ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ||1||
ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ
ತುಂಬುರು ನಾರದ ಗಾನವಿಲೋಲಂ||2||
ಮಕರ ಕುಂಡಲಧಾರ ಮದನ ಗೋಪಾಲಂ
ಭಕ್ತ ಪೋಷಕ ಶ್ರೀ ಪುರಂದರ ವಿಠಲಂ||3||
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.||
ಕೆಂದಾವರೆಯಂತೆ ಪಾದಂಗಳು ರಂಗ
ಚಂದದಿ ಧಿಮಿಧಿಮಿ ಕುಣಿಯುತಲಿ
ಅಂದುಗೆ ಗೆಜ್ಜೆಯಿಂ ನಲಿಯುತ ಬಾರೋ
ಅರವಿಂದ ನಯನ ಗೋವಿಂದ ನೀ ಬಾರೋ ||೧||
ಕೋಟಿ ಸೂರ್ಯ ಪ್ರಭಾ ಕಾಂತಿಗಳಿಂದ
ಕಿರೀಟ ಕುಂಡಲ ಬಾವುಲಿ ಹೊಳೆಯೆ
ಲಲಾಟ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೋ ಈಗ ||೨||
ಮಂಗಳಾತ್ಮಕ ಮೋಹನಕಾಯನೆ
ಸಂಗೀತಲೋಲ ಸದ್ಗುಣಶೀಲ
ಅಂಗನೆ ಲಕುಮಿ ಸಹಿತವಾಗಿ ಬಂದೆನ್ನ
ಅಂಗಳದೊಳಗಾಡೊ ಪುರಂದರ ವಿಠಲ ||೩||
ತಿರುಪತಿ ವೆಂಕಟರಮಣ ನಿನಗ್ಯಾತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸ ಬೇಕೋ ಕರುಣ||
ಅಳಗಿರಿಯಿನ್ದಲ್ಲಿ ಬಂಡ ಸ್ವಾಮಿ ಅನ್ಜನಗಿರಿಯಲಿ ನಿಂದ
ಕೊಳಲು ಧ್ವನಿಯುದೋ ಕಂಡ ನಮ್ಮ ಕುಣ್ಡಲರಾಯ ಮುಕುಂದ||
ಬೇಡೆಯಾಡುತ ಬಂಡ ಸ್ವಾಮಿ ಬೆಟ್ಟದ ಮೇಲೆ ನಿಂದ
ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ||
ಮೂಡಲ ಗಿರಿಯಲಿ ನಿಂದ ಮುದ್ದು ವೆಂಕಟಪತಿ ಬಲವಂತ
ಇದಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕನನ್ತ||
ಆಡಿದರೆ ಸ್ಥಿರವಪ್ಪ ಅಭದ್ದಗಳಾಡಲು ಒಪ್ಪ
ಬೇಡಿದ ವರಗಳಿನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ||
ಅಪ್ಪವು ಅತಿರಸ ಮೆತ್ತ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ||
ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ||
ಕಾಶಿ ರಾಮೇಶ್ವರದಿನ್ದ ಅಲ್ಲಿ ಕಾಣಿಕೆ ಬರುವುದು ಕಂಡ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಕಂಡ||
ಎಲ್ಲಾ ದೇವರ ಗಂಡ ಆವಾ ಚಿಲ್ಲರೆ ದೈವದ ಮಿಂದ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡ||
ಕಾಸು ತಪ್ಪಿದರೆ ಪಟ್ಟಿ ಬತ್ತಿ ಕಾಸು ಬಿಡದೆ ಕಂಡು ಕಟ್ಟಿ
ದಾಸನೆನ್ದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆತ್ತಿ||
ದಾಸರ ಕಂಡರೆ ಪ್ರಾಣ ತಾ ಧರೆಯೊಳಧಿಕ ಪ್ರವೀಣ
ದ್ವೇಷಿಯ ಗಣ್ಡಲ ಕಾಣ ನಮ್ಮ ದೇವಗೆ ನಿತ್ಯ ಕಲ್ಯಾಣ||
ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕ್ಯ
ಎಸು ಮಹಿಮೆಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ||
ಚಿತ್ತಾವಧಾನ ಪರಾಕು ನಿನ್ನ ಚಿತ್ತದ ದಯಾ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು||
ಅಲ್ಲಲ್ಲಿ ಪರಿಷೆಯ ಗುಂಬು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಮ್ಪು||
ಅಲ್ಲಲ್ಲಿ ಜನಗಳ ಕೂಡ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಲ್ಲಿ ಊರಿಗೆ ಓಟ||
ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೆ ಪಾನ
ಕೋಪ ತಾಪಗಳ ನಿಧಾನ ನಮ್ಮ ಪುರಂದರ ವಿಟ್ಟಲನ ಧ್ಯಾನ||
ವೆಂಕಟರಮಣನೇ ಬಾರೋ ಶೇಷಾಚಲ ವಾಸನೆ ಬಾರೋ|
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ||
ಮುದ್ದು ಮುಖದ ಮಗುವೇ ನಿನಗೆ ಮುತ್ತು ಕೊಡುವೆನು ಬಾರೋ|
ನಿದ್ದೆಯಲೇಕೆ ನಿನ್ನೊಳಗೆ ನಾನು ಒಮ್ಮಿಕ್ಕೆನು ಬಾರೋ||1||
ಸುಂದರ ಗಿರಿಯ ನೆತ್ತಿಯದಾನಂದ ಮೂರುತಿಯೇ ಬಾರೋ|
ನಂದನ ಕಂದ ಗೋವಿಂದ ಮುಕುಂದ ಇಂದಿರೆಯ ರಸನೆ ಬಾರೋ||2||
ಕಾಮನಯ್ಯ ಕರುಳಾಲೋ ಶ್ಯಾಮಲಾ ವರ್ಣನೆ ಬಾರೋ|
ಕೋಮಲಾಂಗ ಶ್ರೀ ಪುರಂದರ ವಿಠ್ಠಲನೇ ಸ್ವಾಮಿ ರಾಯನೇ ಬಾರೋ||3||
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ | ಪ |
ಪೊಳೆವನೀರೊಳು ಗೆಲುವ ಮೋರೆಯ | ನೆಲವವೋಡುವ ಸುಳಿವ ಕಂಬದಿ | ಇಳೆಯ ನಳಿಯುವ ಭಳಿರೆ ಭಾರ್ಗವ ಖಳನ ಭೇದಿಸಿ ಕೊಳಲ ಧ್ವನಿಗೆ | ನಳಿನ ಮುಖಿಯರ ನಾಚಿಸುವ ಬಲು ಹಯದಳವ ಬಹು ಹವಣೆಗಾರನೆ | ಅ.ಪ |
ಆರು ಬಲ್ಲರು ನಿನ್ನ ಶ್ರಿ ಲಕುಮಿ ಮನಸಿಗೆ ತೋರುವೆಯೋ ಪರಬೊಮ್ಮಾ | ಉಳಿದವರು ಬಲ್ಲರೆ ನೀರಜಾಸನ ಬೊಮ್ಮಾ | ಇದು ನಿನ್ನಯ ಮರ್ಮಾ | ನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡಿಯ ನಾರಸಿಂಹನೆ | ಭೂಮಿ ಬೇಡಿದ ಧೀರ ಪುರುಷನೆ ವಾರಿ ಬಂಧನ ಮಾರಜನಕನೆ | ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ | ೧ |
ಸಕಲ ಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು | ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು | ನಿಖಿಲ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ | ಯುಕುತಿಯಲಿ ನೆಲೆವಳಿದ ಭಾರ್ಗವ | ಮುಕುತಿಗೋಸುಗ ಫಲವ ಸವಿದನೆ | ರುಕುಮನನುಜೆಯ ರಮಣ ಚೋದ್ಯನೆ ಲಕುಮಿರಮಣನೆ ಕಲ್ಕಿರೂಪಿಯೇ | ೨ |
ನಿನ್ನ ರುಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲಾ | ನಾಪಾಡೀ ಪೊಗಳಲು ಪನ್ನಗಾಧಿಪನಲ್ಲಾ | ನೀನರಿಯದಿಲ್ಲಾ | ಕಣ್ಣು ಮುಚ್ಚದೆ ಬೆನ್ನು ತೋರುವಿ ಮಣ್ಣನಗೆದು ಚಿಣ್ಣಗೊಲಿದನೆ | ಸಣ್ಣ ನಾಮದ ಅಣ್ಣ ರಾಮನೆ ಪುಣ್ಯ ಪುರುಷನೆ ಬನ್ನ ಬಡಕನೆ | ಹೆಣ್ಣುಗಳ ವ್ರತ ಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸ ವಿಠಲ | ೩ |
ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||
ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲಾ ಮುಕುಂದ ವೇದವೇದ್ಯ ನಿತ್ಯಾನಂದ ||ಅಪ||
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಬಂದು ಬಂದು ಈ ಭವದಿ ಬೆಂದು ನೊಂದೇನೊ ಮುಕುಂದ||೧||
ಎಷ್ಟು ದಿನ ಕಷ್ಟ ಪಡುವುದೊ
ಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳು
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯಪಿಡಿದು ||೨||
ಅನಿದಿನ ಅನೇಕ ರೋಗಂಗಳಾ ಅನುಭವಿಸುವೆನು
ಘನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರನ್ದರ ವಿಠಲನೇ ಬೇಗ ಬಲಿದು ||೩||
2 thoughts on “Dasara Padagalu on srinivasa devaru”