hari kathamrutha sara · jagannatha dasaru · MADHWA

Sthavarajangama sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಪಾದುಕೆಯ ಕಂಟಕಸಿಕ್ತ ಮೊದಲಾದವು ಅನುದಿನ ಬಾಧಿಸುವನೆ
ಏಕಾದಶ ಇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ಸಾದರದಿ ನೆನೆವವನು
ಏನಪರಾಧಗಳ ಮಾಡಿದರು ಸರಿಯೇ
ನಿರೋಧಗೈಸವು ಮೋಕ್ಷಮಾರ್ಗಕೆ ದುರಿತ ರಾಶಿಗಳು||1||

ಹಗಲು ನಂದಾದೀಪದಂದದಿ ನಿಗಮ ವೇದ್ಯನ ಪೂಜಿಸುತ
ಕೈ ಮುಗಿದು ನಾಲ್ಕರೊಳು ಒಂದು ಪುರುಷಾರ್ಥವನು ಬೇಡದಲೇ
ಜಗದುದರ ಕೊಟ್ಟುದನು ಭುಂಜಿಸು ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು
ಭಗವಧೀನವೆಂದು ಅಡಿಗಡಿಗೆ ನೆನೆವುತಿರು||2||

ಅಸ್ವತಂತ್ರನು ಜೀವ ಹರಿ ಸರ್ವ ಸ್ವತಂತ್ರನು ನಿತ್ಯ ಸುಖಮಯ
ನಿ:ಸ್ವ ಬದ್ಧ ಅಲ್ಪಜ್ಞ ಶಕ್ತ ಸದುಃಖ ನಿರ್ವಿಣ್ಣ
ಹ್ರಸ್ವ ದೇಹಿ ಸನಾಥಜೀವನು ವಿಶ್ವ ವ್ಯಾಪಕ ಕರ್ತೃ
ಬ್ರಹ್ಮ ಸರಸ್ವತಿ ಈಶಾದಿ ಅಮರನುತ ಹರಿಯೆಂದು ಕೊಂಡಾಡು||3||

ಮತ್ತೆ ವಿಶ್ವಾದಿ ಎಂಟು ರೂಪ ಒಂಭತ್ತರಿಂದಲಿ ಪೆಚ್ಚಿಸಲು
ಎಪ್ಪತ್ತೆರಡು ರೂಪಗಳು ಅಹವು ಒಂದೊಂದೆ ಸಾಹಸ್ರ
ಪೃಥ್ ಪೃಥಕು ನಾಡಿಗಳೊಳಗೆ ಸರ್ವೋತ್ತಮನ ತಿಳಿಯೆಂದು
ಭೀಷ್ಮನು ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ||4||

ಎಂಟು ಪ್ರಕೃತಿಗಳೊಳಗೆ ವಿಶ್ವಾದಿ ಎಂಟು ರೂಪದಲಿದ್ದು
ಭಕ್ತರ ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ
ನೆಂಟನಂದದಿ ಎಡಬಿಡದೆ ವೈಕುಂಠರಮಣನು
ತನ್ನವರ ನಿಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ||5||

ಸ್ವರಮಣನು ಶಕ್ತಿ ಆದಿ ರೂಪದಿ ಮಾನಿಗಳೊಳಗೆ ನೆಲೆಸಿದ್ದು
ಅರವಿದೂರನು ಸ್ಥೂಲ ವಿಷಯಗಳ ಉಂಡುಣಿಪ ನಿತ್ಯ
ಅರಿಯದಲೆ ನಾನುಂಬೆನು ಎಂಬುವ ನಿರಯಗಳ ಉಂಬುವನು
ನಿಶ್ಚಯ ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು||6||

ಸುರುಚಿರುಚಿರ ಸುಗಂಧ ಸುಚಿಯೆಂದು ಇರುತಿಹನು ಷಡ್ರಸಗಳೊಳು
ಹನ್ನೆರಡು ರೂಪದಲಿ ಇಪ್ಪ ಶ್ರೀ ಭೂ ದುರ್ಗೆಯರ ಸಹಿತ
ಸ್ವರಮಣನು ಎಪ್ಪತ್ತೆರಡು ಸಾವಿರ ಸಮೀರನ ರೂಪದೊಳಗಿದ್ದು
ಉರುಪರಾಕ್ರಮ ಕರ್ತೃ ಎನಿಸುವ ನಾಡಿಯೊಳಗಿದ್ದು||7||

ಸರ್ವತ್ರದಲಿ ನೆನೆವರನು ಅನ್ಯ ಕರ್ಮವ ಮಾಡಿದರು ಸರಿ
ಪುಣ್ಯ ಕರ್ಮಗಳು ಎನಿಸುವವು ಸಂದೇಹವಿನಿತಿಲ್ಲ
ನಿನ್ನ ಸ್ಮರಿಸದೆ ಸ್ನಾನ ಜಪ ಹೋಮ ಅನ್ನ ವಸ್ತ್ರ ಗಜ ಅಶ್ವ ಭೂ ಧನ ಧಾನ್ಯ
ಮೊದಲಾದ ಅಖಿಳ ಧರ್ಮವ ಮಾಡಿ ಫಲವೇನು||8||

ಇಷ್ಟ ಭೋಗ್ಯ ಪದಾರ್ಥದೊಳು ಶಿಪಿವಿಷ್ಟ ನಾಮದಿ ಸರ್ವ ಜೀವರ ತುಷ್ಟಿ ಬಡಿಸುವ
ದಿನದಿನದಿ ಸಂತುಷ್ಟ ತಾನಾಗಿ
ಕೋಷ್ಟದೊಳು ನೆಲೆಸಿದ್ದು ರಸಯಮಯ ಪುಷ್ಟಿಯೈದಿಸುತ ಇಂದ್ರಿಯಗಳೊಳು
ಪ್ರೇಷ್ಟನಾಗಿದ್ದು ಎಲ್ಲ ವಿಷಯಗಳ ಉಂಬ ತಿಳಿಸದಲೆ||9||

ಕಾರಣಾಹ್ವಯ ಜ್ಞಾನ ಕರ್ಮ ಪ್ರೇರಕನು ತಾನಾಗಿ ಕ್ರಿಯೆಗಳ ತೋರುವನು
ಕರ್ಮ ಇಂದ್ರಿಯ ಅಧಿಪರೊಳಗೆ ನೆಲೆಸಿದ್ದು
ಮೂರು ಗುಣಮಯ ದ್ರವ್ಯಗ ತದಾಕಾರ ತನ್ನಾಮದಲಿ ಕರೆಸುವ
ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು||10||

ದ್ರವ್ಯನು ಎನಿಸುವ ಭೂತ ಮಾತ್ರದೊಳು ಅವ್ಯಯನು
ಕರ್ಮ ಇಂದ್ರಿಯಗಳೊಳು ಭವ್ಯ ಸತ್ಕ್ರಿಯನೆನಿಪ ಜ್ಞಾನ ಇಂದ್ರಿಯಗಳೊಳಗಿದ್ದು
ಸ್ತವ್ಯಕಾರಕನು ಎನಿಸಿ ಸುಖಮಯ ಸೇವ್ಯ ಸೇವಕನು ಎನಿಸಿ ಜಗದೊಳು
ಹವ್ಯವಾಹನನು ಅರಣಿಯೊಳಗೆ ಇಪ್ಪಂತೆ ಇರುತಿಪ್ಪ||11||

ಮನವೇ ಮೊದಲಾದ ಇಂದ್ರಿಯಗಳೊಳಗೆ ಅನಿಲದೇವನು ಶುಚಿಯೆನಿಸಿಕೊಂಡು
ಅನವರತ ನೆಲೆಸಿಪ್ಪ ಶುಚಿಷತ್ ಹೋತನೆಂದೆನಿಸಿ ತನುವಿನೊಳಗಿಪ್ಪನು
ಸದಾ ವಾಮನ ಹೃಷೀಕೇಶಾಖ್ಯ ರೂಪದಲಿ
ಅನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ||12||

ಪ್ರೇರಕ ಪ್ರೇರ್ಯರೊಳು ಪ್ರೇರ್ಯ ಪ್ರೇರಕನು ತಾನಾಗಿ
ಹರಿ ನಿರ್ವೈರದಿಂದ ಪ್ರವರ್ತಿಸುವ ತನ್ನಾಮ ರೂಪದಲಿ
ತೋರಿಕೊಳ್ಳದೆ ಸರ್ವರೊಳು ಭಾಗೀರಥೀ ಜನಕನು
ಸಕಲ ವ್ಯಾಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ||13||

ಹರಿಯೆ ಮುಖ್ಯ ನಿಯಾಮಕನು ಎಂದರಿದು ಪುಣ್ಯಾಪುಣ್ಯ ಹರುಷಾಹರುಷ
ಲಾಭಾಲಾಭ ಸುಖದುಃಖಾದಿ ದ್ವಂದ್ವಗಳ
ನಿರುತ ಅವರಂಘ್ರಿಗೆ ಸಮರ್ಪಿಸಿ ನರಕ ಭೂ ಸ್ವರ್ಗಾಪ ವರ್ಗದಿ
ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು||14||

ಮಾಣವಕ ತತ್ಫಲಗಳ ಅನುಸಂಧಾನವಿಲ್ಲದೆ
ಕರ್ಮಗಳ ಸ್ವ ಇಚ್ಚಾನುಸಾರದಿ ಮಾಡಿ ಮೋದಿಸುವಂತೆ
ಪ್ರತಿದಿನದಿ ಜ್ಞಾನ ಪೂರ್ವಕ ವಿಧಿ ನಿಷೇಧಗಳು ಏನು ನೋಡದೆ ಮಾಡು
ಕರ್ಮ ಪ್ರಧಾನ ಪುರುಷೇಶನಲಿ ಭಕುತಿಯ ಮಾಡು ಕೊಂಡಾಡು||15||

ಹಾನಿ ವೃದ್ಧಿ ಜಯಾಪಜಯಗಳು ಏನು ಕೊಟ್ಟುದ ಭುಂಜಿಸುತ
ಲಕ್ಷ್ಮೀ ನಿವಾಸನ ಕರುಣವನೆ ಸಂಪಾದಿಸು ಅನುದಿನದಿ
ಜ್ಞಾನ ಸುಖಮಯ ತನ್ನವರ ಪರಮ ಅನುರಾಗದಿ ಸಂತೈಪ
ದೇಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು||16||

ಆ ಪರಮ ಸಕಲ ಇಂದ್ರಿಯಗಳೊಳು ವ್ಯಾಪಕನು ತಾನಾಗಿ
ವಿಷಯವ ತಾ ಪರಿಗ್ರಹಿಸುವನು ತಿಳಿಸದೆ ಸರ್ವಜೀವರೊಳು
ಪಾಪ ರಹಿತ ಪುರಾಣ ಪುರುಷ ಸಮೀಪದಲಿ ನೆಲೆಸಿದ್ದು
ನಾನಾ ರೂಪಕ ಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ||17||

ಖೇಚರರು ಭೂಚರರು ವಾರಿ ನಿಶಾಚರರೊಳಿದ್ದು ಅವರ ಕರ್ಮಗಳ
ಆಚರಿಸುವನು ಘನ ಮಹಿಮ ಪರಮ ಅಲ್ಪನೋಪಾದಿ
ಗೋಚರಿಸು ಬಹು ಪ್ರಕಾರ ಆಲೋಚನೆಯ ಮಾಡಿದರು ಮನಸಿಗೆ
ಕೀಚಕಾರಿ ಪ್ರೀಯ ಕವಿಜನಗೇಯ ಮಹರಾಯ||18||

ಒಂದೇ ಗೋತ್ರ ಪ್ರವರ ಸಂಧ್ಯಾವಂದನೆಗಳು ಮಾಡಿ
ಪ್ರಾಂತಕೆ ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬoತೆ
ಒಂದೇ ದೇಹದೊಳಿದ್ದು ನಿಂದ್ಯಾನಿಂದ್ಯ ಕರ್ಮವ ಮಾಡಿ ಮಾಡಿಸಿ
ಇಂದಿರೇಶನು ಸರ್ವಜೀವರೊಳು ಈಶನೆನಿಸುವನು||19||

ಕಿಟ್ಟಗಟ್ಟಿದ ಲೋಹ ಪಾವಕ ಸುತ್ತು ವಿಂಗಡ ಮಾಡುವಂತೆ
ಘರಟ್ಟ ವ್ರೀಹಿಗಳು ಇಪ್ಪ ತಂಡುಲ ಕಡೆಗೆ ತೆಗೆವಂತೆ
ವಿಠಲಾ ಎಂದೊಮ್ಮೆ ಮೈಮರೆದು ಅಟ್ಟಹಾಸದಿ ಕರೆಯೆ
ದುರಿತಗಳು ಅಟ್ಟುಳಿಯ ಬಿಡಿಸೆವನ ತನ್ನೊಳಗಿಟ್ಟು ಸಲಹುವನು||20||

ಜಲಧಿಯೊಳಗೆ ಸ್ವೇಚ್ಚಾನುಸಾರದಿ ಜಲಚರ ಪ್ರಾಣಿಗಳು
ತತ್ತತ್ ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ
ನಲ್ಲಿನ ನಾಭನೊಳು ಅಬ್ಜ ಭವ ಮುಪ್ಪೊಳಲ ಉರಿಗಮೈಗಣ್ಣ ಮೊದಲಾದ
ಹಲವು ಜೀವರಗಣವು ವರಿಸುತಿಹುದು ನಿತ್ಯದಲಿ||21||

ವಾಸುದೇವನು ಒಳಹೊರಗೆ ಅವಕಾಶದನು ತಾನಾಗಿ
ಬಿಂಬ ಪ್ರಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ
ಈ ಸಮನ್ವಯವೆಂದೆನಿಪ ಸದುಪಾಸನವಗೈವವನು
ಮೋಕ್ಷ ಅನ್ವೇಷಿಗಳೊಳುತ್ತಮನು ಜೀವನ್ಮುಕ್ತನ ಅವನಿಯೊಳು||22||

ಭೋಗ್ಯ ವಸ್ತುಗಳೊಳಗೆ ಯೋಗ್ಯಾಯೋಗ್ಯ ರಸಗಳನರಿತು
ಯೋಗ್ಯಾಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸು ಅನುದಿನದಿ
ಭಾಗ್ಯ ಬಡತನ ಬರಲು ಹಿಗ್ಗದೆ ಕುಗ್ಗಿ ಸೊರಗದೆ
ಸದ್ಭಕ್ತಿ ವೈರಾಗ್ಯಗಳನೆ ಮಾಡು ನೀ ನಿರ್ಭಾಗ್ಯನೆನಿಸದಲೆ||23||

ಸ್ಥಳ ಜಲಾದ್ರಿಗಳಲ್ಲಿ ಜನಿಸುವ ಫಲ ಸುಪುಷ್ಪಜ ಗಂಧರಸ
ಶ್ರೀ ತುಳಸಿ ಮೊದಲಾದ ಅಖಿಳ ಪೂಜಾ ಸಾಧನ ಪದಾರ್ಥ
ಹಲವು ಬಗೆಯಿಂದ ಅರ್ಪಿಸುತ ಬಾಂಬೊಳೆಯ ಜನಕಗೆ
ನಿತ್ಯಾನಿತ್ಯದಿ ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು||24||

ಶ್ರೀಕರನ ಸರ್ವತ್ರದಲಿ ಅವಲೋಕಿಸುತ ಗುಣ ರೂಪ ಕ್ರಿಯ
ವ್ಯತಿರೇಕ ತಿಳಿಯದಲೆ ಅನ್ವಯಿಸು ಬಿಂಬನಲಿ ಮರೆಯದಲೆ
ಸ್ವೀಕರಿಸುವನು ಕರುಣದಿಂದ ನಿರಾಕರಿಸದೆ ಕೃಪಾಳು
ಭಕ್ತರ ಶೋಕಗಳ ಪರಿಹರಿಸಿ ಸುಖವಿತ್ತು ಅನವರತ ಪೊರೆವ||25||

ಇನಿತು ವ್ಯತಿರೇಕ ಅನ್ವಯಗಳು ಎಂದೆನಿಪ ಪೂಜಾ ವಿಧಿಗಳನೆ ತಿಳಿದು
ಅನಿಮಿಷ ಈಶನ ತೃಪ್ತಿ ಪಡಿಸುತಲಿರು ನಿರಂತರದಿ
ಘನ ಮಹಿಮ ಕೈಕೊಂಡು ಸ್ಥಿತಿ ಮೃತಿ ಜನುಮಗಳ ಪರಿಹರಿಸಿ
ಸೇವಕ ಜನರೊಳಿಟ್ಟು ಆನಂದ ಪಡಿಸುವ ಭಕ್ತವತ್ಸಲನು||26||

ಜಲಜನಾಭನಿಗೆ ಎರಡು ಪ್ರತಿಮೆಗಳು ಇಳೆಯೊಳಗೆ ಜಡ ಚೇತನಾತ್ಮಕ
ಚಲದೊಳು ಇರ್ಬಗೆ ಸ್ತ್ರೀ ಪುರುಷ ಭೇದದಲಿ ಜಡದೊಳಗೆ ತಿಳಿವುದು ಆಹಿತ ಪ್ರತಿಮೆ
ಸಹಜ ಆಚಲಗಳು ಎಂದು ಇರ್ಬಗೆ ಪ್ರತೀಕದಿ
ಲಲಿತ ಪಂಚತ್ರಯ ಸುಗೋಳಕವ ಅರಿತು ಭಜಿಸುತಿರು||27||

ವಾರಿಜಾಸನ ವಾಯುವೀಂದ್ರ ಉಮಾರಮಣ ನಾಕೇಶ ಸಮರ ಅಹಂಕಾರಿಕ
ಪ್ರಾಣಾದಿಗಳು ಪುರುಷರ ಕಳೇವರದಿ
ತೋರಿಕೊಳದೆ ಅನಿರುದ್ಧ ದೋಷ ವಿದೂರ ನಾರಾಯಣನ ರೂಪ
ಶರೀರಮಾನಿಗಳು ಆಗಿ ಭಜಿಸುತ ಸುಖವ ಕೊಡುತಿಹರು||28||

ಸಿರಿ ಸರಸ್ವತಿ ಭಾರತೀ ಸೌಪರಣೀ ವಾರುಣಿ ಪಾರ್ವತೀ ಮುಖರು ಇರುತಿಹರು
ಸ್ತ್ರೀಯರೊಳಗೆ ಅಬಿಮಾನಿಗಳು ತಾವೆನಿಸಿ
ಅರುಣ ವರ್ಣ ನಿಭಾಂಗ ಶ್ರೀ ಸಂಕರುಷಣ ಪ್ರದ್ಯುಮ್ನ ರೂಪಗಳ
ಇರುಳು ಹಗಲು ಉಪಾಸನವ ಗೈವುತಲೆ ಮೋದಿಪರು||29||
ಕೃತ ಪ್ರತೀಕದಿ ಟಂಕಿ ಭಾರ್ಗವ ಹುತವಹ ಅನಿಲ ಮುಖ್ಯ ದಿವಿಜರು
ತುತಿಸಿಕೊಳುತ ಅಭಿಮಾನಿಗಳು ತಾವಾಗಿ ನೆಲೆಸಿದ್ದು
ಪ್ರತಿ ದಿವಸ ಶ್ರೀ ತುಳಸಿ ಗಂಧಾಕ್ಷತೆ ಕುಸುಮ ಫಲ ದೀಪ ಪಂಚಾಮೃತದಿ
ಪೂಜಿಪ ಭಕುತರಿಗೆ ಕೊದುತಿಹನು ಪುರುಷಾರ್ಥ||30||

ನಗಗಳ ಅಭಿಮಾನಿಗಳು ಎನಿಪ ಸುರರುಗಳು
ಸಹಜ ಅಚಲಗಳಿಗೆ ಮಾಣಿಗಳು ಎನಿಸಿ ಶ್ರೀ ವಾಸುದೇವನ ಪೂಜಿಸುತಲಿ ಇಹರು
ಸ್ವಾಗತ ಭೇದ ವಿವರ್ಜಿತನ ನಾಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ
ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ||31||

ಆವ ಕ್ಷೇತ್ರಕೆ ಪೋದರೇನು? ಇನ್ನಾವ ತೀರ್ಥದಿ ಮುಳುಗಲೇನು?
ಇನ್ನಾವ ಜಪ ತಪ ಹೋಮ ದಾನವ ಮಾಡಿ ಫಲವೇನು?
ಶ್ರೀವರ ಜಗನ್ನಾಥ ವಿಠಲ ಈ ವಿಧದಿ ಜಂಗಮ ಸ್ಥಾವರ ಜೀವರೊಳು
ಪರಿಪೂರ್ಣನೆಂದು ಅರಿಯದಿಹ ಮಾನವನು||32||

harikathAmRutasAra gurugaLa karuNadindApanitu kELuve/
parama BagavadBaktaru idanAdaradi kELuvudu||

pAdukeya kanTakasikta modalAdavu anudina bAdhisuvane
EkAdaSa indriyagaLali biDade hRuShIkapana mUrti sAdaradi nenevavanu
EnaparAdhagaLa mADidaru sariyE
nirOdhagaisavu mOkShamArgake durita rASigaLu||1||

hagalu nandAdIpadandadi nigama vEdyana pUjisuta
kai mugidu nAlkaroLu ondu puruShArthavanu bEDadalE
jagadudara koTTudanu Bunjisu maga maDadi prANa indriya AtmAdigaLu
BagavadhInavendu aDigaDige nenevutiru||2||

asvatantranu jIva hari sarva svatantranu nitya suKamaya
ni:sva baddha alpaj~ja Sakta saduHKa nirviNNa
hrasva dEhi sanAthajIvanu viSva vyApaka kartRu
brahma sarasvati ISAdi amaranuta hariyeMdu koMDADu||3||

matte viSvAdi enTu rUpa oMBattarindali peccisalu
eppatteraDu rUpagaLu ahavu ondonde sAhasra
pRuth pRuthaku nADigaLoLage sarvOttamana tiLiyendu
BIShmanu bittarisidanu dharma tanayage SAnti parvadali||4||

eMTu prakRutigaLoLage viSvAdi eMTu rUpadaliddu
Baktara kaMTakava pariharisutali pAlisuva pratidinadi
neMTanaMdadi eDabiDade vaikuMTharamaNanu
tannavara niShkaMTaka sumArgadali naDesuva durjanara baDiva||5||

svaramaNanu Sakti Adi rUpadi mAnigaLoLage nelesiddu
aravidUranu sthUla viShayagaLa uMDuNipa nitya
ariyadale nAnuMbenu eMbuva nirayagaLa uMbuvanu
niScaya maraLi maraLi BavATaviya sancarisi baLaluvanu||6||

surucirucira sugandha suciyendu irutihanu ShaDrasagaLoLu
hanneraDu rUpadali ippa SrI BU durgeyara sahita
svaramaNanu eppatteraDu sAvira samIrana rUpadoLagiddu
uruparAkrama kartRu enisuva nADiyoLagiddu||7||

sarvatradali nenevaranu anya karmava mADidaru sari
puNya karmagaLu enisuvavu sandEhavinitilla
ninna smarisade snAna japa hOma anna vastra gaja aSva BU dhana dhAnya
modalAda aKiLa dharmava mADi PalavEnu||8||

iShTa BOgya padArthadoLu SipiviShTa nAmadi sarva jIvara tuShTi baDisuva
dinadinadi santuShTa tAnAgi
kOShTadoLu nelesiddu rasayamaya puShTiyaidisuta indriyagaLoLu
prEShTanAgiddu ella viShayagaLa uMba tiLisadale||9||

kAraNAhvaya j~jAna karma prErakanu tAnAgi kriyegaLa tOruvanu
karma iMdriya adhiparoLage nelesiddu
mUru guNamaya dravyaga tadAkAra tannAmadali karesuva
tOrikoLLade janara mOhipa mOhakalpakanu||10||

dravyanu enisuva BUta mAtradoLu avyayanu
karma indriyagaLoLu Bavya satkriyanenipa j~jAna indriyagaLoLagiddu
stavyakArakanu enisi suKamaya sEvya sEvakanu enisi jagadoLu
havyavAhananu araNiyoLage ippante irutippa||11||

manavE modalAda indriyagaLoLage aniladEvanu SuciyenisikoMDu
anavarata nelesippa SuciShat hOtanendenisi tanuvinoLagippanu
sadA vAmana hRuShIkESAKya rUpadali
anuBavake tandIva viShayaja suKava jIvarige||12||

prEraka prEryaroLu prErya prErakanu tAnAgi
hari nirvairadinda pravartisuva tannAma rUpadali
tOrikoLLade sarvaroLu BAgIrathI janakanu
sakala vyApAragaLa tA mADi mADisi nODi nagutippa||13||

hariye muKya niyAmakanu eMdaridu puNyApuNya haruShAharuSha
lABAlABa suKaduHKAdi dvaMdvagaLa
niruta avaranGrige samarpisi naraka BU svargApa vargadi
karaNa niyAmakana sarvatradali nenevutiru||14||

mANavaka tatPalagaLa anusandhAnavillade
karmagaLa sva iccAnusAradi mADi mOdisuvante
pratidinadi j~jAna pUrvaka vidhi niShEdhagaLu Enu nODade mADu
karma pradhAna puruShESanali Bakutiya mADu konDADu||15||

hAni vRuddhi jayApajayagaLu Enu koTTuda Bunjisuta
lakShmI nivAsana karuNavane saMpAdisu anudinadi
j~jAna suKamaya tannavara parama anurAgadi santaipa
dEhAnubandhigaLante oLahoragiddu karuNALu||16||

A parama sakala indriyagaLoLu vyApakanu tAnAgi
viShayava tA parigrahisuvanu tiLisade sarvajIvaroLu
pApa rahita purANa puruSha samIpadali nelesiddu
nAnA rUpaka dhAraka tOrikoLLade karmagaLa mALpa||17||

KEcararu BUcararu vAri niSAcararoLiddu avara karmagaLa
Acarisuvanu Gana mahima parama alpanOpAdi
gOcarisu bahu prakAra AlOcaneya mADidaru manasige
kIcakAri prIya kavijanagEya maharAya||18||

ondE gOtra pravara sandhyAvandanegaLu mADi
prAntake tande tanayaru bEre tammaya pesarugoMbante
ondE dEhadoLiddu nindyAnindya karmava mADi mADisi
indirESanu sarvajIvaroLu ISanenisuvanu||19||

kiTTagaTTida lOha pAvaka suttu vingaDa mADuvante
GaraTTa vrIhigaLu ippa tanDula kaDege tegevante
viThalA endomme maimaredu aTTahAsadi kareye
duritagaLu aTTuLiya biDisevana tannoLagiTTu salahuvanu||20||

jaladhiyoLage svEccAnusAradi jalacara prANigaLu
tattat sthaLagaLali santOShapaDutali sancarisuvante
nallina nABanoLu abja Bava muppoLala urigamaigaNNa modalAda
halavu jIvaragaNavu varisutihudu nityadali||21||

vAsudEvanu oLahorage avakASadanu tAnAgi
biMba prakASisuva tadrUpa tannAmadali sarvatra
I samanvayaveMdenipa sadupAsanavagaivavanu
mOkSha anvEShigaLoLuttamanu jIvanmuktana avaniyoLu||22||

BOgya vastugaLoLage yOgyAyOgya rasagaLanaritu
yOgyAyOgyarali nelesippa harige samarpisu anudinadi
BAgya baDatana baralu higgade kuggi soragade
sadBakti vairAgyagaLane mADu nI nirBAgyanenisadale||23||

sthaLa jalAdrigaLalli janisuva Pala supuShpaja gandharasa
SrI tuLasi modalAda aKiLa pUjA sAdhana padArtha
halavu bageyinda arpisuta bAMboLeya janakage
nityAnityadi tiLivudidu vyatirEka pUjegaLendu kOvidaru||24||

SrIkarana sarvatradali avalOkisuta guNa rUpa kriya
vyatirEka tiLiyadale anvayisu biMbanali mareyadale
svIkarisuvanu karuNadinda nirAkarisade kRupALu
Baktara SOkagaLa pariharisi suKavittu anavarata poreva||25||

initu vyatirEka anvayagaLu endenipa pUjA vidhigaLane tiLidu
animiSha ISana tRupti paDisutaliru nirantaradi
Gana mahima kaikonDu sthiti mRuti janumagaLa pariharisi
sEvaka janaroLiTTu AnaMda paDisuva Baktavatsalanu||26||

jalajanABanige eraDu pratimegaLu iLeyoLage jaDa cEtanAtmaka
caladoLu irbage strI puruSha BEdadali jaDadoLage tiLivudu Ahita pratime
sahaja AcalagaLu endu irbage pratIkadi
lalita pancatraya sugOLakava aritu Bajisutiru||27||

vArijAsana vAyuvIndra umAramaNa nAkESa samara ahankArika
prANAdigaLu puruShara kaLEvaradi
tOrikoLade aniruddha dOSha vidUra nArAyaNana rUpa
SarIramAnigaLu Agi Bajisuta suKava koDutiharu||28||

siri sarasvati BAratI sauparaNI vAruNi pArvatI muKaru irutiharu
strIyaroLage abimAnigaLu tAvenisi
aruNa varNa niBAnga SrI sankaruShaNa pradyumna rUpagaLa
iruLu hagalu upAsanava gaivutale mOdiparu||29||

kRuta pratIkadi Tanki BArgava hutavaha anila muKya divijaru
tutisikoLuta aBimAnigaLu tAvAgi nelesiddu
prati divasa SrI tuLasi gandhAkShate kusuma Pala dIpa pancAmRutadi
pUjipa Bakutarige kodutihanu puruShArtha||30||

nagagaLa aBimAnigaLu enipa surarugaLu
sahaja acalagaLige mANigaLu enisi SrI vAsudEvana pUjisutali iharu
svAgata BEda vivarjitana nAlbage pratIkadi tiLidu pUjise
vigata saMsArAbdhi dATisi muktaranu mALpa||31||

Ava kShEtrake pOdarEnu? innAva tIrthadi muLugalEnu?
innAva japa tapa hOma dAnava mADi PalavEnu?
SrIvara jagannAtha viThala I vidhadi jangama sthAvara jIvaroLu
paripUrNanendu ariyadiha mAnavanu||32||

One thought on “Sthavarajangama sandhi

Leave a comment