ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ
ಗೋಪೀಜನ ಜಾರನೆಂದರೆ ಸಾಲದೆ?
ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೆ?
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೆ?
ಪ್ರತಿದಿವಸ ಮಾಡಿದ ಪಾಪಂಗಳಿಗೆ ಎಲ್ಲಾ
ಪತಿತಪಾವನನೆಂದು ಕರೆದರೆ ಸಾಲದೆ?
ಇಂತಿಪ್ಪ ಮಹಿಮೆಯೊಳೊಗೊಂದನ್ನಾದರೂ ಒಮ್ಮೆ
ಸಂತಸದಿ ನೆನೆಯೆ ಸಲುವ ಸಿರಿಕೃಷ್ಣ ||
jAratvavanu mADida pApagaLigellA
gOpIjana jAranegdare sAlade?
cOratvavanu mADida pApagaLigella
navanIta cOranegdare sAlade?
krUratvavanu mADida pApagaLigella
mAvana kogdavanegdare sAlade?
pratidivasa mADida pApaggaLige ellA
patitapAvananegdu karedare sAlade?
igtippa mahimeyoLogogdannAdarU omme
santasadi neneye saluva sirikRuShNa |
ಕಂಗಳು ಚೆಲುವನು ನೋಡಿ ಕರ್ಣಂಗಳು ವಾರುತಿಯ ಕೇಳಿ
ಹಿಂಗದೆ ನಾಮವ ವದನದಿ ಸವಿಯುತ್ತ ಪದಂಗಳ ಮನದಿ ನೆನೆನೆನೆದು
ರೋಮಂಗಳು ಪುಳಕಿತವಾಗಿ ಲೋಕಂಗಳ ಕಡಲೊಳು ಮುಳುಗಿ ಮೈಯುಬ್ಬಿ ಕೊಬ್ಬುತ್ತ
ಅಂಗವ ಮೆರೆದಾನಂದದಿ ರಂಗಾ ಎನುತಿದ್ದರೆ ಸಾಲದೆ
ಮಂಗಳ ಜಯವನ್ನು ಕರುಣಿಸೋ ಮತ್ತೊಂದು ಸಂಗವನೊಲ್ಲೆನೋ ಸಿರಿಕೃಷ್ಣರಾಯ||
kangaLu celuvanu nODi karNangaLu vArutiya kELi
higgade nAmava vadanadi saviyutta padangaLa manadi nenenenedu
rOmaggaLu puLakitavAgi lOkangaLa kaDaloLu muLugi maiyubbi kobbutta
angava meredAnandadi rangA enutiddare sAlade
mangaLa jayavannu karuNisO mattondu sangavanollenO sirikRuShNarAya||
ನೀರಿಲ್ಲದ ಭಾವಿ ಊರಿಲ್ಲದ ಮಠವು
ನೆರಳಿಲ್ಲದ ಮರ ಫಲವಿಲ್ಲದ ಲತೆ
ಧನವಿಲ್ಲದ ದಾತ ದಯವಿಲ್ಲದ ನಾಥ
ಮನಸಿಲ್ಲದ ಶಕುತಿ ಭಯವಿಲ್ಲದ ಭಕುತಿ
ನರಹರಿ ಮುಕುಂದ ಶ್ರೀಕೃಷ್ಣ ಎನ್ನದ
ನರರಿದ್ದು ಫಲವೇನು ಇಲ್ಲದಿದ್ದರೆ ಏನು ||
nIrillada BAvi Urillada maThavu
neraLillada mara Palavillada late
dhanavillada dAta dayavillada nAtha
manasillada Sakuti Bayavillada Bakuti
narahari mukunda SrIkRuShNa ennada
narariddu PalavEnu illadiddare Enu
ನಿನ್ನ ಎಂಜಲನುಂಡು ನಿನ್ನ ಬೆಳ್ಳುಡೆಯುಟ್ಟು
ಮುನ್ನ ಮಾಡಿದ ಕರ್ಮ ಬೆನ್ನಬಿಡದಿದ್ದರೆ
ನಿನ್ನ ಓಲೈಸಲೇಕೊ ಕೃಷ್ಣ
ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು
ನಿನ್ನ ಓಲೈಸಲೇಕೋ ಕೃಷ್ಣ
ದಿನಕರನುದಿಸಿ ಕತ್ತಲೆ ಪೋಗದಿದ್ದರೆ
ಹಗಲೇನೋ ಇರುಳೇನೊ ಕುರುಡಂಗ ಸಿರಿಕೃಷ್ಣ||
ninna enjalanunDu ninna beLLuDeyuTTu
munna mADida karma bennabiDadiddare
ninna OlaisalEko kRuShNa
sancitavanuMDu prapancadoLage biddu
ninna OlaisalEkO kRuShNa
dinakaranudisi kattale pOgadiddare
hagalEnO iruLEno kuruDanga sirikRuShNa
ಆವ ಜನುಮದ ತಾಯಿ ಆವ ಜನುಮದ ತಂದೆ
ಆವ ಜನುಮದ ಸತಿ ಆವಜನುಮದ ಸುತರು
ಆವ ಜನುಮದ ಬಂಧು ಆವ ಜನುಮದ ಬಳಗ
ಆವ ಜನುಮದ ಪಿಂಡ ಆವಂಗೆ ಜನಿಸುವೆವೊ
ನೀ ವೊಲಿದು ಪಾಲಿಸೈ ಸಿರಿಕೃಷ್ಣರಾಯ||
Ava janumada tAyi Ava janumada tande
Ava janumada sati Avajanumada sutaru
Ava janumada bandhu Ava janumada baLaga
Ava janumada pinDa Avange janisuvevo
nI volidu pAlisai sirikRuShNarAya
thanks for your effort and generosity of sharing , It is very helpful ,God bless !
LikeLike