ಶೋಭಾನ ಶೋಭಾನವೆ ||pa||
ಭೂದೇವಿಯರಸ ವೆಂಕಟರಾಯಗೆ
ಶೋಭಾನ ಶೋಭಾನವೆ ||a.pa||
ಅಂದು ಕ್ಷೀರಾಂಬುನಿಧಿ ಮೊದಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯಮೂರುತಿಯಾದ
ಮಂದಾರಮಾಲೆಯ ಹಾಕಿದ ದೇವಗೆ ||1||
ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ ||2||
ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ಬಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||3||
ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳಸಾಹಸ್ರಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||4||
ಪದುಮದೇಶದಲೊಬ್ಬ ದೇವಾಂಗನೆಯ
ಪದುಮಮುಖಿ ಶ್ರುತಿಹೃತಿಯ
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ ||5||
SOBAna SOBAnave ||pa||
BUdEviyarasa venkaTarAyage
SOBAna SOBAnave ||a.pa||
andu kShIrAMbunidhi modalAgi
indire haruShadindudisi bandu
kandarpa kOTi lAvaNyamUrutiyAda
mandAramAleya hAkida dEvage ||1||
janakana maneyalli rAjAdhirAjaru
eNikeyilladale barutiralu
sanakAdivandyana kanDu santOShadi
jAnaki mAleya hAkida rAmage ||2||
rukumanu SiSupAlaganujeyIyuvanendu
sakalarAyaralli bandiralAgi
Bakutavatsalanannu kanDu santOShadi
rukumiNi mAleya hAkida kRuShNage ||3||
satyaBAmeyu nIle Badre kALindiyu
mitraviMdeyu lakShaNeyu jAMbavati
matte A sOLasAhasrakannikeyara
pratyakShavALida kalyANanige ||4||
padumadESadalobba dEvAnganeya
padumamuKi SrutihRutiya
padumanABa purandaraviThalage
padumAvatipriya SrInivAsage ||5||
3 thoughts on “Shobana shobhanave(Purandara dasaru)”