dasara padagalu · MADHWA · madhwacharyaru · purandara dasaru

Shri madhva rayara seve dorakuvadu

ಶ್ರೀಮಧ್ವರಾಯರ ಸೇವೆ ದೊರಕುವದು
ಜನುಮ ಸಫಲ ಕಾಣಿರೋ
ಶ್ರೀಮದಾನಂದತೀರ್ಥರ ಪಾದ ನೆನೆವರು
ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ||

ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ
ಅಗುಣನು ಪರ ಬೊಮ್ಮನು
ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು
ಜಗ ಸತ್ಯ ಸಗುಣೋದ ಬ್ರಹ್ಮ ಎಂದು ಪೇಳುವ ||

ಹರಿ ಸರ್ವೋತ್ತಮ ತರುವಾಯ ರಮಾದೇವಿ
ಸರಸಿಜಾಸನ ಪ್ರಾಣರು
ಸರಸ್ವತೀಭಾರತಿಯೆಂದು ಪೇಳ್ದಾ ಗರುಡಾನಂತ ರುದ್ರ
ತರುವಾಯ ಆರು ದೇವಿಗಳು ||

ಸೌಪರ್ಣಿ ವಾರುಣಿ ಅನಪೂರ್ಣೆಯರು ಸಮರು
ದ್ವಿಪದೀಮನ್ವಾದಿ ದೇವಿಗಳು
ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ
ಅಪವರ್ಗಾದಿ ಸೇವೆಯ ಮಾಡಿರೋ ಎಂತೆಂಬ ||

ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ
ಚೆಂದದಿಂದಲಿ ಲಾಲಿಸಿ
ಇಂದಿರಾರಮಣ ಗೋವಿಂದನೇ ದೈವವೆಂದು
ಸಂದೇಹವಿಲ್ಲದೆ ಸಾಧಿಸಿ ಮಾಯಾ ಸೋಲಿಸಿ ||

ಭೂತದೊಳು ರೌಪ್ಯಪುರದಿ ನೆಲಸಿ ಗೆದ್ದು
ಧಾತ್ರೀ ಮುದ್ರೆಯ ತೋರಿಸಿ
ಈತನೇ ಹನುಮಂತ ಭೀಮೇಶ ಶ್ರೀಮಧ್ವ
ಈತನೇ ಭಾವಿ ಬ್ರಹ್ಮಾ ಜೀವರುತ್ತಮ ||

ಹಿಮಸೇತುಪರಿಯಂತುದ್ಭವಿಸಿದ ಸುಜನರ್ಗೆ
ಕ್ರಮದಿ ತತ್ವವ ಬೋಧಿಸಿ
ಕ್ರಮನೇಮಂಗಳ ಮಾಡಿ ಕಮಲನಾಭನ ಮೂರ್ತಿ
ಪ್ರೇಮದಿಂದಲಿ ಸ್ಥಾಪಿಸಿ ಪೂಜಿಸಿರೆಂದು ||

ಶ್ರೀಮದನಂತನೆ ಅನಂತಕಾಲಕೆಯೆಂದು
ಯಮಕಭಾರತ ತೋರಿಸಿ
ಸ್ವಾಮಿ ಸರ್ವಾಂತರ್ಯಾಮಿ ಸರ್ವಗುಣಪೂರ್ಣನೆಂದು
ಪ್ರೇಮಿ ಪುರಂದರವಿಠಲನಾ ದಾಸರಾದನಾ ||

Shri madhva rayara seve dorakuvadu januma saphala kaniro
Shrimad Ananda tirttara pada nenavaru samanya suraru karunya bommana Ane

Jagadu satyava alla jada jiva bhedavalla agunanu para bommanu
hige nudida janara nigama shastradi geddu jaga satya saguna brahma endu peluva

hari sarvottama nitya taruvaya ramadevi sarasijasana pranaru
sarasvati bharati garuda ananta rudra taruvaya Aru devigalu

sauparni varuni devi aparna deviyaru samaru dvipadi manvadigalu
I pari taratamya japa dhyanarcaneyinda apavargadi seveya madiro entemba

ondondu yugadali ananta sevaya madi cendadindali lalisi
indira ramana govindane daivavendu sandehavillade sathiyi mayi solisi

bhutadolu relappa puradi nelasi geddu dhatri mudreya torisi
idena hanumanta idena bhimasena idena bhavisyada brahma jivottama

hima giriyinda setuveya paryantara bhramisuta sujanarige
krama tatva bodhisi kamala nabhana murti kramavaridu sthapisi pujitarenda

shrimadanantana ananta kalakeyendu ymaka bharata torisi
svami sarvantaryami srvaguna purnanendu premi purandara vittalana dasanada

dasara padagalu · MADHWA · purandara dasaru

Shri madhva ramana ninna

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ
ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ
ಸಮರ್ಥಂಗಳಾಗಲಿಲ್ಲವೋ ||ಪ||

ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ
ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ
ನಿರತ ಮುಳುಗಿಪ್ಪಳೋ ರಮೆ ||

ನಖದಲ್ಲಿ ನಾನಾ ವಿಧಾನೇಕ ವಿಷಯಂಗಳನ್ನು
ಏಕ ಮನದಿಂದ ನೋಡುತ ಲಯಾಬ್ಧಿಯಲ್ಲಿ
ನಗುತ ಕುಳಿದಿಪ್ಪಳೋ ರಮೆ ||

ಒಂದೇ ಕಾಲದಲ್ಲಿ ನಿನ್ನ ಒಂದೇ ರೋಮಕೂಪದಲ್ಲಿ
ಅನಂತಕೋಟಿ ಬ್ರಹ್ಮಾಂಡಗಳು ಮಾಧವನೊಬ್ಬ
ಆನಂದದಿಂದ ಧರಿಸಿಪ್ಪ ||

ಅವನಾಗ ಅವತಾರ ಅನಂತಾನಂತ ರೂಪಂಗಳು
ದೇವಕೀತನಯಗುಂಟಯ್ಯ ಕ್ಷೀರಾಬ್ಧಿಯಲ್ಲಿ
ದೇವೇಶ ಸ್ತ್ರೀರೂಪ ಧರಿಸಿಪ್ಪ ||

ಐವತ್ತು ಕೋಟಿ ಯೋಜನ ವಿಸ್ತೀರ್ಣ ವಟಪತ್ರದಲ್ಲಿ
ಏಳು ಕೋಟಿಯೋಜನ ಮಾನದಿ ಬಾಲಕನೊಬ್ಬ
ಬಾಯಿಲುಂಗುಟನಿಕ್ಕಿ ಮಲಗಿರುವ ||

ಅಣೋರಣೀಯಾನ್ ಮಹತೋ ಮಹೀಯಾನೆಂಬೋ ನಾನಾ ಶ್ರುತಿಯಿಂದ
ಸನ್ನುತ ಸದ್ಗುಣ ಸಂಪೂರ್ಣನೂ ವನಜಾಕ್ಷ
ನಿನ್ನ ಸಿರಿ ನಿನ್ನ ಮಹಿಮೆ ಅರಿಯಳೋ ||

ಅನಾಥರಕ್ಷಕನೆಂದು ನಿನ್ನ ನಂಬಿದಂಥ ಎನ್ನ ಮನ್ನಿಸಿ
ರಕ್ಷಿಸೋ ಶ್ರೀಶ ಲಕ್ಷ್ಮೀಶ ಅನಾಥಬಂಧೋ
ದೀನಬಂಧೋ ದಯಾನಿಧಿಯೇ ||

ದಶಶತಸಾಸಿರದ ರೂಪನಾದ ವಾಸುದೇವ ಕುಸುಮನಾಭ
ಶೇಷಾದ್ರೀಶನ ಪುರಂದರವಿಠಲ ನಿನ್ನ
ದಾಸನೆಂದು ದಯ ಮಾಡಯ್ಯ ||

Shri madhva ramana ninna dvaita mahime enthaddo Samasta
koti vedangalu kudi tudisolomme samarthangalagalillavo

Yam kamaye tantamugram krnomi embandha shruti nikara
pratipadyaladalo sukhabdiyalli nirata mulugippalo rame

nakhadalli nana vidhaneka visayangalannu Eka manadinda
noduda layabdhiyalli naguta kulidippalo rame

onde kaladalli ninna onde roma kupadalli ananta koti
brahmandagalu madhavanobba Anandadinda dharisippa

avanaga avatara anantananda rupangalu devaki
tanayagundayya ksirabdhiyalli devesha strirupa dharisippa

aivattu koti yojana vistirna vatapatradalli Elu koti
yojana manadi balakanobba bayilungudanikki malagiruva

anoraiyan mahato mahiyanembo nana shrutiyinda
sannuta sadguna sampurnanu vanajaksa ninna siri ninna mahime ariyaro

anata raksakanendu ninna nambidantha enna mannisi rakshiso
shrisha laksmisha anatha bandho dinabandho dayanidhiye

dasha shata sasirada rupanada vasudeva kusumanabha
shesadhrishana purandara vittala ninnna dasanendu daya madayya

dasara padagalu · guru jagannatha dasaru · MADHWA · srinivasa

Shri Venkatesha Sthava raja

ಶ್ರೀರಮಣ ಸರ್ವೇಶ ಸರ್ವದ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರಮಹಿಮೋಧ್ದಾರ ಸದ್ಗುಣ ಪೂರ್ಣ ಗಂಭೀರ |
ಸಾರಿದವರಘದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ |
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ ||

ಘನ್ನಮಹಿಮಾಪನ್ನಪಾಲಕ |
ನಿನ್ನಹೊರತಿನ್ನನ್ಯದೇವರ |
ಮನ್ನದಲಿನಾನೆನೆಸೆನೆಂದಿಗು ಬನ್ನಪಡಿಸದಿರು |
ಎನ್ನಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ |
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ || ೨ ||

ಯಾಕೆ ಪುಟ್ಟದು ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ |
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ |
ನೋಕನೀಯಕ ನೀನೆ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೩ ||

ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡ ಈ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ |
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || ೪ ||

ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದೆ |
ಬಾಲಕನು ತಂದೆತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚಮತ್ಸರ |
ಕಂದನಾಧ್ರುವನಿಗೋಲಿದು ಪೊರೆದೆಯೊ ಶೇಷಗಿರಿವಾಸ || ೫ ||

ಪಿಂತು ಮಾಡಿದ ಮಹಿಮೆಗಳ ನಾನೆಂತು
ವರ್ಣಿಸಲೇನು ಫಲ ಶ್ರೀಕಾಂತ
ಎನ್ನನು ಪೊರೆಯೆ ಕೀರುತಿ ನಿನಗೆ ಫಲವೇನೊ |
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೬ ||

ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿಕುಲಗಳಿಗಭಯದಾಯಕ |
ಧೀನಬಾಂದವ ನೀನೆ ಎನ್ನ ಮನದರ್ಥ ಪೂರೈಸೋ |
ಅನುಪಮೋಪಮಜ್ಞಾನ ಸಂಪದ |
ವಿನಯಪೂರ್ವಕವಿತ್ತು ಪಾಲಿಸೊ |
ಜನುಮಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || ೭ ||

ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿವಿರಕ್ತಿ ನೀನಿತ್ತು |
ಹೃದಯಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನು ಶೇಷಗಿರಿವಾಸ || ೮ ||

ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೯ ||

ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯನಿಡುವುದಿಹಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೆ ನಿಂತೀವಿದದಿ ಪೇಳಿಸು ಶೇಷಗಿರಿವಾಸ || ೧೦ ||

ಆರು ಮನಿದವರೇನು ಮಾಳ್ಪರೊ |
ಆರುವೊಲಿದವರೇನು ಮಾಳ್ಪರೊ |
ಆರುನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೊರ ಜೀವರಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ || ೧೧ ||

ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೨ ||

ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಸಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ದನೆ |
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೩ ||

ಕರುಣಸಾಗರ ನೀನೆ ನಿಜಪದ |
ಶರಣವತ್ಸಲ ನೀನೆ ಶಾಶ್ವತ |
ಶರಣ ಜನಮಂದಾರ ಕಮಲ ಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೪ ||


Sriramana sarvesa sarvada |
Sarabokta svatantra sarvada |
Paranahinodhdara sadguna purna ganbira |
Saridavaragaduragaisi surijanarige saukya niduva |
Dhiravenkataramana karunadi pureyo ni enna || 1 ||

Ganna nahina pannapalaka |
Ninna horatinnanyadevara |
Nannadalinane nesenendigu bannapadisadiru |
Ennapalaka nine irutire innu Bava bayaveke enage |
Channa venkataranana karunadi poreyo ni enna || 2 ||

Yake puttadu karuna ennolu |
Sakalareya ninna saranana |
Nukibittare ninage lokadi kyati bappuvude |
Nokaniyaka nine ennanu |
Jokeyindali kayo bidade |
Ekadevanu nine venkata seshagirivasa || 3 ||

Anbujanbaka ninna padayuga |
Nambikonda I pariyalirutire |
Donbegarana teradi ni nirbagya sthiti tore |
Bimba nuruti ninna karagata |
Kanbuvarave gatiyo visvakutunbi |
Ennanu salaho santata seshagirivasa || 4 ||

Hinde ni prahladagosuga |
Endu nodada rupa dharisi |
Bandu daityana odala bagede |
Balakanu tandetaygala bittu vipinadi |
Nindu tapisuva panchanatsara |
Kandanadhruvanigolidu poredeyo seshagirivasa || 5 ||

Pintu nadida nahinegala nanentu
Varnisalenu Pala srikanta
Ennanu poreye kiruti ninage palaveno |
Kantu janakane enna nanasina |
Antarangadi nine sarvada |
Nintu prerane nalpe sarvada seshagirivasa || 6 ||

Srinivasane bakthaposhane |
J~janikulagaliga bayadayaka |
Dhinabandava nine enna nanadartha puraiso |
Anupanopanaj~jana sampada |
Vinayapurvakavittu paliso |
Janunajanunake nareya bedavo seshagirivasa || 7 ||

Nadavu natsara loba nohavu |
Odagabaradu enna nanadali |
Padumanabane j~jana Baktivirakti ninittu |
Hrudayanadhyadi ninna rupavu |
Vadanadali tava nananantravu |
Sadaya palisu bedikonbenu seshagirivasa || 8 ||

Andanudi pusiyagabaradu |
Banda bagyavu pogabaradu |
Kundubarade ninna karunavu dinadi vardhisali |
Ninde naduva janara sangavu |
Endigadaru doreyabaradu |
Endu ninnanu bedikombeno seshagirivasa || 9 ||

Enu bedali enna devane |
Sanuragadi enna paliso |
Nana vidhavidha saukyaniduvudihaparangalali |
Srinivasane ninna dasage |
Enu koretilelli nodalu |
Nine nintividadi pelisu seshagirivasa || 10 ||

Aru nanidavarenu nalparo |
Aruvolidavarenu nalparo |
Arunehigararu dveshigalarudasinaru |
Krora jivarahanidu satvika |
Dhira jivara poredu ninnali |
Sara Bakutiyanittu paliso seshagirivasa || 11 ||

Ninna seveyanittu enage |
Ninna padayugabakti nidi |
Ninna gunagana stavana naduva j~jana ninittu |
Enna nanadali nine nintu |
Gannakaryava nadi nadisu |
Dhanyanendenisenna lokadi seshagirivasa || 12 ||

Jaya jayatu satha kurnarupane |
Jaya jayatu kita simha vanana |
Jaya jayatu brugurana ragukulasona srirana |
Jaya jayatu siri yaduvarenyane |
Jaya jayatu jananoha buddane |
Jaya jayatu kalikalnashagnane kalkinanakane || 13 ||

Karunasagara nine nijapada |
Saranavatsala nine sasvata |
Sarana jananandara kanala kanta jayavanta |
Niruta ninnanu nutisi paduve |
Varada guru jagannathaviththala |
Parana premadi poreyo ennanu seshagirivasa || 14 ||

dasara padagalu · MADHWA · saraswathy

Paalisema muddu shaarade

ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ                    ||ಪ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ                                  ||ಅ.ಪ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ                                 ||೧||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ    ||೨||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ  ||೩||

Paalisema muddu shaarade – yenna naalige yalli nilla baarade

Lolalochane taaye niruta nambide ninna
Paalisema muddu shaarade – yenna nalige yalli nilla baarade ||1||

Shringaarapura nela vaasini –devi sangeeta gaana vilaasini
Mangala gaatre taaye balire brahmana raani||2||

Sarvaalankaara daya mooruti – ninna charanava stutisuve keeruti
Guru mooruti purandara vitthalana sthuthi sutha||3||

dasara padagalu · jagannatha dasaru · MADHWA · saraswathy

Dayamaade dayamaade taaye vaakdevee

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||ಪ||

ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|

ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||

ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು
ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||

Dayamaade dayamaade taaye vaakdevee
Dayadinda neeyennaa node vaakdevee

Hitati sann mateeya shreematidevi nee ee DE
Vratadija netre bhaarati nee daya maade devee ||1||

Sumukeetva sharaannabja druma chaayaa shreekara
Sumatigala olagittu mamateyin salahe ||2||

Jagannaathavitthalana anghrigala seveyolu
Sugune sanmati ko ttu begane salahe ||3||

bhajana · dasara padagalu · MADHWA

jai jai raama hare

||ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ||

ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಕೃಷ್ಣ ಹರೇ

ಮುನಿಮಖರಕ್ಷಕ ಧನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ
ಘನವರ್ಣಾಂಗ ಸುಮನಸರೊಡೆಯ ವನಜಾಸನ ಪಿತ ಕೃಷ್ಣ ಹರೇ

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ

ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ

ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ

ತಾಟಕಿ ಖರಮಧುಕೈಟಭಾದಿ ಪಾಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿ ಮೇಲ್ ನಾಟ್ಯವನಾಡಿದ ಖೇಟವಾಹನ ಕೃಷ್ಣ ಹರೇ

ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ಒದಗಿಹೋದ ಪದುಮನಾಭ ಜಯ ಕೃಷ್ಣ ಹರೇ

ಸೇವಿತ ಹನುಮ ಸುಗ್ರೀವನ ಸಖ ಜಗತ್ವಾವನ ಪರತರ ರಾಮ ಹರೇ
ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಕೃಷ್ಣ ಹರೇ

ಗಿರಿಗಳಿಂದವರ ಶರಧಿ ಬಂಧಿಸಿದ ಪರಮ ಸಮರ್ಥ ರಾಮ ಹರೇ
ಗಿರಿಯ ತನ್ನ ಕಿರಿ ಬೆರಳಲೆತ್ತಿ ಗೋವರನ ಕಾಯ್ದ ಕೃಷ್ಣ ಹರೇ

ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ರಾಮ ಹರೇ
ಪಾಂಡು ತನಯರಿಂದ ಚಂಡ ಕೌರವರ ದಿಂಡು ಕೆಡವಿಸಿದ ಕೃಷ್ಣ ಹರೇ

ತವಕದಿ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ರಾಮಹರೇ
ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ

ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ

ಧರೆಯೊಳಗಜ್ಞಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ

ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ
ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ

ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಕೃಷ್ಣ ಹರೇ

jai jai raama hare | jai jai krushna hare | | pa ||

kausalyaja vara vamsodbava sura samsevita pada raama hare |
kamsadyasurara dhvamsagaida yadu vamsodhbava krushna hare || 1 ||

munimuka rakshaka danujara sikshaka panidhara sannuta raama hare |
ganavarnamga sumanasarodeya sri vanajasanapita krushna hare||2||

tatake kara madhukaitabari papatavisura muka raama hare |
atadi panimelnatyavanadida keta vaha sri krushna hare ||3||

sile padarajadali sri madida sulalita mahima sri raama hare |
balu vakravagiddabaleya kshanadali celuveya madida sri krushna hare ||4||

haradhanu bangisi harushadi janaki karava pidida sri raama hare |
siri rukminiyanu tvaradali varisida karunakara sri krushna hare ||5||

| janaka pele lakshana sitasaha vanake teralida raama hare |
vanake pogi tannanugarodane govanu palipa sri krushna hare ||6||

chadure sabariyatta badariya palavanu mudadi sevisida raama hare |
vidurana kshirake odagi poda padumanaba sri krushna hare ||7||

sevita hanuma sugrivana saka jagatpavana paratara raama hare |
devaki vasudevara sere bidisida deva deva sri krushna hare ||8||

dhareyolaj~jajara mohipudake harana pujisida raama hare |
harana prarthisi varavanu padeda carite agathavu krushna hare ||9||

girigalinda vara saradhiya bandisida parama samrtha sri raama hare |
giriyanu tanna kiriberalaletti goparanu kayda sri krushna hare ||10||

kandisi dasasira chandadida kodanda pani sri raama hare |
pandu tanayarim chanda kauravara dindu gedahida sri krushna hare || 11 ||

tavakadalayodhyapurakaidida tanyuvatiyodane sri raama hare |
ravi suta tanayage pattava gattida bava taraka sri krushna hare ||12||

baratanu prarthisal arasatvava svikarisida tvaradali raama hare |
vara dharmadhyara dhareyolu meresida parama krupakara krushna hare | 13 |

atula mahima sadyatigala hrudayadi satata virajipa raama hare |
sitavahana sarathi enisida surarati pujita pada sri krushna hare ||14||

raama raama endu nemadi bajipara kamita palava sri raama hare |
premadi baktara palipa sri varadesa viththala sri krushna hare ||15||

dasara padagalu · LADIES · MADHWA · purandara dasaru

Purandara Dasara advice for Ladies

 ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ
ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ

ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ

ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ ಮಗಳೆ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ಮಗಳೆ
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ ಮಗಳೆ
ವರಪುರಂದರವಿಠಲನ ಸ್ಮರಣೆ ಮರೆಯಬೇಡಮ್ಮ

Buddhi maatu helidare kelabekamma magale
manashuddhalaagi gandanodane baalabekamma. | pa |

atte maavaganjikondu nadeyabekamma
chittadollabhana akkareyannu padeyabekamma
hottuhottige maneya kelasa maadabekamma
hattu mandi oppuva haage nadeyabekammaâ ||1||

Kottu kombuva nentarodane dvesha bedamma magale
uttu umbuva kaaladalli aata bedamma
hatti bagilalli bandu nillabedamma
katti aluva gandanodane sittu bedamma ||2||

Nerehoreyavarige nyaayavannu helabedamma magale
garuva kopa matsaravannu maadabedamma
parara nindipa hengalodane serabedamma
guru purandaravittalanna mareyabedammaâ ||3||


Tangig-helida krishna chandadali buddhi
Atteya maneyalli iruvantha suddi

Yarenu andaru moreyanu tiruhadiru more mele kaiyetti ballalendenisi
Vargevara kudi nirannu taruvaga vare kannisi noda nodadiru kandya||1||

Parara odaveya kandu durula matadadiru nerehoreyarige ninu talevagi nadeya
Parara matugalinda durulendu enisa beda nerehoreyara kandu ni baduku madamma||2||

Bhangarada peteyolu angadige hogadiru anganerige mana bhangagi madeya
Anganerige ninnantarangava heladiru bhangara vastugalu mucci kollamma||3||

Hagiddu ninundu bekendu bedadiru saku saku emba nachikeya hidiye
Nakumandiyarodane koke matadadiru lokadolivalobba mugi yendenise||4||

Istaru andaru nisturavadadiru ghatti madamma ninna manasu
Shrstiyolage namma purandara vitalanna shrestanada krsnanna tangi yendenisise||5||

dasara padagalu · MADHWA · purandara dasaru · saraswathy

Sharanembe vani-poreye kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ                                 ||ಪ||

ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ   ||ಅ.ಪ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ                            ||೧||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ                                         ||೨||

Sharanembe vani-poreye kalyani ||pa||

Vagabhimani varabrahmani |
sundaraveni-sucharitrani ||

Jagadolu nimma pogaluvenamma
hariya torisendu prarthipenamma ||1||

Paduve shrutiya- beduve matiya purandara
vithalana hiriya soseya ||2||

dasara padagalu · MADHWA · purandara dasaru · saraswathy

Onde manadali bhajisu vagdeviya

ಒಂದೆ ಮನದಲಿ ಭಜಿಸು ವಾಗ್ದೇವಿಯ |
ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳು||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು ||
ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು ||

ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು ||

Onde manadali bhajisu vagdeviya ||pa||

Indu mati koduvalu shrihariya dhyanadali ||a pa||

Hinde prahladanu kamalajana satigeragi nindu
Aradhisalu harivishvamayanendu |
Bandu vignava kaledu bhavashuddhiyannittu |
Hondisidalaga shrihariya charanadalli ||1||

Andu dashamukananuja vandisadhe vaniyanu |
Bandu tapavanu gaiye bahukalake |
Andadindagamecchi varavadhika bedenalu |
Nindu jihveyali nidreya bedisidalu ||2||

Aritu bhajisalu bidade ajanarasiya nitya
Urutara vak shuddhiyannittu |
Niruta shripurandaravithalana seveyolu |
Paratattvavada kathamrutavanunisuvalu ||3||

dasara padagalu · MADHWA · purandara dasaru · saraswathy

Kodu bega divyamati sarasvati

ಕೊಡು ಬೇಗ ದಿವ್ಯಮತಿ ಸರಸ್ವತಿ                    ||ಪ||

ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ                 ||ಅ.ಪ||

ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ      ||೧||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ          ||೨||

ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ                 ||೩||

Kodu bega divyamati sarasvati

mruda harihaya mukharodayale ninnaya
Adigali eraguve amma brammana rani ||1||

Indira ramanana hiriya sosayu ninu
Bandenna vadanadi nindu namava nudise ||2||

Akhila vidyabhimani ajana pattadarani
Sukhavittu palise sujana shiromani ||3||

Patita pavane ni gatiyendu nambide
Satata purandara vithalana tore ||4||