dasara padagalu · DEVOTIONAL · MADHWA · purandara dasaru · rama

Raama namava nudi nudi

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ
ಶ್ರೀರಾಮನಾಮವ ನುಡಿ ನುಡಿ

ಗುರುಗಳ ಚರಣವ ಹಿಡಿ ಹಿಡಿ
ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ

ಕರಿರಾಜವರದನ ಸಾರೋ ಸಾರೋ ಶ್ರಮ
ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ

Raama naamava nudi nudi |
Kama krodhava bidi bidi sri || pa ||

Gurugala charanava hidi hidi |
Hari nirmalyava mudi mudi |
Kare kare bhavapasha kadi kadi | banda |
Duritava nellava hodi hodi || 1 ||

Sajjana sangava mado mado |
Durjana sangava bido bido |
Arjunana sarathiya nodo nodo |
Hari bhajaneli manavanu ido ido || 2 ||

Kariraja varadana saro saro |
Shrama pariharisendu horo horo |
Varada bheemesana dooradiro | namma |
Purandara vithalana sero sero || 3 ||

dasara padagalu · DEVOTIONAL · MADHWA · rama · Vijaya dasaru

raama raama emberadara

ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||

ಹಾಲಾಹಲವನು ಪಾನವ ಮಾಡಿದ|
ಫಾಲಲೋಚನನೆ ಬಲ್ಲವನು ||
ಆಲಾಪಿಸುತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||೧||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ|
ಕುಂಜರ ರವಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ||೨||

ಕಾಲವನರಿತು ಸೇವೆಯ ಮಾಡಿದ |
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳ ಶಯನ ಶ್ರೀ ವಿಜಯವಿಠಲನ |
ಲೀಲೆ ಶರಧಿಯ ಕೇಳೇನು ||೩||

Raama raama emberadara premadi |
Salahitu sujanaru || pa ||

Haalaahalavannu paanava maadida |
Paala locanane ballavanu |
Aalaapisuta shileyaagidda baale |
Ahalyeya kelenu || 1 ||

Anjike illade giri saarida kapi |
Kunjara kunjara ravisuta ballavanu |
Enjala phalagala harigarpisida |
Kanjalocaneya kelenu || 2 ||

Kaalavanaritu seveya maadida |
Lola lakshmanane ballavanu |
Vyaalaashayana shreevijayaviththalana |
Leele sharadhiya kelenu || 3 ||

 

 

dasara padagalu · DEVOTIONAL · kanakadasaru · MADHWA · rama

Elli nodidaralli raamaa

ಎಲ್ಲಿ ನೋಡಿದರಲ್ಲಿ ರಾಮ – ಇದ ||pa||

ಬಲ್ಲ ಜಾಣರ ದೇಹದೊಳಗೆ ನೋಡಣ್ಣ ||apa||

ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು |
ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1||

ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸ|
ಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2||

ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರ|
ಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3||

ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು||4||

ರೂಢಿಯೊಳಗೆ ಶುದ್ಧ ಮೂಢ – ಈಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ – ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ ||5||

Elli nodidaralli raamaa | ida |
Balla jaanara dehadalli nodannaa || pa ||

Kanne kaamana beeja |
kannindale nodu |
Moksha saamraajya | kannina mooruti bigidu |
Ola kannindale devara nodanna || 1 ||

Mooge shwaasa nishwaasa |
Moogimdale kaano yoga sanyaasa |
Mooganaadare vishesha |
Mooginda nodanna leelaa vilaasa || 2 ||

Kiviye karmakke dwaara |
Kiviyindale kelo mokshada saaraa |
Kiviye karma kuthaaraa |
Olagiviyalli kaano naadada bera || 3 ||

Bommanu maadida tanu bittu |
Vishwa karmanu maadida bombeyanittu |
Summane koogugalittu |
Ada nambuvenembone poda kangettu || 4 ||

Roodhiyolage shuddha moodha |
Kaadu kallugalannu nambalu bedaa |
Naadaadi daivagalellaa namma |
Baadadaadikeshavanobbane ballaa || 5 ||

dasara padagalu · DEVOTIONAL · MADHWA · purandara dasaru

Sri pathiya nabhi(Madhwa parampara)

ಶ್ರೀ ಪತಿಯ ನಾಭಿ ಕಮಲದಿಂದ ಅಜ ಜನಿಸಿದನು
ಅಜನ ಪುತ್ರರೆ ಸನಕಾದಿಗಳು ।
ಸನಕಾದಿಗಳ ಶಿಷ್ಯರೇ ದೂರ್ವಾಸರು ।
ದೂರ್ವಾಸರ ಶಿಷ್ಯರೇ ಪರತೀರ್ಥರು ।
ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು ।
ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು ।
ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು ।
ಅಚ್ಯುತಪ್ರೇಕ್ಷರ ಕರಸಂಜಾತರೇ ಮಹಾಭಾಷ್ಯಕಾರರು।
ಮಹಾಭಾಷ್ಯಕಾರರೇ ಗುರುಮುಖ್ಯಪ್ರಾಣರು ।
ಗುರುಮುಖ್ಯಪ್ರಾಣಪತಿ ನಮ್ಮ ಪುರಂದರ ವಿಠ್ಠಲದಾಸರಿಗೆ ನಮೋ ನಮ: ।।

sri pathiya nabhi kamaladhalli aja janisidhanu
ajana manasa puthrare sanakathigalu
sanakaadhigala sishyare dhur vaasaru
dhur vasara sishyare para theertharu
para theerthara sishyare purna pragnyaru
sathya pragnara shisyare praagnya theertharu
praagnya theerthara sishyare achyuta preksharu
achyutha preksha kara sanjaathare mahaa bhasya kararu
mahaa bhasya kaarare guru mukhya praanaru
guru mukhya praana pathi namma
purandara vittala daasarige namo nama

dasara padagalu · DEVOTIONAL · MADHWA · narasimha · purandara dasaru

Narasimha prathrurbhava(kannada)

This is one of my favorite songs from Mysore Ramachandra Achar kacheri. This is a masterpiece song performed by him. I am sure everyone who witnessed his kacheri live would have felt goosebumps.  He tooks us to the avathara time of Lord narasimha itself. What a wonderful lyrics purandara dasaru has composed in this song. I have seen so many kacheris of him where people requesting him to sing this particular song for them. The music, Jaankate sound, his powerful vocals, beautiful pictures all together gives the listener a divine experience. I attached his performance from a youtube link.

ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।

ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ।। ನಾರಸಿಂಹ ।।

ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ।। ನಾರಸಿಂಹ ।।

ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ।।

ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ।।

ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ।।

ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ।।

ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ।।

ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ।।

ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ।। ನಾರಸಿಂಹ ।।

ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ।।

ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ।। ನಾರಸಿಂಹ ।।

ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ।। ನಾರಸಿಂಹ ।।

ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ।। ನಾರಸಿಂಹ ।।

ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ।। ನಾರಸಿಂಹ ।

Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu
Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida
hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu
Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake
Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga
Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu
Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna
Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda
Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna
Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta
Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa

Varakambhavannu Vodeyalu Narahariyu
Ugra Kopavannu Taalida

(Bagavatham Narasimha avatara slokam)

Satyam Vidhaatum Nijabhrutyabhaashitam Vyaptim Cha
Bhooteshvakhileshu Chaatmanaha|
Adyasyataatyadhbhutaroopamudhvahan Stambhe Sabhaayaam
Na Mrugam Na Maanusham||

Katakatemba Dhvaniya Maadi Nakhagalinda Pididu Votti
Karula Bagedu Maale Haaki Kandha Bhaktanappikonda ||12||

Antarikshadalli Amaararu Nodi Aaga
Pushpavrushtiyanne Karedaru
Ajana Padeda Devi^ Bandu Todeya Meyley Kulitiralu
Amarapatiyarella Nodi Anja Bedembhaya Kotta ||13||

Lakshmi Narashima chariteya Udaya Kaala
Patisuvanta Nararigella
Putrasantaanangalittu Mattey Bedidhaange Kottu
Bhaktavatsala Mukuti Koduva Purandara Vittala Raya ||13||

for audio link:

http://www.saavn.com/s/song/kannada/Narasimha-Nembo-Devanu/Narasimha-Nembo/Rw0GRwR5TwE

dasara padagalu · DEVOTIONAL · MADHWA · sundara kandam · Vadirajaru

Sundara Kandam by vadirajaru

ಎಷ್ಟು ಸಾಹಸವಂತ ನೀನೇ ಬಲವಂತ | ಇಷ್ಟದಾಯಕ ಭಳಿ ಭಳಿರೇ ಹನುಮಂತ ||
ಅಟ್ಟುತ ಖಳರನು ಮೆಟ್ಟಿ ಸೀಳುತಲಿ | ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ||ಪ||

ರಾಮರಪ್ಪಣೆಯಿಂದ ಶರಧಿಯ ದಾಟಿ | ಆ ಮಹಾ ಅಸುರೆಯ ಸೀಳಿ ಬಿಸಾಟಿ |
ಸ್ವಾಮಿ ಕಾರ್ಯವನುಕೋಲದಿ ಯೋಚಿಸಿ | ಪ್ರೇಮದಿ ನಡೆದನು ಅರೆಲೆ ಸಾಟಿ || ೧ ||

ದೂರದಿಂದಸುರನ ಪುರವನ್ನೆ ನೋಡಿ | ಮನದಿ ಶ್ರೀ ರಾಮರ ಸ್ಮರಣೆಯಾ ಮಾಡಿ |
ಹಾರುತ ಹರುಷದಿ ವರಸಿಲಂಕಿಣಿಯನು | ವಾರಿಜ ಮುಖಿಯಳ ಕಂಡು ಮಾತಾಡಿ || ೨ ||

ರಾಮರ ಕ್ಷೇಮವ ರಮಣಿಗೆ ಪೇಳಿ | ತಾಮಸ ಮಾಡದೆ ಮುದ್ರಿಕೆಯ ನೀಡಿ |
ಭೂಮಿಜೆ ಜಾನಕಿ ಕುರುಡು ನೀಡಲಾಗ | ಆ ಮಹಾವನದೊಳು ಫಲಗಳ ಬೇಡಿ|| ೩ ||

ಕಣ್ಣಿಗೆ ಬೇಕಾದ ಹಣ್ಣು ಸವಿದು | ಹಣ್ಣಿನ ನೆವದಲಿ ಅಸುರರ ಬಡಿದು |
ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ | ಬಣ್ಣಿಸಿ ಅಸುರರ ಬಲವನ್ನು ಮುರಿದು || ೪ ||

ಶ್ರುಂಗಾರ ವನದಲ್ಲಿದ್ದ ರಾಕ್ಷಸರ | ಅಂಗವನಳಿಸಿದ್ಯೋ ಅತಿಶಯ ಶೂರಾ |
ನುಂಗಿ ಅಸ್ತ್ರವನು ಅಕ್ಷಯ ಕುವರನ | ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ ||

ದೂರ ಪೆಳುವರೆಲ್ಲ ರಾವಣನೊಡನೆ | ಚೀರುತ ಕರೆಸಿದ ಇನ್ದ್ರಜಿತುವನ್ನೆ |
ಚೋರ ಕಪಿಯನು ಹಿಡಿದುತಾ ಎನ್ನುತ | ಶೂರರ ಕಳಿಸಿದ ನಿಜಸುತರೊಡನೆ || ೬ ||

ಪಿಡಿದನು ಇಂದ್ರಜಿತು ಕಡುಕೊಪದಿಂದ | ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ |
ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ | ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ || ೭ ||

ಕಂಡ ರಾವಣನು ಉದ್ದಂಡ ಕಪಿಯನ್ನೆ | ಮಂಡೆಯ ತೂಗುತ ಮಾತನಾಡಿಸಿದ |
ಭಂಡು ಮಾಡದೆ ಬಿಡೆ ನೋಡು ಕಪಿಯನೆ | ಕಂಡು ದುರದುರನೆ ನಡೆದನಾಗ || ೮ ||

ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ | ನೆಲೆಯಾವದ್ಹೇಳೋ ನಿನ್ನೂಡೆಯನ ಹೆಸರನ್ನೆ |
ಬಲವಂತ ರಾಮರ ಬಂಟ ಬಂದಿಹೆನೋ | ಹಲವು ಮಾತ್ಯಾಕೋ ಹನುಮನೆ ನಾನು || ೯ ||

ಬಡ ರಾವಣನೆ ನಿನ್ನ ಬಡಿದು ಹಾಕುವೆನು | ಎನ್ನೋಡೆಯನಪ್ಪನಣೆಯಿಲ್ಲೆಂದು ತಾಳಿದೆನು |
ಪುಡಿಮಾಡುವೆ ಫುಲ್ಲ ರಕ್ಕಸನೆ | ತೊಡೆವೆನು ನಿನ್ನಪಣೆಯ ಅಕ್ಷರವ || ೧೦ ||

ನಿನ್ನಂತ ದೂತರು ರಾಮರ ಬಳಿಗೆ | ಇನ್ನೆಷ್ಟು ಮುಂದಿಗಳುಂಟು ಹೇಳೋ ನೀತ್ವರಿಯಾ |
ನನ್ನಂತ ದೂತರು ನಿನ್ನಂತ ಪ್ರೇತರು | ಇನ್ನೂರು ಕೋಟಿ ಕೇಳರಿಯಾ || ೧೧ ||

ಕಡುಕೋಪದಿಂದಲಿ ಖೂಳ ರಾವಣನು | ಸುಡಿಸುಡಿ ಬಾಲವ ಸುತ್ತಿವಸನವನು |
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ | ಒಡನೆ ಮುತ್ತಿದ್ದರು ಗಡಿಮನೆಯವರು || ೧೨ ||

ತಂದಿರುವಸನವ ತoಡ ತಂಡದಲಿ | ಒಂದೊಂದು ಮೂಟೆ ಎಂಭತ್ತು ಕೋಟಿಯಲಿ |
ಛಂದದಿ ಹರಳಿನ ತೈಲದೊಳದ್ದಿಸಿ | ನಿಂದ ಹನುಮನು ಬಾಲವ ಬೆಳೆಸುತ || ೧೩ ||

ಶಾಲುಶಕಲಾತಿಯು ಸಾಲದೆಯಿರಲು | ಬಾಲೆರ ವಸ್ತ್ರವ ಸೆಳೆದು ತಾರೆನಲು |
ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ | ಕಾಲ ಮೃತ್ಯುವ ಕಿಣಕಿದರಲ್ಲಿ || ೧೪ ||

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ | ಇಣುಕಿ ನೋಡುತ ಅಸುರರನಣಕಿಸುತ |
ಝಣಝಣ ಝಣರೆನೆ ಬಾಲ ಗಂಟೆಯು | ಮನದಿ ಶ್ರೀರಾಮರ ಪಾದವ ನೆನೆಯುತ || ೧೫ ||

ಮಂಗಳ ಶ್ರೀರಮಚಂದ್ರ ಮೂರುತಿಗೆ | ಮಂಗಳಂ ಸೀತಾದೇವಿ ಚರಣoಗಳಿಗೆ |
ಮಂಗಳವೆನುತ ಲಂಕೆಯ ಸುಟ್ಟು | ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ ||

ಹತ್ತಿತು ಅಸುರನ ಗಡ್ಡಮೀಸೆಗಳು | ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು |
ಚಿತ್ತದಿರಾಮರು ಕೋಪಿಸುವರು | ಎಂದು ಚಿತ್ತದಿ ನಡೆದನು ಅಸುರನಿದ್ದೆಡೆಗೆ|| ೧೭ ||

ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ | ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ |
ಸೇತುವೆ ಕಟ್ಟಿ ಚದುರಂಗ ಬಲಸಹ | ಮುತ್ತಿತು ಲಂಕೆಯ ಕೋಟೆಯ ಕಂಡು || ೧೮ ||

ವೆಗ್ಗಳವಾಯಿತು ರಾಮರ ದಂಡು | ಮುತ್ತಿತು ಲಂಕೆಯ ಕೋಟೆಯ ಕಂಡು |
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ | ಝಗ್ಗನೆ ಪೇಳ್ವರು ರಾವಣಗಂದು || ೧೯ ||

ರಾವಣ ಮೊದಲಾದ ರಾಕ್ಷಸರ ಕೊಂದು | ಭಾವಶುದ್ಧದಲಿ ವಿಭೀಷಣಬಾಳೆಂದು |
ದೇವಿ ಸೀತೆಯ ನೋದಗೊಂಡಯೋಧ್ಯದಿ | ದೇವ ಶ್ರೀರಾಮರು ರಾಜ್ಯವಾಳಿದರು || ೨೦ ||

ಶಂಖದೈತ್ಯನ ಕೊಂದೆ ಶರಣು ಶರಣಯ್ಯ | ಶಂಖಾಗಿರಿಯಲಿ ನಿಂದ ಹನುಮಂತರಾಯ |
ಪಂಕಜಾಕ್ಷ ಹಯವದನ ಕಟಾಕ್ಷದಿ | ಬಿಂಕದಿ ಪಡೆದೆಯೋ ಅಜಪದವಿಯನು || ೨೧ ||


Eshtu saahasavanta neene balavanta | dhitta
Mooruti bhali bhalire hanumanta ||pa||

Attuva khalarede metti tulidu | tale kutti
Chendaadida dhitta neenahudo ||a.pa||

Raamarappaneyinda sharadhiya daati |
Aa mahaa lankeya kande kireeti |
Swaamiya kaaryava premadi nadesi |
Ee mahiyolu ninagaarai saati ||1||

Dooradindasurana puravane nodi |
Bharadi shree raamara smaraneya maadi |
Haaride harushadi orisi lankiniyanu |
Vaarijamukhiyanu kandu maataadi ||2||

Raamara kshemava ramanige peli |
Taamasa maadade mudrike needi |
Premadi jaanaki kuruhanu kodalaaga |
Aa mahaa vanadolu phalavanu bedi ||3||

Kannige priyavaada hannanu koydu |
Hannina nevadali asurara baydu |
Tanna tannane haari nege negedaaduta |
Bannisi asurara balavanu muridu ||4||

Shrungaara vanadolage idda rakkasara |
Angavanaliside atirana shoora |
Nungi astragala akshaya kuvarana |
Bhangisi bisuteyo banda raakshasara ||5||

Dooru pelidarella raavananodane |
Ceerutta karesida indrajituvane |
Kora kapiya nee hiditahudennuta |
Shoorara kaluhida nija sutanodane ||6||

Hididanu indrajitu kadu kopadinda |
Hedemuri kattida brahmaastradinda |
Gudu gudu guttuta kidi kidi aaguta |
Nadedanu lankeya odeyaniddedege ||7||

Kandanu raavananu uddanda kapiyanu |
Mandeya tooguta maataadisidanu |
Bhandu maadade bide nodu kapiyane |
Gandugaliyu durudurisi nodidaru ||8||

Chalavyaako ninagishtu elavo kodagane |
Neleyaavud~helo ninnodeyan~hesaranna |
Balavanta raamara banta bandiheno |
Halavu maatyaako hanumanu naane ||9||

Bada raavanane ninna badidu haakuveno |
Odeyanappane illa endu taalideno |
Pudi elisuvenu pulla rakkasara |
Todevenu ninnappaneya aksharava ||10||

Ninnantha dootaru raamana baliyolu |
Inneshtu mandiyuntu helo nee twariya |
Nannantha dootaru ninnantha pretaru
Innooru munnooru koti kelariyaa ||11||

Kadu kopadindali khoola raavananu |
Sudirenda baalava sutti vasanava |
Odeyana maatige tade badeyillade |
Odane muttidaru gadimaneyavaru ||12||

Tandaru vasanava tanda tandadali |
Ondondu moote embhattu kotiyali |
Chandadi haralina tailadoladdisi |
Ninda hanumanu baalava belesuta ||13||

Shaalu sakalaatiyu saalade iralu |
Baalera vastrava seledu taarenalu |
Baalava nillisi benkiya nidutali |
Kaala mrutyuva kenakidanalli ||14||

Kuni kunidaaduta koogi bobbiduta |
Iniki noduta asurarananakisuta |
Jana jana janarene baalada ganteyu |
Manadi shreeraamara paadava neneyuta ||15||

Mangalam shreeraamacandra moorutige |
Mangalam seetaadevi charanangalige |
Mangalavenuta lankeya suttu |
Langisi asurana gaddake hididaa ||16||

Hottitu asurana gadda meesegalu |
Suttitu hoge brahmaanda kotiyolu |
Chittadi raamaru kopisuvaru endu
Chittadi nadedanu arasaniddedege ||17||

Seeteya kshemava shreeraamarig~heli |
Preetiyim kotta kuruha karadalli |
Setuve katti chaduranga bala sakha |
Muttitu lankeya sooregaiyutali ||18||

Veggalavaayitu raamara dandu |
Muttitu lankeya koteya kandu |
Heggada kaayvara nuggu maadutire |
Jhaggane peldaru raavanagandu ||19||

Raavana modalaada raakshasara kondu |
Bhava shuddhadadali vibheeshana baarendu |
Devi seeteyanodagondu ayodhyadi |
Deva shreeraama raajyavaalidaru ||20||

Shankha daityana konde sharanu sharanayya |
Shankha giriyali ninda hanumantaraaya|
Pankajaaksha hayavadanana kataakshadi |
Binkadi padedeyo ajana padaviyaa ||21||

dasara padagalu · DEVOTIONAL · MADHWA · prasanna venkata dasaru · srinivasa

Bideno ninnanghri shreenivaasa

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ
ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ
ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ
ನಡೆತಪ್ಪು ಕಾಯೋ ಶ್ರೀನಿವಾಸ ||ಪ||

ಬಡಿಯೋ ಬೆನ್ನಲಿ ಶ್ರೀನಿವಾಸ ಎ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧||

ಪಂಜು ಪಿಡಿವೆನೋ ಶ್ರೀನಿವಾಸ ನಿ
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೇ ಶ್ರೀನಿವಾಸ. |೨||

ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿನಲಿವೆನೋ ಶ್ರೀನಿವಾಸ ನೆನ್ನ
ರತ್ನದ ಹಾವಿಗೆ ಶ್ರೀನಿವಾಸ ನಾ
ಹೊತ್ತು ಕುಣಿವೆನೋ ಶ್ರೀನಿವಾಸ. ||೩||

ಹೇಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ಎನ್ನ
ಪಾಲಿಸೊ ಬಿಡದೇ ಶ್ರೀನಿವಾಸ. ||೪||

ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನೊವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜೇತಕೆ ಶ್ರೀನಿವಾಸ. ||೫||

ಬೀಸಿಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ. ||೬||

ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಷೆಯ ಕೇಳಿಹೆ ಶ್ರೀನಿವಾಸ ಆ
ವಾಸಿಯ ಸೈರಿಸೋ ಶ್ರೀನಿವಾಸ ||೭||

ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ. ||೮||

ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ
ಸನ್ನವೆಂಕಟಾದ್ರಿ ಶ್ರೀನಿವಾಸ. ||೯||

Bideno ninnanghri shreenivaasa |
Enna dudisikollelo shreenivaasa || a. Pa. ||

Ninnudiye jitello shreenivaasa |
Enna nadetappu kaayo shreenivaasa || a. Pa. ||

Badiyo bennali shreenivaasa |
Ennodala hoyyadiru shreenivaasa |
Naa badava kaanelo shreenivaasa |
Ninnodala hokkeno shreenivaasa || 1 ||

Panju pidiveno shreenivaasa |
Ninnenjala balidumbe shreenivaasa |
Naa sanje udayake shreenivaasa |
Kaalanjiya pidive shreenivaasa || 2 ||

Sattige chaamara shreenivaasa |
Naanetti kuniveno shreenivaasa |
Ninna ratnada haavige shreenivaasa |
Naa hottu naliveno shreenivaasa || 3 ||

Helidantaalihe shreenivaasa |
Nannaligalaagihe shreenivaasa |
Avarooligava maalpe shreenivaasa |
Enna paaliso bidade shreenivaasa || 4 ||

Ninna naama holige shreenivaasa |
Kalla kunni naanaagihe shreenivaasa |
Katti ninnavaroddare shreenivaasa |
Nanaginnu lajjetake shreenivaasa || 5 ||

Beesi kollalavare shreenivaasa |
Mudre kaasi cuccalavare shreenivaasa |
Mikka ghaasiganjenayya shreenivaasa |
Enjalaaseya bantanaa shreenivaasa || 6 ||

Hesi naanaadare shreenivaasa |
Haridaasarolu pokke shreenivaasa |
Avara bhaasheya kelihe shreenivaasa |
Aavaasiya sairiso shreenivaasa || 7 ||

Tingalavanalla shreenivaasa |
Vatsarangalavanalla shreenivaasa |
Raajangala savadipe shreenivaasa |
Bhavangala daatuve shreenivaasa || 8 ||

Ninnava ninnava shreenivaasa |
Naa anyavanariyeno shreenivaasa |
Ayyaa manniso taaytande shreenivaasa |
Prasanna venkataadri shreenivaasa || 9 ||

dasara padagalu · DEVOTIONAL · jagannatha dasaru · MADHWA

Siri Ramana tava charana

ಸಿರಿರಮಣ ತವ ಚರಣ ಸೇವೆ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು ||ಪ||

ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ
ನರಕಕ್ಕೆ ಗುರಿಯಾದೆನೋ ಹರಿಯೆ|| ಅ.ಪ||

ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ
ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ
ವಶವಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು
ಕುಸುಮ ಗಂಧಿಯ ರಮಿಸುತ ಸತತ||1||

ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ
ಹಿರಿದಾಗಿ ಮನೆ ಕಟ್ಟದೆ
ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು
ಧರಧರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ
ಕೊರೆಸಿ ಬಾಗಿಲು ಮಾಡಿದೆ
ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ
ಪರಿಪರಿಯ ಸುಖ ಸಾರಿದೇ ಮೆರೆದೆ||2||

ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ
ಆಕಳ ಹಾಲಲಿ ಮಾಡದೆ
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ
ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ
ಹಾಕಿ ಭಂಗಿಯಾ ಸೇದಿದೆ
ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ
ನೇಕ ಜೂಜುಗಳಾಡಿದೇ ಬಿಡದೆ ||3||

ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ
ಭಾನುಗಘ್ರ್ಯವನು ಕೊಡದೆ
ಹೀನತ್ವ ವಹಿಸಿ ದಾನ ಧರ್ಮವ ಮಾಡದೆ
ಶ್ವಾನನಂದದಿ ಚರಿಸಿದೇ
ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ
ನಾನೊಂದು ಕ್ಷಣಮಾಡದೇ
ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ
ನಾನ ವಿಧಾನ್ನ ತಿಂದೇ ನೊಂದೇ ||4||

ಬಾದರಾಯಣ ಕೃತ ಭಾಗವತ ಕೇಳಲಿಕೆ
ಆದರವೆ ಪುಟ್ಟಲಿಲ್ಲಾ
ವಾದಿಗಳ ಮತವಳಿದ ಮಧ್ವ ಸಿದ್ಧಾಂತದ
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದ ಬಾಹಿರನಾಗಿ ಅಪಸವ್ಯ ಮನನಾಗಿ
ಓದಿಕೊಂಡೆನೋ ಇದೆಲ್ಲ ಸುಳ್ಳ ||5||

ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ
ಹ್ಮಹತ್ಯಗಾರನು ಎನಿಸಿದೆ
ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯ್ಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ
ಮೃತ್ಯು ದೇವತೆಯೆನಿಸಿದೆ ಬಿಡದೇ||6||

ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ
ಗತಿಯೇನು ಪೇಳೊ ಕೊನೆಗೆ
ಸತತ ತವ ಧ್ಯಾನದಲಿ ರತನಾಗಿ ಇರುವ ಸ
ನ್ಮತಿಯ ಪಾಲಿಸಯ್ಯ ಎನಗೆ
ಪತಿತಪಾವನನೆಂಬ ಬಿರಿದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ
ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸದೆ ಬೆಂಡಾದೆ ಕಾಯೋ ಹರಿಯೆ 7

Siriramana tava charana dorakuvudu hyaanginnu
Parama paapishta naanu || pa ||

Narahariye ninna naamasmarane maadade|
narakakke Guriyaadeno || a pa ||

Kere bhaavi mandiragalanu kedahi naa hiridaagi mane kattide |
Nerenadevamaargadaa aravattigegalanu tharathadibicchi tegede |
Paramasan bhramadinda araleya mara koresi baagila maadide |
Vara mandirava mugisi harusha chitrava tegesi paripariya soukhya surude|merede || 1 ||

Saakalyadinda shaaligraamadabhisheka aakalhaalali maadade |
Naakentu naayigala saaki maneyolu baduka bekendu haalu hoyde ||
Kaaku buddigalinda gudagudi nashyapudi haaki bhangiya sedide |
Loka nindakanaagi paatakava necchi aneka joojugalaadide | hariye || 2 ||

Uttama braahmanara vrattiyane kedisi brahmahatyagaaranu eniside |
Matte munji maduve maneyolage naa pogi satta suddiya pelide ||
Vittaviddavarabenhatti dootara kalisi kuttigeya naa koyiside |
Hattu jana yenhenake nitya kalhodeyutire mrutyu devate eniside|bidade || 3 ||

Kshitiyolage innaaru hitava bayasuvarenage gatiyenu pelo konege |
Satata tava dhyaanadali ratanaagi iruva sanmatiyane paalisiga ||
Patita paavananenbo birudu avaniya mele shruti saarutideyo heege |
Shishikanthanuta jagannaathavithala ninna stutisi more hokke hariye | doreye || 4 |

dasara padagalu · DEVOTIONAL · MADHWA · Vijaya dasaru

Ninna olumeyindha

This is one of my favorite song and I heard this song for the first time in Mysore Ramachandra Achar kacheri at Salem. This is a heart touching song and Vijayadasaru who wrote this song Thanked sri Hari for everything he got in his life. He is talking of the wealth of knowledge which he received. He says that it is the Lord’s benevolence that has caused him to possess such wealth.

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ

ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ?

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ

ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ

ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ

ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ

Ninna olumeyinda nikhila janaru bandu mannisuvaru maharaya
enna punyagalinda E pari yunteno ninnade sakala sampathu

Jirnamalina vastra kanada manujage purnavichitra suvasana
Varna varnadinda bahodeno sampurna gunarnava deva

Sanji tanaka iddu sanna soutina tumba ganji kanade balalideno
Vyanjana modalada nana rasangala bhujisuvudu matteno

Obba hengasina hottege hakuvudakke tabbibbugondeno hinde
Nirbharadindali sarvara kudumbo habbadutava unisuviyo

Mane mane tirugidaru kasu puttade summane chalvaridu balalideno
Hana honnu dravyagaliddalige tanage tata prapti nodo jiya

Madhyanna kalakke atithigalige anna meddenendare iyagava
ee dhareyolage satpatrara kudumbo paddhati nodo punyatma

Nichocha tiliyade sarvara charanakke chachidenosala hastagala
Yochisi nodalu sojigavagide vachakke nilikado hariye

Vaidika padavivagibage loukika vaidisuvadu balu kyathe
Maidunagolida shrivijayavittala ninna padasakshiya anubhavavo