dasara padagalu · MADHWA · mohana dasaru

Dasara padagalu on Mohana dasaru

ಪಾಹಿ ಪಾಹಿ ಗುರು ಮೋಹನ ರಾಯಾ ಪಾಹಿ ಪಾಹಿ ||pa||

ಪಾಹಿ ಪಾಹಿ ಗುರು ಮೋಹನ ಸಿಂಧುರ ಹರಿಪಾದ ಪಂಕೇರುಹ ಮಧುಪಾ ||a.pa||

ನವ ವಿಧ ಭಕುತಿ ಎಂಬೊ ನವ ನವ ಸರಪಳಿಯೊಳು |
ನವ ನವ ರೂಪದಿ ನಲಿವ ಸುಧೀರಾ ||1||

ಪದುಮನಾಭನ ಧ್ಯಾನವ ಮದವೇರಿ |
ಪದೋ ಪದಿಗೆಹರಿಪದಾವಗಾಹಿ ||2||

ವಿಜಯರಾಯರ ಪಾದರಜವ ಧರಿಸಿ ನೀ- |
ರಜ ಪ್ರಾಣೇಶ ವಿಠಲನಲ್ಲೆರಗಿದೊ ||3||
pAhi pAhi guru mOhana rAyA pAhi pAhi ||pa||

pAhi pAhi guru mOhana siMdhura haripAda pankEruha madhupA ||a.pa||

nava vidha Bakuti eMbo nava nava sarapaLiyoLu |
nava nava rUpadi naliva sudhIrA ||1||

padumanABana dhyAnava madavEri |
padO padigeharipadAvagAhi ||2||

vijayarAyara pAdarajava dharisi nI- |
raja prANESa viThalanalleragido ||3||


ಇನ್ನಾದರು ಎನ್ನ ಪೊರೆಯೊ | ಮೋಹನರಾಯನಿನ್ನವನಲ್ಲವೇನೋ ||pa||

ಎನ್ನನೀಪರಿ ಬನ್ನ ಬಡಿಪದುಚಿತವೇನೋಚೆನ್ನ ಶ್ರೀ ವಿಜಯ ದಾಸಾರ್ಯರ ಚಿಣ್ಣಾ ||a.pa||

ಎನ್ನ ಪಾಲಿಸಿದಂದದೀ | ಸಕಲ ಪ್ರಪನ್ನರ ಸಲಹುವುದೆಂದೂ ಬಿನ್ನಪಗೈದು ಮೋ
ಹನ್ನ ವಿಠಲನೀಗೆ ಘನ್ನುಪಕಾರವ ಮಾಡಿದ ಧೀರಾ ||1||

ಮನ್ನವಚ ಕಾಯದಿ | ನಿನ್ನಯ ಚರಣ |ವನ್ನು ಪೂಜಿಪೆ ಮೋಹನ್ನ |
ಮನ್ನಿಸಿಯೆನ್ನಯ ಅವಗುಣವೆಣಿಸದೆಕುನ್ನಿಯ ಕಾಯೊ ಸದ್ಗುರುವೆ ಪ್ರಸನ್ನ ||2||

ಯುಕ್ತಿ ಕಥೋಕ್ತೀಲಿ ಪವನ | ಮತದ ಸಾರ |ಭಕ್ತರಿಗರ್ಥಿಲಿ ಸ್ತವನ |
ಮುಕ್ತಿದಾಯಕ ಗುರುಗೋವಿಂದ ವಿಠಲನವ್ಯಕ್ತಮಾಡಿಸೊ ಗುರು ಮೋಹನ್ನರಾಯಾ ||3||
innAdaru enna poreyo | mOhanarAyaninnavanallavEnO ||pa||

ennanIpari banna baDipaducitavEnOcenna SrI vijaya dAsAryara ciNNA ||a.pa||

enna pAlisidandadI | sakala prapannara salahuvudendU binnapagaidu mO
hanna viThalanIge GannupakArava mADida dhIrA ||1||

mannavaca kAyadi | ninnaya caraNa |vannu pUjipe mOhanna |
mannisiyennaya avaguNaveNisadekunniya kAyo sadguruve prasanna ||2||

yukti kathOktIli pavana | matada sAra |Baktarigarthili stavana |
muktidAyaka gurugOvinda viThalanavyaktamADiso guru mOhannarAyA ||3||

One thought on “Dasara padagalu on Mohana dasaru

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s