gopala dasaru · MADHWA · srinivasa

Palisayya pavananayya

Song posted on request:

ಪಾಲಿಸಯ್ಯ ಪವನನಯ್ಯ
ಪಾಲಿವಾರಿಧಿಶಯ್ಯ ವೆಂಕಟರೇಯ||ಪ||

ಕಾಲಕಾಲಕೆ ಹೃದಯಾಲದೊಳು ನಿನ್ನ
ಶೀಲಮೂರುತಿ ತೋರೊ ಮೇಲುಕರುಣದಿ|ಅ.ಪ|

ಶ್ರೀಶ ಸಂಸಾರವೆಂಬೊ ಸೂಸುವ ಶರಧಿಯೊ
ಳೀಸಲಾರೆನೊ ಹರಿಯೆ ಏ ದೊರೆಯೆ
ದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದು
ಲೇಸುನಿನಗಲ್ಲವಯ್ಯ ಹೇ ಜೀಯಾ
ದೋಷರಾಶಿಗಳೆಲ್ಲ ನಾಶನ ಮಾಡಿಸು
ವಿಶೇಷವಾದ ಜ್ಞಾನ ಲೇಸುಭಕುತಿನಿತ್ತು
ಆಸೆಯ ಬಿಡಿಸೆನ್ನ ಮೀಸಲಮನ ಮಾಡಿ
ನೀ ಸುಳಿವುದು ಶ್ರೀನಿವಾಸ ಕೃಪಾಳೊ|೧|

ಮೂರು ಗುಣಗಳಿಂದ ಮೂರು ತಾಪಗಳಿಂದ
ಮೂರು ಅವಸ್ಥೆಯಿಂದ ಮುಕುಂದ
ಮೂರು ಐದರಿಂದ ಮೂರು ಏಳರಿಂದ
ಮೂರರ ದಾರಿಗಾಣದೆ ಮೂರಾದೆ
ಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿ
ಂಉರು ಮೂರು ಭಕ್ತಿಯ ಮೂರುಕಾಲಕೆ ಇತ್ತು
ಮೂರುರೂಪನಾಗಿ ಮೂರುಲೋಕವನೆಲ್ಲ
ಮೂರು ಮಾಡುವ ಬಿಂಬಮೂರುತಿ ವಿಶ್ವ|೨|

ಕರುಣಾಸಾಗರ ನಿನ್ನ ಸ್ಮರಣೆಮಾತ್ರದಿ ಸಕಲ
ದುರಿತ ಪರಿಹಾರವೆಂದು ನಾ ಬಂದು
ಮರೆಹೊಕ್ಕಮ್ಯಾಲೆನ್ನ ಪೊರೆಯಬೇಕಲ್ಲದೆ
ಜರಿದು ದೂರ ನೂಕುವರೆ ಮುರಾರೆ
ಮರುತಾಂತರ್ಗತ ಗೋಪಾಲವಿಠಲ ಈ
ಶರೀರವೆ ನಿನ್ನ ಚರಣಕರ್ಪಿಸಿದೆನೊ
ಸರಿಬಂದದ್ದು ಮಾಡೊ ಬಿರಿದು ನಿನ್ನದು ದೇವ
ಪರಮದಯಾನಿಧೆ ಉರಗಾದ್ರಿವಾಸ|೩|

Pālisayya pavananayya
pālivāridhiśayya veṅkaṭarēya||pa||

kālakālake hr̥dayāladoḷu ninna
śīlamūruti tōro mēlukaruṇadi|a.Pa|

śrīśa sansāravembo sūsuva śaradhiyo
ḷīsalāreno hariye ē doreye
dāsanentendamyāle ghāsigoḷisuvudu
lēsuninagallavayya hē jīyā
dōṣarāśigaḷella nāśana māḍisu
viśēṣavāda jñāna lēsubhakutinittu
āseya biḍisenna mīsalamana māḍi
nī suḷivudu śrīnivāsa kr̥pāḷo|1|

mūru guṇagaḷinda mūru tāpagaḷinda
mūru avastheyinda mukunda
mūru aidarinda mūru ēḷarinda
mūrara dārigāṇade mūrāde
mūru hiḍisi myāle mūreraḍōḍisi
ṁuru mūru bhaktiya mūrukālake ittu
mūrurūpanāgi mūrulōkavanella
mūru māḍuva bimbamūruti viśva|2|

karuṇāsāgara ninna smaraṇemātradi sakala
durita parihāravendu nā bandu
marehokkamyālenna poreyabēkallade
jaridu dūra nūkuvare murāre
marutāntargata gōpālaviṭhala ī
śarīrave ninna caraṇakarpisideno
saribandaddu māḍo biridu ninnadu dēva
paramadayānidhe uragādrivāsa|3|

gopala dasaru · MADHWA · Ugabogha

Ugabhoga by Sri Gopala dasaru

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ

Ambakādallidda kambharūpadi hariya
ambhramaṇi kambhakke suttalū guṇarūpa
śambhuvandita vatsasambhramadali iralu
ambujasamana gurutande gōpālaviṭhalana
bembidade tōrō prāṇa


ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

An’yarindali sukhavāyitembuvudakkinta
ninnindāyitemba klēśa mēlayya
ninnariyade an’yara ballenembudakkinta
kaṇṇilladiruva kuruḍa mēlayya
puṇyapāpavariyade badukuva manu-
janiginta nāyikunni lēsayya kula-
hīnanādaru sukha duḥkhagaḷanu
ninnindāyitemba mati
cennāgi tiḷisayya gōpālaviṭhala


ಆರಿಗಾರಾಗುವರೊ ಆಪತ್ತು ಕಾಲಕ್ಕೆ
ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ
ಆರಿಂದ ಬಪ್ಪುವುದು ಆರಿಂದ ತಪ್ಪುವುದು
ಆರಿಸಿ ನೋಡುವುದು ಇದರ ಕಾರಣವನು
ಇದಕಾರು ವಾರಣದಲ್ಲಿ ನೋಡಿ
ಆರೋಪಿಸಲು ಎಲ್ಲಾ ಭಾರ ಅವಗೆ
ಕಾರುಣ್ಯಮೂರುತಿ ಗೋಪಾಲವಿಠಲ
ಈರೀತಿ ಅರಿದವಗೆ ಇಲ್ಲೇ ಪೊರೆವ ||

Ārigārāguvaro āpattu kālakke
ārigārodaguvaro sampattu kālakke
ārinda bappuvudu ārinda tappuvudu
ārisi nōḍuvudu idara kāraṇavanu
idakāru vāraṇadalli nōḍi
ārōpisalu ellā bhāra avage
kāruṇyamūruti gōpālaviṭhala
īrīti aridavage illē poreva ||


ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು

Maneya kaṭṭuvaruṇṭu maḍadi makkaḷuṇṭu
dhanava gaḷisuvaruṇṭu gaḷisadiddavaruṇṭu
dhanava kaṭṭuvaruṇṭu dāna māḍuvaruṇṭu
r̥ṇava koṭṭavaruṇṭu r̥ṇa māḍidavaruṇṭu
maṇegāratanavidaroḷendigū bēḍa
munigaḷu sahitāgi mōsa hōdaru idake
guṇapūrṇa celva gōpālaviṭhṭhala ninna
guṇa cintaneyoḷiḍu iṣṭē sāku


 

dasara padagalu · gopala dasaru · MADHWA

smarisi sukiselo maanava

ಸ್ಮರಿಸಿ ಸುಖಿಸೆಲೊ ಮಾನವಾ ||pa||

ಸ್ವಾನುಭಾವದಿಂದ ಸುಖವಬಡಿಪ ಗೋಪಾಲದಾಸ ರಾಜರಡಿಗಳನುದಿನಾ ||a.pa||

ಅಪಾರ ಜನುಮದ ದಾಸ್ಯಹರಿಸಿ ಸುಖಸಾರ ಸುರಿಪರನುದಿನಾ ||1||

ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ ||2||

ಸರ್ವ ವಿಧದಿ ತೋಷಬಡಿಪ ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ ||3||

Smarisi sukiselo manava ||pa||

Svanubavadinda sukavabadipa gopaladasa rajaradigalanudina ||a.pa||

Apara janumada dasyaharisi sukasara suriparanudina ||1||

Satyavada vacana satvajivarishtagareva cittadolaganudina ||2||

Sarva vidhadi toshabadipa tandevaradagopalavithalane sakshiyagippananudina ||3||

dasara padagalu · gopala dasaru · MADHWA

Gopala dasa raaya mampaalaya

ಗೋಪಾಲದಾಸರಾಯ ಮಾಂಪಾಲಯ ||

ಗೋಪಾಲದಾಸರಾಯಾ ಅಪಾರ ಮಹಿಮ ಮ-
ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ||a.pa||

ಗಜಮುಖ ನಮಿಸುವೆ ಸುಜನ ಪಾಲಕ ಶ್ರೀಮದ್
ಸುಜನ ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||1||

ಧನ್ವಂತ್ರಿ ಜಪದಿ ಜಗನ್ನಾಥದಾಸರ
ಬನ್ನವ ಬಿಡಿಸಿದ ಘನ್ನ ಮಹಿಮಗುರು ||2||

ಏನು ಕರುಣವೋ ಶ್ರೀ ಮಾನವಿ ದಾಸರಿಗೆ
ಸಾನುರಾಗದಿ ಆಯುರ್ದಾನವ ಮಾಡಿದ ||3||

ಪದುಮನಾಭನ ಪದಪದುಮ ಮಹಿಮೆಗಳ
ವಿಧ ವಿಧ ಪದಸುಳಾದಿಗಳಿಂದ ತುತಿಸಿದ ||4||

ಶರಣು ಜನಕೆ ಸುರತರುವೆನಿಸಿ ಧರೆಯೊಳು
ಮೆರೆವ ‘ ಕಾರ್ಪರ ನರಹರಿ’ ಯ ನೊಲಿಸಿದಂಥ||5||
Gopaladasaraya mampalaya ||

Gopaladasaraya apara mahima ma-
Tpapagalodisi kapado gururaya||a.pa||

Gajamuka namisuve sujana palaka srimad
Sujana vijayadasarige nija sishyarenisida ||1||

Dhanvamtri japadi jagannathadasara
Bannava bidisida Ganna mahimaguru ||2||

Enu karunavo sri manavi dasarige
Sanuragadi ayurdanava madida ||3||

Padumanabana padapaduma mahimegala
Vidha vidha padasuladigalinda tutisida ||4||

Saranu janake surataruvenisi dhareyolu
Mereva ‘ karpara narahari’ ya nolisidantha||5||

dasara padagalu · gopala dasaru · MADHWA

Paalisayya gopala raaya

ಪಾಲಿಸಯ್ಯಾ ಗೋಪಾಲರಾಯಾ ।
ಶೀಲ ಭಕುತಿ ಜ್ಞಾನವ ನಿತ್ಯ ।
ಸಲಿಸುತ ಪ್ರಸನ್ನನಾಗಿ ।। pa ।।

ಓಡಿಸಿ ವಿಘ್ನವ ನೀಡು ವೈರಾಗ್ಯವ ।
ಬೇಡುವೆ ನಾ ಕೃಪೆ ಮಾಡಿ ಗತಿ ।। 1 ।।

ಆರ್ತರಭೀಷ್ಟೆಯ ಪೂರ್ತಿಪ ದಾನಿ ।
ಪ್ರಾರ್ಥಿಸುವೆ ಶುಭಮೂರ್ತಿ ಸದಾ ।। 2 ।।

ಶ್ಯಾಮ ಸುಂದರನೆ ಸ್ವಾಮಿಯು ನಿಜವೆಂದು ।
ಆ ಮೌನಿಯ ಘನ ಪ್ರೇಮಾನ್ವಿತ ।। 3 ।।

Palisayya gopalaraaya |

Sila Bakuti j~janava nitya |
Salisuta prasannanagi || pa ||

Odisi vignava nidu vairagyava |
Beduve na krupe madi gati || 1 ||

Artarabishteya purtipa dani |
Prarthisuve subamurti sada || 2 ||

Syama sundarane svamiyu nijavendu |
A mauniya Gana premanvita || 3 ||

dasara padagalu · gopala dasaru · MADHWA

mangalam mangalam

ಮಂಗಳಂ ಮಂಗಳಂ ಭವತು ತೇ ರಮಾಪತೆ ||pa||

ಮಂಗಳಂ ಮಧುವೈರಿ ದೇವವರೇಣ್ಯ ||apa||

ಮಾರಜನಕ ದಿವ್ಯಸಾರ ಸುಂದರದೇಹವಾರಿಜದಳನೇತ್ರ ಕಾರುಣ್ಯಗುಣನಿಧೆ ||

ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ||

ವೇದವಿಬುಧವಂದ್ಯ ಗೋಪಾಲವಿಠಲಸಾಧುಸಜ್ಜನಪಾಲ ಶ್ರೀದೇವಿಲೋಲ ||

Mangalam mangalam Bavatu te ramapate ||pa||

Mangalam madhuvairi devavarenya ||apa||

Marajanaka divyasara sundaradehavarijadalanetra karunyagunanidhe ||

Manimaya subakara kanakakundaladharaminuguva makutasobanakaramurte||

Vedavibudhavandya gopalavithalasadhusajjanapala sridevilola ||

dasara padagalu · gopala dasaru · MADHWA

Mangalam mangalam

ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ||pa||

ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ ||

ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ ||

ರಾಜರಾಜಿತ ಗೋಪಾಲವಿಠಲ ಮಹಾ ರಾಜ ಭೋಜ ಕಲ್ಪರಾಜ ಸುತೇಜ ||

Mangalam mangalam dayanidhemangalam mangalam ||pa||

Deva devesa dehi kalyanamsrivara Sringara sri srinivasa ||

Nandanandana divyananda suteja^^indivaraksha mukunda murare ||

Rajarajita gopalavithala maha raja boja kalparaja suteja ||

dasara padagalu · gopala dasaru · MADHWA

Pore enna swamy

ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ||pa||

ಮಾರಜನಕ ನಿನ್ನ ಕೋರಿ ಬಂದೆನೊ ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ|||

ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ ||

ಬಡವರ ಪಾಲಿಪ ಶಕ್ತಿ ನಿನ್ನದೊ ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ||

Pore emma svami ni jagadantariyami ||pa||

Marajanaka ninna kori bandeno devakrura karmantara haragaiso ni deva|||

Baktara palipa Sakti ninnado devabaktiyindali ninna pada toriso deva ||

Badavara palipa Sakti ninnado deva adigaligeraguva odeya gopalavithala ||

dasara padagalu · ganesha · gopala dasaru · MADHWA

Gajavadana pavana

ಗಜವದನ ಪಾವನ ವಿಘ್ನನಾಶನ ||pa||

ವರ ಪಾಶಾಂಕುಶಧರ ಪರಮದಯಾಳೊಕರುಣಾಪೂರಿತ ಗೌರೀವರಕುಮಾರನೆ ||

ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ ||

ಗೋಪಾಲವಿಠಲನ ಅಪಾರ ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ ||

Gajavadana pavana vignanasana ||pa||

Vara pasankusadhara paramadayalokarunapurita gaurivarakumarane ||

Sundaravadanaravindanayana Gana-sumdari kandane bandu rakshiso ||

Gopalavithalana apara bajakanesapanugrahasaktaneka mahima ||

dasara padagalu · gopala dasaru · MADHWA

Bandya vithala badavanalli

ಬಂದ್ಯಾ ವಿಠಲ ಬಡವನಲ್ಲಿ।
ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ॥ಪ॥

ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು ।
ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ॥
ಸಿರಿಗಂಧ ಲೇಪ ಶ್ರೀವತ್ಸ ಉರ ಕಿರುಡೊಳ್ಳು ।
ವರಕಟಿಗೆ ಗಂಟೆ ಪರಿಪರಿಯ ಡಾಬವ ಸುತ್ತಿ ॥1॥

ಸುಳಿಗುರುಳು ಮೇಲೆ ಅರಳೆಲೆಯು ಕಿರೀಟ ।
ಎಳೆದಳಿರು ಚೂತ ಮಲ್ಲಿಗೆಯು ದೂರ್ವೆ ॥
ಥಳಥಳಿಪ ಮುಖ ನಾಸ ನಯನ ಫಣೆಯಲಿ ತಿಲಕ ।
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ॥2॥

ಮುಂಗೈಯ ಕಡಗ ಸರಪಳಿ ತೋಳ ಭಾಪುರಿ ।
ಶೃಂಗಾರವಾದ ಗದೆ ಶಂಖ ಚಕ್ರ ॥
ಅಂಗೈಯ ಪದುಮ ಅಂಗುಲಿ ವೇಣು ಮೀಟುತ ।
ಹಿಂಗದೆ ಎನ್ನ ಅಂತರಂಗದ ಮನೆಗಿಂದು ॥3॥

ಈಸು ಬಗೆ ಪೂಜೆಯು ಎನ್ನಿಂದಲಾಗದು ।
ಲೇಶವಾದರು ಇಲ್ಲ ಎನಗೆ ಜ್ಞಾನ ॥
ಶ್ರೀಶನೆ ನೀ ನಿಂತಲ್ಲಿ ಸಕಲವು ಉಂಟು ।
ಶ್ರೀ ಶ್ರೀನಿವಾಸ ಗೋಪಾಲವಿಠಲ ವಿಜಯ ॥4॥

Bandya vithala badavanalli|
Vrundavanadalli govrundagala kaydavane ||pa||

Koralali sarige sarapali pacce padakavu |
Paripariya hara sri tulasi male ||
Sirigandha lepa srivatsa ura kirudollu |
Varakatige gante paripariya dabava sutti ||1||

Suligurulu mele araleleyu kirita |
Eledaliru cuta malligeyu durve ||
Thalathalipa muka nasa nayana paneyali tilaka |
Calisuva karnakundala prabeyu sobisutta ||2||

Mungaiya kadaga sarapali tola bapuri |
Srungaravada gade sanka cakra ||
Angaiya paduma anguli venu mituta |
Hingade enna antarangada manegindu ||3||

Isu bage pujeyu ennindalagadu |
Lesavadaru illa enage j~jana ||
Srisane ni nintalli sakalavu untu |
Sri srinivasa gopalavithala vijaya ||4||