hari kathamrutha sara · jagannatha dasaru · MADHWA

Kalpa sadhana sandhi/Aparoksha Taratamya sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ
ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ
ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ
ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ||1||

ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ
ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು
ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ
ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು||2||

ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು
ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು
ತನು ಪ್ರತೀಕದಿ ಬಿಂಬನ ಉಪಾಸನವಗೈಯುತ ಇಂದ್ರಿಯಜ ಕರ್ಮ
ಅನವರತ ಹರಿಗೆ ಅರ್ಪಿಸುತ ನಿರ್ಮಮರುಯೆನಿಸುವರು||3||

ಏಳುವಿಧ ಜೀವ ಗಣ ಬಹಳ ಸುರಾಳಿ ಸಂಖ್ಯಾ ನೇಮವುಳ್ಳದು
ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ
ಸ್ಥೂಲ ಕರ್ಮವ ತೊರೆದು ಗುರುಗಳು ಪೇಳಿದ ಅರ್ಥವ ತಿಳಿದು
ತತ್ತತ್ಕಾಲ ಧರ್ಮ ಸಮರ್ಪಿಸುವ ಅವರು ಕರ್ಮ ಯೋಗಿಗಳು||4||

ಹೀನ ಕರ್ಮಗಳಿಂದ ಬಹುವಿಧ ಯೋನಿಯಲಿ ಸಂಚರಿಸಿ ಪ್ರಾಂತಕೆ
ಮಾನುಷತ್ವವನೈದಿ ಸರ್ವೋತ್ತಮನು ಹರಿಯೆಂಬ
ಜ್ಞಾನ ಭಕ್ತಿಗಳಿಂದ ವೇದೋಕ್ತ ಅನುಸಾರ ಸಹಸ್ರಜನ್ಮ
ಅನ್ಯೂನ ಕರ್ಮವ ಮಾಡಿ ಹರಿಗರ್ಪಿಸಿದ ನಂತರದಿ||5||

ಹತ್ತು ಜನ್ಮಗಳಲಿ ಹರಿ ಸರ್ವೋತ್ತಮನು ಸುರಾಸುರ ಗಣಾರ್ಚಿತ
ಚಿತ್ರ ಕರ್ಮ ವಿಶೋಕ ಅನಂತಾನಂತ ರೂಪಾತ್ಮ
ಸತ್ಯ ಸತ್ಸಂಕಲ್ಪ ಜಗದೋತ್ಪತ್ತಿ ಸ್ಥಿತಿಲಯ ಕಾರಣ
ಜರಾಮೃತ್ಯು ವರ್ಜಿತನೆಂದು ಉಪಾಸನೆಗೈದ ತರುವಾಯ||6||

ಮೂರು ಜನ್ಮಗಳಲ್ಲಿ ದೇಹಾಗಾರ ಪಶು ಧನ ಪತ್ನಿ ಮಿತ್ರ
ಕುಮಾರ ಮಾತಾ ಪಿತೃಗಳಲ್ಲಿ ಇಹ ಸ್ನೇಹಗಿಂತ ಅಧಿಕ
ಮಾರಮಣನಲಿ ಬಿಡದೆ ಮಾಡುವ ಸೂರಿಗಳು ಈ ಉಕ್ತ ಜನ್ಮವ ಮೀರಿ
ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು||7||

ದೇವ ಗಾಯಕ ಅಜಾನ ಚಿರಪಿತೃ ದೇವರೆಲ್ಲರು
ಜ್ಞಾನ ಯೋಗಿಗಳು ಆವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ದೇವಿ
ಬುಧಸನಕಾದಿಗಳು ಮೇಘಾವಳಿ ಪರ್ಜನ್ಯ ಸಾಂಶರು
ಈ ಉಭಯ ಗಣದೊಳಗಿವರು ವಿಜ್ಞಾನ ಯೋಗಿಗಳು||8||

ಭರತ ಖಂಡದಿ ನೂರು ಜನ್ಮವ ಧರಿಸಿ ನಿಷ್ಕಾಮಕ ಸುಕರ್ಮ ಆಚರಿಸಿದ ಅನಂತರದಿ
ದಶ ಸಹಸ್ರ ಜನ್ಮದಲಿ ಉರುತರ ಜ್ಞಾನವನು
ಮೂರೈದು ಎರಡು ದಶ ದೇಹದಲಿ ಭಕ್ತಿಯ
ನಿರವಧಿಕನಲಿ ಮಾಡಿ ಕಾಂಬರು ಬಿಂಬ ರೂಪವನು||9||
ಸಾಧನಾತ್ಪೂರ್ವದಲಿ ಇವರಿಗೆ ಅನಾದಿ ಕಾಲ ಅಪರೋಕ್ಷವಿಲ್ಲ
ನಿಷೇಧ ಕರ್ಮಗಳಿಲ್ಲ ನರಕ ಪ್ರಾಪ್ತಿ ಮೊದಲಿಲ್ಲ
ವೇದ ಶಾಸ್ತ್ರಗಳಲ್ಲಿಪ್ಪ ವಿರೋಧ ವಾಕ್ಯವ ಪರಿಹರಿಸಿ
ಮಧುಸೂದನನೆ ಸರ್ವೋತ್ತಮೋತ್ತಮನು ಎಂದು ತುತಿಸುವರು||10||

ಸತ್ಯಲೋಕಾಧಿಪನ ವಿಡಿದು ಶತಸ್ಥ ದೇವಗಣ ಅಂತ ಎಲ್ಲರು
ಭಕ್ತಿ ಯೋಗಿಗಳೆಂದು ಕರೆಸುವರು ಆವ ಕಾಲದಲಿ
ಭಕ್ತಿ ಯೋಗ್ಯರ ಮಧ್ಯದಲಿ ಸದ್ಭಕ್ತಿ ವಿಜ್ಞಾನಾದಿ ಗುಣದಿಂದ ಉತ್ತಮ
ಉತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ||11||

ಋಜುಗಣಕೆ ಭಕ್ತಿ ಆದಿ ಗುಣ ಸಹಜವು ಎನಿಸುವವು
ಕ್ರಮದಿ ವೃದ್ಧಿ ಅಬ್ಜಜ ಪದವಿ ಪರ್ಯಂತ ಬಿಂಬ ಉಪಾಸನವು ಅಧಿಕ
ವೃಜಿನ ವರ್ಜಿತ ಎಲ್ಲರೊಳು ತ್ರಿಗುಣಜ ವಿಕಾರಗಳಿಲ್ಲವು ಎಂದಿಗು
ದ್ವಿಜಫಣಿಪ ಮೃಡ ಶಕ್ರ ಮೊದಲಾದ ಅವರೊಳು ಇರುತಿಹವು||12||

ಸಾಧನಾತ್ಪೂರ್ವದಲಿ ಈ ಋಜ್ವಾದಿ ಸಾತ್ವಿಕರು ಎನಿಪ ಸುರಗಣ
ಅನಾದಿ ಸಾಮಾನ್ಯ ಅಪರೋಕ್ಷಿಗಳೆಂದು ಕರೆಸುವರು
ಸಾಧನೋತ್ತರ ಸ್ವಸ್ವ ಬಿಂಬ ಉಪಾಧಿ ರಹಿತ ಆದಿತ್ಯನಂದದಿ
ಸಾದರದಿ ನೋಡುವರು ಅಧಿಕಾರ ಅನುಸಾರದಲಿ||13||

ಛಿನ್ನ ಭಕ್ತರು ಎನಿಸುತಿಹರು ಸುಪರ್ಣ ಶೇಷಾದಿ ಅಮರರರೆಲ್ಲ
ಅಚ್ಚಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ಸೊನ್ನೊಡಲ ವಾಗ್ದೇವಿಯರು
ಪಣೆಗಣ್ಣ ಮೊದಲಾದ ಅವರೊಳಗೆ ತತ್ತನ್ನಿಯಾಮಕರಾಗಿ
ವ್ಯಾಪಾರವನು ಮಾಡುವರು||14||

ಹೀನ ಸತ್ಕರ್ಮಗಳು ಎರಡು ಪವಮಾನ ದೇವನು ಮಾಳ್ಪನು
ಇದಕೆ ಅನುಮಾನವಿಲ್ಲ ಎಂದು ಎನುತ ದೃಢ ಭಕ್ತಿಯಲಿ ಭಜಿಪರ್ಗೆ
ಪ್ರಾಣಪತಿ ಸಂಪ್ರೀತನಾಗಿ ಕುಯೋನಿಗಳ ಕೊಡ
ಎಲ್ಲ ಕರ್ಮಗಳು ಆನೆ ಮಾಡುವೆನೆಂಬ ಮನುಜರ ನರಕಕೆ ಐದಿಸುವ||15||

ದೇವರ್ಷಿ ಪಿತೃಪ ನರರೆನಿಸುವ ಐವರೊಳು ನೆಲೆಸಿದ್ದು
ಅವರ ಸ್ವಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ
ಭಾವಿ ಬ್ರಹ್ಮನು ಕೂರ್ಮ ರೂಪದಿ ಈ ವಿರಿಂಚಿ ಅಂಡವನು ಬೆನ್ನಿಲಿ ತಾ ವಹಿಸಿ
ಲೋಕಗಳ ಪೊರೆವನು ದ್ವಿತೀಯ ರೂಪದಲಿ||16||

ಗುಪ್ತನಾಗಿದ್ದು ಅನಿಲ ದೇವ ದ್ವಿಸಪ್ತ ಲೋಕದ ಜೀವರೊಳಗೆ
ತ್ರಿಸಪ್ತ ಸಾವಿರದ ಆರುನೂರು ಶ್ವಾಸ ಜಪಗಳನು
ಸುಪ್ತಿಸ್ವಪ್ನದಿ ಜಾಗ್ರತಿಗಳಲಿ ಆಪ್ತನಂದದಿ ಮಾಡಿ ಮಾಡಿಸಿ
ಕ್ಲುಪ್ತ ಭೋಗಗಳೀವ ಪ್ರಾಂತಕೆ ತೃತೀಯ ರೂಪದಲಿ||17||

ಶುದ್ಧ ಸತ್ವಾತ್ಮಕ ಶರೀರದೊಳಿದ್ದ ಕಾಲಕು ಲಿಂಗದೇಹವು ಬದ್ಧವಾಗದು
ದಗ್ಧ ಪಟದೋಪಾದಿ ಇರುತಿಹುದು
ಸಿದ್ಧ ಸಾಧನ ಸರ್ವರೊಳಗೆ ಅನವದ್ಯನು ಎನಿಸುವ
ಗರುಡ ಶೇಷ ಕಪರ್ದಿ ಮೊದಲಾದ ಅಮರರೆಲ್ಲರು ದಾಸರೆನಿಸುವರು||18||

ಗಣದೊಳಗೆ ತಾನಿದ್ದು ಋಜುವೆಂದು ಎನಿಸಿಕೊಂಬನು
ಕಲ್ಪ ಶತ ಸಾಧನವಗೈದ ಅನಂತರದಿ ತಾ ಕಲ್ಕಿಯೆನಿಸುವನು
ದ್ವಿನವಾಶೀತಿಯ ಪ್ರಾಂತ ಭಾಗದಿ ಅನಿಲ ಹನುಮದ್ಭೀಮ ರೂಪದಿ
ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು||19||
ವಿಶ್ವವ್ಯಾಪಕ ಹರಿಗೆ ತಾ ಸಾದೃಶ್ಯ ರೂಪವ ಧರಿಸಿ
ಬ್ರಹ್ಮ ಸರಸ್ವತೀ ಭಾರತಿಗಳಿಂದ ಒಡಗೂಡಿ ಪವಮಾನ
ಶಾಶ್ವತ ಸುಭಕ್ತಿಯಲಿ ಸುಜ್ಞಾನ ಸ್ವರೂಪನ ರೂಪಗುಣಗಳ
ಅನಶ್ವರವೆಂದೆನುತ ಪೊಗಳುವ ಶ್ರುತಿಗಳೊಳಗಿದ್ದು||20||

ಖೇಟ ಕುಕ್ಕುಟ ಜಲಟವೆಂಬ ತ್ರಿಕೋಟಿ ರೂಪವ ಧರಿಸಿ
ಸತತ ನಿಶಾಟರನು ಸಂಹರಿಸಿ ಸಲಹುವ ಸರ್ವ ಸತ್ಜನರ
ಕೈಟಭಾರಿಯ ಪುರದ ಪ್ರಥಮ ಕವಾಟವೆನಿಸುವ
ಗರುಡ ಶೇಷ ಲಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ||21||

ಈ ಋಜುಗಳೊಳಗೊಬ್ಬ ಸಾಧನ ನೂರು ಕಲ್ಪದಿ ಮಾಡಿ ಕರೆಸುವ
ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ
ಸೂರಿಗಳು ಸಂಸ್ತುತಿಸಿ ವಂದಿಸೆ ಘೋರದುರಿತಗಳನು ಅಳಿದು ಪೋಪುವು
ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ||22||

ಪಾಹಿ ಕಲ್ಕಿಸುತೇಜದಾಸನೆ ಪಾಹಿ ಧರ್ಮಾಧರ್ಮ ಖಂಡನೆ
ಪಾಹಿ ವರ್ಚಸ್ವೀ ಖಷಣ ನಮೋ ಸಾಧು ಮಹೀಪತಿಯೆ
ಪಾಹಿ ಸದ್ಧರ್ಮಜ್ಞ ಧರ್ಮಜ ಪಾಹಿ ಸಂಪೂರ್ಣ ಶುಚಿ ವೈಕೃತ
ಪಾಹಿ ಅಂಜನ ಸರ್ಷಪನೆ ಖರ್ಪಟ: ಶ್ರದ್ಧಾಹ್ವ||23||

ಪಾಹಿ ಸಂಧ್ಯಾತ ವಿಜ್ಞಾನನೆ ಪಾಹಿ ಮಹ ವಿಜ್ಞಾನ ಕೀರ್ತನ
ಪಾಹಿ ಸಂಕೀರ್ಣಾಖ್ಯ ಕತ್ಥನ ಮಹಾಬುದ್ಧಿ ಜಯಾ
ಪಾಹಿ ಮಾಹತ್ತರ ಸುವೀರ್ಯನೆ ಪಾಹಿಮಾಂ ಮೇಧಾವಿ ಜಯಾಜಯ
ಪಾಹಿಮಾಂ ರಂತಿಮ್ನಮನು ಮಾಂ ಪಾಹಿ ಮಾಂ ಪಾಹಿ||24||

ಪಾಹಿ ಮೋದ ಪ್ರಮೋದ ಸಂತಸ ಪಾಹಿ ಆನಂದ ಸಂತುಷ್ಟನೆ
ಪಾಹಿಮಾಂ ಚಾರ್ವಾಂಗಚಾರು ಸುಬಾಹುಚಾರು ಪದ
ಪಾಹಿ ಪಾಹಿ ಸುಲೋಚನನೆ ಮಾಂ ಪಾಹಿ ಸಾರಸ್ವತ ಸುವೀರನೆ
ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ||25||

ಪಾಹಿಮಾಂ ಸರ್ವಜಿತ್ ಮಿತ್ರನೆ ಪಾಹಿ ಪಾಪ ವಿನಾಶಕನೆ
ಮಾಂ ಪಾಹಿ ಧರ್ಮವಿನೇತ ಶಾರದ ಓಜ ಸುತಪಸ್ವೀ
ಪಾಹಿಮಾಂ ತೇಜಸ್ವಿ ನಮೋ ಮಾಂ ಪಾಹಿ ದಾನ ಸುಶೀಲ
ನಮೋ ಮಾಂ ಪಾಹಿ ಯಜ್ಞ ಸುಕರ್ತ ಯಜ್ವೀ ಯಾಗ ವರ್ತಕನೆ||26||

ಪಾಹಿ ಪ್ರಾಣ ತ್ರಾಣ ಅಮರ್ಷಿ ಪಾಹಿಮಾಂ ಉಪದೇಷ್ಟ ತಾರಕ
ಪಾಹಿ ಕಾಲ ಕ್ರೀಡನ ಸುಕರ್ತಾ ಸುಕಾಲಜ್ಞ
ಪಾಹಿ ಕಾಲ ಸುಸೂಚಕನೆ ಮಾಂ ಪಾಹಿ ಕಲಿ ಸಂಹರ್ತಕಲಿ
ಮಾಂ ಪಾಹಿ ಕಾಲಿಶಾಮರೇತ ಸದಾರತ ಸುಬಲನೆ||27||

ಪಾಹಿ ಪಾಹಿ ಸಹೋ ಸದಾಕಪಿ ಪಾಹಿ ಗಮ್ಯ ಜ್ಞಾನ ದಶಕುಲ
ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ
ಪಾಹಿಮಾಂ ಮಂತವ್ಯಕವ್ಯನೆ ಪಾಹಿ ದ್ರಷ್ಟವ್ಯನೆ ಸರವ್ಯನೆ
ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ||28||

ಪಾಹಿ ಸೇವ್ಯ ಸುಭವ್ಯ ನಮೋ ಮಾಂ ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ
ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ
ಪಾಹಿ ಮಂ ಲಾತವ್ಯವಾಯುವೆ ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ
ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ||29||

ವಾಮನ ಪುರಾಣದಲಿ ಪೇಳಿದ ಈ ಮಹಾತ್ಮರ ಪರಮ ಮಂಗಳ ನಾಮಗಳ
ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ
ಶ್ರೀ ಮನೋರಮ ಅವರು ಬೇಡಿದ ಕಾಮಿತಾರ್ಥಗಳಿತ್ತು
ತನ್ನ ತ್ರಿಧಾಮದೊಳಗೆ ಅನುದಿನದಲಿಟ್ಟು ಆನಂದ ಪಡಿಸುವನು||30||

ಈ ಸಮೀರಗೆ ನೂರು ಜನ್ಮ ಮಹಾ ಸುಖ ಪ್ರಾರಬ್ಧ ಭೋಗ
ಪ್ರಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು
ಭೂಸುರನ ಒಪ್ಪಿಡಿ ಅವಲಿಗೆ ವಿಶೇಷ ಸೌಖ್ಯವನಿತ್ತ ದಾತನ
ದಾಸವರ್ಯನು ಲೋಕಪತಿಯೆನಿಸುವುದು ಅಚ್ಚರವೆ||31||

ದ್ವಿಶತ ಕಲ್ಪಗಳಲ್ಲಿ ಬಿಡದೆ ಈ ಪೆಸರಿನಿಂದಲಿ ಕರೆಸಿದನು
ತನ್ನೊಶಗ ಅಮರರೊಳಿದ್ದು ಮಾಡುವನು ಅವರ ಸಾಧನವ
ಅಸದುಪಾಸನೆಗೈವ ಕಲ್ಯಾದಿ ಅಸುರಪರ ಸಂಹರಿಸಿ
ತಾ ಪೊಂಬಸಿರ ಪದವೈದಿದನು ಗುರು ಪವಮಾನ ಸತಿಯೊಡನೆ||32||

ಅನಿಮಿಷರ ನಾಮದಲಿ ಕರೆಸುವ ಅನಿಲದೇವನು
ಒಂದು ಕಲ್ಪಕೆ ವನಜ ಸಂಭವನೆನಿಸಿ ಎಂಭತ್ತೇಳೂವರೆ ವರ್ಷ
ಗುಣತ್ರಯ ವರ್ಜಿತನ ಮಂಗಳ ಗುಣ ಕ್ರಿಯಾ ಸುರೂಪಂಗಳ
ಉಪಾಸನವು ಅವ್ಯಕ್ತಾದಿ ಪೃಥ್ವಿ ಅಂತರದಿರುತಿಹುದು||33||

ಮಹಿತ ಋಜುಗಣಕೆ ಒಂದೇ ಪರಮೋತ್ಸಾಹ ವಿವರ್ಜಿತವೆಂಬ ದೋಷವು
ವಿಹಿತವೆ ಸರಿ ಇದನು ಪೇಳ್ದಿರೆ ಮುಕ್ತ ಬ್ರಹ್ಮರಿಗೆ ಬಹುದು ಸಾಮ್ಯವು
ಜ್ಞಾನ ಭಕುತಿಯು ದ್ರುಹಿಣ ಪದ ಪರ್ಯಂತ ವೃದ್ಧಿಯು
ಬಹಿರುಪಾಸನೆ ಉಂಟು ಅನಂತರ ಬಿಂಬ ದರ್ಶನವು||34||

ಜ್ಞಾನರಹಿತ ಭಯತ್ವ ಪೇಳ್ವ ಪುರಾಣ ದೈತ್ಯರ ಮೋಹಕವು
ಚತುರಾನನಗೆ ಕೊಡುವದೆ ಮೋಹಾಜ್ಞಾನ ಭಯ ಶೋಕ
ಭಾನುಮಂಡಲ ಚಲಿಸಿದಂದದಿ ಕಾಣುವುದು ದೃಗ್ ದೋಷದಿಂದಲಿ
ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ||35||

ಕಮಲಸಂಭವ ಸರ್ವರೊಳಗುತ್ತಮನೆನಿಸುವನು ಎಲ್ಲ ಕಾಲದಿ
ವಿಮಲ ಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ
ಸಮಾಭ್ಯಧಿಕ ವಿವರ್ಜಿತನ ಗುಣ ರಮೆಯ ಮುಖದಿಂದರಿತು ನಿತ್ಯದಿ
ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬ ರೂಪವನು||36||

ಜ್ಞಾನ ಭಕ್ತಾದಿ ಅಖಿಳ ಗುಣ ಚತುರಾನನೊಳಗಿಪ್ಪಂತೆ
ಮುಖ್ಯಾ ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ ಕೊರತೆಯಾಗಿ
ನ್ಯೂನ ಋಜು ಗಣ ಜೀವರಲ್ಲಿ ಕ್ರಮೇಣ ವೃದ್ಧಿ ಜ್ಞಾನ ಭಕ್ತಿ
ಸಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಾಧಿಕ||37||

ಸೌರಿ ಸೂರ್ಯನ ತೆರದಿ ಬ್ರಹ್ಮಸಮೀರ ಗಾಯತ್ರೀ ಗಿರಿಗಳೊಳು
ತೋರುವುದು ಅಸ್ಪಷ್ಟ ರೂಪದಿ ಮುಕ್ತಿ ಪರ್ಯಂತ
ವಾರಿಜಾಸನ ವಾಯು ವಾಣೀ ಭಾರತಿಗಳಿಗೆ ಮಹಾ ಪ್ರಳಯದಿ ಬಾರದು
ಅಜ್ಞಾನಾದಿ ದೋಷವು ಹರಿ ಕೃಪಾ ಬಲದಿ||38||

ನೂರು ವರುಷ ಅನಂತರದಲಿ ಸರೋರುಹಾಸನ ತನ್ನ ಕಲ್ಪದಲಿ
ಆರು ಮುಕ್ತಿಯನು ಐದುವರೊ ಅವರವರ ಕರೆದೊಯ್ದು
ಶೌರಿ ಪುರುದೊಳಗಿಪ್ಪ ನದಿಯಲಿ ಕಾರುಣಿಕ ಸುಸ್ನಾನ ನಿಜ ಪರಿವಾರ ಸಹಿತದಿ ಮಾಡಿ
ಹರಿ ಉದರ ಪ್ರವೇಶಿಸುವ||39||

ವಾಸುದೇವನ ಉದರದಲಿ ಪ್ರವೇಶಗೈದ ಅನಂತರದಿ
ನಿರ್ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ
ಮೇಶನಿಂದ ಆಜ್ಞವ ಪಡೆದು ಅನಂತಾಸನ ಸೀತದ್ವೀಪ ಮೋಕ್ಷದಿ ವಾಸವಾಗಿ
ವಿಮುಕ್ತ ದುಃಖರು ಸಂಚರಿಸುತಿಹರು||40||

ಸತ್ವ ಸತ್ವ ಮಹಾ ಸುಸೂಕ್ಷಮು ಸತ್ವ ಸತ್ವಾತ್ಮಕ ಕಳೇವರ
ಸತ್ಯಲೋಕಾಧಿಪನು ಎನಿಪಗೆ ಅತ್ಯಲ್ಪವು ಎರಡು ಗುಣ
ಮುಕ್ತ ಭೋಗ್ಯವಿದಲ್ಲ ಅಜಾಂಡ ಉತ್ಪತ್ತಿ ಕಾರಣವಲ್ಲ
ಹರಿ ಪ್ರೀತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು||41||

ಪಾದ ನ್ಯೂನ ಶತಾಬ್ದ ಪರ್ಯಂತ ಓದಿ ಉಗ್ರತಪ ಅಹ್ವಯದಿ ಲವಣ ಉದಧಿಯೊಳಗೆ
ಕಲ್ಪದಶ ತಪವಿದ್ದ ಅನಂತರದಿ
ಸಾಧಿಸಿದ ಮಹದೇವ ಪದವ ಆರೈದು ನವ ಕಲ್ಪ ಅವಸಾನಕೆ
ಐದುವನು ಶೇಷನ ಪದವ ಪಾರ್ವತಿ ಸಹಿತನಾಗಿ||42||

ಇಂದ್ರ ಮನು ದಶ ಕಲ್ಪಗಳಲಿ ಸುನಂದ ನಾಮದಿ ಶ್ರವಣಗೈದು
ಮುಕುಂದನ ಅಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು
ನೊಂದು ಪೊಗೆಯೊಳು ಕೋಟಿ ವರುಷ ಪುರಂದರನದನುಂಡ ಅನಂತರ
ಪೊಂದಿದನು ನಿಜ ಲೋಕ ಸುರಪತಿ ಕಾಮನಿದರಂತೆ||43||

ಕರೆಸುವರು ಪೂರ್ವದಲಿ ಚಂದ್ರಾರ್ಕರು ಅತಿ ಶಾಂತ ಸುರೂಪ ನಾಮದಿ
ಎರಡೆರೆಡು ಮನು ಕಲ್ಪ ಶ್ರವಣಗೈದು
ಮನು ಕಲ್ಪ ವರ ತಪೋ ಬಲದಿಂದ ಅರ್ವಾಕ್ ಶಿರಗಳಾಗಿ ಈರೈದು ಸಾವಿರ ವರುಷ
ದುಃಖವನೀಗಿ ಕಾಂಬರು ಬಿಂಬ ರೂಪವನು||44||

ಸಾಧನಗಳ ಅಪರೋಕ್ಷ ಅನಂತರ ಐದುವರು ಮೋಕ್ಷವನು
ಶಿವ ಶಕ್ರಾದಿ ದಿವಿಜರು ಉಕ್ತ ಕ್ರಮದಿಂ ಕಲ್ಪ ಸಂಖ್ಯೆಯಲಿ
ಐದಲೆಗೆ ಐವತ್ತು ಉಪೇಂದ್ರ ಸಹೋದರನಿಗಿಪ್ಪತ್ತು
ದ್ವಿನವ ತ್ವಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು||45||

ಪ್ರವಹ ಮರುತಗೆ ಹನ್ನೆರಡು ಸೈಂಧವ ದಿವಾಕರ ಧರ್ಮರಿಗೆ ದಶ
ನವ ಸುಕಲ್ಪವು ಮಿತ್ರರಿಗೆ ಶೇಷ ಶತ ಜನರಿಗೆಂಟು
ಕವಿ ಸನಕ ಸುಸನಂದನ ಸನತ್ಕುವರ ಮುನಿಗಳಿಗೆ ಏಳು
ವರುಅನನ ಯುವತಿ ಪರ್ಜನ್ಯಾದಿ ಪುಷ್ಕರಗೆ ಆರು ಕಲ್ಪದಲಿ||46||

ಐದು ಕರ್ಮಜ ಸುರರಿಗೆ ಆಜಾನಾದಿಗಳಿಗೆ ಎರಡೆರೆಡು ಕಲ್ಪ
ಅರ್ಧಾಧಿಕ ತ್ರಯ ಗೋಪಿಕಾ ಸ್ತ್ರೀಯರಿಗೆ ಪಿತೃ ತ್ರಯವು
ಈ ದಿವೌಕಸ ಮನುಜ ಗಾಯಕರು ಐದುವರು ಎರಡೊಂದು ಕಲ್ಪ
ನರಾಧಿಪರಿಗೆ ಅರೆ ಕಲ್ಪದೊಳಗೆ ಅಪರೋಕ್ಷವು ಇರುತಿಹುದು||47||

ದೀಪಗಳ ಅನುಸರಿಸಿ ದೀಪ್ತಿಯು ವ್ಯಾಪಿಸಿ ಮಹಾತಿಮಿರ ಕಳೆದು
ಪರೋಪಕಾರವ ಮಾಳ್ಪ ತೆರದಂದದಲಿ ಪರಮಾತ್ಮ
ಆ ಪಯೋಜಾಸನನೊಳಗಿದ್ದು ಸ್ವರೂಪ ಶಕ್ತಿಯ ವ್ಯಕ್ತಿಗೈಸುತ
ತಾ ಪೊಳೆವನು ಅವರಂತೆ ಚೇಷ್ಟೆಯ ಮಾಡಿ ಮಾಡಿಸುವ||48||

ಸ್ವೋದರಸ್ಥಿತ ಪ್ರಾಣ ರುದ್ರ ಇಂದ್ರಾದಿ ಸುರರಿಗೆ ದೇಹಗಳ ಕೊಟ್ಟು
ಆದರದಿ ಅವರವರ ಸೇವೆಯ ಕೊಂಬನು ಅನವರತ
ಮೋದ ಬೋಧ ದಯಾಬ್ಧಿ ತನ್ನವರಾಧಿ ರೋಗವ ಕಳೆದು
ಮಹಾದಪರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ||49||

ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ ಸ್ಥಿತಿ ಲಯವ ಮಾಡುತಲೆ ಮೋದಿಪ
ಚತುರಮುಖ ಪವಮಾನರ ಅನ್ನವ ಮಾಡಿ ಭುಂಜಿಸುವ
ಘೃತವೆ ಮೃತ್ಯುಂಜಯನೆನಿಪ ದೇವತೆಗಳೆಲ್ಲ ಉಪಸೇಚನರು
ಶ್ರೀಪತಿಗೆ ಮೂರ್ಜಗವೆಲ್ಲ ಓದನ ಅತಿಥಿಯೆನಿಸಿಕೊಂಬ||50||

ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಲಿ
ನಿರ್ಭಯನು ತಾನುಂಡು ಉಣಿಸುವನು ಸರ್ವ ಜೀವರಿಗೆ
ನಿರ್ಬಲಾತಿ ಪರಮಾಣು ಜೀವಗೆ ಅಬ್ಬುವದೆ ಸ್ಥೂಲಾನ್ನ ಭೋಜನ
ಅರ್ಭಕರು ಪೇಳುವರು ಕೋವಿದರು ಇದನ ಒಡಂಬಡರು||51||

ಅಪಚಯಗಳಿಲ್ಲ ಉಂಡುದುದರಿಂದ ಉಪಚಯಗಳಿಲ್ಲ
ಅಮರಗಣದೊಳಗೆ ಉಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ
ಅಪರಿಮಿತ ಸನ್ಮಹಿಮ ಭಕ್ತರ ಅಪುನರಾವರ್ತರನು ಮಾಡುವ
ಕೃಪಣ ವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ||52||

ಬಿತ್ತಿ ಬೀಜವು ಭೂಮಿಯೊಳು ನೀರೆತ್ತಿ ಬೆಳೆಸಿದ ಬೆಳಸು ಪ್ರಾಂತಕೆ
ಕಿತ್ತಿ ಮೆಲುವಂದದಲಿ ಲಕ್ಷ್ಮೀ ರಮಣ ಲೋಕಗಳ ಮತ್ತೆ ಜೀವರ
ಕರ್ಮ ಕಾಲೋತ್ಪತ್ತಿ ಸ್ಥಿತಿ ಲಯ ಮಾಡುತಲಿ
ಸಮವರ್ತಿಯೆನಿಸುವ ಖೇದ ಮೋದಗಳು ಇಲ್ಲ ಅನವರತ||53||

ಶ್ವಸನ ರುದ್ರ ಇಂದ್ರ ಪ್ರಮುಖ ಸುಮನಸರೊಳಿದ್ದರು
ಕ್ಷುತ್ಪಿಪಾಸಗಳು ವಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ
ಅಸುರ ಪ್ರೇತ ಪಿಶಾಚಿಗಳ ಭಾದಿಸುತಲಿಪ್ಪವು
ದಿನದಿನದಿ ಮಾನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು||54||

ವಾಸುದೇವಗೆ ಸ್ವಪ್ನಸುಪ್ತಿಪಿಪಾಸ ಕ್ಷುತ್ ಭಯ ಶೋಕ ಮೋಹ ಆಯಾಸ ಅಪಸ್ಮೃತಿ
ಮಾತ್ಸರ್ಯ ಮದ ಪುಣ್ಯ ಪಾಪಾದಿ ದೋಷ ವರ್ಜಿತನೆಂದು
ಬ್ರಹ್ಮ ಸದಾಶಿವಾದಿ ಸಮಸ್ತ ದಿವಿಜರು ಉಪಾಸನೆಯಗೈದು
ಎಲ್ಲ ಕಾಲದಿ ಮುಕ್ತರಾಗಿಹರು||55||

ಪರಮ ಸೂಕ್ಷ್ಮ ಕ್ಷಣವು ಐದು ತ್ರುಟಿ ಕರೆಸುವದು ಐವತ್ತು ತ್ರುಟಿ ಲವ
ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರ
ಯುಗ ಗುರು ದಶ ಪ್ರಾಣರು ಪಳ ಹನ್ನೆರಡು ಬಾಣವು
ಘಟಿಕ ತ್ರಿಂಶತಿ ಇರುಳು ಹಗಲು ಅರವತ್ತು ಘಟಿಕಗಳು ಅಹೊರಾತ್ರಿಗಳು||56||

ಈ ದಿವಾರಾತ್ರಿಗಳು ಎರಡು ಹದಿನೈದು ಪಕ್ಷಗಳು
ಎರಡು ಮಾಸಗಳು ಆದಪವು ಮಾಸ ದ್ವಯವೆ ಋತು ಋತುತ್ರಯಗಳು ಅಯನ
ಐದುವದು ಅಯನದ್ವಯಾಬ್ದ ಕೃತಾದಿ ಯುಗಗಳು
ದೇವ ಮಾನದಿ ದ್ವಾದಶ ಸಹಸ್ರ ವರುಷಗಳು ಅದನು ಪೇಳುವೆನು||57||

ಚತುರ ಸಾವಿರದ ಎಂಟು ನೂರಿವು ಕೃತ ಯುಗಕೆ
ಸಹಸ್ರ ಸಲೆ ಷಟ್ ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು
ದಿತಿಜಪತಿ ಕಲಿಯುಗಕೆ ಸಾವಿರ ಶತ ದ್ವಯಗಳು ಕೂಡಿ
ಈ ದೇವತೆಗಳಿಗೆ ಹನ್ನೆರಡು ಸಾವಿರ ವಿಹವು ವರ್ಷಗಳು||58||

ಪ್ರಥಮ ಯುಗಕೆ ಏಳಧಿಕ ಅರೆ ವಿಂಶತಿ ಸುಲಕ್ಷಾಷ್ಟೋತ್ತರ
ಸುವಿಂಶತಿ ಸಹಸ್ರ ಮನುಷ್ಯ ಮಾನಾಬ್ದಗಳು
ಷಣ್ಣವತಿ ಮಿತ ಸಹಸ್ರದ ಲಕ್ಷ ದ್ವಾದಶ ದ್ವಿತೀಯ
ತೃತೀಯಕೆ ಎಂಟು ಲಕ್ಷದ ಚತುರ ಷಷ್ಠಿ ಸಹಸ್ರ ಕಾಲಿಗೆ ಇದರರ್ಧ ಚಿಂತಿಪುದು||59||

ಮೂರಧಿಕ ನಾಲ್ವತ್ತು ಲಕ್ಷದ ಆರು ಮೂರೆರೆಡಧಿಕ ಸಾವಿರ
ಈರೆರೆಡು ಯುಗ ವರುಷ ಸಂಖ್ಯೆಗೈಯಲು ಇನಿತಿಹುದೊ
ಸೂರಿ ಪೆಚ್ಚಿಸೆ ಸಾವಿರದ ನಾನೂರು ಮೂವತ್ತೆರೆಡು ಕೋಟಿ
ಸರೋರುಹಾಸನಗೆ ಇದು ದಿವಸವು ಎಂಬರು ವಿಪಶ್ಚಿತರು||60||

ಶತಧೃತಿಗೆ ಈ ದಿವಸಗಳು ತ್ರಿಂಶತಿಯು ಮಾಸ ದ್ವಾದಶಾಬ್ದವು
ಶತವು ಎರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿ ಲಯವು
ಶೃತಿ ಸ್ಮೃತಿಗಳು ಪೇಳುತಿಹವು ಅಚ್ಯುತಗೆ ನಿಮಿಷವಿದೆಂದು
ಸುಖ ಶಾಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು||61||

ಆದಿ ಮಧ್ಯಾಂತರಗಳಿಲ್ಲದ ಮಾಧವಗಿದು ಉಪಚಾರವೆಂದು
ಋಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ
ಮೋದಮಯನ ಅನುಗ್ರಹವ ಸಂಪಾದಿಸಿ ರಮಾ ಬ್ರಹ್ಮ ರುದ್ರ ಇಂದ್ರಾದಿಗಳು
ತಮ್ಮ ತಮ್ಮ ಪದವಿಯನು ಐದಿ ಸುಖಿಸುವರು||62||

ಈ ಕಥಾಮೃತ ಪಾನ ಸುಖ ಸುವಿವೇಕಿಗಳಿಗಲ್ಲದಲೆ
ವೈಷಿಕ ವ್ಯಾಕುಲ ಕುಚಿತ್ತರಿಗೆ ದೊರೆವುದಾವ ಕಾಲದಲಿ
ಲೋಕ ವಾರ್ತೆಯ ಬಿಟ್ಟು ಇದನವಲೋಕಿಸುತ ಮೋದಿಪರಿಗೊಲಿದು
ಕೃಪಾಕರ ಜಗನ್ನಾಥ ವಿಠಲ ಪೊರೆವನು ಅನುದಿನದಿ||63||

harikathAmRutasAra gurugaLa karuNadindApanitu kELuve/
parama BagavadBaktaru idanAdaradi kELuvudu||

EkaviMSati mata pravartaka kAku mAygaLa kuhaka yukti nirAkarisi
sarvOttamanu hariyeMdu sthApisida
SrI kaLatrana sadana dvijapa pinAki sannuta mahima
parama kRupAkaTAkShadi nODu madhvAcArya guruvarya||1||

vEda modalAgippa amala mOkSha adhikArigaLu Ada jIvara
sAdhanagaLa aparOkSha naMtara linga Bangavanu
sAdhugaLu cittaipadu ennaparAdhagaLa nODadale
cakra gadAdharanu pELisida teradandadali pELuvenu||2||

tRuNa krimi dvija paSu narOttama janapa naragandharva gaNaru
ivareniparu aMSa vihIna karma suyOgigaLendu
tanu pratIkadi biMbana upAsanavagaiyuta indriyaja karma
anavarata harige arpisuta nirmamaruyenisuvaru||3||

ELuvidha jIva gaNa bahaLa surALi sanKyA nEmavuLLadu
tALi naradEhavanu brAhmaNara kuladoLudBavisi
sthUla karmava toredu gurugaLu pELida arthava tiLidu
tattatkAla dharma samarpisuva avaru karma yOgigaLu||4||

hIna karmagaLinda bahuvidha yOniyali saMcarisi prAMtake
mAnuShatvavanaidi sarvOttamanu hariyeMba
j~jAna BaktigaLinda vEdOkta anusAra sahasrajanma
anyUna karmava mADi harigarpisida nantaradi||5||

hattu janmagaLali hari sarvOttamanu surAsura gaNArcita
citra karma viSOka anantAnanta rUpAtma
satya satsankalpa jagadOtpatti sthitilaya kAraNa
jarAmRutyu varjitanendu upAsanegaida taruvAya||6||

mUru janmagaLalli dEhAgAra paSu dhana patni mitra
kumAra mAtA pitRugaLalli iha snEhaginta adhika
mAramaNanali biDade mADuva sUrigaLu I ukta janmava mIri
paramAtmana svadEhadi nODi suKisuvaru||7||

dEva gAyaka ajAna cirapitRu dEvarellaru
j~jAna yOgigaLu Ava kAlaku puShkara SanaiScara uShA svAhA dEvi
budhasanakAdigaLu mEGAvaLi parjanya sAMSaru
I uBaya gaNadoLagivaru vij~jAna yOgigaLu||8||

Barata KanDadi nUru janmava dharisi niShkAmaka sukarma Acarisida anantaradi
daSa sahasra janmadali urutara j~jAnavanu
mUraidu eraDu daSa dEhadali Baktiya
niravadhikanali mADi kAMbaru biMba rUpavanu||9||

sAdhanAtpUrvadali ivarige anAdi kAla aparOkShavilla
niShEdha karmagaLilla naraka prApti modalilla
vEda SAstragaLallippa virOdha vAkyava pariharisi
madhusUdanane sarvOttamOttamanu endu tutisuvaru||10||

satyalOkAdhipana viDidu Satastha dEvagaNa anta ellaru
Bakti yOgigaLendu karesuvaru Ava kAladali
Bakti yOgyara madhyadali sadBakti vij~jAnAdi guNadinda uttama
uttama brahma vAyU vANi vAgdEvi||11||

RujugaNake Bakti Adi guNa sahajavu enisuvavu
kramadi vRuddhi abjaja padavi paryanta biMba upAsanavu adhika
vRujina varjita ellaroLu triguNaja vikAragaLillavu endigu
dvijaPaNipa mRuDa Sakra modalAda avaroLu irutihavu||12||

sAdhanAtpUrvadali I RujvAdi sAtvikaru enipa suragaNa
anAdi sAmAnya aparOkShigaLendu karesuvaru
sAdhanOttara svasva biMba upAdhi rahita Adityanandadi
sAdaradi nODuvaru adhikAra anusAradali||13||

Cinna Baktaru enisutiharu suparNa SEShAdi amarararella
accinna Baktaru nAlvareniparu BAratI prANa sonnoDala vAgdEviyaru
paNegaNNa modalAda avaroLage tattanniyAmakarAgi
vyApAravanu mADuvaru||14||

hIna satkarmagaLu eraDu pavamAna dEvanu mALpanu
idake anumAnavilla endu enuta dRuDha Baktiyali Bajiparge
prANapati saMprItanAgi kuyOnigaLa koDa
ella karmagaLu Ane mADuveneMba manujara narakake aidisuva||15||

dEvarShi pitRupa nararenisuva aivaroLu nelesiddu
avara svaBAva karmava mADi mADipa ondu rUpadali
BAvi brahmanu kUrma rUpadi I virinci anDavanu bennili tA vahisi
lOkagaLa porevanu dvitIya rUpadali||16||

guptanAgiddu anila dEva dvisapta lOkada jIvaroLage
trisapta sAvirada ArunUru SvAsa japagaLanu
suptisvapnadi jAgratigaLali Aptanandadi mADi mADisi
klupta BOgagaLIva prAntake tRutIya rUpadali||17||

Suddha satvAtmaka SarIradoLidda kAlaku lingadEhavu baddhavAgadu
dagdha paTadOpAdi irutihudu
siddha sAdhana sarvaroLage anavadyanu enisuva
garuDa SESha kapardi modalAda amararellaru dAsarenisuvaru||18||

gaNadoLage tAniddu RujuveMdu enisikoMbanu
kalpa Sata sAdhanavagaida anantaradi tA kalkiyenisuvanu
dvinavASItiya prAnta BAgadi anila hanumadBIma rUpadi
danujarellara sadedu madhvAcAryarenisidanu||19||

viSvavyApaka harige tA sAdRuSya rUpava dharisi
brahma sarasvatI BAratigaLinda oDagUDi pavamAna
SASvata suBaktiyali suj~jAna svarUpana rUpaguNagaLa
anaSvaravendenuta pogaLuva SrutigaLoLagiddu||20||

KETa kukkuTa jalaTaveMba trikOTi rUpava dharisi
satata niSATaranu saMharisi salahuva sarva satjanara
kaiTaBAriya purada prathama kavATavenisuva
garuDa SESha lalATalOcana muKya surarige AvakAladali||21||

I RujugaLoLagobba sAdhana nUru kalpadi mADi karesuva
cArutara mangaLa sunAmadi kalpa kalpadali
sUrigaLu saMstutisi vandise GOraduritagaLanu aLidu pOpuvu
mAramaNa saMprItanAguva sarva kAladali||22||

pAhi kalkisutEjadAsane pAhi dharmAdharma KanDane
pAhi varcasvI KaShaNa namO sAdhu mahIpatiye
pAhi saddharmaj~ja dharmaja pAhi saMpUrNa Suci vaikRuta
pAhi aMjana sarShapane KarpaTa: SraddhAhva||23||

pAhi saMdhyAta vij~jAnane pAhi maha vij~jAna kIrtana
pAhi saMkIrNAKya katthana mahAbuddhi jayA
pAhi mAhattara suvIryane pAhimAM mEdhAvi jayAjaya
pAhimAM rantimnamanu mAM pAhi mAM pAhi||24||

pAhi mOda pramOda santasa pAhi Ananda santuShTane
pAhimAM cArvAngacAru subAhucAru pada
pAhi pAhi sulOcanane mAM pAhi sArasvata suvIrane
pAhi prAj~ja kapi alaMpaTa pAhi sarvaj~ja||25||

pAhimAM sarvajit mitrane pAhi pApa vinASakane
mAM pAhi dharmavinEta SArada Oja sutapasvI
pAhimAM tEjasvi namO mAM pAhi dAna suSIla
namO mAM pAhi yaj~ja sukarta yajvI yAga vartakane||26||

pAhi prANa trANa amarShi pAhimAM upadEShTa tAraka
pAhi kAla krIDana sukartA sukAlaj~ja
pAhi kAla susUcakane mAM pAhi kali saMhartakali
mAM pAhi kAliSAmarEta sadArata subalane||27||

pAhi pAhi sahO sadAkapi pAhi gamya j~jAna daSakula
pAhimAM SrOtavya namO sankIrtitavya namO
pAhimAM mantavyakavyane pAhi draShTavyane saravyane
pAhi gantavya namO kravyane pAhi smartavya||28||

pAhi sEvya suBavya namO mAM pAhi svargavya namO BAvyane
pAhi mAM j~jAtavya namO vaktavya gavya namO
pAhi maM lAtavyavAyuve pAhi brahma brAhmaNapriya
pAhi pAhi sarasvatIpatE jagadguruvarya||29||

vAmana purANadali pELida I mahAtmara parama mangaLa nAmagaLa
saMprIti pUrvaka nitya smarisuvavarA
SrI manOrama avaru bEDida kAmitArthagaLittu
tanna tridhAmadoLage anudinadaliTTu Ananda paDisuvanu||30||

I samIrage nUru janma mahA suKa prArabdha BOga
prayAsavillade aididanu lOkAdhipatyavanu
BUsurana oppiDi avalige viSESha sauKyavanitta dAtana
dAsavaryanu lOkapatiyenisuvudu accarave||31||

dviSata kalpagaLalli biDade I pesarinindali karesidanu
tannoSaga amararoLiddu mADuvanu avara sAdhanava
asadupAsanegaiva kalyAdi asurapara saMharisi
tA poMbasira padavaididanu guru pavamAna satiyoDane||32||

animiShara nAmadali karesuva aniladEvanu
ondu kalpake vanaja saMBavanenisi eMBattELUvare varSha
guNatraya varjitana mangaLa guNa kriyA surUpangaLa
upAsanavu avyaktAdi pRuthvi antaradirutihudu||33||

mahita RujugaNake ondE paramOtsAha vivarjitaveMba dOShavu
vihitave sari idanu pELdire mukta brahmarige bahudu sAmyavu
j~jAna Bakutiyu druhiNa pada paryanta vRuddhiyu
bahirupAsane unTu anantara biMba darSanavu||34||

j~jAnarahita Bayatva pELva purANa daityara mOhakavu
caturAnanage koDuvade mOhAj~jAna Baya SOka
BAnumanDala calisidandadi kANuvudu dRug dOShadindali
SrInivAsana prItigOsuga tOrdanalladale||35||

kamalasaMBava sarvaroLaguttamanenisuvanu ella kAladi
vimala Bakti j~jAna vairAgyAdi guNadinda
samAByadhika vivarjitana guNa rameya muKadindaritu nityadi
dyumaNi kOTigaLante kAMbanu biMba rUpavanu||36||

j~jAna BaktAdi aKiLa guNa caturAnanoLagippaMte
muKyA prANanali cintipudu yatkiMcit korateyAgi
nyUna Ruju gaNa jIvaralli kramENa vRuddhi j~jAna Bakti
samAna BArati vANigaLali pada prayuktAdhika||37||

sauri sUryana teradi brahmasamIra gAyatrI girigaLoLu
tOruvudu aspaShTa rUpadi mukti paryanta
vArijAsana vAyu vANI BAratigaLige mahA praLayadi bAradu
aj~jAnAdi dOShavu hari kRupA baladi||38||

nUru varuSha anantaradali sarOruhAsana tanna kalpadali
Aru muktiyanu aiduvaro avaravara karedoydu
Sauri purudoLagippa nadiyali kAruNika susnAna nija parivAra sahitadi mADi
hari udara pravESisuva||39||

vAsudEvana udaradali pravESagaida anantaradi
nirdOSha muktaru udaradiM poramaTTu haruShadali
mESaniMda Aj~java paDedu anantAsana sItadvIpa mOkShadi vAsavAgi
vimukta duHKaru sancarisutiharu||40||

satva satva mahA susUkShamu satva satvAtmaka kaLEvara
satyalOkAdhipanu enipage atyalpavu eraDu guNa
mukta BOgyavidalla ajAnDa utpatti kAraNavalla
hari prItyarthavAgI jagada vyApAragaLa mADuvanu||41||

pAda nyUna SatAbda paryanta Odi ugratapa ahvayadi lavaNa udadhiyoLage
kalpadaSa tapavidda anantaradi
sAdhisida mahadEva padava Araidu nava kalpa avasAnake
aiduvanu SEShana padava pArvati sahitanAgi||42||

indra manu daSa kalpagaLali sunanda nAmadi SravaNagaidu
mukundana aparOkShArtha nAlku sukalpa tapaviddu
nondu pogeyoLu kOTi varuSha purandaranadanunDa anantara
pondidanu nija lOka surapati kAmanidaraMte||43||

karesuvaru pUrvadali chandrArkaru ati SAnta surUpa nAmadi
eraDereDu manu kalpa SravaNagaidu
manu kalpa vara tapO baladinda arvAk SiragaLAgi Iraidu sAvira varuSha
duHKavanIgi kAMbaru biMba rUpavanu||44||

sAdhanagaLa aparOkSha anantara aiduvaru mOkShavanu
Siva SakrAdi divijaru ukta kramadiM kalpa sanKyeyali
aidalege aivattu upEndra sahOdaranigippattu
dvinava tvagAdhipati prANanige guru manugaLige ShODaSavu||45||

pravaha marutage hanneraDu saindhava divAkara dharmarige daSa
nava sukalpavu mitrarige SESha Sata janarigenTu
kavi sanaka susanandana sanatkuvara munigaLige ELu
varu^^anana yuvati parjanyAdi puShkarage Aru kalpadali||46||

aidu karmaja surarige AjAnAdigaLige eraDereDu kalpa
ardhAdhika traya gOpikA strIyarige pitRu trayavu
I divaukasa manuja gAyakaru aiduvaru eraDondu kalpa
narAdhiparige are kalpadoLage aparOkShavu irutihudu||47||

dIpagaLa anusarisi dIptiyu vyApisi mahAtimira kaLedu
parOpakArava mALpa teradandadali paramAtma
A payOjAsananoLagiddu svarUpa Saktiya vyaktigaisuta
tA poLevanu avarante cEShTeya mADi mADisuva||48||

svOdarasthita prANa rudra indrAdi surarige dEhagaLa koTTu
Adaradi avaravara sEveya koMbanu anavarata
mOda bOdha dayAbdhi tannavarAdhi rOgava kaLedu
mahAdaparAdhagaLa nODadale salahuva satata smarisuvara||49||

prati pratI kalpadali sRuShTi sthiti layava mADutale mOdipa
caturamuKa pavamAnara annava mADi Bunjisuva
GRutave mRutyunjayanenipa dEvategaLella upasEcanaru
SrIpatige mUrjagavella Odana atithiyenisikoMba||50||

garBiNi strI unDa BOjana garBagata SiSu uMba teradali
nirBayanu tAnunDu uNisuvanu sarva jIvarige
nirbalAti paramANu jIvage abbuvade sthUlAnna BOjana
arBakaru pELuvaru kOvidaru idana oDaMbaDaru||51||

apacayagaLilla unDududarinda upacayagaLilla
amaragaNadoLage upamarenisuvarilla janmAdigaLu modalilla
aparimita sanmahima Baktara apunarAvartaranu mADuva
kRupaNa vatsala svapada sauKyavanittu SaraNarige||52||

bitti bIjavu BUmiyoLu nIretti beLesida beLasu prAntake
kitti meluvandadali lakShmI ramaNa lOkagaLa matte jIvara
karma kAlOtpatti sthiti laya mADutali
samavartiyenisuva KEda mOdagaLu illa anavarata||53||

Svasana rudra indra pramuKa sumanasaroLiddaru
kShutpipAsagaLu vaSadoLippavu sakala BOgake sAdhanagaLAgi
asura prEta piSAcigaLa BAdisutalippavu
dinadinadi mAnisaroLage mRuga pakShi jIvaroLiddu pOguvavu||54||

vAsudEvage svapnasuptipipAsa kShut Baya SOka mOha AyAsa apasmRuti
mAtsarya mada puNya pApAdi dOSha varjitanendu
brahma sadASivAdi samasta divijaru upAsaneyagaidu
ella kAladi muktarAgiharu||55||

parama sUkShma kShaNavu aidu truTi karesuvadu aivattu truTi lava
eraDu lavavu nimiSha nimiShagaLenTu mAtra
yuga guru daSa prANaru paLa hanneraDu bANavu
GaTika triMSati iruLu hagalu aravattu GaTikagaLu ahorAtrigaLu||56||

I divArAtrigaLu eraDu hadinaidu pakShagaLu
eraDu mAsagaLu Adapavu mAsa dvayave Rutu RututrayagaLu ayana
aiduvadu ayanadvayAbda kRutAdi yugagaLu
dEva mAnadi dvAdaSa sahasra varuShagaLu adanu pELuvenu||57||

catura sAvirada enTu nUrivu kRuta yugake
sahasra sale ShaT Satavu trEtage dvAparake dvisahasra nAnUru
ditijapati kaliyugake sAvira Sata dvayagaLu kUDi
I dEvategaLige hanneraDu sAvira vihavu varShagaLu||58||

prathama yugake ELadhika are viMSati sulakShAShTOttara
suviMSati sahasra manuShya mAnAbdagaLu
ShaNNavati mita sahasrada lakSha dvAdaSa dvitIya
tRutIyake enTu lakShada catura ShaShThi sahasra kAlige idarardha cintipudu||59||

mUradhika nAlvattu lakShada Aru mUrereDadhika sAvira
IrereDu yuga varuSha sanKyegaiyalu initihudo
sUri peccise sAvirada nAnUru mUvattereDu kOTi
sarOruhAsanage idu divasavu eMbaru vipaScitaru||60||

SatadhRutige I divasagaLu triMSatiyu mAsa dvAdaSAbdavu
Satavu eraDaroLu sarva jIvOtpatti sthiti layavu
SRuti smRutigaLu pELutihavu acyutage nimiShavidendu
suKa SASvatage pAsaTiyeMbuvare brahmAdi divijaranu||61||

Adi madhyAntaragaLillada mAdhavagidu upacAravendu
RugAdi vEda purANagaLu pELuvavu nityadali
mOdamayana anugrahava saMpAdisi ramA brahma rudra indrAdigaLu
tamma tamma padaviyanu aidi suKisuvaru||62||

I kathAmRuta pAna suKa suvivEkigaLigalladale
vaiShika vyAkula kucittarige dorevudAva kAladali
lOka vArteya biTTu idanavalOkisuta mOdiparigolidu
kRupAkara jagannAtha viThala porevanu anudinadi||63||

4 thoughts on “Kalpa sadhana sandhi/Aparoksha Taratamya sandhi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s