Thanks for supporting My blog!!!
Aahvana padagalu
ಭಾಗ್ಯದ ಲಕ್ಷ್ಮೀ ಬಾರಮ್ಮ||ಪ||
ನಮ್ಮಮ್ಮಾ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ||ಅ.ಪ||
ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ |
ಗೆಜ್ಜೆಕಾಲ್ಗಳ ನಾದವ ತೋರುತ ||
ಸಜ್ಜನ ಸಾಧು ಪೂಜೆಯ ವೇಳಗೆ |
ಮಜ್ಜಿಗೆಯೊಳಗಿನ ಬೆಣ್ಣೆಯಂತೆ||1||
ಕನಕವೃಷ್ಟಿಯ ಕರೆಯುತ ಬಾರೆ |
ಮನಕಾಮನವ ಸಿದ್ದಿಯ ತೋರೆ ||
ದಿನಕರ ಕೋಟಿ ತೇಜದಿ ಹೊಳೆಯುವ |
ಜನಕ ರಾಯನ ಕುಮಾರಿ ಬೇಗ ||2||
ಅತ್ತಿತ್ತಗಲದೆ ಭಕ್ತರ ಮನೆಯಲಿ |
ನಿತ್ಯ ಮಹೋತ್ಸವ ನಿತ್ಯ ಸುಮಂಗಳ ||
ಸತ್ಯವ ತೋರುತ ಸಾಧು ಸಜ್ಜನರ |
ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ ||3||
ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು |
ಕಂಕಣ ಕೈಯ ತಿರುವುತ ಬಾರೆ ||
ಕುಂಕುಮಾಂಕಿತೆ ಪಂಕಜಲೋಚನೆ |
ವೆಂಕಟರಮಣನ ಬಿಂಕದ ರಾಣಿ ||4||
ಸಕ್ಕರೆ ತುಪ್ಪ ಕಾಲುವೆ ಹರಿಸಿ |
ಶುಕ್ರವಾರದ ಪೂಜೆಯ ವೇಳೆಗೆ ||
ಅಕ್ಕರೆ ಉಳ್ಳ ಅಳಗಿರಿ ರಂಗನ |
ಚೊಕ್ಕ ಪುರಂದರ ವಿಠಲನ ರಾಣಿ ||5||
Bhāgyada lakṣmī bāram’ma||pa||
nam’mam’mā nī saubhāgyada lakṣmī bāram’ma ||a.Pa||
hejjeya mēle hejjeya nikkuta |
gejjekālgaḷa nādava tōruta ||
sajjana sādhu pūjeya vēḷage |
majjigeyoḷagina beṇṇeyante||1||
kanakavr̥ṣṭiya kareyuta bāre |
manakāmanava siddiya tōre ||
dinakara kōṭi tējadi hoḷeyuva |
janaka rāyana kumāri bēga ||2||
attittagalade bhaktara maneyali |
nitya mahōtsava nitya sumaṅgaḷa ||
satyava tōruta sādhu sajjanara |
cittadi hoḷeyuva put’thaḷigombe ||3||
saṅkhye illada bhāgyava koṭṭu |
kaṅkaṇa kaiya tiruvuta bāre ||
kuṅkumāṅkite paṅkajalōcane |
veṅkaṭaramaṇana biṅkada rāṇi ||4||
sakkare tuppa kāluve harisi |
śukravārada pūjeya vēḷege ||
akkare uḷḷa aḷagiri raṅgana |
cokka purandara viṭhalana rāṇi ||5||
ಬಾರೇ ಭಾಗ್ಯದ ನಿಧಿಯೇ ಕರವೀರನಿವಾಸಿನೀ ಸಿರಿಯೇ||ಪ||
ಬಾರೇ ಬಾರೇ ಕರವೀರನಿವಾಸಿನೀ ಬಾರಿ ಬಾರಿಗೂ ಶುಭ ತೋರಿ ನಮ್ಮಾ ಮನೆಗೆ||ಅ.ಪ||
ಲೋಕಮಾತೆಯು ನೀನು| ನಿನ್ನ ತೋಕನಲ್ಲವೇ ನಾನು|
ಆಕಳು ಕರುವನು ಸ್ವೀಕರಿಸುವ ಪರಿ ನೀ ಕರುಣದಿ ಕಾಲ್ಹಾಕು ನಮ್ಮಾ ಮನೆಗೆ||1||
ನಿಗಮವೇದ್ಯಳೇ ನೀನು| ನಿನ್ನ ಪೊಗಳಲಾಪೆನೇ| ನಾನು
ಮಗನಪರಾಧವ ತೆಗೆದೆಣಿಸದೇ ನೀ ಲಗುಬಗೆಯಿಂದಲಿ ಪನ್ನಗವೇಣಿ||2||
ಕಡೆಗೆ ನಮ್ಮ ಮನೆ ವಾಸ| ಒಡೆಯಾ ಅನಂತಾದ್ರೀಶ|
ಒಡೆಯನಿದ್ದಲ್ಲಿಗೆ ಮಡದಿಯು ಬಾಹೋದು ರೂಢಿಗೆ ಉಚಿತವೇ ನಡೆ ನಮ್ಮನೆಗೆ||3||
Bārē bārē karavīranivāsinī bāri bārigū śubha tōri nam’mā manege||a.Pa||
lōkamāteyu nīnu| ninna tōkanallavē nānu|
ākaḷu karuvanu svīkarisuva pari nī karuṇadi kāl’hāku nam’mā manege||1||
nigamavēdyaḷē nīnu| ninna pogaḷalāpenē| nānu
maganaparādhava tegedeṇisadē nī lagubageyindali pannagavēṇi||2||
kaḍege nam’ma mane vāsa| oḍeyā anantādrīśa|
oḍeyaniddallige maḍadiyu bāhōdu rūḍhige ucitavē naḍe nam’manege||3||
ಬಾರೇ ನಮ್ಮನೆ ತನಕ ಭಾಗ್ಯದ ದೇವಿ||ಪ||
ಬಾರೆ ನಮ್ಮನೆ ತನಕ ಬಹಳ ಕರುಣದಿಂದ
ಜೋಡಿಸಿ ಕರಗಳನೆರಗುವೆ ಚರಣಕೆ||ಅ.ಪ||
ಹರಡಿ ಕಂಕಣ ದುಂಡು ಕರದಲಿ ಹೊಳೆಯುತಾ
ತರಳನ ಮ್ಯಾಲೆ ತಾಯೇ ಕರುಣವಿಟ್ಟು||೧||
ಜರದ ಪೀತಾಂಬರ ನಿರಿಗೆಗಳಲೆಯತಾ ಸರಗಿ
ಸರವು ಚಂದ್ರಹಾರಗಳು ಹೊಳೆಯುತಾ||೨||
ಮಂದಗಮನೆ ನಿನಗೆ ವಂದಿಸಿ ಬೇಡುವೆ
ಇಂದಿರೇಶನ ಕೂಡಿ ಇಂದು ನಮ್ಮನೆ ತನಕ||೩||
Bārē nam’mane tanaka bhāgyada dēvi||pa||
bāre nam’mane tanaka bahaḷa karuṇadinda
jōḍisi karagaḷaneraguve caraṇake||a.Pa||
haraḍi kaṅkaṇa duṇḍu karadali hoḷeyutā
taraḷana myāle tāyē karuṇaviṭṭu||1||
jarada pītāmbara nirigegaḷaleyatā saragi
saravu candrahāragaḷu hoḷeyutā||2||
mandagamane ninage vandisi bēḍuve
indirēśana kūḍi indu nam’mane tanaka||3||
ಆಡುತ್ತಾ ಬಾರಮ್ಮಾ ನಲಿದಾಡುತ್ತಾ ಬಾರಂಮಾ
ಆಡುತ್ತ ವರಗಳಾ ನೀಡುತ್ತಾ ಕರುಣಾದಿ
ನೋಡುತ್ತ ದಯದಿಂದಾ
ಲಕ್ಷ್ಮಿ ಆಡುತ್ತಾ ಬಾರಮ್ಮಾ||pa||
ಬೇಸರವು ಬೇಡಮ್ಮಾ ದಾಸರ ದಾಸಿಯು ನಾನಿಂಮ
ವಾಸನಪೂರಿತೆ ವನರೂಹ ನೇತ್ರೆ
ಸಾಸಿರನಾಮದ ವಾಸುದೇವನ ಸತಿ
ಆಡುತ್ತಾ ಬಾರಮ್ಮಾ ನಲಿದಾಡುತ್ತಾ ಬಾರಂಮಾ||1||
ಕರದಾರವೊಯೆಂದು ತಾಯೆಯಂನಾ
ಮೊರೆಯಲಾಲಿಸೆ ನೀ ಬಂದು
ದುರಿತಗಳಾನೆಲ್ಲಾ ಪರಿಹರಿಸುವ ನಿಂಮ
ಕರುಣಾಮೃತವನು ಸ್ಮರಿಸುವೆ ಅನುದಿನ ಆಡುತ್ತಾ ಬಾರಮ್ಮಾ||2||
ಧರಣಿಯೊಳುನ್ನತವಾದ ಹೆಳವನಾಕಟ್ಟೆ
ಗಿರಿಯೊಳು ನೆಲಸಿದ
ಪರಮ ಪವಿತ್ರಳ ಕರುಣಾ ಸಿಂಧುವೆ
ವರವನು ಕೊಡುತ್ತಾ ಬೇಗಾದಿಂದಲಿ ಆಡುತ್ತಾ ಬಾರಮ್ಮಾ||3||
Āḍuttā bāram’mā nalidāḍuttā bārammā
āḍutta varagaḷā nīḍuttā karuṇādi
nōḍutta dayadindā
lakṣmi āḍuttā bāram’mā||pa||
bēsaravu bēḍam’mā dāsara dāsiyu nānimma
vāsanapūrite vanarūha nētre
sāsiranāmada vāsudēvana sati
āḍuttā bāram’mā nalidāḍuttā bārammā||1||
karadāravoyendu tāyeyannā
moreyalālise nī bandu
duritagaḷānellā pariharisuva nimma
karuṇāmr̥tavanu smarisuve anudina āḍuttā bāram’mā||2||
dharaṇiyoḷunnatavāda heḷavanākaṭṭe
giriyoḷu nelasida
parama pavitraḷa karuṇā sindhuve
varavanu koḍuttā bēgādindali āḍuttā bāram’mā||3||
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||
ಕರುಣಸಾಗರ ಹರಿತರುಣಿಯೆ ನೀ ಕೋಟಿ
ತರುಣ ಕಿರಣ ರತ್ನಾಭರಣನಿಟ್ಟು
ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||
ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ||2||
ಮುಗುಳುನಗೆಯ ಮುತ್ತುಗಳು ಜಡಿತ ಕ-
ರ್ಣಗಲ ವಾಲೆಯು ಕದಪಿನಲ್ಲಿ ಹೊಳೆಯೇ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3||
ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಾನಂತ ಮಹಿಮಳೆ ||4||
ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ
ವಾಸವಾಗಿರಲ್ಯತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗ್ವರನೀಹೊ ||5||
Nille nille kollāpuradēvi
ille bāre gejje ghillenuta||
karuṇasāgara haritaruṇiye nī kōṭi
taruṇa kiraṇa ratnābharaṇaniṭṭu
maṇikaunstubha vakṣa sthaḷadalliddo haḷeyuva
suparaṇavāhanā lakṣmi śaraṇu vanditaḷe||1||
paṅkajākṣi paṅkajōdbhavana janani
paṅkajamukhi pālise enna
paṅkajanābhana aṅkadalloppuva
paṅkaje ninna pādapaṅkajakeraguve ||2||
muguḷunageya muttugaḷu jaḍita ka-
rṇagala vāleyu kadapinalli hoḷeyē
bage bage sara baṅgāravaniṭṭu mū-
rjagava mōhiso jagadādhipatiya rāṇi||3||
sāgaradoḷag’huṭṭi āga śrīnāthana
byāga nōḍi paramōtsavadi
nāgaśayana nāgārivāhanana-
rdhāṅgi enisidānanta mahimaḷe ||4||
śēṣagiriya śrīnivāsana edeyallyā
vāsavāgiralyati prēmadali
īśa nārada brahmāsuraroḍeya bhī-
mēśakr̥ṣṇana nija dāsarigvaranīho ||5||
Aagamana padagalu
ಬಂದಾಳೋ ಭಾಗ್ಯಲಕ್ಷ್ಮೀ ನಮ್ಮ ಮನೆಗೆ |
ಸಂದೇಹವಿಲ್ಲದ ಹಾಗೆ ||ಪ||
ಬಂದಾಳೂ ನಮ್ಮ ಮನೆಗೆ | ನಿಂದಾಳೂ ಗೃಹದಲ್ಲಿ
ನಂದನಂದನರಾಣಿ ಇಂದಿರೇಶನ ಸಹಿತ ||ಅ.ಪ||
ಹೆಜ್ಜೆಯ ಮೇಲೆ ಹೆಜ್ಜೆನಿಕ್ಕುತ |
ಗೆಜ್ಜೆಯ ಕಾಲ ಘಲು ಘಲು ಘಲುರೆನ್ನುತಾ ||
ಮೂರ್ಜಗ ಮೋಹಿಸುತ ಮುರಹರಿಯ ರಾಣಿ |
ಸಂಪತ್ತು ಕೊಡಲಿಕ್ಕೆಂದು ವೆಂಕಟೇಶನ ಸಹಿತ ||1||
ಮಾಸ ಶ್ರಾವಣ ಮಾಸವು |
ಶುಕ್ರವಾರ ಪೌರ್ಣಿಮೆದಿನ ಮುನ್ನ ||
ಭೂಸುರರೆಲ್ಲ ಕೂಡಿ ಸಾಸಿರ ನಾಮಪಾಡಿ |
ವಾಸವಾಗಿರಲಿಕ್ಕೆ ವಾಸುದೇವನ ಸಹಿತ ||2||
ಕನಕವಾಯಿತು ಮಂದಿರ |
ಜನನಿ ಬರಲು | ಜಯ ಜಯ ಜಯ ವೆನ್ನಿರೊ ||
ಸನಕಾದಿ ಮುನಿಗಳ ಸೇವೆಯನ್ನು ಸ್ವೀಕರಿಸಿ |
ಕನಕವಲ್ಲಿಯು ತನ್ನ ಕಾಂತನ್ನ ಕೂಡಿಕೊಂಡು ||3||
ಉಟ್ಟ ಪೀತಾಂಬರವು | ಹೊಳೆಯುತ್ತ |
ಕರದಲ್ಲಿ ಘಟ್ಟಿ ಕಂಕಣವನು ಪಿಡಿಯುತ್ತ |
ಸೃಷ್ಠಿಗೊಡೆಯ ನಮ್ಮ ಪುರಂದರ ವಿಠಲನ |
ಪಟ್ಟದರಸಿನಮಗೆ ಇಷ್ಟಾರ್ಥ ಕೊಡಲಿಕೆಂದು||4||
Bandāḷō bhāgyalakṣmī nam’ma manege |
sandēhavillada hāge ||pa||
bandāḷū nam’ma manege | nindāḷū gr̥hadalli
nandanandanarāṇi indirēśana sahita ||a.Pa||
hejjeya mēle hejjenikkuta |
gejjeya kāla ghalu ghalu ghalurennutā ||
mūrjaga mōhisuta murahariya rāṇi |
sampattu koḍalikkendu veṅkaṭēśana sahita ||1||
māsa śrāvaṇa māsavu |
śukravāra paurṇimedina munna ||
bhūsurarella kūḍi sāsira nāmapāḍi |
vāsavāgiralikke vāsudēvana sahita ||2||
kanakavāyitu mandira |
janani baralu | jaya jaya jaya venniro ||
sanakādi munigaḷa sēveyannu svīkarisi |
kanakavalliyu tanna kāntanna kūḍikoṇḍu ||3||
uṭṭa pītāmbaravu | hoḷeyutta |
karadalli ghaṭṭi kaṅkaṇavanu piḍiyutta |
sr̥ṣṭhigoḍeya nam’ma purandara viṭhalana |
paṭṭadarasinamage iṣṭārtha koḍalikendu||4||
Sri Ramaa Sthothram
ಜಯ ಕೊಲ್ಹಾಪುರನಿಲಯೇ ಭಜದಿಷ್ಟೇತರವಿಲಯೇ
ತವ ಪಾದೌ ಹೃದಿಕಲಯೇ ರತ್ನರಚಿತ ವಲಯೇ
ಜಯ ಜಯ ಸಾಗರಜಾತೇ ಕುರು ಕರುಣಾಂಮಯಿಭೀತೇ
ಜಗದಂಬಾಭಿದಯಾತೇ ಜೀವತಿ ತ ಪೋತೇ
ಜಯ ಜಯ ಸಾಗರಸದನಾ ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನಾ ಕುಂದಮುಕುಲರದನಾ
ಸುರರಮಣಿನುತ ಚರಣೇ ಸುಮನಃ ಸಂಕಟಹರಣೇ
ಸುಸ್ವರ ರಂಜಿತವೀಣೇ ಸುಂದರ ನಿಜಕಿರಣೇ
ಭಜದಿಂದೀವರ ಸೋಮ ಭವ ಮುಖ್ಯಾಮರಕಾಮಾ
ಭಯಮೂಲಾಳಿವಿರಾಮ ಭಂಜಿತ ಮುನಿಭೀಮಾ
ಕುಂಕುಮ ರಂಜಿತ ಫಾಲೇ ಕುಂಜರ ಬಾಂದವಲೋಲೇ
ಕಲಧೌತಮಲಚೈಲೇ ಕೃಂತಕುಜನಜಾಲೇ
ಧೃತ ಕರುಣಾರಸಪೂರೇ ಧನದಾನೋತ್ಸವ ಧೀರೇ
ಧ್ವನಿಲವನಿಂದಿತಕೀರೇ ಧೀರೆದನುಜದಾರೇ
ಸುರ ಹೃತ್ಪಂಜರಕೀರಾ ಸುಮಗೇಹಾರ್ಪಿತ ಹಾರಾ
ಸುಂದರ ಕುಂಜವಿಹಾರ ಸುರವರಪರಿವಾರ
ವರ ಕಬರೀ ಧೃತ ಕುಸುಮೇ ವರಕನಕಾಧಿಕ ಸುಷಮೇ
ವನ ನಿಲಯಾ ದಯ ಭೀಮೇ ವದನ ವಿಜಿತ ಸೋಮೇ
ಮದಲಕ ಭಾಲಸಗಮನೇ ಮಧು ಮಥನಾಲಸ ನಯನೇ
ಮೃದುಲೋಲಾಕ ರಚನೇ ಮಧುರ ಸರಸಗಾನೇ
ವ್ಯಾಘ್ರಪುರೀವರನಿಲಯೇ ವ್ಯಾಸಪದಾರ್ಪಿತಹೃದಯೇ
ಕುರು ಕರುಣಾಮಹಿಸದಯೇ ವಿವಿಧ ನಿಗಮಗೇಯೇ
Jaya kol’hāpuranilayē bhajadiṣṭētaravilayē
tava pādau hr̥dikalayē ratnaracita valayē
jaya jaya sāgarajātē kuru karuṇāmmayibhītē
jagadambābhidayātē jīvati ta pōtē
jaya jaya sāgarasadanā jaya kāntyājita madanā
jaya duṣṭāntaka kadanā kundamukularadanā
suraramaṇinuta caraṇē sumanaḥ saṅkaṭaharaṇē
susvara ran̄jitavīṇē sundara nijakiraṇē
bhajadindīvara sōma bhava mukhyāmarakāmā
bhayamūlāḷivirāma bhan̄jita munibhīmā
kuṅkuma ran̄jita phālē kun̄jara bāndavalōlē
kaladhautamalacailē kr̥ntakujanajālē
dhr̥ta karuṇārasapūrē dhanadānōtsava dhīrē
dhvanilavaninditakīrē dhīredanujadārē
sura hr̥tpan̄jarakīrā sumagēhārpita hārā
sundara kun̄javihāra suravaraparivāra
vara kabarī dhr̥ta kusumē varakanakādhika suṣamē
vana nilayā daya bhīmē vadana vijita sōmē
madalaka bhālasagamanē madhu mathanālasa nayanē
mr̥dulōlāka racanē madhura sarasagānē
vyāghrapurīvaranilayē vyāsapadārpitahr̥dayē
kuru karuṇāmahisadayē vividha nigamagēyē
Sri Mahalakshmi stothra padagalu
ಶ್ರೀ ಮಹಾಲಕುಮಿ ದೇವಿಯೆ,
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ||ಪ||
ಹೇಮಗರ್ಭ ಕಾಮಾರಿ ಶಕ್ರಸುರ
ಸ್ತೋಮ ವಂದಿತಳೆ ಸೋಮ ಸೋದರಿಯೆ ||
ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ
ಕಟ್ಟಾಣಿ ತ್ರಿವಳಿ ಕೊರಳೋಳೆ
ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ
ಕಟ್ಟ ಕಂಕಣ ಕೈಬಳೆ
ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ
ಇಟ್ಟು ಶೋಭಿಸುವ ಅಷ್ಟಸಂಪನ್ನೆ ||
ಸಕಲ ಶುಭಗುಣಭರಿತಳೆ ಏಕೋದೇವಿಯೆ
ವಾಕುಲಾಲಿಸಿ ನೀ ಕೇಳೆ
ನೋತನೀಯನ್ನ ಮಹಲೀಲೆ ಕೊಂಡಾಡುವಂಥ
ಏಕಮನವ ಕೊಡು ಶೀಲೆ
ಬೇಕು ಬೇಕು ನಿನ್ನ ಪತಿ ಪಾದಾಬ್ಜವ
ಏಕಾಂತದಿ ಪೂಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ
ನೀ ಕರುಣಿಸಿ ಕಾಯೆ ರಾಕೇಂದುವದನೆ ||
ಮಂದರೋದ್ಧನರಸಿಯೆ ಇಂದಿರೆ ಯೆನ್ನ
ಕುಂದು ದೋಷಗಳಳಿಯೆ
ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ
ಕಂದನು ಮುಂದಕ್ಕೆ ಕರೆಯೆ
ಸಿಂಧುಶಯನ ಸಿರಿ ವಿಜಯವಿಠ್ಠಲರೇಯ
ಎಂದೆಂದಿಗೊ ಮನದಿಂದಗಲದೆ ಆ
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ
ವಂದಿಸಿ ಪೇಳಮ್ಮ ಸಿಂಧುಸುತೆಯಳೆ||
Śrī mahālakumi dēviye,
kōmalāṅgiye sāmagāyana priye ||pa||
hēmagarbha kāmāri śakrasura
stōma vanditaḷe sōma sōdariye ||
baṭṭukuṅkuma nosalōḷe muttina hosa
kaṭṭāṇi trivaḷi koraḷōḷe
iṭṭa ponnōle kiviyōḷe pavaḷada kaiya
kaṭṭa kaṅkaṇa kaibaḷe
toṭṭa kuppasa bigiduṭṭa pītāmbara
ghaṭṭi vaḍyāṇa kālandige ruḷigejje
beṭṭili poḷevudu veṇṭike kirupilli
iṭṭu śōbhisuva aṣṭasampanne ||
sakala śubhaguṇabharitaḷe ēkōdēviye
vākulālisi nī kēḷe
nōtanīyanna mahalīle koṇḍāḍuvantha
ēkamanava koḍu śīle
bēku bēku ninna pati pādābjava
ēkāntadi pūjipara saṅgava koḍu
lōkada janarige nā karavoḍḍadante
nī karuṇisi kāye rākēnduvadane ||
mandarōd’dhanarasiye indire yenna
kundu dōṣagaḷaḷiye
anda saubhāgyada siriye tāye nā ninna
kandanu mundakke kareye
sindhuśayana siri vijayaviṭhṭhalarēya
endendigo manadindagalade ā
nandadindali bandu munde kuṇiyuvante
vandisi pēḷam’ma sindhusuteyaḷe||
Udi thumbuva haadu
ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ-
ಳ್ವುಡಿಯ ತುಂಬಿರೆ ನಮ್ಮ ||pa||
ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||1||
ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು||2||
ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ
ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ||3||
Uḍiya tumbire nam’ma uḍurājamukhige
uḍiya tumbire nam’ma
kaḍale kobbari baṭṭaloḷu bāḷephalaga-
ḷvuḍiya tumbire nam’ma ||pa||
jambunērala gone jāmbūphalagaḷu
nimbe dāḷimbra audumbra phalagaḷu ||1||
uttatti drākṣi kittaḷe sītāphalavu
akki an̄jūra uttatti phalagaḷu||2||
śrēṣṭha bhīmēśa kr̥ṣṇana paṭṭadarasi
g’hacci kuṅkuma vīḷya koṭṭu rukmiṇige ||3||
Aarathi haadugalu
ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ||ಪ||
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||ಅ.ಪ||
ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ|
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ||1||
ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ|
ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ||2||
ಅಚ್ಚಮಲ್ಲಿಗೆ ಲಕ್ಷ ಸಂಪಿಗೆ ಎತ್ತಿರೇ ನಿಮ್ಮ ಪಾದಕೆ|
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||3||
ಹರಿಯ ವಂಚಿಸಿ ಕರವೀರದೊಳು ಭರದಿ ಸ್ಥಿರವಾಗಿರುವೊಳೇ|
ಪರಮಭಕ್ತರಿಗೆ ವರವ ಕೊಡುವ ನಿಗರ್ವಿಗೊಲಿಯುವ ದೇವಿಗೆ||4||
ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು|
ಹೆತ್ತಕುವರನ ತೋರಿದಂಥ ಶುಕ್ರವಾರದ ಗೌರಿಗೆ||5||
ನಿಗಮವೇದ್ಯಳೇ ನಿನ್ನ ಮಹಿಮೆಯ ಬಗೆಬಗೆಯಿಂದಲಿ ಪೊಗಳುವೆ|
ತೆರೆದು ಭಾಗ್ಯವ ನೀಡುವಂಥ ಭೀಮೇಶಕೃಷ್ಣನ ಮಡದಿಗೆ||6||
Ettirē navaratnadāruti kartr̥raṅgana rāṇige||pa||
uttamōttamalōlanāda viṣṇuvina kalyāṇige||a.Pa||
śud’dha snānava māḍi nadiyali vajrapīṭhadi kuḷisirē|
tiddi tilakava tīḍidantha muddu maṅgaḷagaurige||1||
eredu pītāmbaravanuḍisi sarvābharaṇavaniḍisirē|
haraḷinōle mūguti iṭṭa muddu mahālakṣmī dēvige||2||
accamallige lakṣa sampige ettirē nim’ma pādake|
uttamōttamalōlanāda viṣṇuvina kalyāṇige||3||
hariya van̄cisi karavīradoḷu bharadi sthiravāgiruvoḷē|
paramabhaktarige varava koḍuva nigarvigoliyuva dēvige||4||
huṭṭu baḍaviya kaṣṭa kaḷedu koṭṭaḷarasana siriyanu|
hettakuvarana tōridantha śukravārada gaurige||5||
nigamavēdyaḷē ninna mahimeya bagebageyindali pogaḷuve|
teredu bhāgyava nīḍuvantha bhīmēśakr̥ṣṇana maḍadige||6||
ಚೆಲ್ವೇರಾರತಿಯ ತಂದೆತ್ತಿರೆ ||
ಹುಟ್ಟಿದಳಾ ಕ್ಷೀರಸಾಗರದಲಿ ಸ-
ಮಸ್ತ ಜನರಿಗೆ ಸುಖವ ನೀಡುತ
ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ
ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ ||
ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-
ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ
ತಿದ್ದಿ ಬೈತಲು ಜಡೆಬಂಗಾರ ರಾಗಟೆ
ಪದ್ಮನಾಭನ ರಾಣಿ ಮಾಲಕ್ಷ್ಮಿಗೆ ||
ಸಣ್ಣ ಮುತ್ತಿನ ವಾಲೆ ಸರಪಳಿ ಚಳತುಂಬು
ಚಿನ್ನದ ಸರಿಗೆ ಮೋಹನ್ನಮಾಲೆ
ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ
ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ ||
ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ
ನಳಿತೋಳಿನಲಿ ನಾಗಮುರಿಗೆ ವಂಕಿ
ಗಿಳಿಯು ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು
ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ ||
ಗರುಡವಾಹನನ್ಹೆಗಲಿಳಿದು ಶ್ರೀನಾಥನ
ಹರಡಿ ಕಂಕಣ ಕರವ್ಹಿಡಿದುಕೊಂಡು
ಮುಡಿದ ಮಲ್ಲಿಗೆ ಪಾರಿಜಾತಗಳುದುರುತ
ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ ||
ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ
ಆದರದಿಂದೆನ್ನ ಮನೆಗೆ ಬಂದು
ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ-
ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ ||
Celvērāratiya tandettire ||
huṭṭidaḷā kṣīrasāgaradali sa-
masta janarige sukhava nīḍuta
śrēṣṭharoḷage jēṣṭhādēvi śrīnāthana
paṭṭadarasi muddu mālakṣmige ||
muddu mōrege takka mukhurya bulāka-
niṭṭa vajrada buguḍi vaiyāradinda
tiddi baitalu jaḍebaṅgāra rāgaṭe
padmanābhana rāṇi mālakṣmige ||
saṇṇa muttina vāle sarapaḷi caḷatumbu
cinnada sarige mōhannamāle
kaṇṇakāḍige hacci kastūri kuṅkuma
cennāra celuve śrī mālakṣmige ||
seḷenaḍuvige takka biḷiya pītāmbara
naḷitōḷinali nāgamurige vaṅki
giḷiyu kamala dvārya haraḍi kaṅkaṇaniṭṭu
kaḷeya suriva celve mālakṣmige ||
garuḍavāhananhegaliḷidu śrīnāthana
haraḍi kaṅkaṇa karavhiḍidukoṇḍu
muḍida mallige pārijātagaḷuduruta
naḍedu baruvo muddu mālakṣmige ||
pādadi ruḷi gejje nāda jhēṅkarisuta
ādaradindenna manege bandu
śrīdhara bhīmēśakr̥ṣṇanedeya myālvi-
nōdadi kuḷitidda mālakṣmige ||
Mangala Haadugalu
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಧರೆಯೊಳಗೆ ನಿನ್ನಂಥ ತರುಣಿಮಣಿಯನು ಕಾಣೆ ಹರಿಯ ವಕ್ಷಸ್ಥಳದಿ ಇರುವೆ ನೀನು
ಕರವೆತ್ತಿ ಮುಗಿವೆನು ಸಿರಿಯ ತವ ಸೌಭಾಗ್ಯವನೆರಡು ಕಣ್ಣಿಗೆ ತೊರೆದು ವರಮಹಾಲಕ್ಷ್ಮೀ ||
ಜರದ ಪೀತಾಂಬರವ ಚರಣದಲ್ಲಲೆಸುತಾ ಸಿರಿವಂತಿ ಮೂರು ಹೆಜ್ಜೆ ಬರುವಳಾಗಿ
ಸೆರಗೊಡ್ಡಿ ಬೇಡುವೆನು ಹೆರಳಲ್ಲಿ ಮುಡಿದಿರುವ ಮರುಗ ಮಲ್ಲಿಗೆ ಚಂಪೆ ಸರಗಳನು ನೋಡೇ||
ಇಂದುಮುಖಿ ನಿನಗಾರುತಿ ತಂದು ನಿಂದಹನೈ ಸುಂದರಾಮೃತ ಕೀರ್ತಿ ಪಾಡುತಿಹೆನು
ಇಂದಿರೇಶನ ರಾಣಿ ಹಿಂದಲೆಯಲ್ಲಿರುವ ಕುಂದದ ಕುಸುಮದ ಮಾಲೆ ನೀಡು||
Jaya maṅgaḷaṁ nitya śubha maṅgaḷaṁ
dhareyoḷage ninnantha taruṇimaṇiyanu kāṇe hariya vakṣasthaḷadi iruve nīnu
karavetti mugivenu siriya tava saubhāgyavaneraḍu kaṇṇige toredu varamahālakṣmī ||
jarada pītāmbarava caraṇadallalesutā sirivanti mūru hejje baruvaḷāgi
seragoḍḍi bēḍuvenu heraḷalli muḍidiruva maruga mallige campe saragaḷanu nōḍē||
indumukhi ninagāruti tandu nindahanai sundarāmr̥ta kīrti pāḍutihenu
indirēśana rāṇi hindaleyalliruva kundada kusumada māle nīḍu||
ಮಂಗಳವೆನ್ನಿ ಮಹಾಲಕ್ಷ್ಮಿಗೆ ಈಗ||ಪ||
ಶ್ರೀರಂಗನರಸಿ ಮಹಾದೇವಿಗೆ ಬೇಗ||ಅ.ಪ||
ಸಿಂಧುನಂದನೆಗೆ ನಂದನಂದನೆದೆಯಲ್ಲಿ
ಹೊಂದಿಕೊಂಡಿರುವಂಥ ಸುಂದರ ಸಿರಿಗೆ||1||
ವರಮಣಿ ವೈಜಯಂತಿ ಹರಿ ಶ್ರೀವತ್ಸದಲ್ಲಿ
ಸರಸವಾಗಿರುವಂಥ ವರಮಹಾಲಕ್ಷ್ಮಿಗೆ||2||
ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ
ಅರಳು ಮಲ್ಲಿಗೆ ಮೊಗ್ಗು ವರವ ಕೊಡೆನಗೆ||3||
ರಂಗನರಸಿ ಬೆಳ್ಳಿ ಬಂಗಾರವೆನಗಿತ್ತು
ಕಂಗಳಿಂದಲಿ ನೋಡಿ ಮಂಗಳ ನೀಡೆ||4||
ಆದಿನಾರಾಯಣ ಅನಂತಗುಣ ಪರಿಪೂರ್ಣನಾದ
ಭೀಮೇಶಕೃಷ್ಣನರಸಿ ರುಕ್ಮಿಣಿಗೆ||5||
Maṅgaḷavenni mahālakṣmige īga||pa||
śrīraṅganarasi mahādēvige bēga||a.Pa||
sindhunandanege nandanandanedeyalli
hondikoṇḍiruvantha sundara sirige||1||
varamaṇi vaijayanti hari śrīvatsadalli
sarasavāgiruvantha varamahālakṣmige||2||
heraḷu baṅgāra rāgaṭe goṇḍya kyādige
araḷu mallige moggu varava koḍenage||3||
raṅganarasi beḷḷi baṅgāravenagittu
kaṅgaḷindali nōḍi maṅgaḷa nīḍe||4||
ādinārāyaṇa anantaguṇa paripūrṇanāda
bhīmēśakr̥ṣṇanarasi rukmiṇige||5||
Varava koduva haadu
ವಂದಿಸಿ ಬೇಡುವೆ ನಾ ವರಗಳ
ವಂದಿಸಿ ಬೇಡುವೆ ನಾ||ಪ||
ವಂದಿಸಿ ಬೇಡವೆ ಇಂದಿರೆ ಮುಡಿದಂಥ ಕುಂದ ಮಂದಾರ ನಾಗಸಂಪಿಗೆ||ಅ.ಪ||
ಹಸಿರು ಶ್ಯಾವಂತಿಗೆ ಕುಸುಮ ಮಲ್ಲಿಗೆದಂಡೆ|
ಎಸೆವೋ ಕ್ಯಾದಿಗೆ ಪಾರಿಜಾತದ ವರಗಳ ನಾ||1||
ಕಟ್ಟಿದ್ದ ಮಾಂಗಲ್ಯ ಕುಂಕುಮ ಗಾಜಿನಬಳೆ|
ಮುತ್ತೈದೆತನ ಸಂಪತ್ತು ಸಂತಾನಕೆ ನಾ||2||
ಕಮಲಾಕಾಂತ ಭೀಮೇಶಕೃಷ್ಣನ ರಾಣಿ ಮುಡಿದ|
ಕಮಲ ಮಲ್ಲಿಗೆ ಕಾಮಿತಾರ್ಥದ ವರಗಳ ನಾ||3||
Vandisi bēḍuve nā varagaḷa
vandisi bēḍuve nā||pa||
vandisi bēḍave indire muḍidantha kunda mandāra nāgasampige||a.Pa||
hasiru śyāvantige kusuma malligedaṇḍe|
esevō kyādige pārijātada varagaḷa nā||1||
kaṭṭidda māṅgalya kuṅkuma gājinabaḷe|
muttaidetana sampattu santānake nā||2||
kamalākānta bhīmēśakr̥ṣṇana rāṇi muḍida|
ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ
ಮಾಡಿ ದಯವನು ನೋಡೆ ನೀ ಎನ್ನ
ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ
ಕರವೀರ ವಾಸಿಯೆ ||ಪ||
ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ
ಮುದದಿ ಮನ್ನಿಸಿ ಕಳುಹುತಿರೆ ಕಂಡು
ಒದಗಿ ಬಂದ ಕೋಪದಿಂದ
ಯದುನಾಥನ ಎದೆಯಿಳಿದು ಬೇಗನೆ
ಕದನ ಮಾಡುತ ಕೊಲ್ಲಾಪುರವನು
ಸದನ ಮಾಡಿದೆ ಸುಂದರಾಂಗಿಯೆ ||1||
ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ
ಬೆಟ್ಟದಲಿ ನಿಂತಿದ್ದನೆ ಬಂದು
ಪಟ್ಟದರಸಿಯು ನೀನು ಜನಕನ
ಪುತ್ರಿಯಾದ ಕಾಲದಲಿ
ಕೊಟ್ಟ ವಚನವ ನಡೆಸಿ ಪತಿಗೆ ನೀ
ಪತ್ನಿಮಾಡಿದೆ ಪದ್ಮಾವತಿಯ ||2||
ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು
ನಿನ್ನಶಿರ ಶೃಂಗಾರಾಭರಣಗಳು ಅಮ್ಮ
ತ್ರಿಜಗದಂಬಾ ನಿನ್ನ
ಮುಖ ಒಮ್ಮೆ ನೋಡಲು ಧನ್ಯರಾಗೋರು
ಬ್ರಹ್ಮನಪಿತನರಸಿ ಎನಗೆ ನೀ
ರಮ್ಮೆಪತಿಪಾದಾಂಘ್ರಿ ತೋರಿಸೆ ||3||
ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ
ನೀ ಅಧ್ಯಕ್ಷಳಾಗಿದ್ದು
ಇಕ್ಷುಚಾಪನ ಜನನಿ ಕರವೀರ
ಕ್ಷೇತ್ರದಲಿ ಪ್ರತ್ಯಕ್ಷಳಾಗಿ
ಮೋಕ್ಷಾಪೇಕ್ಷಿಗಳಾದ ಜನರಿಗೆ
ರಕ್ಷಿಸಿ ವರಗಳ ಕೊಡುವ ಮಾತೆಯೆ||4||
ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ
ಪ್ರೇಮದಿಂದಲಿ ಪಾಲಿಸಿ ನೀನು
ಶ್ಯಾಮವರ್ಣನ ದಿವ್ಯ ಸಾಸಿರ
ನಾಮ ನಾಲಿಗೆಲಿರಲು ನಿಲಿಸಿ
ಭೂಮಿಗೊಡೆಯ ಭೀಮೇಶಕೃಷ್ಣನ
ಧಾಮದ ದಾರಿಗಳ ತೋರಿಸೆ ||5||
Bēḍikombene varava nā ninna mālakṣmitāyi
māḍi dayavanu nōḍe nī enna
pāḍi koṇḍāḍuvenu pan̄cagaṅgā tīradali
karavīra vāsiye ||pa||
odeyutiralu ā pādadi bandu padumākṣa muniya
mudadi mannisi kaḷuhutire kaṇḍu
odagi banda kōpadinda
yadunāthana edeyiḷidu bēgane
kadana māḍuta kollāpuravanu
sadana māḍide sundarāṅgiye ||1||
biṭṭu ninna vaikuṇṭhadi hariyu iḷidu an̄janā
beṭṭadali nintiddane bandu
paṭṭadarasiyu nīnu janakana
putriyāda kāladali
koṭṭa vacanava naḍesi patige nī
patnimāḍide padmāvatiya ||2||
ramyavāda rajata hēmagaḷu guḍigōpuragaḷu
ninnaśira śr̥ṅgārābharaṇagaḷu am’ma
trijagadambā ninna
mukha om’me nōḍalu dhan’yarāgōru
brahmanapitanarasi enage nī
ram’mepatipādāṅghri tōrise ||3||
pakṣivāhananvakṣasthaḷadalli āvāsavāgi lakṣmi
nī adhyakṣaḷāgiddu
ikṣucāpana janani karavīra
kṣētradali pratyakṣaḷāgi
mōkṣāpēkṣigaḷāda janarige
rakṣisi varagaḷa koḍuva māteye||4||
nēmadindali namisuvenu ninage mālakṣmitāyi
prēmadindali pālisi nīnu
śyāmavarṇana divya sāsira
nāma nāligeliralu nilisi
bhūmigoḍeya bhīmēśakr̥ṣṇana
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ಕಟ್ಟುವ ತೊಟ್ಟಿಲಲ್ಲಿ ಗಂಡು ಮಕ್ಕಳು ಮುತ್ತೈದೆತನವ ಮುದದಿಂದ
ಮುತ್ತೈದೆತನವ ಮುದದಿಂದ ಬೇಡುವೆ ಶ್ರೀ ಮಹಾಲಕುಮಿಯೇ ದಯಮಾಡು
ಅಂದಣ ರಥವು ಬಂದು ಹೋಗೋ ಹೆಣ್ಣುಮಕ್ಕಳು ಬಂಧುಗಳಿಗೆ ಬಲು ಕ್ಷೇಮ
ಬಂಧುಗಳಿಗೆ ಬಲು ಕ್ಷೇಮವಿರುವಂತೆ ಇಂದಿರಾದೇವಿಯೇ ದಯಮಾಡಿ
ದಂಪತ್ತಿನಲಿ ಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನವಿರುವಂತೆ ಸಂತೋಷದಿ ವರವ ದಯಮಾಡು
ಅನ್ನ ಗೋವುಗಳು ದಿವ್ಯಕನ್ಯಾ ಭೂದಾನ ಹಿರಣ್ಯದಾನಗಳ ಹಿತದಿಂದ
ಹಿರಣ್ಯದಾನಗಳ ಹಿತದಿಂದ ಮಾಡುವಂತೆ ಸಂಪನ್ನೆ ನೀ ವರವ ದಯಮಾಡು
ಇಂದಿಗೆ ಮನೋಭೀಷ್ಠ ಎಂದಿಗೆ ನಿಮ್ಮ ಪಾದ ಹೊಂದಿರುವಂತೆ ಮರೆಯದೆ
ಹೊಂದಿರುವಂತೆ ಮರೆಯದೆ ಭೀಮೇಶಕೃಷ್ಣನರ್ಧಾಂಗಿಯೇ ದಯಮಾಡಿ
Dēvi ninnaya muḍi mēlidda mallige hūva koḍē tāyi varava koḍē
kaṭṭuva toṭṭilalli gaṇḍu makkaḷu muttaidetanava mudadinda
muttaidetanava mudadinda bēḍuve śrī mahālakumiyē dayamāḍu
andaṇa rathavu bandu hōgō heṇṇumakkaḷu bandhugaḷige balu kṣēma
bandhugaḷige balu kṣēmaviruvante indirādēviyē dayamāḍi
dampattinali suta sampattu saubhāgya intha mandirake bahumāna
intha mandirake bahumānaviruvante santōṣadi varava dayamāḍu
anna gōvugaḷu divyakan’yā bhūdāna hiraṇyadānagaḷa hitadinda
hiraṇyadānagaḷa hitadinda māḍuvante sampanne nī varava dayamāḍu
indige manōbhīṣṭha endige nim’ma pāda hondiruvante mareyade
hondiruvante mareyade bhīmēśakr̥ṣṇanardhāṅgiyē dayamāḍi