krishna · MADHWA · Vadirajaru

Sri Krishna stuthi

ಯದಿ ದಿಶಸಿ ನಯನಪಟುತಾಂ ತರ್ಹಿ ಭವಚ್ಚರಣಕಮಲಸೇವಾಯೈ |
ಆಯಾಸ್ಯಾಮಿ ದಯಾಲೋ ಕೃಷ್ಣ ನ ಚೇತ್ಪೂಜಯಾಮಿ ಕಥಮಂಧಃ || ೧ ||

ಸಂಭಾವಿತಸ್ಯ ಪುಂಸೋ ಮರಣಾದತಿರಿಚ್ಯತೇ ಕಿಲಾಕೀರ್ತಿಃ |
ಇತಿ ಗೀತಾಸು ಹಿ ಗೀತಂ ಭವತಾ ಭವತಾಪತಿಮಿರರವೇ || ೨ ||

ನಾನಾಪರಾಧಶತಕಂ ಹೀನೇ ಯದ್ಯಸ್ತಿ ಕೃಷ್ಣ ಮಯಿ ಮತ್ತೇ |
ದೀನಾನಾಮುದ್ಧರ್ತ್ರಾ ಕ್ಷಂತವ್ಯಂ ತತ್ ಕ್ಷಮಾವತಾ ಭವತಾ || ೩ ||

ಕುಂತತಸಂತತಿಲಸಿತಂ ಚೂಡಾತ್ರಯಶೋಭಿಮೌಲಿಭಾಗಮಹಮ್ |
ಶತಪತ್ರಪತ್ರನೇತ್ರಂ ಶಶಿವದನಂ ಪ್ರತಿದಿನಂ ದಿದೃಕ್ಷಾಮಿ || ೪ ||

ಕುಂಡಲಮಂಡಿತಗಂಡಂ ಕಂಬುಗ್ರೀವಂ ಮನೋರಮೋರಸ್ಕಮ್ |
ದಂಡಂ ದಾಮ ಚ ದಧತಂ ಪಾಂಡವಸಖಮರ್ಚ್ಯಮರ್ಚಯಾಮಿ ಕದಾ || ೫ ||

ರಮ್ಯತಮೋದರಜಘನಂ ಕಮ್ರೋರುಂ ವೃತ್ತಜಾನುಯುಗಜಂಘಮ್ |
ರಕ್ತಾಬ್ಜಸದೃಶಪಾದಂ ಹಸ್ತಾಭ್ಯಾಂ ತ್ವಾಽರ್ಚಯಾಮಿ ಸದಯ ಕದಾ || ೬ ||

ದೋಷಾತಿದೂರಂ ಶುಭಗುಣರಾಶಿಂ ದಾಸೀಕೃತಾಖಿಲಾನಿಮಿಷಮ್ |
ಭೂಷಣಭೂಷಿತಗಾತ್ರಂ ನೇತ್ರಾಭ್ಯಾಂ ಚಿತ್ರಚರಿತ ವೀಕ್ಷೇ ತ್ವಾಮ್ || ೭ ||

ಮಧ್ವಪ್ರತಿಷ್ಠಿತಂ ತ್ವಾಂ ವಿಧ್ವಸ್ತಾಶೇಷಕುಜನಕುಲಮ್ |
ಮೂರ್ಧ್ನಾ ಪ್ರಣಮ್ಯ ಯಾಚೇ ತದ್ವಿರಚಯ ಯದ್ದಿತಂ ಮಮಾದ್ಯ ಹರೇ || ೮ ||

ಸ್ತುತಿಮಿತಿ ಪುಣ್ಯಕಥನ ತೇ ಪ್ರಥಿತಕೃತೇ ವಾದಿರಾಜಯತಿರಕೃತ |
ಸತತಂ ಪಠತಾಂ ಹಿ ಸತಾಮತಿವಿಶದಾಂ ದೇಹಿ ಕೃಷ್ಣ ವಿತತಮತಿಮ್ || ೯ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಾ ಕೃಷ್ಣಸ್ತುತಿಃ ಸಮಾಪ್ತಾ ||

yadi diSasi nayanapaTutAM tarhi BavaccaraNakamalasEvAyai |
AyAsyAmi dayAlO kRuShNa na cEtpUjayAmi kathamaMdhaH || 1 ||

saMBAvitasya puMsO maraNAdatiricyatE kilAkIrtiH |
iti gItAsu hi gItaM BavatA BavatApatimiraravE || 2 ||

nAnAparAdhaSatakaM hInE yadyasti kRuShNa mayi mattE |
dInAnAmuddhartrA kShaMtavyaM tat kShamAvatA BavatA || 3 ||

kuntatasaMtatilasitaM cUDAtrayaSOBimauliBAgamaham |
SatapatrapatranEtraM SaSivadanaM pratidinaM didRukShAmi || 4 ||

kunDalamanDitaganDaM kaMbugrIvaM manOramOraskam |
danDaM dAma ca dadhataM pAnDavasaKamarcyamarcayAmi kadA || 5 ||

ramyatamOdarajaGanaM kamrOruM vRuttajAnuyugajaMGam |
raktAbjasadRuSapAdaM hastAByAM tvA&rcayAmi sadaya kadA || 6 ||

dOShAtidUraM SuBaguNarASiM dAsIkRutAKilAnimiSham |
BUShaNaBUShitagAtraM nEtrAByAM citracarita vIkShE tvAm || 7 ||

madhvapratiShThitaM tvAM vidhvastASEShakujanakulam |
mUrdhnA praNamya yAcE tadviracaya yadditaM mamAdya harE || 8 ||

stutimiti puNyakathana tE prathitakRutE vAdirAjayatirakRuta |
satataM paThatAM hi satAmativiSadAM dEhi kRuShNa vitatamatim || 9 ||

|| iti SrImadvAdirAjapUjyacaraNaviracitA kRuShNastutiH samAptA ||

krishna · krishnaashtakam · MADHWA · vishnu theertharu

Sri krishn ashtaka (Antya kaala smarane)

ಶ್ರೀ ವಾಸುದೇವ ಮಧುಸೂದನ ಕೈಟಭಾರೇ
ಲಕ್ಷೀಶ ಪಕ್ಷಿವರ ವಾಹನ ವಾಮನೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೧ ।।

ಗೋವಿಂದ ಗೋಕುಲಪತೇ ನವನೀತ ಚೋರ
ಶ್ರೀ ನಂದನಂದನ ಮುಕುಂದ ದಯಾಪರೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೨ ।।

ನಾರಾಣಾಖಿಲ ಗುಣಾರ್ಣವ ವೇದ
ಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೩ ।।

ಆನಂದ ಸಚ್ಚಿದಾಖಿಲಾತ್ಮಕ ಭಕ್ತ ವರ್ಗ
ಸ್ವಾನನ್ದ ದಾನ ಚತುರಾಗಮ ಸನ್ನುತೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೪ ।।

ಶ್ರೀ ಪ್ರಾಣತೋsಧಿಕ ಸುಖ್ಯಾತಕ ರೂಪ ದೇವ
ಪ್ರೋದ್ಯದ್ದಿವಾಕರ ನಿಭಾಚ್ಯುತ ಸದ್ಗುಣೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೫ ।।

ವಿಶ್ವಾಂಧಕಾರಿ ಮುಖ ದೈವತ ವಂದ್ಯ ಶಾಶ್ವತ್
ವಿಶ್ವೋದ್ಭವಸ್ಥಿತಿಮೃತಿ ಪ್ರಭೃತಿ ಪ್ರದೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೬ ।।

ನಿತ್ತೈಕ ರೂಪ ದಶ ರೂಪ ಸಹಸ್ರ ಲಕ್ಷಾ
ನಂತ ರೂಪ ಶತ ರೂಪ ವಿರೂಪಕೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೭ ।।

ಸರ್ವೇಶ ಸರ್ವಗತ ಸರ್ವ ಶುಭಾನುರೂಪ
ಸರ್ವಾಂತರಾತ್ಮಕ ಸದೋದಿತ ಸತ್ಪ್ರಿಯೇತಿ ।
ಶ್ರೀಕೃಷ್ಣ ಮನ್ಮರಣ ಉಪಾಗತೇ ತು
ತ್ವನ್ನಾಮ ಮದ್ವಚನ ಗೋಚರತಾಮುಪೈತು ।। ೮ ।।

SrI vAsudEva madhusUdana kaiTaBArE
lakShISa pakShivara vAhana vAmanEti |
SrIkRuShNa manmaraNa upAgatE tu
tvannAma madvacana gOcaratAmupaitu || 1 ||

gOvinda gOkulapatE navanIta cOra
SrI nandanandana mukunda dayAparEti |
SrIkRuShNa manmaraNa upAgatE tu
tvannAma madvacana gOcaratAmupaitu || 2 ||

nArANAKila guNArNava vEda
pArAyaNa priya gajAdhipa mOcakEti |
SrIkRuShNa manmaraNa upAgatE tu
tvannAma madvacana gOcaratAmupaitu || 3 ||

Ananda saccidAKilAtmaka Bakta varga
svAnanda dAna caturAgama sannutEti |
SrIkRuShNa manmaraNa upAgatE tu
tvannAma madvacana gOcaratAmupaitu || 4 ||

SrI prANatOsdhika suKyAtaka rUpa dEva
prOdyaddivAkara niBAcyuta sadguNEti |
SrIkRuShNa manmaraNa upAgatE tu
tvannAma madvacana gOcaratAmupaitu || 5 ||

viSvAndhakAri muKa daivata vandya SASvat
viSvOdBavasthitimRuti praBRuti pradEti |
SrIkRuShNa manmaraNa upAgatE tu
tvannAma madvacana gOcaratAmupaitu || 6 ||

nittaika rUpa daSa rUpa sahasra lakShA
nanta rUpa Sata rUpa virUpakEti |
SrIkRuShNa manmaraNa upAgatE tu
tvannAma madvacana gOcaratAmupaitu || 7 ||

sarvESa sarvagata sarva SuBAnurUpa
sarvAntarAtmaka sadOdita satpriyEti |
SrIkRuShNa manmaraNa upAgatE tu
tvannAma madvacana gOcaratAmupaitu || 8 ||

dasara padagalu · krishna · MADHWA · Vijaya dasaru

Matanadai mannari krushna

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ||pa||

ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ||a.pa||

ಊದುವ ಸಿರಿ ಪೊಂಗೊಳಲೊ ಜಗ-|
ದಾಧಾರದ ನಿಜ ಹೊಳೆಯೋ ||
ಪಾದದ ಪೊಂಗೆಜ್ಜೆ ಥಳಿಲೊ ಸರ್ವ |
ವೇದಗಳರಸುವ ಕಲ್ಪಕ ಸೆಳಲೊ ||1||

ಕಸ್ತೂರಿ ತಿಲಕದ ಮದವೊ ಮ-
ಕುಟ ಮಸ್ತಕದಿ ಝಗಝಗವೊ ||
ವಿಸ್ತರದಿ ಪೊತ್ತ ಜಗವೊ ಪರ- |
ವಸ್ತುವು ನಂದ ಯಶೋದೆಯ ಮಗುವೊ ||2||

ನವನೀತವ ಪಿಡಿದ ಕರವೊ ನವ-|
ನವ ಮೋಹನ ಶೃಂಗಾರವೊ ||
ಅವತರಿಸಿದ ಸುರತರುವೊ ಶತ-
ರವಿಯಂದದಿ ಉಂಗುರವಿಟ್ಟ ಭರವೊ ||3||

ಆನಂದ ಸುಜ್ಞಾನದ ಹೃದವೊ ಶುಭ-|
ಮಾನವರಿಗೆ ಬಲು ಮೃದುವೊ ||
ಆನನ ಛವಿಯೊಳು ಮಿದುವೊ ಪಾಪ-|
ಕಾನನ ದಹಿಸುವ ಪಾವಕ ಪದವೊ ||4||

ತ್ರಿಜಗದಧಿಕ ಪಾವನನೊ ಪಂ-|
ಕಜ ನೇತ್ರೆಯ ನಾಯಕನೊ ||
ಅಜಭವಾದಿಗಳ ಜನಕನೊ ನಮ್ಮ |
ವಿಜಯವಿಠ್ಠಲ ಯದುಕುಮಾರಕನೊ ||5||

Matanadai mannari krushna matanadai ||pa||

Datanu ninendu bayasi bandenu matanadai||a.pa||

Uduva siri pongolalo jaga-|
Dadharada nija holeyo ||
Padada pongejje thalilo sarva |
Vedagalarasuva kalpaka selalo ||1||

Kasturi tilakada madavo ma-
Kuta mastakadi jagajagavo ||
Vistaradi potta jagavo para- |
Vastuvu nanda yasodeya maguvo ||2||

Navanitava pidida karavo nava-|
Nava mohana srungaravo ||
Avatarisida surataruvo Sata-
Raviyandadi unguravitta Baravo ||3||

Anamda suj~janada hrudavo suba-|
Manavarige balu mruduvo ||
Anana caviyolu miduvo papa-|
Kanana dahisuva pavaka padavo ||4||

Trijagadadhika pavanano pan-|
Kaja netreya nayakano ||
Ajabavadigala janakano namma |
Vijayaviththala yadukumarakano ||5||

dasara padagalu · MADHWA · purandara dasaru

Ada hogona baro ranga

ಆಡ ಹೋಗೋಣ ಬಾರೋ ರಂಗ
ಓಡಿ ಹೋಗಲು ಬೇಡೋ ಕೃಷ್ಣ ||pa||

ಅಣ್ಣೆಕಲ್ಲು ಗೋಲಿ ಗಾಜುಗ
ಚಿಣ್ಣಿಕೋಲು ಚೆಂಡು ಬುಗುರಿ
ಕಣ್ಣುಮುಚ್ಚಾಲೆ ಹಲವು ಕೂಟ
ಬಣ್ಣದಾಟಗಳನೆಲ್ಲ||1||

ಸೋಲು-ಗೆಲುವಿಗೆಲ್ಲ ನೀನು
ಬಾಲಕರೊಳು ಕೂಡಿಕೊಂಡು
ಮೇಲೆ ಮಮತೆಯಿಂದ ಸಾನು-
ಕೂಲವಾಗಿ ನಡಸುವಂತೆ ||2||

ಪುಟ್ಟ ಪುಟ್ಟ ಕೊಳಲು ಕಂಬಳಿ
ಕಟ್ಟಿ ಬುತ್ತಿ ಕೈಯಲಿ ಕೋಲು
ದಿಟ್ಟ ಚೆಲುವನಾದ ಪುರಂದರ
ವಿಠಲ ಗೋವಳರ ರಾಯ ||3||
Ada hogona baro ranga
Odi hogalu bedo krushna ||pa||

Annekallu goli gajuga
Cinnikolu cemdu buguri
Kannumuccale halavu kuta
Bannadatagalanella||1||

Solu-geluvigella ninu
Balakarolu kudikondu
Mele mamateyinda sanu-
Kulavagi nadasuvante ||2||

Putta putta kolalu kambali
Katti butti kaiyali kolu
Ditta celuvanada purandara
Vithala govalara raya ||3||

aarathi · dasara padagalu · MADHWA

Araati maduvena krushnamurutige

ಆರುತಿ ಮಾಡುವೆನಾ ಕೃಷ್ಣಮೂರುತಿಗೆ ||

ಆರುತಿ ಮಾಡುವೆ ನಾರಿ ದ್ರೌಪದಿಗೆ
ಸೀರಿಗಳುಡಿಸಿದ ಮಾರಪಿತಗೆ ಸಖಿ ||

ಅಂಗುಟಾಗ್ರದಿಂದ ಗಂಗೆಯ ಪಡೆದಂಥ
ಮಂಗಳಪ್ರದ ಶಿರಿರಂಗನ ಚರಣಕೆ||

ವಂದಿಸುವರ ಭವ ಬಂಧವ ಬಿಡಿಸುವ
ನಂದಗೋಪನ ಮುದ್ದು ಕಂದ ಶ್ರೀಕೃಷ್ಣಗೆ ||

ಆರಾದಿಸುವ ರಘ ದೂರಮಾಡುವ ಶÀುಭ
ಕಾರಿ ಕೊಪ್ಪರ ‘ಸಿರಿನಾರಶಿಂಹಗೆ ‘ ಬೇಗ ||

Araati maduvena krushnamurutige ||

Araati maduve nari draupadige
Sirigaludisida marapitage saki ||

Angutagradinda gangeya padedantha
Mangalaprada Sirirangana caranake||

Vandisuvara Bava bandhava bidisuva
Nandagopana muddu kanda srikrushnage ||

Aradisuva raga duramaduva Ba
Kari koppara ‘sirinarasimhage ‘ bega ||

krishna · MADHWA · raghavendra · sloka

Krishna Charithra Manjari

ವಿಷ್ಣುರ್ಬ್ರಹ್ಮಾದಿದೇವೈ: ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀದ್
ದೇವಕ್ಯಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಘಾನ|
ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಚಾಸುರಂ ಪಾದಘಾತೈ-
ಶ್ಚಕ್ರಾವರ್ತಂ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ ಸೋವತಾನ್ಮಾಂ||೧||

ಯೋ ಮಾತುರ್ಜೃoಭಮಾಣೋ ಜಗದಿದಮಖಿಲಂ ದರ್ಶಯನ್ನಂಕರೂಡೋ
ಗರ್ಗೇಣಾಚೀರ್ಣನಾಮಾ ಕೃತರುಚಿರಮಾಹಾಬಾಲಲೀಲೋ ವಯಸ್ಯೈ:|
ಗೋಪೀಗೇಹೇಷು ಭಾಂಡಸ್ಥಿತಮುರುದಯಯಾ ಕ್ಷೀರದಧ್ಯಾದಿ ಮುಷ್ಣನ್
ಮೃನ್ನಾ ಭಕ್ಷೀತಿ ಮಾತು: ಸ್ವವದನಗಜಗದ್ಭಾಸಯನ್ ಭಾಸತಾಂ ಮೇ||೨||

ದಧ್ನೋಮತ್ರಸ್ಯ ಭಂಗಾದುಪಗಮಿತರುಷಾ ನಂದಪತ್ನ್ಯಾಥ ಬದ್ಧಃ
ಕೃಚ್ಪ್ರೇಣೋಲೂಖಲೇ ಯೋ ಧನಪತಿತನಯೌ ಮೋಚಯಾಮಾಸ ಶಾಪಾತ್|
ನಂದಾದ್ಯೈ: ಪ್ರಾಪ್ಯ ವೃಂದಾವನಮಿಹ ರಮಯನ್ ವೇಣುನಾದಾದಿಭಿರ್ಯೋ
ವತ್ಸಾನ್ಪಾನ್ವತ್ಸರೂಪಂ ಕ್ರತುಭುಗರಿಮಥೋ ಪೋಥಯನ್ಸೋವತಾನ್ಮಾಂ||೩||

ರಕ್ಷನ್ ವತ್ಸಾನ್ವಯಸ್ಯೈರ್ಬಕಮಭಿನದಥೋ ತಿಗ್ಮತುಂಡೇ ಗೃಹೀತ್ವಾ
ಪ್ರೀತಿಂ ಕರ್ತುಂ ಸಖೀನಾಂ ಖರಮಪಿ ಬಲತೋ ಘಾತಯನ್ ಕಾಲಿಯಾಹಿಮ್|
ಉನ್ಮಥ್ಯೋದ್ವಾಸ್ಯ ಕೃಷ್ಣಾಮತಿವಿಮಲಜಲಾಂ ಯೋ ವ್ಯಧಾದ್ದಾವವಹ್ನಿಂ
ಸುಪ್ತಾನಾವೃತ್ಯ ಗೋಷ್ಟೇ ಸ್ಥಿತಮಪಿಬದಸೌ ದುಷ್ವವೃಕ್ಷಚ್ಚಿದವ್ಯಾತ್||೪||

ದುರ್ಗಾರಣ್ಯಪ್ರವೇಶಾಚ್ಚ್ಯುತನಿಜಸರಣೀನ್ ಗೋಗಣಾನಾಹ್ವಯದ್ಯೋ
ದಾವಾಗ್ನಿಂ ತತ್ರ ಪೀತ್ವಾ ಸಮಪುಷದನುಗಾನ್ ಗೋಪಕಾನಾವಿಷಿಣ್ಣಾನ್ |
ಗೋಭಿರ್ಗೋಪೈ: ಪರಿತಃ ಸರಿದುದಕತಟಸ್ಥೋಪಲೇ ಭೋಜ್ಯಮನ್ನಂ
ಭುಕ್ತ್ವಾ ವೇಣೋರ್ನಿನಾದದ್ವ್ರಜಗತವನಿತಾಚಿತ್ತಹಾರೀ ಸಮಾವ್ಯಾತ್||೫||

ಕೃಷ್ಣೋಸ್ಮಾಕಂ ಪತಿ: ಸ್ಯಾದಿತಿ ಕೃತತಪಸಾಂ ಮಜ್ಜನೇ ಗೋಪಿಕಾನಾಂ
ನಗ್ನಾನಾಂ ವಸ್ತ್ರದಾತಾ ದ್ವಿಜವರವನಿತಾನೀತಮನ್ನಂ ಸಮಶ್ನನ್|
ಶ್ರಾಂತೈಗೋಪೈ: ಸಮಂ ಯೋ ಬಲಮಥನಬಲಾವಾಹೃತೇಸ್ಮಿನ್ ಸವೃಷ್ಟೌ
ಪ್ರೋದ್ಧ್ರುತ್ಯಾಹಾರ್ಯವರ್ಯಂ ನಿಜಜನಮಖಿಲಂ ಪಾಲಯನ್ ಪಾತ್ವಸೌ ಮಾಂ||೬||

ಗೋವಿಂದಾಖ್ಯೋಥ ತಾತಂ ಜಲಪತಿಹೃತಮಾನೀಯ ಲೋಕಂ ಸ್ವಕೀಯಂ
ಯಃ ಕಾಲಿಂದ್ಯಾ ನಿಶಾಯಾಮರಮಯದಮಲಜ್ಯೋತ್ಸ್ನಯಾ ದೀಪಿತಾಯಾಂ|
ನಂದಾದೀನಾಂ ಪ್ರದರ್ಶ್ಯ ವ್ರಜಗತವನಿತಾಗಾನಕೃಷ್ಟಾರ್ತಚಿತ್ತಾಃ
ಚಾರ್ವಂಗೀರ್ನರ್ಮವಾಕ್ಯೈ: ಸ್ತನಭರನಮಿತಾಃ ಪ್ರೀಣಯನ್ ಪ್ರೀಯತಾಂ ನಃ||೭||

ಅಂತರ್ಧತ್ತೇ ಸ್ಮ ತಾಸಾಂ ಮದಹರಣಕೃತೇ ತ್ವೇಕಯಾ ಕ್ರೀಡಮಾನಃ
ಸ್ವಸ್ಕಂಧಾರೋಹಣಾದ್ಯೈ: ಪುನರಪಿ ವಿಹಿತೋ ಗರ್ವಶಾಂತ್ಯೈ ಮ್ರುಗಾಕ್ಷ್ಯಾಃ|
ಖಿನ್ನಾನಾಂ ಗೋಪಿಕಾನಾಂ ಬಹುವಿಧನುತಿಭಿರ್ಯೋ ವಹನ್ ಪ್ರೀತಿಮಾವಿ:-
ಪ್ರಾಪ್ತೋ ರಾಸೋತ್ಸವೇನ ನ್ಯರಮಯದಬಲಾಃ ಪ್ರೀಯತಾಂ ಮೇ ಹರಿ: ಸಃ||೮||

ಹತ್ವಾ ಯಃ ಶಂಖಚೂಡಂ ಮಣಿಮಥ ಸಮದಾದಗ್ರಜಾಯಾರ್ತಗೋಪೀ
ಗೀತಾನೇಕಸ್ವಲೀಲೋ ಹತವೃಷಭಮಹಾಪೂರ್ವದೇವೋಮರೇಡ್ಯಃ|
ಕೇಶಿಪ್ರಾಣಾಪಹಾರೀ ಸುರಮುನಿವದನಪ್ರಾರ್ಥಿತಾಶೇಷಕೃತ್ಯೋ
ಹತ್ವಾ ಪುತ್ರಂ ಮಯಸ್ಯ ಸ್ವಜನಮಪಿಹಿತಂ ಮೋಚಯನ್ ಮೋಕ್ಷದಃ ಸ್ಯಾತ್||೯||

ಅಕ್ರೂರಾಕಾರಿತೋ ಯಾನ್ ವ್ರಜಯುವತಿಜನಾನ್ಸಾಂತ್ವಯಿತ್ವಾಭಿತಪ್ತಾನ್
ಸ್ವಂ ರೂಪಂ ಮಜ್ಜತೇಸ್ಮೈ ವಿಲಸಿತಮಹಿಗಂ ದರ್ಶಯಂಸ್ತೇನ ವಂದ್ಯಃ|
ಯೋ ಗತ್ವಾ ಕಂಸಾಧಾನೀಂ ಹೃತರಜಕಶಿರಾಶ್ಚಾರುವೇಷಃ ಸುದಾಮ್ನಃ
ಪ್ರೀತಿಂ ಕುರ್ವಂಸ್ತ್ರಿವಕ್ರಾಂ ವ್ಯತನುತ ರುಚಿರಾಂ ಪೌರಮಹ್ಯೋವತಾತ್ಸಃ||೧೦||

ಶಾರ್ವಂ ಭಂಕ್ತ್ವಾ ಧನುರ್ಯೋ ಬಲಮಪಿ ಧನುಷೋ ರಕ್ಷಕಂ ಕುಂಜರಂ ತಂ
ಮಲ್ಲಾಂಶ್ಚಾಣೂರಪೂರ್ವಾನಪಿ ಸಹಸಹಜೋ ಮರ್ದಯನ್ಸ್ತುಂಗಮಂಚಾತ್|
ಭೋಜೇಶಂ ಪಾತಯಿತ್ವಾ ವ್ಯಸುಮಕೃತ ನಿಜಾನ್ ನಂದಯನ್ ಪ್ರಾಪ್ಯ ಗರ್ಗಾತ್
ದ್ವೈಜಂ ಸಂಸ್ಕಾರಮಾಪ್ತೋ ಗುರುಮಥ ವಿದಿತಾಶೇಷವಿದ್ಯೋವತಾನ್ನಃ||೧೧||

ದತ್ವಾ ಪುತ್ರಂ ಪ್ರವಕ್ತ್ರೇ ಪ್ರತಿಗತಮಧುರಃ ಸಾಂತ್ವಯನ್ನುದ್ಧವಾಸ್ಯಾ-
ದ್ಗೋಷ್ಟಸ್ಥಾನ್ ನಂದಪೂರ್ವಾನರಮಯದಬಲಾಂ ಪ್ರೀತಿಕೃದ್ಯಃ ಶುಭಸ್ಯ|
ಅಕ್ರೂರಸ್ಯಾಥ ತೇನ ಪ್ರತಿವಿದಿತಪೃಥಾಪುತ್ರಕೃತ್ಯೋ ಜರಾಯಾಃ
ಸೂನುಂ ನಿರ್ಭಿನ್ನಸೇನಂ ವ್ಯತನುತ ಬಹುಶೋ ವಿದ್ರುತಂ ನಃ ಸ ಪಾಯಾತ್||೧೨||

ಪುರ್ಯಾ ನಿರ್ಗತ್ಯ ರಾಮಾದಥ ಸಹಮುಸಲೀ ಪ್ರಾಪ್ಯ ಕೃಷ್ಣೋಭ್ಯನುಜ್ಞಾಂ
ಗೋಮಂತಂ ಚಾಪಿ ಮೌಲಿಂ ಖಗಪತಿವಿಹಿತಾಂ ವಾಸುದೇವಂ ಸೃಗಾಲಂ|
ಹತ್ವಾ ಶತ್ರುಂ ಚ ಪುರ್ಯಾಮಧಿಜಲಧಿ ಪುರೀಂ ನಿರ್ಮಿತಾಂ ಬಂಧುವರ್ಗಾನ್
ನಿತ್ಯೇ ಯಃ ಸೋವತಾನ್ನಃ ಪ್ರಮಥಿತಯವನೋ ಮೌಚುಕುಂದಾಕ್ಷಿವಹ್ನೇ:||೧೩||

ರಾಜ್ಞಾ ಸಂಸ್ತೂಯಮಾನೋ ಹತವಯನಬಲೋ ಭೀತವನ್ಮಾಗಧೇಶಾ-
ದ್ಗೋಮಂತಂ ಪ್ರಾಪ್ಯ ಭೂಯೋ ಜಿತಮಗಧಪತಿರ್ಜಾತಶಾಂತಾಗ್ನಿಶೈಲಃ|
ಆಗತ್ಯ ದ್ವಾರಕಾಂ ಯೋ ಹೃದಿಕಸುತಗಿರಾ ಜ್ಞಾತಕೌಂತೇಯಕೃತ್ಯಃ
ಪಶ್ಯತ್ಸ್ವಾದಾಯ ಭೈಷ್ಮೀಂ ನೃಷು ಯುಧಿ ಜಿತಾವಾನ್ಭೂಭೃತಃ ಪ್ರೀಯತಾಂ ನಃ||೧೪||

ವೈರೂಪ್ಯಂ ರುಗ್ಮಿಣೋ ಯೋಕೃತ ಮಣಿಸಹಿತಂ ಜಾಂಬವದ್ದೇಹಜಾತಾಂ
ಸತ್ಯಾಂ ತೇನೈವ ಯುಕ್ತಾಮಪಿ ಪರಿಜಗೃಹೇ ಹಸ್ತಿನಂ ಕುಲ್ಯಹೇತೋ:|
ಯಾತೋ ವ್ಯಸ್ಯಾತ್ರ ಸತ್ಯಾಶುಚಮಥ ಸಮಗಾದ್ದ್ವಾರಕಾಂ ಸತ್ಯಯೇತೋ
ದ್ರಷ್ಟುಂ ಪಾರ್ಥಾನ್ಸಕೃಷ್ಣಾ೦ದ್ರುಪದಪುರಮಗಾದ್ವಿದ್ಧಲಕ್ಷ್ಯಾನ್ಸ ಪಾಯಾತ್||೧೫||

ಕೃಷ್ಣಃ ಪ್ರಾಪ್ಯಾಥ ಸತ್ರಾಜಿದಹಿತವಧಕೃದ್ಯಃ ಶ್ವಫಲ್ಕಸ್ಯ ಸೂನೌ
ರತ್ನಂ ಸಂದರ್ಶ್ಯ ರಾಮಂ ವ್ಯಧಿತ ಗತರೂಷಂ ದ್ರಷ್ಟುಕಾಮಃ ಪ್ರತಸ್ಥೇ|
ಇಂದ್ರಪ್ರಸ್ಥಸ್ಥಸ್ಥಪಾರ್ಥಾನಹ ಸಹವಿಜಯೋ ಯಾಮುನಂ ತೀರಮಾಯನ್
ಕಾಲಿ೦ದೀಂ ತತ್ರ ಲಬ್ಧ್ವಾ ಯಮಸುತಪುರಕೃತ್ ಪಾತು ಮಾಂ ದ್ವಾರಕಾಸ್ಥಃ||೧೬||

ಯೋ ಜಹ್ನೇ ಮಿತ್ರವಿಂದಾಮಥ ದೃಢವೃಷಭಾನ್ ಸಪ್ತ ಬಧ್ವಾಪಿ ನೀಲಾಂ
ಭದ್ರಾಂ ಮದ್ರೇಶಪುತ್ರೀಮಪಿ ಪರಿಜಗೃಹೇ ಶಕ್ರ ವಿಜ್ಞಾಪಿತಾರ್ಥಃ|
ತಾರ್ಕ್ಷ್ಯರೂಢಃ ಸಭಾರ್ಯೋ ಹಿಮಗಿರಿಶಿಖರೇ ಭೌಮದುರ್ಗಂ ಸಮೇತ್ಯ
ಛಿತ್ವಾ ದುರ್ಗಾಣಿ ಕೃಂತ್ವಾ ಮುರಗಲಮರಿಣಾ ದೇವತೇಡ್ಯಃ ಸ ಮಾವ್ಯಾತ್||೧೭||

ತ್ರಿಂಶತ್ಪಂಚಾವಧೀಧ್ಯಃ ಸಚಿವವರಸುತಾನ್ ಭೂಮಿಜೇನಾತಿಘೋರಂ
ಯುದ್ಧಂ ಕೃತ್ವಾ ಗಜಾದ್ಯೈರರಿಹೃತಶಿರಸಂ ತಂ ವ್ಯಧಾದ್ಭೂಸ್ತುತೋಥ|
ಕೃತ್ವಾ ರಾಜ್ಯೇಸ್ಯ ಸೂನುಂ ವರಯುವತಿಜನಾನ್ ಭೂರಿಶಶ್ಚಾರುವೇಷಾನ್
ಪ್ರಾಪಯ್ಯ ದ್ವಾರಕಾಂ ಸೋಕೃತ ಮುದಮದಿತೇ: ಕುಂಡಲಾಭ್ಯಾಮವೇನ್ಮಾಂ||೧೮||

ಇಂದ್ರಾರಾಧ್ಯೋಮರೆಂದ್ರಪ್ರಿಯತಮಮಗಮಾಹೃತ್ಯ ದೇವಾನ್ ವಿಜಿತ್ಯ
ಪ್ರಾಪ್ಯಾಥ ದ್ವಾರಕಾಂ ಯಃ ಸುತಮತಿರುಚಿರಂ ರುಗ್ಮಿಣೀಶಃ ಪ್ರಪೇದೇ|
ಭ್ರಾತೃವ್ಯಂ ಪೌಂಡ್ರಕಾಖ್ಯಂ ಪುರರುಧಮತನೋತ್ ಕೃತ್ತಶೀರ್ಷಂ ತದೀಯಾ-
ಪತ್ಯೋತ್ಪನ್ನಾಂ ಚ ಕೃತ್ಯಾಂ ರಥಚರಣರುಚಾ ಕಾಲಯನ್ ಕಾಮಧುಕ್ ಸ್ಯಾತ್||೧೯||

ಕೃಷ್ಣಃ ಸೂರ್ಯೋಪರಾಗೇ ನಿಜಯುವತಿಗಣೈರ್ಭಾರ್ಗವಂ ಕ್ಷೇತ್ರಮಾಪ್ತ-
ಸ್ತತ್ರಾಯಾತಾನ್ ಸ್ವಬಂಧೂನ್ ಮುನಿಗಣಮಪಿ ಸಂತೋಷ್ಯ ಯಜ್ಞಂ ಸ್ವಪಿತ್ರಾ|
ಯೋನುಷ್ಟಾಪ್ಯಾಪ್ಯ ನೈಜಂ ಪುರಮಥ ವದಿತಾನೇಕತತ್ತ್ವಾನಿ ಪಿತ್ರೇ
ಮಾತು: ಪುತ್ರಾನ್ ಪ್ರದರ್ಶ್ಯಾಕೃತ ಹಿತಮಹಿತಂ ಮೇಪನುದ್ಯಾತ್ ಸ ಈಶಃ||೨೦||

ರುಗ್ಮಿಣ್ಯಾ ನರ್ಮವಾಕ್ಯೈರರಮತ ಬಹುಭಿ: ಸ್ತ್ರೀಜನೈರ್ಯೋಥ ಪುತ್ರಾ-
ನೇಕೈಕಸ್ಯಾಂ ಪ್ರಪೇದೇ ದಶ ದಶ ರುಚಿರಾನ್ ಪೌತ್ರಕಾನಪ್ಯನೇಕಾನ್|
ಪೌತ್ರಸ್ಯೋದ್ವಾಹಕಾಲೇ ಭೃಶಕುಪಿತ ಬಲಾದ್ರುಗ್ಮಿಣಂ ಘಾತಯಿತ್ವಾ
ನಂದನ್ ಯೋಷಿದ್ಗಣೇನ ಪ್ರತಿಗೃಹಮಬಲಾಪ್ರೀತಿಕಾರೀ ಗತಿರ್ಮೇ||೨೧||

ನಾನಾರತ್ನಪ್ರದೀಪ್ತಾಸಮವಿಭವಯುತದ್ವ್ಯಷ್ಟಸಾಹಸ್ರಕಾಂತಾ-
ಗೇಹೇಷ್ವನ್ನನ್ ಶಯಾನಃ ಕ್ವ ಚ ಜಪಮಗೃಯಾದೀನಿ ಕುರ್ವನ್ ಕ್ವಚಿಚ್ಚ|
ದೀವ್ಯನ್ನಕ್ಷೈರ್ಬ್ರುವಾಣಃ ಪ್ರವಚನಮಪರೈರ್ಮಂತ್ರಯನ್ನೇವಮಾದಿ-
ವ್ಯಾಪರಾನ್ನಾದರಸ್ಯ ಪ್ರತಿಸದಮಹೋ ದರ್ಶಯನ್ ನಃ ಸ ಪಾಯಾತ್||೨೨||

ಪ್ರಾತರ್ಧ್ಯಾಯನ್ ಪ್ರಸನ್ನಃ ಕೃತನಿಜವಿಹಿತಃ ಸತ್ಸಭಾಂ ಪ್ರಾಪ್ಯ ಕೃಷ್ಣೋ
ದೂತಂ ರಾಜ್ಞಾಂ ಪ್ರತೋಷ್ಯಾಮರಮುನಿವಿದಿತಾಶೇಷಕೃತ್ಯಃ ಪ್ರಯಾಸೀತ್|
ಶಕ್ರಪ್ರಸ್ಥಂ ಚಮೂಭಿರ್ಬಹು ವಿಭವಯುತಂ ಬಂಧುಭಿರ್ಮಾನಿತೋಯಂ
ಭೀಮೇನಾಪಾತ್ಯ ಬಾರ್ಹದ್ರಥಮಥ ನೃಪತೀನ್ ಮೋಚಯನ್ಮೇ ಪ್ರಸೀದೇತ್||೨೩||

ಪುತ್ರಂ ರಾಜ್ಯೇಸ್ಯ ಕೃತ್ವಾ ಹೃತಶಿರಸಮಥೋ ಚೇದಿರಾಜಂ ವಿಧಾಯ
ಪ್ರೋದ್ಯಂತಂ ರಾಜಸೂಯಂ ಯಮಸುತವಿಹಿತಂ ಸಂಸ್ಥಿತಂ ಯೋ ವಿಧಾಯ|
ಶಕ್ರಪ್ರಸ್ಥಾತ್ ಪ್ರಯಾತೋ ನಿಜನಗರಮಸೌ ಸಾಲ್ವಭಗ್ನಂ ಸಮೀಕ್ಷ್ಯ
ಕ್ರುದ್ದ್ಹೋ ಘನ್ನಬ್ಧಿಗಂ ತಂ ಶಿವವರಬಲಿನಂ ಯಾನ್ ಪುರಂ ಪಾತು ನಿತ್ಯಂ||೨೪||

ವಿಪ್ರಾದಾಕರ್ಣ್ಯ ಧರ್ಮಂ ವನಗತಮನುಜೈ: ಸಾಂತ್ವಯಿತ್ವೈತ್ಯ ಸರ್ವಾ-
ನಭ್ಯೇತ್ಯ ದ್ವಾರಕಾಂ ಯೋ ನೃಗಮಥ ಕುಜನಿಂ ದಿವ್ಯರೂಪಂ ಚಕಾರ|
ಗತ್ವಾ ವೈದೇಹಗೇಹಂ ಕತಿಪಯದಿವಸಾಂಸ್ತತ್ರ ನೀತ್ವಾತಿಭಕ್ತೌ
ಸಂತೋಷ್ಯ ದ್ವಾರಕಾಂ ಯಾನ್ ಬಹುಬಲಸಮತೋಯನ್ನುಪಪ್ಲಾವ್ಯಮವ್ಯಾತ್||೨೫||

ದೌತ್ಯಂ ಕುರ್ವನ್ನನಂತಾ ನಿಜರುಚಿರತನೂರ್ದರ್ಶಯನ್ ದಿವ್ಯದೃಷ್ಟೇ-
ರ್ಗೀತಾತತ್ತ್ವೊಪದೇಶಾದ್ರಣಮುಖವಿಜಯಸ್ಯಾಚರನ್ ಸಾರಥಿತ್ವಂ|
ನೀತ್ವಾ ಕೈಲಾಸಮೇನಂ ಪಶುಪತಿಮುಖತೋ ದಾಪಯಿತ್ವಾಸ್ತ್ರಮಸ್ಮೈ
ಭೀಮೇನಾಪಾತ್ಯ ದುಷ್ಟಂ ಕ್ಷಿತಿಪತಿಮಕರೋದ್ಧರ್ಮರಾಜಂ ತಮೀಡೇ||೨೬||

ಪ್ರಾಪ್ತಃ ಸ್ಥಾನಂ ಯದೂನಾಂ ಪ್ರಿಯಸಖಮಕೃತಾವಾಪ್ತಕಾಮಂ ಕುಚೇಲಂ
ಕುರ್ವನ್ ಕರ್ಮಾಶ್ವಮೇಧಂ ನಿಜಭವನಮಥೋ ದರ್ಶಯಿತ್ವಾರ್ಜುನಾಯ|
ಪುತ್ರಾನ್ ವಿಪ್ರಾಯ ದತ್ವಾ ಸಹಸಹಜಮಸೌ ದಂತವಕ್ರಂ ನಿಪಾತ್ಯ
ಪ್ರಾಪ್ಯಾಥ ದ್ವಾರಕಾಂ ಸ್ವಾಂ ಸಮವತು ವಿಹರನ್ನುದ್ಧವಾಯೋಕ್ತತತ್ತ್ವಃ||೨೭||

ರಕ್ಷನ್ ಲೋಕಾನ್ ಸಮಸ್ತಾನ್ ನಿಜಜನನಯನಾಂದಕಾರೀ ನಿರಸ್ತಾವದ್ಯಃ
ಸೌಖ್ಯೈಕಮೂರ್ತಿ: ಸುರತರುಕುಸುಮೈ: ಕೀರ್ಯಮಾಣೋ ಮರೇ೦ದ್ರೈ:|
ಸಿದ್ಧೈರ್ಗಂಧರ್ವಪೂರ್ವೈರ್ಜಯಜಯವಚನೈ: ಸ್ತೂಯಮಾನೋತ್ರ ಕೃಷ್ಣಃ
ಸ್ತ್ರೀಭಿ: ಪುತ್ರೈಶ್ಚ ಪೌತ್ರೈ: ಸ ಜಯತಿ ಭಗವಾನ್ ಸರ್ವಸಂಪತ್ಸಮೃದ್ಧಃ||೨೮||

ಇತಿ ಶ್ರೀಕೃಷ್ಣಚಾರಿತ್ರಮಂಜರೀ ಲೇಶತಃ ಕೃತಾ
ರಾಘವೇಂದ್ರೇಣ ಯತಿನಾ ಭೂಯಾತ್ ಕೃಷ್ಣಪ್ರಸಾದದಾ||೨೯||

ಶ್ರೀರಾಘವೇಂದ್ರತೀರ್ಥ ಚರಣ ವಿರಚಿತಾ ಶ್ರೀ ಕೃಷ್ಣಚಾರಿತ್ರ ಮಂಜರೀ
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು


Vishnurbrahmadidevai: kshitibaraharane prarthitah pradurasid
Devakyam namdanamdi sisuvadhavihitam putanam yo jagana|
Utthanautsukyakale rathacaranagatam casuram padagatai-
Scakravartam ca matra gururiti nihito butale sovatanmam||1||

Yo maturjruobamano jagadidamakilam darsayannamkarudo
Gargenacirnanama krutaruciramahabalalilo vayasyai:|
Gopigeheshu bandasthitamurudayaya kshiradadhyadi mushnan
Mrunna bakshiti matu: svavadanagajagadbasayan basatam me||2||

Dadhnomatrasya bamgadupagamitarusha namdapatnyatha baddhah
Krucprenolukale yo dhanapatitanayau mocayamasa sapat|
Namdadyai: prapya vrundavanamiha ramayan venunadadibiryo
Vatsanpanvatsarupam kratubugarimatho pothayansovatanmam||3||

Rakshan vatsanvayasyairbakamabinadatho tigmatunde gruhitva
Pritim kartum sakinam Karamapi balato gatayan kaliyahim|
Unmathyodvasya krushnamativimalajalam yo vyadhaddavavahnim
Suptanavrutya goshte sthitamapibadasau dushvavrukshaccidavyat||4||

Durgaranyapravesaccyutanijasaranin gogananahvayadyo
Davagnim tatra pitva samapushadanugan gopakanavishinnan |
Gobirgopai: paritah saridudakatatasthopale bojyamannam
Buktva venorninadadvrajagatavanitacittahari samavyat||5||

Krushnosmakam pati: syaditi krutatapasam majjane gopikanam
Nagnanam vastradata dvijavaravanitanitamannam samasnan|
Sramtaigopai: samam yo balamathanabalavahrutesmin savrushtau
Proddhrutyaharyavaryam nijajanamakilam palayan patvasau mam||6||

Govindakyotha tatam jalapatihrutamaniya lokam svakiyam
Yah kalindya nisayamaramayadamalajyotsnaya dipitayam|
Namdadinam pradarsya vrajagatavanitaganakrushtartacittah
Carvamgirnarmavakyai: stanabaranamitah prinayan priyatam nah||7||

Antardhatte sma tasam madaharanakrute tvekaya kridamanah
Svaskandharohanadyai: punarapi vihito garvasantyai mrugakshyah|
Kinnanam gopikanam bahuvidhanutibiryo vahan pritimavi:-
Prapto rasotsavena nyaramayadabalah priyatam me hari: sah||8||

Hatva yah samkacudam manimatha samadadagrajayartagopi
Gitanekasvalilo hatavrushabamahapurvadevomaredyah|
Kesipranapahari suramunivadanaprarthitaseshakrutyo
Hatva putram mayasya svajanamapihitam mocayan mokshadah syat||9||

Akrurakarito yan vrajayuvatijanansantvayitvabitaptan
Svam rupam majjatesmai vilasitamahigam darsayamstena vandyah|
Yo gatva kamsadhanim hrutarajakasirascaruveshah sudamnah
Pritim kurvamstrivakram vyatanuta ruciram pauramahyovatatsah||10||

Sarvam banktva dhanuryo balamapi dhanusho rakshakam kunjaram tam
Mallamschanurapurvanapi sahasahajo mardayanstumgamancat|
Bojesam patayitva vyasumakruta nijan namdayan prapya gargat
Dvaijam samskaramapto gurumatha viditaseshavidyovatannah||11||

Datva putram pravaktre pratigatamadhurah santvayannuddhavasya-
Dgoshtasthan nandapurvanaramayadabalam pritikrudyah subasya|
Akrurasyatha tena pratividitapruthaputrakrutyo jarayah
Sunum nirbinnasenam vyatanuta bahuso vidrutam nah sa payat||12||

Purya nirgatya ramadatha sahamusali prapya krushnobyanuj~jam
Gomamtam capi maulim kagapativihitam vasudevam srugalam|
Hatva satrum ca puryamadhijaladhi purim nirmitam bandhuvargan
Nitye yah sovatannah pramathitayavano maucukumdakshivahne:||13||

Raj~ja samstuyamano hatavayanabalo bitavanmagadhesa-
Dgomamtam prapya buyo jitamagadhapatirjatasamtagnisailah|
Agatya dvarakam yo hrudikasutagira j~jatakaumteyakrutyah
Pasyatsvadaya baishmim nrushu yudhi jitavanbubrutah priyatam nah||14||

Vairupyam rugmino yokruta manisahitam jambavaddehajatam
Satyam tenaiva yuktamapi parijagruhe hastinam kulyaheto:|
Yato vyasyatra satyasucamatha samagaddvarakam satyayeto
Drashtum parthansakrushna0drupadapuramagadviddhalakshyansa payat||15||

Krushnah prapyatha satrajidahitavadhakrudyah svapalkasya sunau
Ratnam samdarsya ramam vyadhita gatarusham drashtukamah pratasthe|
Imdraprasthasthasthaparthanaha sahavijayo yamunam tiramayan
Kali0dim tatra labdhva yamasutapurakrut patu mam dvarakasthah||16||

Yo jahne mitravimdamatha drudhavrushaban sapta badhvapi nilam
Badram madresaputrimapi parijagruhe Sakra vij~japitarthah|
Tarkshyarudhah sabaryo himagirisikare baumadurgam sametya
Citva durgani krumtva muragalamarina devatedyah sa mavyat||17||

Trimsatpancavadhidhyah sacivavarasutan bumijenatigoram
Yuddham krutva gajadyairarihrutasirasam tam vyadhadbustutotha|
Krutva rajyesya sunum varayuvatijanan burisascaruveshan
Prapayya dvarakam sokruta mudamadite: kundalabyamavenmam||18||

Indraradhyomarendrapriya tamamagamahrutya devan vijitya
Prapyatha dvarakam yah sutamatiruciram rugminisah prapede|
Bratruvyam paumdrakakyam purarudhamatanot kruttasirsham tadiya-
Patyotpannam ca krutyam rathacaranaruca kalayan kamadhuk syat||19||

Krushnah suryoparage nijayuvatiganairbargavam kshetramapta-
Statrayatan svabamdhun muniganamapi santoshya yaj~jam svapitra|
Yonushtapyapya naijam puramatha vaditanekatattvani pitre
Matu: putran pradarsyakruta hitamahitam mepanudyat sa isah||20||

Rugminya narmavakyairaramata bahubi: strijanairyotha putra-
Nekaikasyam prapede dasa dasa ruciran pautrakanapyanekan|
Pautrasyodvahakale brusakupita baladrugminam gatayitva
Namdan yoshidganena pratigruhamabalapritikari gatirme||21||

Nanaratnapradiptasamavibavayutadvyashtasahasrakamta-
Geheshvannan sayanah kva ca japamagruyadini kurvan kvacicca|
Divyannakshairbruvanah pravacanamaparairmamtrayannevamadi-
Vyaparannadarasya pratisadamaho darsayan nah sa payat||22||

Pratardhyayan prasannah krutanijavihitah satsabam prapya krushno
Dutam raj~jam pratoshyamaramunividitaseshakrutyah prayasit|
Sakraprastham camubirbahu vibavayutam bamdhubirmanitoyam
Bimenapatya barhadrathamatha nrupatin mocayanme prasidet||23||

Putram rajyesya krutva hrutasirasamatho cedirajam vidhaya
Prodyamtam rajasuyam yamasutavihitam samsthitam yo vidhaya|
Sakraprasthat prayato nijanagaramasau salvabagnam samikshya
Krudd~ho gannabdhigam tam sivavarabalinam yan puram patu nityam||24||

Vipradakarnya dharmam vanagatamanujai: samtvayitvaitya sarva-
Nabyetya dvarakam yo nrugamatha kujanim divyarupam cakara|
Gatva vaidehageham katipayadivasamstatra nitvatibaktau
Samtoshya dvarakam yan bahubalasamatoyannupaplavyamavyat||25||

Dautyam kurvannananta nijaruciratanurdarsayan divyadrushte-
Rgitatattvopadesadranamukavijayasyacaran sarathitvam|
Nitva kailasamenam pasupatimukato dapayitvastramasmai
Bimenapatya dushtam kshitipatimakaroddharmarajam tamide||26||

Praptah sthanam yadunam priyasakamakrutavaptakamam kucelam
Kurvan karmasvamedham nijabavanamatho darsayitvarjunaya|
Putran vipraya datva sahasahajamasau dantavakram nipatya
Prapyatha dvarakam svam samavatu viharannuddhavayoktatattvah||27||

Rakshan lokan samastan nijajananayanandakari nirastavadyah
Saukyaikamurti: suratarukusumai: kiryamano mare0drai:|
Siddhairgandharva purvairjayajayavacanai: stuyamanotra krushnah
Stribi: putraisca pautrai: sa jayati bagavan sarvasampatsamruddhah||28||

Iti srikrushnacharitramamjari lesatah kruta
Raghavendrena yatina buyat krushnaprasadada||29||

Sriraghavendratirtha carana viracita sri krushnacharitra mamjari
Bharatiramana mukyapranantargata sri krushnarpanamastu

krishna · MADHWA · vyasarayaru

Kalingana metti

ಕಾಳಿಂಗನಾ ಮೆಟ್ಟೆ ನಾಟ್ಯವಾಡಿದ ಕಂಜನಾಭ ಕೃಷ್ಣನು ||pa||

ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ
ತರಳತನದಲ್ಲಿ ಯಮುನೆಯ ಮಡುವಿನಲ್ಲಿಆಡುತ್ತ ಪಾಡುತ್ತ ||a.pa||

ಕಾಲಲಿ ಗೆಜ್ಜೆ ಘಲುಘಲು ಘಲುಕೆನ್ನೆಫಾಲದಿ ತಿಲಕವು ಹೊಳೆ ಹೊಳೆಯುತ್ತ
ಜ್ವಲಿತ ಮಣಿಮಯ ಲಲಿತ ಪದಕಹಾರಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ||1||

ಸುರರು ದುಂದುಭಿಯ ಢಣಢಣ ಢಣರೆಂದುಮೊರೆಯೆ ತಾಳಗಳು ಝಣಝಣ ಝಣಾರೆಂದು
ಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲುನಾರದ ತುಂಬುರ ಸಿದ್ಧರು ವಿದ್ಯಾ-ಧರರು ಅಂಬರದಲ್ಲಿ ಆಡುತ್ತ ಪಾಡಲು||2||

ಯೋಗಿಗಳೆಲ್ಲ ಜಯ ಜಯ ಜಯಯೆನ್ನೆಭೋಗಿಗಳೆಲ್ಲ ಭಯಭಯ ಭಯವೆನ್ನೆ
ನಾಗಕನ್ಯೆಯರು ಅಭಯ ಅಭಯವೆನ್ನೆನಾಗಶಯನ ಸಿರಿಕೃಷ್ಣ ಜನನಿಯ ಕಂಡುಬೇಗನೆ ಬಿಗಿದಪ್ಪಿ ಮುದ್ದನು ತೋರಿದ||3||

Kalingana metti natyavadida kanjanaba krushnanu | pa |

Kalingana metti adida Baradalli srivatsa uradalli koralalli vanamale
Taralatanadalli yamuneya maduvinalli adutta padutta | a.pa |

Kalali gejje Gulu Gulukenne
Galadi tilakavu holehole holeyutta
Alita manimaya lalita padakahara
Alita kanti belaguta dikkugalali | 1 |

Suraru dundubiya dhanadhana dhanarendu
Moreya talagalu junajuna junarendu
Harabrahma suraru tathai tathai enalu | narada tumbara siddharu vidya
Dhararu ambaradali Adutta padalu | 2 |

Yogigalella jaya jaya jayavenne
Bogigalella Baya Baya Bayavenne
Nagakanyeyaru abaya abayavenne | nagasayana sirikrushna jananiya kandu
Begane bigidappi muddanu torida | 3 |

dasara padagalu · krishna · vyasarayaru

Kolalanuduva chaduranyare

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು ||pa||

ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು||1||

ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾ
ಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು ||2||

ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳು|
ಸಾರಿ ಸಾರಿ ಈ ಕೃಷ್ಣನು ಈಗಲೆತುರಗಳ ಕಾಯ್ವ ಕದಂಬ ವನದೊಳು ||3||

Kolalanuduva chaduranyare pelammayya |
Talirandadi tapolevakaradi pididu |

Nadadi tumbitu govardhanagiri |
Yadavakulanaba nereditu Kagakula
Sadhisi nodalu krushnana Igale |
Sadhyavene brundavanadolu ||1||

Mevu maretavu govugalellavu |
Savadhanadi haridalu yamuna
Avu kavutali govalarellaru |
Havabavadali brundavanadolu ||2||

Suraru suridarakasadi sumamale |
Saridu pogi node brundavanadolu |
Sari sari srikrushnana Igale |
Turugala kayva kadamba vanadolu | |3||

dasara padagalu · krishna · MADHWA · purandara dasaru

Rangana nodire

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ ||ಪ||

ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ  ||೧||

ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ  ||೨||

ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ  ||೩||

Rangana nodire rajakuvara nara
Singa deva namma devaki sutana ||pa||

Hammina tayita tola bapuriyo
Gammane gallemba gejjeya dhvaniyo
Summahimana kiviyalli caukuliyo
Timmaraya nitta sobagina bageyo ||1||

Sukravarada pujegombavana
Sakkare pal mosaru benne melluvana
Gakkane surarige amrutavittavana
Rakkasa kulavairi ravanantakana ||2||

Papavinasini snanava madi
Papagalellavu begabittodi
I pari dina dina muruti nodi
Sripati purandara vithalana padi ||3||

dasara padagalu · krishna · MADHWA · Vadirajaru

I muddu Krishna I kshanada

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು
ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ||

ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ
ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ|
ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ
ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು||

ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರ
ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ|
ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ
ಸಿರಿನಾಮ ಮುಕುಟ ನಾಸಿಕದ ವರಮಣಿಯ||

ಸಕಲ ದೇವೊತ್ತಮನೆ ಸರ್ವಗುಣ ಸಂಪೂರ್ಣ
ಅಖಿಳಾಗಮಸ್ತುತನೆ ಅಪ್ರಾಕೃತನೆ|
ಅಖಿಲ ಜೀವರ ಭಿನ್ನನೆನಿಪ ಹಯವದನನ
ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ||

I muddu krsnana I kshanada sukhave saku shri madhva muniya mane deiva udupina krsna||pa||

Celuva carna dvandva janthe janurukati vali pankhi jathara vaksa kambu kandarada
nali tolu muddu mukha nayana nasika kanya suli gurula mastakada nalinana navada sobada||1||

Iru gejje kadi pende gante katti sutra varahara padaka shrivatsa kaustubha ratna
guru mudra kankanangada kundala prabheya siri nama makuta nasikada maniya||2||

Sakala devottamana sarva guna purnana akalanka akhilagama stutana aprartritana
akhila jivottamana cenna hayavadanana sukhara kadegolu nenugada pidivippana||3||