gopala dasaru · MADHWA · Ugabogha

Ugabhoga by Sri Gopala dasaru

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ

Ambakādallidda kambharūpadi hariya
ambhramaṇi kambhakke suttalū guṇarūpa
śambhuvandita vatsasambhramadali iralu
ambujasamana gurutande gōpālaviṭhalana
bembidade tōrō prāṇa


ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

An’yarindali sukhavāyitembuvudakkinta
ninnindāyitemba klēśa mēlayya
ninnariyade an’yara ballenembudakkinta
kaṇṇilladiruva kuruḍa mēlayya
puṇyapāpavariyade badukuva manu-
janiginta nāyikunni lēsayya kula-
hīnanādaru sukha duḥkhagaḷanu
ninnindāyitemba mati
cennāgi tiḷisayya gōpālaviṭhala


ಆರಿಗಾರಾಗುವರೊ ಆಪತ್ತು ಕಾಲಕ್ಕೆ
ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ
ಆರಿಂದ ಬಪ್ಪುವುದು ಆರಿಂದ ತಪ್ಪುವುದು
ಆರಿಸಿ ನೋಡುವುದು ಇದರ ಕಾರಣವನು
ಇದಕಾರು ವಾರಣದಲ್ಲಿ ನೋಡಿ
ಆರೋಪಿಸಲು ಎಲ್ಲಾ ಭಾರ ಅವಗೆ
ಕಾರುಣ್ಯಮೂರುತಿ ಗೋಪಾಲವಿಠಲ
ಈರೀತಿ ಅರಿದವಗೆ ಇಲ್ಲೇ ಪೊರೆವ ||

Ārigārāguvaro āpattu kālakke
ārigārodaguvaro sampattu kālakke
ārinda bappuvudu ārinda tappuvudu
ārisi nōḍuvudu idara kāraṇavanu
idakāru vāraṇadalli nōḍi
ārōpisalu ellā bhāra avage
kāruṇyamūruti gōpālaviṭhala
īrīti aridavage illē poreva ||


ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು

Maneya kaṭṭuvaruṇṭu maḍadi makkaḷuṇṭu
dhanava gaḷisuvaruṇṭu gaḷisadiddavaruṇṭu
dhanava kaṭṭuvaruṇṭu dāna māḍuvaruṇṭu
r̥ṇava koṭṭavaruṇṭu r̥ṇa māḍidavaruṇṭu
maṇegāratanavidaroḷendigū bēḍa
munigaḷu sahitāgi mōsa hōdaru idake
guṇapūrṇa celva gōpālaviṭhṭhala ninna
guṇa cintaneyoḷiḍu iṣṭē sāku


 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s