jagannatha dasaru · MADHWA · ugabhoga

Ugabhogagalu by Sri Jagannatha dasaru

ಆರು ವಂದಿಸಲೇನು ಆರು ನಿಂದಿಸಲೇನು
ಆರು ಶಾಪಿಸಲೇನು ಆರು ಕೋಪಿಸಲೇನು
ಆರು ಮುನಿದು ಮಾತನಾಡದಿದ್ದರೆ ಏನು
ಮಾರುತಾಂತರ್ಯಾಮಿ ಜಗನ್ನಾಥವಿಠಲನ
ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ
ಆರು ವಂದಿಸಲೇನು ಆರು ನಿಂದಿಸಲೇನು ?

Āru vandisalēnu āru nindisalēnu
āru śāpisalēnu āru kōpisalēnu
āru munidu mātanāḍadiddare ēnu
mārutāntaryāmi jagannāthaviṭhalana
kāruṇyapātrara karuṇavennoḷagire
āru vandisalēnu āru nindisalēnu?


ಅನಘನೆಂದೊಮ್ಮೆ ನೆನೆದ ಮಾನವ ಪಾಪ-
ವನದಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲ ಅವನೇ
ಸಜ್ಜನ ಶಿರೋಮಣಿ ಕಾಣೋ  ಸರ್ವರೊಳು
ಜನಕ  ಜನನಿ ಮೊದಲಾದ ನೂರೊಂದು ಕುಲವ
ಪಾವನ ಮಾಡುವನು ಪ್ರತಿದಿನದಲಿ
ವನಿತಾದಿ ವಿಷಯಂಗಳನುಭವಿಸುತz ತನ್ನ
ಮನೆಯೊಳಿರಲವ ಜೀವನ್ಮುಕ್ತನೋ
ಸನಕಾದಿಮುನಿಗಳ  ಮನಕೆ ನಿಲುಕದಿಪ್ಪ
ಘನಮಹಿಮನೇ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠಲರೇಯ
ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ

Anaghanendom’me neneda mānava pāpa-
vanadi dāṭuva bahuvēgadinda
janana maraṇa bhayavinitilla avanē
sajjana śirōmaṇi kāṇō  sarvaroḷu
janaka  janani modalāda nūrondu kulava
pāvana māḍuvanu pratidinadali
vanitādi viṣayaṅgaḷanubhavisutaz tanna
maneyoḷiralava jīvanmuktanō
sanakādimunigaḷa  manake nilukadippa
ghanamahimanē bandu kuṇiva munde
hanumavandita jagannāthaviṭhalarēya
animitta bandhu tā āvāva kāladalli

 

 

dasara padagalu · jagannatha dasaru · MADHWA · yamuna

Dasara padagalu on Yamuna

ಯಮುನೇ ದುರಿತೋಪಶಮನೇ ||pa||

ಕರ್ಮ ಪರಿಹರಿಸು ಖಳದಮನೆ ದಯವಂತೆ ||a.pa||

ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ
ಕರತನಯೆ ಸಪ್ತಸಾಗರ ಭೇದಿನೀ
ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ
ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ ||1||

ಮಕರಾದಿ ಮಾಸದಲಿ ವಿಖನಸಾವರ್ತ ದೇ
ಶಕೆ ಬಂದು ವಿಜ್ಞಾನ  ಭಕುತಿಯಿಂದಾ
ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ
ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ ||2||

ಕನಕಗರ್ಭಾವರ್ತವೆನಿಪ ದೇಶದಲಿ ಸ
ಜ್ಜನರ ಪಾಲಿಪೆನೆಂಬ ಅನುರಾಗದಿ
ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ
ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ ||3||

ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ
ಶ್ರಮದ ತ್ರಿವೇಣಿ ಸಂಗಮದಿ ರಚಿಸಿ
ತಮ ತಮ್ಮೊಳಗೆ ರಮಾರಮಣ ದಾಮೋದರನ
ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು||4||

ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು
ಕಂಗೊಳಿಸು ಎನ್ನಂತರಂಗದಲ್ಲಿ
ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು
ಣಂಗಳ ತುತಿಪುದಕೆ ಮಂಗಳ ಮತಿಯನೀಯೇ ||5||’

yamunE duritOpaSamanE ||pa||

karma pariharisu KaLadamane dayavaMte ||a.pa||

SaraNeMbe tava pAdAMburuha yugaLige divA
karatanaye saptasAgara BEdinI
haritOSha lABa sundari suBage ninna san
daruSanake bande Baktara pAlipudu janani ||1||

makarAdi mAsadali viKanasAvarta dE
Sake baMdu vij~jAna BakutiyindA
trikaraNada Suddhiyali sakRuta snAnada gaiye
sakala suKavittu dEvakIsutana tOrisuve ||2||

kanakagarBAvartavenipa dESadali sa
jjanara pAlipeneMba anurAgadi
praNavapAdyage vimala muniyante niruta kuM
BiNiyoLage sarasvati dyunadiyaMdadi merede ||3||

jamadagni muKya saMyamigaLanudinadi A
Sramada trivENi sangamadi racisi
tama tammoLage ramAramaNa dAmOdarana
sumahimegaLanu pogaLutamita mOdadaliharu||4||

pingaLAdhiShThite SuBAngi sumanavanittu
kangoLisu ennantarangadalli
tunga sumahima jagannAtha viThalana sugu
NangaLa tutipudake mangaLa matiyanIyE ||5||

dasara padagalu · jagannatha dasaru · MADHWA · vyasathathvagnya thirtharu

Dasara pada on Sri vyasathathvagna thirtharu

ಕೃತ ಕೃತ್ಯನಾದೆನಿಂದಿನ ದಿನದೊಳು
ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ||pa||

ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ
ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ
ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ
ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು ||1||

ಷಣ್ಣವತ್ಯಬ್ಧ ಪರಿಯಂತ ಹರಿಮಹಿಮೆಗಳ
ಸನ್ನುತಿಯಲೀ ಶ್ರುತಿಸ್ಮøತಿಗಳಿಂದ
ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ
ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು ||2||

ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು
ಜ್ಞಾನಿಗಳು ದುರ್ಲಭರು ಕಲಿಯುಗದಲಿ
ಆನತೇಷ್ಟಪ್ರದ ಜಗನ್ನಾಥ ವಿಠಲ
ತಾನೆ ಕರೆತಂದು ತೋರಿ ಪುನೀತನ ಮಾಡ್ದ ||3||

kRuta kRutyanAdenindina dinadoLu
kShitisuta venkaTarAmAryarana kaMDu ||pa||

BUmanDaladoLuLLa sakala tIrthasnAna
hEmAdri modalAda kShEtra yAtre
nEma japatapa vratAdigaLa mADida puNya
I mahAtmara kanDa mAtra samanisitu ||1||

ShaNNavatyabdha pariyanta harimahimegaLa
sannutiyalI SrutismaøtigaLinda
dhanyarendenisi mahiyoLage pUritarAda
puNyacaritara divya pAdavane nA kaMDu ||2||

hIna janarE bahaLa kShONiya mEle su
j~jAnigaLu durlaBaru kaliyugadali
AnatEShTaprada jagannAtha viThala
tAne karetaMdu tOri punItana mADda ||3||


ಆವ ಜನುಮದ ಸುಕೃತ ಫಲಿಸಿತೆನಗೆ
ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ||pa||

ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ
ನಾವಲೋಕನದಿ ಪೇಳ್ವರು ನಿತ್ಯದಿ
ದೇವಾಂಶರಿವರು ಸಂಶಯವು ಬಡಸಲ್ಲ ಮಾ
ಯಾ ವಲ್ಲಭನು ಇವರ ಹೃದಯದೊಳಗಿರುತಿಪ್ಪ ||1||

ಕವಿ ಭರಿಡಿತ ಮಹಾಮುನಿ ವ್ಯಾಸಕೃತ ಸುಭಾ
ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ
ಭುವನೇಂದ್ರರಾಯರ ಕರುಣದಲಿ ತುರೀಯಾ ಶ್ರ
ಮನವಿತ್ತು ವ್ಯಾಸತತ್ವಜ್ಞ ರಹುದೆಂದು ||2||

ಈ ಜಗತ್ರಯ ದೊಳಗೆ ಪೂಜ್ಯ ಪೂಜಕರ ನಿ
ವ್ರ್ಯಾಜದಲಿ ತಳುಪಿದನು ಭಕ್ತಜನಕೆ
ಶ್ರೀ ಜಗನ್ನಾಥ ವಿಠಲನೊಬ್ಬ ಪೂಜ್ಯ ಪಂ
ಕೇಜ ಭವ ಭವರು ಪೂಜಕರೆಂಬುವರ ನೋಡ್ಡೆ ||3||
Ava janumada sukRuta Palisitenage
kOvidAgraNi vyAsatatvaj~jara kanDe||pa||

jIva sAmAnyaveMdariyadili SAstragaLa
nAvalOkanadi pELvaru nityadi
dEvAMSarivaru saMSayavu baDasalla mA
yA vallaBanu ivara hRudayadoLagirutippa ||1||

kavi BariDita mahAmuni vyAsakRuta suBA
gavatAdi grantha vyAKyAna nODi
BuvanEndrarAyara karuNadali turIyA Sra
manavittu vyAsatatvaj~ja rahudendu ||2||

I jagatraya doLage pUjya pUjakara ni
vryAjadali taLupidanu Baktajanake
SrI jagannAtha viThalanobba pUjya pan
kEja Bava Bavaru pUjakareMbuvara nODDe ||3||


 

ತೆರಳಿದರು ವ್ಯಾಸತತ್ವಜ್ಞರಿಂದು
ಪುರುಷೋತ್ತಮನ ಗುಣಗಳರುಪಿ ಸುಜನರಿಗೆ ||pa||

ವರ ರೌದ್ರಿನಾಮ ಸಂವತ್ಸರದ ಶ್ರಾವಣ
ಪರಪಕ್ಷ ಅಷ್ಟಮಿ ಭಾನುವಾರ
ಭರಣಿ ನಕ್ಷತ್ರ ಪ್ರಾತಃಕಾಲದಲಿ ಸೋಮ
ಪುರದಿ ಗೋಪಾಲಕೃಷ್ಣನ ಪಾದ ಸನ್ನಿಧಿಗೆ ||1||

ವೇದಾಬ್ಜಭವಸೂತ್ರ ಭಾಷ್ಯ ಭಾಗವತ ಮೊದ
ಲಾದ ಶಾಸ್ತ್ರಗಳ ಕೀರ್ತನೆಗೈಯುತಾ
ಪಾದೋದಕವ ಶಿರದಿ ಧರಿಸುತಿಪ್ಪ ವರಘತಿ
ರೋಧಾನಗೈಸಿ ಪರಗತಿ ಮಾರ್ಗವನು ತೋರಿ ||2||

ಸೋಜಿಗವಿದಲ್ಲ ಸಜ್ಜನರನುದ್ಧರಿಸುವುದು
ನೈಜ ಜಗನ್ನಾಥ ವಿಠ್ಠಲನ ಪಾದ
ರಾಜೀವಯುಗಳ ನಿವ್ರ್ಯಾಜದಲಿ ಭಜಿಪ ಪ್ರ
ಯೋಜನನೊರೆದಿತರ ವ್ಯಾಪಾರ ತೊರೆದು ||3||
teraLidaru vyAsatatvaj~jarindu
puruShOttamana guNagaLarupi sujanarige ||pa||

vara raudrinAma saMvatsarada SrAvaNa
parapakSha aShTami BAnuvAra
BaraNi nakShatra prAtaHkAladali sOma
puradi gOpAlakRuShNana pAda sannidhige ||1||

vEdAbjaBavasUtra BAShya BAgavata moda
lAda SAstragaLa kIrtanegaiyutA
pAdOdakava Siradi dharisutippa varaGati
rOdhAnagaisi paragati mArgavanu tOri ||2||

sOjigavidalla sajjanaranuddharisuvudu
naija jagannAtha viThThalana pAda
rAjIvayugaLa nivryAjadali Bajipa pra
yOjananoreditara vyApAra toredu ||3||

dasara padagalu · jagannatha dasaru · MADHWA · Vasudhindra thirtharu

Dasara pada on Sri Vasudhindra thirtharu

ಶ್ರೀ ವಸುಧೀಂದ್ರ ರಾಯಾ | ಪಾವನಕಾಯಾ
ಕೋವಿದ ಜನ ಪ್ರೀಯಾ ||pa||

ಭೂವಲಯದೊಳತಿ | ತೀವಿದ ಅಘವನ
ದಾವಕ ನತಜನ ದೇವತರು ಎನಿಪ ಅ
ಜಿತಕ್ರೋಧ ಜಯಶೀಲಾ | ದುವ್ರ್ಯಸನ ಪ
ರ್ವತ ವಜ್ರ ಹರಿಲೋಲಾ
ರತಿಪತಿ ಮಾರ್ಗಣ | ಮಥನ ಮೌನೀಶ ವಾಂ
ಛಿತಫಲವಿತ್ತು ಸಂ | ತತ ಪಾಲಿಸುವುದೆಮ್ಮ
ಪತಿತ ಪಾವನ ವಿತತ ಕರುಣಾ
ಮೃತರತಾನತ ಹಿತಕರಾಗಮ
ತತಿ ಪಯೋಜಾರ್ಕ ಅತಿಮುದಾ||1||

ಭೂದೇವಾನುತ ಮಹಿಮಾ |ಶಾತವಾನು ಭೀಮ
ವೇದಪೂಜಿತರಾಮಾ
ವೇದವ್ಯಾಸರ ಪಾದ | ಸಾದರದಲಿ ನಿತ್ಯಾ
ರಾಧಿಸುತಿಹ ಸುವಿ | ನೋದಚರಿತ ಗುರು
ಮೋದತೀರ್ಥ ಮತಾಬ್ಧಿ ಸೋಮ ಕು
ವಾದಿ ಮತ ಮತ್ತೇಭಕುಂಭಧ
ರಾಧರಾತಟವಾನುಗರೊಳೆ
ನ್ನಾದರಿಸುವುದಖಿಳಗುಣಾಂಬುಧೇ||2||

ಸರಸಭಾಷೋಹ್ಲಾಸಾ | ವರ್ಚಿತ ದೋಷಾ
ಹರಿನಿಭಸಂಕಾಶಾ
ಶರೀರಾ ಸಜ್ಜನಗೇಯಾ | ಗುರುವಾದೀಂದ್ರಕರ
ಸರಸೀರುಹ ಸಂಜಾತ | ನಿರುಪಮ ನಿರ್ಭೀತಾ
ಸುರುಚಿರಹಿಮ ಕಿರಣ ತೇಜ
ಸ್ಫುರುಣ ಶ್ರೀ ಜಗನ್ನಾಥವಿಠಲನ
ಚರಣ ಪಂಕೇರುಹ ಯುಗಳ ಮಧು
ಕರದುರಿತಘನ ಮಾರುತಾ ||3||

SrI vasudhIndra rAyA | pAvanakAyA
kOvida jana prIyA ||pa||

BUvalayadoLati | tIvida aGavana
dAvaka natajana dEvataru enipa a
jitakrOdha jayaSIlA | duvryasana pa
rvata vajra harilOlA
ratipati mArgaNa | mathana maunISa vAM
CitaPalavittu san | tata pAlisuvudemma
patita pAvana vitata karuNA
mRutaratAnata hitakarAgama
tati payOjArka atimudA||1||

BUdEvAnuta mahimA |SAtavAnu BIma
vEdapUjitarAmA
vEdavyAsara pAda | sAdaradali nityA
rAdhisutiha suvi | nOdacarita guru
mOdatIrtha matAbdhi sOma ku
vAdi mata mattEBakuMBadha
rAdharAtaTavAnugaroLe
nnAdarisuvudaKiLaguNAMbudhE||2||

sarasaBAShOhlAsA | varcita dOShA
hariniBasankASA
SarIrA sajjanagEyA | guruvAdIndrakara
sarasIruha sanjAta | nirupama nirBItA
surucirahima kiraNa tEja
sPuruNa SrI jagannAthaviThalana
caraNa pankEruha yugaLa madhu
karaduritaGana mArutA ||3||

dasara padagalu · jagannatha dasaru · MADHWA · sathyasandha thirtharu

Dasara pada on Sri Sathyasandha thirtharu

ವಂದಿಸು ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು ||pa||

ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ ||1||

ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರ ಕಂಡು ||2||

ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿ ನಿರಂತರ
ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ ||3||

vandisu guru satyasandha muniyA
vRundAvanake haruShadinda endendu ||pa||

gangA prayAga gayA SrISailahObala Bu
jangAdri modalAda kShEtragaLanu
ingitaj~jara sahita saMbandha gaisi varamahiSha
tungAtaTadi vAsavAgippa yativarage ||1||

BUdEvanuta satyabOdha munivara kara
vEdikadoLudBavisida kalpavRukSha
sAdhujanarige bEDidiShTArthagaLa
mOdadi koDuva mahimara kanDu ||2||

SrI manOramana ativimalatara SAstra
nAmAvaLige suvyAKyAna racisi
dhImanta janarigupadESisi nirantara
dhAma jagannAtha viThalana olume paDedavarige ||3||

dasara padagalu · jagannatha dasaru · MADHWA · sathyavara thirtharu

Dasara pada on Sri sathya vara theertharu

ಸತ್ಯವರ ಮುನಿಪ ದಿಕ್ಷತಿಗಳಂತೆ
ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ ||pa||

ಸಿಂಧೂರವೇರಿ ದೇವೇಂದ್ರನಂತೊಪ್ಪುವನು
ವಂದಿಪ ಜನರಘಾಳಿವನ ಕೃಶಾನು
ಮಂದ ಜನರಿಗೆ ದಂಡ ಧರನಂತೆ ತೋರ್ಪಕ
ರ್ಮಂದಿಪನು ನರವಾಹನವೇರಿ ನಿಋಋತಿಯೆನಿಪ ||1||

ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ
ಜೈನಾದಿಮತ ಘನಾಳಿಗೆ ಮಾರುತಾ
ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ
ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ ||2||

ಶ್ರೀಮದ್ರಮಾಪತಿ ಜಗನ್ನಾಥ ವಿಠಲ
ಸ್ವಾಮಿ ಪಾದಾಬ್ಜ ಭಜನಾಸಕ್ತನಿವ
ಧೀಮಂತ ಗುರು ಸಾರ್ವಭೌಮ ಭೂ ಸುರನುತ
ಮಹಾ ಮಹಿಮ ಪೊಗಳಲೆನ್ನೊಶವೇ ಕರುಣಾ ಸಿಂಧು||3||

satyavara munipa dikShatigaLante
nityadali tOrpa nOLparige saMBramadi ||pa||

sindhUravEri dEvEndranantoppuvanu
vandipa janaraGALivana kRuSAnu
manda janarige danDa dharanante tOrpaka
rmandipanu naravAhanavEri ni^^Ru^^Rutiyenipa ||1||

j~jAnAdi guNadi ratnAkaranenipa Saiva
jainAdimata GanALige mArutA
dIna janarige dhanadanAgi santaipa vyA
KyAna kAladi jagattISanendorevA ||2||

SrImadramApati jagannAtha viThala
svAmi pAdAbja BajanAsaktaniva
dhImaMta guru sArvaBauma BU suranuta
mahA mahima pogaLalennoSavE karuNA sindhu||3||


ಗುರುಸತ್ಯವರರೆಂಬ ಕಲ್ಪಭೂಜಾ
ಧರೆಯೊಳಗೆಮ್ಮನುದ್ಧರಿಸ ಬಂತಿದಕೊ ||pa||

ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ
ರಾಮ ವೇದವಾಸ್ಯರಂಘ್ರಿ ಯುಗಳ
ವ್ಯೋಮ ಮಂಡಲವನಾಶ್ರಯಿಸಿ ಸತ್ಕೀರ್ತಿನಿ
ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ ||1||

ಭವವೆಂಬ ಭಾಸ್ಕರತಪದಿಂದ ಬೆಂದು ಬಂ
ದವರ ಮಂದಸ್ಮಿತ ನೆಳಲಿಂದಲೀ
ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ
ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ ||2||

ವಿಳಿತ ಕರ್ಮ ಜ್ಞಾನ  ಮಾರ್ಗಸ್ಥ ಜನರಿಗಾಗಿ
ಲ್ಲಿಹವು ಫಲ ಪುಷ್ಪ ಐಹಿಕಾಮುಷ್ಮಿಕಾ
ಮಹಿತ ಜಗನ್ನಾಥ ವಿಠಲನೆಂಬ ಭುಜಗ ಹೃ
ದ್ಗುಹದೊಳಿಪ್ಪದು ಮಾಯಿಮೂಷಕಗಳೋಡಿಸುತ ||3||

gurusatyavarareMba kalpaBUjA
dhareyoLagemmanuddharisa bantidako ||pa||

SrImadhvamataveMbO BUmiyoLagudBavisi
rAma vEdavAsyaranGri yugaLa
vyOma maMDalavanASrayisi satkIrtini
ssIma SAKOpaSAKegaLiMda SOBisuta ||1||

BavaveMba BAskaratapadinda bendu ban
davara mandasmita neLalindalI
pravaNarantaHstApa kaLedu nityadali sa
tkavi dvijALigaligASritarAgi mereva ||2||

viLita karma j~jAna mArgastha janarigAgi
llihavu Pala puShpa aihikAmuShmikA
mahita jagannAtha viThalaneMba Bujaga hRu
dguhadoLippadu mAyimUShakagaLODisuta ||3||

jagannatha dasaru · MADHWA · sri sathya bodha thirtharu

Sri Sathyabodha stothram

ಶ್ರೀಸತ್ಯಬೋಧೋ ನಿಜಕಾಮಧೇನುರ್ಮಾಯಾತಮಃಖಂಡನಚಂಡಭಾನುಃ |
ದುರಂತಪಾಪಪ್ರದಹೇ ಕೃಶಾನುರ್ದೇಯಾನ್ಮಮೇಷ್ಟಂ ಗುರುರಾಜಸೂನುಃ || ೧ ||

ಶ್ರೀಸತ್ಯಬೋಧೇತಿಪದಾಭಿಧಾನಃ ಸದಾ ವಿಶುದ್ಧಾತ್ಮಧಿಯಾ ಸಮಾನಃ |
ಸಮಸ್ತವಿದ್ವನ್ನಿಚಯಪ್ರಧಾನೋ ದೇಯಾನ್ಮಮೇಷ್ಟಂ ವಿಬುಧಾನ್ ದಧಾನಃ || ೨ ||

ರಮಾಧಿನಾಥಾರ್ಹಣವಾಣಿಜಾನಿಃ ಸ್ವಭಕ್ತಸಂಪ್ರಾಪಿತದುಃಖಹಾನಿಃ |
ಲಸತ್ಸರೋಜಾರುಣನೇತ್ರಪಾಣಿರ್ದೇಯಾನ್ಮಮೇಷ್ಟಂ ಶುಭದೈಕವಾಣಿಃ || ೩ ||

ಭಕ್ತೇಷು ವಿನ್ಯಸ್ತಕೃಪಾಕಟಾಕ್ಷೋ ದುರ್ವಾದಿವಿದ್ರಾವಣದಕ್ಷದೀಕ್ಷಃ |
ಸಮೀಹಿತಾರ್ಥಾರ್ಪಣಕಲ್ಪವೃಕ್ಷೋ ದೇಯಾನ್ಮಮೇಷ್ಟಂ ಕೃತಸರ್ವರಕ್ಷಃ || ೪ ||

ಶ್ರೀಮಧ್ವದುಗ್ಧಾಬ್ಧಿವಿವರ್ಧಚಂದ್ರಃ ಸಮಸ್ತಕಲ್ಯಾಣಗುಣೈಕಸಾಂದ್ರಃ |
ನಿರಂತರಾರಾಧಿತರಾಮಚಂದ್ರೋ ದೇಯಾನ್ಮಮೇಷ್ಟಂ ಸುಧಿಯಾಂ ಮಹೇಂದ್ರಃ || ೫ ||

ನಿರಂತರಂ ಯಸ್ತು ಪಠೇದಿಮಾಂ ಶುಭಾಂ ಶ್ರೀಶ್ರೀನಿವಾಸಾರ್ಪಿತಪಂಚಪದ್ಯೀಮ್ |
ತಸ್ಯ ಪ್ರಸೀದೇತ್ ಗುರುರಾಜಹೃದ್ಗಃ ಸೀತಾಸಮೇತೋ ನಿತರಾಂ ರಘೂತ್ತಮಃ || ೬ ||

|| ಇತಿ ಶ್ರೀನಿವಾಸಾಚಾರ್ಯ (ಜಗನ್ನಾಥದಾಸ)ಕೃತಂ ಶ್ರೀಸತ್ಯಬೋಧಸ್ತೋತ್ರಮ್ ||

SrIsatyabOdhO nijakAmadhEnurmAyAtamaHKanDanacanDaBAnuH |
durantapApapradahE kRuSAnurdEyAnmamEShTaM gururAjasUnuH || 1 ||

SrIsatyabOdhEtipadABidhAnaH sadA viSuddhAtmadhiyA samAnaH |
samastavidvannicayapradhAnO dEyAnmamEShTaM vibudhAn dadhAnaH || 2 ||

ramAdhinAthArhaNavANijAniH svaBaktasaMprApitaduHKahAniH |
lasatsarOjAruNanEtrapANirdEyAnmamEShTaM SuBadaikavANiH || 3 ||

BaktEShu vinyastakRupAkaTAkShO durvAdividrAvaNadakShadIkShaH |
samIhitArthArpaNakalpavRukShO dEyAnmamEShTaM kRutasarvarakShaH || 4 ||

SrImadhvadugdhAbdhivivardhacandraH samastakalyANaguNaikasAndraH |
nirantarArAdhitarAmacandrO dEyAnmamEShTaM sudhiyAM mahEndraH || 5 ||

nirantaraM yastu paThEdimAM SuBAM SrISrInivAsArpitapancapadyIm |
tasya prasIdEt gururAjahRudgaH sItAsamEtO nitarAM raGUttamaH || 6 ||

|| iti SrInivAsAcArya (jagannAthadAsa)kRutaM SrIsatyabOdhastOtram ||

dasara padagalu · jagannatha dasaru · Jaya theertharu · MADHWA

Jayaraaya Jayaraaya(Jagannatha dasaru)

ಜಯರಾಯ ಜಯರಾಯ
ದಯವಾಗೆಮಗನುದಿನ ಸುಪ್ರೀಯಾ ||pa||

ಸುರನಾಥನೆ ನೀ ನರನ ವೇಷದಿ
ಧರಣಿಯೊಳಗೆ ಅವತರಿಸಿ ದಯದಿ ||1||

ವಿದ್ವನ್ಮಂಡಲಿ ಸದ್ವಿನುತನೆ ಪಾ
ದದ್ವಯಕೆರಗುವೆ ಉದ್ಧರಿಸೆನ್ನನು ||2||

ವಿದ್ಯಾರಣ್ಯನಾ ವಿದ್ಯಮತದ ಕು
ಸಿದ್ಧಾಂತಗಳ ಅಪದ್ಧವೆನಿಸಿದೆ ||3||

ಅವಿದಿತನ ಸತ್ಕವಿಗಳ ಮಧ್ಯದಿ
ಸುವಿವೇಕಿಯ ಮಾಡವನಿಯೊಳೆನ್ನನು ||4||

ಗರುಪೂರ್ಣಪ್ರಜ್ಞರ ಸನ್ಮತವನು
ಉದ್ಧರಿಸಿ ಮೆರೆದೆ ಭುಸುರವರ ವರದಾ ||5||

ಸಭ್ಯರ ಮಧ್ಯದೊಳಭ್ಯಧಿಕ ವರಾ
ಕ್ಷೋಭ್ಯ ಮುನಿಕರಾಬ್ಜಾಭ್ಯುದಿತ ಗುರು ||6||

ನಿನ್ನವರವ ನಾನನ್ಯಗನಲ್ಲ ಜ
ಗನ್ನಾಥವಿಠಲನೆನ್ನೊಳಗಿರಿಸೋ ||7||

jayarAya jayarAya
dayavAgemaganudina suprIyA ||pa||

suranAthane nI narana vEShadi
dharaNiyoLage avatarisi dayadi ||1||

vidvanmanDali sadvinutane pA
dadvayakeraguve uddharisennanu ||2||

vidyAraNyanA vidyamatada ku
siddhAntagaLa apaddhaveniside ||3||

aviditana satkavigaLa madhyadi
suvivEkiya mADavaniyoLennanu ||4||

garupUrNapraj~jara sanmatavanu
uddharisi merede Busuravara varadA ||5||

saByara madhyadoLaByadhika varA
kShOBya munikarAbjAByudita guru ||6||

ninnavarava nAnanyaganalla ja
gannAthaviThalanennoLagirisO ||7||

dasara padagalu · jagannatha dasaru · MADHWA · Shobane

Shobhanaevnnire sarvagna harige

ಶೋಭಾನವೆನ್ನಿರೆ ಸರ್ವಜ್ಞ ಹರಿಗೆ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ||pa||

ಶಫರ ವೇಷದವಗೆ ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಶಿಪಿಯ ಕರದಿ ಬಲು ವಪ್ರವ ಬಿಗಿಸಿದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ ||1|||

ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಮಡುವಿನೊಳಗೆ ಫಣಿ ಪೆಡೆಯ ತುಳಿದವಗೆ
ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ ||2||

ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ||3||

ದಶರಥ ತನಯಗೆ ವಸುದೇವ ಸುತಗೆ
ವಸನ ವಿಹೀನಗೆ ಅಸುರ ಭಂಜನಿಗೆ
ಝಷ ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ
ಶಶಿಮುಖಿಯರಾರುತಿ ಬೆಳಗೀರೆ ||4||

ವಟು ಭೃಗುರಾಮಗೆ ಜಟಲ ಮಸ್ತಕಗೆ
ಕಠಿಣ ಕಂಸನ ತಳ ಪಟವ ಮಾಡಿದಗೆ
ನಿಟಲಾಕ್ಷವರದಗೆ ಕಪಟ ಭೀಕರಗೆ
ವಟಪತ್ರಶಯನ ನಿಷ್ಕುಟಿಲ ಜಗನ್ನಾಥ
ವಿಠಲಗಾರುತಿಯ ಬೆಳಗೀರೆ ||5||
SOBAnavennire sarvaj~ja harige
SOBAnavennire sakala guNanidhige
SOBAnavenni samIra pitanige
SOBAnavenni sarOjasadana
manOBirAmanige SOBAnavenni ||pa||

SaPara vEShadavage kapaTa kamaThage
tapa niyAMbakanasupariharisidage
kRupaNa prahlAdana vipattu kaLedavage
Sipiya karadi balu vaprava bigisidavage
capalAkShiyarAruti beLagire ||1|||

koDali kOdanDava piDiva panDitage
kaDala kaTTisi KaLaroDala bagedage
maDuvinoLage PaNi peDeya tuLidavage
mRuDana gelisi kIrti oDane taMdittage
maDadErArutiya beLagIre ||2||

harigi surigi piDidaravindAnbakage
SaradhiyoLADdage girimahidharage
narahari rUpage dharaNiyALdage
dhuradoLu rAyara tarida samarthage
garatErArutiya beLagIre ||3||

daSaratha tanayage vasudEva sutage
vasana vihInage asura Banjanige
JaSha kUrma rUpage vasudhi vAhakage
misuni kaSyapage hebbasira bagedavage
SaSimuKiyarAruti beLagIre ||4||

vaTu BRugurAmage jaTala mastakage
kaThiNa kaMsana taLa paTava mADidage
niTalAkShavaradage kapaTa BIkarage
vaTapatraSayana niShkuTila jagannAtha
viThalagArutiya beLagIre ||5||