dasara padagalu · guru jagannatha dasaru · lakshmi · Mahalakshmi

Lakshmi Sthavaraja

ಹರಿಯರಸಿ ಸಿರಿನೀನೆ ಸರ್ವದ
ಹರಿಯ ವಕ್ಷಸ್ಥಲ ನಿವಾಸಿನಿ
ಹರಿಯ ದಕ್ಷಿಣ ತೊಡೆಯೊಳೊಪ್ಪುತಕಾಲದೇಶದಲಿ
ಹರಿಯ ಸಹಿತದಿ ಹರ್ಯನುಜ್ಞದಿ
ಹರಿಯ ಸೇವಾನಿರುತಗೈಯುತ
ಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||1||

ಹರಿಯ ಕರುಣದಿ ಸರಸಿಜಾಂಡವ
ಹರಿಯ ಸಹಿತದಿ ಹರಿಯ ತೆರದಲಿ
ಹರಿಯ ಮನಕತಿ ಪ್ರೀತಿಗೋಸುಗ ಸೃಷ್ಟಿಸ್ಥಿತಿಲಯವ
ಹರಿಯ ಚಿತ್ತನುಕೂಲಮಾಡುತ
ಹರಿಯ ಸಂಕಲ್ಪಾನುಸಾರದಿ
ಹರಿಯನುಗ್ರಹ ಪಡೆದ ನಿನ್ನನು ಸ್ತುತಿಪೆನನವರತ ||2||

ಹರಿಯ ರಮಣಿಯೆ ಹರಿಯ ಜ್ಞಾನವ
ಹರಿಯ ಪದಯುಗ ಭಕ್ತಿ ಪಾಲಿಸಿ
ಹರಿಯ ಸಹಿತದಿ ನಿನ್ನ ರೂಪವ ಎನ್ನ ಮನದಲ್ಲಿ
ಹರಿಯ ವಲ್ಲಭೆ ತೋರೆ ಸಂತತ
ಹರಿಯ ಮನ ಸಂಕಲ್ಪದಂತೇ
ಹರಿಯ ಮೂರುತಿ ನೆನಹನಿತ್ತೂ ಪೊರಿಯೆ ಮಜ್ಜನನೀ ||3||

ಹರಿಯ ಹೃದಯದಲಿದ್ದ ತೆರದಲಿ
ಶಿರಿಯೆ ಎನ್ನಯ ಸದನ ಮಧ್ಯದಿ
ಹರಿಯ ಸಹಿತದಿ ನೀನೆ ನೆÀಲಸೀ ಸರ್ವಕಾಲದಲಿ
ಹರಿಯ ನಿನ್ನಯ ಸೇವೆ ಗೋಸುಗ
ಪರಮ ನಿನ್ನ ವಿಭೂತಿ ಸಹಿತದಿ
ಹರಿ ವಿಭೂತಿಜ ಸಕಲ ಭಾಗ್ಯವನಿತ್ತು ಪೊರೆಯೆನ್ನ ||4||

ಹರಿಯ ಮಾನಿನಿ ಸಕಲ ಸಂಪದ
ಹರಿಯ ಪ್ರೇಮದಿಯಿತ್ತು ನೀನೇ
ಹರಿಯ ಸೇವೆಯ ಗೈಸಿ ಎನ್ನನು ಪೊರೆಯೆ ಮಜ್ಜನನೀ
ಹರಿಯ ಸಹಿತದಿ ನೀನೆ ಸಂತತ
ಬೆರೆತು ಮನೆಯಲಿ ಸ್ವರ್ಣವೃಷ್ಟಿಯ
ಕರೆದು ಭಾಗ್ಯವನಿತ್ತು ಎನ್ನನು ಪೊರೆಯೆ ಶಿರಿದೇವಿ ||5||
ಹರಿಯ ಸಹ ವೈಕುಂಠಲೋಕದಿ
ಇರುವೊ ತೆರದಲಿ ಎನ್ನ ಸದನದಿ
ಹರಿಯ ಸಹಿತದಲಿದ್ದು ಮಂಗಳ ಕಾರ್ಯದಿನದಿನದಿ
ಹರಿಯ ತತ್ತ್ವವಿಚಾರ ನಿನ್ನಯ
ಹರಿಯ ಮಹಿಮೆಯನರುಹಿ ಸಂತತ
ಹರಿಯ ಭಕ್ತರಸಂಗದಲಿ ಹರಿದಾಸನೆನಿಸೆನ್ನ ||6|

ಹರಿಯು ಜನಕನು ಜನನಿ ನೀನೇ
ಶಿರಿಯನಿತ್ತೂ ಪಾಲಿಸೆಂದೆನು
ಹರಿಯ ಮಂದಿರವೆನಿಪ ಎನ್ನಯ ಹೃದಯ ಮಧ್ಯದಲಿ
ಹರಿಯ ಗೂಡ್ಯನುದಿನದಿ ನಿನ್ನಯ
ಹರಿಯ ರೂಪವ ತೋರಿ ಭಾಗ್ಯವ
ಕರದಿ ನೀಡಿಪರಿಯಲೆನ್ನನು ಪೊರೆಯೆ ಶಿರಿದೇವಿ ||7||

ಹರಿಯ ಪದಸಂಜಾತವಾದಾ
ಧರಣಿಮಂಡಲ ಶಿರಿಯೆ ನಿನಗೇ
ಅರಸನಾಗಿಹ ಹರಿಯಗೂಡಿ ನಿಧಿಯನೀಡಮ್ಮ
ಹರಿಯ ಕರುಣದಿ ಭಾಗ್ಯನೀಡುವ
ಪರಮ ಶಕುತಿಯು ನಿನಗೆ ಇರುವುದು
ಕರುಣದಿಂದಲಿ ನೋಡಿ ಭಾಗ್ಯವನಿತ್ತು ಪೊರೆಯಮ್ಮ ||8||

ಹರಿಗೆ ಅರಸೀ ಎನಿಪ ನಿನ್ನನು
ಸರಸಿಜಾಸನ ರುದ್ರಶಕ್ರರು
ಪರವiಭಕುತಿ ಜ್ಞಾನ ಪೂರ್ವಕ ಭಜಿಸಿನಿಜಗತಿಯ
ತ್ವರದಿ ಸೇರಿದ ಶ್ರುತಿಯವಾರ್ತೆಯ
ಕರಣದಿಂದರಿತೀಗ ನಿನ್ನಯ
ಚರಣಕಮಲವ ಮನದಿಸಂತತ ಭಜಿಪೆಕಲ್ಯಾಣಿ ||9||

ಮಾಧವನ ಮನಪ್ರೇಮ ಮಾನಿನಿ
ಸಾದರದಿ ಸೌಭಾಗ್ಯ ಧನಗಳ
ಯಾದವೇಶ ಸುಧಾಮದ್ವಿಜವರಗಿತ್ತ ತೆರದಂತೆ
ಮೋದ ಮನದಲಿ ಸಾಂದ್ರಸುಖಮಯ
ಬೋಧಭಕುತಿ ವಿರಕುತಿ ಪಾಲಿಸಿ
ವೇದಗಮ್ಯನ ಭಜನೆ ಮಾಡಿಸು ವೇದಕಭಿಮಾನಿ ||10||

ಉದಿತಭಾಸ್ಕರ ಕೋಟಿಭಾಸಳೆ
ಬಿದುರಮಂಡಲ ಜೈಪ ವದನೆಯೆ
ಮದನಮೂರುತಿ ಕೋಟಿನಿಭ ಲಾವಣ್ಯಪೂರಿತಳೇ
ಪದುಮನಯನಳೆ ನಾಸಚಂಪಕ
ಭಿದುರಫಲಕ ಸುಫಾಲ ಕುಂತಳ
ಮದನಕಾರ್ಮುಕ ಪುಬ್ಬುಯುಗಳವು ಕರುಣಯುಗ ಶೋಭೆ ||11||

ಕದಪು ಕನ್ನಡಿ ಕುಮುದ ಕುಟ್ಮಲ
ರದನಪಂಕ್ತಿಯು ರಕ್ತ ಓಷ್ಟವು
ಚರುರೆಯಾನನ ಮಂದಹಾಸವು ಚಂದ್ರಚಂದ್ರಿಕೆಯು
ಉದಯ ತಾಮ್ರಲಲಾಟ ಶೊಭಿತೆ
ಒದಗಿ ರಾಜಿಪ ಭೃಂಗಕುಂತಳೆ
ಉದಕ ಬಿಂದುಗಳೆಂಬೊ ಬೈತಲೆ ಮುತ್ತುರಾಜಿತಳೆ ||12||

ಮುದ್ದು ಚುಬಕವು ಕಂಬು ಕಂಧರ
ಪೊದ್ದುಕೊಂಡಿಹ ಬಾಹುದ್ವಂದ್ವವು
ಎದ್ದು ತೋರುತ ಕರಿಯ ಕರತೆರ ತಾವೆ ಶೋಭಿಪವೊ
ಮುದ್ರರತ್ನಾಂಗುಳಿಯ ಸಂಘದಿ
ಪೊದಿದ್ಹಸ್ತದ್ವಯವು ಶೋಭಿಪ
ಪದ್ಮಕಟ್ಮಗಳೆನಿಸಿ ಸೇವಕಗಭಯ ನೀಡುವವು ||13||

ಭಕ್ತಜನತತಿ ಪ್ರೇಮವಾರಿಧೆ
ಭಕ್ತಜನ ಹೃತ್ಪದ್ಮವಾಸಿನಿ
ಭಕ್ತಜನದಾರಿದ್ರ್ಯಹಾರಿಯೆ ನಮಿಪೆÉನನವರತ
ಲಕುಮಿ ಕ್ರಮುಕ ಸುಕಂಠದಲಿ ಶ್ರೀ –
ರೇಖ ಶೋಭಿತೆ ನಿತ್ಯನಿತ್ಯದಿ
ಮುಕುತ ಹಾರಾವಳಿ ಸುಶೋಭಿತೆ ಪರಮಮಂಗಳಳೆ ||14||

ನಿನ್ನದಾಸನ ಮಾಡೆ ಲಕುಮಿಯೆ
ಘನ್ನತರ ಸೌಭಾಗ್ಯ ಸಂಪದ
ಚೆನ್ನವಾಗೀ ನೀಡಿ ಎನ್ನಯ ಸದನದೊಳಗಿದ್ದೂ
ನಿನ್ನ ಪತಿಯೊಡಗೊಡಿ ದಿನದಿನ
ಎನ್ನ ಕೈಯಲಿ ಪೂಜೆ ಗೊಳುತಾ
ನಿನ್ನ ರೂಪವ ತೋರಿ ಪಾಲಿಸು ಪಾಲಸಾಗರಜೆ ||15||
ಮಾತೆ ನಿನ್ನಯ ಜಠರಕಮಲ ಸು –
ಜಾತನಾಗಿಹ ಸುತನ ತೆರದಲಿ
ಪ್ರೀತಿಪೂರ್ವಕ ಭಾಗ್ಯನಿಧಿಗಳನಿತ್ತುನಿತ್ಯದಲಿ
ನೀತ ಭಕುತಿ ಜ್ಞಾನ ಪೂರ್ವಕ
ದಾತ ಗುರು ಜಗನ್ನಾಥ ವಿಠಲನ
ಪ್ರೀತಿಗೊಳಿಸುವ ಭಾಗ್ಯ ಪಾಲಿಸಿ ಪೊರೆಯೆ ನೀಯೆನ್ನ ||16||

2 thoughts on “Lakshmi Sthavaraja

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s