bhootaraja · dasara padagalu · MADHWA

Dasara padagalu on Bhootarajaru

  1. Bhootaraja karuniso bhootaraja
  2. Bhootapathe bhootapathe
  3. Bhootarajara sthuthisi kyaathigolliro
  4. Bhajisi badukiro divya paadhakeragiro
  5. Bidiyannu bidisu bega
  6. Butaraja , butaraja , butaraja jai jai jai

Bhootaraja karuniso bhootaraja

ಭೂತರಾಜ ಕರುಣಿಸೊ ಭೂತರಾಜ
ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ||ಪ||

ವಾದದಿಂದಲಿ ಸೋತು
ವಾದಿರಾಜರ ಸೇರ್ದೆ
ಭೂತಾದಿಗಳ ಬೇಗದಿಂದಲೋಡಿಸುವಿ ||1||

ವಾದಿರಾಜರ ಬಲಭಾಗದಿ ನಿಂತಿರ್ದೆ
ಬಂದ ಜನರಿಗಿಷ್ಟ
ಕೊಟ್ಟು ಪೋಷಿಸುವಿ ||2||

ರಾಜೇಶ ಹಯಮುಖ-
ನೊಲಸಿ ಕೊಂಡಿಹ ಋಜು
ಗಣನಾಥ ಶ್ರೀವಾದಿರಾಜ ಕಿಂಕರವರ್ಯ ||3||

Butaraja karuniso butaraja
Munde belliya girinathanendenisuva butaraja || pa||

Vadadindali sotu
Vadirajara serde
Butadigala begadindalodisuvi ||1||

Vadirajara balabagadi nintirde
Banda janarigishta
Kottu poshisuvi ||2||

Rajesa hayamuka –
Nolasi kondiha Ruju
Gananatha srivadiraja kimkaravarya ||3||


Bhootapathe bhootapathe

ಭೂತಪತೇ – ಭೂತಪತೇ ||ಪ||

ಭೂತಿ ಮಹತ್ ಶ್ರುತಿ | ಪಾದ್ಯವೆನಿಪ ಹರಿದೂತ ಬ್ರಾತ ಮಹ | ಭೂತ ಗಣಾಧಿಪ || ಅ.ಪ||

ಕರ್ಣ ವಿಕರ್ಣರು | ಘನ್ನ ಗುಣಸಂ-ಪನ್ನ ಮಹಿಮ ಮನ | ಬನ್ನವ ಕಳೆಯೋ ||

ಗುರುವಾಣತಿ ಧೃತ | ಶಿರದಿ ಬದರಿಯಿಂಹರಿ ಪ್ರತಿಮೆ ಸಹಿತ | ಶಿರನೀತ ವಿಮಾನ ||

ಬಂದುಕ ಕುಸುಮಗ | ಳಿಂದ ಅಲಂಕೃತಸುಂದರಾಂಗ ಮನ | ಬಂಧಿಸುಹರಿಯಲಿ ||

ಬಿಂಬನು ಗುರು ಗೋವಿಂದ ವಿಠಲ ಪದಡಿಂಬದಿ ಕಾಂಬುವ | ಹಂಬಲವೀಯೋ ||

Butapate – butapate || pa||

Buti mahat Sruti | padyavenipa hariduta brata maha | buta ganadhipa || a . Pa ||

Karna vikarnaru | Ganna gunasam – panna mahima mana | bannava kaleyo ||

Guruvanati dhruta | Siradi badariyimhari pratime sahita | siranita vimana ||

Banduka kusumaga | limda alankrutasundaranga mana | bandhisuhariyali ||

Bimbanu guru govinda vithala padadimbadi kambuva | hambalaviyo ||


Bhootarajara sthuthisi kyaathigolliro

ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ||ಪ||

ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ||ಅ.ಪ||

ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು
ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲು
ಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ ||1||

ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ
ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ
ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ ||2||

ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ
ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ
ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ ||3||

Butarajara stutisi kyatigollo || pa||

Priti ivarali adhika vadirajarige || a . Pa ||

Atanaj~jeyinda dharisalukotiyante hubbu
Eke harisuvejyoti svarupakke budiyu musukalu
Patakiyu ta mutti bocbi barisane ||1||

Guruseve ivarante maddavaru yaruntugurukrupa
Ivarante padedavaru yaro^^aritu nodalu niruta ratige
Karanavuntunarakuri idara marmava tilivadunte ||2||

Indigu sodeli ivarade gurupujesuddi
Sullendavage debbe pujasaddilladivaradi smarisuvude
Gurupujatande sri narahari oppuva puja ||3||


Bhajisi badukiro divya paadhakeragiro

ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ||ಪ||

ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ ||1||

ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ||2||

ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ ||3||

ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ ||4||

ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ ||5||

ಏನು ಪೇಳಲಿ ಇನ್ನೇನು ಹೇಳಲೀe್ಞÁನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ ||6||

ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ ||7||

ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ ||8||

ಭೂತ ಹರಣವಾ ತಾಳೋ ಭೀತಿಗೊಳಿಸುತಾ ಪಾಪ ಪೋಪುದೂ ಯನ್ನ ಪಾದ ಸೋಂಕಲೂ||9||

ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು ||10||

ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ ||11||

ಪಂಚವೃಂದದೀ ಸದ್ವøಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ ||12||

ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ ||13||

ಪ್ರಾಣ ಪತಿಯನಾ ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ||14||

ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ||15||

ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು ||16||
Bajisi badukiro divya padakeragirobakutiyittu porevo butarajarembara || pa||

Bava Suddhadi Odi granthasarava vadirajara kudi tanu vyasa muniyali ||1||

Ashta mandiya amrutavrushtigarevaru sri krushnamahimeya tavu kudi padoro ||2||

Tamde embodu tanu ondanariyade ninde madi tane balukundigalukuva ||3||

Sishta janarolu ivane sreshthavenidu sittininda baidu bahu kashtabaduvano ||4||

Chandi manujane pracamda tapasiyokenda tulidu vyartha ninu dandakalukuvi ||5||

Enu pelali innenu helali gnana sunyanante Sikki nudiya byadelo ||6||

Kulla kelelo elo Galla todadironigamavella pelisuva kallinindale ||7||

Saranu pokkeno svami mareya pokkeno karuna madiri kannu teredu nodiri ||8||

Buta haranava talo bitigolisuta papa popudu yanna pada somkalu ||9||

Bitigolisutaneka buta pretakerajanagi ninu buta preta ganadolu ||10||

Nandivahanapadake mumde bahuvi yanna kanda ninu nane bavi mandajasana ||11||

Pancavrundadi sadvanda pujyana dvandva pondi tanu svananda padedanu ||12||

Svadinilayana balu priti padedu ta trisula dharisida bavi sula ramananu ||13||

Prana patiyana renu pada paniyali praninidadana avana prana selevana ||14||

Emtu pelali ivara achintyamahimeya samtamuruti sasikanta kiruti ||15||

Dushajanarana balu gasigolisida saktidayaka tande varada gopalavithalanu ||16||


Bidiyannu bidisu bega

ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ||ಪ||

ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ||ಅ.ಪ||

ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ ||1||

ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ ||2||

ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ ||3||

Bitiyannu bidisu bega butarajane || pa ||

Baktiyinda bagi namipe kyativantane || a . Pa ||

Kamabana kadime madu barikamaharaneramadhyani nidu vamana devane ||1||

Sara tiluhu garaladhariyekarava mugidu beduvenu tvaritadindali ||2||

Tandevaradavithalanna hrunmandiradol^Chandadinda tandu toro indusekara ||3||


Butaraja , butaraja , butaraja jai jai jai

ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ|| ಪ||

ಖ್ಯಾತ ವಾದಿರಾಜ, ಗುರುವ | ಪ್ರೀತಿಪಾತ್ರ
ಭಾವಿರುದ್ರ ಜೈ ಜೈ ಜೈ ||ಅ.ಪ||

ಮೂಲ ಹರಿಯ ನಾಮ ಧರಸಿ | ವ್ಯಾಳ ವಿನುತ ಗುರುವಿನಲ್ಲಿ
ಶೂಲಿ ಯಂತೆ ವಿದ್ಯೆ ಘಳಿಸಿ | ಕಾಳ ಮನದಿ ಮೆರೆದ ಮುನಿಗೆ ಜೈ ಜೈ ಜೈ ||1||

ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ |
ಗುರುಗಳನ್ನು ಬಿಡದೆ ಬೆದಕಿ, ಪುರದಲಾದೆ  ಬೊಮ್ಮರಕ್ಕಸ ಜೈ ಜೈ ಜೈ ||2||

ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ |
ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ||3||

ಏನು ನಿನ್ನ ಜ್ಞಾನ ಮಾನ, ಹೀನ ಜನ್ಮ ಬಂದರೂನು |
ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ||4||

ಕರುಣ ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ |
ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ ||5||

ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ |
ಅಮರನಾಥ ಗುರುವು ನೀನು, ನಮಗೆ ಮಗನು ಸುಖದಿ ಬಾಳೆಂದು||6||

ನಾರಸಿಂಹ ನಿನ್ನ ಬಿಂಬ, ಭಾರಿ ಗಾತ್ರ ಕೆಂಪು ನೇತ್ರ |
ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ ||7||

ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು |
ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ ||8||

ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ
ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ ||9||

ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ
ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ||10||

ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ
ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ||11||

ಶೃಂಗ ಪುರದಿ ಖಳರ ಸೊಕ್ಕು ಭಂಗ ಗೈದು ನಿಂತೆ ಅಲ್ಲ
ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ||12||

ಗುರುವು ಕೊಟ್ಟ ನೂಪೂರಾವ, ಧರಿಸಿ
ಕುಣಿದು ಮುದದಿ ಭಜಿಪೆ
ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ||13||

ಸ್ವಾದಿ ಕ್ಷೇತ್ರದಲ್ಲಿ ನೆಲಸಿ | ವಾದಿರಾಜ ವೈರಿ ವೃಂದ
ಬೂದಿಗೈದು ಭಕ್ತಿಗಣಕೆ, ಮೋದ ಕೊಡಿಸು ತಿರ್ಪೆಭೂಪ |ಜೈ||14||

ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ
ರಾಜ ದಯದಿ ಮೆರೆವ ನಿನ್ನ | ನೈಜ ಮಹಿಮೆ  ಅಳಿಯೆ ಸಿಗದು ಜೈ ||15||

ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ |
ಕುಂದು ರಹಿತ ಹರಿಯ ಯಜಿಸಿ, ಇಂದು ಉಂಬೆ ದಿವ್ಯ ಪದವಿ||16||

ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ |
ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ||17||

ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ
ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ||18||

ಕರ್ಣ ಆವಿ ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು |
ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ||19||

ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ
ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ||20||

ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ |
ನಾಥ ಶ್ರೀ  ಕೃಷ್ಣ ವಿಠಲ, ಪ್ರೀತಿ ಯಿಂದ ನಲಿದು  ನಲಿವ ಜೈ ಜೈ ಜೈ ||21||

Butaraja , butaraja , butaraja jai jai jai|| pa||

Kyata vadiraja , guruva | pritipatra
Bavirudra jai jai jai || a . Pa ||

Mula hariya nama dharasi | vyala vinuta guruvinalli
Suli yamte vidye galisi | kala manadi mereda munige jai jai jai ||1||

Hariya mukajarannu bahala , jaridu jaridu garva dinda |
Gurugalannu bidade bedaki , puradalade bommarakkasa jai jai jai ||2||

Gora adavi seri Baradi , dariyalli banda janara |
Sorekondu manadhanava , kruranendu karasi konde ||3||

Enu ninna gnanja mana , hina janma bamdarunu |
Ja Á na purna guruvinodane , manavada pakshagaide ||4||

Karuna Saradhi vadiraja , Baradi harisi kilu janma |
Carana Bajipa bagyakodalu , merade butaraja nenisi ||5||

Kshamisanenu sutanapitanu , namisi ninta ninage nudida |
Amaranatha guruvu ninu , namage maganu sukadi balendu ||6||

Narasimha ninna bimba , bari gatra kempu netra |
Caru vadave ganava dharisi , vira rupadinda mereve ||7||

Hari hogi dhanapanedege , tori ninnasaurya padadu |
Bari ratna makuta nutisi , nera siradalitte guruvige ||8||

Pathadi kalana kondu bega ratha sameta badariyinda
Pruthivi alede doreyatandu , vitata mahima dushthadamana ||9||

Kshetrapala saranu bavisutra valiya bidalu ninna
Gatrakedahi bedi kombe , netra nido hariya kamba jai ||10||

Kaledu bega holasu manava , belisi hariya drudhasubakti
Kaliya tuliva Sakti nidi , kalaso sadhusanga jiya , jai ||11||

Srunga puradi kalara sokku Banga gaidu ninte alla
Linga tande kadariyinda , tunga mahima mangalanga jai ||12||

Guruvu kotta nupurava , dharisi kunidu mudadi Bajipe
Garala kantha bavi saranu , carana pidive stotrapriya jai ||13||

Svadi kshetradalli nelasi | vadiraja vairi vrunda
Budigaidu baktiganake , moda kodisu tirpebupa | jai ||14||

Raja birudu sahita bari | vaji Eri nadeye vadi
Raja dayadi mereva ninna | naija mahime aliye sigadu jai ||15||

Vandu kammi nalku hattu , tande vidhiya kalpagalali |
Kundu rahita hariya yajisi , indu umbe divya padavi ||16||

Biti karavu ninna rupa , vratyaganake vadi raja |
Duta ninage pratiya kane , priti surisu brutyaremage jai ||17||

Raja redeya baladi nelasi , raja mamtri kelasa nadesi
Suji tappigedeya kodade , raja kshetra kayutirpe bai ||18||

Karna Avi karna gumpu , ninna stuti sevisuvaru |
Donni seve duduki davage , cinnarendu tappa kshamisu jai ||19||

Citra vaiya ninna carite , Baktarinda kondu harike
Kittu vagedu vividha dosha , etti koduve kamitarthajai ||20||

Buta preta badhe sakala , artinasa padava pathise |
Natha sri _ krushna vithala , priti yinda nalidu naliva jai jai jai ||21||


2 thoughts on “Dasara padagalu on Bhootarajaru

  1. Namaskaragalu.Bhutarajara Melina krutigalli Latavya,Latavya yennuva pada,Vadirajara Melina kruti.Dayavittu a pada Vannu Vadirajara Melina krutigalli serisi.Thank you.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s