It is celebrated on the Phalguna maasa pournami every year. It is popularly called as “Kaamana habba”.
It is the day on which Mano niyamaka Rudra Devaru burnt Manmatha.
Once Manoniyamaka Rudradevaru was deep in meditation, became indifferent to love and thus all procreation stopped. All the devataas approached Kama (deity of love), who fired an arrow of love, at Shiva. Shiva with his meditation disturbed opened his third eye and burnt down Kaama into ashes. Rati, Kaamas’s wife performed severe penance. Shiva promised her that Kaama would return to her and resume the spread of love and procreation. However He would be formless
On the eve of Holi, huge bonfires are lit with logs of wood, dried cow dung, ghee, honey and the new crops brought from the fields.
It is also in our tradition to prepare Habbada adige/Saanacha sampaka(Marathi) and Enjoy the feast with beloved family members
For small kids less than 5 Years of age, during Holi time they are adorned with different (garlands) made out of edible items such as Puffed rice Maala, Sugar candy Maala, Chocolate maala, biscuit maala etc. This is believed to be a custom for ‘Peeda Parihara’.
- Put the new dress for the kids
- Invite friends/relatives
- Make the kid sit on a plank (Paat) or chair facing East
- Put the maalas one by one
- At the end do Aarthi
ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ
ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ಧ್ರುವ
ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ
ಪ್ರೇಮ ಪ್ರೀತಿಯಿಂದ ಕುಣಿದಾಡುವ ಬನ್ನಿರೊ ||1||
ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ
ಮದ ಮತ್ಸರವ ಬೂದಿ ಮಾಡಿಚೆಲ್ಲುವ ಬನ್ನಿರೊ ||2||
ಏಕರಂಗವಾಗಿ ಓಕುಳ್ಯಾಡವ ಬನ್ನಿರೊ
ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ ||3||
ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚಲುವನೊ
ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ ||4||
ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು
ಕಳೆದು ಕಲ್ಪನೆ ಕೋಟಿಲಿಂದ ಗೆದ್ದ ನೋಡಿರೊ ||5||
trAhi trAhi enniro trailOkyadoDiyage
trAhi trAhi enniro tAraka brahmage Dhruva
kAma krOdha suTTu hOLiyADuva banniro
prEma prItiyinda kuNidADuva banniro ||1||
BEdavaLidu sAdhu janara kUDikoMba banniro
mada matsarava bUdi mADicelluva banniro ||2||
EkaraMgavAgi OkuLyADava banniro
jIkaLiya mADi mAya mOha esuva banniro ||3||
ellaroLagiha namma pullanABa caluvano
balla mahimanige neleya nODi olivano ||4||
hOLiyADidanu nODi iLiyoLaga mahipatiyu
kaLedu kalpane kOTilinda gedda nODiro ||5||
ದುಮ್ಮ ಬಸವಂತನ ಹಬ್ಬಾ |
ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ||pa||
ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ
ಬ್ಯಾಡಿ ತನು ಧನ ಮನದೀ |
ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ
ಲ್ಯಾಡುವ ಬನ್ನಿರಣ್ಣಾ ||1||
ಝಮ್ಮನೆ ವಿವೇಕ ಕುಂಡವನೇ ಮಾಡಿ |
ಸಮ್ಯ ಜ್ಞಾನಾಗ್ನಿಯ ಪ್ರಜ್ವಲದಿಂದಾ |
ಹಮ್ಮೆಂಬ ಕಾಮನ ಹೋಳಿಯದಹಿಸಿ |
ಒಮ್ಮನದಿ ನಲಿದಾಡಿರಣ್ಣಾ ||2||
ಹರಿನಾಮ ಕುಂಕುಮ ಸಾರಿ ಚಲ್ಯಾಡುತ |
ಧರಿಸುತ ಹೃದಯ ಶಿರಸದಲಿ |
ಕರದಲಿ ವಿಚಾರ ಬೆತ್ತ ಹೊಯ್ದಾಡುತ |
ಹರುಷದಿಂದಲಿ ಕುಣಿದಾಡಿರಣ್ಣಾ ||3||
ಗುರುರಾಯಾ ಸಹಕಾರಿ ತಾನಾಗಿ ನಮಗಿನ್ನು |
ಪರಿ ಪರಿ ಸಾಧನ ದೋರಿಸುತಾ |
ಕರುಣದಿ ಆಡಿಸುತಿಲ್ಲಿ ನಿಂದಿರಲು |
ದುರಿತಭಯಕ ಅಂಜ ಬ್ಯಾಡಿರಣ್ಣಾ ||4||
ಮೊದಲ ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ
ಗಂಗಿಯೊಳು ಮಿಂದು ಶುಚಿಯಾಗಿ |
ಸದಮಲ ಮಹಿಪತಿ-ನಂದನ ಪ್ರಭು ಪದ |
ಪದುಮಾಶ್ರಯದಿಂದ ಗತಿಪಡಿರಣ್ಣಾ ||5||
dumma basavantana habbA |
dumma dummenni dumma sAlavenni ||pa||
narajanma PAlguNa paurNime bandide | mariya
byADi tanu dhana manadI |
haridAsa rAhavarellaru hOLiya | paramAnaMdada
lyADuva banniraNNA ||1||
Jammane vivEka kunDavanE mADi |
samya j~jAnAgniya prajvaladindA |
hammeMba kAmana hOLiyadahisi |
ommanadi nalidADiraNNA ||2||
harinAma kuMkuma sAri calyADuta |
dharisuta hRudaya Sirasadali |
karadali vicAra betta hoydADuta |
haruShadindali kuNidADiraNNA ||3||
gururAyA sahakAri tAnAgi namaginnu |
pari pari sAdhana dOrisutA |
karuNadi ADisutilli nindiralu |
duritaBayaka anja byADiraNNA ||4||
modala sancita bUdiya calli paramA | rthada
gangiyoLu mindu SuciyAgi |
sadamala mahipati-nandana praBu pada |
padumASrayadinda gatipaDiraNNA ||5||
ದ್ವಂದ್ವವೆ ವಸಂತದ ಹಬ್ಬ
ದ್ವಂದ್ವವೆ ಇಹಪರದಲ್ಲಿ ಹಬ್ಬ ||pa||
ದ್ವಂದ್ವಾಮೃತ ಕ್ಷೇಮ ಅಭಯ ವಸಂತ
ದ್ವಂದ್ವ ಜೀವೇಶರ ತಿಳಿದವ ಶಾಂತ
ದ್ವಂದ್ವದ ನಡೆನುಡಿ ಬಲ್ಲವ ಸಂತ
ದ್ವಂದ್ವವರಿಯದನ ಗತಿಯೆ ವಸಂತ ||1||
ದ್ವಂದ್ವ ಶೀತೋಷ್ಣ ಸಮಾನವ ಕಂಡು
ದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡು
ದ್ವಂದ್ವವ ಮಾನವ ಹಿಡಿದರೆ ಭಂಡು
ದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು ||2||
ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆ
ಬಾಲಕರೆಲ್ಲ ನೆರೆವುದೊಂದು ಘÀಳಿಗೆ
ಹೋಳಿಯನಾಡುವ ಸಂಭ್ರಮದೊಳಗೆ
ಕಾಳಗ ಬೇಡಿರೊ ನಿಮ್ಮ ನಿಮ್ಮೊಳಗೆ ||3||
ಅಜ್ಞೈಕ್ಯ ಪ್ರತಿಪದ ಹಿಂದಾದರಿಂದ
ಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರ
ಒಗ್ಗೂಡಿ ಗೆಳೆಯರೊಮ್ಮತದಿಂದ
ಲಗ್ಗೆಕಾರರು ಮುಂದೆ ನಡೆವುದೆ ಚಂದ||4||
ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿ
ರಕ್ತಿ ರಂಹಸ ಬ್ರಹ್ಮದ್ಹಾದಿಯ ಐದಿ
ವ್ಯಕ್ತವಾಗುವ ವಸ್ತು ಓದಿಕೆ ಓದಿ
ರಿಕ್ತದ ನುಡಿಗಳು ತಮಸಿನ ಹಾದಿ||5||
ದಿನಪತಿ ಅಡಗಿರೆ ಮಲಗದೆ ಎದ್ದು
ಮನೆಯವರನು ಎಚ್ಚರಿಸಬ್ಯಾಡಿ ಸದ್ದು
ನೆನೆವ ವಿಷಯಗೋಡೆ ಏರುತ್ತ ಬಿದ್ದು
ಮನೆ ಮನೋವಾರ್ತೆಯ ಕುರುಳನೆ ಕದ್ದು||6||
ಹಾರುವರ ಕೇರಿಯ ಹೊಗಬ್ಯಾಡಿ ಕೇಳಿ
ಬೇರೂರವರ ಬಿಟ್ಟು ಬಿಡಿ ದೂರದಲ್ಲಿ
ದೂರುವರೊಡನಾಟ ದುರ್ದೆಶೆಫಲವು ವಸ್ತು
ದೋರುವ ಮನೆಯೇವೆ ಸರಸ ವೆಗ್ಗಳವು||7||
ಧೂಳಿ ನೀರುರಿಗಾಳಿ ಬಯಲೊಳಗಾಡಿ
ಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿ
ಹಾಳು ತುರುಕರ ಕೇರಿಯೊಳು ನಿಷ್ಫಲವು
ಜಾಲಗಾರರ ಕೇರಿ ಹೊಕ್ಕರೆ ಫಲವು ||8||
ಹಿಂಚಾದ ಹಿರಿಯರ ಮಾತಲೆ ನಡೆದು
ವಂಚಕ ಮೂವರ ಸಂಗವ ಕಡಿದು
ಮಿಂಚುವ ಮಾನ್ಯರ ಪ್ರೀತಿಯ ಪಡೆದು
ಸಂಚಿತ ಪ್ರಾರಬ್ಧಾಗಾಮಿಯ ಒಡೆದು ||9||
ಮುಚ್ಚಿದ ಕದವೆರಡನು ಮುರಿಹೊಯ್ದು
ಇಚ್ಛೆ ಮೂರೆಂಬ ನಾಯಿಗಳ ಜಿಹ್ವೆ ಕೊಯ್ದು
ಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣ
ಸಚ್ಚಿದ ಗೋರಸ ಸೂರ್ಯಾಡಿರಣ್ಣ ||10||
ಏಕಾಧಿಪತಿಯಾಜ್ಞ ಅಭಯವು ಬೇಕು
ನಾಕು ಝಾವಿನ ರಾತ್ರಿ ನಲವಿರಬೇಕು
ಪೋಕ ಕಳ್ಳಾರ್ವರ ಮೆಟ್ಟ್ಯಾಳಬೇಕು
ಭೂಕಾಂತಗೆ ಸೇವೆಯೊಪ್ಪಿಸಬೇಕು ||11||
ರಮಣನೊಲ್ಲದ ಆರ್ವರ ಸಂಗವಿಡಿದು
ರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದು
ಅಮಿತ ವೈರಾಗ್ಯಹಗ್ಗದಿ ಕೈಯ ಕಟ್ಟಿ ಶ್ರೀ
ರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ||12||
ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳು
ಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳು
ಎಲ್ಲೆಲ್ಲಿ ನಿರಯ ಕಮ್ಮರಿ ಮಿಟ್ಟೆಗಳು
ಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು||13||
ವ್ಯಾಳ್ಯವರಿತು ತತ್ವಸಂಧಿಯ ಒಲಿದು
ಸೂಳಿ ಮದೆಂಟರ ಕೈಸೆರೆವಿಡಿದು
ಕಾಲಾಖ್ಯ ತಳವಾರನಾಳಿಗೆ ಕೊಟ್ಟು
ಮ್ಯಾಳದ ಗೆಳೆಯರು ಸಂತೋಷಪಟ್ಟು||14||
ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತ
ಡೊಂಬಿಯಿಲ್ಲದೆ ಬಂದ ಬನ್ನವಬಡುತ
ಕುಂಭಿಣಿಸುರ ಕುಲ ಭೂಮಿಗೆ ಬಂದು
ದಂಭ ಮಾಡದಲೆ ಕುರುಳ ಒಯ್ಯಿರೆಂದು ||15||
ರಾಗ ಮತ್ಸರಗೂಡಿದರ ಕುರುಳನೊಟ್ಟಿ
ಭೂಗಗನ ಹೊಗುವ ಕಾಮವ ಕಟ್ಟಿ
ಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿ
ಮ್ಯಾಗ ವಿಜ್ಞಾನ ಗ್ನಿ ಹಾಕಬೇಕಲ್ಲಿ ||16||
ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದು
ಲಾಭಕ್ಕೆ ಕುಣಿಯಲು ವೇತ್ರರು ಹೊಯ್ದು
ಶೋಭನ ರಸ ಬೊಬ್ಬೆಯ ಸಾಧು ಹಿಂಡು
ತ್ರಿಭುವನ ಪತಿ ಕಾಮನಯ್ಯನ ದಂಡು||17||
ಸ್ವರ್ಧುನಿ ಜನಕನ ಗುಣಗಣಕೀರ್ತಿ
ಊಧ್ರ್ವಸ್ವರದಿ ಹಾಡಿ ಹೊಗಳುವ ಅರ್ಥಿ
ನಿರ್ಧೂಮ ಜ್ವಾಲೆಯ ಬೆಳಗಲಿ ಸುತ್ತಿ
ದುರ್ದೇಹಿಗಳ ಕಿವಿಧಾರೆಯ ಕಿತ್ತಿ ||18||
ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟು
ಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟು
ಕೋವಿದರ ಚಾತುರ್ಯಕೆ ಒಡಂಬಟ್ಟು ಚಿ
ದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು ||19||
ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂ
ಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದು
ರಂಗು ಮುತ್ತಿನ ಮೂಗುತಿ ಹೆಣ್ಣವಿಡಿದು
ಶೃಂಗಾರ ಚೇಷ್ಟೆಯ ಮಾಡಿರೊ ಜಡಿದು ||20||
ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿ
ಗೆಳೆಯರು ನೆರೆವುದೊಂದೆ ತಾಣ ನೋಡಿ
ಜಲಜಾಕ್ಷನುದ್ಯಮದಂಗಡಿಯಲ್ಲಿ
ನಲಿವ ಸ್ವಾನಂದದೂಟವ ಬೇಡಿಕೊಳ್ಳಿ ||21||
ತಿರುತಿರುಗಿ ಬಂದು ದಣಿದು ನೀವಿಂದು
ಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದು
ಥರ ಥರದ್ಹದಿನಾರು ವರ್ಣಗಳಿಂದ
ತರುಣ ತರಣಿಯಂತೆ ಹೊಳೆವುದು ಚಂದ ||22||
ಆನಂದಮಯ ವಾಸುದೇವನ ಕಂಡು
ಆನಂದಪುರದಿ ಭಕ್ತಿಯ ನೆರೆಗೊಂಡು
ಆನಂದ ತೀರ್ಥಗುರು ಕೃಪೆಯಿಂದ
ಸ್ವಾನಂದದೋಕುಳಿಯಾಡುವ ಚಂದ ||23||
ಈ ವಿಧ ಅಧ್ಯಾತ್ಮ ಹೋಳಿಯ ಭೇದ
ಭಾವುಕ ಜನರಿಗೆ ಪರಮಾಹ್ಲಾದ
ದೇವ ಋಷಿಕುಲದೈವ ಮುಕುಂದ
ಕಾವನು ಕರುಣಾಬ್ಧಿ ಕೇಳಿ ಗೋವಿಂದ||24||
ವೇದನ ತಂದ ಹಯಾಸ್ಯನ ಹೋಳಿ
ಭೂಧರ ಧರಿಸಿದಮರ ಕಾರ್ಯ ಕೇಳಿ
ಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರ
ಹ್ಲಾದನಿಷ್ಠೆಗೆ ಹರಿ ಉದಿಸಿದ ಕೇಳಿ ||25||
ನಾನೆಂಬೊ ದಾನವೇಂದ್ರನ ಮದ ಹೋಳಿ
ಹೀನರಿಗಾಗಿ ಕೊಡಲಿ ಹೊತ್ತ ಕೇಳಿ
ಜಾನಕಿ ತಂದ ದಶಾಸ್ಯನ ಹೋಳಿ
ಮಾನಿನಿಯರಾಳ್ದ ವಿಡಂಬನ ಕೇಳಿ ||26||
ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿ
ಉನ್ಮತ್ತ ಕಲಿಯನರಸಿ ಕೊಂದ ಕೇಳಿ
ಚಿನ್ಮಯಮೂರ್ತಿ ಭೂಭಾರವ ಹೋಳಿ
ಜನ್ಮಿಸಿಬಹುದೆಲ್ಲ ಮೋಹನ ಕೇಳಿ ||27||
ಅನಂತದುರಿತರಾಶಿಗಳನ್ನು ಹೋಳಿ
ಆನಂದ ಸುಖವೀವ ನೆನೆದರೆ ಕೇಳಿ
ಅನಂತ ಅನವದ್ಯಗುಣ ಪರಿಪೂರ್ಣ
ಅನಂತಾದ್ಭುತ ಕರ್ಮ ದೀನ ದಯಾರ್ಣ||28||
ಈ ಪರಿ ವಿಜ್ಞಾನ ವಸಂತದಾಟ
ಚೌಪದಿ ರತ್ನಮಾಲಿಕೆ ಮಾಡಿ ಪಾಠ
ಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣ
ತಾ ಪರಿಪಾಲಿಪ ಪುರುಷವರಿಷ್ಠ ||29||
dvandvave vasantada habba
dvandvave ihaparadalli habba ||pa||
dvandvAmRuta kShEma aBaya vasanta
dvandva jIvESara tiLidava SAnta
dvandvada naDenuDi ballava santa
dvandvavariyadana gatiye vasanta ||1||
dvandva SItOShNa samAnava kanDu
dvandva nindAstuti sariyiTTukonDu
dvandvava mAnava hiDidare BanDu
dvandva pakShigaLa bageya kELikonDu ||2||
PAlguNa paurNime banditiLege
bAlakarella nerevudondu GaÀLige
hOLiyanADuva saMBramadoLage
kALaga bEDiro nimma nimmoLage ||3||
aj~jaikya pratipada hindAdarinda
suj~jAna dvitiyakke tOruva chandra
oggUDi geLeyarommatadiMda
laggekAraru munde naDevude chanda||4||
BakteMbo puradalli oMbattu bIdi vi
rakti raMhasa brahmad~hAdiya aidi
vyaktavAguva vastu Odike Odi
riktada nuDigaLu tamasina hAdi||5||
dinapati aDagire malagade eddu
maneyavaranu eccarisabyADi saddu
neneva viShayagODe Erutta biddu
mane manOvArteya kuruLane kaddu||6||
hAruvara kEriya hogabyADi kELi
bErUravara biTTu biDi dUradalli
dUruvaroDanATa durdeSePalavu vastu
dOruva maneyEve sarasa veggaLavu||7||
dhULi nIrurigALi bayaloLagADi
myAle mUruriyoLu matiguMdabyADi
hALu turukara kEriyoLu niShPalavu
jAlagArara kEri hokkare Palavu ||8||
hincAda hiriyara mAtale naDedu
vancaka mUvara sangava kaDidu
mincuva mAnyara prItiya paDedu
sancita prArabdhAgAmiya oDedu ||9||
muccida kadaveraDanu murihoydu
icCe mUreMba nAyigaLa jihve koydu
beccade mane mellane hogiraNNa
saccida gOrasa sUryADiraNNa ||10||
EkAdhipatiyAj~ja aBayavu bEku
nAku JAvina rAtri nalavirabEku
pOka kaLLArvara meTTyALabEku
BUkAntage sEveyoppisabEku ||11||
ramaNanollada Arvara sangaviDidu
ramisuva buddhijAriya gaTTiviDidu
amita vairAgyahaggadi kaiya kaTTi SrI
ramaNananGrige oppisalu kArya gaTTi||12||
ellellyaj~jAnAhi viShaya tELugaLu
ellelli nirjalasRutiya bAvigaLu
ellelli niraya kammari miTTegaLu
ella tappisi jnana beLadingaLoLu||13||
vyALyavaritu tatvasandhiya olidu
sULi madenTara kaisereviDidu
kAlAKya taLavAranALige koTTu
myALada geLeyaru santOShapaTTu||14||
eMbattu nAlku lakShAgAra hoguta
DoMbiyillade banda bannavabaDuta
kuMBiNisura kula BUmige bandu
daMBa mADadale kuruLa oyyirendu ||15||
rAga matsaragUDidara kuruLanoTTi
BUgagana hoguva kAmava kaTTi
yOgavAgiruva hubbina kShEtradali
myAga vignani hAkabEkalli ||16||
lOBa hOLikeya hOLige tuppa savidu
lABakke kuNiyalu vEtraru hoydu
SOBana rasa bobbeya sAdhu hiMDu
triBuvana pati kAmanayyana daMDu||17||
svardhuni janakana guNagaNakIrti
Udhrvasvaradi hADi hogaLuva arthi
nirdhUma jvAleya beLagali sutti
durdEhigaLa kividhAreya kitti ||18||
avidya kAmyakarmada hOLi suTTu
hyAvina maiya bUdiya mADibiTTu
kOvidara cAturyake oDaMbaTTu ci
dBAva mandirada brahmake lakShyaviTTu ||19||
hangile beLeda vRukShada mUla muridU
dhrvAngakke suttuva jANara biridu
rangu muttina mUguti heNNaviDidu
SRungAra cEShTeya mADiro jaDidu ||20||
beLagina JAvadi bUdi callyADi
geLeyaru nerevudonde tANa nODi
jalajAkShanudyamadangaDiyalli
naliva svAnandadUTava bEDikoLLi ||21||
tirutirugi bandu daNidu nIvindu
hariya mai bevarina hoLeyalli mindu
thara tharad~hadinAru varNagaLinda
taruNa taraNiyante hoLevudu chanda ||22||
Anandamaya vAsudEvana kanDu
Anandapuradi Baktiya neregonDu
Ananda tIrthaguru kRupeyinda
svAnandadOkuLiyADuva chanda ||23||
I vidha adhyAtma hOLiya BEda
BAvuka janarige paramAhlAda
dEva RuShikuladaiva mukunda
kAvanu karuNAbdhi kELi gOvinda||24||
vEdana tanda hayAsyana hOLi
BUdhara dharisidamara kArya kELi
mEdina taralaDDAdavanomme hOLi pra
hlAdaniShThege hari udisida kELi ||25||
nAneMbo dAnavEndrana mada hOLi
hInarigAgi koDali hotta kELi
jAnaki tanda daSAsyana hOLi
mAniniyarALda viDaMbana kELi ||26||
sanmArga biTTa KaLara mati hOLi
unmatta kaliyanarasi konda kELi
cinmayamUrti BUBArava hOLi
janmisibahudella mOhana kELi ||27||
anantaduritarASigaLannu hOLi
Ananda suKavIva nenedare kELi
ananta anavadyaguNa paripUrNa
anantAdButa karma dIna dayArNa||28||
I pari vij~jAna vasantadATa
caupadi ratnamAlike mADi pATha
SrIprasanvenkaTa kiTirUpi kRuShNa
tA paripAlipa puruShavariShTha ||29||
One thought on “Holi(2/Mar/18)”