ದಾಸರಾಯ ಪೋಷಿನೆನ್ನನ್ನು । ಪ್ರಾರ್ಥಿಸುವೆ ।
ಶೇಷದಾಸವರ್ಯ ಪೋಷಿಸೆನ್ನನು ।। ಪ ।।
ಪೋಷಿಸೆನ್ನ ಮನದಿ ಬಹ ।
ದೋಷಗಳನು ತರಿದು । ಇಂದಿ ।
ರೇಶನಂಘ್ರಿ ಧ್ಯಾನವ ಪ್ರತಿ ।
ವಾಸರದಲಿ ಒದಗುವಂತೆ ।। ಅ. ಪ ।।
ದೇಶ ದೇಶಗಳಲಿ ಭಜಿಪ ।
ದಾಸ ಜನರ ಮನದ । ಅಭಿ ।
ಲಾಷೆಗಳನು ಸಲಿಸುತಲಿ । ಸು ।
ರೇಶನಂತೆ ಮೆರೆದ ಶೇಷ ।। 1 ।।
ಮಂದನಾದರೂ ನಿಮ್ಮಯ ಪದ ।
ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।
ನೆಂದು ಕರೆಸುವೆನು ಯೆನುತ ನಾ ।
ವಂದಿಸುವೆ ಸುಜ್ಞಾನವಿತ್ತು ।। 2 ।।
ಕರುಣ ಶರಧೆ ನಿಮ್ಮ ನಾನು ।
ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।
ಳಿರದೆ ಪೋಪವು ಶರಣು ಜನರ ।
ದುರಿತ ಘನಕೆ ಮರುತರೆನಿಪ ।। 3 ।।
ಈ ಮಹಿಯೊಳಗಾದಿ ಶಿಲೆಯ ।
ಸ್ವಾಮಿಯ ಪದದಿನೆ ತ್ರಿಪಥ ।
ಗಾಮಿನಿಯಳ ತೋರಿ ಸ್ವಜನ ।
ಕಾಮಿತವ ಪೂರೈಸಿದಂತೆ ।। 4 ।।
ಶೇರಿದ ಪರಿವಾರಕ್ಕೆ ಸುರ ।
ಭೂರುಹವೆಂದೆನಿಸುವಂಥಾ ।
ಪಾರ ಮಹಿಮ ಕಾರ್ಪರ ಸಿರಿ ।
ನರಸಿಂಹನ ನೊಲಿಸಿದಂಥಾ ।। 5।।
dAsarAya pOShinennannu | prArthisuve |
SEShadAsavarya pOShisennanu || pa ||
pOShisenna manadi baha |
dOShagaLanu taridu | iMdi |
rESanaMGri dhyAnava prati |
vAsaradali odaguvaMte || a. pa ||
dESa dESagaLali Bajipa |
dAsa janara manada | aBi |
lAShegaLanu salisutali | su |
rESanaMte mereda SESha || 1 ||
mandanAdarU nimmaya pada |
dvandva Bajise jagadi | prAj~ja |
nendu karesuvenu yenuta nA |
vandisuve suj~jAnavittu || 2 ||
karuNa Saradhe nimma nAnu |
smaraNe mAtradi BUta prEta| ga |
Lirade pOpavu SaraNu janara |
durita Ganake marutarenipa || 3 ||
I mahiyoLagAdi Sileya |
svAmiya padadine tripatha |
gAminiyaLa tOri svajana |
kAmitava pUraisidante || 4 ||
SErida parivArakke sura |
BUruhaveMdenisuvanthA |
pAra mahima kArpara siri |
narasiMhana nolisidanthA || 5||
ಪೋಷಿಸು ಎನ್ನಯ ।
ದೋಷಗಳೆಣಿಸದೆ ದಾಸರಾಯ ।
ಶೇಷ ನಾಮಕನೆ । ವಿ
ಶೇಷ ಜ್ಞಾನವನೇಯೋ ದಾಸರಾಯ ।। ಪ ।।
ಸಂತತ ಕರಪಿಡಿ ।
ಸಂತರೊಡೆಯ ಗುರು ದಾಸರಾಯ ।
ಸಂತೋಷ ತೀರ್ಥರ ।
ಅಂತಃಕರುಣ ಪಾತ್ರ ದಾಸರಾಯ ।।
ಚಿಂತಿಪ ಜನರಿಗೆ ।
ಚಿಂತಾಮಣಿಯು ನೀನೆ ದಾಸರಾಯ ।
ಚಿಂತ ರಹಿತ ವರ ।
ಚಿಂತರವೇಲಿ ವಾಸ ದಾಸರಾಯ ।। 1 ।।
ಕುಂಭಿಣಿದೇವಕ ।
ದಂಬ ಸಂಸೇವಿತ ದಾಸರಾಯ ।
ಬೆಂಬಿಡದತಿ ಮನದ ।
ಹಂಬಲ ಪೂರೈಸು ದಾಸರಾಯ ।।
ನಂಬಿದ ದ್ವಿಜರಿಗೆ ।
ಶಂಭುಗಿರಿಯಲ್ಲಿ ದಾಸರಾಯ ।
ಬಾಂಬೋಳೆ ತೋರಿಸಿ ।
ಸಂಭ್ರಮಗೊಳಿಸಿದ ದಾಸರಾಯ ।। 2 ।।
ಹರಿಕೇತು ಹರಿಸುತ ।
ಹರಿಣಾಂಕ ಕುಲ ಜಾತ ದಾಸರಾಯ ।
ಹರಿಕೇತು ಹರುಸುತಾ ।
ದ್ಯರನ ಸಂಹರಿಸಿದ ದಾಸರಾಯ ।।
ಹರಿದಾಡುತಿಹ ಮನ ।
ಹರಿಯಲ್ಲಿ ನಿಲಿಸಯ್ಯ ದಾಸರಾಯ ।
ಹರಿವೈರಿಮತಕರಿ ಹರಿ ।
ಪರಿಹರಿಸಘ ದಾಸರಾಯ ।। 3 ।।
ಅರ್ಥ ಜನರ । ಇ ।
ಷ್ಟಾರ್ಥವ ಜಗದೊಳು ದಾಸರಾಯ ।
ಪೂರ್ತಿಸುವ ನಿನ್ನ ।
ವಾರ್ತಿ ಕೇಳಿ ಬಂದೆ ದಾಸರಾಯ ।।
ಪಾರ್ಥಿವ ವರುಷದಿ ।
ಪಾರ್ಥಸಾರಥಿ ನಿನ್ನ ಭವ್ಯ ದಾಸರಾಯ ।
ಮೂರ್ತಿ ಸ್ಥಾಪಿಸಿ ।
ಕೀರ್ತಿಯ ಪಡೆದಿ ದಿವ್ಯ ದಾಸರಾಯ ।। 4 ।।
ನೇಮ ನಿಷ್ಠೆಯ ಬಿಟ್ಟು ।
ಪಾಮರನಾದೆನಗೆ ದಾಸರಾಯ ।
ಶ್ರೀಮಧ್ವ ನಿಗಮಾರ್ಥ ।
ಪ್ರೇಮದಿ ತಿಳಿಸಯ್ಯ ದಾಸರಾಯ ।।
ಕಾಮಾದಿಷಡ್ವೈರಿ ।
ಸ್ತೋಮಾದ್ರಿಕುಲಿಶನೆ ದಾಸರಾಯ ।
ಕಾಮಿತ ಫಲದಾತ ।
ಶ್ಯಾಮಸುಂದರರ ದೂತ ದಾಸರಾಯ ।।5।।
pOShisu ennaya |
dOShagaLeNisade dAsarAya |
SESha nAmakane | vi
SESha j~jAnavanEyO dAsarAya || pa ||
santata karapiDi |
santaroDeya guru dAsarAya |
santOSha tIrthara |
antaHkaruNa pAtra dAsarAya ||
cintipa janarige |
cintAmaNiyu nIne dAsarAya |
cinta rahita vara |
cintaravEli vAsa dAsarAya || 1 ||
kuMBiNidEvaka |
daMba saMsEvita dAsarAya |
beMbiDadati manada |
haMbala pUraisu dAsarAya ||
naMbida dvijarige |
SaMBugiriyalli dAsarAya |
bAMbOLe tOrisi |
saMBramagoLisida dAsarAya || 2 ||
harikEtu harisuta |
hariNAMka kula jAta dAsarAya |
harikEtu harusutA |
dyarana saMharisida dAsarAya ||
haridADutiha mana |
hariyalli nilisayya dAsarAya |
harivairimatakari hari |
pariharisaGa dAsarAya || 3 ||
artha janara | i |
ShTArthava jagadoLu dAsarAya |
pUrtisuva ninna |
vArti kELi bande dAsarAya ||
pArthiva varuShadi |
pArthasArathi ninna Bavya dAsarAya |
mUrti sthApisi |
kIrtiya paDedi divya dAsarAya || 4 ||
nEma niShTheya biTTu |
pAmaranAdenage dAsarAya |
SrImadhva nigamArtha |
prEmadi tiLisayya dAsarAya ||
kAmAdiShaDvairi |
stOmAdrikuliSane dAsarAya |
kAmita PaladAta |
SyAmasundarara dUta dAsarAya ||5||
One thought on “Dasara padagalu on Modalakalu sesha dasaru”