu mAtina PalavEnu Ba
ktage bandApattu pariharisi nODu karuNAdalli
nagegeDegAgagoDade rAhuvinindali hora
degada induvinante mADu jIyA
negaLiya kattarisi gajava kAydadadu mana
sige yAgutide siddaveMbOdindalA
triguNAtIta kRuShNa vijaya viThThala ninna
pogaLuva dAsanna taDamADade kAyo ||1||

maTTatALa
hariye narahariye karuNAsAgara siriye
parara kuruhanariye niruta ninna mariye
durita kadaLi kariye suragaNadA dhoriye
baride sauKyake kariye duravArtiya bariye
duruLaralli bereye paramadindali bariye
sarigANenI pariye smaraNeyalli sariye
poreva nIne mandara guNaveNisade
dhareyoLu mattobbaruLLavarAru
turugaLa kAyidA SrI vijaya viThThala kRuShNa
eravu mADade I uttaravanu mannisabEku ||2||

triviDitALa
nIne uLipenendu nindarAdaDe su –
prANaru Araisi nilalApare
EneMbeno ninna nAmadAcaraNige
nAnA vipattugaLu nilaballave
kANenidake oMdupAyava Avalli
mENu pELuvudEnu paramapuruSha
nInALida baMTaMge mahAtApagaLu bandu
byAne baDisalApave kShaNamAtura
gnana saMpannaru dAsarandE namma
pANigrahava mADipparayyA
mANAde I sollu mannisidare kIrti
kShONiyoLage ninage barutalidE
nIne paradaiva lOkakke gurumuKya
prANane nijaveMbodAdarindu
nAnu bareda baraha satyavAdare KariyA
mAnABimAnadoDiyA dhanvaMtri
nInolidadakke mANisu apavAdA ni-
rvANagiMtadhika enagittadayyA
dhyAnAdigaLu tiLiye bAyige bandante
gAna rUpadali konDADideno
hInavAgagoDade hitava cintisu ka-
lyANava koDutali sahAyavAgi
prANadhArane vijaya viThThalarEya
dIna bAndhava satata sAdhu narana kAyo||3||

aTTatALa
uddhavanna SApadinda muktanamADi
uddhariside tatvava upadESisi
Suddha vaiShNavaniva nirmatsaradava
madhvarAyara pAda padmava pondida
taddAsara dAsara BRutyanenisu
SraddheyuLLavaniva saumya guNadava
siddhAnta pramEyagaLa paddhati ballava
uddanDanallavo karmaniShThaniva
kShudranAdare nA ninage prArthisuvene
hArdava tiLidu pELide BavarOgada
vaidya vaikunTha ramaNa rAmacandrA
vidyA karmAlaMbanadava nAnalla
Suddha vaiShNavara caraNarENu tAnAgi
baddha prayaktadi initu tutisidenu
CidravAgiddaru pUrNavAguvudu nI-
nidda kaDege omme SirabAgi namisalu
adridhara ninna naMbida dAsage
Badravallade sarvadA ennasvAmi
muddu mOhanarAya vijaya viThThalarEya
oddu kaLeyo baddha tApangaLa taDiyade||4||

AditALa
apakIrti tAradiru enna pAlige
aparimita mahima aMbarISha varada
apAraguNanilaya aBayavanIyo ivage
svapanAvasthiyante kaDegAgali klESa
upacAra ninage nAnu Enu pELalasAdhya
apavAda bandide adanu pariharisu
kRupemADu arthiyalli ananya SaraNanendu
kRupaNanAdaru ninna dAsanenisi ippe
apahAsakikkadiru ananta janumada
upakAra enagide mattondAvudu olle
japatapa svAdhyAya matte dAna dharma
saPalaviddaru avage aDasi bandaTTida
apamRutyu tolagisu tavakadindali olidu
guputamahime namma vijaya viThThalarEya
viparItavAgagoDade balavAgi rakShipudu ||5||

jate
ArOgyavane mADu Alasyagaisade
vairAgyanidhi vijaya viThThala mahavaidya ||6||

MADHWA · sulaadhi · Vijaya dasaru

Apamrutyu Nivarana Suladi

ಧ್ರುವತಾಳ
ರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿ
ಭದ್ರ ಫಲದಾಯಕ ದೋಷದೂರ
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ
ಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದ
ನಿದ್ರಾರಹಿತ ನಿಗಮವಂದ್ಯ ಭಕ್ತಾನಂದ
ಉದ್ರೇಕಾ ತಂದು ಕೊಡುವ ಕಾಮಿತಾರ್ಥ
ಭದ್ರಪ್ರದಾಯಕ ದೋಷದೂರ
ಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-
ಮುದ್ರದೊಳಗೆ ಲೋಲಾಡುತಿಪ್ಪ
ಶೂದ್ರಗಾದರು ಆಶಾ ಭಯವಿಲ್ಲವೆಂದು ಮಹ
ರುದ್ರಾದಿಗಳು ಪೇಳುತಿಪ್ಪರಿದೆ ಕೋ
ಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-
ಪದವ್ರ ಬಿಡಿಸಿ ನೀನೆ ಪಾಲಿಸಿದಂದು
ಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆ
ಛಿದ್ರತನ ಎಣಿಸದಿರು ಪರಮ ಕರುಣೀ
ರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳು ||1||

ಮಟ್ಟತಾಳ
ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ
ಶರೀರದೊಳಗೆ ನಿಂದು ಸ್ತೋತ್ರ ಮಾಡಿಸಿಕೊಂಡೆ
ಅರೆಮರೆ ಇದಕಿಲ್ಲ ಶಾಶ್ವತ ವಾಕ್ಯವೆಂದು
ನೆರೆ ನಂಬಿದೆ ನಾನು ನಾನಾ ವಿಧದಲ್ಲಿ
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ
ಪರಿಹರವಾಗುವುದು ಸಿದ್ಧವಾಯಿತು ಎನಗೆ
ಪುರಹರನುತಪಾದ ವಿಜಯ ವಿಠ್ಠಲರೇಯ
ನರಹರಿ ಎಂದೆನೆ ಭಯಹರವೊ ||2||

ತ್ರಿವಿಡಿತಾಳ
ಅನ್ಯಥಾ ಗತಿಕಾಣೆ ನಿನ್ನ ಪಾದವಲ್ಲದೆ
ಇನ್ನು ತ್ರಿಲೋಕದಲಿ ತಿರುವೆಂಗಳ
ಎನ್ನ ನುಡಿ ಪುಶಿಮಾಡಿ ಅಪಹಾಸ ಗೈಸಿದರೆ
ನಿನ್ನದಲ್ಲದೆ ಕೀರ್ತಿ ಅಪಕೀರ್ತಿಯು
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು
ಮುನ್ನ ಪೇಳುವುದೇನು ವಿಸ್ತರಿಸಿ
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು
ನಿನ್ನ ನಂಬಿಹಳಯ್ಯ ನೀನೆ ಬಲ್ಲೈ
ಧನ್ಯ ಜೀವನದಾಯ ಸುವಾಸತನವಿತ್ತು
ಮನ್ನಿಸುವುದು ಇವಳ ತುತಿಗೆ ಮೆಚ್ಚಿ
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ
ಬಿನ್ನಹ ಮಾಡಿದೆ ಇಷ್ಟೆ ಮಾತ್ರ
ತನ್ನ ಪತಿಯ ಕೊಡ ತಾಂಬೂಲ ಮೆಲುವ ಸಂ
ಪನ್ನ ಭಾಗ್ಯವಕೊಡು ಕಮಲನಾಭ
ಕನ್ಯ ಲಕುಮಿರಮಣ ವಿಜಯ ವಿಠ್ಠಲರೇಯ
ಘನ್ನ ಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ ||3||

ಅಟ್ಟತಾಳ
ಆಳು ಗೆದ್ದರೆ ನೋಡು ಅರಸಗೆ ಜಯಪ್ರದ
ಆಳು ನುಡಿದದ್ದು ಅರಸು ನುಡಿದದ್ದು
ಏಳಾಲ ಮಾಡದೆ ಯಾದವ ಕುಲಮಣಿ
ಪಾಲಿಸಬೇಕಯ್ಯಾ ಪರಮ ಅನಿಮಿತ್ತ
ಮೂಲ ಬಾಂಧವ ಭಾಷೆ ಕೊಟ್ಟರೆ ತಪ್ಪದು
ಪಾಲಸಾಗರ ಶಾಯಿ ವಿಜಯ ವಿಠ್ಠಲರೇಯ
ಕಾಲ ಕರ್ಮ ಗುಣ ನಿನಗಿದಿರೆ ಸ್ವಾಮೀ ||4||

ಆದಿತಾಳ
ಅರ್ಥವಾದವಲ್ಲ ಮನಸು ಪೂರ್ವಕದಿಂದ
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ
ಸ್ವಾರ್ಥಗೋಸುಗವಾಗಿ ಬೇಡಿಕೊಂಬುವನಲ್ಲ
ವ್ಯರ್ಥವಾಗಗೊಡದಿರು ವೇದದಲ್ಲಿ ಪೇಳಿದ
ಅರ್ಥಜ್ಞಾನ ಕ್ಕೆ ನಿತ್ಯ ಎಲ್ಲಿದ್ದರು ದೇವ
ಅರ್ಥಾತುರ ನೀನಲ್ಲ ಸಕಲ ಕಾಲದಲ್ಲಿ, ಸ
ಮರ್ಥ ನೀನಹುದೋ ಸರ್ವೋತ್ತಮ, ಪರಹಿ
ತಾರ್ಥವಾಗಲಿ ಇದೆ ಪುಶಿಯಾಗದಂತೆ ಕಾಯೊ
ಆರ್ತವಿದೂರ ನಮ್ಮ ವಿಜಯ ವಿಠ್ಠಲ ಕೃ
ತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು||5||

ಜತೆ
ಭಕುತರ ಭಾಗ್ಯವೇ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯ ವಿಠ್ಠಲ ವೆಂಕಟ||6||

dhruvatALa
rudrAntargata nArasiMha mRutyunivAri
Badra PaladAyaka dOShadUra
cidrUpa citprakRuti trilOkanAtha
adri dharisi gOkula kAyda vinOda
nidrArahita nigamavandya BaktAnanda
udrEkA tandu koDuva kAmitArtha
BadrapradAyaka dOShadUra
mudredharisi ninna BaktiyeMbO guNa sa-
mudradoLage lOlADutippa
SUdragAdaru ASA Bayavillavendu maha
rudrAdigaLu pELutipparide kO
kadruve maga vAsukiyA garuDanna u-
padavra biDisi nIne pAlisidandu
kShudradEvategaLige I pari SaktiyunTe
Cidratana eNisadiru parama karuNI
raudrA mUruti SAnta vijaya viThThala ninna
sadRuSa dEvana kANeno jagattinoLu ||1||

maTTatALa
hari ninna sankalpa iddaMte enna
SarIradoLage nindu stOtra mADisikonDe
aremare idakilla SASvata vAkyavendu
nere naMbide nAnu nAnA vidhadalli
narage bandaTTida vyAdhiyu nilalunTe
pariharavAguvudu siddhavAyitu enage
puraharanutapAda vijaya viThThalarEya
narahari endene Bayaharavo ||2||

triviDitALa
anyathA gatikANe ninna pAdavallade
innu trilOkadali tiruvengaLa
enna nuDi puSimADi apahAsa gaisidare
ninnadallade kIrti apakIrtiyu
peNNinA more kELi kAyalillave nInu
munna pELuvudEnu vistarisi
baNNiside bahu bageyinda I abaleyu
ninna naMbihaLayya nIne ballai
dhanya jIvanadAya suvAsatanavittu
mannisuvudu ivaLa tutige mecci
benna biddavaranna oppisi koDalunTe
binnaha mADide iShTe mAtra
tanna patiya koDa tAMbUla meluva saM
panna BAgyavakoDu kamalanABa
kanya lakumiramaNa vijaya viThThalarEya
Ganna mahima ninna vAkya amRuta siddha ||3||

aTTatALa
ALu geddare nODu arasage jayaprada
ALu nuDidaddu arasu nuDidaddu
ELAla mADade yAdava kulamaNi
pAlisabEkayyA parama animitta
mUla bAndhava BAShe koTTare tappadu
pAlasAgara SAyi vijaya viThThalarEya
kAla karma guNa ninagidire svAmI ||4||

AditALa
arthavAdavalla manasu pUrvakadinda
prArthane mADuve anAdi brahmacAri
svArthagOsugavAgi bEDikoMbuvanalla
vyarthavAgagoDadiru vEdadalli pELida
arthaj~jAna kke nitya elliddaru dEva
arthAtura nInalla sakala kAladalli, sa
martha nInahudO sarvOttama, parahi
tArthavAgali ide puSiyAgadante kAyo
ArtavidUra namma vijaya viThThala kRu
tArthanna mADuvudu mudadinda olidu bandu||5||

jate
Bakutara BAgyavE apEkShA pUraisi
suKakoDuvudu biDade vijaya viThThala venkaTa||6||

dasara padagalu · MADHWA · purandara dasaru

Udaya Raaga(Gajendra moksha, Akshya patre & Ajamilana kathe)

udaya raaga(KannadA)
jaladoLaga jalapAna mADabanda gajava| negaLi nungitu kAlanu|
Caladinda hiDidiralu biDade bAdhisutiralu|

SrIhariye rakShisu endanu kAyO Baktara prIya kAyO karuNAkara hariyE kRuShNA kAyabEkennanu|moreyiTTa gajEndrana nuDiya lAlisi bandu| kariya bandhana biDiside kRuShNA kAyabEkennanu||1||

dAyavane ADutire sOtaraivaru nimma rANiyanu kareyireMndA|duruLa duSyAsananu sIreyanu seLevAga SrI kRuShNa kAyendaLu|sudatiyA.sIreyu akShayavu Agalu|pAnDava rakShaka kRuShNA kAyabEkennanu||2||

pAncAli draupadiyu pAsile aivaroDaniddu|pancapAnDavaru vanaka baralu|antarAtmaka sUrya thAliyanu koTTanu santuShTarAdavarella|inteMba vArteyanu kELi duryOdhananu santApa paDuttiddanu|kRuShNA kAyabEkennanu||3||

duruLa duryOdhananu durvAsanarane karedu aDigeragi caraNagaLa toLedu|varava koTTanu hattu sahasra janarige alle munibanda pAnDavavanaka Baradi draupadi thAli toLediTTu malagiralu svara muTTi kare maniyali kRuShNA kAyabEkennanu||4||

yAru bandavarendu dharma, BImana kELalu mUru nirAhAra indige dAnaSUraru nimma hesaru kELi bandevu koDabEku mRuShTAnna namage|inteMba vArteyanu kELi arjuna tanna kAnteyanu karedanAga kRuShNA kAyabEkennanu||5||

iShTu dina mADida dAna dharmagaLella ivottige hAnI AgatAva naTTiruLu malagiruva rAtriyali vicitravanu nODendanu|hattusAvira janaka tarali hangendara SrIkRuShNA kAyendaLu|snAnajapavanu mADi nIvu banniri endu|vRundAvana namO endaLu kAyO matsya kUrmane varaha nArasiMha kAyO vAmana BArgava kAyO rAma-kRuShNane,SrIbauddha kalki nI kAyendu moreyiTTaLu kRuShNA kAyabEkennanu||6||

suvarNa harivANaDoLu rukmiNIdEvi kShIraSyAvige mRuShTAnna baDisiralu|Aga draupadiya dhvani kELi SrIkRuShNabyAgabAhenendanu kRuShNA kAyabEkennanu||7||

nAri rukmiNi^^enage baDisuttA iddaLu nAri ninna dhvani kELi bande bahaLa kShudheyalli bande baDisu enagendare SrIkRuShNA kAyabEkennanu||8||

thAliyoLaga SAkadaLavu irutiralu| svAmi tA unDanante|snAnakke hOda hattu sahasra janake alle sAlAgi eliyAdavu|nAri draupadi panca BakSha paramAnna GRuta kShIra baDesutiralu kRuShNA kAyabEkennanu||9||

unDu kai toLedaru tAMbUla dakShiNe BIma arjuna koTTaru|Aga draupadi karetannirennalu byAga baMdaru vanadeDege kRuNA kAyabEkennanu||10||

Iga unDevu arjuna tAMbUla dakShiNe nimma rANi baDisidaLu unDevu|duruLara mAtige teraLi nAvu bandevu SrI hariyu sArathi nimage SrI hariya stOtrava mADi teraLidaru puraka I pariya kAydavara kRuShNA kAyabEkennanu||11||

vidye buddhigaLLuLa Suddha puruShanu tuLasi samittu tara hOgalu| iddALAgalli strIbAli oledukoDeMdanu|olidu koDali byADa kuladoLage baluhIna sthirabAli nuDidaLAga kRuShNA kAyabEkennanu||12||

ninna maneyali gOvu cennAgi pUjiparu enna maneyali gOvu hatyavu nanna ninnadu saMgakUDalAsAdhyavu sthirabAli nuDidaLAke kELelo brAhmaNa balu hInakulada cAnDAli eluvina rASigOvugaLa kaDiva raktada maDavu yAvAga nODidarU kRuShNA kAyabEkennanu||13||

toli janti kaMbada aramaneya biTTu holati hOda pApa kShaNadoLage pariharisi I pariyavara kAyde|kRuShNA kAyabEkennanu||14||

eShTU hELidarU Cala mADi kUDi bAlakarannu paDeda hanneraDu AlaMbayAdoLagiralu antyakAlavu baralu kareyabandaru yamaBaTaru|Aga kangeTTu ajamiLa tanna kiriyavana nArAyaNa endu kreye|ajamiLana svarada dhvani muTTidavu harig~hOgi|karesidanu tanna BRutyara karetanniri avana hUvina vimAnadale karetandarAga vaikunThake|holatig~hOda pApakShaNadoLage pariharisi I pariyalavara kAyda kRuShNA kAyabEkennanu||15||

durjanara SikShipA sajjanara paripAlipA|duruLarA saMhArakA|duShTa hiraNyakaSyapana oDalane bagedu karuLamAlAdhArakA maraNakAladali smaraNe jivheyoLu irali pariharisu purandara viThala kRuShNA kAyAbEkennanu||16||

dasara padagalu · MADHWA · Vadirajaru

Mane varthe haadu

 

Mane varthe haadu(Kannada)

hottAre eddu nA SrI kRuShnana nenevenu|
Baktavatsala ninna aramane kelasava|
Baktiyinda mADatoDaguve||1||

udayakAladaleddu padumanABana nenedu|
garuDavAhana nimma aramane kelasava|
mudadi mADatoDaguve||2||

sankarShaNa vAsudEva pradyumna aniruddha|
ivaru vAsavAgiruva aramane kelasava|
dAsiyAgi baLidu suKadalippE||3||

upparage sArisi matte kAraNigonDu|
accamuttina rangavalliyane hAki nA|
accutana caraNakke eragUve||4||

pankajanABanA manebiMka bRundAvanake|
SanKacakragadA padmavane iTTunA|
pancavarNada giLiya racisuve||5||

nUrenTu kOTi aramane upakaraNeya|
toLedu manevArte mADinA|
narahariya caraNakke eragUve||6||

kancu kalAyada pAtre pancalOhada pAtre|
sankarShaNa mUrti savipAkada pAtre|
santOShadinda toLedu oLagiDuve||7||

gOkulAdOLag~huTTi gOvardhana giriyanettida|
gOpAla kRuShNanige SaraNendu nAnIga|
AkaLA kareyuvenu haruShadali||8||

yAdavarAyarA mane hAlu kAsiDuvenE|
mAdhavarAyarige ArOgaNeya mADi|
bEDidiShTArtha koDuvOne||9||

dadhiya samudranna hRudayadoLagiTTu|
dadhiya vAmanna manadoLage pADutta|
dadhiya kaDeyuvene haruShadali||10||

Ada beNNeya kAsi GRutava pAtrege hAki|
dEvara naivEdyakkiTTu mikkAddu nAnIga|
dIvige haccuve naraharige||11||

gange udakava kAsi kanciNNegaLannotti|
kandarige nIreredu molekoTTu nAnIga|
indirApatige eragUve||12||

unDa kandarige enjalA kai toLedu|
munjeraga takkonDu mai oresi nAnIga|
angaLake ADa kaLuhUve||13||

gange gOdAvari sindhu kAvEriyali|
mindu maitoLedu haNegiTTu nAnIga|
indirApatige eragUve||14||

poLeva ariSina hacci nadiyoLage maitoLedu|
caluva UrdhvapunDragandha kuMkumavhacci|
narahariya caraNakke eragUve||15||

gurugaLu koTTanta parama mantrava japisi|
oDane pradakShiNe namaskAravane mADi|
narahariya caraNakke eragUve||16||

mangaLa mahimana unguShThadali janisida|
gangeyA tandu hariya naivEdyakke|
hanDe hanDegaLalli irisUve||17||

Arati karpura nIrAnjanagaLa tuMbi|
pariparipuShpa mAlikegaLanne kaTTi|
narahariya pUjege irisuve||18||

hAgalhIrI kAyi bEga benDE kAyi|
sAgaraSayananA naivEdyakkaNi mADi|
SAkagaLa hecci irisUve||19||

pAyasA BakShavU sUpa SAkAnnavU|
AyatavAgidda lavaNa SArAnnavU|
dEvara naivEdyakkiDuvEne||20||

dEvara naivEdyakkiTTu bEga vaiSvadEva tegedu|
gOgrAsakke tegedu nAnIga|
hastOdakakke iDuvenU||21||

accutA SrI tuLasi Baktiyinderagi pUjisi|
acca SrI gandhavanu koraLige lEpisi|
muttinArutIya beLagUve||22||

accutA SrI tuLasi koTTa prasAdavanu|
muDiyalli muDikonDu nAnIga|
accuta SrI tuLasigeragUve||23||

hiriyarU gurugaLU neredu nArAyaNana|
pogaLuva purANavanu kELuvenu|
SrI hariya kRupeyinda nAnu||24||

gauri mosarannavanu harivANadoLagiTTu|
haridAsarige uNaliTTu nAnIga|
narahariya caraNakke eragUve||25||

attemAvandirige putrarige mitrarige|
viShNudAsarige suguNa bAMdhavarige|
arthiyinda uNalu baDisUve||26||

unDu kai toLedavarige tAMbUlagaLa koTTu|
enjalA baLidu pati unDa SEShavanu|
Bunjipenu SrI hariya kRupeyiMda||27||

sanjeyA hottinali dIpavane haccirisuvenu|
gOvugaLane karedu kShIravane kAsi nA|
dEvara naivedyakkiDuvEne||28||

sanjeyA kasabaLidu uMbuvariguNaliTTu|
saMBramadinda paDihAsi mancavanu|
indirApatige eragUve||29||

“patiyantaryAmi SrIpatiye gatiyendu|
patiya pAdavannotti haruShadali|
karpUra viLyagaLa koDuvEnu”||30||

kShIrasAgaradalli SEShanhAsigeyalli|
SrIlakShmI sahitAgi malagirpa hariyannu|
dhyAnisute patiya hAsigEli malagUve||31||

yOgIndrarAyarA pAdakke SaraNeMbe|
I dhareyoLage sAdhu sajjanarigE|
bEDidiShTArtha koDuvOne||32||

“nitya I hADu tappadE hELidavarige|
muttaidetanavannu koTTu|
rakShisUva namma hayavadana”||33||

“yAvAga I hADu prEmadi hELi kELidare|
sAvitritanavannu sAyujya padaviyanu|
koTTu rakShisuva namma hayavadana”||34||

dwadasa stothram · MADHWA · madhwacharyaru

Dwadasa sthothra

  1. Dwadasa sthothra – Prathama adhyaya
  2. Dwadasa stothra – Dwiteeya adhyaya
  3. Dwadasa sthothra – Trutheeya adhyaya
  4. Dwadasa sthothra – chathurta adhyaya
  5. Dwadasa sthothra – Panchamo adhyaya
  6. Dwadasa sthothra – Shasta adhyaya
  7. Dwadasa sthothra – saptama adhyaya
  8. Dwadasa sthorhra – ashtama adhyaya 
  9. Dwadasa sthothra – Navama adhyaya
  10. Dwadasa sthothra – Dasama adhyaya
  11. Dwadasa sthothra – Ekadasa adhyaya
  12. Dwadasa sthothra – Dwadasa Adhyaya
dwadasa stothram · MADHWA · madhwacharyaru

Dwadasa sthothra – Dwadasa Adhyaya

ದ್ವಾದಶಂ ಸ್ತೋತ್ರಮ್
ಆನಂದ ಮುಕುಂದ ಅರವಿಂದ ನಯನ |
ಆನಂದತೀರ್ಥ ಪರಾನಂದ ವರದ || ೧ ||

ಸುಂದರಿ ಮಂದಿರ ಗೋವಿಂದ ವಂದೇ |
ಆನಂದತೀರ್ಥ ಪರಾನಂದ ವರದ || ೨ ||

ಚಂದ್ರಕ ಮಂದಿರ ನಂದಕ ವಂದೇ |
ಆನಂದತೀರ್ಥ ಪರಾನಂದ ವರದ || ೩ ||

ಚಂದ್ರ ಸುರೇಂದ್ರ ಸುವಂದಿತ ವಂದೇ |
ಆನಂದತೀರ್ಥ ಪರಾನಂದ ವರದ || ೪ ||

ಮಂದಾರ ಸ್ಯಂದಕ ಸ್ಯಂದನ ವಂದೇ |
ಆನಂದತೀರ್ಥ ಪರಾನಂದ ವರದ || ೫ ||

ವೃಂದಾರಕ ವೃಂದ ಸುವಂದಿತ ವಂದೇ |
ಆನಂದತೀರ್ಥ ಪರಾನಂದ ವರದ || ೬ ||

ಮಂದಾರ ಸ್ಯಂದಿತ ಮಂದಿರ ವಂದೇ |
ಆನಂದತೀರ್ಥ ಪರಾನಂದ ವರದ || ೭ ||

ಮಂದಿರ ಸ್ಯಂದನ ಸ್ಯಂದಕ ವಂದೇ |
ಆನಂದತೀರ್ಥ ಪರಾನಂದ ವರದ || ೮ ||

ಇಂದಿರಾ ನಂದಕ ಸುಂದರ ವಂದೇ |
ಆನಂದತೀರ್ಥ ಪರಾನಂದ ವರದ || ೯ ||

ಆನಂದ ಚಂದ್ರಿಕಾ ಸ್ಪಂದನ ವಂದೇ |
ಆನಂದತೀರ್ಥ ಪರಾನಂದ ವರದ || ೧೦ ||

||ಇತಿ ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರತೇಷು ದ್ವಾದಶಸ್ತೋತ್ರೇಷು||

dvAdaSaM stOtram
Ananda mukunda aravinda nayana |
AnandatIrtha parAnanda varada || 1 ||

sundari mandira gOvinda vande |
AnandatIrtha parAnanda varada || 2 ||

candraka mandira nandaka vande |
AnandatIrtha parAnanda varada || 3 ||

candra surEndra suvandita vande |
AnandatIrtha parAnanda varada || 4 ||

mandAra syandaka syandana vande |
AnandatIrtha parAnanda varada || 5 ||

vRundAraka vRunda suvandita vande |
AnandatIrtha parAnanda varada || 6 ||

mandAra syandita mandira vande |
AnandatIrtha parAnanda varada || 7 ||

mandira syandana syandaka vande |
AnandatIrtha parAnanda varada || 8 ||

indirA nandaka sundara vande |
AnandatIrtha parAnanda varada || 9 ||

Ananda candrikA spandana vande |
AnandatIrtha parAnanda varada || 10 ||

||iti SrI madAnandatIrtha BagavatpAdAcArya viratEShu dvAdaSastOtrEShu||

dwadasa stothram · MADHWA · madhwacharyaru

Dwadasa sthothra – Ekadasa adhyaya

ಏಕಾದಶ ಸ್ತೋತ್ರಮ್

ಉದೀರ್ಣ ಮಜರಂ ದಿವ್ಯ ಮಮೃತಸ್ಯಂದ್ಯಧೀಶಿತುಃ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೧ ||

ಸರ್ವ ವೇದ ಪದೋದ್ಗೀತ ಮಿಂದಿರಾ ಧಾರ ಮುತ್ತಮಮ್ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೨ ||

ಸರ್ವ ದೇವಾದಿ ದೇವಸ್ಯ ವಿದಾರಿತಮ ಹತ್ತಮಃ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೩ ||

ಉದಾರಮಾದರಾ ನ್ನಿತ್ಯಮನಿಂದ್ಯಂ ಸುಂದರೀ ಪತೇಃ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೪ ||

ಇಂದೀವರೋದರ ನಿಭಂ ಸುಪೂರ್ಣಂ ವಾದಿ ಮೋಹದಮ್ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೫ ||

ದಾತೃ ಸರ್ವಾಮರೈಸ್ವರ್ಯ ವಿಮುಕ್ತ್ಯಾದೇರಹೋ ವರಮ್ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೬ ||

ದೂರಾ ದ್ದೂರ ತರಂ ಯತ್ ತು ತದೇವಾಂತಿಕ ಮಂತಿಕಾತ್ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೭ ||

ಪೂರ್ಣ ಸರ್ವ ಗುಣೈಕಾರ್ಣ ಮನಾದ್ಯಂತಂ ಸುರೇಶಿತುಃ |
ಆನಂದಸ್ಯ ಪದಂ ವಂದೇ ಬ್ರಹ್ಮೇಂದ್ರಾ ದ್ಯಭಿ ವಂದಿತಮ್ || ೮ ||

ಆನಂದತೀರ್ಥ ಮುನಿನಾ ಹರೇನಂದ ರೂಪಿಣಃ |
ಕೃತಂ ಸ್ತೋತ್ರಮಿದಂ ಪುಣ್ಯಂ ಪಠನ್ನಾನಂದತಾಮಿಯಾತ್ || ೯ ||

ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶ ಸ್ತೋತ್ರೇಷು ಏಕಾದಶ ಸ್ತೋತ್ರಮ್ ||

EkAdaSa stOtram

udIrNa majaraM divya mamRutasyandyadhISituH |
Anandasya padaM vande brahmendra dyaBi vanditam || 1 ||

sarva vEda padOdgIta mindirA dhAra muttamam |
Anandasya padaM vande brahmendra dyaBi vanditam || 2 ||

sarva dEvAdi dEvasya vidAritama hattamaH |
Anandasya padaM vande brahmendra dyaBi vanditam || 3 ||

udAramAdarA nnityamanindyaM suMdarI patEH |
Anandasya padaM vande brahmendra dyaBi vanditam || 4 ||

indIvarOdara niBaM supUrNaM vAdi mOhadam |
Anandasya padaM vande brahmendra dyaBi vanditam || 5 ||

dAtRu sarvAmaraisvarya vimuktyAdErahO varam |
Anandasya padaM vande brahmendra dyaBi vanditam || 6 ||

dUrA ddUra taraM yat tu tadEvAntika mantikAt |
Anandasya padaM vande brahmendra dyaBi vanditam || 7 ||

pUrNa sarva guNaikArNa manAdyantaM surESituH |
Anandasya padaM vande brahmendra dyaBi vanditam || 8 ||

AnandatIrtha muninA harEnaMda rUpiNaH |
kRutaM stOtramidaM puNyaM paThannAnandatAmiyAt || 9 ||

iti SrImadAnandatIrtha BagavatpAdAcArya viracitEShu dvAdaSa stOtrEShu EkAdaSa stOtram ||

dwadasa stothram · MADHWA · madhwacharyaru

Dwadasa sthothra – Dasama adhyaya

ದಶಮಂ ಸ್ತೋತ್ರಮ್.

ಅವನ ಶ್ರೀಪತಿ ರಪ್ರತಿ ರಧಿ ಕೇಶಾದಿ ಭವಾದೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧ ||

ಸುರ ವಂದ್ಯಾಧಿಪ ಸದ್ವರ ಭರಿತಾ ಶೇಷ ಗುಣಾಲವಮ್
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೨ ||

ಸಕಲ ಧ್ವಾಂತ ವಿನಾಶಕ ಪರಮಾನಂದ ಸುಧಾಹೋ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೩ ||

ತ್ರಿಜಗತ್ಪೋತ ಸದಾರ್ಚಿತ ಚರಣಾ ಶಾಪತಿ ಧಾತೋ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೪ ||

ತ್ರಿಗುಣಾತೀತ ವಿಧಾರಕ ಪರಿತೋ ದೇಹಿ ಸುಭಕ್ತಿಮ್ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೫ ||

ಶರಣಂ ಕಾರಣ ಭಾವನ ಭವ ಮೇ ತಾತ ಸದಾಽಲಮ್ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೬ ||

ಮರಣ ಪ್ರಾಣದ ಪಾಲಕ ಜಗದೀಶಾವ ಸುಭಕ್ತಿಮ್ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೭ ||

ತರುಣಾ ದಿತ್ಯ ಸವರ್ಣಕ ಚರಣಾಬ್ಜಾ ಮಲ ಕೀರ್ತೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೮ ||
ಸಲಿಲಪ್ರೋತ್ಥ ಸರಾಗಕ ಮಣಿ ವರ್ಣೋಚ್ಚನ ಖಾದೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೯ ||
ಖಜತೂಣೀ ನಿಭ ಪಾವನ ವರ ಜಂಘಾಮಿತ ಶಕ್ತೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೦ ||

ಇಭ ಹಸ್ತಪ್ರಭ ಶೋಭನ ಪರಮೋರು ಸ್ಥರ ಮಾಲೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೧ ||

ಅಸನೋತ್ಫುಲ್ಲ ಸುಪುಷ್ಪಕ ಸಮವರ್ಣಾ ವರಣಾಂತೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೨ ||

ಶತ ಮೋದೋದ್ಭವ ಸುಂದರ ವರ ಪದ್ಮೋತ್ಥಿತ ನಾಭೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೩ ||

ಜಗದಾ ಗೂಹಕ ಪಲ್ಲವ ಸಮ ಕುಕ್ಷೇ ಶರಣಾದೇ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೪ ||

ಜಗದಂಬಾ ಮಲ ಸುಂದರ ಗೃಹವಕ್ಷೋ ವರ ಯೋಗಿನ್ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೫ ||

ದಿತಿಜಾಂತ ಪ್ರದ ಚಕ್ರದರ ಗದಾಯುಗ್ವರ ಬಾಹೋ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೬ ||

ಪರಮಜ್ಞಾನ ಮಹಾನಿಧಿ ವದನಶ್ರೀ ರಮಣೇಂದೋ |
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೭ ||

ನಿಖಿಲಾಘೌ ಘ ವಿನಾಶನ ಪರ ಸೌಖ್ಯ ಪ್ರದ ದೃಷ್ಟೇ
ಕರುಣಾ ಪೂರ್ಣ ವರಪ್ರದ ಚರಿತಂ ಜ್ಞಾಪಯ ಮೇ ತೇ || ೧೮ ||

ಪರಮಾನಂದ ಸುತೀರ್ಥ ಸುಮುನಿ ರಾಜೋ ಹರಿಗಾಥಾಮ್ |
ಕೃತವಾನ್ ನಿತ್ಯ ಸುಪೂರ್ಣಕ ಪರಮಾನಂದ ಪದೈಷೀ ||೧೯||

ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶ ಸ್ತೋತ್ರೇಷು ದಶಮ ಸ್ತೋತ್ರಮ್ ||

daSamaM stOtram.

avana SrIpati raprati radhi kESAdi BavAdE |
karuNA pUrNa varaprada caritaM j~jApaya mE tE || 1 ||

sura vandyAdhipa sadvara BaritA SESha guNAlavam
karuNA pUrNa varaprada caritaM j~jApaya mE tE || 2 ||

sakala dhvAMta vinASaka paramAnaMda sudhAhO |
karuNA pUrNa varaprada caritaM j~jApaya mE tE || 3 ||

trijagatpOta sadArcita caraNA SApati dhAtO |
karuNA pUrNa varaprada caritaM j~jApaya mE tE || 4 ||

triguNAtIta vidhAraka paritO dEhi suBaktim |
karuNA pUrNa varaprada caritaM j~jApaya mE tE || 5 ||

SaraNaM kAraNa BAvana Bava mE tAta sadA&lam |
karuNA pUrNa varaprada caritaM j~jApaya mE tE || 6 ||

maraNa prANada pAlaka jagadISAva suBaktim |
karuNA pUrNa varaprada caritaM j~jApaya mE tE || 7 ||

taruNA ditya savarNaka caraNAbjA mala kIrtE |
karuNA pUrNa varaprada caritaM j~jApaya mE tE || 8 ||

salilaprOttha sarAgaka maNi varNOccana KAdE |
karuNA pUrNa varaprada caritaM j~jApaya mE tE || 9 ||

KajatUNI niBa pAvana vara jaMGAmita SaktE |
karuNA pUrNa varaprada caritaM j~jApaya mE tE || 10 ||

iBa hastapraBa SOBana paramOru sthara mAlE |
karuNA pUrNa varaprada caritaM j~jApaya mE tE || 11 ||

asanOtPulla supuShpaka samavarNA varaNAMtE |
karuNA pUrNa varaprada caritaM j~jApaya mE tE || 12 ||

Sata mOdOdBava suMdara vara padmOtthita nABE |
karuNA pUrNa varaprada caritaM j~jApaya mE tE || 13 ||

jagadA gUhaka pallava sama kukShE SaraNAdE |
karuNA pUrNa varaprada caritaM j~jApaya mE tE || 14 ||

jagadaMbA mala sundara gRuhavakShO vara yOgin |
karuNA pUrNa varaprada caritaM j~jApaya mE tE || 15 ||

ditijAMta prada cakradara gadAyugvara bAhO |
karuNA pUrNa varaprada caritaM j~jApaya mE tE || 16 ||

paramaj~jAna mahAnidhi vadanaSrI ramaNEMdO |
karuNA pUrNa varaprada caritaM j~jApaya mE tE || 17 ||

niKilAGau Ga vinASana para sauKya prada dRuShTE
karuNA pUrNa varaprada caritaM j~jApaya mE tE || 18 ||

paramAnanda sutIrtha sumuni rAjO harigAthAm |
kRutavAn nitya supUrNaka paramAnaMda padaiShI ||19||

iti SrImadAnandatIrtha BagavatpAdAcArya viracitEShu dvAdaSa stOtrEShu daSama stOtram ||

dwadasa stothram · MADHWA · madhwacharyaru

Dwadasa sthothra – Navama adhyaya

ನವಮಂ ಸ್ತೋತ್ರಮ್

ಅತಿಮತ ತಮೋಗಿರಿ ಸಮಿತಿ ವಿಭೇದನ ಪಿತಾಮಹ ಭೂತಿದ ಗುಣ ಗಣ ನಿಲಯ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೧ ||

ವಿಧಿಭವಮುಖಸುರ ಸತತಸುವಂದಿತ ರಮಾಮನೋವಲ್ಲಭ ಭವಮಮ ಶರಣಮ್|
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೨ ||

ಅಗಣಿತ ಗುಣಗಣಮಯ ಶರೀರಹೇ ವಿಗತ ಗುಣೇತರ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೩ ||

ಅಪರಿಮಿತಸುಖನಿಧಿ ವಿಮಲಸುದೇಹ ಹೇ ವಿಗತಸುಖೇತರ  ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೪ ||

ಪ್ರಚಲಿತಲಯ ಜಲವಿಹರಣ ಶಾಶ್ವತ ಸುಖಮಯ ಮೀನ ಹೇ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೫ ||

ಸುರದಿತಿಜಸುಬಲ ವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಮ್|
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೬ ||

ಸಗಿರಿವರ ಧರಾತಲವಹ ಸುಸೂಕರ ಪರಮ ವಿಭೋಧ ಹೇ ಭವಮಮ ಶರಣಮ್|
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೭ ||

ಅತಿಬಲ ದಿತಿಸುತ ಹೃದಯವಿಭೇದನ ಜಯ ನೃಹರೇಽಮಲ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೮ ||

ಬಲಿಮುಖದಿತಿಸುತ ವಿಜಯ ವಿನಾಶನ ಜಗದವ ನಾಜಿತಭವ ಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೯ ||

ಆವಿಜಿತಕುನೃಪತಿ ಸಮಿತಿ ವಿಖಂಡನ ರಮಾವರ ವೀರಪ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೧೦ ||

ಖರತರನಿಶಿಚರದಹನ ಪರಾಮೃತ ರಘುವರ ಮಾನದ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮ ರಮಾರಮಣ || ೧೧ ||

ಸುಲಲಿತತನುವರ ವರದ ಮಹಾಬಲ ಯದುವರ ಪಾರ್ಥಪ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮ ರಮಾ ರಮಣ || ೧೨ ||

ದಿತಿಸುತಮೋಹನ ವಿಮಲವಿಬೋಧನ ಪರಗುಣ ಬುದ್ಧ ಹೇ ಭವಮಮ ಸರ್ಹಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮ ರಮಾ ರಮಣ || ೧೩ ||

ಕಲಿಮಲಹುತವಹ ಸುಭಗ ಮಹೋತ್ಸವ ಶರಣದ ಕಲ್ಕೀಶ(ಹೇ)ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೧೪ ||

ಅಖಿಲಜನಿವಿಲಯ ಪರಸುಖ ಕಾರಣ ಪರ ಪುರುಷೋತ್ತಮ ಭವಮಮ ಶರಣಮ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೧೫ ||

ಇತಿ ತವ ನುತಿವರಸತತರತೇರ್ಭವ ಸುಶರಣಮುರು ಸುಖತೀರ್ಥಮುನೇರ್ಭಗವನ್ |
ಶುಭತಮಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮ ರಮಾರಮಣ || ೧೬ ||

|| ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶ ಸ್ತೋತ್ರೇಷು ನವಮ ಸ್ತೋತ್ರಮ್ ||

navamaM stOtram

atimata tamOgiri samiti viBEdana pitAmaha BUtida guNa gaNa nilaya |
SuBatamakathASaya parama sadOdita jagadEkakAraNa rAma ramAramaNa || 1 ||

vidhiBavamuKasura satatasuvandita ramAmanOvallaBa Bavamama SaraNam|
SuBatamakathASaya parama sadOdita jagadEkakAraNa rAma ramAramaNa || 2 ||

agaNita guNagaNamaya SarIrahE vigata guNEtara Bavamama SaraNam |
SuBatamakathASaya parama sadOdita jagadEkakAraNa rAma ramAramaNa || 3 ||

aparimitasuKanidhi vimalasudEha hE vigatasuKEtara Bavamama SaraNam |
SuBatamakathASaya parama sadOdita jagadEkakAraNa rAma ramAramaNa || 4 ||

pracalitalaya jalaviharaNa SASvata suKamaya mIna hE Bavamama SaraNam |
SuBatamakathASaya parama sadOdita jagadEkakAraNa rAma ramAramaNa || 5 ||

suraditijasubala vilulita maMdaradhara varakUrma hE Bavamama SaraNam|
SuBatamakathASaya parama sadOdita jagadEkakAraNa rAma ramAramaNa || 6 ||

sagirivara dharAtalavaha susUkara parama viBOdha hE Bavamama SaraNam|
SuBatamakathASaya parama sadOdita jagadEkakAraNa rAma ramAramaNa || 7 ||

atibala ditisuta hRudayaviBEdana jaya nRuharE&mala Bavamama SaraNam |
SuBatamakathASaya parama sadOdita jagadEkakAraNa rAma ramAramaNa || 8 ||

balimuKaditisuta vijaya vinASana jagadava nAjitaBava mama SaraNam |
SuBatamakathASaya parama sadOdita jagadEkakAraNa rAma ramAramaNa || 9 ||

AvijitakunRupati samiti viKanDana ramAvara vIrapa Bavamama SaraNam |
SuBatamakathASaya parama sadOdita jagadEkakAraNa rAma ramAramaNa || 10 ||

KarataraniSicaradahana parAmRuta raGuvara mAnada Bavamama SaraNam |
SuBatamakathASaya parama sadOdita jagadEka kAraNa rAma ramAramaNa || 11 ||

sulalitatanuvara varada mahAbala yaduvara pArthapa Bavamama SaraNam |
SuBatamakathASaya parama sadOdita jagadEka kAraNa rAma ramA ramaNa || 12 ||

ditisutamOhana vimalavibOdhana paraguNa buddha hE Bavamama sarhaNam |
SuBatamakathASaya parama sadOdita jagadEka kAraNa rAma ramA ramaNa || 13 ||

kalimalahutavaha suBaga mahOtsava SaraNada kalkISa(hE)Bavamama SaraNam |
SuBatamakathASaya parama sadOdita jagadEkakAraNa rAma ramAramaNa || 14 ||

aKilajanivilaya parasuKa kAraNa para puruShOttama Bavamama SaraNam |
SuBatamakathASaya parama sadOdita jagadEkakAraNa rAma ramAramaNa || 15 ||

iti tava nutivarasatataratErBava suSaraNamuru suKatIrthamunErBagavan |
SuBatamakathASaya parama sadOdita jagadEkakAraNa rAma ramAramaNa || 16 ||

|| SrImadAnandatIrtha BagavatpAdAcArya viracitEShu dvAdaSa stOtrEShu navama stOtram ||

dwadasa stothram · MADHWA · madhwacharyaru

Dwadasa sthothra – saptama adhyaya

ಸಪ್ತಮ ಸ್ತೋತ್ರಮ್.
ವಿಶ್ವ ಸ್ಥಿತಿ ಪ್ರಲಯ ಸರ್ಗ ಮಹಾ ವಿಭೂತಿವೃತ್ತಿ ಪ್ರಕಾಶ ನಿಯಮಾವೃತಿ ಬಂಧ ಮೋಕ್ಷಾಃ |
ಯಸ್ಯಾ ಅಪಾಂಗಲವ ಮಾತ್ರತ ಊರ್ಜಿತಾ ಸಾ ಗೀರ್ವಾಣ ಸಂತತಿರಿಯಂ ಯದಪಾಂಗ ಲೇಶಮ್ || ೧ ||

ಬ್ರಹ್ಮೇಶ ಶಕ್ರ ರವಿ ಧರ್ಮ ಶಶಾಂಕ ಪೂರ್ವಗೀರ್ವಾಣ ಸಂತತಿರಿಯಂ ಯದ ಪಾಂಗಲೇಶಮ್ |
ಆಶ್ರಿತ್ಯ ವಿಶ್ವ ವಿಜಯಂ ವಿಸೃಜತ್ಯ ಚಿಂತ್ಯಾ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೨ ||

ಧರ್ಮಾರ್ಥ ಕಾಮ ಸುಮತಿ ಪ್ರಚಯಾದ್ಯ ಶೇಷ-ಸನ್ಮಂಗಲಂ ವಿದಧತೇ ಯದಪಾಂಗಲೇಶಮ್
ಆಶ್ರಿತ್ಯ ತತ್ಪ್ರಣ ತಸತ್ಪ್ರಣತಾ ಅಪೀಡ್ಯಾ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೩ ||

ಷಡ್ವರ್ಗ ನಿಗ್ರಹ ನಿರಸ್ತ ಸಮಸ್ತ ದೋಷಾ ದ್ಯಾಯಂತಿ ವಿಷ್ಣು ಮೃಷಯೋ ಯದಪಾಂಗ ಲೇಶಮ್ |
ಆಶ್ರೀತ್ಯ ಯಾನಪಿ ಸಮೇತ್ಯ ನ ಯಾತಿ ದುಃಖಂ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೪ ||

ಶೇಶಾಹಿ ವೈರಿ ಶಿವ ಶಕ್ರ ಮನು ಪ್ರಧಾನಚಿತ್ರೋರು ಕರ್ಮ ರಚನಂ ಯದಪಾಂಗ ಲೇಶಮ್ |
ಆಶ್ರಿತ್ಯ ವಿಶ್ವ ಮಖಿಲಂ ವಿದ ಧಾತಿ ಧಾತಾ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೫ ||

ಶಕ್ರೋಗ್ರ ದೀಧಿತಿ ಹಿಮಾಕರ ಸೂರ್ಯ ಸೂನುಪೂರ್ವಂ ನಿಹತ್ಯ ನಿಖಿಲಂ ಯದಪಾಂಗಲೇಶಮ್ |
ಆಶ್ರಿತ್ಯ ನೃತ್ಯತಿ ಶಿವಃ ಪ್ರಕಟೋರು ಶಕ್ತಿ | ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೬ ||

ತತ್ತ್ಪಾದ ಪಂಕಜ ಮಹಾ ಸನತಾ ಮವಾಪ ಶರ್ವಾದಿ ವಂದ್ಯ ಚರಣೋ ಯದಪಾಂಗಲೇಶಮ್ |
ಆಶ್ರಿತ್ಯ ನಾಗಪತಿ ರನ್ಯಸುರೈರ್ದುರಾಪಾಂ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೭ ||

ನಾಗಾರಿ ರುದ್ರ ಬಲ ಪೌರುಷ ಆಪ ವಿಷ್ಣೋರ್ವಾಹತ್ವ ಮುತ್ತ ಮಜವೋ ಯದಪಾಂಗ ಲೇಶಮ್ |
ಆಶ್ರಿತ್ಯ ಶಕ್ರ ಮುಖ ದೇವಗಣೈರ ಚಿಂತ್ಯಂ ಶ್ರೀರ್ಯತ್ಕಟಾಕ್ಷ ಬಲವತ್ಯ ಜಿತಂ ನಮಾಮಿ || ೮ ||

ಆನಂದತೀರ್ಥ ಮುನಿ ಸನ್ಮುಖ ಪಂಕಜೋತ್ಥಂ ಸಾಕ್ಷಾದ್ರಮಾ ಹರಿ ಮನಃಪ್ರಿಯ ಮುತ್ತಮಾರ್ಥಮ್ |
ಭಕ್ತ್ಯಾ ಪಠತ್ಯ ಜಿತ ಮಾತ್ಮನಿ ಸನ್ನಿಧಾಯಯಃ ಸ್ತೋತ್ರ ಮೇತದಭಿಯಾತಿ ತಯೋರಭೀಷ್ಟಮ್ || ೯ ||

ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತೇಷು ದ್ವಾದಶ ಸ್ತೋತ್ರೇಷು ಸಪ್ತಮ ಸ್ತೋತ್ರಮ್.

saptama stOtram.
viSva sthiti pralaya sarga mahA viBUtivRutti prakASa niyamAvRuti baMdha mOkShAH |
yasyA apAngalava mAtrata UrjitA sA gIrvANa santatiriyaM yadapAnga lESam || 1 ||

brahmESa Sakra ravi dharma SaSAnka pUrvagIrvANa santatiriyaM yada pAngalESam |
ASritya viSva vijayaM visRujatya cintyA SrIryatkaTAkSha balavatya jitaM namAmi || 2 ||

dharmArtha kAma sumati pracayAdya SESha-sanmangalaM vidadhatE yadapAMgalESam
ASritya tatpraNa tasatpraNatA apIDyA SrIryatkaTAkSha balavatya jitaM namAmi || 3 ||

ShaDvarga nigraha nirasta samasta dOShA dyAyanti viShNu mRuShayO yadapAnga lESam |
ASrItya yAnapi samEtya na yAti duHKaM SrIryatkaTAkSha balavatya jitaM namAmi || 4 ||

SESAhi vairi Siva Sakra manu pradhAnacitrOru karma racanaM yadapAnga lESam |
ASritya viSva maKilaM vida dhAti dhAtA SrIryatkaTAkSha balavatya jitaM namAmi || 5 ||

SakrOgra dIdhiti himAkara sUrya sUnupUrvaM nihatya niKilaM yadapAngalESam |
ASritya nRutyati SivaH prakaTOru Sakti | SrIryatkaTAkSha balavatya jitaM namAmi || 6 ||

tattpAda pankaja mahA sanatA mavApa SarvAdi vaMdya caraNO yadapAngalESam |
ASritya nAgapati ranyasurairdurApAM SrIryatkaTAkSha balavatya jitaM namAmi || 7 ||

nAgAri rudra bala pauruSha Apa viShNOrvAhatva mutta majavO yadapAnga lESam |
ASritya Sakra muKa dEvagaNaira cintyaM SrIryatkaTAkSha balavatya jitaM namAmi || 8 ||

AnandatIrtha muni sanmuKa pankajOtthaM sAkShAdramA hari manaHpriya muttamArtham |
BaktyA paThatya jita mAtmani sannidhAyayaH stOtra mEtadaBiyAti tayOraBIShTam || 9 ||

iti SrImadAnandatIrtha BagavatpAdAcArya viracitEShu dvAdaSa stOtrEShu saptama stOtram.