dasara padagalu · prasanna venkata dasaru · sathyabhinava thirtharu

Dasara padagalu on Sri Sathyaabhinava thirtharu

ಇಂದೆ ಕಂಡೆವು ಗುರುರಾಯನ ನಮ್ಮ
ತಂದೆ ಸತ್ಯಾಭಿನವತೀರ್ಥನ ಫಲಿಸ
ಬಂದೊದಗಿತು ನಮ್ಮ ಸುಕೃತ ಆ
ನಂದರಸಾಬ್ಧಿ ಉಕ್ಕೇರಿತು ||pa||

ಇದೀಗೆ ಕಲ್ಪದ್ರುಮ ಕಾಣಿರೈ ಅಹು
ದಿದೀಗೆ ಚಿಂತಾಮಣಿ ನೋಡಿರೈ ಮತ್ತಿ
ದಿದೀಗೆ ಸುರಭಿ ಬಂದಿತೆನ್ನಿರೈ ತಮ್ಮ
ಮುದದಿಂದ ಯತಿರೂಪವಾಯಿತೈ ||1||

ಬಡವರ ದೊರೆ ನಮ್ಮ ಗುರುರಾಯ ಈ
ಪೊಡವಿಲಿ ಯಾಚಕರಾಶ್ರಯ ಆಪ್ತ
ಹಡೆದ ತಾಯಿತಂದೇರ ಮರೆಸಿದ ಎ
ಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ||2||

ಭಕ್ತಿ ಪಥವ ನೋಡಿ ನಡೆವನು ಯತಿ
ಮುಕುಟಮಣಿಗೆ ಸರಿಗಾಣೆನು ಜ್ಞಾನ
ಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆ
ಮುಕ್ತಿ ಮಂದಿರ ವಾತ್ರ್ಯರುಹಿಸಿದ ||3||

ಒಂದೊಂದು ಗುಣಗಳ ಮಹಿಮೆಯು ಮ
ತ್ತೆಂದಿಗೆ ಹೊಗಳಲಿ ತೀರವು
ಹಿಂದಾದ ಪೂತರು ಅಹರು ಯ
ತೀಂದ್ರನ ಸಾಮ್ಯಕೆ ಸರಿಯಾರು ||4||

ಗುರುಭಕ್ತಿ ನೆಲೆ ಕಳೆ ಮರೆಯದೆ ಶ್ರೀ
ಧರಜೆ ರಾಘವಪಾದ ಜರಿಯದೆ ದೇವ
ವರವೇದವ್ಯಾಸನ ಸೇವೆಗೆ ಒಂ
ದರಘಳಿಗ್ಯಲಸ ತಾನೆಂದಿಗೆ ||5||

ಹೊನ್ನ ತೃಣದೊಲು ಸೂರ್ಯಾಡಿದ ವಿ
ದ್ಯೋನ್ನತರ ತವರುಮನೆಯಾದ
ಮನ್ನಿಪ ಸುಜನಚಕೋರವ ಹೊರವ
ಪೂರ್ಣ ಚಂದಿರನಂತಲ್ಲೊಪ್ಪುವ||6||

ತಪ್ತಲಾಂಛನ ತೀರ್ಥವೀವಾಗ ಭೃತ್ಯ
ರುಪಟಳಕೊಲಿದು ನಲಿವನಾಗ
ಕಪಟವ ಲೇಶಮಾತ್ರರಿಯನು ಇಂಥ
ಗುಪ್ತ ಮಹಿಮಗೆಣೆಗಾಣೆನು||7||

ಸಕಳ ಪುರಾಣೋಕ್ತ ದಾನವ ಬಿಡ
ದಖಿಳ ಧರ್ಮವನೆಲ್ಲ ಮಾಡುವ
ನಿಖಿಳ ತತ್ವವನೊರೆದು ಹೇಳುವ ಈ
ಅಕಳಂಕನೆಂದೂ ನಮ್ಮನು ಕಾವ ||8||

ಕಷ್ಟ ಮೌನದಿ ವಾರಣಾಸಿಯ ಬಹು
ಶಿಷ್ಟರ ಸಲಹುತ ಯಾತ್ರೆಯ ಮಾಡಿ
ತುಷ್ಟಿ ಬಡಿಸಿದಲ್ಲಿ ವಾಸರ ಬೇಡಿ
ದಿಷ್ಟಾರ್ಥವನೀವನು ದಾಸರ ||9||

ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆ
ನೂತನ ವಸನ ಹೊನ್ನಾರ್ಚನೆಗಿಟ್ಟು ಮುಂದೆ
ನುತಿಸಿ ಹಿಗ್ಗುವ ನವಭಕುತಿಂದ ಈ
ವ್ರತಕಾಗಲಿಲ್ಲ ಒಂದಿನ ಕುಂದು||10||

ಶ್ರೀ ಭಾಗವತ ಶಾಸ್ತ್ರ ಟೀಕನು ಹರಿ
ಗಾಭರಣವ ಮಾಡಿಟ್ಟನು
ಈ ಭೂಮಿಲಿಹ ಶಿಷ್ಯ ಜನರನು ತತ್ವ
ಶೋಭಿತರನು ಮಾಡಿ ಹೊರೆದನು||11||

ಬಲುಹಿಂದ ಯವನನ ಬಲದಲ್ಲಿ ಕೃಷ್ಣ
ಒಳಪೊಕ್ಕು ಸದೆದ ಪರಿಯಲ್ಲಿ
ಕಲಿನೃಪ ಮ್ಲೇಚ್ಛನ ಬಂಧನ ತಪೋ
ಬಲದಿಂದ ಗುರುರಾಯ ಗೆಲಿದನು||12||

ಭಕ್ತಿ ವಿರತಿ ಜ್ಞಾನ ಪೂರ್ಣನು ಸೇ
ವಕ ಜನರಿಗೆ ಪ್ರಾಣಪ್ರಿಯನು
ಪ್ರಕಟಿಸಿದನು ನಿಜಕೀರ್ತಿಯ ನಿತ್ಯ
ಸಕಲ ಸದ್ಗುಣಗಳ ವಾರ್ತೆಯ ||13||

ಈ ಪರಿ ಬಹು ಪಟ್ಟವಾಳುತ ದಿವ್ಯ
ಶ್ರೀಪಾದವ್ರತ ಪೂರ್ಣ ತಾಳುತ
ಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟ
ಕಾಪುರುಷರ ಮೊತ್ತ ಗೆದ್ದಾತ||14||

ಹರಿಗುಣ ಜಿಜ್ಞಾಸೆ ಯಿಂದ ಶ್ರೀ
ಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀ
ಹರಿನಾಮ ಸ್ಮರಣಶ್ರವಣದಿಂದ ಶ್ರೀ
ಹರಿ ಪ್ರೀತಿಬಡಿಸಿದ ನಲವಿಂದ ||15||

ನಿರುತ ಉದಯಸ್ನಾನ ಮೌನವ ಶ್ರೀ
ಗುರು ಮಧ್ವಶಾಸ್ತ್ರವ್ಯಾಖ್ಯಾನವ ಮಹಾ
ಗೀರ್ವಾಣ ವಾಕ್ಯದಿಂದ ಪೇಳುವ ಆತ್ಮ
ಗುರುಗಳ ಸ್ಮರಣೆಯ ಮಾಡುವ||16||

ಗುರು ಸತ್ಯನಾಥರ ತಂದನು ನಿಜ
ಗುರುಪದವೇ ಗತಿಯೆಂದನು ತನ್ನ
ಸ್ಮರಣೇಲಿ ಇಹರ ಕಾವನು ಬೇಡಿ
ದರೆ ಅಭೀಷ್ಟಾರ್ಥವನೀವನು||17||

ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜ
ನರ ಹೃತ್ಕುಮುದ ತಾಪ ಸಂಹರ್ತ
ಸರಸ ಸುಧಾಂಶು ವಾಕ್ಯಾನ್ವಿತ ಸಿತ
ಕರನಹುದಹುದಯ್ಯ ಧರೆಗೀತ ||18||

ಆವ ಪ್ರಾಣಿಯು ಗುರುಮಹಿಮೆಯ ಸ
ದ್ಭಾವದಿ ನೆನೆಯಲು ಸುಖಿಯಾದ
ದೇವ ಪ್ರಸನ್ವೆಂಕಟಾದ್ರೀಶ ಅವ
ಗಾವಗೆ ಪಾಲಿಪ ಮಧ್ವೇಶ ||19||

inde kanDevu gururAyana namma
tande satyABinavatIrthana Palisa
bandodagitu namma sukRuta A
nandarasAbdhi ukkEritu ||pa||

idIge kalpadruma kANirai ahu
didIge cintAmaNi nODirai matti
didIge suraBi banditennirai tamma
mudadiMda yatirUpavAyitai ||1||

baDavara dore namma gururAya I
poDavili yAcakarASraya Apta
haDeda tAyitandEra maresida e
mmoDeya Bakti BAsava beLesida||2||

Bakti pathava nODi naDevanu yati
mukuTamaNige sarigANenu j~jAna
suKada baLLiya beLe beLesida sale
mukti maMdira vAtryaruhisida ||3||

ondondu guNagaLa mahimeyu ma
ttendige hogaLali tIravu
hindAda pUtaru aharu ya
tIndrana sAmyake sariyAru ||4||

guruBakti nele kaLe mareyade SrI
dharaje rAGavapAda jariyade dEva
varavEdavyAsana sEvege oM
daraGaLigyalasa tAnendige ||5||

honna tRuNadolu sUryADida vi
dyOnnatara tavarumaneyAda
mannipa sujanacakOrava horava
pUrNa candiranantalloppuva||6||

taptalAnCana tIrthavIvAga BRutya
rupaTaLakolidu nalivanAga
kapaTava lESamAtrariyanu intha
gupta mahimageNegANenu||7||

sakaLa purANOkta dAnava biDa
daKiLa dharmavanella mADuva
niKiLa tatvavanoredu hELuva I
akaLaMkanendU nammanu kAva ||8||

kaShTa maunadi vAraNAsiya bahu
SiShTara salahuta yAtreya mADi
tuShTi baDisidalli vAsara bEDi
diShTArthavanIvanu dAsara ||9||

pratidina gurupAdukeyaniTTu mEle
nUtana vasana honnArcanegiTTu munde
nutisi higguva navaBakutinda I
vratakAgalilla ondina kuMdu||10||

SrI BAgavata SAstra TIkanu hari
gABaraNava mADiTTanu
I BUmiliha SiShya janaranu tatva
SOBitaranu mADi horedanu||11||

baluhinda yavanana baladalli kRuShNa
oLapokku sadeda pariyalli
kalinRupa mlEcCana bandhana tapO
baladinda gururAya gelidanu||12||

Bakti virati j~jAna pUrNanu sE
vaka janarige prANapriyanu
prakaTisidanu nijakIrtiya nitya
sakala sadguNagaLa vArteya ||13||

I pari bahu paTTavALuta divya
SrIpAdavrata pUrNa tALuta
sthApisidanu madhvasiddhAnta duShTa
kApuruShara motta geddAta||14||

hariguNa jij~jAse yinda SrI
harimUrti dhyAna cintaneyinda SrI
harinAma smaraNaSravaNadinda SrI
hari prItibaDisida nalavinda ||15||

niruta udayasnAna maunava SrI
guru madhvaSAstravyAKyAnava mahA
gIrvANa vAkyadiMda pELuva Atma
gurugaLa smaraNeya mADuva||16||

guru satyanAthara tandanu nija
gurupadavE gatiyendanu tanna
smaraNEli ihara kAvanu bEDi
dare aBIShTArthavanIvanu||17||

gurusatyanAthAbdhi sanjAta sajja
nara hRutkumuda tApa saMharta
sarasa sudhAMSu vAkyAnvita sita
karanahudahudayya dharegIta ||18||

Ava prANiyu gurumahimeya sa
dBAvadi neneyalu suKiyAda
dEva prasanvenkaTAdrISa ava
gAvage pAlipa madhvESa ||19||


ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ||pa||

ತಾರಾಪತಿಯಂತೆ ಕೀರ್ತಿ ಪ್ರಸರವಿ
ಸ್ತಾರದಿ ಬುಧ ಚಕೋರವೃಂದಕೆ ನೀನು ||1||

ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳ
ನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ ||2||

ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆ
ಮಾರುತಿಮತತತ್ವ ವಾರಿಧಿತರಂಗಕೆ ||3||

ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯ
ಗರೆಯುತ ಹೃತ್ತಾಪ ಪರಿಹರಿಸುವಂಥ ||4||

ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತ
ವಸುಧೆಯಾಚಕ ಕುಮುದ ಕುಸುಮ ಕೋರಕಕೆ ||5||

tArApatiyahudau satyABinava tIrtha guruve ||pa||

tArApatiyante kIrti prasaravi
stAradi budha cakOravRuMdake nInu ||1||

ikShucApana gade kakShipa mAyigaLa
nIkShipe niruta satprEkShendukAntige ||2||

SrIrAma vEdavyAsara sEveyoLihe
mArutimatatatva vAridhitarangake ||3||

gurupAda smaraNeya mareyade amRuta vAkya
gareyuta hRuttApa pariharisuvantha ||4||

prasanvenkaTa prIta SrI satyanAthara suta
vasudheyAcaka kumuda kusuma kOrakake ||5||

dasara padagalu · MADHWA · Sri sathyadharma thirtharu

Dasara pada on Sri Sathyadharma thirtharu

ಚಿತ್ತೆಸೈ ಬಿನ್ನೈಸುವೆ ಪರಾಕು ||pa||

ಸತ್ಯಧರ್ಮ ಸದ್ಗುರುರಾಯಾ ||a.pa||

ನಿನ್ನ ನಂಬಿದವ ಧನಮದಾಂಧರಿಗೆ
ಇನ್ಯಾತಕೆ ತೆರೆಯಲಿ ಬಾಯಾ ||1||

ಕಾಲಹರಣ ಬಲು ಕಷ್ಟವಾಗುತಿದೆ
ಪಾಲಿಸುವುದು ಸತ್ಪಾಥೇಯಾ ||2||

ಶ್ರೀದವಿಠಲಾಶ್ರಿತ ಜನವತ್ಸಲ
ಸಾಧು ಸೇವ್ಯ ಸತ್ಯದಿಗೇಯಾ ||3||

chitthasii binnaisuve parAku ||pa||

satyadharma sadgururAyA ||a.pa||

ninna naMbidava dhanamadAndharige
inyAtake tereyali bAyA ||1||

kAlaharaNa balu kaShTavAgutide
pAlisuvudu satpAthEyA ||2||

SrIdaviThalASrita janavatsala
sAdhu sEvya satyadigEyA ||3||

dasara padagalu · MADHWA · sathyapriya theertharu · Vijaya dasaru

Dasara padagalu on Sri Sathya priya theertharu

ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು
ಪಾಡಿ ಪಾಡಿ ಯೋಗಿವರ್ಯರ ನಾ
ಪಾಡಪಂಥದಲಿ ಬಂದ ಮೂಢ ಮಿಥ್ಯಾವಾದಿಗಳ
ಓಡಿಸಿ ತನ್ನನು ಕೊಂಡಾಡಿದವರ ಪೊರೆವ ಯತಿಯ|| ಪ||

ನಾಗಸರ ನಾಗಬಂಧ ಕೊಂಬು ಕೊಳಲು
ರಾಗದಿಂದ ಪಾಡುವ ಸನಾಯಿಸುತಿಗಳು
ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು
ಸ್ಯಾಗರ ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ||1||

ವಾದಿಗಳೆದೆಯು ಬಿರಿಯೆ ಧವಳ ಶಂಖದಾ
ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ
ವೇದ ಓದುವ ಶಿಷ್ಯರು ಮೇದಿನಿ ಸುರರು
ಬಲದಾರಿಯಲಿ ಬರೆ ಆಶೀ ರ್ವಾದವನ್ನು ಕೊಡುವ ಧೀರನು ||2||

ವಾಜಿ ಗಜ ಪಾಯಿದಳನೇಕಸಂದಣಿ
ಯೋಜನದಗಲಕೆ ಘೋಷಣವಾಗಲು
ರಾಜಾಧಿರಾಜರು ಪೂಜೆಯನ್ನು ಮಾಡುತಿರೆ
ಈ ಜಗದೊಳಗೆ ಸಿದ್ಧ ತೇಜಪುಂಜರನ್ನ ||3||

ಬುದ್ಧಿಹೀನನಾದ ಜನರ ಉದ್ಧರಿಸುತ
ಅದ್ವೈತಮತಶಾಸ್ತ್ರ ವದ್ದು ಕಳವುತ
ಮಧ್ವಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ
ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ||4||

ಚಂಡಮಾಯವಾದಿಗಳ ಹಿಂಡು ಬರಲಾಗಿ
ಕಂಡು ಹರುಷದಿಂದ ಸಭಾಮಂಡಿತರಾಗಿ
ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ
ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ||5||

ಬಿಜವಾಡದಲಿ ಕೃಷ್ಣ ತಜ್ಜಲದೊಳು
ದುರ್ಜಂತುಗಳು ನರರಾ ಬೆಚ್ಚರಿಸಲು
ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ
ರಾಜಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ ||6||

ದೇಶÀದೊಳೀ ಶೇಷವಾದ ದಾಸರ ಪ್ರಿಯ
ವಾಸ ಸಿರಿ ವಿಜಯವಿಠ್ಠಲೇಶನಂಘ್ರಿಯ ಸಾಸಿರ ದಳದ ಧ್ಯಾನ
ಮೀಸಲಾಗಿ ಮಾಡುತಿಪ್ಪ ದೋಷರಹಿತರಾದ ಸಂ
ನ್ಯಾಸ ಕುಲಭೂಷಣನಾ ||7||

nODi nODi satyapriyara nA nindu nindu
pADi pADi yOgivaryara nA
pADapanthadali banda mUDha mithyAvAdigaLa
ODisi tannanu konDADidavara poreva yatiya|| pa||

nAgasara nAgabandha koMbu koLalu
rAgadinda pADuva sanAyisutigaLu
bEgi kUguva heggALe duMduBi esiye catu
syAgara pariyanta mereda yOgigaLAgraNyana||1||

vAdigaLedeyu biriye dhavaLa SanKadA
nAda opppisutti mereva biridu samudAya
vEda Oduva SiShyaru mEdini suraru
baladAriyali bare ASI rvAdavannu koDuva dhIranu ||2||

vAji gaja pAyidaLanEkasaMdaNi
yOjanadagalake GOShaNavAgalu
rAjAdhirAjaru pUjeyannu mADutire
I jagadoLage siddha tEjapunjaranna ||3||

buddhihInanAda janara uddharisuta
advaitamataSAstra vaddu kaLavuta
madhvamatava eMbo sudhAbdhige rAkEndunante
iddu BavarOgaLige maddu ahudO suguNadavara||4||

canDamAyavAdigaLa hinDu baralAgi
kanDu haruShadinda saBAmanDitarAgi
KanDa tunDu mADi avara diMDugeDahi maMDalake
punDarikAkShane uddanDanendu sAridarana||5||

bijavADadali kRuShNa tajjaladoLu
durjantugaLu nararA beccarisalu
prajvalisuta pOgi mArjane yannu gaidu BIta
rAjaJarava biDisi kAyida sajjanara manOhara ||6||

dESaÀdoLI SEShavAda dAsara priya
vAsa siri vijayaviThThalESananGriya sAsira daLada dhyAna
mIsalAgi mADutippa dOSharahitarAda san
nyAsa kulaBUShaNanA ||7||


ಸತ್ಯಪ್ರಿಯ ಗುರುರಾಯ ಮಂಗಳಕಾಯ
ನಿತ್ಯದಲಿ ನಿಜ ಭೃತ್ಯ ಸಹಾಯ ||pa||

ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ
ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ
ರುದ್ಧನೆ ವರನೆಂದೆದ್ದು ನೆಗಹಿ ಕರ
ಬದ್ಧ ಕಂಕಣರಾಗಿ
ಸಿದ್ಧ ಪ್ರಮೇಯಗಳನುದ್ಧರಿಸಿದ ಪರಿಶುದ್ಧ ಸ್ಮರ ಮಾರ್ಗಣ ಗೆದ್ದ ||1||

ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ
ಸತತ ವೇದಾರ್ಥ ವಿಚಾರ
ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವಿ
ಹಿತ ಶಿಷ್ಯರಿಗೆ ನಗುತ ಪೇಳಿದ ಅ
ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ |||2||

ನೆನೆಸಿದವರ ಸುರಧೇನು ನಿನಗೆಲ್ಲಿ ನಾನು
ಎಣೆಗಾಣೆ ಎಣಿಸಲು ಮೇಣೂ
ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ
ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ
ಧ್ಯಾನ ಮಾಡುವ ತ್ರಾಣ||3||

satyapriya gururAya mangaLakAya
nityadali nija BRutya sahAya ||pa||

madhvamatAbdhi candra sadguNasAndra
advaitamadri indra iddhariyoLagani
ruddhane varanendeddu negahi kara
baddha kankaNarAgi
siddha pramEyagaLanuddharisida pariSuddha smara mArgaNa gedda ||1||

vitaraNadali balu SUrA kIrtivihArA
satata vEdArtha vicAra
miti illadE A kathAmRuta tatuva mArgadali vi
hita SiShyarige naguta pELida a
dButa mahimA sancarisuta AnaMda Barita |||2||

nenesidavara suradhEnu ninagelli nAnu
eNegANe eNisalu mENU
muni satyaBOdhara manadalli nindarcaneyanu manadalli
GanavAgi kaikoMba guNadi vijayaviThThalana caraNAMbuja
dhyAna mADuva trANa||3||

dasara padagalu · MADHWA · sathyadhyana thirtharu

Dasara padagalu on Sri Sathya dhyana thirtharu

ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ
ಸತ್ಯವಾದ ಜ್ಞಾನ ಹುಟ್ಟುವುದು ||ಪ ||

ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತು
ಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ || ಅ.ಪ |

ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣ
ಸರ್ವದೋಷ ವರ್ಜಿತನೆಂದು
ವರ ಮಧ್ವಮತವೆ ವೇದ್ಯವೆಂದು
ಧರೆಯೊಳು ಜಯಭೇರಿ ಹೊಡಿಸಿದ ಧೀರಾ || 1 ||

ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿ
ದುರ್ವಾದಿಗಳ ಸದ್ದು ಆದಗಿಸುತಾ
ಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತ
ಪ್ರಶ್ನಾರ್ಹ ರೂಪಗಳ ಗ್ರಂಥ ರಹಿಸಿದಂಥಾ || 2 ||

ದಾನದಲಿ ಕರ್ಣ ಜ್ಞಾನದಿ ಶುಕಮುನಿ
ಮೌನಿ ಕುಲಕೆ ಸನ್ಮಾನ್ಯರಾಗಿ
ಧರ್ಮ ಸಾಮ್ರಾಜ್ಯಕೆ ಸಾರ್ವಭೌಮನಾದ
ಶ್ರೀನಿಧಿ ಭೂಪತಿವಿಠಲನ ದಾಸ ||3||

satyadhyAnara pAda smarisuva manujage
satyavAda j~jAna huTTuvudu ||pa ||

Sakti Bakti yukti sauBAgya saMpattu
dhairya audArya utsAha mUrutiyAda || a.pa |

hariye sarvOttama sarvaguNa paripUrNa
sarvadOSha varjitanendu
vara madhvamatave vEdyavendu
dhareyoLu jayaBEri hoDisida dhIrA || 1 ||

paravAdi vAkyArtha parara koraLige kaTTi
durvAdigaLa saddu AdagisutA
sarva sAmAnyarige sulaBa tiLiyuvanta
praSnArha rUpagaLa grantha rahisidaMthA || 2 ||

dAnadali karNa j~jAnadi Sukamuni
mauni kulake sanmAnyarAgi
dharma sAmrAjyake sArvaBaumanAda
SrInidhi BUpativiThalana dAsa ||3||


ಸತ್ಯಧ್ಯಾನರ ನಿತ್ಯ ಸ್ಮರಿಸಿ
ಕೃತಕೃತ್ಯನು ನೀನಾಗೋ || ಪ ||
ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |
ಸುತೀರ್ಥರಕರಕಂಜೋತ್ಥರಾದ ಗುರು | |ಅ.ಪ ||

ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿ
ಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿ
ಛಾತ್ರವರ್ಗ ಸಂಯುಕ್ತರಾಗಿ ಸುಖ
ತೀರ್ಥರ ಸುಮತಕೆ ಸಂಸ್ಥಾಪಕ ಗುರು || ೧ ||

ಏನು ಕರುಣವೋ ಜ್ಞನಿಗಳನು ಧನದಾನದಿ ದಣಿಸುತಲಿ
ಕ್ಷೋಣಿವಿಬುಧರಿಗೆ ನ್ಯಾಯ ಸುಧಾರಸಪಾನ ಮಾಡಿಸುತಲಿ
ದೀನ ಜನಗೆ ಸುರಧೇನು ಎನಿಸಿದ ಮ-
ಹಾನುಭಾವರೆಂದು ಸಾನುರಾಗದಲಿ || ೨ ||

ಹೇಮವಜ್ರಮಯ ಮಂಟಪದಲಿ ಶ್ರೀರಾಮನ ಪದಪದುಮ
ನೇಮದಿ ಪೂಜಿಸುವಾ ಮಹವೈಭವ ನೋಳ್ಪಜನರ ಜನುಮ
ಈ ಮಹಿಯೊಳು ಸಾರ್ಥಕವೆನಿಸಿತು ಬಹು
ಧೀಮಜ್ಜನರಿಗೆ ಕಾಮಿತ ಗರೆಯುವ || ೩ ||

ಹರಿಪದಪೊಂದಲು ಮರುತಶಾಸ್ತ್ರವೆಂಬೋ ತರಣಿಯೋಳ್ಪಗಲಿರಳು
ಹರುಷದಿ ಕುಳಿತಿಹ ಧರೆಸುರರನು ಭವಶರಧಿ ದಾಟಿಸಲು
ಕರದೊಳು ದಂಡವ ಧರಿಸಿ ನಿಂದಿರುವರ
ರುಣವಸನದಲಿ ಪರಿಶೋಭಿತತನು || ೪ ||

ಶರಣ ಜನರ ಬಹುದುರಿತ ತಮಕೆ ದಿನಕರ
ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ
ಸ್ಮರಿಸುತ ಹರುಷದಲಿ ಧರೆಯೊಳು ಪಂಡರಪುರ ಸುಕ್ಷೇತ್ರದಿ
ವರತನುವಿರಿಸಿದ ಪರಮ ಮಹಿಮ ಗುರು || ೫ ||

satyadhyAnara nitya smarisi
kRutakRutyanu nInAgO || pa ||
martyane SrIguru satyaj~jAna |
sutIrtharakarakaMjOttharAda guru | |a.pa ||

suttal biDade dharitriyoLage sukShEtragaLa carisi
mattamAjiyaja hastigaNake pancavaktrarendu karesi
CAtravarga saMyuktarAgi suKa
tIrthara sumatake saMsthApaka guru || 1 ||

Enu karuNavO j~janigaLanu dhanadAnadi daNisutali
kShONivibudharige nyAya sudhArasapAna mADisutali
dIna janage suradhEnu enisida ma-
hAnuBAvarendu sAnurAgadali || 2 ||

hEmavajramaya manTapadali SrIrAmana padapaduma
nEmadi pUjisuvA mahavaiBava nOLpajanara januma
I mahiyoLu sArthakavenisitu bahu
dhImajjanarige kAmita gareyuva || 3 ||

haripadapondalu marutaSAstraveMbO taraNiyOLpagaliraLu
haruShadi kuLitiha dharesuraranu BavaSaradhi dATisalu
karadoLu danDava dharisi niMdiruvara
ruNavasanadali pariSOBitatanu || 4 ||

SaraNa janara bahudurita tamake dinakara
samarenisutali siri kArpara narahariya caraNayugma
smarisuta haruShadali dhareyoLu panDarapura sukShEtradi
varatanuvirisida parama mahima guru || 5 ||

 


ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ || ಪ ||

ಹೀನೈಕ್ಯಕಾನನ ತನೂನಪಾತನಿಗೆ || ಅ.ಪ ||

ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ
ವ್ಯಾಸಸೂತ್ರಾದಿ ಪ್ರಸ್ಥಾನತ್ರಯದಲೀ
ದೇಶಿಕರ ವಿದ್ವದ್ಸಭಾಸಮ್ಮೇಳಾದೊಳನಿಲ
ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದೊ ||೧ ||

ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ
ಹೃತ್ತಮಾಂತಕ ಭಾನು ಪ್ರತ್ಯರ್ಥಿಹ
ಮಿಥ್ಯವಿದ್ರಾವಣ ವಿಚಾರಸಾರಾದ್ಯಮಿತ
ತತ್ತ್ವಪ್ರಮೇಯ ಸರ್ವತ್ರ ಮೆರೆಸಿದನೆಂದು || ೨ ||

ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ
ದಾನಾನುಕಂಪ ವಿದ್ವತ್ಪ್ರಭೆಯಲಿ
ಜಾನಕೀಪತಿವಿಠಲ ಕೃಷ್ಣ ವ್ಯಾಸಾರ್ಚನೆ ವ್-
ಚಾನದೊಳಗಭಿನವಾನಂದ ಮುನಿಯೆಂದು || ೩ ||

ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ
ಪಾವಮಾನಿಗರ ಸದ್ಭಾಗ್ಯವೆನುತ |
ಭಾವದೊಳು ಇವರಂಘ್ರಿರೇಣಿನವರವನಾಗಿ
ಸೇವಿಸಲು ದುರ್ಮೋಹ ವ್ಯಾವರ್ತವೆಂದು || ೪ ||

ಭೌಮವಾದ ವಸಂತ ಚೈತಾದಿ ಅಷ್ಟಮಿಯ
ಯಾಮ್ಯಯಾಮದೆ ಚಿತ್ರಭಾನುವಿನಲಿ
ಭೀಮತಥೀತೀರ ತಂದೆ ವೆಂಕಟೇಶವಿಠಲನ
ಧಾಮವೈದಿದ ಕರ್ಮದೇವರಿವರೆಂದು || ೫ ||

Anamipe SrI satyadhyAnayatigaLige || pa ||

hInaikyakAnana tanUnapAtanige || a.pa ||

AsEtu himagiri pravAsa kaikonDaKiLa
vyAsasUtrAdi prasthAnatrayadalI
dESikara vidvadsaBAsammELAdoLanila
BAShyArthagaLa pratiShTApisidaneMdo ||1 ||

satyaj~jAnArNava mahattarODuva Bakta
hRuttamAntaka BAnu pratyarthiha
mithyavidrAvaNa vicArasArAdyamita
tattvapramEya sarvatra meresidanendu || 2 ||

j~jAnAyu Bakti vairAgyAnukUladali
dAnAnukaMpa vidvatpraBeyali
jAnakIpativiThala kRuShNa vyAsArcane v-
cAnadoLagaBinavAnaMda muniyendu || 3 ||

I vidha mahA mahimarIBuvili janisuvudE
pAvamAnigara sadBAgyavenuta |
BAvadoLu ivaraMGrirENinavaravanAgi
sEvisalu durmOha vyAvartavendu || 4 ||

BaumavAda vasaMta caitAdi aShTamiya
yAmyayAmade citraBAnuvinali
BImatathItIra taMde venkaTESaviThalana
dhAmavaidida karmadEvarivarendu || 5 ||


ಪಾಂಡುನಂದನರಂತೆ ತೋರುತಿಹರು
ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು|| ಪ||

ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ
ದ್ವಿಜರಾಜ ಸತ್ಕುಲದಿ ಸುಜನ ಗಣದಿ |
ಕುಜನ ಗರ್ವವ ನೀಗಿ ವೃಜಿನ ವರ್ಜಿತರಾಗಿ
ಗಜವರದನಂಘ್ರಿಯುಗ ಭಜನ ತತ್ಪರರಾಗಿ|| 1||

ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ
ವರ ಸುಗೀತಾರ್ಥ ತತ್ವಜ್ಞರಾಗಿ
ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ
ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ|| 2||

ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ
ವಸುಧಿ ಸುರರಿಗೆ ಸನ್ಮೋದಗೊಳಿಸಿ
ವಸುದೇವಸುತ ಶಾಮಸುಂದರನ ವಶಗೊಳಿಸಿ
ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ ||3||

pAnDunandanarante tOrutiharu
panDitOttuma satyadhyAna tIrtharu|| pa||

nijaj~jAna cihnadi vijayAdi sudNuNadi
dvijarAja satkuladi sujana gaNadi |
kujana garvava nIgi vRujina varjitarAgi
gajavaradananGriyuga Bajana tatpararAgi|| 1||

dharama ballavarAgi guruBakti yutarAgi
vara sugItArtha tatvaj~jarAgi
dharaNi mEluLLa sukShEtra tattIrtha
carisutali karituraga paripAlisuvarAgi|| 2||

RuShi vyAsaruktiyali niSehagalu manavirisi
vasudhi surarige sanmOdagoLisi
vasudEvasuta SAmasundarana vaSagoLisi
daSa diSadi jayaBEri asamarenDoDesutali ||3||

Brahmanya thirtharu · dasara padagalu · MADHWA

Dasara padagalu on Sri Brahmanya theertharu

ಪಾಲಿಸೊ ಗುರುವೆ ಬ್ರಹ್ಮಣ್ಯ | ತೀರ್ಥಕೇಳುವೆ ವರ ಸುರ ಮಾನ್ಯ ||pa||

ಕಾಳೀಯ ರಮಣನ | ಲೀಲ ವಿನೋದವಕಾಲ ಕಾಲಕೆ ಸ್ಮರಿಪ | ಶೀಲಸನ್ಮನವ ||a.pa||

ಜ್ಞಾನ ದಾಯಕನಾಗಿ ಮೆರೆವಾ | ಸ್ಥಾನಜ್ಞಾನ ಮಂಟಪದೊಳು ಇರುವಾ |
ಮೌನಿ ವರೇಣ್ಯರೆ ಆನತ ಸುರತರುದಾನವಾರಣ್ಯ ಕೃ | ಶಾನುವೆ ಪಾಲಿಸೊ ||1||

ಇಷ್ಟ ಜನರ ಪರಿಪಾಲಾ | ದಯದೃಷ್ಟಿಲಿ ಜನರಘ ಜಾಲಾ |ಸುಟ್ಟು ಭಸ್ಮೀ ಭೂತ |
ಅಷ್ಟ ಸೌಭಾಗ್ಯದವಿಠ್ಠಲ ಚರಣೇಷ್ಟ | ಹೃಷ್ಟನ್ನ ಮಾಡೆನ್ನ ||2||

ರವ್ಯಂಶ ಸಂಭೂತ ನೆನಿಸೀ | ಸರಿತ್ಕಣ್ವ ತಟದಿ ನೀನು ನೆಲೆಸೀ |ಪವನಾಂತಸ್ಥ ಗುರು |
ಗೋವಿಂದ ವಿಠಲನಸ್ತವನ ಮಾಳ್ಪರ ಕಾವ | ಭುವನ ಪಾವನ ದೇವ ||3||

pAliso guruve brahmaNya | tIrthakELuve vara sura mAnya ||pa||

kALIya ramaNana | lIla vinOdavakAla kAlake smaripa | SIlasanmanava ||a.pa||

j~jAna dAyakanAgi merevA | sthAnaj~jAna manTapadoLu iruvA |
mauni varENyare Anata suratarudAnavAraNya kRu | SAnuve pAliso ||1||

iShTa janara paripAlA | dayadRuShTili janaraGa jAlA |suTTu BasmI BUta |
aShTa sauBAgyadaviThThala caraNEShTa | hRuShTanna mADenna ||2||

ravyaMSa saMBUta nenisI | saritkaNva taTadi nInu nelesI |pavanAntastha guru |
gOvinda viThalanastavana mALpara kAva | Buvana pAvana dEva ||3||


ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ||pa||

ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ||a.pa||

ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ
ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ
ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ
ಮತ್ತೆ ವ್ಯಾಸರಾಯರಿಗತಿಶಯ ಗುರುವೆ | ಸುಜನರುಗಳ ಪೊರೆವೆ ||1||

ಆಗಲೆ ಜನಿಸಿದ ಶಿಶುವ ತಾಯಿ ಕೊಡಲು | ಪ್ರೇಮದಿ ನೀ ಕೊಳಲು
ಸಾಗಿ ಬಂದು ಗುಹೆಯೊಳಗೆ ಇಟ್ಟು ಪೊರೆದೆ | ಗೋಕ್ಷೀರವನೆರೆದೆ
ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ
ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು ||2||

ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ
ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ
ಶ್ರೀಪತಿಯೊಲುಮೆಯ ಶೀಘ್ರದಿ ಪಡೆಯುತಲಿ | ಶಿಷ್ಟರ ಪೊರೆಯುತಲಿ
ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ ||3||
bEga pAliso brahmaNyatIrtha | karuNisu iShTArtha ||pa||

yOgivara SrI abbUru nilaya | sadBaktarigati priya ||a.pa||

satvaguNane sarvOttama hari priya | pAvana SuBakAya
cittadali hari cintane mADutali | varagaLa nIDutali
Atyadhikada kaNva nadiya tIra vAsa | ninnali hari vAsa
matte vyAsarAyarigatiSaya guruve | sujanarugaLa poreve ||1||

Agale janisida SiSuva tAyi koDalu | prEmadi nI koLalu
sAgi baMdu guheyoLage iTTu porede | gOkShIravanerede
AgamagaLa kalisalu maunjiya kaTTi | SrIpAdarali biTTe
yOgi vyAsarAyaru end~hesariTTu | sanyAsavane koTTu ||2||

pApi janara pAvanagaiyutali | SrInidhi dhyAnadali
kApADu sadhBaøtyara dayadiMda | tapasina SaktiMda
SrIpatiyolumeya SIGradi paDeyutali | SiShTara poreyutali
gOpAlakRuShNaviThThalananu hRudayadali | nityadi kANutali ||3||


ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ||pa||

ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ||a.pa||

ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ
ನೀಡಿ ನಿನ್ನವರನ್ನು ಕಾಯ್ದರೀತಿ
ಗಾಢದಿಂದಲಿ ಬಂದು ಮೂಢನಾದೆನ್ನನು
ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ ||1||

ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ
ಹರುಷದಿಂದಲಿ ಬಂದ ಭಕ್ತಜನರ
ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ
ಹರುಷಪಡಿಸುವ ಗುರುವು ನೀನೆಂದು ನಾ ಬಂದೆ ||2||

ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು
ಪರ್ಮೆಯಿಂದಲಿ ಶಿಶುವ ಪಾಲಿಸಿದ ಗುರುವೆ
ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ
ಸರ್ವಜನರನು ಕಾವೆ ಸರ್ವಕಾಲದಲಿ ||3||

ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ
ನರಹರಿಯ ಪಾದವನು ಸ್ಮರಿಸಿನಿತ್ಯ
ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ
ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ ||4||

ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು
ಅಣುಗನೆಂದೆನಿಸೆನ್ನ ಸಲಹಬೇಕೊ
ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ
ಘನ ಚರಣ ಸ್ಮರಣೆಯ ನೀಯೊ ಗುರುವೆ ||5||

kaipiDidu pAlisai brahmaNyaguruvE ||pa||

ayyanInendu ninnaDige vaMdisuvE ||a.pa||

mUDhavaitigaLu bandu bEDi koLLalu karuNa
nIDi ninnavarannu kAydarIti
gADhadindali bandu mUDhanAdennanu
gUDhadindali kAyo guNanidhiye guruvE ||1||

puruShOttamAryara varaputraneMdenisi
haruShadindali baMda Baktajanara
moreyalAlisi svAmi smaraNeya koTTenna
haruShapaDisuva guruvu nIneMdu nA bande ||2||

varakaNvanadi kUladali kalmaSha toLedu
parmeyindali SiSuva pAlisida guruve
sArvaBaumana guNava sarvadA pADutali
sarvajanaranu kAve sarvakAladali ||3||

sarvaguNa pUrNa brahmaNyapura vAsa
narahariya pAdavanu smarisinitya
sarasadali abbUru puravAsigaLanella
arBakara teranante rakShisuva guruvarya ||4||

maNidu bEDuve ninna caraNadASrayavittu
aNuganendenisenna salahabEko
guNanidhi SrI prANanAtha viThThalana
Gana caraNa smaraNeya nIyo guruve ||5||


ಬ್ರಹ್ಮಣ್ಯತೀರ್ಥರ ಚರಣಾಬ್ಜಯುಗ್ಮವ
ಸಂಭ್ರಮದಲಿ ಸೇವಿಪೆ ||pa||

ಅಂಬುಜಬಂಧು ಸನ್ನಿಭಸಾಧುವೆನುತ ಶ್ರೀ
ಕುಂಭಿಣಿ ಮುನಿವರ್ಯರಾ ಆರ್ಯರಾ ||a.pa||

ತಿದ್ದಿದ ಶ್ರೀಪುಂಡ್ರ ಮುದ್ರೆಗಳಿಂದಲಿ ಸಂ-
ಶುದ್ಧಿ ಮಂಗಳಗಾತ್ರರ
ರುದ್ರಗಳೊಲಿದು ಸದ್ವಿದ್ಯೆಗಳನಿತ್ತು
ಉದ್ಧಾರ ಮಾಡಲೆಂದೂ ನಾ ಬಂದೂ ||1||

ಶಿಷ್ಯರುಗಳು ತಂದ ಭಿಕ್ಷಾನ್ನಂಗಳನಂದು
ಆಕ್ಷಣ ಮಂತ್ರದಿಂದ
ತÀಕ್ಷಣ ಕಲ್ಪಸಿದಂತೆ ಗೈದಾ ಧೀರ
ರÀಕ್ಷಿಸೆಂದೆರಗುವೆ ನಾ ಬೇಡುವೆ ||2||

ಕಾಂತೆಯೋರ್ವಳು ತನ್ನ ಕಾಂತ ಸ್ವರ್ಗವನೈದೆ
ಚಿಂತಿಸುತತಿ ಶೋಕದಿ
ಕಾಂತೆ ವಂದಿಸಲು ಸೌಮಾಂಗಲ್ಯವರವನಿತ್ತು
ಕಾಂತನ ರಕ್ಷಿಸಿದ ಕೋವಿದರಾದ ||3||

ಕುಂದದೆ ಸನ್ಮುನಿವೃಂದದೊಡನೆ ಬಹು
ವೃಂದಾವನದಿ ಶೋಭಿಪ
ಇಂದಿರೆಯರಸ ನರಸಿಂಹವಿಠ್ಠಲನ
ಸನ್ನಿಧಿವರ ಪಾತ್ರರಾ ಪೂತಾತ್ಮರಾ ||4||

brahmaNyatIrthara caraNAbjayugmava
saMBramadali sEvipe ||pa||

aMbujabandhu sanniBasAdhuvenuta SrI
kuMBiNi munivaryarA AryarA ||a.pa||

tiddida SrIpunDra mudregaLindali saM-
Suddhi mangaLagAtrara
rudragaLolidu sadvidyegaLanittu
uddhAra mADalendU nA bandU ||1||

SiShyarugaLu tanda BikShAnnangaLanandu
AkShaNa mantradinda
taÀkShaNa kalpasidante gaidA dhIra
raÀkShisenderaguve nA bEDuve ||2||

kAnteyOrvaLu tanna kAnta svargavanaide
cintisutati SOkadi
kAnte vandisalu saumAngalyavaravanittu
kAntana rakShisida kOvidarAda ||3||

kundade sanmunivRundadoDane bahu
vRundAvanadi SOBipa
indireyarasa narasiMhaviThThalana
sannidhivara pAtrarA pUtAtmarA ||4||


ಕರವ ಪಿಡಿಯೋ ಬ್ರಹ್ಮಣ್ಯಾ ಗುರುವೇ
ದುರಿತ ನೋಡದಲೆನ್ನ
ಪರಮ ನಿರ್ಮಲ ಜ್ಞಾನ ತ್ವರಿತದಿಂದಿತ್ತೆನ್ನ ||pa||

ದೂರದೂರದಲಿದ್ದ ನರರು ನಿಮ್ಮಯ ಚರಣ
ಸೇರಿ ಸೇವೆಯ ಮಾಡೆ ಕರುಣದಿ ಕಾಯ್ವೆ ನೀ ||1||

ದಿಟ್ಟತನದಿ ಭಕ್ತಿ ಇಟ್ಟು ಸೇವಿಸಲಾಗ
ಕುಷ್ಟಾದಿ ರೋಗಗಳಟ್ಟುವೀ ಬೇಗನೆ ||2||

ಪರಿ ಭವದೊಳು ತಿರುಗಿಸದೆ ಎನ್ನ
ನರಹರಿ ಚರಣದ ಸ್ಮರಣೆಯನ್ನೆ ಇತ್ತು||3||

karava piDiyO brahmaNyA guruvE
durita nODadalenna
parama nirmala j~jAna tvaritadindittenna ||pa||

dUradUradalidda nararu nimmaya caraNa
sEri sEveya mADe karuNadi kAyve nI ||1||

diTTatanadi Bakti iTTu sEvisalAga
kuShTAdi rOgagaLaTTuvI bEgane ||2||

pari BavadoLu tirugisade enna
narahari caraNada smaraNeyanne ittu||3||

dasara padagalu · MADHWA · prasanna venkata dasaru · sri sathyanatha thirtharu

Dasara pada on Sri SathyaNatha thirtharu(Kondadalalave karunanidhi)

ಕೊಂಡಾಡಲಳವೆ ಕರುಣಾನಿಧಿ ಕಾವನ
ದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ||pa||

ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿ
ಭೂವಲಯಕೆ ಸುಜನಾವಳಿಗಾಶ್ರಯ
ವೀವೆನೆನುತ ಶುಭದೇವವೃಕ್ಷವನಟ್ಟೆ
ಈವರ ಪರಮಹಂಸಾವಲಂಬನ ತಾಳ್ದು
ಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇ
ಕ್ಷಾವಂತರಾಗಿಹ ಜೀವಕೋಟಿಗಳ ಕೃ
ಪಾವಲೋಕನದೊಳಿಟ್ಟ ಅಪೇಕ್ಷಿತ
ಭಾವಾರ್ಥಗಳನೆ ಕೊಟ್ಟು ನಂಬಿದ
ಸೇವಕರ್ಗಭಯವಿಟ್ಟ ಗುರುರಾಯನ ||1||

ಭಾನು ತೋರುವ ಮುನ್ನೆ ಸ್ನಾನವ ಮಾಡಿ ಸು
ಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀ
ಮಾನಾಥನಂಘ್ರಿಯ ಮಾನಸದಲಿ ದೃಢ
ಧ್ಯಾನದಿಂ ಬಲಿದು ಗೀರ್ವಾಣ ಭಾಷ್ಯಾಮೃತ
ಪಾನವ ಜನರಿಗೆ ಸಾನುರಾಗದಲಿತ್ತು
ನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆ
ತಾನಂದು ಬೋಧಿಸಿದ ತಾಮಸ
ಜ್ಞಾನವನೋಡಿಸಿದ ಆ ಕಾಮಧೇನು
ವೆನಿಸಿ ಎಸೆದ ಗುರುರಾಯನ ||2||

ಭೇದವರ್ಜಿತ ಮತ್ತವಾದ ಕುಂಭಿಯ ಕುಂಭ
ಭೇದಕ ಸಿಂಗ ಹಲಾಧಾರಿ ಹರಿ ಸಗು
ಣೋದರ ಸಾಕಾರ ಮಾಧವ ಹರನುತ
ಪಾದನೆನುತ ಸೂತ್ರ ವೇದ ಪುರಾಣದಿ
ಸಾಧಿಸಿ ಕುತ್ಸಿತವಾದಿಗಳ
ಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯ
ನಾದಭೇರಿಯ ಹೊಯಿಸಿದ ಮುಕ್ತಿಯ
ಸಾಧನ ತೋರಿಸಿದ ಭ್ರಷ್ಟಂಕು
ರೋದಯ ಮಾಣಿಸಿದ ಗುರುರಾಯನ ||3||

ಕಾಲಕಾಲಕೆ ಧರ್ಮ ಪಾಲಿಸಿ ಯಾಚಕ
ಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶ
ಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪ
ಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತು
ಪಾಲಿಸಿ ತಾಯಿತಂದೆಗಳ ಹಂಬಲ ಬಿಡಿ
ಸಿ ಲೋಕದವರಿಗಭಿಲಾಷಾ ಪೂರ್ಣಾನು
ಕೂಲ ಚಿಂತಾಮಣಿಯ ಯತಿಕುಲ
ಮೌಳಿ ಮಕುಟಮಣಿಯ ವಿರತಿಭಾಗ್ಯ
ಶಾಲಿ ಸುಗುಣಖಣಿಯ ಗುರುರಾಯನ ||4||

ಮಣ್ಣು ವನಿತೆ ಸತಿ ಹೊನ್ನಿನ ಬಯಕೆಯ
ಘನ್ನತೆ ಜರಿದು ಪಾವನ್ನ ಮಹಿಮನಾದ
ಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವ
ತನ್ನಾಕಷೆಂಬುವಭಿನ್ನವಚಂದ್ರಿಕೆ
ಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆ
ಉನ್ನತ ಕಳೆಯುತ ಚಿನ್ಮಯ ವರದ ಪ್ರ
ಸನ್ನ ವೆಂಕಟಾಧಿಪನ ಭಜಿಸಿ ನಿತ್ಯ
ಧನ್ಯನೆನಿಸುತಿಪ್ಪನ ಸತ್ಯಾಭಿನವ
ರನ್ನನ ಪೊರೆದÀಪ್ಪನ ಗುರುರಾಯನ ||5||

konDADalaLave karuNAnidhi kAvana
danDa sanjita gurusatyanAthara kIrti ||pa||

SrI vAsudEda tA BAvisi cittadi
BUvalayake sujanAvaLigASraya
vIvenenuta SuBadEvavRukShavanaTTe
Ivara paramahaMsAvalaMbana tALdu
SrI vAyumatadi tatvave lakShisuva prE
kShAvaMtarAgiha jIvakOTigaLa kRu
pAvalOkanadoLiTTa apEkShita
BAvArthagaLane koTTu naMbida
sEvakargaBayaviTTa gururAyana ||1||

BAnu tOruva munne snAnava mADi su
mmAnadindali nEma maunadoLiddu SrI
mAnAthananGriya mAnasadali dRuDha
dhyAnadiM balidu gIrvANa BAShyAmRuta
pAnava janarige sAnurAgadalittu
nAnA tatvArtha vyAKyAnava janarige
tAnaMdu bOdhisida tAmasa
j~jAnavanODisida A kAmadhEnu
venisi eseda gururAyana ||2||

BEdavarjita mattavAda kuMBiya kuMBa
BEdaka singa halAdhAri hari sagu
NOdara sAkAra mAdhava haranuta
pAdanenuta sUtra vEda purANadi
sAdhisi kutsitavAdigaLa
pAdAkrAntara mADi mEdiniyoLu jaya
nAdaBEriya hoyisida muktiya
sAdhana tOrisida BraShTaMku
rOdaya mANisida gururAyana ||3||

kAlakAlake dharma pAlisi yAcaka
jAlake mannisi mUla maMtrOpadESa
pELi pUtara mADi hAlu sakkare tuppa
hOLigyannavanikki mEle dravyavanittu
pAlisi tAyitaMdegaLa haMbala biDi
si lOkadavarigaBilAShA pUrNAnu
kUla cintAmaNiya yatikula
mauLi makuTamaNiya viratiBAgya
SAli suguNaKaNiya gururAyana ||4||

maNNu vanite sati honnina bayakeya
Gannate jaridu pAvanna mahimanAda
cenna satyanidhi tIrathanna karOdBava
tannAkaSheMbuvaBinnavacaMdrike
yannu prakASisi pUrNacandramanante
unnata kaLeyuta cinmaya varada pra
sanna venkaTAdhipana Bajisi nitya
dhanyanenisutippana satyABinava
rannana poredaÀppana gururAyana ||5||

dasara padagalu · MADHWA · narahari thirtharu · purandara dasaru

Dasara pada on Sri Narahari thirtharu(Narahari thirthara mahime)

ನರಹರಿ ತೀರ್ಥರ ಮಹಿಮೆ ಕೇಳಿರೊ |
ನರದೇಹವನ್ನು ಸಾರ್ಥಕ ಮಾಡಿರೊ || ಪ ||

ಕಾರ್ಯಸ್ಥ ಬ್ರಹ್ಮ ಮಾಡಿಸಿ ಪೂಜಿಸಿ ಕೊಡಲು |
ಆರ್ಯ ಜಾಬಾಲ ಮುನಿಗೆ ಪ್ರಸನ್ನನಾಗಿ |
ಭಾರ್ಯಸಹಿತ ಶರ್ವ ಪೂಜಿಸಿ, ಸೌರಭರಿಗೆ ಕೊಡಲು |
ಸೂರ್ಯವಂಶಕ ರಾಮ ಸೀತೆ ಬರಲು ||೧||

ಜಾಂಬುವಂತನು ಪೂಜಿಸಿ, ವೇದಗರ್ಭಗೆ ಕೊಡಲು |
ಕುಂಭೇಶ್ವರನ ಕೋಶದಲ್ಲಿಯಿರಲು |
ಅಂಬುಜೋದ್ಭವನಲ್ಲಿ ನಿತ್ಯ ಪೂಜಿಸುತಿರಲು |
ಜಂಭಾರಿಪುರವ ಯೈದಿದನು ಆ ಜನಿಪ ||೨||

ಗುರು ಅನಂದ ತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ |
ವರಗಗನ ನದಿ ತೀರದಿ ಗುಂಹ್ಯದೊಳಿರಲು |
ಕರಿಬಂದು ಕೂಗುತಿರೆ ಕೇಳಿ ಹೊರಗೆ ಬರಲು |
ಭರದಿ ಪಟ್ಟಾಭಿಷೇಕನಾಗಿ ರಾಷ್ಟ್ರದೊಳೊಪ್ಪಿದ ||೩||

ಆ ದೇಶ ಪದವಿ, ಹನ್ನೆರಡೊರುಷ ಮೂರುಮಾಸ |
ಮೋದದಿಂದನುಭವಿಸಿ ರಾಜಪದವ |
ಸಾದರದಿ ಪಿಂಗಳಾಶ್ವಿಜ ಶುದ್ಧ ಸಪ್ತಮಿ |
ಆ ಧರಿಯ ರಾಜಪುತ್ರಗೆಯಿತ್ತ ಮಹಿಮ ||೪||

ರಾಜಪುತ್ರ ಪತ್ನಿ ನಿಮಗೆ ಬೇಕಾದ ವಸ್ತು ವೈವದೆನಲು |
ಆ ಜನಪನ ಕೋಶದಲ್ಲಿ ಮಂದಾಸನದೊಳು ||
ರಾಜಿಸುತಿಪ್ಪ ಸೀತಾರಾಮ ಮೂರ್ತಿ ಗಳನು ತೆಗೆದು,ಕೊಂಡು |
ವಾಜಿಯನೇರಿಕೂರ್ಮಕ್ಕೆ ಬಂದು, ಪದ್ಮನಾಭರಿಗಿತ್ತರು ||೫||

ಪದುಮನಾಭ ಯತಿ ತಾನು ದಶಮತಿಗೆ ಅರ್ಪಿಸಲು |
ಮುದದಿ ಮೂರುಮಾಸ ಹದಿನಾರು ದಿನವು ||
ಮದನನಯ್ಯನ ಪೂಜಿಸಿ ಕೊಡಲು ತಾಂ ಪೂಜಿಸಿದ |
ಒದಗಿ ಆರುವರುಷ ಇನ್ನೂರು ತೊಂಬತ್ತು ದಿನ ||೬||

ಗುರುಪದ್ಮನಾಭರಾಜ್ಞದಲ್ಲಿಂದ ಒಂಬತ್ತು |
ವರುಷ ಮ್ಯಾಲೈವತ್ತು ಮೂರು ದಿನವು |
ಧರಣಿಜಯ ಮೂಲರಾಮನಂಘ್ರಿಯ ಭಜಿಸಿ |
ಪುರಂದರ ವಿಠ್ಠಲನ ಪ್ರೀತಿ ಪಡೆದ ||೭||

narahari tIrthara mahime kELiro |
naradEhavannu sArthaka mADiro || pa ||

kAryastha brahma mADisi pUjisi koDalu |
Arya jAbAla munige prasannanAgi |
BAryasahita Sarva pUjisi, sauraBarige koDalu |
sUryavaMSaka rAma sIte baralu ||1||

jAMbuvantanu pUjisi, vEdagarBage koDalu |
kuMBESvarana kOSadalliyiralu |
aMbujOdBavanalli nitya pUjisutiralu |
jaMBAripurava yaididanu A janipa ||2||

guru ananda tIrtharinda caturthASrama svIkarisi |
varagagana nadi tIradi guMhyadoLiralu |
karibandu kUgutire kELi horage baralu |
Baradi paTTABiShEkanAgi rAShTradoLoppida ||3||

A dESa padavi, hanneraDoruSha mUrumAsa |
mOdadiMdanuBavisi rAjapadava |
sAdaradi pingaLASvija Suddha saptami |
A dhariya rAjaputrageyitta mahima ||4||

rAjaputra patni nimage bEkAda vastu vaivadenalu |
A janapana kOSadalli mandAsanadoLu ||
rAjisutippa sItArAma mUrti gaLanu tegedu,konDu |
vAjiyanErikUrmakke bandu, padmanABarigittaru ||5||

padumanABa yati tAnu daSamatige arpisalu |
mudadi mUrumAsa hadinAru dinavu ||
madananayyana pUjisi koDalu tAM pUjisida |
odagi AruvaruSha innUru toMbattu dina ||6||

gurupadmanABarAj~jadallinda oMbattu |
varuSha myAlaivattu mUru dinavu |
dharaNijaya mUlarAmananGriya Bajisi |
purandara viThThalana prIti paDeda ||7||

dasara padagalu · madhava thirtharu · MADHWA · pranesha dasaru

Dasara pada on Sri Madhava thirtharu(Nodide naa dhanyanindige)

ನೋಡಿದೆ ನಾ ಧನ್ಯನಿಂದಿಗೆ
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ।।

ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ
ಪಿಂಗಳಗೇನು ಜ್ಞಾನಿಗಳಗೇನು
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ
ಹಿಂಗಿಸಬೇಕೆಂಬುದಲ್ಲದೇಮನವೇ ।। 1 ।।

ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ
ಕರ ಪೂಜಿತಾರವಿಂದನಾಭರಲ್ಲಿ
ಧರಾಧರಜತೀರದಿ ಸತ್ಯ ಮುನಿಗಳಿಂದ
ನಿರುತಾರಾಧನೆ ಕೊಳುತಿರ್ಪರುಮನವೇ ।। 2 ।।

ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ
ಆನತ ಜನರಿಗೆ ಕರುಣಿಸಿ
ಪ್ರಾಣೇಶವಿಠ್ಠಲನ ಧಾಮ ತೋರಿಸುವರು
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।

ನೋಡಿದೆ ನಾ ಧನ್ಯನಿಂದಿಗೆ
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ।।

ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ
ಪಿಂಗಳಗೇನು ಜ್ಞಾನಿಗಳಗೇನು
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ
ಹಿಂಗಿಸಬೇಕೆಂಬುದಲ್ಲದೇಮನವೇ ।। 1 ।।

ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ
ಕರ ಪೂಜಿತಾರವಿಂದನಾಭರಲ್ಲಿ
ಧರಾಧರಜತೀರದಿ ಸತ್ಯ ಮುನಿಗಳಿಂದ
ನಿರುತಾರಾಧನೆ ಕೊಳುತಿರ್ಪರುಮನವೇ ।। 2 ।।

ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ
ಆನತ ಜನರಿಗೆ ಕರುಣಿಸಿ
ಪ್ರಾಣೇಶವಿಠ್ಠಲನ ಧಾಮ ತೋರಿಸುವರು
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।

nODide nA dhanyanindige |
nODide guru mAdhavatIrthara vRundAvanavanu || pa ||

gangegEnu prayOjana viLeyoLage bAhadake |
pingaLagEnu j~jAnigaLagEnu |
tunga mahimeynda aj~ja janara pApa |
hingisabEkeMbudalladE – manavE || 1 ||

narahari guru suta varada akShOByamuni |
kara pUjitAravindanABaralli |
” dharAdharaja ” tIradi satya munigaLinda |
nirutArAdhane koLutirparu – manavE || 2 ||

Enu ivara baNNisalu ennindoSavalla |
Anata janarige karuNisi |
prANESaviThThalana dhAma tOrisuvaru |
kEsariya nolisida yatISarivarendu || 3 ||