ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ಪತಿತ ಪಾವನ್ನ ||pa||
ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ||a.pa||
ವಿಜಯರಾಯರ ಪಾದವ ಆದರದಿಂದಭಜಿಸಿ ಸಂತತ ಮೋದವಾ
ನಿಜವಾಗಿ ಹೃದಯ ಪಂಕಜದೊಳಾಗಲು ಭವವ್ರಜದೊಳು ಮುಣಗಿಪ್ಪ
ಸುಜನ ಶಿರೋಮಣಿತ್ರಿಜಗ ವಂದಿತ ಗಜವರದ ಪಂ-ಕಜಪಿತ ಪಿನಾಕ ಜನರ ಕೂಡಾ ಸಾ-
ಹಜ ಭಕುತಿಯಲಿ ಯಜಿಸಿ ಮೋಹವೃಜನ ದಾಟಿ ದ್ವಿಜವರಾಗ್ರಣಿ ||1||
ಸಂತರ ಸಲಹುವನೇ ಸಂಗಡಲೇ ನಿ-ಶ್ಚಿಂತರ ಮಾಡುವುದೇ
ಎಂತು ಪೇಳಲು ಎನಗಂತು ತೋರದು ದುಷ್ಟಭ್ರಾಂತಿಯಿಂದಲಿ ಮಾಳ್ಪ
ಕಂತುಗಳಿಗೆ ಲೇಶಅಂತ ಕಾಲಕ್ಕೆ ಚಿಂತಾಕಾಲಯಾಪಂಥ ಸಾರುವದಿಂತು ಸರಿ ಜಗ-
ದಂತು ರಂಗನ ಮುಂತು ತಿಳಿವ-ದೆಂತುಪಾಯವು ಶಾಂತದಾತನೆ ||2||
ಅರಿದೇನು ಆಪ್ತ ಬಂಧು ಪಾಮರನ ಉ-ದ್ಧರಿಪದು ನಿನಗೆ ಇಂದು
ಸರಿಸಾ ದೂರದಿ ನಿನ್ನ ಸ್ಮರಣೆ ಮಾಡುವೆ ಆ-ಲ್ಪಿರಿದು ಬಾಯಿ ಬಿಡುವೆನೊ
ಮರೆಯಲಾಗದು ತಂದೆದುರುಳ ವಿಷಯಕ್ಕೆರಗುವೆ ಅಂತಃ-ಕರುಣ ನಿಲಿಸಿ
ಪೊರೆವ ಭಾರವುನಿರುತ ನಿನ್ನದು ವ್ಯಾಸವಿಠಲನಭರದಿ ಪೊಗಳುವ ಪರಮ ಧನ್ಯಾನೆ ||3||
karedu kai piDiyo enna vENudAsadoreye patita pAvanna ||pa||
karedu kai piDiyo nI karabiDade ninnacaraNave gatiyendu mare bidda manujanna ||a.pa||
vijayarAyara pAdava AdaradindaBajisi saMtata mOdavA
nijavAgi hRudaya pankajadoLAgalu BavavrajadoLu muNagippa
sujana SirOmaNitrijaga vandita gajavarada pan-kajapita pinAka janara kUDA sA-
haja Bakutiyali yajisi mOhavRujana dATi dvijavarAgraNi ||1||
santara salahuvanE sangaDalE ni-Scintara mADuvudE
entu pELalu enagantu tOradu duShTaBrAntiyindali mALpa
kantugaLige lESa^^anta kAlakke cintAkAlayApantha sAruvadintu sari jaga-
dantu rangana muntu tiLiva-dentupAyavu SAntadAtane ||2||
aridEnu Apta bandhu pAmarana u-ddharipadu ninage indu
sarisA dUradi ninna smaraNe mADuve A-lpiridu bAyi biDuveno
mareyalAgadu tandeduruLa viShayakkeraguve antaH-karuNa nilisi
poreva BAravuniruta ninnadu vyAsaviThalanaBaradi pogaLuva parama dhanyAne ||3||
One thought on “Dasara pada on Venugopala dasaru”