dasara padagalu · prasanna venkata dasaru · sathyabhinava thirtharu

Dasara padagalu on Sri Sathyaabhinava thirtharu

ಇಂದೆ ಕಂಡೆವು ಗುರುರಾಯನ ನಮ್ಮ
ತಂದೆ ಸತ್ಯಾಭಿನವತೀರ್ಥನ ಫಲಿಸ
ಬಂದೊದಗಿತು ನಮ್ಮ ಸುಕೃತ ಆ
ನಂದರಸಾಬ್ಧಿ ಉಕ್ಕೇರಿತು ||pa||

ಇದೀಗೆ ಕಲ್ಪದ್ರುಮ ಕಾಣಿರೈ ಅಹು
ದಿದೀಗೆ ಚಿಂತಾಮಣಿ ನೋಡಿರೈ ಮತ್ತಿ
ದಿದೀಗೆ ಸುರಭಿ ಬಂದಿತೆನ್ನಿರೈ ತಮ್ಮ
ಮುದದಿಂದ ಯತಿರೂಪವಾಯಿತೈ ||1||

ಬಡವರ ದೊರೆ ನಮ್ಮ ಗುರುರಾಯ ಈ
ಪೊಡವಿಲಿ ಯಾಚಕರಾಶ್ರಯ ಆಪ್ತ
ಹಡೆದ ತಾಯಿತಂದೇರ ಮರೆಸಿದ ಎ
ಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ||2||

ಭಕ್ತಿ ಪಥವ ನೋಡಿ ನಡೆವನು ಯತಿ
ಮುಕುಟಮಣಿಗೆ ಸರಿಗಾಣೆನು ಜ್ಞಾನ
ಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆ
ಮುಕ್ತಿ ಮಂದಿರ ವಾತ್ರ್ಯರುಹಿಸಿದ ||3||

ಒಂದೊಂದು ಗುಣಗಳ ಮಹಿಮೆಯು ಮ
ತ್ತೆಂದಿಗೆ ಹೊಗಳಲಿ ತೀರವು
ಹಿಂದಾದ ಪೂತರು ಅಹರು ಯ
ತೀಂದ್ರನ ಸಾಮ್ಯಕೆ ಸರಿಯಾರು ||4||

ಗುರುಭಕ್ತಿ ನೆಲೆ ಕಳೆ ಮರೆಯದೆ ಶ್ರೀ
ಧರಜೆ ರಾಘವಪಾದ ಜರಿಯದೆ ದೇವ
ವರವೇದವ್ಯಾಸನ ಸೇವೆಗೆ ಒಂ
ದರಘಳಿಗ್ಯಲಸ ತಾನೆಂದಿಗೆ ||5||

ಹೊನ್ನ ತೃಣದೊಲು ಸೂರ್ಯಾಡಿದ ವಿ
ದ್ಯೋನ್ನತರ ತವರುಮನೆಯಾದ
ಮನ್ನಿಪ ಸುಜನಚಕೋರವ ಹೊರವ
ಪೂರ್ಣ ಚಂದಿರನಂತಲ್ಲೊಪ್ಪುವ||6||

ತಪ್ತಲಾಂಛನ ತೀರ್ಥವೀವಾಗ ಭೃತ್ಯ
ರುಪಟಳಕೊಲಿದು ನಲಿವನಾಗ
ಕಪಟವ ಲೇಶಮಾತ್ರರಿಯನು ಇಂಥ
ಗುಪ್ತ ಮಹಿಮಗೆಣೆಗಾಣೆನು||7||

ಸಕಳ ಪುರಾಣೋಕ್ತ ದಾನವ ಬಿಡ
ದಖಿಳ ಧರ್ಮವನೆಲ್ಲ ಮಾಡುವ
ನಿಖಿಳ ತತ್ವವನೊರೆದು ಹೇಳುವ ಈ
ಅಕಳಂಕನೆಂದೂ ನಮ್ಮನು ಕಾವ ||8||

ಕಷ್ಟ ಮೌನದಿ ವಾರಣಾಸಿಯ ಬಹು
ಶಿಷ್ಟರ ಸಲಹುತ ಯಾತ್ರೆಯ ಮಾಡಿ
ತುಷ್ಟಿ ಬಡಿಸಿದಲ್ಲಿ ವಾಸರ ಬೇಡಿ
ದಿಷ್ಟಾರ್ಥವನೀವನು ದಾಸರ ||9||

ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆ
ನೂತನ ವಸನ ಹೊನ್ನಾರ್ಚನೆಗಿಟ್ಟು ಮುಂದೆ
ನುತಿಸಿ ಹಿಗ್ಗುವ ನವಭಕುತಿಂದ ಈ
ವ್ರತಕಾಗಲಿಲ್ಲ ಒಂದಿನ ಕುಂದು||10||

ಶ್ರೀ ಭಾಗವತ ಶಾಸ್ತ್ರ ಟೀಕನು ಹರಿ
ಗಾಭರಣವ ಮಾಡಿಟ್ಟನು
ಈ ಭೂಮಿಲಿಹ ಶಿಷ್ಯ ಜನರನು ತತ್ವ
ಶೋಭಿತರನು ಮಾಡಿ ಹೊರೆದನು||11||

ಬಲುಹಿಂದ ಯವನನ ಬಲದಲ್ಲಿ ಕೃಷ್ಣ
ಒಳಪೊಕ್ಕು ಸದೆದ ಪರಿಯಲ್ಲಿ
ಕಲಿನೃಪ ಮ್ಲೇಚ್ಛನ ಬಂಧನ ತಪೋ
ಬಲದಿಂದ ಗುರುರಾಯ ಗೆಲಿದನು||12||

ಭಕ್ತಿ ವಿರತಿ ಜ್ಞಾನ ಪೂರ್ಣನು ಸೇ
ವಕ ಜನರಿಗೆ ಪ್ರಾಣಪ್ರಿಯನು
ಪ್ರಕಟಿಸಿದನು ನಿಜಕೀರ್ತಿಯ ನಿತ್ಯ
ಸಕಲ ಸದ್ಗುಣಗಳ ವಾರ್ತೆಯ ||13||

ಈ ಪರಿ ಬಹು ಪಟ್ಟವಾಳುತ ದಿವ್ಯ
ಶ್ರೀಪಾದವ್ರತ ಪೂರ್ಣ ತಾಳುತ
ಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟ
ಕಾಪುರುಷರ ಮೊತ್ತ ಗೆದ್ದಾತ||14||

ಹರಿಗುಣ ಜಿಜ್ಞಾಸೆ ಯಿಂದ ಶ್ರೀ
ಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀ
ಹರಿನಾಮ ಸ್ಮರಣಶ್ರವಣದಿಂದ ಶ್ರೀ
ಹರಿ ಪ್ರೀತಿಬಡಿಸಿದ ನಲವಿಂದ ||15||

ನಿರುತ ಉದಯಸ್ನಾನ ಮೌನವ ಶ್ರೀ
ಗುರು ಮಧ್ವಶಾಸ್ತ್ರವ್ಯಾಖ್ಯಾನವ ಮಹಾ
ಗೀರ್ವಾಣ ವಾಕ್ಯದಿಂದ ಪೇಳುವ ಆತ್ಮ
ಗುರುಗಳ ಸ್ಮರಣೆಯ ಮಾಡುವ||16||

ಗುರು ಸತ್ಯನಾಥರ ತಂದನು ನಿಜ
ಗುರುಪದವೇ ಗತಿಯೆಂದನು ತನ್ನ
ಸ್ಮರಣೇಲಿ ಇಹರ ಕಾವನು ಬೇಡಿ
ದರೆ ಅಭೀಷ್ಟಾರ್ಥವನೀವನು||17||

ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜ
ನರ ಹೃತ್ಕುಮುದ ತಾಪ ಸಂಹರ್ತ
ಸರಸ ಸುಧಾಂಶು ವಾಕ್ಯಾನ್ವಿತ ಸಿತ
ಕರನಹುದಹುದಯ್ಯ ಧರೆಗೀತ ||18||

ಆವ ಪ್ರಾಣಿಯು ಗುರುಮಹಿಮೆಯ ಸ
ದ್ಭಾವದಿ ನೆನೆಯಲು ಸುಖಿಯಾದ
ದೇವ ಪ್ರಸನ್ವೆಂಕಟಾದ್ರೀಶ ಅವ
ಗಾವಗೆ ಪಾಲಿಪ ಮಧ್ವೇಶ ||19||

inde kanDevu gururAyana namma
tande satyABinavatIrthana Palisa
bandodagitu namma sukRuta A
nandarasAbdhi ukkEritu ||pa||

idIge kalpadruma kANirai ahu
didIge cintAmaNi nODirai matti
didIge suraBi banditennirai tamma
mudadiMda yatirUpavAyitai ||1||

baDavara dore namma gururAya I
poDavili yAcakarASraya Apta
haDeda tAyitandEra maresida e
mmoDeya Bakti BAsava beLesida||2||

Bakti pathava nODi naDevanu yati
mukuTamaNige sarigANenu j~jAna
suKada baLLiya beLe beLesida sale
mukti maMdira vAtryaruhisida ||3||

ondondu guNagaLa mahimeyu ma
ttendige hogaLali tIravu
hindAda pUtaru aharu ya
tIndrana sAmyake sariyAru ||4||

guruBakti nele kaLe mareyade SrI
dharaje rAGavapAda jariyade dEva
varavEdavyAsana sEvege oM
daraGaLigyalasa tAnendige ||5||

honna tRuNadolu sUryADida vi
dyOnnatara tavarumaneyAda
mannipa sujanacakOrava horava
pUrNa candiranantalloppuva||6||

taptalAnCana tIrthavIvAga BRutya
rupaTaLakolidu nalivanAga
kapaTava lESamAtrariyanu intha
gupta mahimageNegANenu||7||

sakaLa purANOkta dAnava biDa
daKiLa dharmavanella mADuva
niKiLa tatvavanoredu hELuva I
akaLaMkanendU nammanu kAva ||8||

kaShTa maunadi vAraNAsiya bahu
SiShTara salahuta yAtreya mADi
tuShTi baDisidalli vAsara bEDi
diShTArthavanIvanu dAsara ||9||

pratidina gurupAdukeyaniTTu mEle
nUtana vasana honnArcanegiTTu munde
nutisi higguva navaBakutinda I
vratakAgalilla ondina kuMdu||10||

SrI BAgavata SAstra TIkanu hari
gABaraNava mADiTTanu
I BUmiliha SiShya janaranu tatva
SOBitaranu mADi horedanu||11||

baluhinda yavanana baladalli kRuShNa
oLapokku sadeda pariyalli
kalinRupa mlEcCana bandhana tapO
baladinda gururAya gelidanu||12||

Bakti virati j~jAna pUrNanu sE
vaka janarige prANapriyanu
prakaTisidanu nijakIrtiya nitya
sakala sadguNagaLa vArteya ||13||

I pari bahu paTTavALuta divya
SrIpAdavrata pUrNa tALuta
sthApisidanu madhvasiddhAnta duShTa
kApuruShara motta geddAta||14||

hariguNa jij~jAse yinda SrI
harimUrti dhyAna cintaneyinda SrI
harinAma smaraNaSravaNadinda SrI
hari prItibaDisida nalavinda ||15||

niruta udayasnAna maunava SrI
guru madhvaSAstravyAKyAnava mahA
gIrvANa vAkyadiMda pELuva Atma
gurugaLa smaraNeya mADuva||16||

guru satyanAthara tandanu nija
gurupadavE gatiyendanu tanna
smaraNEli ihara kAvanu bEDi
dare aBIShTArthavanIvanu||17||

gurusatyanAthAbdhi sanjAta sajja
nara hRutkumuda tApa saMharta
sarasa sudhAMSu vAkyAnvita sita
karanahudahudayya dharegIta ||18||

Ava prANiyu gurumahimeya sa
dBAvadi neneyalu suKiyAda
dEva prasanvenkaTAdrISa ava
gAvage pAlipa madhvESa ||19||


ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ||pa||

ತಾರಾಪತಿಯಂತೆ ಕೀರ್ತಿ ಪ್ರಸರವಿ
ಸ್ತಾರದಿ ಬುಧ ಚಕೋರವೃಂದಕೆ ನೀನು ||1||

ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳ
ನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ ||2||

ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆ
ಮಾರುತಿಮತತತ್ವ ವಾರಿಧಿತರಂಗಕೆ ||3||

ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯ
ಗರೆಯುತ ಹೃತ್ತಾಪ ಪರಿಹರಿಸುವಂಥ ||4||

ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತ
ವಸುಧೆಯಾಚಕ ಕುಮುದ ಕುಸುಮ ಕೋರಕಕೆ ||5||

tArApatiyahudau satyABinava tIrtha guruve ||pa||

tArApatiyante kIrti prasaravi
stAradi budha cakOravRuMdake nInu ||1||

ikShucApana gade kakShipa mAyigaLa
nIkShipe niruta satprEkShendukAntige ||2||

SrIrAma vEdavyAsara sEveyoLihe
mArutimatatatva vAridhitarangake ||3||

gurupAda smaraNeya mareyade amRuta vAkya
gareyuta hRuttApa pariharisuvantha ||4||

prasanvenkaTa prIta SrI satyanAthara suta
vasudheyAcaka kumuda kusuma kOrakake ||5||

One thought on “Dasara padagalu on Sri Sathyaabhinava thirtharu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s