everyday · Gowri · MADHWA · POOJA

Nithya Gowri pooja

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ

Sarva-Manggala-Maanggalye Shive Sarvaartha-Saadhike |
Sharannye Tryambake Gauri Naaraayanni Namosthuthe ||

Doing Gowri pooja by ladies is an integral part of our Sampradaaya. We have different types of Gowri pooja throught the year based on Family traditions such as Managala gowri pooja(First five years after wedding), Swarna gowri vratha, Mouna gowri vrata, Gowri triteeya, Jyeshtha Gowri  and much more

Even if you dont have a Gowri idol for worship, You can make Gowri using Arshina(Turmeric) or do the pooja to the photo/image .

We could see in Rukmini vivaha, Rukmini(Who is an incarnation of Sakshat Mahalakshmi) has done Gowri pooja to show the world, Significance of doing Gowri pooja

It is a common practice in Madhwa sampradaaya marriages, that Bride should perform Gowri pooja before the wedding muhurtha.

It is believed, one who worship Goddess Gowri from small age, will be blessed with a good natured suitable boy in their life.

From very small age, we can see in Madhwa households, Girls worship Shiva and parvathi on Deepa sthamba pooja every year during ashaada maasa

Along with Tulasi pooja & Hosthilu pooja, A sthri(Women) should also do the Gowri pooja everyday

Procedure of doing Gowri pooja:

Again, This pooja procedure may change in accordance with family tradition

  1. light Diyas in pooja room
  2. take water in a thali and decorate thali with kumkum, turmeric on all four sides
  3. put 1 flower in thali,close the thali in such a way that your right hand should be on top
  4. pray goddes devi,take water in a” uddarane”(silver spoon) and use the same flower to sprinkle water
  5. sprinkle water on all “pooja items,on ourselves”
  6. put that flower on “argya patre”,take ganda,mantrakashte,hoovu(flower) and put on god
  7. pray and do ganapathi pooja by puting sandal paste,hoovu,arishina,kukuma,gejje vastra
  8. Then start pooja to Gowri
  9. sprinkle water,halu,on nithya gowri,and on all other idols
  10. put arishina,kukuma,hoovu,gejje vastra
  11. chant ashtothra(if you have time) Gowri ashtothra namavali and sloka/devaranama(Dasara padgalu on Gowri)
  12. Do mangalaarathi
  13. Perform Neivedhya
  14. give argya(by keeping mantrakshate in hand)
  15. Prostrate before Gowri and do namaskara
  16. pray god and take prasada,(kukuma,hoovu)
  17. do “tulasi pooja, hostilu pooja“.

Few devaranamagalu and sthothragalu

Vaarda gowri Stothra(English version)

ಆದಿತ್ಯವಾರ ಆನೆಯಗೌರಿ, ಸೋಮವಾರ ಪಟ್ಟದಗೌರಿ, ಮಂಗಳವಾರ
ವಟಸಾವಿತ್ರಿ, ಬುಧವಾರ ಅನ್ನಪೂರ್ಣೇ, ಗುರುವಾರ ಶೀಗೀಗೌರಿ ಶುಕ್ರವಾರ
ಶ್ರೀತುಳಸಿ, ಶನಿವಾರ ಹೀರೆಗೌರಿ, ಇಂಥ ವಾರ ಗೌರಿಯನ್ನು ಯಾರು ಪೂಜೆ
ಮಾಡುತ್ತಾರೋ ಅವರಿಗೆ ಸಂತಾನ ಕೊಡು ಸಾವಿತ್ರಿತನ ಕೊಡು
ಹಯವದನ ಇತಿ ಶ್ರೀ ನಿತ್ಯಗೌರಿ ಸ್ತೋತ್ರ ಸಂಪೂರ್ಣಂ

Nithya Gowri Sthothra(English version)

ನಿತ್ಯಗೌರಿ ನಮೋಗೌರಿ ರುದ್ರಾಯಿಣಿ ಕುಶಲ ಕಾಳಿಂದಿತೀರ್ಥಿ ಯಥೋ ಸೀತಾ ತಥೋ ಗೌರ್ ಮುತ್ತಿನ ಗೌರಿ ಮಾಣಿಕ್ಯಗೌರಿ ನಮೋಗೌರಿ ಜಯಂತಿಗೌರಿ ಲಕ್ಷ್ಮೀನಾರಾಯಣರ ತೊಡೆಯ ಮೇಲೆ ನಿತ್ಯ ಪುರಾಣ ಅಮವಾಸ್ಯೇಯಲ್ಲಿ ಆಶ್ಲೇಷ ಗೌರಿ ಪಾಡ್ಯದಲ್ಲಿ ಮೌನಗೌರಿ ಬಿದಿಗೆಯಲ್ಲಿ ಬಿಚ್ಚಾಲಿಗೌರಿ ತದಗೆಯಲ್ಲಿ ಉಯ್ಯಾಲಿಗೌರಿ ಚೌತಿಯಲ್ಲಿ ಚೌತಾಂಗಿನಿಗೌರಿ ಪಂಚಮಿಯಲ್ಲಿ ಪಂಚನೇತ್ರಿಗೌರಿ ಷಷ್ಠಿಯಲ್ಲಿ ಮುಷ್ಠಿಗೌರಿ ಸಪ್ತಮಿಯಲ್ಲಿ ಸೊಂದಲಗೌರಿ ಅಷ್ಟಮಿಯಲ್ಲಿ ಅಷ್ಟಜಂಗಮಿಗೌರಿ ನವಮಿಯಲ್ಲಿ ನವದುರ್ಗಿ ದಶಮಿಯಲ್ಲಿ ದಶಾವತಾರಿ ಏಕಾದಶಿಯಲ್ಲಿ ಏಕರುಕ್ಮಿಣಿ ದ್ವಾದಶಿಯಲ್ಲಿ ದ್ರುಮವಾಸಳೆ ತ್ರಯೋದಶಿಯಲ್ಲಿ ಮಂಗಳಗೌರಿ ಚತುರ್ದಶಿಯಲ್ಲಿ ಚತುರ್ಭುಜನ ತಂಗಿ ಪೌರ್ಣಿಮಾದಲ್ಲಿ ಪರಿಪೂರ್ಣಗೌರಿ ನಿತ್ಯಗೌರಿಯನ್ನು ತಪ್ಪದೇ ಯಾರು ಪೂಜೆ ಮಾಡುತ್ತಾರೋ ಅವರಿಗೆ ಕಥಿ ತಪ್ಪಿದರೂ ಕಥಿಸಲ್ಲು ತಪ್ಪಬೇಡ ಸಲ್ಲ ತಪ್ಪಿದರೂ ಸೌಭಾಗ್ಯ ತಪ್ಪೋದು ಬೇಡ ಹಯವದನ ನಿತ್ಯಗೌರಿ ಮಂತ್ರ ಸಂಪೂರ್ಣಂ

Inviting Gowri :

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ||pa||

ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ||

ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ||

ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ||

ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ||

ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ||

ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ||

ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ ||

for English version, Click Baare gauri pujisuvenu

Gowri neivedhya haadu

ಆರೋಗಣೆಯ ಮಾಡು ಅಂಬುಜನಯನೇ ಸಾಮವೇದಸದನೇ|
ಮಾರಜನನಿಯೇ ಮಧುಸೂದನಪ್ರಿಯೇ ಕಾಮಿತಫಲದಾಯೇ ಗೌರಿಯೇ||

ಶುಭ್ರಸ್ನಾನವ ಮಾಡಿ ಸುಮತಿಯರು ಮುದದಿಂದ ಶುಭ್ರವಸ್ತ್ರವನುಡಿಸಿ ಗೌರಿಗೆ
ತಿದ್ದಿ ತಿಲಕವನಿಟ್ಟು ತೀವ್ರದಿ ಗೌರಿಯ ವಜ್ರಮಾಣಿಕ್ಯದ ಪೀಠದಲ್ಲಿ ಕುಳಿಸ್ವರೋ ||1||

ಹಪ್ಪಳ ಅತ್ತಿರಸ ಒಪ್ಪುಳ್ಳ ಲಡ್ಡಿಗೆ ಚಕ್ಕುಲಿ ಕರಚಿಯಕಾಯ್ಗಳು
ಸಕ್ಕರೆ ಫೇಣಿ ಕೆನೆಮೊಸರು ಮಧು ಕ್ಷೀರ ಮೀಸಲಾದ ಅಡಿಗೆ ಸುವಾಸಿನಿಯರು ಬಡಿಸುವರು||2||

ಅತಿಹಿತದಿಂದಲಿ ಮಾಡಿದ ಅಡಿಗೆಯ ದಳಿಯ ತಪ್ಪದೆ ಬಡಿಸುವರು
ಪುಡಿಎಣ್ಣೋರಿಗೆ ಶೀಕಿಯದ ಉಂಡೆಗಳು ಆದಿಕೊಲ್ಹಾಪುರದ ದೇವಿ ಮಹಾಲಕ್ಷ್ಮೀಗೆ||3||

ಮೀಸಲು ಮಂಡಿಗೆ ಸೂಸಲ ಕಡುಬು ದೋಸೆ ಎಣ್ಣೋರಿಗೆ ನವನೀತ
ಕಾಸಿದ ತುಪ್ಪ ಕೆನೆಮೊಸರು ಮಧು ಕ್ಷೀರ ಭೀಮೇಶಕೃಷ್ಣನ ರಾಣಿ ಭುಂಜಿಸು ಬೇಗ||4||

for English version, Click Gowri neivedhya haadu
Gowri Aarathi padagalu

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ
ಪಾರ್ವತಿದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ
ಆರತಿಯ ಬೆಳಗಬನ್ನಿರೆ ||ಪ||

ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು
ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1||

ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2||

ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು
ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3||

ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ
ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4||

ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ
ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ||5||

For English version, click Arathi belega bannire

ಗೌರಿ ದೇವಿಗೆ ಸಖಿ ತಾರೆ ಆರುತಿ||pa||

ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ||1||

ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ||2||

ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ||3||

For English version, click Gauri devige saki tare Araati

Requesting for wishes(Salutation)

ಅಂಬಾ ನೀ ಹೂವ ಪಾಲಿಸೆ ವರ ನೀಡೆ ಶ್ರೀ ಜಗ-
ದಂಬಾ ನೀ ಹೂವ ಪಾಲಿಸೆ
ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ
ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ||pa||

ಬಳೆಯು ಕರಿಯಮಣಿ ಕೊರಳÀ ಮಂಗಳ ಸೂತ್ರ
ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡಂಬಾ ||1||

ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ
ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ||2||

ರುದ್ರನ ಸತಿಯಳೆ ಬುದ್ಧ್ಯಾತ್ಮಳೆನಿಸುವಿ
ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆಯ ನೀಡಂಬಾ ||3||

ಇಂತು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ-
ದ್ದಂಥ ಕುಸುಮದೊಳು ಶಾವಂತಿಗೆ ಸರವ ||4|

ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ
ದಯದಿಂದ ಧರ್ಮ ಕಾಮ್ಯಾರ್ಥದ್ವರಗಳ ||5||

For English version, click Amba ni huva paalise vara

|| Sri Krishnarpanamasthu ||

2 thoughts on “Nithya Gowri pooja

Leave a comment