gopala dasaru · MADHWA · Ugabogha

Ugabhoga by Sri Gopala dasaru

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ
ಶಂಭುವಂದಿತ ವತ್ಸಸಂಭ್ರಮದಲಿ ಇರಲು
ಅಂಬುಜಸಮನ ಗುರುತಂದೆ ಗೋಪಾಲವಿಠಲನ
ಬೆಂಬಿದದೆ ತೋರೋ ಪ್ರಾಣ

Ambakādallidda kambharūpadi hariya
ambhramaṇi kambhakke suttalū guṇarūpa
śambhuvandita vatsasambhramadali iralu
ambujasamana gurutande gōpālaviṭhalana
bembidade tōrō prāṇa


ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

An’yarindali sukhavāyitembuvudakkinta
ninnindāyitemba klēśa mēlayya
ninnariyade an’yara ballenembudakkinta
kaṇṇilladiruva kuruḍa mēlayya
puṇyapāpavariyade badukuva manu-
janiginta nāyikunni lēsayya kula-
hīnanādaru sukha duḥkhagaḷanu
ninnindāyitemba mati
cennāgi tiḷisayya gōpālaviṭhala


ಆರಿಗಾರಾಗುವರೊ ಆಪತ್ತು ಕಾಲಕ್ಕೆ
ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ
ಆರಿಂದ ಬಪ್ಪುವುದು ಆರಿಂದ ತಪ್ಪುವುದು
ಆರಿಸಿ ನೋಡುವುದು ಇದರ ಕಾರಣವನು
ಇದಕಾರು ವಾರಣದಲ್ಲಿ ನೋಡಿ
ಆರೋಪಿಸಲು ಎಲ್ಲಾ ಭಾರ ಅವಗೆ
ಕಾರುಣ್ಯಮೂರುತಿ ಗೋಪಾಲವಿಠಲ
ಈರೀತಿ ಅರಿದವಗೆ ಇಲ್ಲೇ ಪೊರೆವ ||

Ārigārāguvaro āpattu kālakke
ārigārodaguvaro sampattu kālakke
ārinda bappuvudu ārinda tappuvudu
ārisi nōḍuvudu idara kāraṇavanu
idakāru vāraṇadalli nōḍi
ārōpisalu ellā bhāra avage
kāruṇyamūruti gōpālaviṭhala
īrīti aridavage illē poreva ||


ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು
ಧನವ ಗಳಿಸುವರುಂಟು ಗಳಿಸದಿದ್ದವರುಂಟು
ಧನವ ಕಟ್ಟುವರುಂಟು ದಾನ ಮಾಡುವರುಂಟು
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು
ಮಣೆಗಾರತನವಿದರೊಳೆಂದಿಗೂ ಬೇಡ
ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ
ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ಗುಣ ಚಿಂತನೆಯೊಳಿಡು ಇಷ್ಟೇ ಸಾಕು

Maneya kaṭṭuvaruṇṭu maḍadi makkaḷuṇṭu
dhanava gaḷisuvaruṇṭu gaḷisadiddavaruṇṭu
dhanava kaṭṭuvaruṇṭu dāna māḍuvaruṇṭu
r̥ṇava koṭṭavaruṇṭu r̥ṇa māḍidavaruṇṭu
maṇegāratanavidaroḷendigū bēḍa
munigaḷu sahitāgi mōsa hōdaru idake
guṇapūrṇa celva gōpālaviṭhṭhala ninna
guṇa cintaneyoḷiḍu iṣṭē sāku


 

jagannatha dasaru · MADHWA · ugabhoga

Ugabhogagalu by Sri Jagannatha dasaru

ಆರು ವಂದಿಸಲೇನು ಆರು ನಿಂದಿಸಲೇನು
ಆರು ಶಾಪಿಸಲೇನು ಆರು ಕೋಪಿಸಲೇನು
ಆರು ಮುನಿದು ಮಾತನಾಡದಿದ್ದರೆ ಏನು
ಮಾರುತಾಂತರ್ಯಾಮಿ ಜಗನ್ನಾಥವಿಠಲನ
ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ
ಆರು ವಂದಿಸಲೇನು ಆರು ನಿಂದಿಸಲೇನು ?

Āru vandisalēnu āru nindisalēnu
āru śāpisalēnu āru kōpisalēnu
āru munidu mātanāḍadiddare ēnu
mārutāntaryāmi jagannāthaviṭhalana
kāruṇyapātrara karuṇavennoḷagire
āru vandisalēnu āru nindisalēnu?


ಅನಘನೆಂದೊಮ್ಮೆ ನೆನೆದ ಮಾನವ ಪಾಪ-
ವನದಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲ ಅವನೇ
ಸಜ್ಜನ ಶಿರೋಮಣಿ ಕಾಣೋ  ಸರ್ವರೊಳು
ಜನಕ  ಜನನಿ ಮೊದಲಾದ ನೂರೊಂದು ಕುಲವ
ಪಾವನ ಮಾಡುವನು ಪ್ರತಿದಿನದಲಿ
ವನಿತಾದಿ ವಿಷಯಂಗಳನುಭವಿಸುತz ತನ್ನ
ಮನೆಯೊಳಿರಲವ ಜೀವನ್ಮುಕ್ತನೋ
ಸನಕಾದಿಮುನಿಗಳ  ಮನಕೆ ನಿಲುಕದಿಪ್ಪ
ಘನಮಹಿಮನೇ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠಲರೇಯ
ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ

Anaghanendom’me neneda mānava pāpa-
vanadi dāṭuva bahuvēgadinda
janana maraṇa bhayavinitilla avanē
sajjana śirōmaṇi kāṇō  sarvaroḷu
janaka  janani modalāda nūrondu kulava
pāvana māḍuvanu pratidinadali
vanitādi viṣayaṅgaḷanubhavisutaz tanna
maneyoḷiralava jīvanmuktanō
sanakādimunigaḷa  manake nilukadippa
ghanamahimanē bandu kuṇiva munde
hanumavandita jagannāthaviṭhalarēya
animitta bandhu tā āvāva kāladalli

 

 

dasara padagalu · MADHWA · Vijaya dasaru

Savidhunna barayya

ಸವಿದುಣ್ಣ ಬಾರಯ್ಯ ಸಾರಾಭೋಕ್ತಾ
ಪವನಾಂತರ್ಗತ ಕಪಿಲಾತ್ಮ ನರಸಿಂಗಾ ||ಪ||

ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ
ಒಪ್ಪುವ ಸಂಡಿಗೆ ವ್ಯಂಜನಗಳು
ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ
ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ ||1||

ಅನ್ನ ಮಂಡಿಗೆ ತೈಲ ಪಕ್ವಂಗಳು ಪರ
ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ
ಮುನ್ನೆ ಚಂದ್ರ ಬೊಮ್ಮ ಜಯಂತರೈ ಸೂರ್ಯ
ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ||2||

ಕ್ಷೀರ ನವನೀತಧಿಕಾರಣಾಮ್ಲ
ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ
ವಾರಿಜಾಸನ ರಾಣಿ ವಾಯು ಸೋಮ
ಮಾರ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ ||3||

ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ
ಬಂಗಾರ ಪಾತ್ರಿಯೊಳಗೆ ತಂದಿಡೆ
ಪೊಂಗಳಸದಲ್ಲಿ ಸ್ವಾದೋದಕ ಇಡೆ
ಅಂಗಜಾ ದುರ್ಗಿಯ ಚಂದ್ರಮಸುತನಿರೆ ||4||

ವೀಳ್ಯವ ಕೈಕೊಳೊ ಗಂಗಾಜನಕ ಹರಿ
ಅಲ್ಲಲ್ಲಿಗೆ ನಿನ್ನ ರೂಪವುಂಟು
ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ
ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ||5||

Saviduṇṇa bārayya sārābhōktā
pavanāntargata kapilātma narasiṅgā ||pa||

uppu uppinakāyi patra śākha sūpa
oppuva saṇḍige vyan̄janagaḷu
ippavu niru’r̥ti prāṇa mitra śēṣa
sarpavairi dakṣa lōkēśanallige ||1||

anna maṇḍige taila pakvaṅgaḷu para
mānna bhakṣa tuppa huḷi padārtha
munne candra bom’ma jayantarai sūrya
kan’ya lakumidēvi parvata suti ire||2||

kṣīra navanītadhikāraṇāmla
cāru uddina bhakṣa kaṭu dravya pā
vārijāsana rāṇi vāyu sōma
māra vairi dharma svāyambhuvaṅgaḷu alli hākire ||3||

iṅgu yālakki sāsiveyinda vopputā
baṅgāra pātriyoḷage tandiḍe
poṅgaḷasadalli svādōdaka iḍe
aṅgajā durgiya candramasutanire ||4||

vīḷyava kaikoḷo gaṅgājanaka hari
allallige ninna rūpavuṇṭu
ballidā vijayaviṭhṭhalarēya enagide
sallode sari lēśavāpēkṣadavanalla||5||

dasara padagalu · MADHWA · purandara dasaru

Neivedhya kollo Narayana swami

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯ ಷಡುರಸಾನ್ನವನಿಟ್ಟೆನೋ||

ಘಮ ಘಮಿಸುವ ಶಾಲ್ಯನ್ನ ಪಂಚ ಭಕ್ಷ್ಯ
ಅಮೃತ ಕೂಡಿದ ದಿವ್ಯ ಪರಮಾನ್ನವೋ
ರಮಾ ದೇವಿಯರು ಸ್ವಹಸ್ತದಿ ಮಾಡಿದ ಪಾಕ
ಭೂಮಿ ಮೊದಲಾದ ದೇವಿಯರು ಸಹಿತೌತಣ||1||

ಅರವತ್ತು ಶಾಕ ಲವಣ ಶಾಕ ಮೊದಲಾದ
ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪಾವು ಅತಿರಸ
ಹರುಷದಿಂದಲಿ ಇಟ್ಟ ಹೊಸ ತುಪ್ಪವೋ||2||

ಒಡೆಯಂಬೊಡೆ ದಧಿವಡೆಯು ತಿಂಥಿಣಿ
ಒಡೆಯ ಎಡೆಗೆ ಒಡನೆ ಬಡಿಸಿದೆ
ದೃಢವಾದ ಪದಾರ್ಥಂಗಳನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೋ||3||

Naivēdyava koḷḷo nārāyaṇasvāmi
divya ṣaḍurasānnavaniṭṭenō||

ghama ghamisuva śālyanna pan̄ca bhakṣya
amr̥ta kūḍida divya paramānnavō
ramā dēviyaru svahastadi māḍida pāka
bhūmi modalāda dēviyaru sahitautaṇa||1||

aravattu śāka lavaṇa śāka modalāda
sarasa mosaru butti citrānnavō
parama maṅgaḷa appāvu atirasa
haruṣadindali iṭṭa hosa tuppavō||2||

oḍeyamboḍe dadhivaḍeyu tinthiṇi
oḍeya eḍege oḍane baḍiside
dr̥ḍhavāda padārthaṅgaḷanella iḍiside
oḍeya śrī purandara viṭhalane uṇṇō||3||

dasara padagalu · MADHWA · purandara dasaru

Aroghaneya maadeleyya

ಆರೋಗಣೆಯ ಮಾಡೇಳಯ್ಯ ಶ್ರೀಮನ್
ನಾರಾಯಣ ಭೋಗ ಸ್ವೀಕರಿಸಯ್ಯ|| ಪ.||

ಸರಸಿಜಭವಾಂಡದ ಮೇರು ಮಂಟಪದಿ ದಿನ
ಕರಕರ ದೀಪ್ತ ಜ್ಯೋತಿಶ್ಚಕ್ರವು ||
ತರಣಿ ಮಂಡಲ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಿಡಿಸಿಹಳಯ್ಯ ||1||

ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್
ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||
ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿ
ಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ ||2||

ಹಪ್ಪಳ ಸಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು-ಹಂಪಲವು ||
ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿ
ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ ||3||

ಎಣ್ಣೂರಿಗತಿರಸ ಚೆನ್ನಾದ ಮಂಡಿಗೆ
ಅನ್ನ ಕ್ಷೀರಾನ್ನ ಪರಮಾನ್ನಗಳು ||
ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿ
ಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ ||4||

ನೀ ನಿತ್ಯತೃಪ್ತನಹುದು ನಿನ್ನ ಉದರದೊಳು
ನಾನಾ ಜನರು ಬಂದು ಉಣ್ಣಬೇಕೋ ||
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧು ಶ್ರೀ ಪುರಂದರವಿಠಲ ||5||

Ārōgaṇeya māḍēḷayya śrīman
nārāyaṇa bhōga svīkarisayya|| pa.||

Sarasijabhavāṇḍada mēru maṇṭapadi dina
karakara dīpta jyōtiścakravu ||
taraṇi maṇḍala pōluva ratunada honna
harivāṇadali dēvi biḍisihaḷayya ||1||

alla hēraḷe limbe yālakki meṇasu kāy
nelle ambaṭekāyi celva māṅgāyi ||
bēla maṅgarōḷi huṇase pāpaṭekāyi
ella dharādēvi aṇigoḷisihaḷayya ||2||

happaḷa saṇḍige vividha śākaṅgaḷu
tuppa sakkare haṇṇu-hampalavu ||
karpūra kastūri berasida sikhariṇi
oppadi śrīdēvi baḍisihaḷayya ||3||

eṇṇūrigatirasa cennāda maṇḍige
anna kṣīrānna paramānnagaḷu ||
saṇṇa sēvege śālyannava nimiṣadi
cenne durgādēvi baḍisihaḷayya ||4||

nī nityatr̥ptanahudu ninna udaradoḷu
nānā janaru bandu uṇṇabēkō ||
śrīnātha gadugina vīranārāyaṇa
anātha bandhu śrī purandaraviṭhala ||5||

dasara padagalu · MADHWA · Vadirajaru

Aroghane maadu saarasukhadodeya

ಆರೋಗಣೆಯ ಮಾಡು ಸಾರಸುಖದೊಡೆಯ|| ಪ.||

ಸತ್ಯವಾದ ಜಗಕೆ ಕರ್ತುಕಾರಣ ನೀನೆ
ಮುಕ್ತಿದಾಯಕ ನಿತ್ಯತೃಪ್ತನಹುದೈ
ಸತ್ಯವಾದವತಾರ ಸಕಲಗುಣ ಪರಿಪೂರ್ಣ
ಭಕ್ತಿದಾಯಕ ಸಿರಿ ಪರಮ ದಯಾಳು||1||

ಅಣುರೋಮಕೂಪದಲಿ ಅಂಡಜಾಂಡಗಳಿರಲು
ಘನಕೃಪಾಂಬುಧಿ ನಿಮ್ಮ ಪೊಗಳಲಳವೆ
ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ
ಘನಭಕುತಿಲ್ಯಜಭವರು ಪೂಜೆಮಾಡುವರು|| 2||

ಗಂಗೆಗೋದಾವರಿ ತುಂಗಭದ್ರೆ ಯಮುನೆ
ರÀಂಗಸನ್ನಿಧಿಯಾದ ಕಾವೇರಿಯು
ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ
ಅಂಗಜನಯ್ಯ ಭಾಪೆಂದು ಪೊಗಳೆ ||3||

ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ
ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು
ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ
ಚೆನ್ನಾಗಿ ನೈವೇದ್ಯವನ್ನೆ ಮಾಡುವರು ||4||

ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ
ಮುಂದೆ ಕುಂಕುಮದ ಕೇಸರಿಯ ಲೇಪ
ಚೆಂದದ ಕೇದಿಗೆ ಮುಡಿವಾಳ ಸಂಪಿಗೆ
ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ ||5||

ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ
ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ
ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ
ನಸುನಗುತ ಇಂದಿರಾದೇವಿ ಬಡಿಸೆ ||6||

ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ
ನಾರು ಬಣ್ಣದ ಚಿನ್ನದ್ಹರಿವಾಣವು
ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ
ಮೇರುಗಿರಿಯೆಂಬೊ ದೀಪಗಳು ಬೆಳಗೆ ||7||

ಆ ಕಮಲೆ ಮಾಡಿದ್ದು ನಾಲ್ಕುಬಗೆ ಘೃತ ಸೂಪ
ಲೋಕಪತಿಗನುವಾದ ದಿವ್ಯಾನ್ನವು
ಬೇಕಾದ ಪಂಚಭಕ್ಷ್ಯ ರಸಾಯನವ
ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ||8||

ಖಳರಕುಲವೈರಿಗೆ ತಿಳಿನೀರುಮಜ್ಜಿಗೆ
ಎಳನೀರು ಪಾನಕ ಸೀತಳುದಕ
ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ
ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು ||9||

Ārōgaṇeya māḍu sārasukhadoḍeya|| pa.||

Satyavāda jagake kartukāraṇa nīne
muktidāyaka nityatr̥ptanahudai
satyavādavatāra sakalaguṇa paripūrṇa
bhaktidāyaka siri parama dayāḷu||1||

aṇurōmakūpadali aṇḍajāṇḍagaḷiralu
ghanakr̥pāmbudhi nim’ma pogaḷalaḷave
phaṇiśāyiyāgidda bhuvanavyāpaka hariya
ghanabhakutilyajabhavaru pūjemāḍuvaru|| 2||

gaṅgegōdāvari tuṅgabhadre yamune
raÀṅgasannidhiyāda kāvēriyu
maṅgaḷa bhīmarathi nimage majjanake aṇimāḍi
aṅgajanayya bhāpendu pogaḷe ||3||

rannamayavāgirda honnamaṇṭapadoḷage
svarṇapātregaḷalli svayampākavu
ninna sose vāṇi bhāratidēvi kaḍujāṇe
cennāgi naivēdyavanne māḍuvaru ||4||

gandha kastūri punugu[candana] javvāji
munde kuṅkumada kēsariya lēpa
cendada kēdige muḍivāḷa sampige
kandarpanayyagoppitu mallige ||5||

desedesege parimaḷipa kuśalada citrānna
bisidōsege beṇṇe lēhyapēya
basiroḷage īrēḷu jagavanimbiṭṭavage
nasunaguta indirādēvi baḍise ||6||

nūru yōjanadagala sarasija brahmāṇḍa hadi
nāru baṇṇada cinnad’harivāṇavu
sāreyali pombaṭṭalemba sāgaradoḷage
mērugiriyembo dīpagaḷu beḷage ||7||

ā kamale māḍiddu nālkubage ghr̥ta sūpa
lōkapatiganuvāda divyānnavu
bēkāda pan̄cabhakṣya rasāyanava
ēkāntadalli nim’ma dēvi baḍise||8||

khaḷarakulavairige tiḷinīrumajjige
eḷanīru pānaka sītaḷudaka
baḷalidiri baḷalidiri enuta hayavadanage
naḷinākṣi karpūravīḷyavane koḍalu ||9||

MADHWA · neivedhyam · Vadirajaru

Arohane maado ananda mooruthy

ಆರೋಗಣೆ ಮಾಡೊ ಆನಂದಮೂರುತಿ ||ಪ||

ರÀನ್ನದ ತಳಿಗೆಯನ್ನು ಶೋಭನವಾದ
ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ
ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ-
ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ ||1||

ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ
ಲೇಪ ಸಾರಸ ಭಕ್ಷ್ಯಗಳ
ಗೋಪಾಲಕೃಷ್ಣಗೆ ದಧಿ ಪಕ್ವಫಲಂಗಳು
ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ ||2||

ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ
ಮನ್ನಿಸಿ ಕರೆದು ನಿನ್ನ ಕರಕಂಜದಿಂದ
ಪೂರ್ಣವಮಾಡು ಭುಜಿಸೊ ಹಯವದನ ಕೃ-
ಪಾಳು ಸಕಲಲೋಕಪಾಲ ಸುರರೊಡೆಯನೆ ||3||

Ārōgaṇe māḍo ānandamūruti ||pa||

raÀnnada taḷigeyannu śōbhanavāda
ponna baṭṭalugaḷa neravi śrīharige
ninnarasi ā lakṣmi soseyara kūḍi śā-
lyanna saviśākagaḷa nīḍida kaiyinda ||1||

tuppa madhu citrānna pāyasa karigaḷa
lēpa sārasa bhakṣyagaḷa
gōpālakr̥ṣṇage dadhi pakvaphalaṅgaḷu
ā padmamukhi baḍisidaḷu lēhyapēhyava ||2||

enna kundugaḷāmunige divya annavo
mannisi karedu ninna karakan̄jadinda
pūrṇavamāḍu bhujiso hayavadana kr̥-
pāḷu sakalalōkapāla suraroḍeyane ||3||

adhika maasa · MADHWA · vrata

Vratas to observe during Adhikamaasa

some of the vratas which we can observe during adhika maasa:

  1. Nakta Bhojana : Fasting till night and bhojana only at night
  2. Dharana parana : one day upavaasa, next day parana, So 15 days upavasa and 15 days parana
  3. Akanda deepa: Deepa should be lit throughout day and night
  4. Eka bhukta: Before starting to eat food, one has to serve required items in the banana leaf. Till the end, he/she is not allowed to add any other item
  5. Mouna vrata: One should maintain silence during Mala moothra visarjana, Homa pooja kala, while taking bath and while having food.
  6. Laksha batthi
  7. Laksha namaskara
  8. Recitation of stothra / devaranama – 33 times
adhika maasa · Dana · MADHWA

Adhika maasa – Optimal month for doing Dana(16-05-18 to 13-06-18)

Adhika maasa is the auspicious time for performing all vratas and giving danas. Let us take a look at different danas which we can give and please sri Purushottama in this adhika maasa

Most of the danas should be in the count of 33.

  1. Apoopa dana (ಅಪೂಪ) – 33
  2. Tulasi pooja items(ತುಳಸಿ ಪೂಜಾ ಸಾಮಗ್ರಿ )
  3. Turmeric + Kumkum cups(ಅರಿಶಿನ+ ಕುಂಕುಮ ) – 33
  4. Saligrama pooja items(ಸಾಲಿಗ್ರಾಮ ಪೂಜಾ ಸಾಮಗ್ರಿ )
  5. Arulu unde(ಅರುಳು ಉಂಡೆ ) – 33
  6. Men’s pancha mudre
  7. Gopi Chandana(ಗೋಪಿ ಚಂದನ ) -33
  8. Janivara(ಜನಿವಾರ ) – 33
  9. Jaagate , gente (ಜಾಗಟೆ , ಘಂಟೆ)
  10. Fruits(ಫಲ ದಾನ)
  11. Vasthra dana for a couple(ವಸ್ತ್ರ )
  12. Marada bhagina(ಮರದ ಬಾಗಿನ )
  13. Deepa dana (ದೀಪ )
  14. Shayya Daana(ಶಯ್ಯಾ ದಾನ ) Jamakala + hotthige + dimbu
  15. saligrama dana(ಸಾಲಿಗ್ರಾಮ)
  16. Godana (ಗೋದಾನ)
  17. Swarna dana(ಸ್ವರ್ಣದಾನ )
  18. Belli dana(ಬೆಳ್ಳಿ ದಾನ)
  19. udukumba dana(ಉದಕುಂಭ ದಾನ )
  20. Paanaka / Buttermilk(ಪಾನಕ / ಮಜ್ಜಿಗೆ )
  21. Hoo Batti (ಹೂ ಬತ್ತಿ )
  22. Gejje vasthra(ಗೆಜ್ಜೆವಸ್ತ್ರ )
  23. Managala Haarati Batti(ಮಂಗಳ ಹಾರತಿ ಬತ್ತಿ )
  24. Bhoomi daana(ಭೂ ದಾನ)
  25. Anna daana(ಅನ್ನ ದಾನ )

and many more.