dasara padagalu · MADHWA · mohana dasaru · vedavyasa

Yeno ee vesha vedavyasa

ಏನೋ ಈ ವೇಷ ವೇದವ್ಯಾಸ ಏನೋ ಈ ವೇಷ ||pa||

ಭಾನುಕೋಟಿ ಪ್ರಕಾಶ ಬದರೀ ನಿವಾಸ ||a.pa||

ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ
ಕೌಪೀನ ಧರಿಸಿದ ಕೌತುಕವೇನಯ್ಯ ||1||

ಮುತ್ತು ಮಾಣಿಕ್ಯ ನವರತ್ನ ಮಕುಟವಿರೆ
ನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು ||2||

ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲ
ಧರೆಯಾಳು ಬೋರೆಯ ಮರದಡಿಯಲಿರುವುದು ||3||

Yeno ee vesha vedavyasa||p||

Banu koti prakashaa badari nivasa||A.P||

Mutthu manikya mukuta veere
netthili genjade potthi kondippudhu|1|

drowpathi kareyalapaarvasthravanitthe
kowpina dharisidha kouthukavenayya|2|

vara vaikuntavannu bittu mohana vittalanna
dhareyolu poreya maradhadili iruvudhu|3|

dasara padagalu · MADHWA · purandara dasaru · srinivasa · srinivasa kalyana

Srinivasa kalyana by Puranadara dasaru

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ |
ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧||
ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ | ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ||೨||
ಇರುತಿರಲು ಒಂದಿನ ತುರಗವನೆ ಸ್ಮರಿಸುತಲಿ ತುರಗ ಬರಲು ಕಂಡು ಮುದದಿ ತಾನೇರಿ |
ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು ಕರುಣಾಸಾಗರ ಒಂದು ವನವ ಕಂಡನು ||೩||
ವನದಲ್ಲಿ ವನಜಾಕ್ಷಿ ರಾಜಪುರ್ತಿಯ ಕಂಡು ಮನಕೆ ಬಂದಂತಾಡಿ ಕಲಹ ಮಾಡಿದರು |
ಮನಸಿಜ ತಾನು ಅಶ್ವವ ಕಳಕೊಂಡು ಘನವಾದ ಗಿರಿ ಏರಿ ಮಲಗಿದ ಹರಿಯು ||೪||
ನಗಧರ ಮಲಗಲು ಬಕುಳಾವತಿಯು ಆಗ ಬಗೆ ಬಗೆ ಕೇಳಲು ಶೋಕದಿಂ ನುಡಿದ |
ಗಗರಾಜನ ಪುತ್ರಿ ಪದ್ಮಾವತಿಯ ಕಂಡು ಹಗಲು ಇರಳು ಆಕೆ ಮುಖವ ಸ್ಮರಿಸುವನು ||೫||
ಅವಳಿಗೋಸುಗವಾಗಿ ಇದ್ದಲ್ಲಿಗೆ ಹೋದೆ ಅವಳಿಂದ ಎನ್ನಶ್ವ ಹತವಾಯಿತಮ್ಮ |
ಅವಳ ಹೊರೆತು ಎನ್ನ ಪ್ರಾಣವೇ ನಿಲ್ಲದು ಅವಳ ಘಟನೆಯ ನೀನು ಮಾಡಬೇಕಮ್ಮ ||೬||
ಅಂದ ಮಾತನು ಕೇಳಿ ಬಕುಳಾವತಿಯು ಆಗ ಆನಂದದಿಂ ರಾಜಪುರಕೆ ತೆರಳಿದಳು |
ಸುಂದರಿಯರ ಕಾರ್ಯ ಸ್ಥಿರವಾಗದೆಂದು ಚೆಂದುಳ್ಳ ಸ್ತ್ರೀರೂಪ ಧರಿಸಿದನು ಹರಿಯು ||೭||
ಕೊರವಂಜಿ ತಾನಾಗಿ ನೃಪನ ಪುರಕೆ ಹೋಗಿ ಧರಣಿದೇವಿಯ ಮುಂದೆ ಶಕುನ ಹೇಳಿದನು |
ತಿರುಗಿ ಬರಲಾತಗೆ ಮಗಳ ಕೊಡುವೆನೆಂದು ಹರಿಗೆ ನಿಶ್ಚಯಮಾಡಿ ಶಂಕರ ಕಳುಹಿಸಿದನು ||೮||
ತಾಪಸೋತ್ತಮ ಬಂದು ಪತ್ರವನೆ ಕೊಡಲು ಶ್ರೀಪತಿಯು ತಾನೋದಿ ಬೆನ್ಹಿಂದೆ ಬರೆದ |
ಆ ಪರಮ ವಂದ್ಯ ತಾ ಸುರಸ್ತೋಮವನೆ ಕರೆಸಿ ಈ ಪರಿ ವೈಭೋಗ ಮಾಡಿದ ಹರಿಯು ||೯||
ಆ ಕ್ಷಣದಲಿ ತಾನು ತರಣಿಯನ ಕರೆಸಿ ಇಕ್ಷುಚಾಪನ ಮಾತೆ ಬಳಿಗೆ ಪೋಗೆಂದ |
ತಕ್ಷಣದಲಿ ಸೂರ್ಯ ಹೋಗಿ ನಿಲ್ಲಲು ಹರಿಯ ಆಕ್ಷೇಮವನೆ ಕೇಳಿ ತೆರಳಿದಳು ಬೇಗ ||೧೦||
ಬಂದ ಸತಿಯಳ ಕೂಡಿ ಮಂದಿರಕೆ ಪೋಗಿ ಹಿಂದೆ ಹೇಳಿದ ವಾಕ್ಯ ನಡೆಸೆಂದ ಹರಿಯು |
ಸಂದೇಹವಿಲ್ಲದೇ ಸ್ವಾಮಿ ನಡೆಸೆಂದು ಇಂದಿರಾದೇವಿಯು ನುಡಿದಳು ಹರಿಗೆ ||೧೧||
ಸ್ವಸ್ತಿವಾಚನ ಮಾಡಿ ಕುಲದೇವರನಿಟ್ಟು ಪ್ರಸ್ಥವ ಮಾಡಿದ ದ್ವಿಜರ ಸ್ತೋಮಕ್ಕೆ |
ಮರುದಿನ ಲಕ್ಷ್ಮೀಶ ರಾಜನ ಆ ಪುರಕೆ ಸುರಸ್ತೋಮವನೆ ಕೂಡಿ ತೆರಳಿ ಬಂದ ||೧೨ ||
ಬರುವ ಕೃಷ್ಣನ ಕಂಡು ಶುಕಮುನಿ ಸಂಸ್ತುತಿಸಿ ಹರಿಗೆ ಭೋಜನವನ್ನು ಮುದದಿ ಮಾಡಿಸಿದ |
ಆಕಳಂಕ ಮಹಿಮನು ಬಂದ ವಾರ್ತೆಯ ಕೇಳಿ ಸಕಲ ಜನರ ಕೂಡಿ ಕರೆಯೆ ರಾಜ ||೧೩||
ಮುದದಿಂದ ಎದುರುಗೊಂಡು ಪರಿಮಳ ಪೂಸಿ ಸದಮಲ ಹೃದಯನ ಕರೆತಂದರು ಮನೆಗೆ | ಪದ್ಮನಾಭನ ಪೀಠದಲಿ ಕುಳ್ಳಿರಿಸಿ ಮಧುರ ಮಾತಿಲಿ ತನ್ನ ತರುಣಿ ಒಡಗೂಡಿ ||೧೪||
ಹೇನ ಕುಂಭಗಳಿಂದ ದ್ವಿಜರ ಕೈಯೊಳು ಸ್ವಾಮಿಪುಷ್ಕರಣಿ ತೋಯವನ್ನೇ ತರಿಸಿ |
ಹೇಮತಟ್ಟೆಯಲ್ಲಿ ಸ್ವಾಮಿ ಪಾದವನ್ನಿಟ್ಟು ಪ್ರೇಮದಿಂದಭಿಷೇಕ ಮಾಡಿದನು ರಾಜ ||೧೫||
ಚಿನ್ನದ ಕಿರೀಟ ಆಭರಣವನ್ನಿಟ್ಟು ಕನ್ಯಾದಾನವ ಮಾಡಿ ಧನ್ಯನಾದ |
ತನ್ನ ಮಗಳನೆ ಶ್ರೀನಿವಸಗೆ ಒಪ್ಪಿಸಿ ಉನ್ನತ ಪದವಿಯಂ ಚೆನ್ನಾಗಿ ಪಡೆದ ||೧೬||
ಮಾವನಪ್ಪಣೆನೊಂಡು ಮೈದಗೊಸ್ತ್ರವ ಕೊಟ್ಟು ಭಾವಶುದ್ದದಿ ತನ್ನ ಮಾವಗೊಂದಿಸಿದ |
ಯಾವಾಗ ಕರೆದರೂ ಬರುವೆನು ನಾನೆಂದು ಪಾವನ್ನ ಮಾಡೆಂದು ಧರಣೀಗೊಂದಿಸಿದ ||೧೭||
ಅಷ್ಟಗೋಪುರ ಏರಿ ಕಣ್ಣಿಟ್ಟು ನೋಡುತಲಿ ಎಷ್ಟು ಹೇಳಲಿ ಈಕೆ ಸುಕೃತಫಲವೆಂತೋ |
ಅಜ ರುದ್ರ ಮೊದಲಾದ ಸುರರು ದ್ವಿಜರೆಲ್ಲ ಸುಜನರಂದಣವೇರಿ ಪುರಕೆ ಸಾಗಿದರು ||೧೮||
ಆರು ತಿಂಗಳು ಮೀರಿ ಗಿರಿಗೆ ಪೋಗುವೆನೆಂದು ಧೀರ ತಾ ನಿಂತಾನೆ ಕುಂಭಜರಾಶ್ರಮದಿ |
ಧರೆಯೊಳು ಅಣಕೇರಿ ಸುರಪತಿ ಪ್ರಿಯನಾದ ಸುಗುಣವೇಂಕಟರನ್ನ ಪುರಂದರವಿಠಲ ||೧೯||

Vaikuntapathi thaanu vaikuntavane bittu
venkaatadhrige hogi sri kaantha nintha|
Naalku kadeyu nodi valmikavane kandu
ekanda sthalavendu bahu kaalavalli ithu||

shola bruthyanu siravanodadhe kaayava nodi
thaalalaradhe swami gurugalane karesi
heli oushadha maadi kroda roopiya kandu
keli sthlavane kondu leele thoruthali

iruthiralu ondhina thuragavae smarisuthali
thuraga baralu kandu mudhadhi thaaneri
pari pari mrugangala aadavaiyali kondu
karuna saagara ondu vanava kandu

vanadhalli vanajakshi raaja puthriya kandu
manege bandhanthadi kalaga maadidharu
manasija pitha thaanu asvagala kondu
ganavana giri yeri malagidha hariyu

nagathara malagalu baagulavathiyu aaga
bage bage kelalu sogadhim nudidha
gagana raajana puthri padmaavathiya kandu
hagalu iralu aage mugava smarisuvanu

avani gosukavagi iddhalige hodhe
avanindha enna aswa hathavaayuthamma
avala horethu enna praanave nilladhu
avala kadaneya neenu maada bekkamaa

andha keli baakulaavathiyu aaga
aananandhadhim raja purakke theralidharu
sundariyara kaarya sthiravaagavendu
chendulla sthri roopa darisidhanu hariyu

koravanji thanaagi nrupana purakhogi
tharani deviya munde saguna helidhanu
thirugi baralaathake magala kodavenendhu
harige nicchaya maadi sukara galuhisidhanu

thaapasotthama bandhu pathravane kodalu
sripathiya thaanodhi ben hindhe baredha
aaparama vandhya thaa sura sthomavane karesi
ee pari vaibhoga maadidha hariyu

aa kshanadhalli thaanu tharaniyana karesi
ikshu saapava maathe balige pogendhu
dhakshinadhalli surya hogi nillalu
hariya aa kshemavanne keli theralidharu begaa

bandha sathiyaala koodi mandhirakke pogi
hinde helidha vaakya nadesendhu hariyu
sandhehavilladhe swami nadesendhu
indira deviyu nudidhalu harige

swasthi vachana maadi kula devaranitta
prasaadhava maadidha dhvijara sthomaake
marudhina lakshmisarajana aapurakke
soora sthomavane koodi therali bandha

baruva krishnana kandu sukamuni samsthuthiisi
harige bojanavannu mudhadhi maadisidha
akalanga mahimana bandha vaartheyu keli
sakala janara koodi kareya raaja

mudhadhindha edhuru kondu parimala poosi
satha mala hrudayana karethandaru manage
padhuma nabhana peedadhallu kullirisi mathura
mathura maathili thanna dahrani odakoodi

hema kumbagalindha dhvijara kayyolu
swami pushkaraniya thoya valleddharisi
hema thatteyalli swami paadhavanittu
premadhindha abhisheka maadidhanu raaja

chinnadha kreeta aabaranavittu
kanya dhaanava maadi thanyanaadha
thanna magalane srinivasage oppisi
unnadha padhaviyum chennaagi kadedhe

maavanobbane kondu maidha koshthrava kottu
baava suddhadhi thanna maava kondisidha
yaavaga karedharu baruvenu naanendu
pavanna maadendhu dharani kondhisidha

ashta kotira yeri kannittu noduthali
eshtu helali eege sukruthu balavendho
aja rudhra modhaladha suraru dhvijarella
sujanaranthana veri purake saakidharu

aaru thingalu meeri kirige poguvenendhu
dheeratha ninthaane kumba jaarasramathi
hareyolu anakeri surapathi priyanadha
suguna venkataranna purandara vittala

 

dasara padagalu · MADHWA · madhwacharyaru · purandara dasaru

Madhva muniye namma guru madhva muniye

ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ ||
ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ ||

ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ-
ವಿಂದವ ಸೇವಿಸುತ ಆನಂದದಿಂದ ಶೋಭಿಸಿದ ||

ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ-
ಮಾಣಿಕ್ಯವಾಗಿ ಹರಿಗೆ ಪ್ರಾಣನೆಂದೆನಿಸಿದ ||

ಕಟ್ಟಕಡೆಯಲಿ ಯೋಗಿ ದಿಟ್ಟನಾಗಿ ಪುರಂದರ
ವಿಟ್ಠಲ ವೇದವ್ಯಾಸರ ಪೆಟ್ಟಿಗೆ ಮುಂದೊಪ್ಪುತಿಹ ||

Madhva muniye namma guru madhva muniye
Madhva muni nammannella uddharisuva kaniro

Hinde hanumantanagi bandu ramara padara
vindava sevisuta Anandadinda shobhisida

enanga vamshabdhi soma ksoni palakara
shiro manikyavagi harige prananedenisida

katta kadeyali yoga dittanagi purandara
vittala veda vyasara pettige mundopputiha

dasara padagalu · MADHWA · madhwacharyaru · purandara dasaru

Madhvarayara nenendu suttaragiro

ಮಧ್ವರಾಯರ ನೆನೆದು ಪರಿಶುದ್ಧರಾಗೈರೋ ||ಪ||
ಪೊದ್ದಿ ವೈಷ್ಣವ ಮತ ಭವಾಬ್ಧಿಯನು ದಾಟಿರೋ ||ಅ.ಪ||

ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗ
ಒದಗಿ ನಿತ್ಯ ಕರ್ಮಗಳನು ನಡೆಸುವಾಗ
ಹೃದಯದಲಿ ಬೀಜಾಕ್ಷರ ಮಂತ್ರ ಜಪಿಸುವಾಗ
ಸದಮಲಾನಂದ ಹನುಮನ್ನ ನೆನೆಯಿರೋ ||

ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವವಿಡುವಾಗ
ಪ್ರೇಮದಿ ವೈಷ್ಣವೊತ್ತಮರು ಅರ್ಚಿಸುವಾಗ
ಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗ
ನೇಮದಿಂದ ಕೌರವಾಂತಕ ಭೀಮರಾಯನ ನೆನೆಯಿರೋ ||

ಕರಗಳನ್ನು ತೊಳೆದು ತೀರ್ಥ ತುಳಸೀದಳವೀಯುವಾಗ
ಪರಿಪರಿಯ ಫಲ ಪುಷ್ಪ ವೀಳ್ಯ ಅರ್ಪಿಸುವಾಗ
ಸರ್ವಾಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕ
ಪುರಂದರ ವಿಠಲಗೆ ಸಮರ್ಪಣ ಮಾಡಿರೋ ||

Madhvarayara nenendu suttaragiro hoddi vaisnava mata bhavabdhidatiro

Udayadalli eluvaga mudadi snana maduvaga odagi nitya karmagalanu nadesuvaga
hrdayadali bijaksara mantragalanu japisuvaga sadamalananda hanumanannu neneyiro

kamavillada hariya puje vaishvadeva maduvaga premadinda vaisnavara arcisuvaga
A maha paksya bhojya arogana maduvaga nemadinda kauravantaka bhimasenana neneyiro

karagalannu toledu tirtta tulasidala viyuvaga pari pariya bala puspa vilya arpisuvaga
sarvantaryami guru madhvarantaratmaka purandara vittalage samarpana madiro

dasara padagalu · MADHWA · madhwacharyaru · purandara dasaru

Shri madhva rayara seve dorakuvadu

ಶ್ರೀಮಧ್ವರಾಯರ ಸೇವೆ ದೊರಕುವದು
ಜನುಮ ಸಫಲ ಕಾಣಿರೋ
ಶ್ರೀಮದಾನಂದತೀರ್ಥರ ಪಾದ ನೆನೆವರು
ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ||

ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ
ಅಗುಣನು ಪರ ಬೊಮ್ಮನು
ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು
ಜಗ ಸತ್ಯ ಸಗುಣೋದ ಬ್ರಹ್ಮ ಎಂದು ಪೇಳುವ ||

ಹರಿ ಸರ್ವೋತ್ತಮ ತರುವಾಯ ರಮಾದೇವಿ
ಸರಸಿಜಾಸನ ಪ್ರಾಣರು
ಸರಸ್ವತೀಭಾರತಿಯೆಂದು ಪೇಳ್ದಾ ಗರುಡಾನಂತ ರುದ್ರ
ತರುವಾಯ ಆರು ದೇವಿಗಳು ||

ಸೌಪರ್ಣಿ ವಾರುಣಿ ಅನಪೂರ್ಣೆಯರು ಸಮರು
ದ್ವಿಪದೀಮನ್ವಾದಿ ದೇವಿಗಳು
ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ
ಅಪವರ್ಗಾದಿ ಸೇವೆಯ ಮಾಡಿರೋ ಎಂತೆಂಬ ||

ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ
ಚೆಂದದಿಂದಲಿ ಲಾಲಿಸಿ
ಇಂದಿರಾರಮಣ ಗೋವಿಂದನೇ ದೈವವೆಂದು
ಸಂದೇಹವಿಲ್ಲದೆ ಸಾಧಿಸಿ ಮಾಯಾ ಸೋಲಿಸಿ ||

ಭೂತದೊಳು ರೌಪ್ಯಪುರದಿ ನೆಲಸಿ ಗೆದ್ದು
ಧಾತ್ರೀ ಮುದ್ರೆಯ ತೋರಿಸಿ
ಈತನೇ ಹನುಮಂತ ಭೀಮೇಶ ಶ್ರೀಮಧ್ವ
ಈತನೇ ಭಾವಿ ಬ್ರಹ್ಮಾ ಜೀವರುತ್ತಮ ||

ಹಿಮಸೇತುಪರಿಯಂತುದ್ಭವಿಸಿದ ಸುಜನರ್ಗೆ
ಕ್ರಮದಿ ತತ್ವವ ಬೋಧಿಸಿ
ಕ್ರಮನೇಮಂಗಳ ಮಾಡಿ ಕಮಲನಾಭನ ಮೂರ್ತಿ
ಪ್ರೇಮದಿಂದಲಿ ಸ್ಥಾಪಿಸಿ ಪೂಜಿಸಿರೆಂದು ||

ಶ್ರೀಮದನಂತನೆ ಅನಂತಕಾಲಕೆಯೆಂದು
ಯಮಕಭಾರತ ತೋರಿಸಿ
ಸ್ವಾಮಿ ಸರ್ವಾಂತರ್ಯಾಮಿ ಸರ್ವಗುಣಪೂರ್ಣನೆಂದು
ಪ್ರೇಮಿ ಪುರಂದರವಿಠಲನಾ ದಾಸರಾದನಾ ||

Shri madhva rayara seve dorakuvadu januma saphala kaniro
Shrimad Ananda tirttara pada nenavaru samanya suraru karunya bommana Ane

Jagadu satyava alla jada jiva bhedavalla agunanu para bommanu
hige nudida janara nigama shastradi geddu jaga satya saguna brahma endu peluva

hari sarvottama nitya taruvaya ramadevi sarasijasana pranaru
sarasvati bharati garuda ananta rudra taruvaya Aru devigalu

sauparni varuni devi aparna deviyaru samaru dvipadi manvadigalu
I pari taratamya japa dhyanarcaneyinda apavargadi seveya madiro entemba

ondondu yugadali ananta sevaya madi cendadindali lalisi
indira ramana govindane daivavendu sandehavillade sathiyi mayi solisi

bhutadolu relappa puradi nelasi geddu dhatri mudreya torisi
idena hanumanta idena bhimasena idena bhavisyada brahma jivottama

hima giriyinda setuveya paryantara bhramisuta sujanarige
krama tatva bodhisi kamala nabhana murti kramavaridu sthapisi pujitarenda

shrimadanantana ananta kalakeyendu ymaka bharata torisi
svami sarvantaryami srvaguna purnanendu premi purandara vittalana dasanada

dasara padagalu · MADHWA · purandara dasaru

Shri madhva ramana ninna

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ
ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ
ಸಮರ್ಥಂಗಳಾಗಲಿಲ್ಲವೋ ||ಪ||

ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ
ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ
ನಿರತ ಮುಳುಗಿಪ್ಪಳೋ ರಮೆ ||

ನಖದಲ್ಲಿ ನಾನಾ ವಿಧಾನೇಕ ವಿಷಯಂಗಳನ್ನು
ಏಕ ಮನದಿಂದ ನೋಡುತ ಲಯಾಬ್ಧಿಯಲ್ಲಿ
ನಗುತ ಕುಳಿದಿಪ್ಪಳೋ ರಮೆ ||

ಒಂದೇ ಕಾಲದಲ್ಲಿ ನಿನ್ನ ಒಂದೇ ರೋಮಕೂಪದಲ್ಲಿ
ಅನಂತಕೋಟಿ ಬ್ರಹ್ಮಾಂಡಗಳು ಮಾಧವನೊಬ್ಬ
ಆನಂದದಿಂದ ಧರಿಸಿಪ್ಪ ||

ಅವನಾಗ ಅವತಾರ ಅನಂತಾನಂತ ರೂಪಂಗಳು
ದೇವಕೀತನಯಗುಂಟಯ್ಯ ಕ್ಷೀರಾಬ್ಧಿಯಲ್ಲಿ
ದೇವೇಶ ಸ್ತ್ರೀರೂಪ ಧರಿಸಿಪ್ಪ ||

ಐವತ್ತು ಕೋಟಿ ಯೋಜನ ವಿಸ್ತೀರ್ಣ ವಟಪತ್ರದಲ್ಲಿ
ಏಳು ಕೋಟಿಯೋಜನ ಮಾನದಿ ಬಾಲಕನೊಬ್ಬ
ಬಾಯಿಲುಂಗುಟನಿಕ್ಕಿ ಮಲಗಿರುವ ||

ಅಣೋರಣೀಯಾನ್ ಮಹತೋ ಮಹೀಯಾನೆಂಬೋ ನಾನಾ ಶ್ರುತಿಯಿಂದ
ಸನ್ನುತ ಸದ್ಗುಣ ಸಂಪೂರ್ಣನೂ ವನಜಾಕ್ಷ
ನಿನ್ನ ಸಿರಿ ನಿನ್ನ ಮಹಿಮೆ ಅರಿಯಳೋ ||

ಅನಾಥರಕ್ಷಕನೆಂದು ನಿನ್ನ ನಂಬಿದಂಥ ಎನ್ನ ಮನ್ನಿಸಿ
ರಕ್ಷಿಸೋ ಶ್ರೀಶ ಲಕ್ಷ್ಮೀಶ ಅನಾಥಬಂಧೋ
ದೀನಬಂಧೋ ದಯಾನಿಧಿಯೇ ||

ದಶಶತಸಾಸಿರದ ರೂಪನಾದ ವಾಸುದೇವ ಕುಸುಮನಾಭ
ಶೇಷಾದ್ರೀಶನ ಪುರಂದರವಿಠಲ ನಿನ್ನ
ದಾಸನೆಂದು ದಯ ಮಾಡಯ್ಯ ||

Shri madhva ramana ninna dvaita mahime enthaddo Samasta
koti vedangalu kudi tudisolomme samarthangalagalillavo

Yam kamaye tantamugram krnomi embandha shruti nikara
pratipadyaladalo sukhabdiyalli nirata mulugippalo rame

nakhadalli nana vidhaneka visayangalannu Eka manadinda
noduda layabdhiyalli naguta kulidippalo rame

onde kaladalli ninna onde roma kupadalli ananta koti
brahmandagalu madhavanobba Anandadinda dharisippa

avanaga avatara anantananda rupangalu devaki
tanayagundayya ksirabdhiyalli devesha strirupa dharisippa

aivattu koti yojana vistirna vatapatradalli Elu koti
yojana manadi balakanobba bayilungudanikki malagiruva

anoraiyan mahato mahiyanembo nana shrutiyinda
sannuta sadguna sampurnanu vanajaksa ninna siri ninna mahime ariyaro

anata raksakanendu ninna nambidantha enna mannisi rakshiso
shrisha laksmisha anatha bandho dinabandho dayanidhiye

dasha shata sasirada rupanada vasudeva kusumanabha
shesadhrishana purandara vittala ninnna dasanendu daya madayya

dasara padagalu · guru jagannatha dasaru · MADHWA · srinivasa

Shri Venkatesha Sthava raja

ಶ್ರೀರಮಣ ಸರ್ವೇಶ ಸರ್ವದ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರಮಹಿಮೋಧ್ದಾರ ಸದ್ಗುಣ ಪೂರ್ಣ ಗಂಭೀರ |
ಸಾರಿದವರಘದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ |
ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ ||

ಘನ್ನಮಹಿಮಾಪನ್ನಪಾಲಕ |
ನಿನ್ನಹೊರತಿನ್ನನ್ಯದೇವರ |
ಮನ್ನದಲಿನಾನೆನೆಸೆನೆಂದಿಗು ಬನ್ನಪಡಿಸದಿರು |
ಎನ್ನಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ |
ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ || ೨ ||

ಯಾಕೆ ಪುಟ್ಟದು ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ |
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ |
ನೋಕನೀಯಕ ನೀನೆ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೩ ||

ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡ ಈ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ |
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || ೪ ||

ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದೆ |
ಬಾಲಕನು ತಂದೆತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚಮತ್ಸರ |
ಕಂದನಾಧ್ರುವನಿಗೋಲಿದು ಪೊರೆದೆಯೊ ಶೇಷಗಿರಿವಾಸ || ೫ ||

ಪಿಂತು ಮಾಡಿದ ಮಹಿಮೆಗಳ ನಾನೆಂತು
ವರ್ಣಿಸಲೇನು ಫಲ ಶ್ರೀಕಾಂತ
ಎನ್ನನು ಪೊರೆಯೆ ಕೀರುತಿ ನಿನಗೆ ಫಲವೇನೊ |
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೬ ||

ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿಕುಲಗಳಿಗಭಯದಾಯಕ |
ಧೀನಬಾಂದವ ನೀನೆ ಎನ್ನ ಮನದರ್ಥ ಪೂರೈಸೋ |
ಅನುಪಮೋಪಮಜ್ಞಾನ ಸಂಪದ |
ವಿನಯಪೂರ್ವಕವಿತ್ತು ಪಾಲಿಸೊ |
ಜನುಮಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || ೭ ||

ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿವಿರಕ್ತಿ ನೀನಿತ್ತು |
ಹೃದಯಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನು ಶೇಷಗಿರಿವಾಸ || ೮ ||

ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೯ ||

ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯನಿಡುವುದಿಹಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೆ ನಿಂತೀವಿದದಿ ಪೇಳಿಸು ಶೇಷಗಿರಿವಾಸ || ೧೦ ||

ಆರು ಮನಿದವರೇನು ಮಾಳ್ಪರೊ |
ಆರುವೊಲಿದವರೇನು ಮಾಳ್ಪರೊ |
ಆರುನೇಹಿಗರಾರು ದ್ವೇಷಿಗಳಾರುದಾಶಿನರು |
ಕ್ರೊರ ಜೀವರಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ || ೧೧ ||

ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೆ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೨ ||

ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ |
ಜಯ ಜಯತು ಸಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ದನೆ |
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೩ ||

ಕರುಣಸಾಗರ ನೀನೆ ನಿಜಪದ |
ಶರಣವತ್ಸಲ ನೀನೆ ಶಾಶ್ವತ |
ಶರಣ ಜನಮಂದಾರ ಕಮಲ ಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೪ ||


Sriramana sarvesa sarvada |
Sarabokta svatantra sarvada |
Paranahinodhdara sadguna purna ganbira |
Saridavaragaduragaisi surijanarige saukya niduva |
Dhiravenkataramana karunadi pureyo ni enna || 1 ||

Ganna nahina pannapalaka |
Ninna horatinnanyadevara |
Nannadalinane nesenendigu bannapadisadiru |
Ennapalaka nine irutire innu Bava bayaveke enage |
Channa venkataranana karunadi poreyo ni enna || 2 ||

Yake puttadu karuna ennolu |
Sakalareya ninna saranana |
Nukibittare ninage lokadi kyati bappuvude |
Nokaniyaka nine ennanu |
Jokeyindali kayo bidade |
Ekadevanu nine venkata seshagirivasa || 3 ||

Anbujanbaka ninna padayuga |
Nambikonda I pariyalirutire |
Donbegarana teradi ni nirbagya sthiti tore |
Bimba nuruti ninna karagata |
Kanbuvarave gatiyo visvakutunbi |
Ennanu salaho santata seshagirivasa || 4 ||

Hinde ni prahladagosuga |
Endu nodada rupa dharisi |
Bandu daityana odala bagede |
Balakanu tandetaygala bittu vipinadi |
Nindu tapisuva panchanatsara |
Kandanadhruvanigolidu poredeyo seshagirivasa || 5 ||

Pintu nadida nahinegala nanentu
Varnisalenu Pala srikanta
Ennanu poreye kiruti ninage palaveno |
Kantu janakane enna nanasina |
Antarangadi nine sarvada |
Nintu prerane nalpe sarvada seshagirivasa || 6 ||

Srinivasane bakthaposhane |
J~janikulagaliga bayadayaka |
Dhinabandava nine enna nanadartha puraiso |
Anupanopanaj~jana sampada |
Vinayapurvakavittu paliso |
Janunajanunake nareya bedavo seshagirivasa || 7 ||

Nadavu natsara loba nohavu |
Odagabaradu enna nanadali |
Padumanabane j~jana Baktivirakti ninittu |
Hrudayanadhyadi ninna rupavu |
Vadanadali tava nananantravu |
Sadaya palisu bedikonbenu seshagirivasa || 8 ||

Andanudi pusiyagabaradu |
Banda bagyavu pogabaradu |
Kundubarade ninna karunavu dinadi vardhisali |
Ninde naduva janara sangavu |
Endigadaru doreyabaradu |
Endu ninnanu bedikombeno seshagirivasa || 9 ||

Enu bedali enna devane |
Sanuragadi enna paliso |
Nana vidhavidha saukyaniduvudihaparangalali |
Srinivasane ninna dasage |
Enu koretilelli nodalu |
Nine nintividadi pelisu seshagirivasa || 10 ||

Aru nanidavarenu nalparo |
Aruvolidavarenu nalparo |
Arunehigararu dveshigalarudasinaru |
Krora jivarahanidu satvika |
Dhira jivara poredu ninnali |
Sara Bakutiyanittu paliso seshagirivasa || 11 ||

Ninna seveyanittu enage |
Ninna padayugabakti nidi |
Ninna gunagana stavana naduva j~jana ninittu |
Enna nanadali nine nintu |
Gannakaryava nadi nadisu |
Dhanyanendenisenna lokadi seshagirivasa || 12 ||

Jaya jayatu satha kurnarupane |
Jaya jayatu kita simha vanana |
Jaya jayatu brugurana ragukulasona srirana |
Jaya jayatu siri yaduvarenyane |
Jaya jayatu jananoha buddane |
Jaya jayatu kalikalnashagnane kalkinanakane || 13 ||

Karunasagara nine nijapada |
Saranavatsala nine sasvata |
Sarana jananandara kanala kanta jayavanta |
Niruta ninnanu nutisi paduve |
Varada guru jagannathaviththala |
Parana premadi poreyo ennanu seshagirivasa || 14 ||

dasara padagalu · MADHWA · saraswathy

Paalisema muddu shaarade

ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ                    ||ಪ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ                                  ||ಅ.ಪ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ                                 ||೧||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ    ||೨||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ  ||೩||

Paalisema muddu shaarade – yenna naalige yalli nilla baarade

Lolalochane taaye niruta nambide ninna
Paalisema muddu shaarade – yenna nalige yalli nilla baarade ||1||

Shringaarapura nela vaasini –devi sangeeta gaana vilaasini
Mangala gaatre taaye balire brahmana raani||2||

Sarvaalankaara daya mooruti – ninna charanava stutisuve keeruti
Guru mooruti purandara vitthalana sthuthi sutha||3||

dasara padagalu · jagannatha dasaru · MADHWA · saraswathy

Dayamaade dayamaade taaye vaakdevee

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||ಪ||

ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|

ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||

ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸು
ಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩||

Dayamaade dayamaade taaye vaakdevee
Dayadinda neeyennaa node vaakdevee

Hitati sann mateeya shreematidevi nee ee DE
Vratadija netre bhaarati nee daya maade devee ||1||

Sumukeetva sharaannabja druma chaayaa shreekara
Sumatigala olagittu mamateyin salahe ||2||

Jagannaathavitthalana anghrigala seveyolu
Sugune sanmati ko ttu begane salahe ||3||

bhajana · dasara padagalu · MADHWA

jai jai raama hare

||ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ||

ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಕೃಷ್ಣ ಹರೇ

ಮುನಿಮಖರಕ್ಷಕ ಧನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ
ಘನವರ್ಣಾಂಗ ಸುಮನಸರೊಡೆಯ ವನಜಾಸನ ಪಿತ ಕೃಷ್ಣ ಹರೇ

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ

ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ

ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ

ತಾಟಕಿ ಖರಮಧುಕೈಟಭಾದಿ ಪಾಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿ ಮೇಲ್ ನಾಟ್ಯವನಾಡಿದ ಖೇಟವಾಹನ ಕೃಷ್ಣ ಹರೇ

ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ಒದಗಿಹೋದ ಪದುಮನಾಭ ಜಯ ಕೃಷ್ಣ ಹರೇ

ಸೇವಿತ ಹನುಮ ಸುಗ್ರೀವನ ಸಖ ಜಗತ್ವಾವನ ಪರತರ ರಾಮ ಹರೇ
ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಕೃಷ್ಣ ಹರೇ

ಗಿರಿಗಳಿಂದವರ ಶರಧಿ ಬಂಧಿಸಿದ ಪರಮ ಸಮರ್ಥ ರಾಮ ಹರೇ
ಗಿರಿಯ ತನ್ನ ಕಿರಿ ಬೆರಳಲೆತ್ತಿ ಗೋವರನ ಕಾಯ್ದ ಕೃಷ್ಣ ಹರೇ

ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ರಾಮ ಹರೇ
ಪಾಂಡು ತನಯರಿಂದ ಚಂಡ ಕೌರವರ ದಿಂಡು ಕೆಡವಿಸಿದ ಕೃಷ್ಣ ಹರೇ

ತವಕದಿ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ರಾಮಹರೇ
ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ

ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ

ಧರೆಯೊಳಗಜ್ಞಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ

ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ
ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ

ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಕೃಷ್ಣ ಹರೇ

jai jai raama hare | jai jai krushna hare | | pa ||

kausalyaja vara vamsodbava sura samsevita pada raama hare |
kamsadyasurara dhvamsagaida yadu vamsodhbava krushna hare || 1 ||

munimuka rakshaka danujara sikshaka panidhara sannuta raama hare |
ganavarnamga sumanasarodeya sri vanajasanapita krushna hare||2||

tatake kara madhukaitabari papatavisura muka raama hare |
atadi panimelnatyavanadida keta vaha sri krushna hare ||3||

sile padarajadali sri madida sulalita mahima sri raama hare |
balu vakravagiddabaleya kshanadali celuveya madida sri krushna hare ||4||

haradhanu bangisi harushadi janaki karava pidida sri raama hare |
siri rukminiyanu tvaradali varisida karunakara sri krushna hare ||5||

| janaka pele lakshana sitasaha vanake teralida raama hare |
vanake pogi tannanugarodane govanu palipa sri krushna hare ||6||

chadure sabariyatta badariya palavanu mudadi sevisida raama hare |
vidurana kshirake odagi poda padumanaba sri krushna hare ||7||

sevita hanuma sugrivana saka jagatpavana paratara raama hare |
devaki vasudevara sere bidisida deva deva sri krushna hare ||8||

dhareyolaj~jajara mohipudake harana pujisida raama hare |
harana prarthisi varavanu padeda carite agathavu krushna hare ||9||

girigalinda vara saradhiya bandisida parama samrtha sri raama hare |
giriyanu tanna kiriberalaletti goparanu kayda sri krushna hare ||10||

kandisi dasasira chandadida kodanda pani sri raama hare |
pandu tanayarim chanda kauravara dindu gedahida sri krushna hare || 11 ||

tavakadalayodhyapurakaidida tanyuvatiyodane sri raama hare |
ravi suta tanayage pattava gattida bava taraka sri krushna hare ||12||

baratanu prarthisal arasatvava svikarisida tvaradali raama hare |
vara dharmadhyara dhareyolu meresida parama krupakara krushna hare | 13 |

atula mahima sadyatigala hrudayadi satata virajipa raama hare |
sitavahana sarathi enisida surarati pujita pada sri krushna hare ||14||

raama raama endu nemadi bajipara kamita palava sri raama hare |
premadi baktara palipa sri varadesa viththala sri krushna hare ||15||