dasara padagalu · jagannatha dasaru · MADHWA · Shobane

Shobhanaevnnire sarvagna harige

ಶೋಭಾನವೆನ್ನಿರೆ ಸರ್ವಜ್ಞ ಹರಿಗೆ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ||pa||

ಶಫರ ವೇಷದವಗೆ ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಶಿಪಿಯ ಕರದಿ ಬಲು ವಪ್ರವ ಬಿಗಿಸಿದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ ||1|||

ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಮಡುವಿನೊಳಗೆ ಫಣಿ ಪೆಡೆಯ ತುಳಿದವಗೆ
ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ ||2||

ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ||3||

ದಶರಥ ತನಯಗೆ ವಸುದೇವ ಸುತಗೆ
ವಸನ ವಿಹೀನಗೆ ಅಸುರ ಭಂಜನಿಗೆ
ಝಷ ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ
ಶಶಿಮುಖಿಯರಾರುತಿ ಬೆಳಗೀರೆ ||4||

ವಟು ಭೃಗುರಾಮಗೆ ಜಟಲ ಮಸ್ತಕಗೆ
ಕಠಿಣ ಕಂಸನ ತಳ ಪಟವ ಮಾಡಿದಗೆ
ನಿಟಲಾಕ್ಷವರದಗೆ ಕಪಟ ಭೀಕರಗೆ
ವಟಪತ್ರಶಯನ ನಿಷ್ಕುಟಿಲ ಜಗನ್ನಾಥ
ವಿಠಲಗಾರುತಿಯ ಬೆಳಗೀರೆ ||5||
SOBAnavennire sarvaj~ja harige
SOBAnavennire sakala guNanidhige
SOBAnavenni samIra pitanige
SOBAnavenni sarOjasadana
manOBirAmanige SOBAnavenni ||pa||

SaPara vEShadavage kapaTa kamaThage
tapa niyAMbakanasupariharisidage
kRupaNa prahlAdana vipattu kaLedavage
Sipiya karadi balu vaprava bigisidavage
capalAkShiyarAruti beLagire ||1|||

koDali kOdanDava piDiva panDitage
kaDala kaTTisi KaLaroDala bagedage
maDuvinoLage PaNi peDeya tuLidavage
mRuDana gelisi kIrti oDane taMdittage
maDadErArutiya beLagIre ||2||

harigi surigi piDidaravindAnbakage
SaradhiyoLADdage girimahidharage
narahari rUpage dharaNiyALdage
dhuradoLu rAyara tarida samarthage
garatErArutiya beLagIre ||3||

daSaratha tanayage vasudEva sutage
vasana vihInage asura Banjanige
JaSha kUrma rUpage vasudhi vAhakage
misuni kaSyapage hebbasira bagedavage
SaSimuKiyarAruti beLagIre ||4||

vaTu BRugurAmage jaTala mastakage
kaThiNa kaMsana taLa paTava mADidage
niTalAkShavaradage kapaTa BIkarage
vaTapatraSayana niShkuTila jagannAtha
viThalagArutiya beLagIre ||5||

2 thoughts on “Shobhanaevnnire sarvagna harige

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s