ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ
ಮಂಗಳಾರುತಿಯನೆತ್ತೀರೆ ||ಪ||
ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ
ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ
ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ
ಕಂದರ್ಪ ಚಾಪ ಪರಿಭ್ರೂಲತೆಗೆ ಇಂದು ಛವಿಯ ಕಿರೀಟ ಭೃತೆಗೆ
ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ ||1||
ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ
ಹಾರಪದ ಶಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ
ಶೀರ ಕಟಿಯೊಳ್ನೆರೆವ ಮೇಖಲೆಗೆ ಸಾರ ವೇದಾಂಗ ಭೂತೆಗೆ
ಭಾರಿ ಭೂಷಣಯುಕ್ತ ವಾಣಿÉಗೆ ನೀರಜ ಪಲ್ಲವಗಾತ್ರೆಗೆ
ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ||2||
ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ|
ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ
ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ
ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ
ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ ||3||
mangaLArutiyanettIre vArijaBavamuKige
mangaLArutiyanettIre ||pa||
indu biMba sadRuSa vadanege lAvaNya KaNige
anda kuMkumaBUShita PaNege haridra BUShege
sanda mauktika caMpaka nAsikege canda karuNABaraNa BUShitege
kandarpa cApa pariBrUlatege indu Caviya kirITa BRutege
hinde jOlva kanakavENige mangaLArutiyanettire ||1||
cAruvasana BUShitAngege vidyutsukAntege
hArapada SaÀmirUpa kanThege sukaMbu SrIdEvige
SIra kaTiyoLnereva mEKalege sAra vEdAnga BUtege
BAri BUShaNayukta vANiÉge nIraja pallavagAtrege
sArasAkShi Sirivantege mangaLArutiyanettire||2||
karadi vINe dharipa dEvige pAvannagAtrege|
dhareya sRuShTikartanarasige mangaLa vANige
paripariyalankAra BUShitege sarasa kOmala padmapAtege
marakataBUShaNa BAsege niruta janake vidyapradege
narasiMhaviThThalana bAlege mangaLArutiyanettire ||3||