I am really sorry for posting this varalakshmi song late.
It’s never too late to start.
ಶೌನಕಾದಿ ಮುನಿಗಳಿಗೆ
ಸಾನುರಾಗದಲಿ ಪೇಳಿದರು|| 1||
ಕೈಲಾಸಶಿಖರ ಮೆರೆವುದು
ಮೇಲಾದ ರತ್ನಕಾಂತಿಗಳಿಂ||2||
ಜಂಬುಕೇತಕಿ ಪನಸ ಪುನ್ನಾಗ
ಸರ್ವಾತಿಶಯದಲಿ ತೋರುವದು|| 3||
ಸಿದ್ಧಿದಾಯಕ ವೆಂದಿಲ್ಲಿ
ಪದಧ್ಯಾನದಿ ಕುಳಿತಿಹರು|| 4||
ದಿವಿಜ ಅವನಿಧರಾಗ್ರಣಿಯಾಗಿ
ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ
ಗಿರಿಯು ಮೆರೆಯುವುದು||5||
ಪಾರ್ವತಿಯೊಡನೆ
ಸತಿ ನಮಿಸಿ ನುಡಿದಳು|| 6||
ನುಡಿಯ ಲಾಕ್ಷಣದಿ
ನಾಕರುಣಿಸುವೆ ಕೇಳೆಂದ||7||
ವರಮಹಾಲಕ್ಷ್ಮಿಯ ವೃತವು
ದೊರೆವುದು ಸಕಲಸೌಭಾಗ್ಯ|| 8||
ಶ್ರಾವಣ ಪೂರ್ಣ ಮಾಸಿಯ ದಿನದಿ ಪೂಜಿಪದು
ವಿಶ್ವಾಸದಿಂದಾರಾಧಿಸುತಲಿ ||9||
ಪಕ್ವಾನ್ನ ಲೇಹ್ಯಾದಿ ನೈವೇದ್ಯ
ತತ್ತನ್ನಿಯಾಮಕರ ಚಿಂತಿಪುದು ||10||
ಕೃಪಾಪಯೋನಿಧೆಯ ಪೂಜಿಪುದು
ಬಿಂಬಾಪರೋಕ್ಷಿಗಳು ಪೂಜಿಪರು ||11||
ಕಾಮಿತ ಪಡೆದವರ್ಯಾರು
ಮಹಾಮಹಿಮೆಯನು ಚನ್ನಾಗಿ||12||
ಮಡದಿ ತಾನಿರಲು
ಕರೆಯುವರೆಲ್ಲಾರು ಪುರದಿ ||13||
ವನಜನಾಭನ ಶೇವೆಯೆಂದು
ಗುಣದಿ ಭೂಷಿತಳು ||14||
ಬಂದಳು ವರಮಹಾಲಕ್ಷ್ಮಿ
ಪರಮ ಸಂಭ್ರಮದಿ ||15||
ನಿರ್ಮಿಸುವನು ಜಗವೆಲ್ಲ
ನೀ ಕರುಣಿಸು ಮಾತೆ|| 16||
ಶ್ರಾವಣ ಹರುಷದಿಂದೆನ್ನಯ ವೃತವ
ವರಗಳನಿತ್ತಳು ದಯದಿ ||17||
ಸಂತೋಷದಲಿ ಪೇಳಲವರು
ಚಿಂತಿತ ಫಲವೀವುದೆಂದು||18||
ಸಿಂಗರಿಸಿದಳಾದಿನದಿ
ವಿಪ್ರಾಂಗನೆಯರನು ಕರೆದಳು ||19||
ಶಿರಿದೇವಿ ಪೂಜಾಸಾಧನವ
ನೆರೆದರಾ ದ್ವಿಜನಮಂದಿರದಿ|| 20||
ಕುಂಭಗಳಿಟ್ಟಘ್ರ್ಯಾದಿಗಳಿಂ
ಸುರರ ಸಮ್ಮುಖದಿ ||21||
ಇಂದಿರ ದೇವಿಗಾರುತಿಯ
ಬಂಧÀ£ವÀನÉ ಮಾಡುತಿಹರು ||22||
ಪೂಜಿಸುತಿರಲಾಗೃಹವು
ಸೋಜಿಗವಾಯ್ತು ನೋಳ್ಪರಿಗೆ ||23||
ಕೊರಳೊಳುನವರತ್ನಹಾರ
ಸಿರಿದೇವಿ ಕರುಣವಿದೆಂದು ||24||
ಇತ್ತರು ಬಾಗಿಣಗಳನು
ಪೋದರು ತಮ್ಮ ಮನೆಗೆ ||25||
ಪುಣ್ಯದಿಂದೆಲ್ಲರು ನಾವೆಂ
ಧನಧಾನ್ಯ ಸಂಪದಾಗಮನ ||26||
ಪಾಲಿಸುವಳು ಸಿರಿಯೆಂದು
ಶಿವನು ಹೀಗೆಂದು ||27|
ಕಾಯಜ ಜನನಿಯ
ಕಾಯುವದೆಂದು ನೀ ತಿಳಿಯೆ|| 28||
ನಿರ್ಮಲ ಭಕ್ತಿe್ಞÁನ
ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲಿವನು ನಿರುತ ಪಠಿಸಲು||29||
Śaunakādi munigaḷige
sānurāgadali pēḷidaru|| 1||
kailāsaśikhara merevudu
mēlāda ratnakāntigaḷiṁ||2||
jambukētaki panasa punnāga
sarvātiśayadali tōruvadu|| 3||
sid’dhidāyaka vendilli
padadhyānadi kuḷitiharu|| 4||
divija avanidharāgraṇiyāgi
bhuvanōdaratvadi bhuvanajanābha śrīdhavanante
giriyu mereyuvudu||5||
pārvatiyoḍane
sati namisi nuḍidaḷu|| 6||
nuḍiya lākṣaṇadi
nākaruṇisuve kēḷenda||7||
varamahālakṣmiya vr̥tavu
dorevudu sakalasaubhāgya|| 8||
śrāvaṇa pūrṇa māsiya dinadi pūjipadu
viśvāsadindārādhisutali ||9||
pakvānna lēhyādi naivēdya
tattanniyāmakara cintipudu ||10||
kr̥pāpayōnidheya pūjipudu
bimbāparōkṣigaḷu pūjiparu ||11||
kāmita paḍedavaryāru
mahāmahimeyanu cannāgi||12||
maḍadi tāniralu
kareyuvarellāru puradi ||13||
vanajanābhana śēveyendu
guṇadi bhūṣitaḷu ||14||
bandaḷu varamahālakṣmi
parama sambhramadi ||15||
nirmisuvanu jagavella
nī karuṇisu māte|| 16||
śrāvaṇa haruṣadindennaya vr̥tava
varagaḷanittaḷu dayadi ||17||
santōṣadali pēḷalavaru
cintita phalavīvudendu||18||
siṅgarisidaḷādinadi
viprāṅganeyaranu karedaḷu ||19||
śiridēvi pūjāsādhanava
neredarā dvijanamandiradi|| 20||
kumbhagaḷiṭṭaghryādigaḷiṁ
surara sam’mukhadi ||21||
indira dēvigārutiya
bandhaÀ£vaÀnaÉ māḍutiharu ||22||
pūjisutiralāgr̥havu
sōjigavāytu nōḷparige ||23||
koraḷoḷunavaratnahāra
siridēvi karuṇavidendu ||24||
ittaru bāgiṇagaḷanu
pōdaru tam’ma manege ||25||
puṇyadindellaru nāveṁ
dhanadhān’ya sampadāgamana ||26||
pālisuvaḷu siriyendu
śivanu hīgendu ||27|
kāyaja jananiya
kāyuvadendu nī tiḷiye|| 28||
nirmala bhaktieñaÁna
vairāgya iḷeyoḷu kārpara nilaya śrīnarahari
olivanu niruta paṭhisalu||29||