ನೋಡು ಮನವೆ ಸತ್ಯಪರಾಯಣರ ಪದಗಳ
ಬೇಡು ಬೇಡು ಬೇಡಿದಿಷ್ಟವೀವ ಯತಿಗಳ ||pa||
ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾ
ಸಾರಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾ
ನಾರಾಯಣನ ಜಗತ್ಕಾರಣನೆನಿಸಿದಾ
ಧೀರ ಸತ್ಯಸಂತುಷ್ಟ ಕುವರನೆನಿಸಿದಾ ||1||
ಭೀಮಸೇನ ಸನ್ಮತ ಸರಿಯಾಗಿ ನಡಿಸಿದಾ
ಪ್ರೇಮದಿಂದ ರಘುಜಿಗೆ ವನಮಾಲೆ ಮುಡಿಸಿದಾ
ತಾಮಸ ಮತದವರ ಮತವ ಮುರಿದು ಹಾಕಿದಾ
ರಾಮನ್ನಾಮ ನುಡಿಸಿ ನುಡಿಸಿ ಹರುಷಬಡಿಸಿದಾ||2||
ವರ ಕದರುಂಡಲಗೀಶನ್ನೊಡೆಯ ರಾಮನ್ನ
ನಿರುಪಮಾನಂದ ತೀರ್ಥ ಸುಪ್ರೇಮನ್ನ
ಕರುಣದಿಂದ ಶಿಷ್ಯನಾಗಿ ಸಂದೋಹಪಾಲನ್ನ
ಸ್ಮರನ ಜನಕಾ ಪಾಂಡುರಂಗನ ಸ್ಮರಿಪ ಲೋಲನ್ನ ||3||
nODu manave satyaparAyaNara padagaLa
bEDu bEDu bEDidiShTavIva yatigaLa ||pa||
mArutiya baladi dakShiNa dESava jaisidA
sArasacCAstravannu sthiravagoLisidA
nArAyaNana jagatkAraNanenisidA
dhIra satyasantuShTa kuvaranenisidA ||1||
BImasEna sanmata sariyAgi naDisidA
prEmadinda raGujige vanamAle muDisidA
tAmasa matadavara matava muridu hAkidA
rAmannAma nuDisi nuDisi haruShabaDisidA||2||
vara kadarunDalagISannoDeya rAmanna
nirupamAnanda tIrtha suprEmanna
karuNadinda SiShyanAgi sandOhapAlanna
smarana janakA pAnDurangana smaripa lOlanna ||3||
One thought on “Dasara pada on sri Sathyaparayana thirtharu”