dasara padagalu · MADHWA · madhwa matha · Vidhyaprasanna thirtharu

Hanumana maneyavaru

ಹನುಮನ ಮನೆಯವರು ನಾವೆಲ್ಲರು
ಹನುಮನ ಮನೆಯವರು ||ಪ||

ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ ||ಅ.ಪ||

ಊಧ್ರ್ವ ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ
ಹೃದ್ಗತವಾದೆಮ್ಮ ತತ್ವಗಳನೆ ನೋಡಿ
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||1||

ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು
ಉತ್ತಮ ನೀಚರೆಂಬುವ ಭೇದ ಬಲ್ಲೆವು
ಸುತ್ತಲು ಕಂಡು ಕಾಣದೆ ಇಹ ಎಲ್ಲಕೂ
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||2||

ಹಲವು ಲೋಕಗಳುಂಟೆಂಬುದ ಬಲ್ಲೆವು
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು
ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ||3||

hanumana maneyavaru nAvellaru
hanumana maneyavaru ||pa||

anumAnapaDadele sthaLava koDiri emage ||a.pa||

Udhrva punDrava nODi Sraddhe Bakuti nODi
hRudgatavAdemma tatvagaLane nODi
iddudanilleMba abaddha nuDivarallA
madhvamuniyu namma tiddiruvuda nODi ||1||

satya mithyagaLige antara ballevu
uttama nIcareMbuva BEda ballevu
suttalu kanDu kANade iha ellakU
uttamanobbanE hariyendu ballevu ||2||

halavu lOkagaLunTeMbuda ballevu
halavu yOnigaLalli janmagaLollevu
alavaBOdharu namma kaLuhidarillige
tiLisi prasanna SrI harige vicArava ||3||

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s