hari kathamrutha sara · jagannatha dasaru · MADHWA

Aarohana taratamya sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಭಕ್ತರೆನಿಸುವ ದಿವ್ಯ ಪುರುಷರ ಉಕ್ತಿ ಲಾಲಿಸಿ ಪೇಳ್ದ
ಮುಕ್ತಾಮುಕ್ತ ಜೀವರ ತಾರತಮ್ಯವ ಮುನಿಪ ಶಾಂಡಿಲ್ಯ||

ಸ್ಥಾವರರ ನೋಡಲ್ಕೆ ತೃಣ ಕ್ರಿಮಿ ಜೀವರೋತ್ತಮ
ಕ್ರಿಮಿಗಳಿಂದಲಿ ಆವಿ ಗೋ ಗಜ ವ್ಯಾಘ್ರಗಳಿಂದ ಶೂದ್ರಾದಿ ಮೂವರು ಉತ್ತಮ
ಕರ್ಮಿಕರ ಭೂ ದೇವರು ಉತ್ತಮ ಕರ್ಮಿ ನೋಡಲು ಕೋವಿದ ಉತ್ತಮ
ಕವಿಗಳಿಂದಲಿ ಕ್ಷಿತಿಪರು ಉತ್ತಮರು||1||

ಧರಣಿಪರ ನೋಡಲ್ಕೆ ನರ ಗಂಧರ್ವರು ಉತ್ತಮ
ದೇವ ಗಂಧರ್ವರ ಗುಣೋತ್ತಮರು ಇವರಿಗಿಂತ ಶತೋನಶತಕೋಟಿ ಪರಮ ಋಷಿಗಳು
ಅಪ್ಸರ ಸ್ತ್ರೀಯರು ಸಮಾನರು ಇವರಿಗಿಂತಲಿ
ಚಿರಪಿತೃಗಳು ಉತ್ತಮರು ಚಿರನಾಮಕ ಪಿತೃಗಳಿಂದ||2||

ಎರಡೈದು ಎಂಭತ್ತು ಋಷಿ ತುಂಬರ ಶತ ಊರ್ವಶಿ ಅಪ್ಸರ ಸ್ತ್ರೀಯರು
ಶತಾಜನಜರು ಉತ್ತರ ಚಿರ ಪಿತೃಗಳಿಂದ
ಅವರರು ಊರ್ವಶಿಗಿಂತ ವೈಶ್ವಾನರನ ಸುತರು ಈರೆಂಟು ಸಾವಿರ
ಹರದಿಯರೊಳು ಉತ್ತಮ ಕಶೇರು ಎಪ್ಪತ್ತನಾಲ್ಕು ಜನ||3||

ಸರಿಯೆನಿಪರು ವ್ರಜೌಕಸ ಸ್ತ್ರೀಯರು ಸುರಾಸ್ಯಾತ್ಮಜರಿಗಿಂ ಪುಷ್ಕರನು
ಕರ್ಮಪ ಪುಷ್ಕರನಿಗೆ ಶನೈಶ್ಚರ ಉತ್ತಮನು
ತರಣಿಜನಿಗೆ ಉತ್ತಮಳು ಉಷ ಅಶ್ವಿನಿ ಸುರಾಸಿಗೆ ಉತ್ತಮ ಜಲಪ ಬುಧ
ಶರಧಿಜಾತ್ಮಜಗೆ ಉತ್ತಮ ಸ್ವಹ ದೇವಿಯೆನಿಸುವಳು||4||

ಅನಳ ಭಾರ್ಯಳಿಗಿಂತ ಅನಾಖ್ಯಾತ ಅನಿಮಿಷ ಉತ್ತಮರು
ಇವರಿಗಿಂತಲಿ ಘನಪ ಪರ್ಜನ್ಯ ಅನಿರುದ್ಧನ ಸ್ತ್ರೀ ಉಷಾದೇವಿ
ದ್ಯುನದಿ ಸಂಜ್ಞಾ ಶಾಮಲಾ ರೋಹಿಣಿಗಳು ಆರ್ವರು ಸಮಾನ
ಅನಾಖ್ಯಾತ ಅನಿಮಿಷ ಉತ್ತಮರು ಇವರಿಗಿಂತಲಿ ನೂರು ಕರ್ಮಜರು||5||

ಪೃಥು ನಹುಷ ಶಶಿಬಿಂದು ಪ್ರಿಯವ್ರತ ಪರೀಕ್ಷಿತ ನೃಪರು
ಭಾಗೀರಥಿಯ ನೋಡಲ್ಕೆ ಅಧಿಕ ಬಲ್ಯಾದಿ ಇಂದ್ರ ಸಪ್ತಕರು
ಪಿತೃಗಳು ಏಳು ಎಂಟಧಿಕ ಅಪ್ಸರ ಸತಿಯರು ಈರೈದೊಂದು ಮನಸುಗಳು
ದಿತಿಜ ಗುರು ಚಾವನ ಉಚಿತ್ಥ್ಯರು ಕರ್ಮಜರು ಸಮಾರು||6||

ಧನಪ ವಿಶ್ವಕ್ಸೇನ ಗಣಪಾ ಅಶ್ವಿನಿಗಳು ಎಂಭತ್ತೈದು ಶೇಷರಿಗೆ
ಎಣೆಯೆನಿಸುವರು ಮಿತ್ರ ತಾರಾ ನಿರ್ಋತಿ ಪ್ರಾವಹಿ ಗುಣಗಳಿಂದ
ಐದಧಿಕ ಎಂಭತ್ತು ಎನಿಪ ಶೇಷರಿಗೆ ಉತ್ತಮರು
ಸನ್ಮುನಿ ಮರೀಚಿ ಪುಲಸ್ತ್ಯ ಪುಲಹಾ ಕ್ರತು ವಸಿಷ್ಠ ಮುಖ||7||

ಅತ್ರಿ ಅಂಗಿರರು ಏಳು ಬ್ರಹ್ಮನ ಪುತ್ರರು ಇವರಿಗೆ ಸಮರು
ವಿಶ್ವಾಮಿತ್ರ ವೈವಸ್ವತನು ಈಶ ಆವೇಶ ಬಲದಿಂದ
ಮಿತ್ರಗಿಂತ ಉತ್ತಮರು ಸ್ವಾಹಾ ಭರ್ತೃ ಭೃಗುವು ಪ್ರಸೂತಿ
ವಿಶ್ವಾಮಿತ್ರ ಮೊದಲಾದವರಿಗಿಂತಲಿ ಮೂವರು ಉತ್ತಮರು||8||

ನಾರದ ಉತ್ತಮನು ಅಗ್ನಿಗಿಂತಲಿ ವಾರಿನಿಧಿ ಪಾದ ಉತ್ತಮನು
ಯಮ ತಾರಕ ಈಶ ದಿವಾಕರರು ಶತರೂಪರೋತ್ತಮರು
ವಾರಿಜಾಪ್ತನಿಗಿಂತ ಪ್ರವಹಾ ಮಾರುತೋತ್ತಮ
ಪ್ರವಹಗಿಂತಲಿ ಮಾರಪುತ್ರ ಅನಿರುದ್ಧ ಗುರುಮನುದಕ್ಷ ಶಚಿ ರತಿಯು||9||

ಆರು ಜನರುಗಳಿಂದಲಿ ಅಹಂಕಾರಿಕ ಪ್ರಾಣ ಉತ್ತಮ
ಅಖಿಳ ಶರೀರಮಾಣಿ ಪ್ರಾಣಗಿಂತಲಿ ಕಾಮ
ಇಂದ್ರರಿಗೆ ಗೌರಿ ವಾರುಣಿ ಖಗಪ ರಾಣಿಗೆ ಶೌರಿ ಮಹಿಷಿಯರೊಳಗೆ
ಜಾಂಬವತೀ ರಮಾಯುತಳು ಆದ ಕಾರಣ ಅಧಿಕಲು ಎನಿಸುವಳು||10||

ಹರ ಫಣಿಪ ವಿಹಗ ಇಂದ್ರ ಮೂವರು ಹರಿ ಮಡದಿಯರಿಗುತ್ತಮ
ಸೌಪರಣಿ ಪತಿಗುತ್ತಮರು ಭಾರತಿ ವಾಣಿ ಈರ್ವರಿಗೆ
ಮರುತ ಬ್ರಹ್ಮರು ಉತ್ತಮರು ಇಂದಿರೆಯು ಪರಮ ಉತ್ತಮಳು
ಲಕ್ಷ್ಮಿಗೆ ಸರಿಯೆನಿಸುವರು ಇಲ್ಲವು ಎಂದಿಗು ದೇಶ ಕಾಲದೊಳು||11||

ಶ್ರೀ ಮುಕುಂದನ ಮಹಿಳೆ ಲಕುಮಿ ಮಹಾ ಮಹಿಮೆಗೆ ಏನೆಂಬೆ
ಬ್ರಹ್ಮ ಈಶ ಅಮರೇಂದ್ರರ ಸೃಷ್ಟಿ ಸ್ಥಿತಿ ಲಯಗೈಸಿ
ಅವರವರ ಧಾಮಗಳ ಕಲ್ಪಿಸಿ ಕೊಡುವಳು ಅಜರಾಮರಣಳಾಗಿದ್ದು
ಸರ್ವ ಸ್ವಾಮಿ ಮಮ ಗುರುವೆಂದು ಉಪಾಸನೆ ಮಾಳ್ಪಳು ಅಚ್ಯುತನ||12||

ಈಸು ಮಹಿಮೆಗಳುಳ್ಳ ಲಕ್ಷ್ಮಿ ಪರೇಶನ ಅನಂತಾನಂತ ಗುಣದೊಳು
ಲೇಶ ಲೇಶಕೆ ಸರಿಯೆನಿಸುವಳು ಅವಾವ ಕಾಲದಲಿ
ದೇಶ ಕಾಲಾತೀತ ಲಕ್ಷ್ಮಿಗೆ ಕೇಶವನ ವಕ್ಷ ಸ್ಥಳವೆ ಅವಕಾಶವಾಯಿತು
ಇವನ ಮಹಿಮೆಗೆ ವ್ಯಾಪ್ತಿಗೆ ಎಣೆಯುಂಟೆ||13||

ಒಂದು ರೂಪದೊಳು ಒಂದು ಅವಯವದೊಳು ಒಂದು ರೋಮದೊಳು
ಒಂದು ದೇಶದಿ ಪೊಂದಿಕೊಂಡಿಹರು ಅಜಭವಾದಿ ಸಮಸ್ತ ಜೀವಗಣ
ಸಿಂಧು ಸಪ್ತ ದ್ವೀಪ ಮೇರು ಸುಮಂದರಾದಿ ಆದ್ರಿಗಳು
ಬ್ರಹ್ಮ ಪುರಂದರಾದಿ ಸಮಸ್ತ ಲೋಕ ಪರಾಲಯಗಳೆಲ್ಲ||14||

ಸರ್ವ ದೇವೋತ್ತಮನು ಸರ್ವಗ ಸರ್ವಗುಣ ಸಂಪೂರ್ಣ ಸರ್ವದ
ಸರ್ವ ತಂತ್ರ ಸ್ವತಂತ್ರ ಸರ್ವಾಧಾರ ಸರ್ವಾತ್ಮ
ಸರ್ವತೋಮುಖ ಸರ್ವನಾಮಕ ಸರ್ವಜನ ಸಂಪೂಜ್ಯ ಶಾಶ್ವತ
ಸರ್ವ ಕಾಮದ ಸರ್ವ ಸಾಕ್ಷಿಗ ಸರ್ವಜಿತ್ಸರ್ವ||15||

ತಾರತಮ್ಯ ಆರೋಹಣವ ಬರೆದು ಆರು ಪಠಿಸುವರೋ ಅವರ
ಲಕ್ಷ್ಮೀ ನಾರಸಿಂಹ ಸಮಸ್ತ ದೇವ ಗಣ ಅಂತರಾತ್ಮಕನು
ಪೂರೈಸುವ ಮನೋರಥಂಗಳ ಕಾರುಣಿಕ ಕೈವಲ್ಯ ದಾಯಕ
ದೂರಗೈಪ ಸಮಸ್ತ ದುರಿತವ ವೀತ ಶೋಕ ಸುಖ||16||

ಪ್ರಣತ ಕಾಮದನ ಅಂಘ್ರಿ ಸಂದರ್ಶನದ ಅಪೇಕ್ಷೆಯ ಉಳ್ಳವಗೆ
ನಿಚ್ಚಣಿಕೆಯೆನಿಪುದು ಜಡ ಮೊದಲು ಬ್ರಹ್ಮಾಂಡ ತರತಮವು
ಮನವಚನದಿಂ ಸ್ಮರಿಸುವರ ಭವವನಧಿ ಶೋಷಿಸಿ ಪೋಗುವುದು
ಕಾರಣವು ಎನಿಸುವುದು ಜ್ಞಾನ ಭಕ್ತಿ ವಿರಕ್ತಿ ಸಂಪದಕೆ||17||

ಅನಳನೊಳು ಹೋಮಿಸುವ ಹರಿಚಂದನವೆ ಮೊದಲಾದ ಅದರ ಸುವಾಸನೆಯು
ಪ್ರತ್ಪ್ರತ್ಯೇಕ ತೋರ್ಪುದು ಎಲ್ಲ ಕಾಲದಲಿ
ದನುಜ ಮಾನವ ದಿವಿಜರ ಅವರವರ ಅನುಚಿತೋಚಿತ ಕರ್ಮ
ವೃಜಿನ ಅರ್ದನನು ವ್ಯಕ್ತಿಯ ಮಾಳ್ಪ ತ್ರಿಗುಣಾತೀತ ವಿಖ್ಯಾತ||18||

ಭಕ್ತವತ್ಸಲ ಭಾಗ್ಯ ಪುರುಷ ವಿವಿಕ್ತ ವಿಶ್ವಾಧಾರ
ಸರ್ವೋದೃಕ್ತ ದೃಷ್ಟಾದೃಷ್ಟ ದುರ್ಗಮ ದುರ್ವಿಭಾವ್ಯ ಸ್ವಹಿ
ಶಕ್ತ ಶಾಶ್ವಿತ ಸಕಲ ವೇದೈಕ ಉಕ್ತ ಮಾನದ ಮಾನ್ಯ ಮಾಧವ
ಸೂಕ್ತ ಸೂಕ್ಷ್ಮ ಸ್ಥೂಲ ಶ್ರೀ ಜಗನ್ನಾಥ ವಿಠಲನು||19||

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

Baktarenisuva divya puruShara ukti lAlisi pELda
muktAmukta jIvara tAratamyava munipa SAnDilya||

sthAvarara nODalke tRuNa krimi jIvarOttama
krimigaLiMdali Avi gO gaja vyAGragaLinda SUdrAdi mUvaru uttama
karmikara BU dEvaru uttama karmi nODalu kOvida uttama
kavigaLindali kShitiparu uttamaru||1||

dharaNipara nODalke nara gandharvaru uttama
dEva gaMdharvara guNOttamaru ivariginta SatOnaSatakOTi parama RuShigaLu
apsara strIyaru samAnaru ivarigintali
cirapitRugaLu uttamaru ciranAmaka pitRugaLinda||2||

eraDaidu eMBattu RuShi tuMbara Sata UrvaSi apsara strIyaru
SatAjanajaru uttara cira pitRugaLinda
avararu UrvaSiginta vaiSvAnarana sutaru IrenTu sAvira
haradiyaroLu uttama kaSEru eppattanAlku jana||3||

sariyeniparu vrajaukasa strIyaru surAsyAtmajarigiM puShkaranu
karmapa puShkaranige SanaiScara uttamanu
taraNijanige uttamaLu uSha aSvini surAsige uttama jalapa budha
SaradhijAtmajage uttama svaha dEviyenisuvaLu||4||

anaLa BAryaLiginta anAKyAta animiSha uttamaru
ivarigintali Ganapa parjanya aniruddhana strI uShAdEvi
dyunadi sanj~jA SAmalA rOhiNigaLu Arvaru samAna
anAKyAta animiSha uttamaru ivarigintali nUru karmajaru||5||

pRuthu nahuSha SaSibindu priyavrata parIkShita nRuparu
BAgIrathiya nODalke adhika balyAdi indra saptakaru
pitRugaLu ELu enTadhika apsara satiyaru Iraidondu manasugaLu
ditija guru cAvana ucitthyaru karmajaru samAru||6||

dhanapa viSvaksEna gaNapA aSvinigaLu eMBattaidu SESharige
eNeyenisuvaru mitra tArA nir^^Ruti prAvahi guNagaLinda
aidadhika eMBattu enipa SESharige uttamaru
sanmuni marIci pulastya pulahA kratu vasiShTha muKa||7||

atri angiraru ELu brahmana putraru ivarige samaru
viSvAmitra vaivasvatanu ISa AvESa baladinda
mitragiMta uttamaru svAhA BartRu BRuguvu prasUti
viSvAmitra modalAdavarigintali mUvaru uttamaru||8||

nArada uttamanu agnigintali vArinidhi pAda uttamanu
yama tAraka ISa divAkararu SatarUparOttamaru
vArijAptaniginta pravahA mArutOttama
pravahagintali mAraputra aniruddha gurumanudakSha Saci ratiyu||9||

Aru janarugaLindali ahankArika prANa uttama
aKiLa SarIramANi prANagintali kAma
indrarige gauri vAruNi Kagapa rANige Sauri mahiShiyaroLage
jAMbavatI ramAyutaLu Ada kAraNa adhikalu enisuvaLu||10||

hara PaNipa vihaga indra mUvaru hari maDadiyariguttama
sauparaNi patiguttamaru BArati vANi Irvarige
maruta brahmaru uttamaru indireyu parama uttamaLu
lakShmige sariyenisuvaru illavu endigu dESa kAladoLu||11||

SrI mukundana mahiLe lakumi mahA mahimege EneMbe
brahma ISa amarEndrara sRuShTi sthiti layagaisi
avaravara dhAmagaLa kalpisi koDuvaLu ajarAmaraNaLAgiddu
sarva svAmi mama guruveMdu upAsane mALpaLu acyutana||12||

Isu mahimegaLuLLa lakShmi parESana anantAnanta guNadoLu
lESa lESake sariyenisuvaLu avAva kAladali
dESa kAlAtIta lakShmige kESavana vakSha sthaLave avakASavAyitu
ivana mahimege vyAptige eNeyunTe||13||

ondu rUpadoLu ondu avayavadoLu ondu rOmadoLu
ondu dESadi poMdikonDiharu ajaBavAdi samasta jIvagaNa
sindhu sapta dvIpa mEru sumandarAdi AdrigaLu
brahma purandarAdi samasta lOka parAlayagaLella||14||

sarva dEvOttamanu sarvaga sarvaguNa saMpUrNa sarvada
sarva taMtra svataMtra sarvAdhAra sarvAtma
sarvatOmuKa sarvanAmaka sarvajana saMpUjya SASvata
sarva kAmada sarva sAkShiga sarvajitsarva||15||

tAratamya ArOhaNava baredu Aru paThisuvarO avara
lakShmI nArasiMha samasta dEva gaNa antarAtmakanu
pUraisuva manOrathangaLa kAruNika kaivalya dAyaka
dUragaipa samasta duritava vIta SOka suKa||16||

praNata kAmadana anGri saMdarSanada apEkSheya uLLavage
niccaNikeyenipudu jaDa modalu brahmAnDa taratamavu
manavacanadiM smarisuvara Bavavanadhi SOShisi pOguvudu
kAraNavu enisuvudu j~jAna Bakti virakti saMpadake||17||

anaLanoLu hOmisuva harichandanave modalAda adara suvAsaneyu
pratpratyEka tOrpudu ella kAladali
danuja mAnava divijara avaravara anucitOcita karma
vRujina ardananu vyaktiya mALpa triguNAtIta viKyAta||18||

Baktavatsala BAgya puruSha vivikta viSvAdhAra
sarvOdRukta dRuShTAdRuShTa durgama durviBAvya svahi
Sakta SASvita sakala vEdaika ukta mAnada mAnya mAdhava
sUkta sUkShma sthUla SrI jagannAtha viThalanu||19||

One thought on “Aarohana taratamya sandhi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s