dasara padagalu · MADHWA · purandara dasaru · Shobane

Shobana shobhanave(Purandara dasaru)

ಶೋಭಾನ ಶೋಭಾನವೆ ||pa||

ಭೂದೇವಿಯರಸ ವೆಂಕಟರಾಯಗೆ
ಶೋಭಾನ ಶೋಭಾನವೆ ||a.pa||

ಅಂದು ಕ್ಷೀರಾಂಬುನಿಧಿ ಮೊದಲಾಗಿ
ಇಂದಿರೆ ಹರುಷದಿಂದುದಿಸಿ ಬಂದು
ಕಂದರ್ಪ ಕೋಟಿ ಲಾವಣ್ಯಮೂರುತಿಯಾದ
ಮಂದಾರಮಾಲೆಯ ಹಾಕಿದ ದೇವಗೆ ||1||

ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದಲೆ ಬರುತಿರಲು
ಸನಕಾದಿವಂದ್ಯನ ಕಂಡು ಸಂತೋಷದಿ
ಜಾನಕಿ ಮಾಲೆಯ ಹಾಕಿದ ರಾಮಗೆ ||2||

ರುಕುಮನು ಶಿಶುಪಾಲಗನುಜೆಯೀಯುವನೆಂದು
ಸಕಲರಾಯರಲ್ಲಿ ಬಂದಿರಲಾಗಿ
ಭಕುತವತ್ಸಲನನ್ನು ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||3||

ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
ಮತ್ತೆ ಆ ಸೋಳಸಾಹಸ್ರಕನ್ನಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||4||

ಪದುಮದೇಶದಲೊಬ್ಬ ದೇವಾಂಗನೆಯ
ಪದುಮಮುಖಿ ಶ್ರುತಿಹೃತಿಯ
ಪದುಮನಾಭ ಪುರಂದರವಿಠಲಗೆ
ಪದುಮಾವತಿಪ್ರಿಯ ಶ್ರೀನಿವಾಸಗೆ ||5||

SOBAna SOBAnave ||pa||

BUdEviyarasa venkaTarAyage
SOBAna SOBAnave ||a.pa||

andu kShIrAMbunidhi modalAgi
indire haruShadindudisi bandu
kandarpa kOTi lAvaNyamUrutiyAda
mandAramAleya hAkida dEvage ||1||

janakana maneyalli rAjAdhirAjaru
eNikeyilladale barutiralu
sanakAdivandyana kanDu santOShadi
jAnaki mAleya hAkida rAmage ||2||

rukumanu SiSupAlaganujeyIyuvanendu
sakalarAyaralli bandiralAgi
Bakutavatsalanannu kanDu santOShadi
rukumiNi mAleya hAkida kRuShNage ||3||

satyaBAmeyu nIle Badre kALindiyu
mitraviMdeyu lakShaNeyu jAMbavati
matte A sOLasAhasrakannikeyara
pratyakShavALida kalyANanige ||4||

padumadESadalobba dEvAnganeya
padumamuKi SrutihRutiya
padumanABa purandaraviThalage
padumAvatipriya SrInivAsage ||5||

dasara padagalu · jagannatha dasaru · MADHWA · Shobane

Shobhanaevnnire sarvagna harige

ಶೋಭಾನವೆನ್ನಿರೆ ಸರ್ವಜ್ಞ ಹರಿಗೆ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ||pa||

ಶಫರ ವೇಷದವಗೆ ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಶಿಪಿಯ ಕರದಿ ಬಲು ವಪ್ರವ ಬಿಗಿಸಿದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ ||1|||

ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಮಡುವಿನೊಳಗೆ ಫಣಿ ಪೆಡೆಯ ತುಳಿದವಗೆ
ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ ||2||

ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ||3||

ದಶರಥ ತನಯಗೆ ವಸುದೇವ ಸುತಗೆ
ವಸನ ವಿಹೀನಗೆ ಅಸುರ ಭಂಜನಿಗೆ
ಝಷ ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ
ಶಶಿಮುಖಿಯರಾರುತಿ ಬೆಳಗೀರೆ ||4||

ವಟು ಭೃಗುರಾಮಗೆ ಜಟಲ ಮಸ್ತಕಗೆ
ಕಠಿಣ ಕಂಸನ ತಳ ಪಟವ ಮಾಡಿದಗೆ
ನಿಟಲಾಕ್ಷವರದಗೆ ಕಪಟ ಭೀಕರಗೆ
ವಟಪತ್ರಶಯನ ನಿಷ್ಕುಟಿಲ ಜಗನ್ನಾಥ
ವಿಠಲಗಾರುತಿಯ ಬೆಳಗೀರೆ ||5||
SOBAnavennire sarvaj~ja harige
SOBAnavennire sakala guNanidhige
SOBAnavenni samIra pitanige
SOBAnavenni sarOjasadana
manOBirAmanige SOBAnavenni ||pa||

SaPara vEShadavage kapaTa kamaThage
tapa niyAMbakanasupariharisidage
kRupaNa prahlAdana vipattu kaLedavage
Sipiya karadi balu vaprava bigisidavage
capalAkShiyarAruti beLagire ||1|||

koDali kOdanDava piDiva panDitage
kaDala kaTTisi KaLaroDala bagedage
maDuvinoLage PaNi peDeya tuLidavage
mRuDana gelisi kIrti oDane taMdittage
maDadErArutiya beLagIre ||2||

harigi surigi piDidaravindAnbakage
SaradhiyoLADdage girimahidharage
narahari rUpage dharaNiyALdage
dhuradoLu rAyara tarida samarthage
garatErArutiya beLagIre ||3||

daSaratha tanayage vasudEva sutage
vasana vihInage asura Banjanige
JaSha kUrma rUpage vasudhi vAhakage
misuni kaSyapage hebbasira bagedavage
SaSimuKiyarAruti beLagIre ||4||

vaTu BRugurAmage jaTala mastakage
kaThiNa kaMsana taLa paTava mADidage
niTalAkShavaradage kapaTa BIkarage
vaTapatraSayana niShkuTila jagannAtha
viThalagArutiya beLagIre ||5||

dasara padagalu · MADHWA · Shobane · Vijaya dasaru

shobana shobanavennire(Vijaya dasaru)

ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ
ಶೋಭಾನವೆನ್ನಿ ಶುಭವೆನ್ನಿ ||pa||

ಮಂಗಳದೇವಿಯ ರಮಣ ಬಾ | ಶೃಂಗಾರದ ಗುಣನಿಧಿಯೆ ಬಾ |
ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ ||
ಭವಭವ ಭಂಗಾ ಬಾ | ದೇವೋತ್ತುಂಗಾ ಬಾ |
ಜಗದಂತರಂಗಾ ಬಾ ಹಸೆಯ ಜಗುಲಿಗೆ||1||

ಸಂಕುರುಷಣ ಅನಿರುದ್ಧಾ ಬಾ |
ಪಂಕಜ ಸಂಭವನಯ್ಯ ಬಾ |
ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ ||
ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ |
ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ ||2||

ಹೇಮಾಂಬರಧರ ಹರಿಯೇ ಬಾ | ಸಾಮಜರಾಜಾ ವರದಾ ಬಾ |
ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ ||
ಸುರಸಾರ್ವಭೌಮಾ ಬಾ ದೈತ್ಯವಿರಾಮಾ ಬಾ |
ರಣರಂಗಭೀಮಾ ಬಾ ಹಸೆಯಾ ಜಗುಲಿಗೆ ||3||

ಅನಂತ ಅವತಾರ ಅಚ್ಯುತ ಬಾ |
ಉನ್ನತ ಮಹಿಮನೆ ಯಾದವ ಬಾ |
ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ |
ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ ||4||

ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ |
ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ ||
ಯದುಕುಲ ದೀಪಾ ಬಾ ನಿತ್ಯ ಸಲ್ಲಾಪಾ ಬಾ
ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ ||5||

ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ |
ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ ||
ಗೋಪಿಕಂದಾ ಬಾ | ಬಹುಬಲ ವೃಂದಾ ಬಾ |
ಅತಿಜವದಿಂದಾ ಬಾ ಹಸೆಯಾ ಜಗುಲಿಗೆ ||6||

ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ |
ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ ||
ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ |
ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ||7||

ಉದಯ ಪ್ರಭಾಕರ ಭಾಸಾ ಬಾ | ತ್ರಿದಶಗುಣನುತ ವಿಲಾಸಾ ಬಾ |
ಪದುಮನಾಭ ಮಾಧವ ಶ್ರೀಧರನೆ ಸುನಾಸಾ ಬಾ ||
ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ |
ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ||8||

ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ |
ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ ||
ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ |
ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ ||9||

ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ |
ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ ||
ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ |
ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ||10||

SOBAna | SOBAnavennire suraraMganiyarella
SOBAnavenni SuBavenni ||pa||

mangaLadEviya ramaNa bA | SRungArada guNanidhiye bA |
angajajanaka aravindadALAkShane raMgA bA ||
BavaBava BangA bA | dEvOttuMgA bA |
jagadantarangA bA haseya jagulige ||1||

sankuruShaNa aniruddhA bA | pankaja saMBavanayya bA |
kuMkumAnkitane Bakuta kumuda mRugAnka bA ||
niShkaLankA bA SanKacakrAnka bA |
ahipariyanka À bA haseya jagulige ||2||

hEmAMbaradhara hariyE bA | sAmajarAjA varadA bA |
sAmavilOlane sadguNa SIlane rAmA bA ||
surasArvaBaumA bA daityavirAmA bA |
raNarangaBImA bA haseyA jagulige ||3||

ananta avatAra acyuta bA |
unnata mahimane yAdava bA |
Ganna mUrutiye suprasannA bA saccaritA bA |
BAgya saMpannA bA jIvara BinnA bA haseyA jagulige ||4||

nArAyaNa daSarUpA bA | cArucaritA pratApa bA |
Sauri murAriye niTila kastUriya lEpA bA ||
yadukula dIpA bA nitya sallApA bA
namma samIpa bA haseyA jagulige ||5||

vAsudEva mukundA bA | sAsiranAma gOvindA bA |
kESava puruShOttama narasiMha upEndra bA ||
gOpikandA bA | bahubala vRundA bA |
atijavadindA bA haseyA jagulige ||6||

paratatvadi ati cintA bA | parabommane ati SAntA bA |
paramAtmane paripUrNa viBUtivantA bA ||
aKiLa vEdAntA bA | rukmiNikAntA bA |
sadguNavantA bA haseyA jagulige ||7||

udaya praBAkara BAsA bA | tridaSaguNanuta vilAsA bA |
padumanABa mAdhava SrIdharane sunAsA bA ||
sirimandahAsA bA | Bakuta ullAsA bA |
SrI SrInivAsA bA haseyA jagulige ||8||

kRuShNavENiya paDedavane bA | ratha hoDedavane bA |
kRuShNeya kaShTava naShTa mADida kRuShNA bA ||
yadukula SrEShTha bA | satata saMtuShTa bA |
uDupiya kRuShNa bA haseyA jagulige ||9||

ellaroLage vyApakane bA ballida doregaLa arasane bA |
nA elli nODalu pratigANe ninage sirinallA bA ||
apratimalla bA BaktavatsalA bA |
vijayaviThThala bA haseya jagulige ||10||

dasara padagalu · MADHWA · Shobane

Shobane pandurangage

ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನ ಉಡುಪಿ ನಿಲಯಾಗೇ ||pa||

ಸುಮನಸರಾಳ್ದವನ ವರಜ ಬಾ |ಕಮಲೆ ಸದನ ಮುಖಕಂಜ ರವಿ ಬಾ |
ವಿಮಲ ಗುಣಾರ್ಣವ ನೀಲ ಜಲದನಿಗಾತ್ರಾ ಬಾ ||
ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |
ವಹನ ಪತತ್ರಾ ಬಾ ನತಜನ ಮಿತ್ರಾ ಬಾ ಹಸಿಯಾ ಜಗುಲೀಗೇ ||1||

ಅಷ್ಟನಾಮ ಒಪ್ಪುವನೇ ಬಾ | ದುಷ್ಟ ದಿತಿ ಸುತ ಮದಹರಣಾ ಬಾ |
ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||
ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |
ಅಕ್ಷರ ಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ ||2||

ಮಾತುಳ ರಿಪು ವನ ಅನಳ ಬಾ |ಶ್ವೇತವಹನ ರಥ ಸಾರಥಿ ಬಾ |
ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||
ಗೋಕುಲ ತ್ರಾತಾ ಬಾ ಲೋಕೈಕ ದಾತಾ ಬಾ |
ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾ ಹಸಿಯಾ ಜಗುಲೀಗೇ ||3||

ವಾಮನ ಕೇಶವ ಹಯಮುಖ ಬಾ |ಭೀಮ ವಿನುತ ನಿಃಸೀಮಾ ಬಾ |
ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||
ದಶರಥ ರಾಮಾ ಬಾ ಬಾಣವಿರಾಮಾ ಬಾ |
ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾ ಹಸಿಯಾ ಜಗುಲೀಗೇ ||4||

ಕಂದರ್ಪ ಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |
ಮಂದೇತರ ಮುದ ಘಟಜ ಪ್ರಮುಖ ಮುನಿವಂದ್ಯಾ ಬಾ ||
ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |
ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ ||5||

ಕ್ಷಿತಿಧರ ಜಿನಧರ ಸಖನೇ ಬಾ |ಅತುಳ ಮಹಿಮನೆ ಅಜಿತನೇ ಬಾ |
ಸತಿಗಮರ ಸದನದ ಕುಸುಮ ತಂದಚ್ಯುತನೇ ಬಾ ||
ಮೂರುತಿ ಸುತನೆ ಬಾ ಲೋಕ ವಿತತನೆ ಬಾ |
ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ ||6||

ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |
ಮಾಣದೆ ಭಕ್ತರ ಪೊರವುತಿಹನೆ ಸತ್ರಾಣಾ ಬಾ ||
ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |
ನಿಜ ವಿಜ್ಞಾನ ಬಾ ನಿತ್ಯ ಕಲ್ಯಾಣಾ ಬಾ ಹಸಿಯಾ ಜಗುಲೀಗೆ ||7||

SOBAna pAnDurangage | SOBana SrInivAsage | SOBana uDupi nilayAgE ||pa||

sumanasarALdavana varaja bA | kamale sadana muKakanja ravi bA |
vimala guNArNava nIla jaladanigAtrA bA ||
vArijanEtra bA mangaLa stOtra bA |
vahana patatrA bA natajana mitrA bA hasiyA jagulIgE ||1||

aShTanAma oppuvanE bA | duShTa diti suta madaharaNA bA |
muShTika pramuKaha gOvardhanadhara kRuShNA bA ||
harigatakaShTA bA trijagaccEShTA bA |
akShara jEShThA bA niruta viSiShTA bAhasiyA jagulIgE ||2||

mAtuLa ripu vana anaLa bA | SvEtavahana ratha sArathi bA |
mAti Sira kaDidu bAhujarorasida nAthA bA ||
gOkula trAtA bA lOkaika dAtA bA |
vasudEva jAtA bA supraKyAtA bA hasiyA jagulIgE ||3||

vAmana kESava hayamuKa bA | BIma vinuta niHsImA bA |
kAminiyara cailaharaNa , RuShi , raNaBImA bA ||
daSaratha rAmA bA bANavirAmA bA |
ajamuKa nAmA bA kRuShNA prEmA bA hasiyA jagulIgE ||4||

kandarpa janaka narahari bA | andamRutava tandavanE bA |
mandEtara muda GaTaja pramuKa munivaMdyA bA ||
kasturi CandA bA dEva mukuMdA bA |
dEvaki kandA bA sadguNa vRuMdA bAhasiyA jagulIge ||5||

kShitidhara jinadhara saKanE bA | atuLa mahimane ajitanE bA |
satigamara sadanada kusuma taMdacyutanE bA ||
mUruti sutane bA lOka vitatane bA |
pUjigucitane bA rakShaNaratanE bAhasiyA jagulIge ||6||

prANESa viThThalarAyA bA | vINApANI janakane bA |
mANade Baktara poravutihane satrANA bA ||
satyA prANA bA SrI pAThINA bA |
nija vij~jAna bA nitya kalyANA bA hasiyA jagulIge ||7||

dasaavatharam · dasara padagalu · kolu haadu · MADHWA · prasanna venkata dasaru

Kolu kamana geddha(Prasanna venkata dasaru)

ಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದ
ಕೋಲು ಆನಂದಮುನಿ ಪಿಡಿದಿಹ ಕೋಲೆ ||pa||

ತಮನೆಂಬುವನ ಕೊಂದು ಕಮಲಜನಿಗೆ ವೇದ
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ||1||

ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆ
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ||2||

ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆ
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾನoಗ ಶ್ರೀವರಾಹ ಮನೆದೈವ ಕೋಲೆ ||3||

ಒಂದೆ ಮನದೊಳಂದು ಕಂದ ನೆನೆಯಲಾಗ
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ||4||

ಎದುರಿಲ್ಲವೆನಗೆಂದು ಮದವೇರಿದವನ ತ್ರಿ
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ||5||

ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತ
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ||6||

ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿ
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ||7||

ಗೋಕುಲದಲಿ ಬೆಳೆದು ಪೋಕ ದನುಜರ ಅ
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ||8||

ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿ
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ||9||

ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆ
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ||10||

ಹತ್ತವತಾರದಿ ಭಕ್ತಜನರ ಹೊರೆದ
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ||11||

kOlu kAmana gedda kOlu mAygaLanodda
kOlu Anandamuni piDidiha kOle ||pa||

tamaneMbuvana kondu kamalajanige vEda
kramadinda koTTu jagavanu kOle
kramadinda koTTu jagavanu rakShisida
vimala SrI matsya manedaiva kOle ||1||

surapana viBavella SaradhIli muLugire
girigahi sutti kaDeyalu kOle
girigahi sutti kaDeyalu naga jAre
dharisida SrI kUrma manedaiva kOle ||2||

hongaNNinavanu BUvengaLaneLedoyye
mangaLamahima dayadiMda kOle
mangaLa mahima dayadinda negahidya
jnangaa SrIvarAha manedaiva kOle ||3||

onde manadoLandu kanda neneyalAga
bandavanayyannodedanu kOle
bandavanayyannodedanu animitta
bandhu narahariyu manedaiva kOle ||4||

edurillavenagendu madavEridavana tri
pada BUmi bEDi gelidanu kOle
pada BUmi bEDi gelidA trivikrama
mudada vAmana manedaiva kOle ||5||

kujanaraLidu BAgya sujanarigoliditta
nija tAtanAj~ja salahida kOle
nija tAtanAj~ja salahida SuBaguNa
dvijarAma namma manedaiva kOle ||6||

kausalye garBadi janisida kRupeyalli
kauSika kratuva kAydanu kOle
kauSika kratuva kAyda rAvaNAMtaka
SrI sItArAma manedaiva kOle ||7||

gOkuladali beLedu pOka danujara a
nEka pariyali sadedanu kOle a
nEka pariyali sadeda pAMDavapAla
SrIkRuShNa namma manedaiva kOle ||8||

mithyAvAdigaLige mithyavane kalisi
satyavAdigaLa poredanu kOle
satyavAdigaLa poredanu ajavaMdya
karta bauddhanu manedaiva kOle ||9||

svAhA svadhAkAravu mahiyoLilladAge
suhayavEri kaliyanu kOle
suhayavEri kaliyaneLedu konda
mahAkalki namma manedaiva kOle ||10||

hattavatAradi Baktajanara horeda
mattAvakAladi rakShipa kOle
mattAva kAladi rakShipa prasanvenkaTa
kartana naMbi suKiyAde kOle ||11||

dasaavatharam · dasara padagalu · kolu haadu · Vadirajaru

Kolu kolenna kole(Vadirajaru)

ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲೆ||pa||

ತಮನ ಕೊಂದನ ಕೋಲೆ ಕಮಠನಾದನ ಕೋಲೆ
ಕ್ಷಮೆಯನೆತ್ತಿದನ ಕೋಲೆ ಕೋಲು
ಕಮನೀಯ ನರಸಿಂಹರೂಪನಾದನ ಕೋಲೆ
ಸುಮುಖ ವಾಮನನ ಕೋಲೆ ||1||

ಪರಶುರಾಮನ ಕೋಲೆ ರಘುಕುಲದಲುದಿಸಿ ದಶ-
ಶಿರನ ಕೊಂದವನ ಕೋಲೆ ಕೋಲು
ಸಿರಿಕೃಷúರಾಯನ ಸುಕೋಲೆ ಬುದ್ಧನ ಕೋಲೆ
ತುರಗವೇರಿದನ ಕೋಲೆ ||2||

ವಾದಿರಾಜನಿಗೊಲಿದು ಸೋದೆಪುರದಿ ನಿಂದು
ಮೋದಿ ತ್ರಿವಿಕ್ರಮನ ಕೋಲೆ ಕೋಲು
ಕಾದಿ ಖಳರನು ಕೊಂದ ವೇದಗಳ ತಂದ ವಿ
ನೋದಿ ಹಯವದನ ಕೋಲೆ ||3||

kOlu kOlenna kOlu
kOlu kOlenna kOlu
kOlu kOlenna kOle|| pa||

tamana kondana kOle kamaThanAdana kOle
kShameyanettidana kOle kOlu
kamanIya narasiMharUpanAdana kOle
sumuKa vAmanana kOle ||1||

paraSurAmana kOle raGukuladaludisi daSa –
Sirana kondavana kOle kOlu
sirikRuSha úrAyana sukOle buddhana kOle
turagavEridana kOle ||2||

vAdirAjanigolidu sOdepuradi nindu
mOdi trivikramana kOle kOlu
kAdi KaLaranu konda vEdagaLa tanda vi
nOdi hayavadana kOle ||3||

hari kathamrutha sara · jagannatha dasaru · MADHWA · Rudra · siva

Hari Kathamruta saaradhalli Rudra devaru

ವಾಮದೇವ ವಿರಂಚಿತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಳ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ||

ಕೃತ್ತಿವಾಸನೆ ಹಿಂದೆ ನೀ ನಾ
ಲ್ವತ್ತು ಕಲ್ಪಸಮೀರನಲಿ ಶಿ
ಷ್ಯತ್ವ ವಹಿಸಿ ಅಖಿಳಾಗಮಾರ್ಥಗಳೋದಿ ಜಲಧಿಯಲಿ
ಹತ್ತುಕಲ್ಪದಿ ತಪವ ಗೈದಾ
ದಿತ್ಯರೊಳಗುತ್ತಮನೆನಿಸಿ ಪುರು
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ||

ನಂದಿವಾಹನ ನಳಿನಿಧರ ಮೌ
ಳೇಂದು ಶೇಖರ ಶಿವತ್ರಿಯಂಬಕ
ಅಂಧಕಾಸುರಮಥನ ಗಜಶಾರ್ದೂಲ ಚರ್ಮಧರ
ಮಂದಜಾಸನ ತನಯ ತ್ರಿಜಗ
ದ್ವಂದ್ಯ ಶುದ್ಧ ಸ್ಪಟಿಕ ಸನ್ನಿಭ
ವಂದಿಸುವೆ ನನವರತ ಪಾಲಿಸೋ ಪಾರ್ವತೀರಮಣ||

ಫಣಿ ಫಣಾಂಚಿತ ಮುಕುಟರಂಜಿತ
ಕ್ವಣಿತಡಮುರುತ್ರಿಶೂಲ ಶಿಖಿದಿನ
ಮಣಿ ನಿಶಾಕರ ನೇತ್ರ ಪರಮಪವಿತ್ರ ಸುಚರಿತ್ರ
ಪ್ರಣತಕಾಮದ ಪ್ರಮಥ ಸುರಮುನಿ
ಗಣಸುಪೂಜಿತ ಚರಣಯುಗ ರಾ
ವಣ ಮದ ವಿಭಂಜನ ಸತತ ಮಾಂಪಾಹಿ ಮಹದೇವ||

ದಕ್ಷಯಜ್ಞ ವಿಭಂಜನನೆ ವಿರು
ಪಾಕ್ಷ ವೈರಾಗ್ಯಾಧಿಪತಿ ಸಂ
ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು
ಯಕ್ಷ ಪತಿಸಖ ಯಜಪರಿಗೆ ಸುರ
ವೃಕ್ಷ ವೃಕ್ಷದನುಜಾರಿ ಲೋಕಾ
ಧ್ಯಕ್ಷ್ಯ ಶುಕದುರ್ವಾಸ ಜೈಗೀಷವ್ಯ ಸಂತಯಿಸು ||

ಹತ್ತು ಕಲ್ಪದಿ ಲವಣ ಜಲಧಿಯೊ
ಳುತ್ತಮ ಶ್ಲೋಕನವೊಲಿಸಿ ಕೃತ
ಕೃತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ
ಬಿತ್ತರಿಸಿ ಮೋಹಿಸಿ ದುರಾತ್ಮರ
ನಿತ್ಯನಿರಯ ನಿವಾಸರೆನಿಸಿದ
ಕೃತ್ತಿವಾಸಗೆ ನಮಿಪೆ ಶೇಷಪದಾರ್ಹನಹುದೆಂದು||

vAmadEva virancitanaya u
mAmanOhara ugra dhUrjaTi
sAmajAjinavasana BUShaNa sumanasOttaMsa
kAmahara kailAsamaMdira
sOmasUryAnaLa vilOcana
kAmitaprada karuNisemage sadA sumangaLava ||

kRuttivAsane hinde nI nA
lvattu kalpasamIranali Si
Shyatva vahisi aKiLAgamArthagaLOdi jaladhiyali
hattukalpadi tapava gaidA
dityaroLaguttamanenisi puru
ShOttamana pariyanka padavaidideyo mahadEva||

nandivAhana naLinidhara mau
LEndu SEKara SivatriyaMbaka
andhakAsuramathana gajaSArdUla carmadhara
mandajAsana tanaya trijaga
dvandya Suddha spaTika sanniBa
vandisuve nanavarata pAlisO pArvatIramaNa||

PaNi PaNAncita mukuTaranjita
kvaNitaDamurutriSUla SiKidina
maNi niSAkara nEtra paramapavitra sucaritra
praNatakAmada pramatha suramuni
gaNasupUjita caraNayuga rA
vaNa mada viBanjana satata mAMpAhi mahadEva||

dakShayaj~ja viBanjanane viru
pAkSha vairAgyAdhipati saM
rakShisemmanu sarvakAladi sanmudavanittu
yakSha patisaKa yajaparige sura
vRukSha vRukShadanujAri lOkA
dhyakShya SukadurvAsa jaigIShavya santayisu ||

hattu kalpadi lavaNa jaladhiyo
Luttama SlOkanavolisi kRuta
kRutyanAgi jagatpatiya nEmadi kuSAstragaLa
bittarisi mOhisi durAtmara
nityaniraya nivAsarenisida
kRuttivAsage namipe SEShapadArhanahudendu||

MADHWA · narayana pandithacharyaru · siva

Sri shiva sthuthi(Narayana pandithacharyaru)

ಸ್ಫುಟಂ ಸ್ಫಟಿಕ-ಸಪ್ರಭಂ ಸ್ಫುಟಿತ-ಹಾಟಕ-ಶ್ರೀ-ಜಟಂ
ಶಶಾಂಕ-ದಲ-ಶೇಖರಂ ಕಪಿಲ-ಫುಲ್ಲ-ನೇತ್ರ-ತ್ರಯಮ್ |
ತರಕ್ಷು-ವರ-ಕೃತ್ತಿಮದ್ ಭುಜಗ-ಭೂಷಣಂ ಭೂತಿಮತ್
ಕದಾ ನು ಶಿತಿ-ಕಂಠ ತೇ ವಪುರವೇಕ್ಷತೇ ವೀಕ್ಷಣಮ್ || ೧ ||

ತ್ರಿ-ಲೋಚನ ವಿಲೋಚನೇ ಲಸತಿ ತೇ ಲಲಾಮಾಯಿತೇ
ಸ್ಮರೋ ನಿಯಮ-ಘಸ್ಮರೋ ನಿಯಮಿನಾಮಭೂದ್ ಭಸ್ಮಸಾತ್ |
ಸ್ವ-ಭಕ್ತಿ-ಲತಯಾ ವಶೀಕೃತವತೀ ಸತೀಯಂ ಸತೀ
ಸ್ವ-ಭಕ್ತ-ವಶಗೋ ಭವಾನಪಿ ವಶೀ ಪ್ರಸೀದ ಪ್ರಭೋ || ೨ ||

ಮಹೇಶ ಮಹಿತೋಽಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇಽನವಮ ವಾಮ-ದೇವಾಂಜಲಿಃ |
ನಮಃ ಸಪದಿ-ಜಾತ ತೇ ತ್ವಮಿತಿ ಪಂಚ-ರೂಪೋಽ೦ಚಿತಃ
ಪ್ರಪಂಚಯ ಚ ಪಂಚ-ವೃನ್ಮಮ ಮನಸ್ತಮಸ್ತಾಡಯ || ೩ ||

ರಸಾ-ಘನರಸಾನಲಾನಿಲ-ವಿಯದ್-ವಿವಸ್ವದ್-ವಿಧು-
ಪ್ರಯಷ್ಟೃಷು ನಿವಿಷ್ಟಮಿತ್ಯಜ ಭಜಾಮಿ ಮೂರ್ತ್ಯಷ್ಟಕಮ್ |
ಪ್ರಶಾಂತಮುತ ಭೀಷಣಂ ಭುವನ-ಮೋಹನಂ ಚೇತ್ಯಹೋ
ವಪೂಂಷಿ ಗುಣ-ಪುಂಷಿ ತೇಽಹಮಹಮಾತ್ಮನೋಽಹಂ-ಭಿದೇ || ೪ ||

ವಿಮುಕ್ತಿ-ಪರಮಾಧ್ವನಾಂ ತವ ಷಡಧ್ವನಾಮಾಸ್ಪದಂ
ಪದಂ ನಿಗಮ-ವೇದಿನೋ ಜಗತಿ ವಾಮದೇವಾದಯಃ |
ಕಥಂಚಿದುಪ-ಶಿಕ್ಷಿತಾ ಭಗವತೈವ ಸಂವಿದ್ರತೇ
ವಯಂ ತು ವಿರಳಾಂತರಾಃ ಕಥಮುಮೇಶ ತನ್ಮನ್ಮಹೇ || ೫ ||

ಕಠೋರಿತ-ಕುಠಾರಯಾ ಲಲಿತ-ಶೂಲಯಾ ಬಾಹಯಾ
ರಣಡ್ಡಮರಯಾ ಸ್ಫುರದ್ಧರಿಣಯಾ ಸ-ಖಟ್ವಾಂಗಯಾ |
ಚಲಭಿರಚಲಾಭಿರಪ್ಯಗಣಿತಾಭಿರುನ್ನೃತ್ಯತಃ
ಚತುರ್ದಶ ಜಗಂತಿ ತೇ ಜಯ-ಜಯೇತ್ಯಯುರ್ವಿಸ್ಮಯಮ್ || ೬ ||

ಪುರು-ತ್ರಿಪುರ-ರಂಧನಂ ವಿವಿಧ-ದೈತ್ಯ-ವಿಧ್ವಂಸನಂ
ಪರಾಕ್ರಮ-ಪರಂಪರಾ ಅಪಿ ಪರಾ ನ ತೇ ವಿಸ್ಮಯಃ |
ಅಮರ್ಷ-ಬಲ-ಹರ್ಷಿತ-ಕ್ಷುಭಿತ-ವೃತ್ತ-ನೇತ್ರೋಜ್ಜ್ವಲ-
ಜ್ವಲಜ್ಜ್ವಲನ-ಹೇಲಯಾ ಶಲಭಿತಂ ಹಿ ಲೋಕ-ತ್ರಯಮ್ || ೭ ||

ಸಹಸ್ರ-ನಯನೋ ಗುಹಃ ಸಹ-ಸಹಸ್ರ-ರಶ್ಮಿರ್ವಿಧುಃ
ಬೃಹಸ್ಪತಿರುತಾತ್ಪತಿಃ ಸ-ಸುರ-ಸಿದ್ಧ-ವಿದ್ಯಾಧರಾಃ |
ಭವತ್-ಪದ-ಪರಾಯಣಾಃ ಶ್ರಿಯಮಿಮಾಮಗುಃ ಪ್ರಾರ್ಥಿನಾಂ
ಭವಾನ್ ಸುರ-ತರುರ್ದೃಶಂ ದಿಶ ಶಿವಾಂ ಶಿವಾ-ವಲ್ಲಭ || ೮ ||

ತವ ಪ್ರಿಯ-ತಮಾದತಿ-ಪ್ರಿಯ-ತಮಂ ಸದೈವಾಂತರಂ
ಪಯಸ್ಯುಪಹಿತಂ ಘೃತಂ ಸ್ವಯಮಿವ ಶ್ರಿಯೋ ವಲ್ಲಭಮ್ |
ವಿಭಿದ್ಯ ಲಘು-ಬುದ್ಧಯಃ ಸ್ವ-ಪರ-ಪಕ್ಷ-ಲಕ್ಷಾಯಿತಂ
ಪಠಂತಿ ಹಿ ಲುಠಂತಿ ತೇ ಶಠ-ಹೃದಃ ಶುಚಾ ಶುಂಠಿತಾಃ || ೯ ||

ವಿಲಾಸ-ನಿಲಯಶ್ಚಿತಾ ತವ ಶಿರಸ್ತತಿರ್ಮಾಲಿಕಾ
ಕಪಾಲಮಪಿ ತೇ ಕರೇ ತ್ವಮಶಿವೋಽಸ್ಯನಂತರ್ಧಿಯಾಮ್ |
ತಥಾಽಪಿ ಭವತಃ ಪದಂ ಶಿವ-ಶಿವೇತ್ಯದೋ ಜಲ್ಪತಾಂ
ಅಕಿಂಚನ ನ ಕಿಂಚನ ವ್ರಜಿನಮಸ್ತ್ಯಭಸ್ಮೀಭವತ್ || ೧೦ ||

ತ್ವಮೇವ ಕಿಲ ಕಾಮ-ಧಕ್ ಸಕಲ-ಕಾಮಮಾ-ಪೂರಯನ್
ಅಪಿ ತ್ರಿ-ನಯನಃ ಸದಾ ವಹಸಿ ಚಾತ್ರಿ-ನೇತ್ರೋದ್ಭವಮ್ |
ವಿಷಂ ವಿಷ-ಧರಾನ್ ದಧತ್ ಪಿಬಸಿ ತೇನ ಚಾಽನಂದವಾನ್
ವಿರುದ್ಧ-ಚರಿತೋಚಿತಾ ಜಗದಧೀಶ ತೇ ಭಿಕ್ಷುತಾ || ೧೧ ||

ನಮಃ ಶಿವ-ಶಿವಾಶಿವಾಶಿವ ಶಿವಾರ್ಧ ಕೃಂತಾಶಿವಂ
ನಮೋ ಹರ ಹರಾಽಹರಾ-ಹರಹರಾಂತರೀಂ ಮೇ ದೃಶಮ್ |
ನಮೋ ಭವ ಭವಾಭವ ಪ್ರಭವ ಭೂತಯೇ ಸಂಪದಾಂ
ನಮೋ ಮೃಢ ನಮೋ-ನಮೋ ನಮ ಉಮೇಶ ತುಭ್ಯಂ ನಮಃ || ೧೨ ||

ಸತಾಂ ಶ್ರವಣ-ಪದ್ಧತಿಂ ಸರತು ಸನ್ನತೋಕ್ತೇತ್ಯಸೌ
ಶಿವಸ್ಯ ಕರುಣಾಂಕುರಾತ್ ಪ್ರತಿ-ಕೃತಾತ್ ಸದಾ ಸೋದಿತಾ |
ಇತಿ ಪ್ರಥಿತ-ಮಾನಸೋ ವ್ಯಧಿತ ನಾಮ ನಾರಾಯಣಃ
ಶಿವ-ಸ್ತುತಿಮಿಮಾಂ ಶಿವಾಂ ಲಿಕುಚ-ಸೂರಿ-ಸೂನುಃ ಸುಧೀಃ || ೧೩ ||

|| ಇತಿ ಶ್ರೀನಾರಾಯಣಪಂಡಿತಾಚಾರ್ಯವಿರಚಿತಾ ಶಿವಸ್ತುತಿಃ ಸಮಾಪ್ತಾ ||

sPuTaM sPaTika-sapraBaM sPuTita-hATaka-SrI-jaTaM
SaSAnka-dala-SEKaraM kapila-Pulla-nEtra-trayam |
tarakShu-vara-kRuttimad Bujaga-BUShaNaM BUtimat
kadA nu Siti-kanTha tE vapuravEkShatE vIkShaNam || 1 ||

tri-lOcana vilOcanE lasati tE lalAmAyitE
smarO niyama-GasmarO niyaminAmaBUd BasmasAt |
sva-Bakti-latayA vaSIkRutavatI satIyaM satI
sva-Bakta-vaSagO BavAnapi vaSI prasIda praBO || 2 ||

mahESa mahitO&si tatpuruSha pUruShAgryO BavAn
aGOra ripu-GOra tE&navama vAma-dEvAMjaliH |
namaH sapadi-jAta tE tvamiti panca-rUpO&0citaH
prapancaya ca panca-vRunmama manastamastADaya || 3 ||

rasA-GanarasAnalAnila-viyad-vivasvad-vidhu-
prayaShTRuShu niviShTamityaja BajAmi mUrtyaShTakam |
praSAMtamuta BIShaNaM Buvana-mOhanaM cEtyahO
vapUMShi guNa-puMShi tE&hamahamAtmanO&haM-BidE || 4 ||

vimukti-paramAdhvanAM tava ShaDadhvanAmAspadaM
padaM nigama-vEdinO jagati vAmadEvAdayaH |
kathaMcidupa-SikShitA Bagavataiva saMvidratE
vayaM tu viraLAntarAH kathamumESa tanmanmahE || 5 ||

kaThOrita-kuThArayA lalita-SUlayA bAhayA
raNaDDamarayA sPuraddhariNayA sa-KaTvAMgayA |
calaBiracalABirapyagaNitABirunnRutyataH
caturdaSa jagaMti tE jaya-jayEtyayurvismayam || 6 ||

puru-tripura-randhanaM vividha-daitya-vidhvaMsanaM
parAkrama-paraMparA api parA na tE vismayaH |
amarSha-bala-harShita-kShuBita-vRutta-nEtrOjjvala-
jvalajjvalana-hElayA SalaBitaM hi lOka-trayam || 7 ||

sahasra-nayanO guhaH saha-sahasra-raSmirvidhuH
bRuhaspatirutAtpatiH sa-sura-siddha-vidyAdharAH |
Bavat-pada-parAyaNAH SriyamimAmaguH prArthinAM
BavAn sura-tarurdRuSaM diSa SivAM SivA-vallaBa || 8 ||

tava priya-tamAdati-priya-tamaM sadaivAntaraM
payasyupahitaM GRutaM svayamiva SriyO vallaBam |
viBidya laGu-buddhayaH sva-para-pakSha-lakShAyitaM
paThanti hi luThanti tE SaTha-hRudaH SucA SunThitAH || 9 ||

vilAsa-nilayaScitA tava SirastatirmAlikA
kapAlamapi tE karE tvamaSivO&syanantardhiyAm |
tathA&pi BavataH padaM Siva-SivEtyadO jalpatAM
akincana na kincana vrajinamastyaBasmIBavat || 10 ||

tvamEva kila kAma-dhak sakala-kAmamA-pUrayan
api tri-nayanaH sadA vahasi cAtri-nEtrOdBavam |
viShaM viSha-dharAn dadhat pibasi tEna cA&nandavAn
viruddha-caritOcitA jagadadhISa tE BikShutA || 11 ||

namaH Siva-SivASivASiva SivArdha kRuntASivaM
namO hara harA&harA-haraharAntarIM mE dRuSam |
namO Bava BavABava praBava BUtayE saMpadAM
namO mRuDha namO-namO nama umESa tuByaM namaH || 12 ||

satAM SravaNa-paddhatiM saratu sannatOktEtyasau
Sivasya karuNAMkurAt prati-kRutAt sadA sOditA |
iti prathita-mAnasO vyadhita nAma nArAyaNaH
Siva-stutimimAM SivAM likuca-sUri-sUnuH sudhIH || 13 ||

|| iti SrInArAyaNapanDitAcAryaviracitA SivastutiH samAptA ||