ಎಂಥಾ ಪುಣ್ಯ ಎಂಥಾ ಭಾಗ್ಯ ||ಪ||
ಕಂತು ಜನಕ ಶ್ರೀಕಾಂತನ ದರುಶನ ||ಅ.ಪ||
ಜಗಜಗಿಸುವ ದಿವ್ಯಾಭರಣಂಗಳ
ಸೊಗಸಿಲಿ ಧರಿಸುತ ನಗುವನ ದರುಶನ ||1||
ಹೇರು ಫಲಗಳನು ಸೂರೆಯ ಮಾಡುವ
ಚಾರುವದನ ನಮ್ಮ ಶೌರಿಯ ದರುಶನ|| 2||
ದೇಶ ತಿರುಗಿ ಆಯಾಸವೇತಕೆ
ಶ್ರೀಶ ಪ್ರಸನ್ನ ಶ್ರೀ ಕೃಷ್ಣನ ದರುಶನ ||3||
enthA puNya enthA BAgya ||pa||
kantu janaka SrIkAntana daruSana ||a.pa||
jagajagisuva divyABaraNangaLa
sogasili dharisuta naguvana daruSana ||1||
hEru PalagaLanu sUreya mADuva
cAruvadana namma Sauriya daruSana|| 2||
dESa tirugi AyAsavEtake
SrISa prasanna SrI kRuShNana daruSana ||3||