dasara padagalu · MADHWA · purandara dasaru

Aroghaneya maadeleyya

ಆರೋಗಣೆಯ ಮಾಡೇಳಯ್ಯ ಶ್ರೀಮನ್
ನಾರಾಯಣ ಭೋಗ ಸ್ವೀಕರಿಸಯ್ಯ|| ಪ.||

ಸರಸಿಜಭವಾಂಡದ ಮೇರು ಮಂಟಪದಿ ದಿನ
ಕರಕರ ದೀಪ್ತ ಜ್ಯೋತಿಶ್ಚಕ್ರವು ||
ತರಣಿ ಮಂಡಲ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಿಡಿಸಿಹಳಯ್ಯ ||1||

ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್
ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||
ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿ
ಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ ||2||

ಹಪ್ಪಳ ಸಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು-ಹಂಪಲವು ||
ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿ
ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ ||3||

ಎಣ್ಣೂರಿಗತಿರಸ ಚೆನ್ನಾದ ಮಂಡಿಗೆ
ಅನ್ನ ಕ್ಷೀರಾನ್ನ ಪರಮಾನ್ನಗಳು ||
ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿ
ಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ ||4||

ನೀ ನಿತ್ಯತೃಪ್ತನಹುದು ನಿನ್ನ ಉದರದೊಳು
ನಾನಾ ಜನರು ಬಂದು ಉಣ್ಣಬೇಕೋ ||
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧು ಶ್ರೀ ಪುರಂದರವಿಠಲ ||5||

Ārōgaṇeya māḍēḷayya śrīman
nārāyaṇa bhōga svīkarisayya|| pa.||

Sarasijabhavāṇḍada mēru maṇṭapadi dina
karakara dīpta jyōtiścakravu ||
taraṇi maṇḍala pōluva ratunada honna
harivāṇadali dēvi biḍisihaḷayya ||1||

alla hēraḷe limbe yālakki meṇasu kāy
nelle ambaṭekāyi celva māṅgāyi ||
bēla maṅgarōḷi huṇase pāpaṭekāyi
ella dharādēvi aṇigoḷisihaḷayya ||2||

happaḷa saṇḍige vividha śākaṅgaḷu
tuppa sakkare haṇṇu-hampalavu ||
karpūra kastūri berasida sikhariṇi
oppadi śrīdēvi baḍisihaḷayya ||3||

eṇṇūrigatirasa cennāda maṇḍige
anna kṣīrānna paramānnagaḷu ||
saṇṇa sēvege śālyannava nimiṣadi
cenne durgādēvi baḍisihaḷayya ||4||

nī nityatr̥ptanahudu ninna udaradoḷu
nānā janaru bandu uṇṇabēkō ||
śrīnātha gadugina vīranārāyaṇa
anātha bandhu śrī purandaraviṭhala ||5||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s