hanuma · hanumabhimamadhwa · MADHWA · Vijaya dasaru

Bharave bharathi ramana

ಭಾರವೇ ಭಾರತಿ ರಮಣ||
ನಿನಗೆ ನಾ ಭಾರವೇ ಭಾರತೀ ರಮಣ||pa||

ಲಂಕಾನಾಥನ ಬಿಂಕವ ಮುರಿದು
ಅಕಳಂಕ ಚರಿತನ ಕಿಂಕರನೆನಿಸಿದೆ||ಲಂಕಾನಾಥನ||
ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟು||
ಶಂಕೆಯಿಲ್ಲದೆ ಲಂಕೆಯ ದಹಿಸಿದೆ ||ಭಾರವೇ||

ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ
ತಾಮಸ ಬಕನ ನಿರ್ಧೂಮ ಮಾಡಿದೆ||ಸೋಮಕುಲದಿ||
ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ||
ತಾಮರಸಾಖ್ಯನ ಸೇವೆಯ ಮಾಡಿದೆ ||ಭಾರವೇ||

ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹುವಾದಗಳಾಡಿ||ವೇದವ್ಯಾಸರ||
ಅಧಮ ಶಾಸ್ತ್ರಗಳ ಹೋಮವ ಮಾಡಿ||
ವಿಜಯವಿಠ್ಠಲನ ಸೇವಕನೆನಿಸಿದೆ ||ಭಾರವೇ||

BAravE BArati ramaNa||
ninage nA BAravE BAratI ramaNa||pa||

laMkAnAthana biMkava muridu
akaLaMka caritana kiMkaraneniside||laMkAnAthana||
paMkajAkShige aMkitaduMgura koTTu||
SaMkeyillade laMkeya dahiside ||BAravE||

sOmakuladi nissIma mahimanenisi
tAmasa bakana nirdhUma mADide||sOmakuladi||
kAmini mOhise prEmadi salahide||
tAmarasAKyana sEveya mADide ||BAravE||

vEdavyAsara pUjeya mADi
mOdadiMda bahuvAdagaLADi||vEdavyAsara||
adhama SAstragaLa hOmava mADi||
vijayaviThThalana sEvakaneniside ||BAravE||

 

dasara padagalu · hanuma · hanumabhimamadhwa · MADHWA · purandara dasaru

hanuma bhima madhwa muniya

ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||

ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು
ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ
ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ ||

ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿ
ಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆ
ಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತ
ಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿ ಕೊಡುವ ||

ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ ಮತ್ತು
ತವಕದಿಂದ ಪೂಜಿಪ ಮಹಾ ಮಹಿಮೆಯುಳ್ಳವರೊ
ಕವಿತ ವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿ
ಭವಬಂಧನ ಕಳೆವ ಕಾವ ಪುರಂದರ ವಿಠಲನ ದಾಸ ||

Hanuma bhīma madhva muniya nenedu badukirō ||pa||
anumānaṅgaḷilladale manōbhīṣṭaṅgaḷanīva ||a.Pa||

prāṇigaḷa prāṇōd’dhāra jīvarōttamaru mattu
prāṇāpāna vyānōdāna samānaroḷutkr̥ṣṭa
kāṇirēno kāya karma cakṣurindriyagaḷige
trāṇagoṭṭu salahuva jāṇa guru mukhya prāṇa ||

kāmadhēnu cintāmaṇi kalpa vr̥kṣanāda svāmi
prēmadindali neneyuvavara bhāgyakkeṇeyuṇṭe
sāmān’yavallavō īta mōkṣa sampadavigaḷa dāta
ā mahā aparōkṣa jñāna dārḍhya bhakti koḍuva ||

avatāra trayaṅgaḷalli hariya sēvisuta mattu
tavakadinda pūjipa mahā mahimeyuḷḷavaro
kavita vākyavallavidu avivēkavendeṇisabēḍi
bhavabandhana kaḷeva kāva purandara viṭhalana dāsa ||

dasara padagalu · hanumabhimamadhwa · MADHWA · prasanna venkata dasaru

Hanuma namma kamadenu

ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷ
ಆನಂದ ತೀರ್ಥಗುರು ಚಿಂತಾಮಣಿ ||ಪ||

ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚ
ರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾ
ವೇತ್ತೃಜನಕಾ ಸಂತತ ಕಿಂಪುರುಷ ವರುಷದಿ ಉಣ
ಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು ||೧||

ರಾಜಸೂಯ ಮೂಲದಿಂದ ಶಾಖೊಪಶಾಖ ಸಧರ್ಮ
ಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿ
ರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖ
ಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರೀಯನು ||೨||

ಹಂತ ಭಾಷ್ಯಧ್ವಾಂತದಿ ವೇದಾಂತವಡೆಗೆ ಪೋಕ ಮಣಿ
ಮಂತನ ಮುರಿದನು ಮೂವತ್ತೆರಡು ಲಕ್ಷಣದಿ
ಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದ
ಚಿಂತಾರ್ಥ ನಮಗೀವ ಶ್ರೀ ವ್ಯಾಸಪ್ರೀಯನು ವೇದವ್ಯಾಸಪ್ರೀಯನು ||೩||

hanuma namma kAmadhEnu BIma namma kalpavRukSha
AnaMda tIrthaguru cintAmaNi ||pa||

sUtrarAmAyaNa mahAvyAkarNa paMca
rAtra BAratapurANa Srutyartha sudhArasavA
vEttRujanakA santata kiMpuruSha varuShadi uNa
littanA susvaradi SrIrAmapriyanu ||1||

rAjasUya mUladinda SAKopaSAKa sadharma
sOjigada karmakusuma brahmatvaCaladi
rAjisutta sahasrAkSha saKamuKyadvijarge suKa
bIja niMtu horedanu SrIkRuShNa prIyanu ||2||

hanta BAShyadhvAntadi vEdAntavaDege pOka maNi
mantana muridanu mUvatteraDu lakShaNadi
kAntiyiMda prasannavenkaTa kAntanna prakASisida
cintArtha namagIva SrI vyAsaprIyanu vEdavyAsaprIyanu ||3||

hanumabhimamadhwa · MADHWA · Vadirajaru

Avatara traya stothra

ಪಾಲಯಸ್ವ ನಿಪಾಲಯಸ್ವ ನಿಪಾಲಯಸ್ವ ರಮಾಪತೇ |
ವಾದಿರಾಜಮುನೀಂದ್ರವಂದಿತ ವಾಜಿವಕ್ತ್ರ ನಮೋಽಸ್ತು ತೇ || ಪ |||

ಮಧ್ವಹೃತ್ಕಮಲಸ್ಥಿತಂ ವರದಾಯಕಂ ಕರುಣಾಕರಂ
ಲಕ್ಷ್ಮಣಾಗ್ರಜಮಕ್ಷಯಂ ದುರಿತಕ್ಷಯಂ ಕಮಲೇಕ್ಷಣಮ್ |
ರಾವಣಾಂತಕಮವ್ಯಯಂ ವರಜಾನಕೀರಮಣಂ ವಿಭುಂ
ಅಂಜನಾಸುತಪಾಣಿಕಂಜನಿಷೇವಿತಂ ಪ್ರಣಮಾಮ್ಯಹಮ್ || ೧ ||

ದೇವಕೀತನಯಂ ನಿಜಾರ್ಜುನಸಾರಥಿಂ ಗರುಡಧ್ವಜಂ
ಪೂತನಾಶಕಟಾಸುರಾದಿಖಲಾಂತಕಂ ಪುರುಷೋತ್ತಮಮ್ |
ದುಷ್ಟಕಂಸನಿಮರ್ದನಂ ವರರುಗ್ಮಿಣೀಪತಿಮಚ್ಯುತಂ
ಭೀಮಸೇನಕರಾಂಬುಜೇನ ಸುಸೇವಿತಂ ಪ್ರಣಮಾಮ್ಯಹಮ್ || ೨ ||

ಜ್ಞಾನಮುಕ್ತಿಸುಭಕ್ತಿದಂ ವರಬಾದರಾಯಣಮವ್ಯಯಂ
ಕೋಟಿಭಾಸ್ಕರಭಾಸಮಾನಕಿರೀಟಕುಂಡಲಮಂಡಿತಮ್ |
ವಾಕ್ಸುದರ್ಶನತಃ ಕಲೇಃ ಶಿರಘಾತಕಂ ರಮಯಾ ಯುತಂ
ಮಧ್ವಸತ್ಕರಕಂಜಪೂಜಿತಮಕ್ಷಯಂ ಪ್ರಣಮಾಮ್ಯಹಮ್ || ೩ ||

|| ಇತಿ ಶ್ರೀವಾದಿರಾಜಪೂಜ್ಯಚರಣವಿರಚಿತಂ ಅವತಾರತ್ರಯಸ್ತೋತ್ರಮ್ ||

pAlayasva nipAlayasva nipAlayasva ramApatE |
vAdirAjamunIndravandita vAjivaktra namO&stu tE || pa |||

madhvahRutkamalasthitaM varadAyakaM karuNAkaraM
lakShmaNAgrajamakShayaM duritakShayaM kamalEkShaNam |
rAvaNAntakamavyayaM varajAnakIramaNaM viBuM
anjanAsutapANikaMjaniShEvitaM praNamAmyaham || 1 ||

dEvakItanayaM nijArjunasArathiM garuDadhvajaM
pUtanASakaTAsurAdiKalAntakaM puruShOttamam |
duShTakaMsanimardanaM vararugmiNIpatimacyutaM
BImasEnakarAMbujEna susEvitaM praNamAmyaham || 2 ||

j~jAnamuktisuBaktidaM varabAdarAyaNamavyayaM
kOTiBAskaraBAsamAnakirITakunDalamanDitam |
vAksudarSanataH kalEH SiraGAtakaM ramayA yutaM
madhvasatkarakanjapUjitamakShayaM praNamAmyaham || 3 ||

|| iti SrIvAdirAjapUjyacaraNaviracitaM avatAratrayastOtram ||

dasara padagalu · hanuma · hanumabhimamadhwa · MADHWA · purandara dasaru

Gururayara nambiro

ಗುರುರಾಯರ ನಂಬಿರೋ, ಮಾರುತಿಯೆಂಬ
ಗುರುರಾಯರ ನಂಬಿರೊ ||ಪ||

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅ.ಪ||

ವನಧಿಯ ಮನೋವೇಗದಿ ,ಲಂಘಿಸಿ ಮಹೀ-
ತನುಜೆಯ ಶೋಕವ ತರಿದು
ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದನುಜರ ಬಡಿದು ಲಂಕೆಯ ತನ್ನ ಸಖಗಿತ್ತ ||

ಕೌರವ ಬಕ ಹಿಡಿಂಬ, ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರ ಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ ||

ಜೀವೇಶರೊಂದೆಂಬ ದುರ್ವಾದಿಯ
ಭಾವಶಾಸ್ತ್ರವ ಮುರಿದು
ಕೋವಿದರಿಗೆ ಸದ್ಭಾಷ್ಯ ತೋರಿದ
ದೇವ ಪುರಂದರ ವಿಠಲ ಸೇವಕನಾದ ||
Gururayara nambiro, marutiyemba
Gururayara nambiro ||pa||
Gururayara nambi bidade yavagalu
Duritava kaledu sadgatiya padevarella ||a.pa||

Vanadhiya manovegadi ,langisi mahi-
Tanujeya sokava taridu
Vanava berodane kittadi arbatisida
Danujara badidu lankeya tanna sakagitta ||

Kaurava baka hidimba, kicakaremba
Durula santati neggotti
Gora pataki dusyasanana rakutava
Hiri mudadi muravairiya Bajisida ||

Jivesarondemba durvadiya
Bavasastrava muridu
Kovidarige sadbashya torida
Deva purandara vithala sevakanada ||

dasara padagalu · hanumabhimamadhwa · MADHWA · Mukhya praana

Mukhya Praana devaru

Ashtothram

Dasara Padagalu:

32 lakshnas of Vayu devaru: Sri vayudevarige nitavada(Vayu devara 32 lakshanagalu)

Sulaadhi:

Nithya Paarayana Haadugalu:

Small slokas:

Sthothragalu

 

dasara padagalu · hanuma · hanumabhimamadhwa · MADHWA · purandara dasaru

Hanumantha ne balu

ಹನುಮಂತ ನೀ ಬಲು ಜಯವಂತನಯ್ಯ |
ಅನುಮಾನವಿಲ್ಲ ಆನಂದತೀರ್ಥರಾಯ

ಪರಾಮಸೇವಕನಾಗಿ ರಾವಣನ ಪುರವ ನಿರ್ಧೂಮವ ಮಾಡಿದೆ ನಿಮಿಷದೊಳಗೆ ||
ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ ||

ಕೃಷ್ಣಾವತಾರದಿ ಭೀಮನಾಗಿ ಬಂದುದುಷ್ಟ ದೈತ್ಯರನೆಲ್ಲ ಸಂಹರಿಸಿದೆ
|ದೃಷ್ಟಿಹೀನ ಧೃತರಾಷ್ಟ್ರನ ವಂಶವನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ ||

ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲುಮತಿ ಹೀನರಾದ ಸಜ್ಜನರಿಗೆಲ್ಲ
|ಅತಿ ಬೇಗದಲಿ ಮಧ್ವಯತಿರೂಪಧರಿಸಿ ಸದ್ಗತಿಪಾಲಿಸಿದೆಪುರಂದರವಿಠಲನ ದಾಸ||

Hanumanta ni balu jayavantanayya |
Anumanavilla anandatirtharaya || pa||

Paramasevakanagi ravanana purava nirdhumava madide nimishadolage ||
Bumiya putrige mudreyunguravittu |kshema kusalava srirama padakarpiside ||1||

Krushnavataradi bimanagi bandudushta daityaranella samhariside |drushtihina dhrutarashtrana vamsavanukashtavillade kondu srikrushnapadakarpiside ||2||

Patita sankara hutti matavella kedisalumati hinarada sajjanarigella |
|ati begadali madhvayatirupadharisi sadgatipaliside purandaravithalana dasa ||3||

dasara padagalu · hanuma · hanumabhimamadhwa · purandara dasaru

sari bandane

ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||

ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||

ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||

ಭೀಮಸೇನನೆ ಕುಂತಿ ತನಯನೆ ವಿರಾಟನ ಮನೆಯಲ್ಲಿ
ನಿಂತು ಕೀಚಕನ ಸಂಹರಿಸಿದವನೆ || ೨ ||

ಮಧ್ವರಾಯನೆ ಸರ್ವಜ್ಞಶ್ರೇಷ್ಠ ಅದ್ವೈತವ ಗೆದ್ದು
ಪುರಂದರವಿಠಲನ ಮುಂದೆ ನಿಂತವನೆ || ೩ ||

Sari bandane | pranesa bandane ||

Sari bandu lankapurava mirida ravanana | ¸
Kandu dhira oyyaradimda||

Vayuputrane sriramadutane |
Pritiyinda sitanganege mudrikeya tandittavane ||

Bimasenane kunti tanayane
Viratana maneyali nintu kicakana samharisidavane ||

Madhvarayane sarvaj~ja sreshthane |
Advaitava geddu purandaravithalana munde||

dwadasa sloka · hanumabhimamadhwa · MADHWA

Hanuma bhima madhwa Dwadasa nama

ಹನೂಮಾನಂಜನಾ ಸೂನುರ್ವಾಯುಪುತ್ರೋ ಮಹಾಬಲಃ |
ರಾಮೇಷ್ಟಃ ಫಲ್ಗುನ ಸಖಃ ಪಿಂಗಾಕ್ಷೋಮಿತ ವಿಕ್ರಮಃ ||
ಉದಧಿಕ್ರಮಣಶ್ಚೈವ ಸೀತಾ ಸಂದೇಶಹಾರಕಃ |
ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ಃ ||

ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ |
ಸ್ವಾಪಕಾಲೇ ಪ್ರಭೋಧೇ ಚ ಯಾತ್ರಾಕಾಲೇ ಚ ಯಃ ಪಠೇತ್||
ನ ಭಯಂ ವಿದ್ಯತೇ ತಸ್ಯ ಸರ್ವತ್ರ ವಿಜಯೀ ಭವೇತ್ ||

ಮಾರುತಿಃ ಪಾಂಡವೋ ಭೀಮೋ ಗದಾಪಾಣಿ ವೃಕೋದರಃ|
ಕೌಂತೇಯಃ ಕೃಷ್ಣದೂತಷ್ಚ ಭೀಮಸೇನೋ ಮಹಾಬಲಃ
ಜರಾಸಂಧಾಂತಕೋ ವೀರೋ ದುಃಶಾಸನ ವಿನಾಶಕಃ
ದ್ವಾದಶೈತಾನಿ ನಾಮಾನಿ ಭೀಮಸ್ಯ ನಿಯತಂ ಪಠನ್ |
ಆಯುರಾರೋಗ್ಯ ಸಂಪತ್ತಿ ಮರಿ ಪಕ್ಷಕ್ಷಯಂ ಲಭೇತ್ ||

ಪೂರ್ಣಪ್ರಜ್ಞಓ ಜ್ಞಾನಾದಾತಾ ಮಧ್ವೋ ಧ್ವಸ್ತದುರಾಗಮಃ |
ತತ್ತ್ವಜ್ಞೋ ವೈಷ್ಣವಾಚಾರ್ಯೋ ವ್ಯಾಸಶಿಷ್ಯೋ ಯತೀಶ್ವರಃ|
ಆನಂದತೀರ್ಥಃ ಶಂನಾಮಾ ಜಿತವಾದೀ ಜಿತೇಂದ್ರಿಯಃ

ಶ್ರೀ ಮದಾನಂದ ಸನ್ನಾಮ್ನಾಮೇವಂ ದ್ವಾದಶಕಂ ಜಪೇತ್ |
ಲಭತೇ ವೈಷ್ಣವೀಂ ಭಕ್ತಿಂ ಗುರುಭಕ್ತಿ ಸಮನ್ವಿತಾಮ್ ||

Hanumananjana sunurvayuputro mahabalah |
Rameshtah Palguna sakah pingakshomita vikramah ||
Udadhikramanaschaiva sita sandesaharakah |
Lakshmana pranadata cha dasagrivasya darpaha H ||

Dvadasaitani namani kapindrasya mahatmanah |
Svapakale prabodhe cha yatrakale cha yah pathet||
Na bayam vidyate tasya sarvatra vijayi bavet ||

Marutih pandavo bimo gadapani vrukodarah|
Kaunteyah krushnadutashcha bimaseno mahabalah
Jarasandhantako viro duhsasana vinasakah
Dvadasaitani namani bimasya niyatam pathan |
Ayurarogya sampatti mari pakshakshayam labet ||

Purnaprajno ~janadata madhvo dhvastaduragamah |
Tattvaj~jo vaishnavacharyo vyasasishyo yatisvarah|
Anandatirthah sannama jitavadi jitendriyah

Sri madananda sannamnamevam dvadasakam japet |
Labate vaishnavim baktim gurubakti samanvitam ||