dasara padagalu · MADHWA · pranesha dasaru · vyasarayaru

chandrikAcAryara pAda dvayake

ಚಂದ್ರಿಕಾಚಾರ್ಯರ ಪಾದ ದ್ವಯಕೆ
ಎರುಗುವೆ ಪ್ರತಿವಾಸರಕೆ ||pa||

ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ
ನಂಬಿದ ಭಕ್ತರ ದೋ‌‌ಷಗಳೆಣಿಸದೆ
ಸುಂದರ ರಘುಪತಿ ರಾಮನ ತೋರಿದ ||1||

ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ
ವಿಜಿಯಿಸಿ ಸ್ಥಾಪಿಸಿ ಮಧ್ವಮತದ
ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ
ಮಹಿಮೆಯ ಇಳೆಯೊಳು ಸಾಧಿಸಿ ತೋರಿದ ||2||

ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ
ಮಂತ್ರಾಕ್ಷತೆಯ ಮಹಿಮೆಯ ತೋರಿದ
ಚಿತ್ತದಲಿಟ್ಟು ಚಂದ್ರಿಕಾ ರಚಿಸಿ
ಪಂಚಮುಖದ ಪ್ರಾಣೇಶ ವಿಠ್ಠಲ
ಪಂಚಮಂತ್ರದಿಂದ ಪೂಜಿಸಿ ಯತಿಸಿದ ||3||

candrikAcAryara pAda dvayake
eruguve prativAsarake ||pa||

nava vRundAvana ma^^dhyadi SOBipa
navavidha varagaLa nIDuta satata
nava maNi mukuTa mastakadi SOBipa
navya jIvana SuBaPala kOruta
naMbida Baktara dO^^^^ShagaLeNisade
suMdara raGupati rAmana tOrida ||1||

vijaya mUruti rAmana dhyAnisi
vijaya nagara sAmrAjya vistarisi
vijiyisi sthApisi madhvamatada
dvigavijaya tatva tiruLanu sAri
akaLanka carita SrIrAma candirana
mahimeya iLeyoLu sAdhisi tOrida ||2||

yAntrika tanadi tApavenisuva
yantrOdhAraka mUrtiya nillisi
maMtrAkShateya mahimeya tOrida
cittadaliTTu caMdrikA racisi
pancamuKada prANESa viThThala
pancamantradinda pUjisi yatisida ||3||

dasara padagalu · MADHWA · pranesha dasaru

Dasara padagalu on pranesha dasaru

ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ||pa||

ಭೂಸುರ ಸೇವಿತ | ಭಾಸುರ ಮಹಿಮ ಉ
ದಾಶೀನ ಮಾಡದೆ | ದೋಷಗಳೆಣಿಸದೆ ||a.pa||

ಪದುಮಸಂಭವ ಕುಲದಿ ಜನಿಸುತ
ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ
ವಿಧ ವಿಧದಿ ಬೋಧಿಸಿ
ಮದಡರುದ್ಧರಿಸಿದ | ಸದಮಲ ಹೃದಯ ||1||

ನತಜನ ಸುರತರುವೆನಿನ್ನನು
ತುತಿಸಿಲೆನಗೊಶವೆ |
ಸತತದಿ ಸೇವಿಸಿ | ಯತಿ ವರದೇಂದ್ರರ
ಹಿತದಲಿ ಪಡೆದ ಪ್ರತಿ ಪ್ರಭಾಕರ ||2||

ತರತಮ ಭೇದವನು | ಶ್ರೀವರ
ಹರಿದಿನ ಮಹಿಮೆಯನು
ಸರಳಕನ್ನಡದಿ ವಿರಚಿಸಿ ಕವನವ
ನೊರೆದು ಸಜ್ಜನರ ಪೊರೆವ ಮಹಾತ್ಮಾ ||3||

ವಾತಜಾತ ಸುಮತ ಸಾಗರ
ಶೀತಕಿರಣ ನಿರುತ
ಪೋತನೊಳೀತರ | ಯಾತಕೆ ನಿರ್ದಯ
ನೀತವಕದಿ ಸಂಪ್ರೀತಿಯಿಂದೊಲಿದು ||4||

ಪ್ರೇಮದಿ ಪಿಡಿಕೈಯ | ಮಾನವಿ
ಧಾಮರ ಸುವಿಧೇನು
ಶಾಮಸುಂದರೆನ | ನಾಮನೆನೆವ ಸುಖ
ಯಾಮ ಯಾಮಕೀಪಾಮರಗೀಯುತ ||5||

pOShisenna jIya SrI prANESadAsarAya ||pa||

BUsura sEvita | BAsura mahima u
dASIna mADade | dOShagaLeNisade ||a.pa||

padumasaMBava kuladi janisuta
vidurAgraja jagadi | yadupati sukatheya
vidha vidhadi bOdhisi
madaDaruddharisida | sadamala hRudaya ||1||

natajana surataruveninnanu
tutisilenagoSave |
satatadi sEvisi | yati varadEndrara
hitadali paDeda prati praBAkara ||2||

taratama BEdavanu | SrIvara
haridina mahimeyanu
saraLakannaDadi viracisi kavanava
noredu sajjanara poreva mahAtmA ||3||

vAtajAta sumata sAgara
SItakiraNa niruta
pOtanoLItara | yAtake nirdaya
nItavakadi saMprItiyindolidu ||4||

prEmadi piDikaiya | mAnavi
dhAmara suvidhEnu
SyAmasundarena | nAmaneneva suKa
yAma yAmakIpAmaragIyuta ||5||


ದಾಸರಾಯರ ದಿವ್ಯ ಚರಣ ಭಜಿಸಿ
ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ||pa||

ದಾಸರಾಯರ ಪಾದ ಭಜಿಪ ಸದ್ಭಕ್ತರ
ಏಸುಜನುಮದ ಪಾಪರಾಶಿ ಪರಿಹರವು
ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು
ಲೇಶ ಸಂಶಯವಿಲ್ಲ ಆಲಸವು ಸಲ್ಲ ||1||

ಮರುತಮತ ತತ್ವದ ತೆರೆಗಳಿಂ ಸೂಸುತ
ಧರಣಿಸುರರಿಗೆ ರಾಮನಾಮಾಮೃತ
ನಿರುತಭಜಿಸಲು ಜ್ಞಾನ ವೈರಾಗ್ಯ ತರುಮಣಿಯ
ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ ||2||

ಸುಜ್ಞಾನ ವೆಂಬಂಥ ಕಿರಣಗಳ ಪಸರಿಸುವ
ಅಜ್ಞಾನ ತಿಮಿರವನು ದೂರೋಡಿಪ
ಸೂಜ್ಞರೆಂಬುವ ತಾವರೆಗಳರಳಿಸುವಂಥ
ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ ||3||

ನಮಿಪಜನ ಭವತಾಪಕಳೆದು ಸದ್ಭಕ್ತಿಯಂ –
ಬಮಿತ ಅಹ್ಲಾದವನು ಬೀರುವಂಥ
ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ
ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ ||4||

ದಾಸಕುಲತಿಲಕ ಪ್ರಾಣೇಶರಾಯನ ಕವನ
ಶ್ರೀಶಕಥೆಗಳ ರಾಶಿಮೀಸಲಾಗಿರಲು
ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ
ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ||5||

ಈ ಗುರುಗಳ ಪಾದಕೆರಗಿದ್ದ ಶಿರಧನ್ಯ
ಈ ಗುರುಗಳೀಕ್ಷಿಸಿದ ನೇತ್ರ ಧನ್ಯ
ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ
ಈ ಗುರುಗಳನು ಮನದಿ ನೆನೆವÀನರ ಧನ್ಯ ||6||

ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ
ಶ್ರೀಗುರುಪ್ರಾಣೇಶ ಭಜಕರೆನಿಪ
ನಾಗಪರಿಯಂತ ವರದೇಶ ವಿಠಲನ ಪ್ರೀಯ
ಯೋಗಿ ವರದೇಂದ್ರ ಮುನಿಗಳ ಪಾದ ಭೃಂಗ ||7||

dAsarAyara divya caraNa Bajisi
SrI prANESadAsArya guruvaryA ||pa||

dAsarAyara pAda Bajipa sadBaktara
Esujanumada pAparASi pariharavu
SrISanali sadBakti lEsAgi puTTuvadu
lESa saMSayavilla Alasavu salla ||1||

marutamata tatvada teregaLiM sUsuta
dharaNisurarige rAmanAmAmRuta
nirutaBajisalu j~jAna vairAgya tarumaNiya
hariBakuti dhEnuvannIvaÀ pAlgaDalenipa ||2||

suj~jAna veMbabtha kiraNagaLa pasarisuva
aj~jAna timiravanu dUrODipa
sUj~jareMbuva tAvaregaLaraLisuvabtha
aj~jakumudugaLa bADisuva BAskaranenipa ||3||

namipajana BavatApakaLedu sadBaktiyaM –
bamita ahlAdavanu bIruvantha
SamadamAdigaLa candrikeyinda SOBisuva
vimala harijana cakOrake caMdraneMdenipa ||4||

dAsakulatilaka prANESarAyana kavana
SrISakathegaLa rASimIsalAgiralu
A suBaktarige santOShagoLisulu sarva
dESadali meresi satkIrtiyanu paDedantha||5||

I gurugaLa pAdakeragidda Siradhanya
I gurugaLIkShisida nEtra dhanya
I gurugaLa vANi kELidda kivi dhanya
I gurugaLanu manadi nenevaÀnara dhanya ||6||

rAgadvEShAdigaLa geddu sadBaktiyiM
SrIguruprANESa Bajakarenipa
nAgapariyanta varadESa viThalana prIya
yOgi varadEndra munigaLa pAda BRunga ||7||

dasara padagalu · pranesha dasaru · subhodendra thirtharu

Dasara pada on sri subhodendra thirtharu

ಅಭಯವೀಗಲೇ ಬೇಡೆ । ಗುರು ।
ಸುಬೋಧೇಂದ್ರಾರ್ಯರ ನೋಡೆ ಸಖಿ ।। pa ।।

ಪಾಪ ಕಳೆವಳಾಕಾಶ ಗಂಗೆ । ಬಹು ।
ತಾಪ ಕಳೆವ ದ್ವಿಜನಾಥ ।
ಆ ಪಾದಪ ದೈನ್ಯ ಹರೀ ಸುಗುಣವು ।
ಈ ಪುರುಷರಿಗೊಪ್ಪುವುದಲ್ಲೇ ಸಖಿ ।। 1 ।।

ಮೀನಾ ಕೂರ್ಮ ದ್ವಿಜ ನೋಡಿ ಸ್ಮರಿಸಿ ಮುಟ್ಟಿ ।
ಸೂನುಗಳನು ಸಲಹುವ ತೆರದಿ ।
ಸು ನೋಟದಿ ನೆನೆದು ಪಾದಸ್ಪರ್ಶ । ವಿ ।
ತ್ತಾನುತರನು ಪೋರೆವರು ಬಿಡದೆ ಸಖಿ ।। 2 ।।

ಈ ಸಂಯಮಿಗಳ ಕೃಪೆಯೊಂದಿರುತಿರೆ ।
ಏನು ಸಾಧನ ಇನ್ನೇತಕೆಲೆ ।
ನಾಶ ವೈಕುಂಠವೇ ಸರಿ । ಪ್ರಾ ।
ಣೇಶವಿಠ್ಠಲ ನಿವರಲ್ಲಿಹದಕೆ ಸಖಿ ।। 3।।

aBayavIgalE bEDe | guru |
subOdhEndrAryara nODe saKi || pa ||

pApa kaLevaLAkASa gange | bahu |
tApa kaLeva dvijanAtha |
A pAdapa dainya harI suguNavu |
I puruSharigoppuvudallE saKi || 1 ||

mInA kUrma dvija nODi smarisi muTTi |
sUnugaLanu salahuva teradi |
su nOTadi nenedu pAdasparSa | vi |
ttAnutaranu pOrevaru biDade saKi || 2 ||

I saMyamigaLa kRupeyondirutire |
Enu sAdhana innEtakele |
nASa vaikunThavE sari | prA |
NESaviThThala nivarallihadake saKi || 3||

dasara padagalu · madhava thirtharu · MADHWA · pranesha dasaru

Dasara pada on Sri Madhava thirtharu(Nodide naa dhanyanindige)

ನೋಡಿದೆ ನಾ ಧನ್ಯನಿಂದಿಗೆ
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ।।

ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ
ಪಿಂಗಳಗೇನು ಜ್ಞಾನಿಗಳಗೇನು
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ
ಹಿಂಗಿಸಬೇಕೆಂಬುದಲ್ಲದೇಮನವೇ ।। 1 ।।

ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ
ಕರ ಪೂಜಿತಾರವಿಂದನಾಭರಲ್ಲಿ
ಧರಾಧರಜತೀರದಿ ಸತ್ಯ ಮುನಿಗಳಿಂದ
ನಿರುತಾರಾಧನೆ ಕೊಳುತಿರ್ಪರುಮನವೇ ।। 2 ।।

ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ
ಆನತ ಜನರಿಗೆ ಕರುಣಿಸಿ
ಪ್ರಾಣೇಶವಿಠ್ಠಲನ ಧಾಮ ತೋರಿಸುವರು
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।

ನೋಡಿದೆ ನಾ ಧನ್ಯನಿಂದಿಗೆ
ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ।।

ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ
ಪಿಂಗಳಗೇನು ಜ್ಞಾನಿಗಳಗೇನು
ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ
ಹಿಂಗಿಸಬೇಕೆಂಬುದಲ್ಲದೇಮನವೇ ।। 1 ।।

ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ
ಕರ ಪೂಜಿತಾರವಿಂದನಾಭರಲ್ಲಿ
ಧರಾಧರಜತೀರದಿ ಸತ್ಯ ಮುನಿಗಳಿಂದ
ನಿರುತಾರಾಧನೆ ಕೊಳುತಿರ್ಪರುಮನವೇ ।। 2 ।।

ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ
ಆನತ ಜನರಿಗೆ ಕರುಣಿಸಿ
ಪ್ರಾಣೇಶವಿಠ್ಠಲನ ಧಾಮ ತೋರಿಸುವರು
ಕೇಸರಿಯ ನೊಲಿಸಿದ ಯತೀಶರಿವರೆಂದು ।। 3 ।।

nODide nA dhanyanindige |
nODide guru mAdhavatIrthara vRundAvanavanu || pa ||

gangegEnu prayOjana viLeyoLage bAhadake |
pingaLagEnu j~jAnigaLagEnu |
tunga mahimeynda aj~ja janara pApa |
hingisabEkeMbudalladE – manavE || 1 ||

narahari guru suta varada akShOByamuni |
kara pUjitAravindanABaralli |
” dharAdharaja ” tIradi satya munigaLinda |
nirutArAdhane koLutirparu – manavE || 2 ||

Enu ivara baNNisalu ennindoSavalla |
Anata janarige karuNisi |
prANESaviThThalana dhAma tOrisuvaru |
kEsariya nolisida yatISarivarendu || 3 ||

dasara padagalu · MADHWA · padmanabha thirtharu · pranesha dasaru

Dasara pada on Sri Padmanabha thirtharu(Odhagi paaliso bavambudhiya)

ಒದಗಿ ಪಾಲಿಸೊ ಭವಾಂಬುಧಿಯ ದಾಟಿಸೊ ||pa||

ಮದನ ಜಿತ ಭೂಸುರ ಶರಣ್ಯ |ಪದುಮನಾಭ ಯತಿವರೇಣ್ಯ ||a.pa||

ಸದ್ಯ ದೊಡ್ಡ ಮಾತು ಅಪ್ರ |ಬುದ್ಧನಾ ನುಡಿಯೆ ಕೇಳು ||
ಮಧ್ವ ದ್ವೇಷಿಗಳಲಿ ಎನ್ನ |ವಿದ್ಯೆ ತೋರಿ ಬದುಕದಂತೆ||1||

ಒಡಲಿನಾಸೆಗಾಗಿ ಕಂಡ |ಕಡೆಗೆ ತಿರುಗಿ ಪ್ರಾಪ್ತಿಯೆಂಬು ||
ದುಡುಗಿ ಪೋಗಿ ಕೊನೆಗೆ ಮನೆಗೆ |ಮಿಡುಕಿಕೊಳುತ ಬರುವಧಮನ ||2||

ಹಾನಿ ಲಾಭ ಕ್ಲೇಶ ಮೋದ |ವೇನು ಆವ ಕ್ಷಣಕೊದಗಲು ||
ಪ್ರಾಣೇಶ ವಿಠಲ ಕರುಣೆಯಿಂದ |ತಾನೆ ಕೊಟ್ಟನೆಂಬ ಸುಮತಿ ||3||

odagi pAliso BavAMbudhiya dATiso ||pa||

madana jita BUsura SaraNya |
padumanABa yativarENya ||a.pa||

sadya doDDa mAtu apra |buddhanA nuDiye kELu ||
madhva dvEShigaLali enna |vidye tOri badukadante||1||

oDalinAsegAgi kanDa |kaDege tirugi prAptiyeMbu ||
duDugi pOgi konege manege |miDukikoLuta baruvadhamana ||2||

hAni lABa klESa mOda |vEnu Ava kShaNakodagalu ||
prANESa viThala karuNeyinda |tAne koTTaneMba sumati ||3||

dasara padagalu · MADHWA · pranesha dasaru

Pranesha dasaru compositions

  1. Pancha BEda by Pranesha dasaru
  2. Gopichandana mudradarane mahathmya
  3. Thanthrasaroktha kesavadi chathurvimsadhi murthy lakshana
  4. beduvaro sukavo
  5. Sri Parvathi devi sthothra sulaadhi
  6. Allocation of idols to Yathigalu by Madhwacharyaru
  7. Grantha malika stothra(Kannada by Pranesha dasaru)
  8. chandrikAcAryara pAda dvayake
  9. Dasara pada on Sri Padmanabha thirtharu(Odhagi paaliso bavambudhiya)
  10. Dasara pada on Sri Madhava thirtharu(Nodide naa dhanyanindige)
  11. Gurugala pada pankaja
  12. Gurugala anudina neneve naa
  13. andhantamasa prapti
  14. Lambodhara pahi pahi
  15. Maha deva mahadeva
  16. palise ni ennanu gauri devi
  17. Adhadhayithu innadharu olle
  18. Vandhisuve guru santatige(Pranesha dasaru)
  19. Kaye ninna pada
  20. Hari Vayu stuti
dasara padagalu · Dvaitha · MADHWA · pranesha dasaru

Pancha BEda by Pranesha dasaru

ಪಂಚಭೇದ ತಿಳಿವದು ಪ್ರತಿದಿನದಲೀ |
ಮುಂಚಿನಜ ಮಧ್ವಮುನಿ ಮತವನುಸರಿಸಿದವರು || ಪ ||

ಜೀವೇಶರಿಗೆ ಭೇದ ಜೀವ ಜೀವಕೆ ಭೇದ |
ದೇವರಿಗು ಜಡಕು, ಜಡಕೆ ಜಡ ಭೇದಾ ||
ಆವಾಗ ಜೀವರಿಗೆ ಜಡಗಳಿಗೆ ಭೇದುಂಟು |
ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ || 1 ||

ಈಶ ನಿತ್ಯ ಅನಾದಿ ಸ್ವರತ ಸರ್ವಗ ಸ್ವಪ್ರ- |
ಕಾಶ ಸರ್ವಜ್ಞ ವಿಶ್ವ ವಿಲಕ್ಷಣಾ ||
ಮೇಶ ಅಪರಿಚ್ಛಿನ್ನ ಮೂರ್ತಿ ಪ್ರಾಣಿಗಳಿಂದ |
ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ || 2 ||

ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |
ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||
ಆಮಯ ವಿದೂರ ಜ್ಞಾನಾನಂದ ಬಲ ಪೂರ್ಣ |
ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ || 3 ||

ಸುಖ ದುಃಖ ಭೋಗಿ ಜೀವನು ಅಸ್ವತಂತ್ರ ಬಹು |
ಕಕುಲಾತಿ ಉಳ್ಳವನು ದುರ್ವಿಷಯದೀ ||
ಲಕುಮೀಶನಲ್ಲಿ ಭಕ್ತಿ ವಿವರ್ಜಿತನು ಪ್ರತಿ ಕ್ಷ- |
ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು || 4 ||

ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |
ಮಾಧವನ ಬಂಧಕ ಶಕುತಿಯೊಳಗಿಹ್ಯಾ ||
ತಾ ಧರಿಸಿಹನು ಪ್ರಾಕೃತ ಪ್ರಾಕೃತಾವರಣ |
ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ || 5 ||

ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |
ಯಂದು ಭೇದಗಳುಂಟವರ ಲಕ್ಷಣಾ ||
ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |
ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು || 6 ||

ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |
ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||
ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |
ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ || 7 ||

ವಿಧಿ ಮೊದಲು ತೃಣ ಜೀವ ಪರಿಯಂತ ಸಾತ್ವಿಕರು |
ಇದರೊಳಗೆ ದೇವ, ಋಷಿ, ಪಿತೃಪ, ನರರೂ ||
ಸುಧಿಗೆ ಯೋಗ್ಯ ರಜಾದಿ ಗೀರ್ವಾಣ ಗಂಧರ್ವ |
ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ || 8 ||

ಇವರಿಂದ ಭಿನ್ನ ರಾಜಸರು ಗೋ ಭೂ ನರಕ |
ತ್ರಿವಿಧ ಗತಿ ಉಳ್ಳವರು ಪಂಚಭೇದಾ ||
ವಿವರ ತರತಮ ದೇವರ ಮಹತ್ಮಿಯನು ಅರಿಯ |
ದವರು ಲಿಂಗಕಳಿಯರು ಧಾಮತ್ರಯ ಪೊಗದವರೂ || 9 ||

ಸಂಸಾರಿಗಳಿಗೆ ಭಿನ್ನರು ತಮೋಗುಣದವರು |
ಕಂಸಾರಿಯಲಿ ದ್ವೇಷವರ ಸ್ವಭಾವಾ ||
ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |
ಕ್ಷಸರು, ಪಿಶಾಚರವರನುಗರು, ನರಾಧಮರು || 10 ||

ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |
ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||
ಜ್ಞಾನಿ ಭೇದವನರಿಯ ಪಂಚ ಮಹಾಪಾತಕಿ ಪು- |
ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ || 11 ||

ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |
ಕುಜನರಿಗನೇಕ ಬಗೆ ಸಹಯವಹನೂ ||
ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |
ವೃಜನವನ ವಪು ತಾಯಿ ತಂಗಿಯಂಬರನರಿಯ || 12 ||

ಬವರ ಬಂಗಾರ ದ್ಯೂತಾ ಪೇಯ ಅನೃತ ನಟ |
ಯುವತಿಯೀಯಾರು ಸ್ಥಳ ನಿಲಯವವರಿಗೆ ||
ನವವಿಧ ದ್ವೇಷಿಗಳಿಗಾಕಾರನೆನಿಸುವನು |
ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ || 13 ||

ಆ ನೀಚನ ಮಲಮೂತ್ರ ವಿಸರ್ಜನದಿ ಘೋರ |
ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||
ಕ್ಷೊಣಿಯೊಳವನ ನಿಂದೆ ನಿರುತದಲಿ ಮಾಡುವದೆ |
ಶ್ರೀನಾಥನರ್ಚನೆ ಮಹಾಯಜ್ಞವೆನಿಸುವದು || 14 ||

ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |
ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||
ಮೂವರಿಗೆ ಪಾಪಮಿಶ್ರಿತ ಕರ್ಮ ಪುಣ್ಯ ಬಹು |
ನೋವು ಸ್ವರ್ಗ ನರಕ ಸುಮೋಕ್ಷಾದಿ ಗತಿ ಉಂಟು || 15 ||

ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |
ನೈಜವಾಯಿತು ಭೇದ ಜೀವ ಜಡಕೇ ||
ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ, ನಿತ್ಯ |
ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ || 16 ||

ಪ್ರಾಕೃತ ವಿಕೃತ ವೈಕೃತತ್ರಯ ಅಸ್ಥಿರ ಜಡವು |
ಪ್ರಾಕೃತವಜಾಂಡ ಧೊರ ಆವರಣವೂ ||
ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |
ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು || 17 ||

ಸರಸಿಜ ಭವಾಂಡದೊಳಿಹ ನೆಲ ಜಲಧಿ ಗಿರಿಗಳು |
ಎರಡೇಳು ಭುವನ ವೈಕೃತ ಜಡವಿದೂ ||
ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |
ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ || 18 ||

ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |
ಜಾಲ ಕಾರಣತ ಸುಸ್ಥಿರವೆನಿಪವೂ ||
ಮ್ಯಾಲೆ ಅದರಿಂದಾದ ತತ್ವಗಳ ನಿತ್ಯ ಮಹ |
ಕಾಲವೆಂದಿಗ್ಯು ನಿತ್ಯ ಅಣುಕಾಲಗಳ ನಿತ್ಯಾ || 19 ||

ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |
ರಾಗಿರಲು ಜಡ ಜಡಕೆ ಭೇದ ಸಿದ್ಧಾ ||
ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |
ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ || 20 ||

ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |
ದೂ ಕೆಡದೆ ಸುಖಕಾಂತಿ ಯುಕ್ತವಾದಾ ||
ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |
ಶೋಕಪೂರಿತವಾದ ನಿತ್ಯ ನರಕಗಳಿಹವು || 21 ||

ಈ ಪಂಚಭೇದ ಜ್ಞಾನಿಲ್ಲದವ ಶ್ರೀ ಮುದ್ರಿ |
ಗೋಪಿಚಂದನ ಧರಿಸಿದರು ಫಲವೇನೂ ||
ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |
ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ || 22 ||

ಹರಿಗುರುಗಳ ದಯ ಪಡೆವರಿಗೆ ರುಚಿ ತೋರ್ವದಿತ |
ರರಿಗೆ ಈ ಕೃತಿಯು ಕರ್ಣ ಕಠೋರವೂ ||
ತರಣಿ ಬರೆ ಸರ್ವರಿಗೆ ಘೂಕಗಾದಂತೆ ಇದು |
ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು || 23 ||

ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |
ಸಾನುರಾಗದಲಿ ಹರಿ ಸರ್ವೋತ್ತುಮಾ ||
ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |
ಕಾಣರು ಕು ಸಂಸಾರ ಧಾಮತ್ರ ವೈದುವರು || 24 ||

ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |
ಒಪ್ಪುತಿಹ ಈ ಪಂಚಭೇದವನ್ನೂ ||
ತಪ್ಪದಲೆ ನಿತ್ಯ ಪಠಿಸುವರ ಪೊರವವನು ಬೊಮ್ಮ- |
ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ || 25 ||

pancaBEda tiLivadu pratidinadalI |
muncinaja madhvamuni matavanusarisidavaru || pa ||

jIvESarige BEda jIva jIvake BEda |
dEvarigu jaDaku, jaDake jaDa BEdA ||
AvAga jIvarige jaDagaLige BEdunTu |
I vivarava pELve yannApanitu kELuvadU || 1 ||

ISa nitya anAdi svarata sarvaga svapra- |
kASa sarvaj~ja viSva vilakShaNA ||
mESa aparicCinna mUrti prANigaLinda |
tA sAkShiyAgi bahu karmagaLa mADisuva || 2 ||

SrI muKa jagatyakutpatyAdi kAraNa ma- |
hA mahima sarvataMtra svatantrA ||
Amaya vidUra j~jAnAnanda bala pUrNa |
sImeyillada suguNa kriyAtmaka svarUpa || 3 ||

suKa duHKa BOgi jIvanu asvatantra bahu |
kakulAti uLLavanu durviShayadI ||
lakumISanalli Bakti vivarjitanu prati kSha- |
Nake anaMta aparAdhi janma mRuti uLLavanu || 4 ||

Adi vyAdhigaLinda pIDitanu aj~jAni |
mAdhavana baMdhaka SakutiyoLagihyA ||
tA dharisihanu prAkRuta prAkRutAvaraNa |
BEdave siddha yintha jIvagU harigyU || 5 ||

oMdalla sarva jIvaru satva raja tamaru |
yandu BEdagaLunTavara lakShaNA ||
mundina padadi pELve sajjanaru kELiyA- |
nanda baDalendu vinayadali binnaisuvenu || 6 ||

Cinna Baktaru yaniparella dEvatigaLa |
cCinna Baktaru vidhIravarheMDarU ||
cannAgi mudadi I nirjarara taratamya |
vannu kELikobEku j~jAnigaLa muKadinda || 7 ||

vidhi modalu tRuNa jIva pariyaMta sAtvikaru |
idaroLage dEva, RuShi, pitRupa, nararU ||
sudhige yOgya rajAdi gIrvANa gandharva |
tudiyAgi sAMSaru niraMSaruLidavarella || 8 ||

ivarinda Binna rAjasaru gO BU naraka |
trividha gati uLLavaru pancaBEdA ||
vivara taratama dEvara mahatmiyanu ariya |
davaru liMgakaLiyaru dhAmatraya pogadavarU || 9 ||

saMsArigaLige Binnaru tamOguNadavaru |
kaMsAriyali dvEShavara svaBAvA ||
A surArigaLu nAlku prakAra daitya rA |
kShasaru, piSAcaravaranugaru, narAdhamaru || 10 ||

I nAlku bageya surarige arasu kaliyavanA |
hInatanaveShTuccarisali mithyA ||
j~jAni BEdavanariya paMca mahApAtaki pu- |
rANa vEdagaLige viruddhArtha kalpisuvA || 11 ||

sujanarAcaraNe naDiyaguDa duHKa baDisuva |
kujanariganEka bage sahayavahanU ||
prajagaLana rOganA vRuShTiyiM daNisuvanu |
vRujanavana vapu tAyi tangiyaMbaranariya || 12 ||

bavara bangAra dyUtA pEya anRuta naTa |
yuvatiyIyAru sthaLa nilayavavarige ||
navavidha dvEShigaLigAkAranenisuvanu |
avana sama pApigaLu mUru lOkadalilla || 13 ||

A nIcana malamUtra visarjanadi GOra |
kAnanadi kattaliyoLage smaripudU ||
kShoNiyoLavana ninde nirutadali mADuvade |
SrInAthanarcane mahAyaj~javenisuvadu || 14 ||

I vidhadi mUru guNadinda paraspara jIva |
jIvarige BEda yOgyati prakArA ||
mUvarige pApamiSrita karma puNya bahu |
nOvu svarga naraka sumOkShAdi gati unTu || 15 ||

I jIvarige uLLanuBava jaDagaLigilla |
naijavAyitu BEda jIva jaDakE ||
A jaDa tri, nityA anityanityA, nitya |
mAjadavu avyAkRuta naBaSRuti varNagaLU || 16 ||

prAkRuta vikRuta vaikRutatraya asthira jaDavu |
prAkRutavajAnDa dhora AvaraNavU ||
svIkRutaivattu kOTyOjana suvarNAtma |
kAkramisihadajAnDakidu vikRuta jaDavendu || 17 ||

sarasija BavAnDadoLiha nela jaladhi girigaLu |
eraDELu Buvana vaikRuta jaDavidU ||
sthira asthira jaDatraya vidha purANagaLartha |
irutihavu acalAgi SabdagaLa nityA || 18 ||

mUla prakRutigata trividhAnanta paramANu |
jAla kAraNata susthiravenipavU ||
myAle adarindAda tatvagaLa nitya maha |
kAlaveMdigyu nitya aNukAlagaLa nityA || 19 ||

hIge mUru vidha jaDa ondonde mUru mU- |
rAgiralu jaDa jaDake BEda siddhA ||
BAgAra mADi guNarUpa krayadi nODe |
nAgArivahage jaDagaLige BEdavE satyA || 20 ||

I kamalajAnDavu anityavidaroLage eM- |
dU keDade suKakAnti yuktavAdA ||
SrIkaLatrana tridhAmagaLu kukalige takka |
SOkapUritavAda nitya narakagaLihavu || 21 ||

I pancaBEda j~jAnilladava SrI mudri |
gOpichandana dharisidaru PalavEnU ||
I poDaviyoLu vEShadhArigaLu jIvisare |
A pariya BAsa vaiShNavanendariyabEkU || 22 ||

harigurugaLa daya paDevarige ruci tOrvadita |
rarige I kRutiyu karNa kaThOravU ||
taraNi bare sarvarige GUkagAdante idu |
bariya mAtalla SAstrake sammatAgihadu || 23 ||

hInaroLu beriyadale pancaBEdava tiLidu |
sAnurAgadali hari sarvOttumA ||
prANadEvare gurugaLendaritu Bajisuvaru |
kANaru ku saMsAra dhAmatra vaiduvaru || 24 ||

ippattaidu padagaLinda sangatiyAgi |
opputiha I pancaBEdavannU ||
tappadale nitya paThisuvara poravavanu bomma- |
nappa SrI prANESa viThalanihaparadalli || 25 ||

dasara padagalu · MADHWA · parampara · pranesha dasaru

Gurugala pada pankaja

ಗುರುಗಳ ಪದ ಪಂಕಜ | ಸ್ಮರಿಸುವೆ ನಿತ್ಯಾ |
ದುರಿತೌಘಗಳನು | ಓಡಿಸುವನತ್ತತ್ತ ||pa||

ರಾಜೇಂದ್ರ ತಪೋನಿಧಿ | ಶ್ರೀ ಜಯಧ್ವಜ ತೀರ್ಥ |
ರಾಜಿತ ಪುರುಷೋತ್ಮ | ಬ್ರಹ್ಮಣ್ಯ ತೀರ್ಥ||1||

ಮಧ್ವಸಿದ್ಧಾಂತ ಸಂಸ್ಥಾಪಕ ವ್ಯಾಸರಾಯ ಪ್ರ |
ಸಿದ್ಧ ಶ್ರೀನಿವಾಸ ಶ್ರೀ ಲಕ್ಷ್ಮೀಕಾಂತಾ ||2||

ಬಲ್ಲೀದ ಶ್ರೀಪತಿ ರಾಮಚಂದ್ರ ಲಕ್ಷ್ಮೀ |
ವಲ್ಲಭ ಶ್ರೀ ಲಕ್ಷ್ಮೀನಾಥರೆಂತೆಂಬಾ ||3||

ಶ್ರೀ ಲಕ್ಷ್ಮೀಪತಿ ತೀರ್ಥ ಲಕ್ಷ್ಮೀನಾರಾಯಣ |
ನೀಲೇಶ ಭಜಕರು ಶ್ರೀನಾಥ ತೀರ್ಥ ||4||

ರಘುನಾಥ ಜಗನ್ನಾಥ ಕರಜಾತ |
ಸುಗುಣ ವಿದ್ಯಾನಾಥ ಶ್ರೀ ವಿದ್ಯಾಪತಿಯಾ ||5||

ಶ್ರೀ ವಿದ್ಯಾನಿಧಿ ರಘುನಾಥ ಶ್ರೀ ರಘುವರ್ಯ |
ಕೋವಿದ ವಿನುತ ರಘೂತ್ತಮ ತೀರ್ಥ ||6||

ವ್ಯಾಸ ವಿದ್ಯಾಪತಿ ವಿದ್ಯಾಧೀಶ ತೀರ್ಥ |
ಶ್ರೀ ಸತ್ಯವ್ರತರ ಶ್ರೀ ಸತ್ಯನಿಧಿಗಳ ||7||
ಗುರು ಸತ್ಯನಾಥ ಶ್ರೀ ಸತ್ಯಾಭಿನವ ತೀರ್ಥ |
ವರ ಸತ್ಯಪೂರ್ಣ ಶ್ರೀ ಸತ್ಯ ವಿಜಯರಾ ||8||

ಸತ್ಯ ಪ್ರೀಯರ ಸತ್ಯಬೋಧ ಸತ್ಯ ಸಂಧ |
ಸತ್ಯ ವರರ ಸತ್ಯಧರ್ಮಾಖ್ಯ ಮುನಿಪಾ ||9||

ಈ ನಮ್ಮ ಗುರುಗಳ ಅನುದಿನ ಸ್ಮರಿಸೂತ |
ಪ್ರಾಣೇಶ ವಿಠಲನ ಕರುಣವ ಪಡೆವೆ||10||

gurugaLa pada pankaja | smarisuve nityA |
duritauGagaLanu | ODisuvanattatta ||pa||

rAjEndra tapOnidhi | SrI jayadhvaja tIrtha |
rAjita puruShOtma | brahmaNya tIrtha||1||

madhvasiddhAnta saMsthApaka vyAsarAya pra |
siddha SrInivAsa SrI lakShmIkAMtA ||2||

ballIda SrIpati rAmachandra lakShmI |
vallaBa SrI lakShmInAtharenteMbA ||3||

SrI lakShmIpati tIrtha lakShmInArAyaNa |
nIlESa Bajakaru SrInAtha tIrtha ||4||

raGunAtha jagannAtha karajAta |
suguNa vidyAnAtha SrI vidyApatiyA ||5||

SrI vidyAnidhi raGunAtha SrI raGuvarya |
kOvida vinuta raGUttama tIrtha ||6||

vyAsa vidyApati vidyAdhISa tIrtha |
SrI satyavratara SrI satyanidhigaLa ||7||

guru satyanAtha SrI satyABinava tIrtha |
vara satyapUrNa SrI satya vijayarA ||8||

satya prIyara satyabOdha satya sandha |
satya varara satyadharmAKya munipA ||9||

I namma gurugaLa anudina smarisUta |
prANESa viThalana karuNava paDeve||10||

dasara padagalu · MADHWA · parampara · pranesha dasaru

Gurugala anudina neneve naa

ಗುರುಗಳನನುದಿನ ನೆನೆವೆ ನಾ
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||

ಪಾರ್ಥ ರಕ್ಷಕನ ಸೇ  ವಾರ್ಥ ಖಳರ ಕೊಂದು
ಕೀರ್ತಿ ಪಡೆದ ಸುಖ  ತೀರ್ಥರೆಂತೆಂಬಾ || 1 ||

ನೀ ಪಾಲೀಸೆಂದೆನಲಾಪತ್ತು ಬಿಡಿಸುವ
ಮಾಪತಿ ನಿಜದೂತ  ಶ್ರೀ ಪದ್ಮನಾಭ || 2 ||

ಕರಿಪತಿ ಬಳಿಯಿಂದ  ಧರಿಜ ಪತಿಯ ತಂದು
ಗುರುಗಳಿಗಿತ್ತೀಹ  ನರಹರಿ ತೀರ್ಥಾ || 3 ||

ಬಾದರಾಯಣ ದಿವ್ಯ  ಪಾದ ಜಲಜ ಭೃಂಗ
ಭೂದೇವ ವಂದಿತ  ಮಾಧವ ತೀರ್ಥ || 4 ||

ಇಕ್ಷುಚಾಪನ ಮ್ಯಾಳ  ಲಕ್ಷ್ಮೀ ಇಲ್ಲದೆ ಬಲು
ಪೇಕ್ಷೆ ಮಾಡಿದ  ಅಕ್ಷೊಭ್ಯ ಮುನಿಪ || 5 ||

ದಯಮಾಡಿರೆಂದು ವಿ  ನಯದಿಂದ ಭಜಿಪರ
ಬಯಕೀ ಪೂರೈಸುವ  ಜಯತೀರ್ಥರೆಂಬ || 6 ||

ಅದ್ವೈತ ಗಜ ಸಿಂಹ  ಮಧ್ವ ಮತೋದ್ಭವ
ಸದ್ವೈಷ್ಣವ ಪ್ರೀಯ  ವಿದ್ಯಾಧಿರಾಜ || 7 ||

ಸಂದೇಹವಿಲ್ಲದೇ  ವಂದೀಪ ಜನರಾಸೆ
ತಂದುಕೊಡುವ ದಯ  ಸಿಂಧು ಕವೀಂದ್ರಾ || 8 ||

ರಾಗ ವರ್ಜಿತ ಭಾಗವತರ ಪಾಲ
ಯೋಗಿ ಶಿರೋಮಣಿ  ವಾಗೀಶ ಮುನಿಪ || 9 ||

ಸಾರಿದ ಭಕುತರ  ಘೋರಿಪ ಅಘಗಳ
ದೂರ ಓಡಿಸುತಿಪ್ಪ  ಶ್ರೀ ರಾಮಚಂದ್ರ || 10 ||

ಕು ಭವದೊಳಿರುವಾರ  ಸೊಬಗಿನಿಂದಲಿ ನೋಡಿ
ಅಭಯ ಕೊಡುತಿಪ್ಪ  ವಿಬುಧೇಂದ್ರ ತೀರ್ಥ || 11 ||

ಭ್ರಾಮಕ ಜನ ಶಿಕ್ಷ  ಧೀಮಂತ ಜನ ಪಕ್ಷ
ಹೇಮ ವರಣಾಂಗ ಜಿ  ತಾಮಿತ್ರ ಮುನಿಪಾ || 12 ||

ಬಗೆ ಬಗೆ ಭಜಿಸಲು  ಇಗಡ ಜನರನೊಲ್ಲ
ಬಗಿವಾನು ಸುಜನರ  ರಘುನಂದನಾರ್ಯ || 13 ||

ಪೊಂದಿದವರ ನೋಯ  ದಂದದಿ ಸಲಹುವ
ಎಂದೆಂದು ಬಿಡದ ಶ್ರೀ ಸು  ರೇಂದ್ರಾಖ್ಯ ಮುನಿಪ || 14 ||

ನಿಜಭಕ್ತಿಯಲಿ ಪಾದ  ಭಜಿಸುವ ಅಗಣಿತ
ಸುಜನರ ಸಲಹುವ  ವಿಜಯಿಂದ್ರ ಮುನಿಪ || 15 ||

ವೀಂದ್ರ ವಾಹನ ಯಾದ  ವೇಂದ್ರಾಂಘ್ರಿ ಭಜಿಸುವ
ಸಾಂದ್ರ ಭಕ್ತಿಯಲಿ ಸು  ಧೀಂದ್ರಾಖ್ಯ ಮುನಿಪಾ || 16 ||

ಧಾರುಣಿಯೊಳಗತಿ  ಚಾರು ವೃಂದಾವನ
ದೀ ರಾಜಿಸುತಿಪ್ಪ  ಶ್ರೀ ರಾಘವೇಂದ್ರಾ || 17 ||

ಶ್ಲಾಘೀನ ಗುಣನಿಧಿ  ಮಾಗಧ ರಿಪು ದಾಸ
ರಾಘವೇಂದ್ರರ ಪುತ್ರ  ಯೋಗೀಂದ್ರ ತೀರ್ಥ || 18 ||

ವೈರಾಗ್ಯ ಗುಣದಿಂದ  ಮಾರಾರೀಯಂದದಿ
ತೋರುವರನು ದಿನ  ಸೂರೀಂದ್ರ ತೀರ್ಥ || 19 ||

ಕುಮತವೆಂಬಗಣೀತ  ತಿಮಿರ ಓಡಿಸುವಲ್ಲಿ
ಕಮಲಾಪ್ತನಂತೀಹ  ಸುಮತೀಂದ್ರ ತೀರ್ಥ || 20 ||

ಸಲ್ಲಾದ ಸುಖಗಳ  ನೆಲ್ಲಾವು ಜರಿದು ಶ್ರೀ
ನಲ್ಲಾನ ಭಜಿಸಲು  ಬಲ್ಲ ಉಪೇಂದ್ರಾ || 21 ||

ಮೋದ ಮುನಿ ಮತ ಮ  ಹೋದಧಿ ಚಂದ್ರ ವಿ
ದ್ಯಾದಿ ದಾನಾಸಕ್ತ  ವಾದೀಂದ್ರ ತೀರ್ಥ || 22 ||

ಬಿಸಜನಾಭನ ದೂತ  ವಸುಧಿಯೊಳಗೆ ಖ್ಯಾತ
ಕಿಸಲಯೋಪಮ ಪಾದ  ವಸುಧೀಂದ್ರ ತೀರ್ಥ || 23 ||

ಪರ ಮತೋರಗ ವೀಪ  ಕರುಣಿ ವಿಗತ ಕೋಪ
ವರ ವೇದ ಸುಕಲಾಪ  ವರದೇಂದ್ರ ಭೂಪ || 24 ||

ವಿರಕ್ತಿ ಮತಿ ಪಾಲಿಪ  ವಾದಿ ವಿಜಯ ಧೀರ
ವರದಾ ತೀರಸ್ಥ  ಧೀರೇ೦ದ್ರ ತೀರ್ಥ || 25 ||

ಸುವಿವೇಕಿಗಳಿಗಿಷ್ಟ  ತವಕದಿಂದಲಿ ಈವ
ಕವಿಭಿರೀಡಿತ ಪಾದ  ಭುವನೇಂದ್ರ ತೀರ್ಥ || 26 ||

ಶಬರೀ ವಲ್ಲಭನಂಘ್ರಿ  ಅಬುಜಾಳಿ ಸೂರ್ಯ ಸ
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||

ಪ್ರಾಣೇಶ ವಿಠಲನ  ಕಾಣಬೇಕಾದರೆ
ಈ ನಮ್ಮ ಗುರುಗಳ  ಧ್ಯಾನದೊಳಿಹದೂ || 28 ||

gurugaLananudina neneve nA
durita daTTuLi sAre bandItinnEnA || pa ||

pArtha rakShakana sE vArtha KaLara kondu
kIrti paDeda suKa tIrtharenteMbA || 1 ||

nI pAlIsendenalApattu biDisuva
mApati nijadUta SrI padmanABa || 2 ||

karipati baLiyinda dharija patiya tandu
gurugaLigittIha narahari tIrthA || 3 ||

bAdarAyaNa divya pAda jalaja BRunga
BUdEva vandita mAdhava tIrtha || 4 ||

ikShucApana myALa lakShmI illade balu
pEkShe mADida akShoBya munipa || 5 ||

dayamADirendu vi nayadinda Bajipara
bayakI pUraisuva jayatIrthareMba || 6 ||

advaita gaja siMha madhva matOdBava
sadvaiShNava prIya vidyAdhirAja || 7 ||

sandEhavilladE vandIpa janarAse
tandukoDuva daya sindhu kavIndrA || 8 ||

rAga varjita BAgavatara pAla
yOgi SirOmaNi vAgISa munipa || 9 ||

sArida Bakutara GOripa aGagaLa
dUra ODisutippa SrI rAmachandra || 10 ||

ku BavadoLiruvAra sobaginindali nODi
aBaya koDutippa vibudhEndra tIrtha || 11 ||

BrAmaka jana SikSha dhImanta jana pakSha
hEma varaNAnga ji tAmitra munipA || 12 ||

bage bage Bajisalu igaDa janaranolla
bagivAnu sujanara raGhunandanArya || 13 ||

pondidavara nOya dandadi salahuva
endendu biDada SrI surEndrAKya munipa || 14 ||

nijaBaktiyali pAda Bajisuva agaNita
sujanara salahuva vijayindra munipa || 15 ||

vIndra vAhana yAda vEndrAnGri Bajisuva
sAndra Baktiyali su dhIndrAKya munipA || 16 ||

dhAruNiyoLagati cAru vRundAvana
dI rAjisutippa SrI rAGhavEndrA || 17 ||

SlAGIna guNanidhi mAgadha ripu dAsa
rAGhavEndrara putra yOgIndra tIrtha || 18 ||

vairAgya guNadinda mArArIyandadi
tOruvaranu dina sUrIndra tIrtha || 19 ||

kumataveMbagaNIta timira ODisuvalli
kamalAptanantIha sumatIndra tIrtha || 20 ||

sallAda suKagaLa nellAvu jaridu SrI
nallAna Bajisalu balla upEndrA || 21 ||

mOda muni mata ma hOdadhi chandra vi
dyAdi dAnAsakta vAdIndra tIrtha || 22 ||

bisajanABana dUta vasudhiyoLage KyAta
kisalayOpama pAda vasudhIndra tIrtha || 23 ||

para matOraga vIpa karuNi vigata kOpa
vara vEda sukalApa varadEndra BUpa || 24 ||

virakti mati pAlipa vAdi vijaya dhIra
varadA tIrastha dhIrEndra tIrtha || 25 ||

suvivEkigaLigiShTa tavakadindali Iva
kaviBirIDita pAda BuvanEndra tIrtha || 26 ||

SabarI vallaBananGri abujALi sUrya sa
nniBa vAdi gajasiMha subOdhEndra tIrtha || 27 ||

prANESa viThalana kANabEkAdare
I namma gurugaLa dhyAnadoLihadU || 28 ||

Gowri · MADHWA · pranesha dasaru · sulaadhi

Sri Parvathi devi sthothra sulaadhi

ಧೃವತಾಳ
ಉಮಾ ಕಾತ್ಯಾಯಿನಿ ಪಾವ೯ತಿ ಕಲ್ಯಾಣಿ|
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |
ಕಮ್ಮಗೋಲನ ಜನನಿ ದಾಕ್ಷಾಯಿಣಿ |
ಸುಮನಸರಿಗೆ ಗತಿ ಕರುಣಾಪೂರಿತ ಪಾಂಗೆ|
ಕುಮನಸರಿಗತಿ ವಜ್ರ ಕಠಿಣ ಪಾಂಗೆ |
ರಮೆಯರಸನ ಪಾದಸುಮನಸ್ವ ಭೃಂಗೆ |
ಬೊಮ್ಮಭಿನವ ಪ್ರಾಣೇಶ ವಿಠಲನ |
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ

ಮಟ್ಟತಾಳ
ಚಂಡಿದುರ್ಗೆ ಭೂತಗಣ ಸಂಸೇವಿತಳೆ |
ರುಂಡಾಹಿ ಮಾಲಾಧರ ಹೃನ್ಮಂದಿರಳೆ |
ಉಂಡು ವಿಷವ ನಿನ್ನ ಗಂಡನು ಬಳಲಿ |
ಕೈಕೊಂಡೌಷಧವೆನಗೆ ಕರುಣದಿ ನೀಡಮ್ಮ ಮಂಡೆ ಬಾಗಿ ಬೇಡ್ವೆ |
ಕರಗಳ ಜೋಡಿಸುತ | ಪುಂಡರೀಕ ನಯನೆ ಪುಂಡರೀಕ ಗಮನೆ |
ಪಂಢರ ಅಭಿನವ ಪ್ರಾಣೇಶ ವಿಠಲನ |
ಪುಂಡರೀಕ ಚರಣ ಬಂಡುಣಿ ಎನಿಸಮ್ಮಾ||

ತ್ರಿವಿಡಿತಾಳ
ಆರುಮೊಗನ ಪೆತ್ತ ಚಾರು ಚರಿತ್ರಳೆ |
ವಾರಣಾರಿ ವೃಷಭಶ್ಯಂದನಳೆ |
ಶ್ರೀ ರಜಪತಿ ರಾಮನಾಮ ಮಂತ್ರವ ಜಪಿಸಿ |
ಸರ್ವಮಂಗಳೆಯಾದ ಶರ್ವಾಣಿಯೆ ನಾರಿಯರಾಭಿಷ್ಟ ಪೂರೈಸುತವರಿಗೆ |
ವೀರ ಪತಿವ್ರತೆ ಧರ್ಮ ಮರ್ಮವ ತೋರ್ದ| ವಾರಿಜನಯನೆ ಮಂಗಳಗೌರಿಯೇ |
ಮಾರಮಣಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ

ಅಟ್ಟತಾಳ
ಹರಿ ಸರ್ವೋತ್ತಮನೆಂಬ ಸ್ಥಿರವಾದ ಜ್ಞಾನವ |
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ |
ದುರುಳ ದಾನವರಂತೆ ಪರಮೇಶ ಶಿವನೆಂದು ಪೆರಧರ ಪರನೆಂದು ನುಡಿಸದಿರೆಂದೆಂದು |
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ |
ಸಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣ ವಾರಿಜ ಭೃಂಗೆ ಸರ್ವಭಕ್ತಾಂತರಂಗೆ ||

ಆದಿತಾಳ
ಭಾಸುರ ಚರಿತಳೆ ಭೂಸುರ ವಿನುತಳೆ |
ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ |
ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು |
ಮೇಷಾಭಿನವ ಪ್ರಾಣೇಶ ವಿಠಲನ|
ದಾಸ್ಯತನವನಿತ್ತು ಪೋಷಿಸುವದೆಮ್ಮಾ||

ಜತೆ
ಅಜನಾಮಭಿನವ ಪ್ರಾಣೇಶ ವಿಠಲನ|
ನಿಜ ದಾಸನೆಂದೆನಿಸು ಸುಜನ ಪೋಷಕಳೆ


dhruvatala
Uma katyayini pava9ti kalyani|
bomma brukuti sambuta devana rani |
kammagolana janani dakshayini |
sumanasarige gati karunapurita pange|
kumanasarigati vajra kathina pange |
rameyarasana padasumanasva brunge |
bommabinava pranesa vithalana |
sumana caranagalalli manava prerisu taye

Mattatala
Chandidurge butagana samsevitale |
rundahi maladhara hrunmandirale |
undu vishava ninna gandanu balali |
kaikondaushadhavenage karunadi nidamma mande bagi bedve | karagala jodisuta | pundarika nayane pundarika gamane |
pandhara abinava pranesa vithalana |
pundarika charana banduni enisamma||

Trividitala
Arumogana petta caru caritrale |
varanari vrushabasyandanale |
sri rajapati ramanama mantrava japisi |
sarvamangaleyada sarvaniye nariyarabishta puraisutavarige |
vira pativrate dharma marmava torda|
varijanayane mangalagauriye |
maramanabinava pranesa vithalana |
charu charanagalalli manava prerisu tayi

Attatala
Hari sarvottamanemba sthiravada j~janava |
karunisu karunisu seragoddi beduve |
durula danavarante paramesa Sivanendu peradhara paranendu nudisadirendendu |
siriyarasana pedda paricharyavanu kodu |
marulondu bayasenu kesa shanmukamate |

Sirivara abinava pranes vithalana |
carana varija brunge sarvabaktantarange ||

Aditala
Basura caritale busura vinutale |
sasira namana toshadi bajipale |
vasavadi divijesa ganarcite |
dasarathi hari vasudeva pada |
sasira patradi dhrudha Bakutiya kodu |
meshabinava pranesa vithalana|
dasyatanavanittu poshisuvademma||

Jate
Ajanamabinava pranesa vithalana|
Nija dasanendenisu sujana poshakale