ಧ್ರುವತಾಳ
ಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೆವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ್ನ ಆಜ್ಞದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆಅಣುರೂಪಗಳಿಂದ ನಿಂದು ಮಾಡಿದ ಕೃತ್ಯಮನಸಿಜ ವೈರಿಯಿಂದ ತಿಳಿಯಲೊಶವೆಹೀನ ಮನಸಿನಿಂದ ಬದ್ಧನಾದವ ನಾನುಗುಣರೂಪ ಕ್ರಿಯಗಳ ವಿದಿತನೇನೊತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡುಎನಿಪ ಸಾಸಿರ ರೂಪದಿಂದ ಸತಿಯ ಸಹಿತತೃಣ ಮೊದಲಾದ ಜೀವ ಪ್ರಕೃತಿ ಕಾಲಕರ್ಮಅನುಸರವಾಗಿ ಕ್ರಿಯಗಳನೆ ಮಾಡಿಅನಿಮಿತ್ಯ ಬಾಂಧವನೆನಿಸಿ ಸಜ್ಜನರಿಗೆ ಜ್ಞಾನ ಭಕ್ತ್ಯಾದಿಗಳು ನೀನೆ ಇತ್ತುಮನದಲ್ಲಿ ಹರಿ ರೂಪ ಸಂದರುಶನವಿತ್ತುಘನೀ ಭೂತವಾದ ಆನಂದದಿಂದವಿನಯದಿಂದಲ್ಲಿ ಪೊರೆವ ಉಪಕಾರವನು ಸ್ಮರಿಸಲಾಪೆನೆ ಎಂದಿಗೆ ಗುಣನಿಧಿಯೆಇನ ಕೋಟಿ ತೇಜ ಗುರು ವಿಜಯ ವಿಠ್ಠಲರೇಯಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ ||1||
ಮಟ್ಟತಾಳ
ಮಿನುಗುವ ಕಂಠದಲಿ ಎರಡು ದಳದ ಕಮಲಕರ್ಣಿಕಿ ಮಧ್ಯದಲಿ ಸತಿ ಸಹಿತದಲಿದ್ದುವನಜಾಸನವಿಡಿದು ತೃಣಜೀವರ ತನಕತನುವಿನೊಳಗೆ ವಿಹಿತವಾದ ಶಬ್ದಗಳನ್ನುನೀವೆ ಮಾಡಿ ಅವರವರಿಗೆ ಕೀರ್ತಿಘನತೆಯನೇ ಇತ್ತು ಕಾಣಿಸಿಕೊಳ್ಳದಲೆಮನುಜಾಧಮರಿಗೆ ಮಾಯವ ಮಸಗಿಸಿಕೊನೆ ಗುಣದವರನ್ನ ನಿತ್ಯ ದುಃಖಗಳಿಂದದಣಿಸುವಿ ಪ್ರಾಂತ್ಯದಲಿ ಕಡೆಮೊದಲಿಲ್ಲದಲೆದನುಜ ಮರ್ದನ ಗುರು ವಿಜಯ ವಿಠ್ಠಲರೇಯನಿನಗಿತ್ತನು ಈ ಪರಿಯ ಸ್ವತಂತ್ರ ಮಹಿಮೆಯನು ||2||
ರೂಪಕತಾಳ
ನಾಸಿಕ ಎಡದಲ್ಲಿ ಭಾರತಿ ತಾನಧೋಶ್ವಾಸ ಬಿಡಿಸುವಳು ನಿನ್ನಾಜ್ಞದೀನಾಸಿಕ ಬಲದಲ್ಲಿ ಈಶನಾಜ್ಞದಿ ಊಧ್ರ್ವಶ್ವಾಸ ಬಿಡಿಸಿ ಪೊರೆವಿ ಜೀವರನ್ನೂತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದುಸಾಸಿರದಾರು ಶತದಿನ ಬಂದಶಲಿಭೂ ಶಬ್ದದಿಂದಲ್ಲಿ ಹರಿಯನ್ನೇ ಪೂಜಿಸುತ್ತಆಶೀತಿ ನಾಲ್ಕು ಲಕ್ಷ ಜೀವರಿಗೆಲೇಸು ಮಿಶ್ರಗಳೆಲ್ಲ ಅದರಂತೆ ನಿರ್ದೇಶವಾಸಗೈಸುವಿ ನೀನೆ ಪ್ರಾಂತ್ಯದಲ್ಲಿಈ ಸುಜ್ಞಾನ ವೆ ತಿಳಿದುಪಾಸನೆ ಮಾಳ್ಪರಿಗೆಶ್ವಾಸ ಮಂತ್ರದ ಫಲವ ಶೇಷವೀವಕಾಶಿನಿಂದಲಿ ಕೋಟಿ ದ್ರವ್ಯ ಪ್ರಾಪುತದಂತೆವಾಸುದೇವನೆ ಇದಕೆ ತುಷ್ಟನಾಗೀಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪಈ ಸಂಜ್ಞದಿಂದಲ್ಲಿ ದಿವಿಜರೆಲ್ಲದಾಸರಾಗಿಹರಯ್ಯಾ ನಿನ್ನ ಪಾದವ ಬಿಡದೆಕ್ಲೇಶಾನಂದಗಳೆಲ್ಲ ನಿನ್ನಾಧೀನ ದೇಶ ಕಾಲ ಪೂರ್ಣ ಗುರು ವಿಜಯ ವಿಠ್ಠಲರೇಯಭಾಸುರ ಜ್ಞಾನ ನಿನ್ನಿಂದವೀವ ||3||
ಝಂಪಿತಾಳ
ಪಂಚ ದ್ವಾರಗಳಲ್ಲಿ ಪಂಚವ ಪುಷಗಳಿಂದಪಂಚರೂಪನ ಧ್ಯಾನ ಮಾಳ್ಪ ನಿನ್ನಪಂಚಮುಖ ಮೊದಲಾದಮರರೆಲ್ಲರು ನಿ-ಶ್ಚಂಚಲದಿ ಭಜಿಸುತಿರೆ ಅವರವರವಾಂಛಿತಗಳನಿತ್ತು ಪರಮ ಮುಖ್ಯ ಪ್ರಾಣ ದ್ವಿ-ಪಂಚಕರಣಕೆ ಮುಖ್ಯ ಮಾನಿ ನೀನೆಪಂಚರೂಪಗಳಿಂದ ಪಂಚಾಗ್ನಿಗತನಾಗಿಪಂಚ ವ್ಯಾಪರಗಳು ಮಾಳ್ಪ ದೇವಪಂಚ ಪರ್ವದಲಿಪ್ಪ ಪಂಚ ಪಂಚಮರರೊಸಂಚರಿಸುವರಯ್ಯಾ ನಿನ್ನಿಂದಲಿಪಂಚಭೇದಗಳರುಹಿ ಶುದ್ಧ ಶಾಸ್ತ್ರಗಳಿಂದ ಪ್ರ-ಪಂಚ ಸಲಹಿದ ವಿಮಲ ಉಪಕಾರಿಯೇ ನಿ-ಷ್ಕಿಂಚನ ಪ್ರೀಯ ಗುರು ವಿಜಯ ವಿಠ್ಠಲರೇಯನಮಿಂಚಿನಂದದಿ ಎನ್ನ ಮನದಿ ನಿಲಿಸೊ ||4||
ತ್ರಿವಿಡಿತಾಳ
ದಳ ಅಷ್ಟವುಳ್ಳ ರಕ್ತಾಂಬುಜದ ಮಧ್ಯಪೊಳೆವ ಕರ್ಣಿಕೆಯಲ್ಲಿ ಶೋಭಿಸುವಮೂಲೇಶನ ಪಾದ ಪಂಕಜದಲಿ ನಿಂದುಸಲೆ ಭಕುತಿಯಿಂದ ಭಜಿಸುವ ನಿನ್ನ ಚರಣಮೂಲದಲ್ಲಿ ಜೀವ ಆಶ್ರೈಸಿ ಇಪ್ಪನಾಗಿಸ್ಥಳವ ಸೇರಿಪ ಭಾರ ನಿನ್ನದಯ್ಯಾಒಲ್ಲೆನೆಂದರೆ ಬಿಡದು ಭಕತರ ಅಭಿಮಾನ ಒಲಿದು ಪಾಲಿಸಬೇಕು ಘನ ಮಹಿಮಾಖಳ ದರ್ಪ ಭಂಜನ ಗುರು ವಿಜಯ ವಿಠ್ಠಲರೇಯಒಲಿವ ನಿಮ್ಮಯ ಕೃಪೆಗೆ ವಿಮಲ ಚರಿತ ||5||
ಅಟ್ಟತಾಳ
ಜಾಗೃತಿ ಸ್ವಪ್ನ ಸುಷುಪ್ತಿಯಲ್ಲಿ ನೀನೆಜಾಗರೂಕನಾಗಿ ಜೀವನ ಪಾಲಿಸಿಭಾಗತ್ರಯದಲ್ಲಿ ವಿಭಾಗ ಮಾಡುವಿನಾಗಭೂಷಣಾದಿ ಸುರರಿಗೆ ಜೀವನಸಾಗರ ಮೊದಲಾದ ಸಕಲರಲ್ಲಿ ವ್ಯಾಪ್ತನಾಗರಾಜನ ಅಂಗುಟದಿ ಮೀಟಿದ ಶಕ್ತಯುಗಾದಿ ಕೃತು ನಾಮ ಗುರು ವಿಜಯ ವಿಠ್ಠಲರೇಯನಯೋಗವ ಪಾಲಿಸಿ ಭವದೂರೂ ಮಾಡೋದು ||6||
ಆದಿತಾಳ
ಅಸುರರ ಪುಣ್ಯವನ್ನು ಭಕ್ತರಿಗಿತ್ತವರಅಸಮೀಚೀನ ಕರ್ಮ ದನುಜರಿಗುಣಿಸುವಿಈಶನೆ ಗತಿಯೆಂದು ನೆರೆ ನಂಬಿದವರಿಗೆಸು ಸಮೀಚೀನವಾದ ಮೋದಗಳೀವಿ ನಿತ್ಯವಸುಧೆಯ ಭಾರವನ್ನು ಧರಿಸಿ ತ್ರಿಕೋಟಿಯಸುಶರೀರಗಳಿಂದ ಬಹಿರಾವರಣದಲ್ಲಿವಾಸವಾಗಿ ಸಕಲ ಭೂತ ಹೃತ್ಕಮಲದಲ್ಲಿ ನಿಂದುಬಿಸಜಜಾಂಡವನ್ನು ಪೊರೆವ ಕರುಣಿ ನೀನುಅಸಮನೆನಿಪ ಗುರು ವಿಜಯ ವಿಠ್ಠಲರೇಯವಶವಾಗುವನು ನಿನ್ನ ಕರುಣದಿ ಆವಕಾಲಾ ||7||
ಜತೆ
ಹರಿಯ ವಿಹಾರಕ್ಕೆ ಆವಾಸನೆನಿಸುವಿಗುರು ವಿಜಯ ವಿಠ್ಠಲನ್ನ ಸುಪ್ರೀತ ಘನದೂತ ||
Dhruvatāḷa
ghana dayānidhiyāda pavanarāyane namopunarapi namō ninna pāda sarasiruhakemaṇidu bēḍikombe nīneve gati enduninaginta hitarāru jīvanakesanakādi vandyanna ājñadindali parama’aṇugaḷalli vyāptanāgi biḍade’aṇurūpagaḷinda nindu māḍida kr̥tyamanasija vairiyinda tiḷiyalośavehīna manasininda bad’dhanādava nānuguṇarūpa kriyagaḷa viditanēnotanuvinoḷage mūru kōṭyadhika eppatteraḍu’enipa sāsira rūpadinda satiya sahitatr̥ṇa modalāda jīva prakr̥ti kālakarma’anusaravāgi kriyagaḷane māḍi’animitya bāndhavanenisi sajjanarige jñāna bhaktyādigaḷu nīne ittumanadalli hari rūpa sandaruśanavittughanī bhūtavāda ānandadindavinayadindalli poreva upakāravanu smarisalāpene endige guṇanidhiye’ina kōṭi tēja guru vijaya viṭhṭhalarēya’initu ninnoḷu līle māḍuva āvakāla ||1||
maṭṭatāḷa
minuguva kaṇṭhadali eraḍu daḷada kamalakarṇiki madhyadali sati sahitadalidduvanajāsanaviḍidu tr̥ṇajīvara tanakatanuvinoḷage vihitavāda śabdagaḷannunīve māḍi avaravarige kīrtighanateyanē ittu kāṇisikoḷḷadalemanujādhamarige māyava masagisikone guṇadavaranna nitya duḥkhagaḷindadaṇisuvi prāntyadali kaḍemodalilladaledanuja mardana guru vijaya viṭhṭhalarēyaninagittanu ī pariya svatantra mahimeyanu ||2||
rūpakatāḷa
nāsika eḍadalli bhārati tānadhōśvāsa biḍisuvaḷu ninnājñadīnāsika baladalli īśanājñadi ūdhrvaśvāsa biḍisi porevi jīvarannūtāsigombhainūru kramadinda ippattondusāsiradāru śatadina bandaśalibhū śabdadindalli hariyannē pūjisutta’āśīti nālku lakṣa jīvarigelēsu miśragaḷella adarante nirdēśavāsagaisuvi nīne prāntyadalli’ī sujñāna ve tiḷidupāsane māḷparigeśvāsa mantrada phalava śēṣavīvakāśinindali kōṭi dravya prāputadantevāsudēvane idake tuṣṭanāgī’ī śarīradi poḷedu klēśava pariharipa’ī san̄jñadindalli divijarelladāsarāgiharayyā ninna pādava biḍadeklēśānandagaḷella ninnādhīna dēśa kāla pūrṇa guru vijaya viṭhṭhalarēyabhāsura jñāna ninnindavīva ||3||
jhampitāḷa
pan̄ca dvāragaḷalli pan̄cava puṣagaḷindapan̄carūpana dhyāna māḷpa ninnapan̄camukha modalādamararellaru ni-ścan̄caladi bhajisutire avaravaravān̄chitagaḷanittu parama mukhya prāṇa dvi-pan̄cakaraṇake mukhya māni nīnepan̄carūpagaḷinda pan̄cāgnigatanāgipan̄ca vyāparagaḷu māḷpa dēvapan̄ca parvadalippa pan̄ca pan̄camararosan̄carisuvarayyā ninnindalipan̄cabhēdagaḷaruhi śud’dha śāstragaḷinda pra-pan̄ca salahida vimala upakāriyē ni-ṣkin̄cana prīya guru vijaya viṭhṭhalarēyanamin̄cinandadi enna manadi niliso ||4||
triviḍitāḷa
daḷa aṣṭavuḷḷa raktāmbujada madhyapoḷeva karṇikeyalli śōbhisuvamūlēśana pāda paṅkajadali nindusale bhakutiyinda bhajisuva ninna caraṇamūladalli jīva āśraisi ippanāgisthaḷava sēripa bhāra ninnadayyā’ollenendare biḍadu bhakatara abhimāna olidu pālisabēku ghana mahimākhaḷa darpa bhan̄jana guru vijaya viṭhṭhalarēya’oliva nim’maya kr̥pege vimala carita ||5||
aṭṭatāḷa
jāgr̥ti svapna suṣuptiyalli nīnejāgarūkanāgi jīvana pālisibhāgatrayadalli vibhāga māḍuvināgabhūṣaṇādi surarige jīvanasāgara modalāda sakalaralli vyāptanāgarājana aṅguṭadi mīṭida śaktayugādi kr̥tu nāma guru vijaya viṭhṭhalarēyanayōgava pālisi bhavadūrū māḍōdu ||6||
āditāḷa
asurara puṇyavannu bhaktarigittavara’asamīcīna karma danujariguṇisuvi’īśane gatiyendu nere nambidavarigesu samīcīnavāda mōdagaḷīvi nityavasudheya bhāravannu dharisi trikōṭiyasuśarīragaḷinda bahirāvaraṇadallivāsavāgi sakala bhūta hr̥tkamaladalli nindubisajajāṇḍavannu poreva karuṇi nīnu’asamanenipa guru vijaya viṭhṭhalarēyavaśavāguvanu ninna karuṇadi āvakālā ||7||
jate
hariya vihārakke āvāsanenisuviguru vijaya viṭhṭhalanna suprīta ghanadūta ||