hari kathamrutha sara · jagannatha dasaru · MADHWA · Rudra · siva

Hari Kathamruta saaradhalli Rudra devaru

ವಾಮದೇವ ವಿರಂಚಿತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಳ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ||

ಕೃತ್ತಿವಾಸನೆ ಹಿಂದೆ ನೀ ನಾ
ಲ್ವತ್ತು ಕಲ್ಪಸಮೀರನಲಿ ಶಿ
ಷ್ಯತ್ವ ವಹಿಸಿ ಅಖಿಳಾಗಮಾರ್ಥಗಳೋದಿ ಜಲಧಿಯಲಿ
ಹತ್ತುಕಲ್ಪದಿ ತಪವ ಗೈದಾ
ದಿತ್ಯರೊಳಗುತ್ತಮನೆನಿಸಿ ಪುರು
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ||

ನಂದಿವಾಹನ ನಳಿನಿಧರ ಮೌ
ಳೇಂದು ಶೇಖರ ಶಿವತ್ರಿಯಂಬಕ
ಅಂಧಕಾಸುರಮಥನ ಗಜಶಾರ್ದೂಲ ಚರ್ಮಧರ
ಮಂದಜಾಸನ ತನಯ ತ್ರಿಜಗ
ದ್ವಂದ್ಯ ಶುದ್ಧ ಸ್ಪಟಿಕ ಸನ್ನಿಭ
ವಂದಿಸುವೆ ನನವರತ ಪಾಲಿಸೋ ಪಾರ್ವತೀರಮಣ||

ಫಣಿ ಫಣಾಂಚಿತ ಮುಕುಟರಂಜಿತ
ಕ್ವಣಿತಡಮುರುತ್ರಿಶೂಲ ಶಿಖಿದಿನ
ಮಣಿ ನಿಶಾಕರ ನೇತ್ರ ಪರಮಪವಿತ್ರ ಸುಚರಿತ್ರ
ಪ್ರಣತಕಾಮದ ಪ್ರಮಥ ಸುರಮುನಿ
ಗಣಸುಪೂಜಿತ ಚರಣಯುಗ ರಾ
ವಣ ಮದ ವಿಭಂಜನ ಸತತ ಮಾಂಪಾಹಿ ಮಹದೇವ||

ದಕ್ಷಯಜ್ಞ ವಿಭಂಜನನೆ ವಿರು
ಪಾಕ್ಷ ವೈರಾಗ್ಯಾಧಿಪತಿ ಸಂ
ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು
ಯಕ್ಷ ಪತಿಸಖ ಯಜಪರಿಗೆ ಸುರ
ವೃಕ್ಷ ವೃಕ್ಷದನುಜಾರಿ ಲೋಕಾ
ಧ್ಯಕ್ಷ್ಯ ಶುಕದುರ್ವಾಸ ಜೈಗೀಷವ್ಯ ಸಂತಯಿಸು ||

ಹತ್ತು ಕಲ್ಪದಿ ಲವಣ ಜಲಧಿಯೊ
ಳುತ್ತಮ ಶ್ಲೋಕನವೊಲಿಸಿ ಕೃತ
ಕೃತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ
ಬಿತ್ತರಿಸಿ ಮೋಹಿಸಿ ದುರಾತ್ಮರ
ನಿತ್ಯನಿರಯ ನಿವಾಸರೆನಿಸಿದ
ಕೃತ್ತಿವಾಸಗೆ ನಮಿಪೆ ಶೇಷಪದಾರ್ಹನಹುದೆಂದು||

vAmadEva virancitanaya u
mAmanOhara ugra dhUrjaTi
sAmajAjinavasana BUShaNa sumanasOttaMsa
kAmahara kailAsamaMdira
sOmasUryAnaLa vilOcana
kAmitaprada karuNisemage sadA sumangaLava ||

kRuttivAsane hinde nI nA
lvattu kalpasamIranali Si
Shyatva vahisi aKiLAgamArthagaLOdi jaladhiyali
hattukalpadi tapava gaidA
dityaroLaguttamanenisi puru
ShOttamana pariyanka padavaidideyo mahadEva||

nandivAhana naLinidhara mau
LEndu SEKara SivatriyaMbaka
andhakAsuramathana gajaSArdUla carmadhara
mandajAsana tanaya trijaga
dvandya Suddha spaTika sanniBa
vandisuve nanavarata pAlisO pArvatIramaNa||

PaNi PaNAncita mukuTaranjita
kvaNitaDamurutriSUla SiKidina
maNi niSAkara nEtra paramapavitra sucaritra
praNatakAmada pramatha suramuni
gaNasupUjita caraNayuga rA
vaNa mada viBanjana satata mAMpAhi mahadEva||

dakShayaj~ja viBanjanane viru
pAkSha vairAgyAdhipati saM
rakShisemmanu sarvakAladi sanmudavanittu
yakSha patisaKa yajaparige sura
vRukSha vRukShadanujAri lOkA
dhyakShya SukadurvAsa jaigIShavya santayisu ||

hattu kalpadi lavaNa jaladhiyo
Luttama SlOkanavolisi kRuta
kRutyanAgi jagatpatiya nEmadi kuSAstragaLa
bittarisi mOhisi durAtmara
nityaniraya nivAsarenisida
kRuttivAsage namipe SEShapadArhanahudendu||

One thought on “Hari Kathamruta saaradhalli Rudra devaru

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s