ಆನಂದತೀರ್ಥರ ಆರಾಧನೆಯಿದು
ಆನಂದಪೂರಿತ ಮಹೋತ್ಸವ ||ಪ||
ನಾವಿಂದು ನಿರ್ಮಲ ಮಾನಸದಿಂದ
ಗೋವಿಂದ ಭಕುತರ ಪೂಜಿಸುವ|| ಅ.ಪ||
ಜೀವನ ಚರಿತೆಯ ಕೇಳಿ ಮಹಾತ್ಮರ
ಜೀವನ ಮಾದರಿ ಎಮಗಿರಲಿ
ಜೀವನದಲಿ ಬೇಸರ ಪಡಬೇಡಿರಿ
ಜೀವೋತ್ತಮರೇ ರಕ್ಷಿಸಲಿ ||1||
ಎಮ್ಮ ಮತಕೆ ಸಮಮತವಿಲ್ಲವು ಪರ
ಬೊಮ್ಮನ ಸಮ ದೇವತೆ ಇಲ್ಲ
ಎಮ್ಮ ನುಡಿಗೆ ಸಮ ಹಿತನುಡಿಯಿಲ್ಲವು
ಹಮ್ಮಿನಲೀಪರಿ ಬೋಧಿಸುವ||2||
ನಿನ್ನಯ ವಿಷಯವ ವರ್ಣಿಪುದೆಲ್ಲ ಪ್ರ
ಸನ್ನ ಹೃದಯದಲಿ ಧೈರ್ಯದಲಿ
ಇನ್ನು ವೀರ ವೈಷ್ಣವನಾಗುವೆ
ವೆನ್ನುವ ವಚನ ಕುಸುಮವೆರಚಿ ||3||
Ānandatīrthara ārādhaneyidu
ānandapūrita mahōtsava ||pa||
nāvindu nirmala mānasadinda
gōvinda bhakutara pūjisuva|| a.Pa||
jīvana cariteya kēḷi mahātmara
jīvana mādari emagirali
jīvanadali bēsara paḍabēḍiri
jīvōttamarē rakṣisali ||1||
em’ma matake samamatavillavu para
bom’mana sama dēvate illa
em’ma nuḍige sama hitanuḍiyillavu
ham’minalīpari bōdhisuva||2||
ninnaya viṣayava varṇipudella pra
sanna hr̥dayadali dhairyadali
innu vīra vaiṣṇavanāguve
vennuva vacana kusumaveraci ||3||