hari kathamrutha sara · jagannatha dasaru · MADHWA

Anu taratamya sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ
ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ
ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು
ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ||1||

ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ
ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು
ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು
ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ||2||

ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು
ದ್ಯುಮಣಿಗಿಂದಲಿ ವರುಣ ನೀಚನು ನಾದದ ಅಧಮನು
ಸುಮನಸಾಸ್ಯ ಪ್ರಸೂತಿ ಭೃಗು ಮುನಿ ಸಮರು ನಾರದಗೆ ಅಧಮರು
ಅತ್ರಿ ಪ್ರಮುಖ ವಿಶ್ವಾಮಿತ್ರ ವೈವಸ್ವತರು ಅನಳಗೆ ಅಧಮ||3||

ಮಿತ್ರ ತಾರಾ ನಿರ್ಋತಿ ಪ್ರವಹಾ ಪತ್ನಿ ಪ್ರಾವಹಿ ಸಮರು
ವಿಶ್ವಾಮಿತ್ರಗಿಂದಲಿ ಕೊರತೆ
ವಿಷ್ವಕ್ಸೇನ ಗಣನಾಥ ವಿತ್ತಪತಿ ಅಶ್ವಿನಿಗಳು ಅಧಮರು
ಮಿತ್ರ ಮೊದಲಾದ ಅವರಿಗಿಂದಲಿ ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ||4||

ಮರುತರು ಒಂಭತ್ತು ಅಧಿಕ ನಾಲ್ವತ್ತು ಎರಡು ಅಶ್ವಿನಿ
ವಿಶ್ವೇದೇವರು ಎರಡೈದು ಹನ್ನೊಂದು ರುದ್ರರು ದ್ವಾದಶಾದಿತ್ಯ
ಗುರು ಪಿತೃ ತ್ರಯ ಅಷ್ಟವಸುಗಳು ಭರತ ಭಾರತಿ ಪೃಥ್ವಿ ಋಭುವು
ಎಂದರಿದು ಇವರನು ಸೋಮರಸ ಪಾನಾರ್ಹರು ಅಹುದೆಂದು||5||

ಈ ದಿವೌಕಸರೊಳಗೆ ಉಕ್ತರು ಐದಧಿಕ ದಶ
ಉಳಿದ ಎಂಭತ್ತೈದು ಶೇಷರಿಗೆ ಎಣೆಯೆನಿಸುವರು ಧನಪ ವಿಘ್ನೇಶಾ
ಸಾಧು ವೈವಸ್ವತ ಸ್ವಯಂಭುವ ಶ್ರೀದ ತಾಪಸರುಳಿದು
ಮನು ಎಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು||6||

ಚವನ ನಂದನ ಕವಿ ಬೃಹಸ್ಪತಿ ಅವರಜ ಉಚಿಥ್ಯಮುನಿ ಪಾವಕ
ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ
ಕುವಲಯಪರು ಉಕ್ತೇತರಿಂದಲಿ ಅವರ ರೋಹಿಣಿ ಶಾಮಲಾ ಜಾಹ್ನವಿ
ವಿರಾಟ್ ಪರ್ಜನ್ಯ ಸಂಜ್ಞಾ ದೇವಿಯರು ಅಧಮ||7||

ದ್ಯುನದಿಗಿಂತಲಿ ನೀಚರೆನಿಪರು ಅನಭಿಮಾನಿ ದಿವೌಕಸರು
ಕೇಚನ ಮುನಿಗಳಿಗೆ ಕಡಿಮೆ ಸ್ವಾಹಾ ದೇವಿಗೆ ಅಧಮ ಬುಧ
ಎನಿಸುವಳು ಉಷಾದೇವಿ ನೀಚಳು ಶನಿ ಕಡಿಮೆ ಕರ್ಮಾಧಿಪತಿ
ಸದ್ವಿನುತ ಪುಷ್ಕರ ನೀಚನು ಎನಿಸುವ ಸೂರ್ಯನಂದನಗೆ||8||

ಕೊರತೆಯೆನಿಪರು ಅಶೀತಿ ಋಷಿ ಪುಷ್ಕರಗೆ
ಊರ್ವಶಿ ಮುಖ್ಯ ಶತ ಅಪ್ಸರರು ತುಂಬುರ ಮುಖರು ಅಜಾನಜರು ಎನಿಸುತಿಹರು
ಕರೆಸುವುದು ಅನಳಗಣ ನಾಲ್ವತ್ತು ಅರೆ ಚತುರ್ದಶ ದ್ವಿ ಅಷ್ಟ ಸಾವಿರ
ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ||9||
ತದವರರು ಅನಾಖ್ಯಾತ ಅಪ್ಸರ ಸುದತಿಯರು ಕೃಷ್ಣಾoಗ ಸಂಗಿಗಳು
ಅದರ ತರುವಾಯದಲಿ ಚಿರಪಿತರುಗಳು
ಇವರಿಂದ ತ್ರಿದಶ ಗಂಧರ್ವ ಗಣ ಇವರಿಂದ ಅಧಮ ನರ ಗಂಧರ್ವರು
ಇವರಿಂದ ಉದಧಿ ಮೇಲೆ ಅಖಿಳ ಪತಿಗಳು ಅಧಮರು ನೂರು ಗುಣದಿಂದ||10||

ಪೃಥ್ವಿ ಪತಿಗಳಿಗಿಂದ ಶತ ಮನುಜೋತ್ತಮರು ಕಡಿಮೆ ಎನಿಪರು
ಇವರಿಂದ ಉತ್ತರೋತ್ತರ ನೂರು ಗುಣದಿಂದ ಅಧಿಕರಾದವರ
ನಿತ್ಯದಲಿ ಚಿಂತಿಸುತ ನಮಿಸುತ ಭೃತ್ಯನು ಆನುಹದೆಂಬ
ಭಕ್ತರ ಚಿತ್ತದಲಿ ನೆಲೆಗೊಂಡು ಕರುಣಿಪರು ಅಖಿಳ ಸೌಖ್ಯಗಳ||11||

ದ್ರುಮಲತಾ ತೃಣ ಗುಲ್ಮ ಜೀವರು ಕ್ರಮದಿ ನೀಚರು
ಇವರಿಗಿಂತಧಮರು ನಿತ್ಯ ಬದ್ಧರಿಗಿಂತಲು ಅಜ್ಞಾನಿ
ತಮಸಿಗೆ ಯೋಗ್ಯರ ಭೃತ್ಯರು ಅಧಮರು ಅಮರುಷಾದಿ ಅಭಿಮಾನಿ ದೈತ್ಯರು
ನಮುಚಿ ಮೊದಲಾದ ಅವರಿಗಿಂತಲಿ ವಿಪ್ರಚಿತ ನೀಚ||12||

ಅಲಕುಮಿಯು ತಾ ನೀಚಳೆನಿಪಲು ಕಲಿ ಪರಮ ನೀಚತಮ
ಅವನಿಂದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ
ಮಲವಿಸರ್ಜನ ಕಾಲದಲಿ ಕತ್ತಲೆಯೊಳಗೆ ಕಲ್ಮಶ ಕುಮಾರ್ಗ
ಸ್ಥಳಗಳಲಿ ಚಿಂತನೆಯ ಮಾಳ್ಪುದು ಬಲ್ಲವರು ನಿತ್ಯ||13||

ಸತ್ವ ಜೀವರ ಮಾನಿ ಬ್ರಹ್ಮನು ನಿತ್ಯ ಬದ್ಧರೊಳಗೆ ಪುರಂಜನ
ದೈತ್ಯ ಸಮುದಾಯಧಿಪತಿ ಕಲಿಯೆನಿಪ
ಪವಮಾನ ನಿತ್ಯದಲಿ ಅವರೊಳಗೆ ಕರ್ಮ ಪ್ರವರ್ತಕನು ತಾನಾಗಿ
ಶ್ರೀ ಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ||14||

ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ
ಅಧಿಕಾರ ಅನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ
ಜ್ಞಾನ ಭಕ್ತಿ ಸುರರ್ಗೆ ಮಿಶ್ರ ಜ್ಞಾನ ಮಧ್ಯಮ ಜೀವರಿಗೆ
ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ||15||

ದೇವ ದೈತ್ಯರ ತಾರತಮ್ಯವ ಈ ವಿಧದಿ ತಿಲಿದೆಲ್ಲರೊಳು
ಲಕ್ಷ್ಮೀವರನು ಸರ್ವೋತ್ತಮನೆಂದರಿದು ನಿತ್ಯದಲಿ
ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ
ಶ್ರೀ ವಿರಿಂಚಾದಿ ಅಮರ ವಂದಿತ ಜಗನ್ನಾಥ ವಿಠಲನು||16||

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

viShNu sarvOttamanu prakRuti kaniShThaLu enipaLu ananta guNa
paramEShThi pavanaru kaDime vANI BAratigaLu adhama
viShNu vahana PaNIndra mRuDarige kRuShNa mahiShiyaru adhamaru
ivaroLu SrEShThaLu enipaLu jAMbavati AvESa baladiMda||1||

plavaga pannagapa ahi BUShaNa yuvatiyaru sama tammoLage
jAMbavatigindali kaDime ivaru indra kAmarige avara prANanu
kaDime kAmana kuvara Saci rati dakSha guru manu
pravaha mAruta korateyenisuva Aru janarinda||2||

yama divAkara candra mAnavi sumaru kONapa pravahage adhamaru
dyumaNigindali varuNa nIcanu nAdada adhamanu
sumanasAsya prasUti BRugu muni samaru nAradage adhamaru
atri pramuKa viSvAmitra vaivasvataru anaLage adhama||3||

mitra tArA nir^^Ruti pravahA patni prAvahi samaru
viSvAmitragindali korate
viShvaksEna gaNanAtha vittapati aSvinigaLu adhamaru
mitra modalAda avarigindali bittaripenu Satastha manujara vyUha nAmagaLa||4||

marutaru oMBattu adhika nAlvattu eraDu aSvini
viSvEdEvaru eraDaidu hannondu rudraru dvAdaSAditya
guru pitRu traya aShTavasugaLu Barata BArati pRuthvi RuBuvu
eMdaridu ivaranu sOmarasa pAnArharu ahudendu||5||

I divaukasaroLage uktaru aidadhika daSa
uLida eMBattaidu SESharige eNeyenisuvaru dhanapa viGnESA
sAdhu vaivasvata svayaMBuva SrIda tApasaruLidu
manu ekAdaSaru viGnESagintali korateyenisuvaru||6||

cavana naMdana kavi bRuhaspati avaraja ucithyamuni pAvaka
dhRuva nahuSha SaSibindu priyavratanu prahlAda
kuvalayaparu uktEtarindali avara rOhiNi SAmalA jAhnavi
virAT parjanya saMj~jA dEviyaru adhama||7||

dyunadigintali nIcareniparu anaBimAni divaukasaru
kEcana munigaLige kaDime svAhA dEvige adhama budha
enisuvaLu uShAdEvi nIcaLu Sani kaDime karmAdhipati
sadvinuta puShkara nIcanu enisuva sUryanandanage||8||

korateyeniparu aSIti RuShi puShkarage
UrvaSi muKya Sata apsararu tuMbura muKaru ajAnajaru enisutiharu
karesuvudu anaLagaNa nAlvattu are caturdaSa dvi aShTa sAvira
hari maDadiyaru samarenisuvaru pinte pELvarige||9||

tadavararu anAKyAta apsara sudatiyaru kRuShNAoga sangigaLu
adara taruvAyadali cirapitarugaLu
ivarinda tridaSa gandharva gaNa ivarinda adhama nara gandharvaru
ivarinda udadhi mEle aKiLa patigaLu adhamaru nUru guNadinda||10||

pRuthvi patigaLiginda Sata manujOttamaru kaDime eniparu
ivariMda uttarOttara nUru guNadinda adhikarAdavara
nityadali cintisuta namisuta BRutyanu AnuhadeMba
Baktara cittadali nelegonDu karuNiparu aKiLa sauKyagaLa||11||

drumalatA tRuNa gulma jIvaru kramadi nIcaru
ivarigiMtadhamaru nitya baddharigiMtalu aj~jAni
tamasige yOgyara BRutyaru adhamaru amaruShAdi aBimAni daityaru
namuci modalAda avarigiMtali vipracita nIca||12||

alakumiyu tA nIcaLenipalu kali parama nIcatama
avaninduLida pApigaLilla nODalu I jagatrayadi
malavisarjana kAladali kattaleyoLage kalmaSa kumArga
sthaLagaLali cintaneya mALpudu ballavaru nitya||13||

satva jIvara mAni brahmanu nitya baddharoLage puranjana
daitya samudAyadhipati kaliyenipa
pavamAna nityadali avaroLage karma pravartakanu tAnAgi
SrI puruShOttamana saMprItigOsuga mADi mADisuva||14||

prANadEvanu trividharoLage pravINa tAnendenisi
adhikAra anusAradi karmagaLa tA mADi mADisuva
j~jAna Bakti surarge miSra j~jAna madhyama jIvarige
aj~jAna mOha dvEShagaLa daityarige koDutippa||15||

dEva daityara tAratamyava I vidhadi tilidellaroLu
lakShmIvaranu sarvOttamanendaridu nityadali
sEvisuva Baktarigolidu suKavIva sarvatradali suKamaya
SrI virincAdi amara vandita jagannAtha viThalanu||16||

One thought on “Anu taratamya sandhi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s