ಕೊಡು ಬೇಗ ದಿವ್ಯಮತಿ ಸರಸ್ವತಿ ||ಪ||
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅ.ಪ||
ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||
ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ ||೩||
Kodu bega divyamati sarasvati
mruda harihaya mukharodayale ninnaya
Adigali eraguve amma brammana rani ||1||
Indira ramanana hiriya sosayu ninu
Bandenna vadanadi nindu namava nudise ||2||
Akhila vidyabhimani ajana pattadarani
Sukhavittu palise sujana shiromani ||3||
Patita pavane ni gatiyendu nambide
Satata purandara vithalana tore ||4||
2 thoughts on “Kodu bega divyamati sarasvati”