hari kathamrutha sara · jagannatha dasaru · MADHWA

Swagathaswantrya sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು
ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ||

ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ
ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು
ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ
ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು||1||

ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ
ವ್ಯಾಪಾರಗಳ ಮಾಡುವರು
ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ
ಕ್ರೋಧಿಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು||2||

ದೇವತೆಗಳ ಉಪಾಧಿ ನಿತ್ಯದಿ ಏವಮಾದಿ ನಾಮದಿಂದಲಿ
ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು
ಸೇವಕರ ಸೇವ ಅನುಗುಣ ಫಲವೀವ ನ್ರುಪನಂದದಲಿ
ತನ್ನ ಸ್ವಭಾವ ಸ್ವಾತಂತ್ರ್ಯ ವಿಭಾಗವ ಮಾಡಿಕೊಟ್ಟ ಹರಿ||3||

ಅಗಣಿತ ಸ್ವಾತಂತ್ರ್ಯವ ನಾಲ್ಬಗೆ ವಿಭಾಗವ ಮಾಡಿ
ಒಂದನುತೆಗೆದು ದಶವಿಧಗೈಸಿ ಪಾದರೆ ಪಂಚ ಪ್ರಾಣನಲಿ
ಮೊಗ ಚತುಷ್ಟಯನೊಳು ಸಪಾದೈದು ಗುಣವಿರಸಿದ
ಮತ್ತೆ ದಶ ವಿಧಯುಗಳ ಗುಣವನ್ನು ಮಾಡಿ ಎರಡು ಸದಾ ಶಿವನೊಳಿಟ್ಟ||4||

ಪಾಕಶಾಸನ ಕಾಮರೊಳು ಸಾರ್ಧೈಕವಿಟ್ಟ ದಶ ಇಂದ್ರಿಯರ
ಸುದಿವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು
ನಾಲ್ಕೂವರೆ ಕಲ್ಯಾದಿ ದೈತ್ಯಾನೀಕಕಿತ್ತನು
ಎರಡು ತ್ರಿವಿಧ ವಿವೇಕಗೈಸಿ ಇಂದಿರಗೊಂದು ಎರಡು ಆತ್ಮ ತನ್ನೊಳಗೆ||5||

ಈ ವಿಧದಿ ಸ್ವಾತಂತ್ರ್ಯವ ದೇವ ಮಾನವ ದಾನವರೊಳು
ರಮಾ ವಿನೋದಿ ವಿಭಾಗ ಮಾಡಿಟ್ಟು ಅಲ್ಲೇ ರಮಿಸುವನು
ಮೂವರೊಳಗಿದ್ದು ಅವರ ಕರ್ಮವ ತಾ ವಿಕಾರವಗೈಸದಲೆ
ಕಲ್ಪವಸಾನಕೆ ಕೊಡುವನು ಅನಾಯಾಸ ಅವರ ಗತಿಯ||6||

ಆಲಯಗಳೊಳಿಪ್ಪ ದೀಪ ಜ್ವಾಲೆ ವರ್ತಿಗಳನುಸರಿಸಿ ಜನರ ಆಲಿಗೊಪ್ಪುವ ತೆರದಿ
ಹರಿ ತಾ ತೋರ್ಪ ಸರ್ವತ್ರ
ಕಾಲ ಕಾಲದಿ ಶ್ರೀಧರಾ ದುರ್ಗಾ ಲಲನೆಯರ ಕೂಡಿ ಸುಖಮಯ ಲೀಲೆಗೈಯಲು
ತ್ರಿಗುಣ ಕಾರ್ಯಗಳಿಹವು ಜೀವರಿಗೆ||7||

ಇಂದ್ರಿಯಗಳಿಂ ಮಾಳ್ಪ ಕರ್ಮ ದ್ವಂದ್ವಗಳ ತನಗರ್ಪಿಸಲು
ಗೋವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ಪ
ಇಂದಿರೇಶನು ಭಕ್ತ ಜನರನು ನಿಂದಿಸುವರೊಳಗಿಪ್ಪ
ಪುಣ್ಯವ ತಂದು ತನ್ನವಗೀವ ಪಾಪಗಳ ಅವರಿಗುಣಿಸುವನು||8||

ಹೊತ್ತು ಒಟ್ಟಿಗೆ ಪಾಪ ಕರ್ಮ ಪ್ರವರ್ತಕರ ನಿಂದಿಸದೆ
ತನಗಿಂದ ಉತ್ತಮರ ಗುಣ ಕರ್ಮಗಳ ಕೊಂಡಾಡದಲಿಪ್ಪ ಮರ್ತ್ಯರಿಗೆ
ಗೋಬ್ರಾಹ್ಮಣ ಸ್ತ್ರೀ ಹತ್ಯ ಮೊದಲಾದ ಅಖಿಳ ದೋಷಗಳಿತ್ತಪನು
ಸಂದೇಹ ಪಡಸಲ್ಲ ಅಖಿಳ ಶಾಸ್ತ್ರಮತ||9||

ತನ್ನ ಸ್ವಾತಂತ್ರ್ಯ ಗುಣಗಳ ಹಿರಣ್ಯ ಗರ್ಭಾದ್ಯರಿಗೆ
ಕಲಿಮುಖ ದಾನವರ ಸಂತತಿಗೆ ಅವರಧಿಕಾರವ ಅನುಸರಿಸಿ
ಪುಣ್ಯ ಪಾಪಗಳೀವ ಬಹು ಕಾರುಣ್ಯ ಸಾಗರನು
ಅಲ್ಪಶಕ್ತಿಗಳ ಉಣ್ಣಲರಿಯದಿರಲು ಉಣ ಕಲಿಸಿದನು ಜೀವರಿಗೆ||10||

ಸತ್ಯ ವಿಕ್ರಮ ಪುಣ್ಯ ಪಾಪ ಸಮಸ್ತರಿಗೆ ಕೊಡಲೋಸುಗದಿ
ನಾಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ
ಅತ್ಯಲ್ಪ ಪರಮಾಣು ಜೀವಗೆ ಸಾಮರ್ಥ್ಯವನು ತಾ ಕೊಟ್ಟು
ಸ್ಥೂಲ ಪದಾರ್ಥಗಳ ಉಂಡು ಉಣಿಪ ಸರ್ವದಾಸರ್ವ ಜೀವರಿಗೆ||11||

ತಿಮಿರ ತರಣಿಗಳು ಏಕ ದೇಶದಿ ಸಮನಿಸಿಪ್ಪವೆ ಎಂದಿಗಾದರು?
ಭ್ರಮಣ ಛಳಿ ಬಿಸಲು ಅಂಜಿಕೆಗಳುಂಟೇನೋ ಪರ್ವತಕೆ?
ಅಮಿತ ಜೀವರೊಳಿದ್ದು ಲಕ್ಷ್ಮೀ ರಮಣ ವ್ಯಾಪಾರಗಳ ಮಾಡುವ
ಕಮಲಪತ್ರ ಸರೋವರಗಳೊಳಗಿಪ್ಪ ತೆರದಂತೆ||12||

ಅಂಬುಜೋದ್ಭವ ಮುಖ್ಯ ಸುರಾ ಕಲಿ ಶಂಬರಾದಿ ಸಮಸ್ತ ದೈತ್ಯ ಕದಂಬಕೆ
ಅನುದಿನ ಪುಣ್ಯ ಪಾಪ ವಿಭಾಗವನೆ ಮಾಡಿ
ಅಂಬುಧಿಯ ಜಲವನು ಮಹದ್ಘಟ ದಿಂಬನಿತು ತುಂಬುವ ತೆರದಿ
ಪ್ರತಿ ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ||13||

ಇನಿತು ವಿಷ್ಣು ರಹಸ್ಯದೊಳು ಭ್ರುಮು ಮುನಿಪ ಇಂದ್ರದ್ಯುಮ್ನಗೆ ಅರುಪಿದದನು
ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು
ಅನುಚಿತೋಕ್ತಿಗಳಿದ್ದರೆಯು ಸರಿಯೆ ಗಣನೆ ಮಾಡದಿರೆಂದು
ವಿದ್ವದ್ ಜನಕೆ ವಿಜ್ಞಾಪನೆಯ ಮಾಡುವೆ ವಿನಯ ಪೂರ್ವಕದಿ||13||

ವೇತ ಭಯ ವಿಶ್ವೇಶ ವಿಧಿ ಪಿತ ಮಾತುಳಾಂತಕ ಮಧ್ವ ವಲ್ಲಭ
ಭೂತ ಭಾವನ ಅನಂತ ಭಾಸ್ಕರ ತೇಜ ಮಹಾರಾಜ
ಗೌತಮನ ಮಡದಿಯನು ಕಾಯ್ದ ಅನಾಥ ರಕ್ಷಕ
ಗುರುತಮ ಜಗನ್ನಾಥ ವಿಠಲ ತನ್ನ ನಂಬಿದ ಭಕುತರನು ಪೊರೆವ||14||

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

svagatasvAtantrya guNava hari tegedu brahmAdyarige koTTadu
BRugu munipa pELidanu indradyumna kShitipanige||

parama viShNu svatantra mAyA taruNi vakShasthaLa nivAsi
sarasijOdBava prANarIrvaru sacivaru enisuvaru
sarva karmagaLalli tatpriyaru uraga BUShaNa ahaMkRutitraya
karesuva amarEndra arka muKaru iMdriyaparu enisuvaru||1||

I divaukasara ante kali modalAda daityaru sarva dEhadi tOdakaru tAvAgi
vyApAragaLa mADuvaru
vEdhanAMdadi kaliyu ahankArAdhipa adhama madhukukaiTaBa
krOdhiSaMBara muKaru manasige svAmiyenisuvaru||2||

dEvategaLa upAdhi nityadi EvamAdi nAmadiMdali
yAvadindriyagaLali vyApAragaLa mADuvaru
sEvakara sEva anuguNa PalavIva nrupanaMdadali
tanna svaBAva svAtantrya viBAgava mADikoTTa hari||3||

agaNita svAtantryava nAlbage viBAgava mADi
oMdanutegedu daSavidhagaisi pAdare panca prANanali
moga catuShTayanoLu sapAdaidu guNavirasida
matte daSa vidhayugaLa guNavannu mADi eraDu sadA SivanoLiTTa||4||

pAkaSAsana kAmaroLu sArdhaikaviTTa daSa iMdriyara
sudivaukasAdyaroLondu yAvajjIvaroLagoMdu
nAlkUvare kalyAdi daityAnIkakittanu
eraDu trividha vivEkagaisi indiragondu eraDu Atma tannoLage||5||

I vidhadi svAtantryava dEva mAnava dAnavaroLu
ramA vinOdi viBAga mADiTTu allE ramisuvanu
mUvaroLagiddu avara karmava tA vikAravagaisadale
kalpavasAnake koDuvanu anAyAsa avara gatiya||6||

AlayagaLoLippa dIpa jvAle vartigaLanusarisi janara Aligoppuva teradi
hari tA tOrpa sarvatra
kAla kAladi SrIdharA durgA lalaneyara kUDi suKamaya lIlegaiyalu
triguNa kAryagaLihavu jIvarige||7||

indriyagaLiM mALpa karma dvandvagaLa tanagarpisalu
gOvinda puNyava konDu pApava Basmavane mALpa
indirESanu Bakta janaranu nindisuvaroLagippa
puNyava tandu tannavagIva pApagaLa avariguNisuvanu||8||

hottu oTTige pApa karma pravartakara nindisade
tanaginda uttamara guNa karmagaLa konDADadalippa martyarige
gObrAhmaNa strI hatya modalAda aKiLa dOShagaLittapanu
sandEha paDasalla aKiLa SAstramata||9||

tanna svAtantrya guNagaLa hiraNya garBAdyarige
kalimuKa dAnavara santatige avaradhikArava anusarisi
puNya pApagaLIva bahu kAruNya sAgaranu
alpaSaktigaLa uNNalariyadiralu uNa kalisidanu jIvarige||10||

satya vikrama puNya pApa samastarige koDalOsugadi
nAlvattu BAgava mADi lESAMSavanu janakIva
atyalpa paramANu jIvage sAmarthyavanu tA koTTu
sthUla padArthagaLa unDu uNipa sarvadAsarva jIvarige||11||

timira taraNigaLu Eka dESadi samanisippave endigAdaru?
BramaNa CaLi bisalu anjikegaLuMTEnO parvatake?
amita jIvaroLiddu lakShmI ramaNa vyApAragaLa mADuva
kamalapatra sarOvaragaLoLagippa teradaMte||12||

aMbujOdBava muKya surA kali SaMbarAdi samasta daitya kadaMbake
anudina puNya pApa viBAgavane mADi
aMbudhiya jalavanu mahadGaTa diMbanitu tuMbuva teradi
prati biMbaroLu tAniddu yOgyateyante PalavIva||13||

initu viShNu rahasyadoLu Brumu munipa iMdradyumnage arupidadanu
budharu kELuvudu nityadi matsarava biTTu
anucitOktigaLiddareyu sariye gaNane mADadireMdu
vidvad janake vij~jApaneya mADuve vinaya pUrvakadi||13||

vEta Baya viSvESa vidhi pita mAtuLAntaka madhva vallaBa
BUta BAvana ananta BAskara tEja mahArAja
gautamana maDadiyanu kAyda anAtha rakShaka
gurutama jagannAtha viThala tanna naMbida Bakutaranu poreva||14||

 

One thought on “Swagathaswantrya sandhi

Leave a comment