gopala dasaru · MADHWA · raghavendra · sulaadhi

Raghavendra sulaadhi

ರಾಗ – ಭೈರವಿ ಧ್ರುವ ತಾಳ

ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು|
ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ|
ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ|
ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ|
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ|
ಪರಿಸಿದ್ಧ(ಪ್ರಸಿದ್ಧ)ನಾದನೆಂದು ಅರಿದು ಈ ಸ್ಥಳದಲ್ಲಿ|
ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ|
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು|
ಸಿರಿಕೃಷ್ಣನ್ನ ಚರಣಕ್ಕೇರಗಿ ಸಂತೋಷದಲ್ಲಿ |
ಧರೆಯಮ್ಯಾಲಿದ್ದ ಜನರ ಪೋರೆಯ ಬೇಕೆಂದೆನುತ|
ಹರಿ ನುಡಿದನು ಇವರ ಪರಮ ದಯಾಳು ತಾನು|
ಗುರ್ವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೇ|
ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು|
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ|
ಧರ ನಾರಾಯಣ ತಾನೆ ವರಸನ್ನಿಧಾನನಾಗಿ|
ಇವರಿಗೆ ಫಲತಂದೀವ ಇಹಪರದಲ್ಲಿನ್ನು
ಕರುಣಾಕರ ರಂಗ ಗೋಪಾಲ ವಿಠ್ಠಲ ತನ್ನ|
ಶರಣರ ಪೋರೆವಂಥ ಚರಿಯಾ ಪರಿಪರಿ ಉಂಟೊ|| ೧ ||
ಮಟ್ಟ ತಾಳ

ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರ್ತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ |
ತರುವಾಯದಲಿನ್ನು ತರತಮ್ಯಾನುಸಾರ |
ಪರಿ ಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿ ಪರಿ ಪುರಾಣ ಭಾರತ ಗಾನದಲಿ |
ಸರಿ ಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲ ವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ ||

ತ್ರಿವಿಡಿ ತಾಳ

ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ |
ಸಿರಿ ರಾಮನಾಗಿ ಇಲ್ಲಿ ಪರಿ ಪರಿ ಪರಿ ದೇಶಾಂ-|
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರ ಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ |
ಪರಿ ಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ , ಹರಿ ಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣ ಜನಕ ಇನ್ನು |
ವರ ಜ್ಞಾನ ಸುಧೆಯನ್ನು ಕರೆದು ಕೊಡುತಲಿಪ್ಪ |
ಸಿರಿ ವಂದಿತ ಪಾದ ಗೋಪಾಲ ವಿಠ್ಠಲ |
ಪರಿ ಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||
ಅಟ್ಟತಾಳ

ರಾಘವೇಂದ್ರನೆಂಬೋ ರೂಪ ತಾನೇ ಆಗಿ |
ರಾಘವೇಂದ್ರನೆಂಬೋ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲ ವಿಠ್ಠಲ |
ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ ||

ಆದಿ ತಾಳ

ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನೋತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರ ಭೋಜನ |
ಜನನಾಥ ತಾನಿಲ್ಲಿ ಅನುವಾಗಿ ತಾನಿಂದು |
ಘನ ಮಹಿಮೆಯಿಂದಲಿ |
ಜನರ ಪಾಲಿಸುವದಕ್ಕನುಮಾನ ಸಲ್ಲದೊ |
ಗುಣ ಗಣ ಪರಿಪೂರ್ಣ ಗೋಪಾಲ ವಿಠ್ಠಲ |
ಅನೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || ೫ ||

ಜತೆ

ಮಂತ್ರಸಿಧ್ಧಿ ಕ್ಷೇತ್ರ ಇದು ನೋಡಿ ಕೋವಿದರು |
ಮಂತ್ರ ಪ್ರತಿಪಾದ್ಯ ಗೋಪಾಲ ವಿಠ್ಠಲನಿಂದ || ೬ ||


Raga – Bairavi dhruva tala

Dhareyavolage namma guru ragavendrarinnu |
Irutippa vivara aritashtu varnivuve |
Sthiravagi mantralaya pura tungatiradi |
Haribakta prahlada vara yaga illi madi |
Surarigamruta unisi paripariya kriya madi |
Parisiddha(prasiddha)nadanendu aridu I sthaladalli |
Gururagavendraraya sarira pogadidilli |
Paralokakke sadhana paripurtiya madikondu |
Sirikrushnanna charanakkeragi santoshadalli |
Dhareyamyalidda janara poreya bekendenuta |
Hari nudidanu ivara parama dayalu tanu |
Gurvantaryamiyagi varavaniyalu jagakke |
Narahari tane nindu nityapujeyagondu |
Sirivulla kirutiya surarapalaka chakra |
Dhara narayana tane varasannidhananagi |
Ivarige palatandiva ihaparadallinnu
Karunakara ranga gopala viththala tanna |
Saranara porevantha chariya paripari unto || 1 ||

Matta tala

Narahari krushna rama siri vedavyasa |
Eraderadu nalku hariya murtigalu |
Parivara sahavagi siri sahitadi nindu |
Sura guruvaryaru madhvacharyare modalagi |
Taruvayadalinnu taratamyanusara |
Pari pari yatigalu irutipparu illi |
Harushadimdali vedagaredu sastragalannu |
Pari pari purana barata ganadali |
Sari sari bandante sarigamavenutali |
Baradindali kunidu Bakutiyindali innu |
Hariya pujisutta hagalirulu bidade |
Paratatvada vivara paripari peluvaru |
Garudavahana ranga gopala viththala |
Saranara palisuta irutippanu illi || 2 ||

Trividi tala

Narahari rupadalli vasavagi illi |
Durita dushkruta brahmetigalodisuva |
Siri ramanagi illi pari pari pari desan- |
Tara anna kalakondu nararilli bandare |
Sthira patta kattuva siri krushnanagilli |
Pari pariyali banda paramaturarige |
Varaviva putrotsava munji maduveya |
Harakegala kaikondu harusha badisuvavara |
Siri vedavyasanilli Baradindali banda |
Duruvadigalanella dhuradindalodisi |
Muridu avara sastra , hari sarvottamanendu |
Iruvanilli tori sarana janaka innu |
Vara j~jana sudheyannu karedu kodutalippa |
Siri vandita pada gopala viththala |
Pari pariyali illi valaga kaikomba || 3 ||
Attatala

Ragavendranembo rupa tane Agi |
Ragavendranembo nama idisikondu |
Ragavendrarinnu madi dantha punya |
Bogavaritu tanna bagavatara kirti |
Sagisi salahali trijagadolaginnu |
Mega suridantha amoga kirutiyannu |
Ragava ivarige rajyadi tandiva |
Ragavendra murti gopala viththala |
Bagavataralli bahu pujeyanugomba || 4 ||

Adi tala

Dinadinakilli nutana pujegalaguvavu |
Dinadinakilli nutana vartegalaguvavu |
Dinadinakilli nutanotsavagalaguvavu |
Janara sandani pratidina vipra bojana |
Jananatha tanilli anuvagi tanindu |
Gana mahimeyindali |
Janara palisuvadakkanumana sallado |
Guna gana paripurna gopala viththala |
Anorani embuvage eneyaro jagadolage || 5 ||

Jate

Mantrasidhdhi kshetra idu nodi kovidaru |
Mantra pratipadya gopala viththalaninda || 6 ||

5 thoughts on “Raghavendra sulaadhi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s