ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ
ಮೋದದಿಂ ಸಲಿಸುವ ಮನದಿಷ್ಟವ
ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ
ಮಾಧವನೇ ನೇಮಿಸಿಪ್ಪ ಈಯಧಿಕಾರವ
ಆದರದಿಂದ ಅವರವರೊಳು ನಿಂದು ಕಾರ್ಯಗಳ
ಭೇದಗೊಳಿಸದೆ ಮಾಳ್ಪ ಪುರಂದರವಿಠಲ ||
Ādiyali gajamukhana arcisi ārambhisalu
āva bage kāryatati sid’dhigoḷisi
mōdadiṁ salisuva manadiṣṭava
sādhu janarella kēḷi sakala surariṅge
mādhavanē nēmisippa īyadhikārava
ādaradinda avaravaroḷu nindu kāryagaḷa
bhēdagoḷisade māḷpa purandaraviṭhala ||