dasara padagalu · jagannatha dasaru · MADHWA · parampara

aa namipe guru santathige satata

ಆ ನಮಿಪೆ ಗುರುಸಂತತಿಗೆ ಸತತ ಗೆ
ಜ್ಞಾನ ಭಕ್ಯಾದಿಗಳ ಕರುಣಿಸಲಿ ಎನಗೆಂದು||pa||

ಹಂಸನಾಮಕ ಹರಿ ಬ್ರಹ್ಮಗುರುವರ ಸರೋ
ಜಾಸನ ಪುತ್ರರೆನಿಸಿಕೊಂಬಾ
ಆ ಸನಕ ಸನಂದನ ಕುಮಾರಕರ ಶಿಷ್ಯ ದೂ
ರ್ವಾಸಮುನಿ ಜ್ಞಾನನಿಧಿ ತೀರ್ಥ ಪದಾಬ್ಜಗಳಿಗೆ ||1||

ಗರುಡವಾಹನತೀರ್ಥ ಕೈವಲ್ಲಜ್ಞಾನೇಶ
ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ
ವರಕುಮಾರಕ ತಪೋರಾಜ ಸಂಯಮಿ ವಿಮಲ
ಕರಕಮಲ ಸಂಜಾತ ಅಚ್ಯುತ ಪ್ರೇಕ್ಷರಿಗೆ ||2||

ಶ್ರೀ ಮಧ್ವವರ ಪದ್ಮನಾಭ ನರಹರಿಮುನಿಪ
ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ
ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ
ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ ||2||

ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ
ಪದ್ಮ ಸಂಜಾತ ವೇದವ್ಯಾಸರಾ
ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ
ಶುದ್ಧಾತ್ಮ ಸತ್ಯನಾಥರ ಪಾದ ಕಮಲಗಳಿಗೆ ||4||

ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ
ಸತ್ಯಬೋಧರ ಸತ್ಯಸಂಧವರರಾ
ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ
ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು ||5||

Aa namipe gurusantatige satata ge
j~jAna BakyAdigaLa karuNisali enagendu||pa||

haMsanAmaka hari brahmaguruvara sarO
jAsana putrarenisikoMbA
A sanaka sanandana kumArakara SiShya dU
rvAsamuni j~jAnanidhi tIrtha padAbjagaLige ||1||

garuDavAhanatIrtha kaivallaj~jAnESa
paratIrtha satya praj~ja prAj~jarA
varakumAraka tapOrAja saMyami vimala
karakamala sanjAta acyuta prEkSharige ||2||

SrI madhvavara padmanABa naraharimunipa
SrI mAdhavakShOByayati jayArya
dhImanta vidyAdhirAja sukavIndra ni
ssIma vAgISayati rAmachandrAryarige ||2||

vidyAnidhi raGunAtha raGuvaryOttama kara
padma sanjAta vEdavyAsarA
vidyApati adhISanidhi satyavrata nidhiyA
SuddhAtma satyanAthara pAda kamalagaLige ||4||

satyABinava pUrNa satyavijaya prIyA
satyabOdhara satyasandhavararA
nityadali nenedu kRutakRutyanAguve biMba
mUrti jagannAthaviThalana tOrisalendu ||5||

dasara padagalu · MADHWA · parampara · pranesha dasaru

Gurugala anudina neneve naa

ಗುರುಗಳನನುದಿನ ನೆನೆವೆ ನಾ
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||

ಪಾರ್ಥ ರಕ್ಷಕನ ಸೇ  ವಾರ್ಥ ಖಳರ ಕೊಂದು
ಕೀರ್ತಿ ಪಡೆದ ಸುಖ  ತೀರ್ಥರೆಂತೆಂಬಾ || 1 ||

ನೀ ಪಾಲೀಸೆಂದೆನಲಾಪತ್ತು ಬಿಡಿಸುವ
ಮಾಪತಿ ನಿಜದೂತ  ಶ್ರೀ ಪದ್ಮನಾಭ || 2 ||

ಕರಿಪತಿ ಬಳಿಯಿಂದ  ಧರಿಜ ಪತಿಯ ತಂದು
ಗುರುಗಳಿಗಿತ್ತೀಹ  ನರಹರಿ ತೀರ್ಥಾ || 3 ||

ಬಾದರಾಯಣ ದಿವ್ಯ  ಪಾದ ಜಲಜ ಭೃಂಗ
ಭೂದೇವ ವಂದಿತ  ಮಾಧವ ತೀರ್ಥ || 4 ||

ಇಕ್ಷುಚಾಪನ ಮ್ಯಾಳ  ಲಕ್ಷ್ಮೀ ಇಲ್ಲದೆ ಬಲು
ಪೇಕ್ಷೆ ಮಾಡಿದ  ಅಕ್ಷೊಭ್ಯ ಮುನಿಪ || 5 ||

ದಯಮಾಡಿರೆಂದು ವಿ  ನಯದಿಂದ ಭಜಿಪರ
ಬಯಕೀ ಪೂರೈಸುವ  ಜಯತೀರ್ಥರೆಂಬ || 6 ||

ಅದ್ವೈತ ಗಜ ಸಿಂಹ  ಮಧ್ವ ಮತೋದ್ಭವ
ಸದ್ವೈಷ್ಣವ ಪ್ರೀಯ  ವಿದ್ಯಾಧಿರಾಜ || 7 ||

ಸಂದೇಹವಿಲ್ಲದೇ  ವಂದೀಪ ಜನರಾಸೆ
ತಂದುಕೊಡುವ ದಯ  ಸಿಂಧು ಕವೀಂದ್ರಾ || 8 ||

ರಾಗ ವರ್ಜಿತ ಭಾಗವತರ ಪಾಲ
ಯೋಗಿ ಶಿರೋಮಣಿ  ವಾಗೀಶ ಮುನಿಪ || 9 ||

ಸಾರಿದ ಭಕುತರ  ಘೋರಿಪ ಅಘಗಳ
ದೂರ ಓಡಿಸುತಿಪ್ಪ  ಶ್ರೀ ರಾಮಚಂದ್ರ || 10 ||

ಕು ಭವದೊಳಿರುವಾರ  ಸೊಬಗಿನಿಂದಲಿ ನೋಡಿ
ಅಭಯ ಕೊಡುತಿಪ್ಪ  ವಿಬುಧೇಂದ್ರ ತೀರ್ಥ || 11 ||

ಭ್ರಾಮಕ ಜನ ಶಿಕ್ಷ  ಧೀಮಂತ ಜನ ಪಕ್ಷ
ಹೇಮ ವರಣಾಂಗ ಜಿ  ತಾಮಿತ್ರ ಮುನಿಪಾ || 12 ||

ಬಗೆ ಬಗೆ ಭಜಿಸಲು  ಇಗಡ ಜನರನೊಲ್ಲ
ಬಗಿವಾನು ಸುಜನರ  ರಘುನಂದನಾರ್ಯ || 13 ||

ಪೊಂದಿದವರ ನೋಯ  ದಂದದಿ ಸಲಹುವ
ಎಂದೆಂದು ಬಿಡದ ಶ್ರೀ ಸು  ರೇಂದ್ರಾಖ್ಯ ಮುನಿಪ || 14 ||

ನಿಜಭಕ್ತಿಯಲಿ ಪಾದ  ಭಜಿಸುವ ಅಗಣಿತ
ಸುಜನರ ಸಲಹುವ  ವಿಜಯಿಂದ್ರ ಮುನಿಪ || 15 ||

ವೀಂದ್ರ ವಾಹನ ಯಾದ  ವೇಂದ್ರಾಂಘ್ರಿ ಭಜಿಸುವ
ಸಾಂದ್ರ ಭಕ್ತಿಯಲಿ ಸು  ಧೀಂದ್ರಾಖ್ಯ ಮುನಿಪಾ || 16 ||

ಧಾರುಣಿಯೊಳಗತಿ  ಚಾರು ವೃಂದಾವನ
ದೀ ರಾಜಿಸುತಿಪ್ಪ  ಶ್ರೀ ರಾಘವೇಂದ್ರಾ || 17 ||

ಶ್ಲಾಘೀನ ಗುಣನಿಧಿ  ಮಾಗಧ ರಿಪು ದಾಸ
ರಾಘವೇಂದ್ರರ ಪುತ್ರ  ಯೋಗೀಂದ್ರ ತೀರ್ಥ || 18 ||

ವೈರಾಗ್ಯ ಗುಣದಿಂದ  ಮಾರಾರೀಯಂದದಿ
ತೋರುವರನು ದಿನ  ಸೂರೀಂದ್ರ ತೀರ್ಥ || 19 ||

ಕುಮತವೆಂಬಗಣೀತ  ತಿಮಿರ ಓಡಿಸುವಲ್ಲಿ
ಕಮಲಾಪ್ತನಂತೀಹ  ಸುಮತೀಂದ್ರ ತೀರ್ಥ || 20 ||

ಸಲ್ಲಾದ ಸುಖಗಳ  ನೆಲ್ಲಾವು ಜರಿದು ಶ್ರೀ
ನಲ್ಲಾನ ಭಜಿಸಲು  ಬಲ್ಲ ಉಪೇಂದ್ರಾ || 21 ||

ಮೋದ ಮುನಿ ಮತ ಮ  ಹೋದಧಿ ಚಂದ್ರ ವಿ
ದ್ಯಾದಿ ದಾನಾಸಕ್ತ  ವಾದೀಂದ್ರ ತೀರ್ಥ || 22 ||

ಬಿಸಜನಾಭನ ದೂತ  ವಸುಧಿಯೊಳಗೆ ಖ್ಯಾತ
ಕಿಸಲಯೋಪಮ ಪಾದ  ವಸುಧೀಂದ್ರ ತೀರ್ಥ || 23 ||

ಪರ ಮತೋರಗ ವೀಪ  ಕರುಣಿ ವಿಗತ ಕೋಪ
ವರ ವೇದ ಸುಕಲಾಪ  ವರದೇಂದ್ರ ಭೂಪ || 24 ||

ವಿರಕ್ತಿ ಮತಿ ಪಾಲಿಪ  ವಾದಿ ವಿಜಯ ಧೀರ
ವರದಾ ತೀರಸ್ಥ  ಧೀರೇ೦ದ್ರ ತೀರ್ಥ || 25 ||

ಸುವಿವೇಕಿಗಳಿಗಿಷ್ಟ  ತವಕದಿಂದಲಿ ಈವ
ಕವಿಭಿರೀಡಿತ ಪಾದ  ಭುವನೇಂದ್ರ ತೀರ್ಥ || 26 ||

ಶಬರೀ ವಲ್ಲಭನಂಘ್ರಿ  ಅಬುಜಾಳಿ ಸೂರ್ಯ ಸ
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||

ಪ್ರಾಣೇಶ ವಿಠಲನ  ಕಾಣಬೇಕಾದರೆ
ಈ ನಮ್ಮ ಗುರುಗಳ  ಧ್ಯಾನದೊಳಿಹದೂ || 28 ||

gurugaLananudina neneve nA
durita daTTuLi sAre bandItinnEnA || pa ||

pArtha rakShakana sE vArtha KaLara kondu
kIrti paDeda suKa tIrtharenteMbA || 1 ||

nI pAlIsendenalApattu biDisuva
mApati nijadUta SrI padmanABa || 2 ||

karipati baLiyinda dharija patiya tandu
gurugaLigittIha narahari tIrthA || 3 ||

bAdarAyaNa divya pAda jalaja BRunga
BUdEva vandita mAdhava tIrtha || 4 ||

ikShucApana myALa lakShmI illade balu
pEkShe mADida akShoBya munipa || 5 ||

dayamADirendu vi nayadinda Bajipara
bayakI pUraisuva jayatIrthareMba || 6 ||

advaita gaja siMha madhva matOdBava
sadvaiShNava prIya vidyAdhirAja || 7 ||

sandEhavilladE vandIpa janarAse
tandukoDuva daya sindhu kavIndrA || 8 ||

rAga varjita BAgavatara pAla
yOgi SirOmaNi vAgISa munipa || 9 ||

sArida Bakutara GOripa aGagaLa
dUra ODisutippa SrI rAmachandra || 10 ||

ku BavadoLiruvAra sobaginindali nODi
aBaya koDutippa vibudhEndra tIrtha || 11 ||

BrAmaka jana SikSha dhImanta jana pakSha
hEma varaNAnga ji tAmitra munipA || 12 ||

bage bage Bajisalu igaDa janaranolla
bagivAnu sujanara raGhunandanArya || 13 ||

pondidavara nOya dandadi salahuva
endendu biDada SrI surEndrAKya munipa || 14 ||

nijaBaktiyali pAda Bajisuva agaNita
sujanara salahuva vijayindra munipa || 15 ||

vIndra vAhana yAda vEndrAnGri Bajisuva
sAndra Baktiyali su dhIndrAKya munipA || 16 ||

dhAruNiyoLagati cAru vRundAvana
dI rAjisutippa SrI rAGhavEndrA || 17 ||

SlAGIna guNanidhi mAgadha ripu dAsa
rAGhavEndrara putra yOgIndra tIrtha || 18 ||

vairAgya guNadinda mArArIyandadi
tOruvaranu dina sUrIndra tIrtha || 19 ||

kumataveMbagaNIta timira ODisuvalli
kamalAptanantIha sumatIndra tIrtha || 20 ||

sallAda suKagaLa nellAvu jaridu SrI
nallAna Bajisalu balla upEndrA || 21 ||

mOda muni mata ma hOdadhi chandra vi
dyAdi dAnAsakta vAdIndra tIrtha || 22 ||

bisajanABana dUta vasudhiyoLage KyAta
kisalayOpama pAda vasudhIndra tIrtha || 23 ||

para matOraga vIpa karuNi vigata kOpa
vara vEda sukalApa varadEndra BUpa || 24 ||

virakti mati pAlipa vAdi vijaya dhIra
varadA tIrastha dhIrEndra tIrtha || 25 ||

suvivEkigaLigiShTa tavakadindali Iva
kaviBirIDita pAda BuvanEndra tIrtha || 26 ||

SabarI vallaBananGri abujALi sUrya sa
nniBa vAdi gajasiMha subOdhEndra tIrtha || 27 ||

prANESa viThalana kANabEkAdare
I namma gurugaLa dhyAnadoLihadU || 28 ||

dasara padagalu · MADHWA · srinivasa

Sthuti Ratna Mala

ಭಾನುಕೋಟಿ ತೇಜ ಲಾವಣ್ಯ ಮೂರುತಿ
ಶ್ರೀ ವೇಂಕಟೇಶನೇ ನಮೋನಮೋ ಶ್ರೀನಿವಾಸ ದಯಾನಿಧೆ || 1 ||

ಶೇಷಾಚಲನಿವಾಸ ದೋಷದೂರನೆ ಭಕ್ತಪೋ
ಷಕ ಶ್ರೀಕಾಂತ, ನಮೋನಮೋ ಶ್ರೀನಿವಾಸ ದಯಾನಿಧೆ || 2||

ನೀಲಮೇಘಶ್ಯಾಮ ಪಾಲಸಾಗರಶಯನ ಶ್ರೀ
ಲಕುಮೀಶನೆ ನಮೋನಮೋ ಶ್ರೀನಿವಾಸ ದಯಾನಿಧೆ || 3 ||

ಖಗರಾಜವಾಹನ ಜಗದೊಡೆಯನೆ ನಿನ್ನ 
ಅಗಣಿತ ಮಹಿಮಗೆ ನಮೋನಮೋ ಶ್ರೀನಿವಾಸ ದಯಾನಿಧೆ || 4 ||

ಶಂಖಚಕ್ರಧರ ವೇಂಕಟರಮಣ ಅಕ
ಳಂಕ ಮೂರುತಿ ದೇವ ನಮೋನಮೋ ಶ್ರೀನಿವಾಸ ದಯಾನಿಧೆ || 5||

ಪನ್ನಂಗಶಯನನೆ ನಿನ್ನಂತ ದೇವರು 
ಇನ್ನುಂಟೆ ಅಜಭವಸುರವಂದ್ಯ ಶ್ರೀನಿವಾಸ ದಯಾನಿಧೆ || 6||

ಸೃಷ್ಟಿ ಇಲ್ಲದಲೆ ಒತ್ತಟ್ಟಿಗಿದ್ದವರನ್ನು
ಸೃಷ್ಟಿಸಿ ಜೀವರಸಲಹುವಿ ಶ್ರೀನಿವಾಸ ದಯಾನಿಧೆ || 7||

ತನಮನಕರಣಗಳನು ಕೊಟ್ಟು ಅನಿಮಿಷರ
ನು ಅಭಿಮಾನಿಗಳೆನಿಸಿದೀ ಶ್ರೀನಿವಾಸ ದಯಾನಿಧೆ||8||

ದೀನವತ್ಸಲ ನಿನ್ನಾಧೀನದೊಳಗಿಟ್ಟು
ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧೆ ||9||

ಕ್ಷಣ ಬಿಡದೆಲೆ ಭಕ್ತಜನರ ರಕ್ಷಿಸುವಿ ದು
ರ್ಜನರಿಗೆ ದುರ್ಲಭನೆನಿಸುವೀ ಶ್ರೀನಿವಾಸ ದಯಾನಿಧೆ ||10||

ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲವರು 
ಉಪಾಸನದಂತೆ ಫಲಗಳೀವಿ ಶ್ರೀನಿವಾಸ ದಯಾನಿಧೆ ||11||

ಒಂದೇ ರೂಪದಿ ಬಹುಮಂದಿಯೊಳಗಿದ್ದು 
ಬಂಧಮೋಕ್ಷಪ್ರಧ ಎನಿಸುವೀ ಶ್ರೀನಿವಾಸ ದಯಾನಿಧೆ ||12||

ಜ್ಞಾನಿಗಳರಸ ಅಜ್ಞಾನಿಗಳೊಳು ನಾ
ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸ ದಯಾನಿಧೆ ||13||

ನಂಬಿದೆ ನಾ ನಿನ್ನ ಬಿಂಬ ಮೂರುತಿ ಎನ್ನ
ಡಿಂಬದೊಳಗೆ ಪೊಳೆ ಅನುದಿನ ಶ್ರೀನಿವಾಸ ದಯಾನಿಧೆ ||14||

ನಿನ್ನ ಹೊರತು ಎನಗೆ ಅನ್ಯರಿಂದೇನಯ್ಯ
ನಿನ್ನ ಸ್ತುತಿಪ ಸುಖಕ್ಕೆ ಎಣೆಗಾಣೇ ಶ್ರೀನಿವಾಸ ದಯಾನಿಧೆ ||15||

ಘನ್ನ ಮಹಿಮ ಎನಗಿನ್ನೊಂದು ಬಯಕಿಲ್ಲ
ನಿನ್ನ ಧ್ಯಾನದೊಳಿದು ಮರಿಯದೇ ಶ್ರೀನಿವಾಸ ದಯಾನಿಧೆ ||16||

ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು 
ಸಜ್ಜನರ ಸೇವೆಯೊಳಗಿಡೊ ಶ್ರೀನಿವಾಸ ದಯಾನಿಧೆ ||17||

ಏಸು ಜನ್ಮಗಳೀಯೆ ಲೇಸು ಚಿಂತೆಯು ಇಲ್ಲ
ದಾಸನೆಂದೆನಿಸೋ ದಾಸ್ಯವನಿತ್ತು ಶ್ರೀನಿವಾಸ ದಯಾನಿಧೆ ||18||

ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ
ನಿನ್ನ ವಿಸ್ಮರಣೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||19||

ಮನಸಿನ ಚಂಚಲವನ್ನು ತೊಲಗಿಸಿ ಪಾದ
ವನಜದಲ್ಲಿರಿಸಯ್ಯ ಜಿತವಾಗಿ ಶ್ರೀನಿವಾಸ ದಯಾನಿಧೆ||20||

ಕರಣಗಳಿಂದ ಆಚರಿಸುವ ವಿಷಯ ಶ್ರೀ
ಹರಿ ನಿನ್ನ ಸೇವೆಯಾಗಲಿ ಸ್ವಾಮಿ ಶ್ರೀನಿವಾಸ ದಯಾನಿಧೆ ||21||

ಬುಧ್ಧಿಪೂರ್ವಕ ಗುರು ಮಧ್ವಮತವ ತಿಳಿ
ದಿದ್ದವನೆ ಜ್ಞಾನವೃಧ್ಧನೋ ಶ್ರೀನಿವಾಸ ದಯಾನಿಧೆ ||22||

ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು
ತಾರತಮ್ಯ ಭೇಧ ಜ್ಞಾನವನೀಯೋ ಶ್ರೀನಿವಾಸ ದಯಾನಿಧೆ ||23||

ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ 
ಹರಿ ನಿನ್ನ ಅನುಗ್ರಹವಾಗುವುದೋ ಶ್ರೀನಿವಾಸ ದಯಾನಿಧೆ ||24||

ನಿನ್ನವರಲ್ಲದೆ ಅನ್ಯರು ಬಲ್ಲರೆ
ಘನ್ನಮತದ ಸುಖ ಸವಿಯನ್ನೂ ಶ್ರೀನಿವಾಸ ದಯಾನಿಧೆ ||25||

ನಿನ್ನ ಚಿತ್ತಕೆ ಬಂದುದೆನ್ನ ಚಿತ್ತಕೆ ಬರಲಿ
ಅನ್ಯಥಾ ಬಯಕೆಯ ಕೊಡದಿರೋ ಶ್ರೀನಿವಾಸ ದಯಾನಿಧೆ ||26||

ಸ್ಥುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ
ಪ್ರತಿದಿನ ಸುಖ ಅಭಿವೃಧ್ಧಿಯೋ ಶ್ರೀನಿವಾಸ ದಯಾನಿಧೆ ||27||

ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ದೊರೆ
ಗುರು ಶ್ರೀಶವಿಟಲ ನಮೋ ಶ್ರೀನಿವಾಸ ದಯಾನಿಧೆ ||28||

Banukoti teja lavanya muruti
Sri venkatesane namonamo srinivasa dayanidhe || 1 ||

Seshacalanivasa doshadurane baktapo-
Shaka srikanta, namonamo srinivasa dayanidhe || 2||

Nilamegasyama palasagarasayana sri-
Lakumisane namonamo srinivasa dayanidhe || 3 ||

Kagarajavahana jagadodeyane ninna
Aganita mahimage namonamo srinivasa dayanidhe || 4 ||

Sankacakradhara venkataramana aka-
Lanka muruti deva namonamo srinivasa dayanidhe || 5||

Pannangasayanane ninnanta devaru
Innunte ajabavasuravandya srinivasa dayanidhe || 6||

Srushti illadale ottattigiddavarannu
Srushtisi jivarasalahuvi srinivasa dayanidhe || 7||

Tanamanakaranagalanu kottu animishara-
Nu abimanigalenisidi srinivasa dayanidhe||8||

Dinavatsala ninnadhinadolagittu
J~jana karmagala madisuviyo srinivasa dayanidhe ||9||

Kshana bidadele Baktajanara rakshisuvi du-
Rjanarige durlabanenisuvi srinivasa dayanidhe ||10||

Vaishamya nairgrunya lesavillavaru
Upasanadante palagalivi srinivasa dayanidhe ||11||

Onde rupadi bahumandiyolagiddu
Bandhamokshapradha enisuvi srinivasa dayanidhe ||12||

J~janigalarasa aj~janigalolu na a-
J~jani suj~janava paliso srinivasa dayanidhe ||13||

Nambide na ninna bimba muruti enna
Dimbadolage pole anudina srinivasa dayanidhe ||14||

Ninna horatu enage anyarindenayya
Ninna stutipa sukakke enegane srinivasa dayanidhe ||15||

Ganna mahima enaginnondu bayakilla
Ninna dhyanadolidu mariyade srinivasa dayanidhe ||16||

Durjana sanga vivarja madisi sadhu
Sajjanara seveyolagido srinivasa dayanidhe ||17||

Esu janmagaliye lesu chinteyu illa
Dasanemdeniso dasyavanittu srinivasa dayanidhe ||18||

Ennappa ennanna enna kayuva deva
Ninna vismaraneya kodadiro srinivasa dayanidhe ||19||

Manasina canchalavannu tolagisi pada
Vanajadallirisayya jitavagi srinivasa dayanidhe||20||

Karanagalinda Acarisuva vishaya sri
Hari ninna seveyagali svami srinivasa dayanidhe ||21||

Budhdhipurvaka guru madhvamatava tili
Diddavane j~janavrudhdhano srinivasa dayanidhe ||22||

Hariye sarvottama surarella dasaru
Taratamya bedha j~janavaniyo srinivasa dayanidhe ||23||

Gurugala karuna susthiravagiddavarige
Hari ninna anugrahavaguvudo srinivasa dayanidhe ||24||

Ninnavarallade anyaru ballare
Gannamatada suka saviyannu srinivasa dayanidhe ||25||

Ninna cittake bandudenna cittake barali
Anyatha bayakeya kodadiro srinivasa dayanidhe ||26||

Sthutiratnamala samstutisi higguvarige
Pratidina suka abivrudhdhiyo srinivasa dayanidhe ||27||

Gurugalu madhvarayaru muru lokakke dore
Guru srisavitala namo srinivasa dayanidhe ||28||

dasara padagalu · jagannatha dasaru · MADHWA · yatra

Theertha Kshethra smarane by Jagannatha dasaru

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ
ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ
ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ||pa||

ಭಾಗೀರಥಿ ಸರಸ್ವತಿ ಯಮುನಾ ವಾರಾಣಾ
ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ
ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ
ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ
ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ
ಕಾಗಿನೀ ನೇತ್ರಾವತಿ ಹೈಮ ಸಿಂಧು ಪಾಪಾಘನಾಶಿನೀ ||1||

ಸರಯು ಜಯಮಂಗಳ ಜಮದಗ್ನಿ ವರತಾಮ್ರ
ಪರಣಿ ಯೋಗಾನಂದ ಕೃತಮಾಲಕುಹು ಮಹೇ
ಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾ
ಧುನಾಶಿ ಗರುಡ ಮದಿರಾ
ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ
ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ
ಕುರಮುಖಿ ಪ್ರಣವಸಿದ್ಧ||2||

ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ
ದ್ರವತಿ ಇಂದ್ರಾಣಿ ಕುಂದ ಕುಂದಿನಿ ಶೈವ
ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ
ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ
ಪಾವನಿ ಮೌಳಿ ಮೌಕ್ತಿಕ ಸಿಂಧು ಧರ್ಮಕು
ಶಾವಂತಿನಿ ಚಕ್ರತೀರ್ಥ ಭವ ನಾಶಿನಿ
ವರದಾ ಮಲಾಪಹಾರಿ ||3||

ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ
ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ
ಶ್ರೀ ಮಧ್ವ ನಿತ್ಯ ಪುಷ್ಕರಣಿ ಸೀತಾ
ಪದ್ಮಸರ ಚಂದ್ರಭಾಗತೀರ್ಥ
ವಾಮನ ಮಯೂರ ಪಂಪಾಸರೋವರ ಪುಣ್ಯ
ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ
ಧ್ಯಮೃತ ಸಮುದ್ರ ಗುರು ಭೀಮಸೇನತಟಾಕ
ರೋಮಹರ್ಷತೀರ್ಥ ||4||

ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ
ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ
ಮೇರು ಪಾಶ್ರ್ವ ಮಂದರ ಸುಪಾಶ್ರ್ವ
ಮೈನಾಕ ಕೈಲಾಸ ಕಂಚಿ
ಶ್ರೀರಂಗನಾಥ ನೈಮಿಷ ದ್ವೈತವನ ಚಂಪ
ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ
ಗೌರಿ ಮಯೂರ ಸಿಂಹಾದ್ರಿ ಪಾಟಲ
ಹರಿದ್ವಾರ ಛಾಯಾಪಿಪ್ಪಲ ||5||

ಕೇದಾರ ಸಾಗರ ಮಂದಾಕಿನಿ ಕುಸುಮವತಿ
ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ
ಪಾದ ಕ್ರೌಂಚಾದ್ರಿ ಮಹಾನಂದಿ ಶಂಕರ ನಾಮ
ನಾರಯಣ ನಿವರ್ತಿ
ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ
ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು
ಪಾದ ಗಯಾ ಕಾಳೇಶ್ವರೀ ಹಸ್ತನಾಪುರಿ
ಪಾಟಲೀ ಮಂತ್ರಾಲಯ||6||

ಗೋವರ್ಧನಾದ್ರಿ ಮೈನಾಕ ಮಂದರ ಮಲಯ
ಕೈವಲ್ಯನಾಥ ಕಾಶೀರ ಜಾಂಬವತಿ ವೃಂ
ದಾವನ ಧನುಷ್ಕೋಟಿ ವಾತಾಪುರಿ
ಕನ್ಯಾಕುವರಿ ಕೈಲಾದ್ರಿ ವೃಷಭಾ
ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ
ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ
ರಾವತಿ ವ್ಲಾಘ್ರಪುರಿಗೋಕುಲ
ನರಾಚಲಾಸೌಭದ್ರಿ ಆದಿನಾಥ ||7||

ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ
ನಾಮಗಳ ಕಾಲತ್ರಯದಲ್ಲಿ ಸರಿಸುತಿಹ
ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ
ಸೋಮಾರ್ಕರುಳನಕ ಸಕಲ ಭೋಗಗಳ ಸು
ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ
ಧಾಮ ಮುಕ್ತರ ಮಾಳ್ಪನು ಅಹುದು
ಅಹುದೆಂದು ಸೂತ ಶೌನಕಣೆ ಪೇಳ್ದ||8||

ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ
ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ
ನಾಭಿ ಸಂಭವ ಪೇಳ್ದ ನಾರದನಿಗಿಸಿತೆಂದು
ಪರಮಕಾರುಣ ದಿಂದ
ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ
ಲೋಭದಿಂದಲಿಕೊಂದ ಪಾತಕವ ಪರಿಹರಿಸಿ
ಶ್ರೀಭೂರಮಣ ಜಗನ್ನಾಥ ವಿಠ್ಠಲ ಕೊಡುವ
ಬೇಡಿದಿಷ್ಟಾರ್ಥಗಳನು ||9||
smarisi tIrthakShEtra sajjanaru nityadali
araNOdayadaleddu BaktipUrvakavAgi
kaThiNaSramadi mALpa pAparASigaLa pariharisutta santyesuvA ||pa||

BAgIrathi sarasvati yamunA vArANA
SrI gOda PalguNi SONaBadrA narma
dA ganDaki Bimarathi tuNgaBadre prayAga trivENi hEmA
vEgavati gAyatrI kASimaNikarNi
kA gautami viyadgaNgA kumudvatI
kAginI nEtrAvati haima siNdhu pApAGanASinI ||1||

sarayu jayamaNgaLa jamadagni varatAmra
paraNi yOgAnaNda kRutamAlakuhu mahE
Svari SaNKa cakravati BavanASini gadAdhara mEnakA
dhunASi garuDa madirA
marudvati svarNamuKari vara JaratApini kALi sau
paraNi dakShiNOttarapinAki kapila SItaLa kAnaMda
kuramuKi praNavasiddha||2||

kAvEri sidhu mAlati gArgiNi hari
dravati iNdrANi kuMda kuNdini Saiva
dEvavati pAtALa gaNgA punaha nIrA kumAradhArA
sAvitri dAnyamAlA puShpavati lOka
pAvani mauLi mauktika siNdhu dharmaku
SAvaNtini cakratIrtha Bava nASini
varadA malApahAri ||3||

svAmi puShkaraNi mAnasa caNdra puShkaraNi
BUmaNDaladoLuttamOttama tripuShkaraNi
SrI madhva nitya puShkaraNi sItA
padmasara caNdraBAgatIrtha
vAmana mayUra paMpAsarOvara puNya
dhAma vyAsa samudra dhavaLagaMgA susA
dhyamRuta samudra guru BImasEnataTAka
rOmaharShatIrtha ||4||

dvArakAnagara sAlagrAma Tarara badari kE
dAra naranArAyaNa SrI majjagannAtha SrI muShNa
mEru pASrva maNdara supASrva
mainAka kailAsa kaNci
SrIraNganAtha naimiSha dvaitavana caMpa
kAruNya kASi paMpAvaNtikA puri
gauri mayUra siMhAdri pATala
haridvAra CAyApippala ||5||

kEdAra sAgara maNdAkini kusumavati
AdisubrahmaNya kOTESvara naNdi
pAda krauMcAdri mahAnaMdi SaNkara nAma
nArayaNa nivarti
vEdapAda yayAti giri kAlahasti kau
mOdakI pADuraNga kShEtra SrI viShNu
pAda gayA kALESvarI hastanApuri
pATalI maMtrAlaya||6||

gOvardhanAdri mainAka maNdara malaya
kaivalyanAtha kASIra jAMbavati vRuN
dAvana dhanuShkOTi vAtApuri
kanyAkuvari kailAdri vRuShaBA
SrI virUpAkSha kuNdara naMdapuri mAyA
SrIvatsa gaMdhamAdana citrakUTa dvA
rAvati vlAGrapurigOkula
narAcalAsauBadri AdinAtha ||7||

I mahimaNDaladoLippa tIrthakShEtra
nAmagaLa kAlatrayadalli sarisutiha
dhImaMtarige saNcitApa pariharadAnaNtaradali
sOmArkaruLanaka sakala BOgagaLa su
trAmalokada luNisi karuNALu prAtyake sva
dhAma muktara mALpanu ahudu
ahudeMdu sUta SaunakaNe pELda||8||

I Barata KaNDadoLaguLLa tIrthakShEtra
vaiBavAbja BavANDa pAranadoLage hari
nABi saMBava pELda nAradanigisiteNdu
paramakAruNa diNda
strIbAla gOvipramAta pitRugaLa dhana
lOBadiNdalikoNda pAtakava pariharisi
SrIBUramaNa jagannAtha viThThala koDuva
bEDidiShTArthagaLanu ||9||

dasara padagalu · jagannatha dasaru · MADHWA · nadee taratamya

Nadhi taratamya by Jagannatha dasaru

ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ
ಭಾಗವತ ತಿಲಕ ನಿಮಿರಾಜಗೊಲಿದು ವಸಿಷ್ಠ
ಯೋಗೀಶ ಪೇಳ್ದ ಸುಕಥಾಕುತೂಹಲವನು
ರಾಗದಲಿ ಕೇಳಿ ಜನರಯ್ಯಾ ||pa||

ಒಂದು ದಿನ ಗೋದಾವರಿಯ ತಟದಿ ನಿಮಿರಾಜ
ಸಂದು ಯಜ್ಞವ ಮಾಡುತಿರಲಾಗ ಪರಮೇಷ್ಠಿ
ನಂದನೆನಿಪ ವಶಿಷ್ಠ ಮಹಮುನಿ ನಡೆತಂದ ಮೇಧಾಗಾರಕೆ
ಬಂದ ಯತಿವರನ ಮಣಿಪೀಠದಲಿ ಕುಳ್ಳಿರಿಸಿ
ಮಂದಹಾಸದಲಿ ತನ್ನಯ ಮನೋವಾಂಛಿತವ
ಸುಂದರಾಧಿಪ ಬೆಸಸಿದಾ ||1||

ವ್ರತಿಪತಿ ವಶಿಷ್ಠ ವೈಷ್ಣವಕುಲ ಶಿರೋರತುನ
ಶ್ರುತಿಶಾಸ್ತ್ರ ಸರ್ವಜ್ಞ ಗಂಗಾದಿ ಪುಣ್ಯತೀ
ರ್ಥ ತಾರತಮ್ಯ ಎನಗರುಪು ಕರುಣದಲೀ
ಮತ್ಪಿತನೆನುತ ಪದಕೆರಗುವಾ
ಕ್ಷಿತಿಪನೋಕ್ತಿಯ ಕೇಳುತಾನಂದ ಶರಧಿಯೊಳು
ಗತನಾಗಿ ರೋಮ ಲಕ್ಷಣ ಕಳೇವರದಿ ಪುಳ
ಕಿತವಾದವನ ಕಾರುಣ್ಯದಲಿ ಯತಿವರನುನ್ನತ
ನೃಪತಿಗಿಂತೆಂದನು ||2||

ಕೇಳು ಜನನಾಥ ಮಹಭಾಗ ನಿನ್ನಯ ಪ್ರಶ್ನ
ದೇಳಿಗೆಗೆ ಎನ್ನ ಸಂತೋಷ ಕಲ್ಪತರು ತ
ತ್ಕಾಲ ಉದಿಸಿ ಫಲೋನ್ಮು ಖವಾಯಿತು
ಶಿಷ್ಯರೊಳು ಮೌಳಿಮಣಿ ನೀನಹುದು
ಮಾಲತಿ ಮೊದಲೊಂಡು ನಿಖಿಳ ನದಿಗೊಳಿಪ್ಪ
ಶ್ರೀಲೋಲನ ಸುಮೂರ್ತಿಗಳು ತಾರತಮ್ಯ ಸುವಿ
ಶಾಲವ ನಿನಗೊರೆವೆ ಮಾನವ ಚಂಚಲಿಸದೆ
ಇದನಾಲಿಪುದು ನೀನೆಂದನು ||3||

ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ
ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು
ದರರಥಾಂಗನದಾ ವಿಧೃತಪಾಣಿ ಮಾಧವನು
ದೊರೆಮೆನಿಪನಾ ತೀರ್ಥಕೆ
ಸರಿತಾಗಗಣ್ಯ ಗೋದಾವರಿ ನಳಿನಿಗಿಂ
ಕೊರತೆಯೆನಿಪಳೈ ವತ್ತು ಗುಣದಲಿ ಶಂಖ
ಚರಣ ಸುಗದಾಬ್ಜ ಶೋಭಿತ ವೀರನಾರಾಯಣ-
ರಸೆನಿಪನಾ ಸಲಿಲಕೆ ||4||

ಹರಜಟೋದ್ಭವ ಕುಶಾವರ್ತಿಗೆ ಸಹಸ್ರಗುಣ
ವರಳೆನಿಪ ಕೃಷ್ಣಾಖ್ಯಾಸ್ಲಂದನದಿ ಚಾರು ಕಂ
ಬುರಲಿ ವಾರುಚಿ ಧನುರ್ಧಾರಿ ಯಮನಂದನಲಿ
ವಿಹರಿಸುತಿಹನಾಜಲದೊಳು
ತುರುಗಾಯ್ದ ದೇವನಂಗಜ ನದಿಗೆ ಈರೈದು
ನೆರೆ ಗುಣವಿರುವ ಹೀನ ವಾಗ್ದೇವಿ ಶರಧಿಯೊಳು ಪು
ಷ್ಕರನಾಭ ಆ ಸರಸ್ವತಿ ಸಮಳು ಕಾವೇರಿ
ಗೋದ ರಂಗನಾಥನೆನಿಪ ||5||

ಆ ಯಮಳನದಿಗಳಿಗೆರಡು ಗುಣಾಧಮ ಸರಯು
ತೋಯಾಧಿಪತಿ ರಾಮ ಸರಯು ನೀರೆಂದು ಗುಣ
ದಿ ಯಮುನೆ ಕಡಿಮೆನಿಪಳಲ್ಲಿ ದಾಮೋದರ
ವಿಹಾಯ ಸಮಮಣಿತನಯಳೆ
ಸ್ಥಾಯಕೆ ಚತುರ್ಬಾಹು ವಿಷ್ಣು ಕಾವೇರಿಗೆ
ರಾಯಕೇಳ್ವರಾಹಿನೂರೊಂದುಗುಣ ಕಡಿಮೆ
ನಾಯಕ ವರಾಹದೇವಾ||6||

ಸಿಂಧು ಭವನಾಶಿಗೀರ್ವರು ಸಮರು ಕ್ಷೀರಾಬ್ಧಿ
ಮಂದಿರ ನೃಸಿಂಹರಲ್ಲಿಹರು ಭವನಾಶನಿಗೆ
ಸುಂದರ ಕುಮುದ್ವತಿಯ ಕಿಂಚಿತ್ಗುಣಾಧಮಳು
ತಂದೆಯೆನಿಪ ತ್ರಿವಿಕ್ರಮ
ಒಂದೆನಿಸುವುವು ನಾಲ್ಕು ನದಿಗಳು ಗುಣಗಳಿಂದ
ಮುಂದಿಹ ಪದದಿ ಪೇಳ್ವೆ ಪೆಸರು ಹರಿರೂಪ ನೆಲ
ದಿಂದಲಿ ಶ್ರೀಮಂತನೆನುತ ಕರುಣದಲಿ
ತಮ್ಮಿಂದೀರಗಿಂತೆಂದನೂ ||7||

ವಾಜಿವದನು ಮಂಝರಾನದಿಯೊಳಿಹನು ನವ
ರಾಜೀವನಯನ ಶ್ರೀಧರ ಭೀಮರಥಿಯೊಳಿಹ
ರಾಜಶಯನಾನಂತ ತಾಮ್ರಪರ್ಣಿಯೊಳಗೆ
ವಿರಾಜಿಪ ಮಲಾಪಹಾರಿ
ಭಾಜನದೊಳಿಪ್ಪ ದುಷ್ಟ ಜನರನು ಮರ್ದಿಸುವ
ಶ್ರೀ ಜನಾರ್ದನ ನಾಲ್ಕು ನದಿಗಳು ದ್ವಿಗುಣದಿಂದಾ
ಈ ಜಗತಿಯೊಳಧಮರೆನಿಸುತಿಪ್ಪರು ನಿತ್ಯ
ನೈಜಭಕ್ತಿ ಸುಜ್ಞಾನದಿ ||8||

ಭೀಮರಥಿ ಸಮ ಪಿನಾಕಿನಿಯೊಳಗೆ ಕೇಶವನು
ಭೂಮಿಯೊಳು ಪೃಥಕು ಪೃಥಕು
ಸಮಾನವೆನಿಪವು ಪಿನಾಕಿನಿಗೆ ತಮೊಳಸಮವೊಪ್ಪುತ
ಸುಖ ಸುಜ್ಞಾನದಿ
ಶ್ರೀ ಮನೋರಮ ಕೇಶವಾದಿ ರೂಪಗಳಿಂದ
ಸ್ವಾಮಿಯೆನಿಸುವನಲ್ಲ ಸ್ನಾನಾದಿ ಸತ್ಕರ್ಮ
ಧೀಮಂತರಾಚರಿತೆ ಪ್ರತಿದಿನದಿ ಧರ್ಮಾರ್ಥ ಕಾಮ
ಮೋಕ್ಷ ಗಳೀವನೊ||9||

ಈ ನದಿಗಳೆರಡು ಗುಣ ಪುಷ್ಕರಣಿನಿಚಯ
ನ್ಯೂನವೆನಿಪವು ಮುಕ್ತಿ ದತ್ತಾತ್ರಯನು ಕೃಷ್ಣ
ವೇಣಿಗೆ ಸಮಾನ ಚಂದ್ರ ಸ್ವಾಮಿ ಪುಷ್ಕರಣಿ
ಮಾನಸ ಸರೋವರದೊಳು
ಸುಜ್ಞಾನಾತ್ಮ ವಾಮನನ ಶ್ರೀ ಭೂ ಸಹಿತ ಪ್ರಸ
ನ್ನಾನನಾಬ್ಜದಿದರೆ ಜಘನಸ್ಥಿತಾಭಯ ಸು
ಪಾಣಿ ವೆಂಕಟನ ಮಧುಸೂದÀನನ ತ್ರಿಸ್ಥಳದಿ
ಧೇನಿಪುದು ಎಂದಾ ||10||

ದೇವಖಾತಗಳು ಶತಗುಣಕಡಿಮೆ ಮಾನಸ ಸ
ರೋವರಕೆ ಇತರ ಪುಷ್ಕರಣಿಗಳಿಗಲ್ಪಗುಣ
ಭಾವಿಸುವುದಲ್ಲ ಸುಗಧಾಧರನ ಪಾಪಿಗಳ
ಪಾವನವಗೈವ ಕ್ಷುದ್ರಾ
ಪ್ರಾವಹಿಗಳೀರೈದು ಗುಣದಿ ಕಡಿಮೆ ಲಕ್ಷ್ಮೀ
ದೇವಿಪತಿ ನಾರಾಯಣನ ಚಿಂತಿಸೆಂದು ನೃಪ
ಗಾ ವಶಿಷ್ಠ ಮುನೀಶ ಪೇಳ್ದ ಶ್ರೀಘ್ರದಲಿ
ಭವನೋವ ಪರಿಹರಿಪುದೆಂದು ||11||

ಈ ಸಲಿಲತೀರ್ಥಂಗಳೆರಡು ಗುಣದಿ ತಟಾಕ
ಶೇಷಪರ್ಯಂಕ ಅಚ್ಯುತನಿಹನು ಸಜ್ಜನರ
ದೋಷಗಳ ಕಳೆವ ವಾಪಿಗಳೆರಡು ಕಡಿಮೆ
ವಾಸವಾಗಿಹನು ಚಕ್ರಿ
ಘೋಷಗೈವ ಧರಾಂತಕೂಪಗಳೊಳಿರುತಿಹ ನಾ
ಕೇಶನದಿಗಳ ತಾರÀತಮ್ಯ ರೂಪಗಳನುಪ
ದೇಶಿಸದೆ ಸರ್ವವು ನಿನಗೆ ಮಹಾರಹಸ್ಯವಿದು
ಪಾಸನಗೈವುದೆದೆಂದು ||12||

ಈ ತೆರದಿ ನಿಮಿರಾಜಗೋಸುಗ ವಶಿಷ್ಠಮುನಿ
ತಾ ತಿಳಿದ ಕಥಾತಿಶಯ ಪರಮ ವಿಬುಧರು ಧ
ರಾತಳದೊಳಿಪ್ಪ ತೀರ್ಥಗಳಲ್ಲಿ ಸ್ನಾನ ಜಪ
ಪ್ರೀತಿಯಿಂದಾಚರಿಸಲು
ಶೀತಾಂಶು ಕಮಲಾಪ್ತರುಳ್ಳನಕ ಸುರಪತಿ ನಿ
ಕೇತನದಿ ವಿವಿಧ ಭೋಗಗಳಿತ್ತು ಶ್ರೀ ಜಗ
ನ್ನಾಥ ವಿಠ್ಠಲ ಪಾಲಿಸುವನು ತನ್ನವರ
ಸಂಪ್ರೀತಿಯಿಂದನುರಾಗದೀ ||13||

BAgIrathyAdi nadigaLa tAratamya nija
BAgavata tilaka nimirAjagolidu vasiShTha
yOgISa pELda sukathAkutUhalavanu
rAgadali kELi janarayyA ||pa||

ondu dina gOdAvariya taTadi nimirAja
sandu yaj~java mADutiralAga paramEShThi
nandanenipa vaSiShTha
mahamuni naDetanda mEdhAgArake
banda yativarana maNipIThadali kuLLirisi
mandahAsadali tannaya manOvAnChitava
sundarAdhipa besasidA ||1||

vratipati vaSiShTha vaiShNavakula SirOratuna
SrutiSAstra sarvaj~ja gangAdi puNyatI
rtha tAratamya enagarupu karuNadalI
matpitanenuta padakeraguvA
kShitipanOktiya kELutAnanda SaradhiyoLu
gatanAgi rOma lakShaNa kaLEvaradi puLa
kitavAdavana kAruNyadali yativaranunnata
nRupatigiMteMdanu ||2||

kELu jananAtha mahaBAga ninnaya praSna
dELigege enna santOSha kalpataru ta
tkAla udisi PalOnmu KavAyitu
SiShyaroLu mauLimaNi nInahudu
mAlati modalonDu niKiLa nadigoLippa
SrIlOlana sumUrtigaLu tAratamya suvi
SAlava ninagoreve mAnava chancalisade
idanAlipudu nInendanu ||3||

haripAdanaKada saMsparSa mAtradiMdali
suratarangiNi SrEShThaLenisuvaLu nadigaLoLu
dararathAnganadA vidhRutapANi mAdhavanu
doremenipanA tIrthake
saritAgagaNya gOdAvari naLinigiM
korateyenipaLai vattu guNadali SanKa
caraNa sugadAbja SOBita vIranArAyaNa-
rasenipanA salilake ||4||

harajaTOdBava kuSAvartige sahasraguNa
varaLenipa kRuShNAKyAslaMdanadi cAru kaM
burali vAruci dhanurdhAri yamanaMdanali
viharisutihanAjaladoLu
turugAyda dEvanangaja nadige Iraidu
nere guNaviruva hIna vAgdEvi SaradhiyoLu pu
ShkaranABa A sarasvati samaLu kAvEri
gOda raMganAthanenipa ||5||

A yamaLanadigaLigeraDu guNAdhama sarayu
tOyAdhipati rAma sarayu nIrendu guNa
di yamune kaDimenipaLalli dAmOdara
vihAya samamaNitanayaLe
sthAyake chaturbAhu viShNu kAvErige
rAya kELvarAhinUronduguNa kaDime
nAyaka varAhadEvA||6||

sindhu BavanASigIrvaru samaru kShIrAbdhi
mandira nRusiMharalliharu BavanASanige
sundara kumudvatiya kincitguNAdhamaLu
tandeyenipa trivikrama
ondenisuvuvu nAlku nadigaLu guNagaLinda
mundiha padadi pELve pesaru harirUpa nela
dindali SrImantanenuta karuNadali
tammindIragintendanU ||7||

vAjivadanu manJarAnadiyoLihanu nava
rAjIvanayana SrIdhara BImarathiyoLiha
rAjaSayanAnanta tAmraparNiyoLage
virAjipa malApahAri
BAjanadoLippa duShTa janaranu mardisuva
SrI janArdana nAlku nadigaLu dviguNadindA
I jagatiyoLadhamarenisutipparu nitya
naijaBakti suj~jAnadi ||8||

BImarathi sama pinAkiniyoLage kESavanu
BUmiyoLu pRuthaku pRuthaku
samAnavenipavu pinAkinige tamoLasamavopputa
suKa suj~jAnadi
SrI manOrama kESavAdi rUpagaLinda
svAmiyenisuvanalla snAnAdi satkarma
dhImantarAcarite pratidinadi dharmArtha kAma
mOkSha gaLIvano||9||

I nadigaLeraDu guNa puShkaraNinicaya
nyUnavenipavu mukti dattAtrayanu kRuShNa
vENige samAna chandra svAmi puShkaraNi
mAnasa sarOvaradoLu
suj~jAnAtma vAmanana SrI BU sahita prasa
nnAnanAbjadidare jaGanasthitABaya su
pANi venkaTana madhusUdaÀnana tristhaLadi
dhEnipudu endA ||10||

dEvaKAtagaLu SataguNakaDime mAnasa sa
rOvarake itara puShkaraNigaLigalpaguNa
BAvisuvudalla sugadhAdharana pApigaLa
pAvanavagaiva kShudrA
prAvahigaLIraidu guNadi kaDime lakShmI
dEvipati nArAyaNana cintisendu nRupa
gA vaSiShTha munISa pELda SrIGradali
BavanOva pariharipudendu ||11||

I salilatIrthangaLeraDu guNadi taTAka
SEShaparyanka acyutanihanu sajjanara
dOShagaLa kaLeva vApigaLeraDu kaDime
vAsavAgihanu cakri
GOShagaiva dharAntakUpagaLoLirutiha nA
kESanadigaLa tAraÀtamya rUpagaLanupa
dESisade sarvavu ninage mahArahasyavidu
pAsanagaivudedendu ||12||

I teradi nimirAjagOsuga vaSiShThamuni
tA tiLida kathAtiSaya parama vibudharu dha
rAtaLadoLippa tIrthagaLalli snAna japa
prItiyindAcarisalu
SItAMSu kamalAptaruLLanaka surapati ni
kEtanadi vividha BOgagaLittu SrI jaga
nnAtha viThThala pAlisuvanu tannavara
saMprItiyindanurAgadI ||13||

dasara padagalu · ekadashi · MADHWA · Vadirajaru

Ekadasi nirnayaanalu samane manege

ಏಕಾದಶಿ ನಿರ್ಣಯ ಅನಲು ಸಮನೆ ಮನೆಗೆ
ಪೇಳಬಂದ ಅನಾಥಬಂಧು ಹಯವದನ ಗೋವಿಂದ ||pa||

ತನ್ನ ನಂಬಿದವರ ತಾಪತ್ರಯವಳಿದು
ಉನ್ನಂತ ಪದವೀವ ದಿನತ್ರಯವನ್ನು ||1||

ವೃದ್ಧಿಮಾತ್ರ ಅರುಣೋದಯದ ಕೆಳಗೆ
ಶುದ್ಧಿದಂ ಘಳಿಗೆ ಸಾಕುಯೆಂದು ||2||

ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ
ಶತಿ ಫಣಫಲ ದೊಳಗೆ ಶುದ್ಧಿ ಬೇಕೆಂದು ||3||

ತಿಥಿ ವೃದ್ಧಿಆದಾಗೆ ಹತ್ತು ಫಣಪಲ
ತಿಥಿಕ್ಷಯದಲ್ಲಿ ಅದರೊಳು ಶುದ್ಧಿ ಬೇಕೆಂದು ||4||

ಇಂದು ದಶಮಿ ಶಾಖವ್ರತವ ಮಾಡಿ ನೀವು
ಒಂದು ಬಾರಿ ಭೋಜನ ಮಾಡಿರೊಯೆಂದು ||5||

ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ
ಹಂಬಲವನ್ನು ನೀವು ಬಿಡಿರಿಯೆಂದು ||6||

ನಾಳೆ ಏಕಾದಶೀ ಉಪವಾಸ ಜಾಗರ
ಆಲಸ್ಯ ಮಾಡದೆ ಆಯತಾಕ್ಷಗೆಯೆಂದು ||7||

ಫಲಹಾರವು ಸಲ್ಲ ಭೋಜನವು ಸಲ್ಲದು
ಜಲಪಾನ ಸಲ್ಲ ಮೆಲಸಲ್ಲದೆಂದು ||8||

ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ
ಜಾಗರ ಮಾಡಿರೊಯೆಂದು ||9||

ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ
ಒಲುಮೆಯಿಂದ ಪಾರಣೆಯ ಮಾಡಿರೊಯೆಂದು||10||

ಇಂತು ತಿಥಿತ್ರಯ ಮಾಡುವ ಜನರನ್ನು
ಸಂತತ ಪೊರೆವ ಶ್ರೀಕಾಂತ ಹಯವದನ ||11||

Ekadasi nirnayaanalu samanemanege
Pela bandaanatha bandhu hayavadana govinda||pa||

Tanna nambidavara tapatrayavalidu
Unnanta padaviva dinatrayavannu||1||

Vruddhi matraarunodayada kelage
Suddhidangalige sakuyendu||2||

Ativruddhiondugaligeya kelagevim
Satipana paladolage suddhibekendu||3||

Tithi vruddhi^^adage hattupana pala
Tithikshayadalli adarolu Suddhi bekendu||4||

Indu dasami sakavratava madinivu
Ondu bari bojanamadiroyendu||5||

Tambula carvana salla strisanga
Hambalavannu nivu bidiriyendu||6||

Nale ekadasi upavasajagara
Alasya madadea yatakshageyendu||7||

Palaharavusalla bojanavusalladu
Jalapana sallamelasalladendu||8||

Nalku hottina aharavabiduvuduhadi
Jagara madiroyendu||9||

Pelaardhadvada sibandaganivella
Olumeyinda paraneyamadiroyendu||10||

Intu tithitraya maduva janarannu
Santata porevasrikanta hayavadana||11||

dasara padagalu · jagannatha dasaru · MADHWA

Rukmani vilasa

ಶ್ರೀ ರುಕ್ಮಿಣಿ ವಿಲಾಸ
ಫಣಿ ರಾಜ ಶಯನ ರುಕ್ಮಿಣಿದೇವಿಯೊಡಗೂಡಿ
ಮಣಿಮಂಚದ ಮೇಲೆ ಕುಳಿತಿರ್ದ| ಕುಳಿತಿರ್ದ ಸಮಯದಲಿ
ಅಣಕವಾಡಿದನು ಇನಿತೆಂದು||

ಹೇ ರಾಜಕನ್ನಿಕೆ ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ| ಬದುಕುವಗೆ ಮರುಳಾದೆ
ನಾರದನ ನುಡಿಗೆ ನಳಿನಾಕ್ಷಿ||

ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ| ಸುಕುಮಾರಿ ಎನಲು
ಪರವಶಳಾದಾಗ ಮಹಾಲಕ್ಷ್ಮಿ ||

ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು| ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ||

ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ| ಮುದ್ದಿಸಿ ಮಾತಾಡ್ದ
ಕಂಗಳಶ್ರಗಳ ಒರೆಸುತ್ತ||

ಸಲಿಗೆ ಮಾತಿನ ಬಗೆಯ ತಿಳಿಯದೆಲೆ ಹೀಗೆ ಚಂ-
ಚಲವನೈದುವರೆ ಚಪಲಾಕ್ಷಿ| ಚಪಲಾಕ್ಷಿ ಏಳೆಂದು
ತಲೆಯ ಮೇಲಿಟ್ಟ ಕರಪದ್ಮ( ಲಲನೆಯಳ ನಗಿಸಿ ನಗುತಿರ್ದ) ||

ಶ್ರೀದೇವಿ ನಿನ್ನೊಳು ವಿನೋದವನೆ ಮಾಡಲು ವಿ-
ಷಾದಪಡಲ್ಯಾಕೆ ಅನುದಿನ| ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನೆ ಬಳಿಯಲ್ಲಿ||

ಹಿಗ್ಗಿದಳು ಮನದಿ ಸೌಭಾಗ್ಯಭಾಮಿನಿಯು ಅಪ-
ವರ್ಗದನ ನುಡಿಗೆ ಹರುಷದಿ| ಹರುಷದಿಂದಲಿ ಪಾದ-
ಯುಗ್ಮಕೆರಗಿದಳು ಇನುತೆಂದು ||

ಜಗದೇಕಮಾತೆ ಕೈ ಮುಗಿದು ಲಜ್ಜೆಯಲಾಗ
ಮುಗುಳು ನಗೆ ಸೂಸಿ ಮಾತಾಡಿ| ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ||

ಪರಿಪೂರ್ಣಕಾಮ ನಿನ್ನರಸಿ ನಾನಹುದು ನೀ ಕರುಣದಿಂದೀಗ
ಸ್ವೀಕರಿಸಿದೆಯೋ ಎನ್ನ ಸತಿಯೆಂದು| ಸತಿಯೆಂದು ಕಾರಣಾ-
ಕ್ಷರಳೆನಿಸಿಕೊಂಡೆ ಶ್ರತಿಯಿಂದ||

ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿ ನ್ರಪರ ಪತಿಎಂದು| ಪತಿಯೆಂದು ಬಗೆವೆನೇ
ಸವಿಮಾತಿದಲ್ಲ ಸರ್ವಜ್ನ||

ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವ ರೂಪ| ತವ ರೂಪಗುಣಗಳನು
ಪೊಗಳಲೆನ್ನಳವೆ ಪರಮಾತ್ಮ||

ಭಾನು ತನ್ನಯ ಕಿರಣಪಾಣಿಗಳ ದೆಸೆಯಿಂದ
ಪಾನೀಯಜಗಳಾನರಳೀಸಿ| ಅರಳಿಸಿದ ಗಂಧವನಾ-
ಘ್ರಾಣಿಸಿದಂತೆ ಗ್ರಹಿಸೀದಿ ||

ಬೈದವನ ಕುತ್ತಿಗೆಯ ಕೊಯ್ದು ಅಂಧತಮಸಿ-
ಗೊಯ್ದು ಹಾಕಿದೆಯೋ ಪರಿಪಂಥಿ| ಪರಿಪಂಥಿ ನ್ರಪರನ್ನು
ಐದುವೆನೆ ನಿನ್ನ ಹೊರತಾಗಿ ||

ನಿನ್ನನುಗ್ರಹದಿಂದ ಬ್ರಹ್ಮ ರುದ್ರಾದಿಗಳ
ನಿರಜಗನ್ನಾಥವಿಠ್ಠಲನು | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೆ||

ಮಂಜುಳೋಕ್ತಿಯ ಕೇಳಿ ಅಂಜಲೇತಕೆ ಎಂದು
ಕಂಜಲೋಚನೆಯ ಬಿಗಿದಪ್ಪಿ|| ಬಿಗಿದಪ್ಪಿ ಪೇಳಿದ ಧ-
ನಂಜಯಪ್ರಿಯ ಸಥೆಯಿಂದ ||

ನಿನಗೆ ಎನ್ನಲ್ಲಿ ಭಕ್ತಿ ಎನಿತಿಹುದು ನಾ ಕಂಡೆ
ಎನಗಿಹುದು ಕರುಣ ಎಂದೆಂದು| ಎಂದೆಂದು ಇಹುದಿದಕೆ
ಅನುಮಾನವಿಲ್ಕ ವನಜಾಕ್ಷಿ ||

ದೋಷವರ್ಜಿತ ರುಕ್ಮಿಣೀಶನ ವಿಲಾಸ ( ಸಂ)
ತೋಷದಲಿ ಕೇಳಿ ಪಠಿಸೀದ | ಪಠಿಸೀದವರಭಿಲಾಷೆ
ಲೇಸು ಪೂರೈಸಿ ಸಲಹೂವ ||

ನಿಮ್ಮನುಗ್ರಹದಿಂದ ಬ್ರಹ್ನರುದ್ರಾದಿಗಳ
ನಿರ್ಮಿಸುವೆ ಸಲಹೀ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೇ||

ನೀತಜನಕ ಜಗನ್ನಾಥವಿಠ್ಠಲನು ಜಗ-
ನ್ಮಾತೆಯೆನಿಸುವಳು ಮಹಾಲಕ್ಷ್ಮಿ| ಮಹಾಲಕ್ಷ್ಮಿಸುತ ಬ್ರಹ್ಮ-
ಪೌತ್ರನೆನಿಸುವನು ಗುರುರುದ್ರ ||
Pani raja Sayana rukminideviyodagudi
Manimancada mele kulitirda| kulitirda samayadali
Anakavadidanu initendu||

He rajakannike buramana nanalla
Varidhiyolagiddu badukuva| badukuvage marulade
Naradana nudige nalinakshi||

Sisupala modalada vasudhepalara bittu
Pasupalagolide sukumari| sukumari enalu
Paravasaladaga mahalakshmi ||

I mata keli kai camaravanidadi
Bumigoragidalu Bugilendu| Bugilendu malagida
Kaminiya kanda kamalaksha||

Kangettalendu tannanganeya bigidappi
Mungurula tiddi muddisi| muddisi matadda
Kangalasragala oresutta||

Salige matina bageya tiliyadele hige cam-
Calavanaiduvare chapalakshi| chapalakshi elendu
Taleya melitta karapadma||

Sridevi ninnolu vinodavane madalu vi-
Shadapadalyake anudina| anudinadi smarisuvara
Kadukomdihene baliyalli||

Higgidalu manadi saubagyabaminiyu apa-
Vargadana nudige harushadi| harushadindali pada-
Yugmakeragidalu inutendu ||

Jagadekamate kai mugidu lajjeyalaga
Mugulu nage susi matadi| matadidalu patiya
Mogava nodutali nalinakshi||

Paripurnakama ninnarasi nanahudu ni karunadindiga
Svikarisideyo enna satiyendu| satiyendu karana-
Ksharalenisikonde Sratiyinda||

Buvanadhipati ninu aviyogi ninaganu
Aviveki nrapara pati^^emdu| patiyendu bagevene
Savimatidalla sarvajna||

Bhagavanta ninu durbaga dehagataravaru
Trigunavarjitavu tava rupa| tava rupagunagalanu
Pogalalennalave paramatma||

Banu tannaya kiranapanigala deseyinda
Paniyajagalanaralisi| aralisida gandhavana-
Granisidante grahisidi ||

Baidavana kuttigeya koydu andhatamasi-
Goydu hakideyo paripanthi| paripanthi nraparannu
Aiduvene ninna horatagi ||

Ninnanugrahadinda brahma rudradigala
Nirajagannathaviththalanu | samhara maduvenu
Durmadamdharana bagevene||

Manjuloktiya keli anjaletake endu
Kanjalocaneya bigidappi|| bigidappi pelida dha-
Nanjayapriya satheyinda ||

Ninage ennalli Bakti enitihudu na kande
Enagihudu karuna endendu| endendu ihudidake
Anumanavilka vanajakshi ||

Doshavarjita rukminisana vilasa ( san)
Toshadali keli pathisida | pathisidavarabilashe
Lesu puraisi salahuva ||

Nimmanugrahadinda brahnarudradigala
Nirmisuve salahi samhara | samhara maduvenu
Durmadandharana bagevene||

Nitajanaka jagannathaviththalanu jaga-
Nmateyenisuvalu mahalakshmi| mahalakshmisuta brahma-
Pautranenisuvanu gururudra ||

dasara padagalu · helavanakatte giriyamma · MADHWA

Krishna Parijatha

ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ
ಸಾರೆ ರುಕ್ಮಿಣಿಸಹಿತ ಆನಂದದಿಂದ
ವಾರಿಜಾಂಬಕ ವಾಲಗದೊಳು ಚಂದ
ನಾರಂದಮುನಿ ತಾ ಪಾರಿಜಾತವ ತಂದ ||1||

ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ
ಪುಷ್ಪಯಾರಿಗೆ ಎಂದ
ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ
ನೀನು ಬಲ್ಲದೆ ಇಂತೆಂದ
ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು
ಕೇಳಿದಳಾಕೆ ನಿಂದು
ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು
ಮನದಲ್ಲಿ ಅತಿನೊಂದು ||1||

ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು
ಮಂದಗಮನೆಯ ಮುಡಿಗೆ ತಾ ಮುಡಿಸಿದನು
ಎಂದು ಎನ್ನೊಳು ಎರವು ಇಲ್ಲವು ಕಾಣಿ
ಇಂದು ಮಾಡಿದ ಕುಹಕವ ಕೃಷ್ಣ ತಾನು ||2||

ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು
ಇನ್ನಾರಿಗೆ ಪೇಳುವೆನು
ಪರಿಮಳದ ಪಾರಿಜಾತದ ಹೂವ ತಂದನು ಭಾಮೆ
ರುಕ್ಮಿಣಿ ತನ್ನ ಜೀವ
ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ
ಬಹುಪ್ರೀತಿ ಬಡಿಸಿದ
ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ
ಠಕ್ಕುಠವಳಿಗಳಿಲ್ಲಿ ||2||

ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ
ಹಚ್ಚಿರೆ ಮಾತ ಹರಿಯು ತಾ ಕೇಳಿದನೆ
ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ
ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ ||3||

ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ
ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ
ಕಂತು ಕಮಲಜನಯ್ಯ
ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು
ಏನೆಂದು ತಿಳಿಯದು
ಸಾರಿದ ಸರಿಬಂದ ಸತಿಯ ಬಹುರತಿಯ
ಬಹು ಪ್ರೀತಿ ಇದ್ದವ[ಳ] ||3||

ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ
ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ
ಗಿಳಿಇಲ್ಲದ ಗೂಡು ತಾನ್ಯಾತಕಮ್ಮ
ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ ||4||

ಪದ :ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ
ಮಾತೆನ್ನ್ಯಾಕ ಪಡೆದಳೊ
ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು
ತಾಕಲೆನ್ನಯ ಗೋಳು
ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ
ಮೂರುಲೋಕ ಪ್ರಸಿದ್ಧ
ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು
ಓಡಿ ತನಗ್ಯಾಕಿದು ಬ್ಯಾಡಿ ||4||

ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು
ವಶವಾದನೆ ಒಲಿದು ರುಕ್ಮಿಣಿಗೆ ತಾನು
ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು
ಆಸೆಬಟ್ಟೆನೆ ಬಹಳ ವಸುದೇವ ಸುತಗೆ ||5||

ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ
ಎಲ್ಲರೊಡನೆ ಕೋಪಿಸುತ
ತೊಟ್ಟತೊಡಿಗೆ ಈಡಾಡುತ ಬಿಸಾಡುವ
ನನಗ್ಯಾಕಿದು ಎಂದು
ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ
ಮನದೊಳು ಮರುಗುತ
ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ
ಸುರಪಾರಿಜಾತವೆ ||5||

ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ
ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ
ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ
ಜೀವದೊಲ್ಲಭೆಯೊಡನೆ ಪಂಥವು ಸಲ್ಲ ||6||

ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ
ಎನ್ನೊಡನೆ ನುಡಿಯಳೊ
ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ
ಅಪ್ರಬುದ್ಧನಾದರೆ
ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ
ಕೋಪವನು ತಾಳುವಳೊ ಇಂ
ತೆಂದು ನುಡಿದ ಮುಕುಂದ ನಿತ್ಯಾನಂದನು
ಬಾಗಿಲೊಳು ನಿಂದನು ||6||

ಶ್ಲೋಕ :ಚಿತ್ತದೊಲ್ಲಭೆ ಚದುರೆ ಮೋಹನಾಕಾರೆ
ಮುತ್ತುರತ್ನವ ಮನೆಯೊಳಗೆಲ್ಲ ಬೀರಿ
ಎತ್ತ ಹೋದಳೊ ಎನ್ನ ಪ್ರಾಣದ ನಾರಿ
ಸತ್ಯಭಾಮೆಯ ಸುಳುಹು ಕಾಣೆನು ತೋರಿ ||7||

ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ
ಕೋಕಿಲವಾಣಿಯ
ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು
ಹಾರೈಸಿ ನಿಂತವರು ಕಣ್ಣು
ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ
ಮಾತಾಡಿ ||7||

ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು
ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು
ಸೂಸು ಪರಿಮಳ ಪಾರಿಜಾತದ ಹೂವ ಹಾ-
ರೈಸಿ ಕಂಗಳು ತೀರ ನೋಡಿದಳು ಕಾಂತೆ ||8||

ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ
ಫಲ್ಗುಣನ ಸಾರಥಿಯ
ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು
ಇದು ಏನು ಸೋಗೆಂದು
ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ
ಮುನಿಸ್ಯಾತಕೆನ್ನೊಡನೆ
ಕಂಡ ಕನಸು ಎಂದು ಭಾವಿಸೆ ಎನ್ನ ಜೀವಿಸೆ
ಅಪರಾಧವ ಕ್ಷಮಿಸೆ ||8||

ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ
ಮಿಕ್ಕ ಸತಿಯರಿಗ್ಯಾತಕೆಂಬ ಭಾವ
ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ
ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ ||9||

ಪದ : ಮಲಯಜಗಂಧಿ ಮರನ ತಂದು ನಿಲಿಸುವೆನಿಂದು
ಮನ್ನಿಸೆ ಕೃಪಾಸಿಂಧು
ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ
ಕೋಕಿಲಸ್ವರಗಾನೆ
ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ
ಕುಳ್ಳಿರಿಸಿದ
ಹೆಳವನಕಟ್ಟೆಯ ರಂಗನು ಕೃಪಾಂಗನು
ದೇವೋತ್ತುಂಗ ವಿಕ್ರಮನು ||9||

Sloka : dvaravatiyali danujadallana mukumda
Sare rukminisahita Anandadinda
Varijambaka valagadolu chanda
Naradamuni ta parijatava tanda ||1||

Pada : ballida muniya kullirisida satkarisida
Pushpayarige enda
Vallaberukminigallade byare salladu ella
Ninu ballade intenda
I suddi satyabamege tandu helidarandu
Kelidalake nindu
Tallanisuta ede dhigilendu bugibugilendu
Manadalli atinondu ||1||

Sloka : indralokada chandada kusumavannu
Mandagamaneya mudige ta mudisidanu
Endu ennolu eravu illavu kani
Indu madida kuhakava krushna tanu ||2||

Pada : hariyu madida matavanu kandenu nanu
Innarige peluvenu
Parimalada parijatada huva tandanu bame
Rukmini tanna jiva
Sari banda madadige mudisida srungarisida
Bahupriti badisida
Bariya matina bannaneyilla sneha tanagalli
Thakkuthavaligalilli ||2||

Sloka : mecci bandene mohakke maruladene
Haccire mata hariyu ta kelidane
Necci iddene ennolu vanchisidane
Raccigikkida rampu madida kane ||3||

Pada : maranattuli talalarene mukadorane innenu terane
Torise krushnanna ammayya kelu dammayya
Kamtu kamalajanayya
Baradiddare prana uliyadu matte alivudu
Enemdu tiliyadu
Sarida saribanda satiya bahuratiya
Bahu priti iddava[La] ||3||

Sloka : male illada megavidyatakmamma
Bele illada bumi matyatakamma
Gili^^illada gudu tanyatakamma
Talalareno sri krushnanillade emma ||4||

Pada :yakenna brahma puttisidano srushtisidano
Matennyaka padedalo
Sakinnu hennu janmada balu yatake helu
Takalennaya golu
Kuhaka peldu narada siddha embudu baddha
Muruloka prasiddha
Srikrushnange enage bedava madi hodanu
Odi tanagyakidu byadi ||4||

Sloka : bisajakshana bahala nambidde nanu
Vasavadane olidu rukminige tanu
Sasimukiyale savati attuli idenu
Asebattene bahala vasudeva sutage ||5||

Pada : sittinindati gudagudisuta arbatisuta
Ellarodane kopisuta
Tottatodige idaduta bisaduva
Nanagyakidu endu
Patte mancada mele oruguta ta eraguta
Manadolu maruguta
Ishtu maduvudidu nitave prakyatave
Suraparijatave ||5||

Sloka :devalokada huva tanagillavalla
Bave ennolu muniyade biduvalalla
Ava pariyali tilidu heluvenu solla
Jivadollabeyodane panthavu salla ||6||

Pada : mandagamane munidihalo enna priyelo
Ennodane nudiyalo
Indu allige hogadiddare illiddare
Aprabuddhanadare
Kundu enna myaliduvalo sneha biduvalo
Kopavanu taluvalo in
Tendu nudida mukumda nityanandanu
Bagilolu ninmdanu ||6||

Sloka :chittadollabe cadure mohanakare
Mutturatnava maneyolagella biri
Etta hodalo enna pranada nari
Satyabameya suluhu kanenu tori ||7||

Pada : kannadi kadapina janeya supravineya
Kokilavaniya
Innelli hodalu torise hatra serise bandenu
Haraisi nimtavaru kannu
Sanneya madi torvadu nodi mellage
Matadi ||7||

Sloka :hasi malagidda satiya kandu
Bisanikeyali bisida krushna tanu
Susu parimala parijatada huva ha-
Raisi kangalu tira nodidalu kante ||8||

Pada : kandalu karunyamurtiya satkirtiya
Palgunana sarathiya
Illigyatake bande hogendu atta sagendu
Idu Enu sogendu
Hindu striyara sirorannale mohannale
Munisyatakennodane
Kanda kanasu endu bavise enna jivise
Aparadhava kshamise ||8||

Sloka :akkarindale rukminige itta huva
Mikka satiyarigyatakemba bava
Kakkulatiya kande ninnalli jiva
Sokkabyadavo saku hogelo gova ||9||

Pada : malayajagandhi marana tandu nilisuvenindu
Mannise krupasindhu
Balarama namdagopanane tappenu kane
Kokilasvaragane
Calavyatakendu takkaisida santaisida todeyalli
Kullirisida
Helavanakatteya ranganu krupanganu
Devottunga vikramanu ||9||

dasara padagalu · MADHWA

Kannada Parayana Padagalu(Ramayana, Mahabharatha, Bhagavatha etc)

ಸಂತತಿ ಆಹೋದು ರಾಮಾಯಣವ ಕೇಳಲು |
ಸಕಲ ಪಾಪಹರವು ಭಾರತ ಕೇಳಲು |
ತಂತುಮಾತ್ರ ವಿಷ್ಣುಪುರಾಣವ ಕೇಳಲು |
ತತ್ವ ವಿವೇಕವು ಬಾಹೋದು ||
ಅಂತರವರಿತು ಭಾಗವತ ಕೇಳಲು |
ಆಹೋದಗ್ರ್ಯನಾ ಭಕ್ತಿ ವೈರಾಗ್ಯವು |
ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು |
ಸಕಲವು ಬಾಹೋದು ಸಾಯುಜ್ಯವು ||

Santati ahodu ramayanava kelalu |
Sakala papaharavu barata kelalu |
Tantumatra vishnupuranava kelalu |
Tatva vivekavu bahodu ||
Antaravaritu bagavata kelalu |
Ahodagryana Bakti vairagyavu |
Santata purandaravithalana sankirtane padalu |
Sakalavu bahodu sayujyavu ||



Navagraha sthothragalu

Sri Sathya Narayana Vrata Katha(by Shyama Sundara Dasaru)

dasara padagalu · MADHWA · mahabharatham · purandara dasaru

Mahabharata

ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ

ಪಖಗವರ ಗಮನನೆ ಅಗಣಿತ ಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿ||ಅ.ಪ||

ಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||
ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ ||1|||

ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |
ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ ||2||

ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||
ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ ||3||

ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||
ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ ||4||

ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||
ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ ||5||

ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||
ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ ||6||

ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||
ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ ||7||

ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||
ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ ||8||

ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||
ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ ||9||

ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||
ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ ||10||

ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||
ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ ||11||

ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||
ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ ||12||

ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||
ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ ||13||

ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||
ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ ||14||

ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||
ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ ||15||

ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||
ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ ||16||

ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||
ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ ||17||

ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||
ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ ||18||

ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||
ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ ||19||

ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||
ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ ||20||

ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||
ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ ||22||

Bagebage atagalelli kaliteyo |jagada mohakane ||pa||

Pakagavara gamanane aganita mahimane |jagadolu ni bahu migilagi |pari||a.pa||

Obbala basirindali bandu-ma-|ttobbala kaiyindali beledu ||
Kobbida bubaravaniluhalu intha |tabbibbatagalelli kaliteyo ||1|||

Maguvagi putani moleya-undu |nagutalavala asuvane kondu |
Agahara ni gopiyolu janisi intha |sogasina atagalelli kaliteyo ||2||

Lokarante ni mannanu tinalu |ta kopisi jananiyu bega ||
Okarisennalu bayolu sakala |lokava toridudelli kaliteyo ||3||

Maduva dhumuki kalingana pididu |padeya mele kunidadutire ||
Madadiyaru ninna bidade bedalu |kadudayedoridudelli kaliteyo ||4||

Ondupadabumiyali vyapisi ma-|ttondupadagaganakkidalu ||
Andadi baliya Siradi muraneyadittu |bandhisidatagalelli kaliteyo ||5||

Baradi basmasura varavanu padedu |haranu Siradi karavida baralu ||
Tarunirupava tali urihastadavana |marulugolisidudanelli kaliteyo ||6||

Jagake mulanemdu nagaraja kareye |kagavahananagade ni bandu ||
Naguta naguta A vigadanakrana konda |hagaranadatagalelli kaliteyo ||7||

Vedagalarasiyu kanada brahma ni-|nadaradali vidurana gruhadi ||
Modadi okkuditeya palane kondu |hadiyol harisidudelli kaliteyo ||8||

Dambakahiranyakasipu prahladana |hambalavillade sikshisalu ||
Stambadi Baktage rupava tori |sambramavittudanelli kaliteyo ||9||

Cakradharane jaratanayanondige kadi |sikki odidavanivanendenisi ||
Bakta bimana kaiyali kollisida |thakkinatagalanelli kaliteyo ||10||

A siravatana tandeya karadolu |susuta raktava bilutire ||
Sosi nodade runda bisudalavana Sira |sasira madidudelli kaliteyo ||11||

Prana selevani dinavendarjuna |dhenisadale saindhavagenalu ||
Kanadante suryage cakravanittu |bana hodisidudanelli kaliteyo ||12||

Sarpana banavu uriyuta baralu kan-|darpana pita ni karunadali ||
Tappisi parthana ratha nelakotti |torpadisidatavelli kaliteyo ||13||

Duruladuhsasana draupadi sireya |karadinda sabeyolu seleyutire ||
Harisri krushna ni poreyenalakshana |arive rupade bandudelli kaliteyo ||14||

Kurupati sabeyolu guruvinindiruta |sirikrushnanu bare vandisade ||
Sthiravagi kulitire charanadi dharemetti |kurupananurulisiddelli kaliteyo ||15||

Duriyodhana pandavara sikshisalu |moreyidalavana marulugolisi ||
Dhuradoluparthage sarathiyagi ni |kurukulavalidudanelli kaliteyo ||16||

Patisapadi sileyada ahalyeya |hitadindavalanu uddharisi ||
Patiyodagudisi pativrateyenisida-a-|mitamahimeya krutiyelli kaliteyo ||17||

Ambarisha dvadasi vrata sadhise |dombetanadidurvasabare ||
Indudharamsanu rajana pidisa-|landu cakradi kaydudelli kaliteyo ||18||

Kulacalagalanalida ajamila sarasadi |holatiya kudire marana bare ||
Balu mohada suta naraganodaralu |olidu gatiyanittudelli kaliteyo ||19||

Badatana parvana bidade badhisalu |madadiya nudikeli^^akshanadi ||
Odeya ninavanoppidiyavalanu kondu |kadubagyanittudanelli kaliteyo ||20||

Endemdu ninna gunavrundagalenisalu |indirebommanigasadalavu ||
Mandaradharasire purandaravithalane |chenda-chendadatagalelli kaliteyo ||22||