ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ||pa||
ಭೂಸುರ ಸೇವಿತ | ಭಾಸುರ ಮಹಿಮ ಉ
ದಾಶೀನ ಮಾಡದೆ | ದೋಷಗಳೆಣಿಸದೆ ||a.pa||
ಪದುಮಸಂಭವ ಕುಲದಿ ಜನಿಸುತ
ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ
ವಿಧ ವಿಧದಿ ಬೋಧಿಸಿ
ಮದಡರುದ್ಧರಿಸಿದ | ಸದಮಲ ಹೃದಯ ||1||
ನತಜನ ಸುರತರುವೆನಿನ್ನನು
ತುತಿಸಿಲೆನಗೊಶವೆ |
ಸತತದಿ ಸೇವಿಸಿ | ಯತಿ ವರದೇಂದ್ರರ
ಹಿತದಲಿ ಪಡೆದ ಪ್ರತಿ ಪ್ರಭಾಕರ ||2||
ತರತಮ ಭೇದವನು | ಶ್ರೀವರ
ಹರಿದಿನ ಮಹಿಮೆಯನು
ಸರಳಕನ್ನಡದಿ ವಿರಚಿಸಿ ಕವನವ
ನೊರೆದು ಸಜ್ಜನರ ಪೊರೆವ ಮಹಾತ್ಮಾ ||3||
ವಾತಜಾತ ಸುಮತ ಸಾಗರ
ಶೀತಕಿರಣ ನಿರುತ
ಪೋತನೊಳೀತರ | ಯಾತಕೆ ನಿರ್ದಯ
ನೀತವಕದಿ ಸಂಪ್ರೀತಿಯಿಂದೊಲಿದು ||4||
ಪ್ರೇಮದಿ ಪಿಡಿಕೈಯ | ಮಾನವಿ
ಧಾಮರ ಸುವಿಧೇನು
ಶಾಮಸುಂದರೆನ | ನಾಮನೆನೆವ ಸುಖ
ಯಾಮ ಯಾಮಕೀಪಾಮರಗೀಯುತ ||5||
pOShisenna jIya SrI prANESadAsarAya ||pa||
BUsura sEvita | BAsura mahima u
dASIna mADade | dOShagaLeNisade ||a.pa||
padumasaMBava kuladi janisuta
vidurAgraja jagadi | yadupati sukatheya
vidha vidhadi bOdhisi
madaDaruddharisida | sadamala hRudaya ||1||
natajana surataruveninnanu
tutisilenagoSave |
satatadi sEvisi | yati varadEndrara
hitadali paDeda prati praBAkara ||2||
taratama BEdavanu | SrIvara
haridina mahimeyanu
saraLakannaDadi viracisi kavanava
noredu sajjanara poreva mahAtmA ||3||
vAtajAta sumata sAgara
SItakiraNa niruta
pOtanoLItara | yAtake nirdaya
nItavakadi saMprItiyindolidu ||4||
prEmadi piDikaiya | mAnavi
dhAmara suvidhEnu
SyAmasundarena | nAmaneneva suKa
yAma yAmakIpAmaragIyuta ||5||
ದಾಸರಾಯರ ದಿವ್ಯ ಚರಣ ಭಜಿಸಿ
ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ||pa||
ದಾಸರಾಯರ ಪಾದ ಭಜಿಪ ಸದ್ಭಕ್ತರ
ಏಸುಜನುಮದ ಪಾಪರಾಶಿ ಪರಿಹರವು
ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು
ಲೇಶ ಸಂಶಯವಿಲ್ಲ ಆಲಸವು ಸಲ್ಲ ||1||
ಮರುತಮತ ತತ್ವದ ತೆರೆಗಳಿಂ ಸೂಸುತ
ಧರಣಿಸುರರಿಗೆ ರಾಮನಾಮಾಮೃತ
ನಿರುತಭಜಿಸಲು ಜ್ಞಾನ ವೈರಾಗ್ಯ ತರುಮಣಿಯ
ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ ||2||
ಸುಜ್ಞಾನ ವೆಂಬಂಥ ಕಿರಣಗಳ ಪಸರಿಸುವ
ಅಜ್ಞಾನ ತಿಮಿರವನು ದೂರೋಡಿಪ
ಸೂಜ್ಞರೆಂಬುವ ತಾವರೆಗಳರಳಿಸುವಂಥ
ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ ||3||
ನಮಿಪಜನ ಭವತಾಪಕಳೆದು ಸದ್ಭಕ್ತಿಯಂ –
ಬಮಿತ ಅಹ್ಲಾದವನು ಬೀರುವಂಥ
ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ
ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ ||4||
ದಾಸಕುಲತಿಲಕ ಪ್ರಾಣೇಶರಾಯನ ಕವನ
ಶ್ರೀಶಕಥೆಗಳ ರಾಶಿಮೀಸಲಾಗಿರಲು
ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ
ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ||5||
ಈ ಗುರುಗಳ ಪಾದಕೆರಗಿದ್ದ ಶಿರಧನ್ಯ
ಈ ಗುರುಗಳೀಕ್ಷಿಸಿದ ನೇತ್ರ ಧನ್ಯ
ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ
ಈ ಗುರುಗಳನು ಮನದಿ ನೆನೆವÀನರ ಧನ್ಯ ||6||
ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ
ಶ್ರೀಗುರುಪ್ರಾಣೇಶ ಭಜಕರೆನಿಪ
ನಾಗಪರಿಯಂತ ವರದೇಶ ವಿಠಲನ ಪ್ರೀಯ
ಯೋಗಿ ವರದೇಂದ್ರ ಮುನಿಗಳ ಪಾದ ಭೃಂಗ ||7||
dAsarAyara divya caraNa Bajisi
SrI prANESadAsArya guruvaryA ||pa||
dAsarAyara pAda Bajipa sadBaktara
Esujanumada pAparASi pariharavu
SrISanali sadBakti lEsAgi puTTuvadu
lESa saMSayavilla Alasavu salla ||1||
marutamata tatvada teregaLiM sUsuta
dharaNisurarige rAmanAmAmRuta
nirutaBajisalu j~jAna vairAgya tarumaNiya
hariBakuti dhEnuvannIvaÀ pAlgaDalenipa ||2||
suj~jAna veMbabtha kiraNagaLa pasarisuva
aj~jAna timiravanu dUrODipa
sUj~jareMbuva tAvaregaLaraLisuvabtha
aj~jakumudugaLa bADisuva BAskaranenipa ||3||
namipajana BavatApakaLedu sadBaktiyaM –
bamita ahlAdavanu bIruvantha
SamadamAdigaLa candrikeyinda SOBisuva
vimala harijana cakOrake caMdraneMdenipa ||4||
dAsakulatilaka prANESarAyana kavana
SrISakathegaLa rASimIsalAgiralu
A suBaktarige santOShagoLisulu sarva
dESadali meresi satkIrtiyanu paDedantha||5||
I gurugaLa pAdakeragidda Siradhanya
I gurugaLIkShisida nEtra dhanya
I gurugaLa vANi kELidda kivi dhanya
I gurugaLanu manadi nenevaÀnara dhanya ||6||
rAgadvEShAdigaLa geddu sadBaktiyiM
SrIguruprANESa Bajakarenipa
nAgapariyanta varadESa viThalana prIya
yOgi varadEndra munigaLa pAda BRunga ||7||
One thought on “Dasara padagalu on pranesha dasaru”