MADHWA · srinivasa · srinivasa kalyana

Srinivasa Kalyana composed by Harapana halli bheemavva

ಅಪ್ಪ ವೆಂಕೋಬನ ನೇತ್ರದಲಿ ನೋಡಿ ।
ಪವಿತ್ರಳಾದೆನೋ ಇಂದಿಗೆ ।
ತಪ್ಪುಗಳೆಲ್ಲ ನಿನಗರ್ಪಿಸುವೆ ನೀನೀಗ ।
ಒಪ್ಪಿಕೊಳ್ಳಬೇಕೋ ತಿಮ್ಮಪ್ಪ ಕರುಣಾನಿಧಿಯೇ ।। ಪಲ್ಲವಿ ।।

ಹೆದರದೆ ಭೃಗು ಋಷಿಯು ।
ಒದೆಯೆ ಪಾದಗಳಿಂದ ।
ಕದನ ಮಾಡುತವೆ ಕೊಲ್ಹಾಪುರಕ್ಕೆ ನಡೆತರಲು ।।
ಒದಗಿ ವೈಕುಂಠ ಬಿಟ್ಟು ।
ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರಿ ।
ಇದು ನಿನಗೆ ಸದನಾಯಿತೋ ದೇವಾ ।। 1 ।।

ಹುತ್ತದಲ್ಲಡಗಿ ನೀ ಗುಪ್ತದಿಂದಿರುತಿರಲು ।
ಉತ್ತಮ ಗೋವು ಬಂದು ।
ನಿತ್ಯದಲಿ ಕ್ಷೀರವನು ಕ್ರಿಯೆ ಗೋವಳನಿಂದ ।।
ನೆತ್ತಿಯ ನೊಡೆದುಕೊಂಡು ।
ಸಿಟ್ಟಿನಿಂದಲಿ ಚೋಲರಾಯಗೆ ಶಾಪವನು ।
ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವಾ ।। 2 ।।

ಮಾಯಾ ರಮಣನೆ ನಿನ್ನ ।
ಗಾಯದೌಷಧಕ್ಕಾಗಿ ।
ಭೂರಮಣ ವರಾಹನಿಂದ ।
ನೂರು ಪಾದ ಭೂಮಿ ಕೊಟ್ಟರೆ ।।
ಸಾಕೆಂದುಪಾಯದಿಂದದ್ವ್ಯಾಪಿಸಿ ।
ತಾಯಿ ಬಕುಳಾದೇವಿಯಿಂದ । ಪೂ ।
ಜೆಯಗೊಂಬೋ ಶ್ರೀಯರಸು ನಿನಗೆ ಸರಿಯೇ ದೇವಾ ।। 3  ।।

ನಾಟಕಧಾರಿ ಕಿರಾತ ರೂಪವ ಧರಿಸಿ ।
ಬೇಟೆಗೆನುತಲಿ ಪೋಗಲು ।
ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ।
ನೋಟದಿ ಮನಸೋಲಿಸಿ ।।
ಬೂಟಕತನದಿ ಜಗಳಾಟವನ್ನೇ ಮಾಡಿ ।
ಪಾಟುಬಟ್ಟು । ಕಲ್ಲ ।
ಲೇಟು ತಿಂದೆಯೋ ದೇವಾ ।। 4 ।।

ಗದಗದನೆ ನಡುಗುತಲಿ ।
ಕುದುರೆಯನು ಕಳಕೊಂಡು ।
ಪದ್ಮಾವತೀ ವಾರ್ತೆಯನ್ನು । ಬಳಿಯ ।
ಲಿದ್ದ ಬಕುಳೆ ಮಾಲಿಕೆಗೆ ಬೋಧೀಸಿ । ಕಳಿ ।।
ಸಿದಾಕಾಶನಲ್ಲಿ ಚದುರ ।
ಮಾತಿನ ಚಪಲ ಕೊರವಂಜಿ ।
ನೀನಾಗಿ ಕಣಿಯ ಹೇಳಲು ।
ಎಲ್ಲಿ ಕಲಿತಿಯೋ ಮಹದೇವಾ ।। 5  ।।

ಬಂಧು ಬಳಗವ ಕೂಡಿ ।
ಭಾರಿ ಸಾಲವ ಮಾಡಿ ।
ಕೊಂಡು ಕರವೀರದಿಂದೆ ।
ಅಂಡಲೆದು ಕರೆಸಿ ಕಾಣುತಲಿ ।।
ಲಕ್ಷ್ಮೀಯನಪ್ಪಿಕೊಂಡು ಪರಮ ಹರುಷದಿಂದ ।
ಮಂದ ಗಮನೆಯೆ ನಿನ್ನ ಮಾತು ಲಾಲಿಸಿ ।
ಮಾಡಿಕೊಂಡೆ ಪದ್ಮಾವತಿಯ ಅಂದೆಯೋ ದೇವಾ ।। 6 ।।

ಆಕಾಶರಾಜ ಅನೇಕ ಹರುಷದಿ ಮಾಡೆ ।
ತಾ ಕನ್ಯಾದಾನವನ್ನು ।
ಹಾಕಿದ ರತ್ನ ಮಾಣಿಕ್ಯದ ಕಿರೀಟವನು ।
ಬೇಕಾದಾಭರಣ ಭಾಗ್ಯ ।।
ಸಾಕಾಕಾಗದೇನೋ ಬಡವರ ಕಾಡಿ ಬೇಡುವುದು ।
ಶ್ರೀಕಾಂತ ನಿನಗೆ ಸರಿಯೇ ದೇವಾ ।। 7 ।।

ಹೇಮ ಗೋಪುರದಿ ವಿಮಾನ ಶ್ರೀನಿವಾಸ ।
ದೇವರನು ನೋಡಿ ನಮಿಸಿ ।
ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ।
ಗಂಬದ ಸುತ್ತ ಪ್ರಾಕಾರವೋ ।।
ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ।
ಪಾನವ ಮಾಡಿ ನೋಡಿದೆನೋ ।
ನಿನ್ನ ಭಕುತರ ದೇವಾ ।। 8  ।।

ಪನ್ನಗಾದ್ರಿ ವೆಂಕಟನ್ನ ರಥದ ಶೃಂಗಾರ ।
ವರ್ಣಿಸಲಳವೇ ನಮಗೆ ।
ಕಣ್ಣಾರೆ ಕಂಡೆ ಗರುಡೋತ್ಸವದಲಂಕಾರ ।
ಇನ್ನೆಲ್ಲೂ ಕಾಣೆ ಜಗದಿ ।।
ಅನ್ನಪೂರ್ಣೆಯ ನೋಡೆ ।
ಅಧಿಕ ಘಂಟೆಯ ನಾದ ।
ಎನ್ನ ಕಿವಿಗಾನಂದವೋ ದೇವಾ ।। 9  ।।

ಪಾದದಲೊಪ್ಪೋ ಪಗಡಾರಳಿ ಕಿರಿಗೆಜ್ಜೆ ।
ಮೇಲಲವೋ ಪೀತಾಂಬರ ।
ನೀಲ ಮಾಣಿಕದ ಉಡುದಾರವೋ ।
ವೈಜಯಂತೀ ಮಾಲೆ ಶ್ರೀವತ್ಸದಾ ಹಾರ ।।
ಮೇಲಾದ ಸಾರಿಗೆ ಸರ ।
ಪದಕವೋ ಕಮಲ ।
ದಳಾಯತಾಕ್ಷನ ನೋಡಿದೆ ದೇವಾ ।। 10 ।।

ಕರಗಳಲ್ಲಿಟ್ಟು ಕಂಕಣ ಕಡಗ ಭುಜ ಕೀರ್ತಿ ।
ವರ ಶಂಖ ಚಕ್ರಧಾರಿ ।
ಗಿರಿಯ ಭೂ ವೈಕುಂಠವೆಂದು ತೋರುತ ನಿಂತ ।।
ಶಿರದಿ ಕಿರೀಟ ಧರಿಸಿ ।
ಬಿಳಿಯ ತ್ರಿನಾಮ ಭೀಮೇಶಕೃಷ್ಣ ಮುಖದಿ ।
ಹೊಳೆವ ಮೂರ್ತಿಯ ನೋಡಿ ಹೇ ದೇವಾ ।। 11 ।।


Appa venkobana netradali nodi |
Pavitraladeno indige |
Tappugalella ninagarpisuve niniga |
Oppikollabeko timmappa karunanidhiye || pa ||

Hedarade brugu rushiyu |
Odeye padagalinda |
Kadana madutave kolhapurakke nadetaralu ||
Odagi vaikuntha bittu |
Yadunatha yarilladamte guddava seri |
Idu ninage sadanayito deva ||1||

Uttama govu bandu |
Nityadali kshiravanu kriye govalaninda ||
Nettiya nodedukondu |
Sittinimdali colarayage sapavanu |
Kottu kiritavanu ittu mereyuva deva || 2 ||

Maya ramanane ninna |
Gayadaushadhakkagi |
Buramana varahaninda |
Nuru pada bumi kottare ||
Sakemdupayadindadvyapisi |
Tayi bakuladeviyinda | pu |
Jeyagombo sriyarasu ninage sariye deva || 3 ||

Natakadhari kirata rupava dharisi |
Betegenutali pogalu |
Totadali celve padmavatiya kadeganna |
Notadi manasolisi ||
Butakatanadi jagalatavanne madi |
Patubattu | kalla |
Letu tindeyo deva || 4 ||

Gadagadane nadugutali |
Kudureyanu kalakondu |
Padmavati varteyannu | baliya |
Lidda bakule malikege bodhisi | kali ||
Sidakasanalli cadura |
Matina capala koravanji |
Ninagi kaniya helalu |
Elli kalitiyo mahadeva || 5||

Bandhu balagava kudi |
Bari salava madi |
Komdu karaviradinde |
Amdaledu karesi kanutali ||
Lakshmiyanappikondu parama harushadinda |
Manda gamaneye ninna matu lalisi |
Madikomde padmavatiya amdeyo deva || 6 ||

Akasaraja aneka harushadi made |
Ta kanyadanavannu |
Hakida ratna manikyada kiritavanu |
Bekadabarana bagya ||
Sakakagadeno badavara kadi beduvudu |
Srikanta ninage sariye deva || 7 ||

Hema gopuradi vimana srinivasa |
Devaranu nodi namisi |
Kamisi kande honnhostilu garuda |
Gambada sutta prakaravo ||
Svami pushkaraniyalli snana |
Panava madi nodideno |
Ninna Bakutara deva || 8 ||

Pannagadri venkatanna rathada srungara |
Varnisalalave namage |
Kannare kande garudotsavadalankara |
Innellu kane jagadi ||
Annapurneya node |
Adhika ganteya nada |
Enna kiviganandavo deva || 9 ||

Padadaloppo pagadarali kirigejje |
Melalavo pitambara |
Nila manikada ududaravo |
Vaijayamti male srivatsada hara ||
Melada sarige sara |
Padakavo kamala |
Dalayatakshana nodide deva || 10 ||

Karagalallittu kankana kadaga Buja kirti |
Vara samka chakradhari |
Giriya BU vaikunthavendu toruta ninta ||
Siradi kirita dharisi |
Biliya trinama bimesakrushna mukadi |
Holeva murtiya nodi he deva || 11 ||

4 thoughts on “Srinivasa Kalyana composed by Harapana halli bheemavva

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s