dasara padagalu · MADHWA · Vidhyaprasanna thirtharu

Hu Beke huvu parimaladha

ಹೂ ಬೇಕೆ ಹೂವು ಪರಿಮಳದ ಹೂವು | ಪ |

ಪರಮಪುರುಷ ನಮ್ಮ ಕೃಷ್ಣನ ತೋಟದ | ಅಪ |

ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಮೊಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲವಿಧದ ಮನಃಕ್ಲೇಶ ಕಳೆಯುವ
ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ | ೧ |

ದಾರದಿ ಕಟ್ಟಿಲ್ಲ ಮಾರುಹಾಕುವುದಿಲ್ಲ
ಕೇರಿ ಕೇರಿಗಳಲಿ ಮಾರುವುದಿಲ್ಲ
ಭೂರಿ ಭಕುತಿಯೆಂಬೊ ಭಾರಿಯ ಬೆಲೆಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ | ೨ |

ರಂಗುರಂಗುಗಳಿಂದ ಕಂಗೊಳಿಸುವ ಸ್ವಚ್ಛ
ಬಂಗಾರದ ಛವಿ ಹಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಘ್ರಿಯ ಸಂಗದಿ ಮಂಗಳಕರವಾದ | ೩ |

hU bEke hUvu parimaLada hUvu | pa |

paramapuruSha namma kRuShNana tOTada | apa |

mallige saMpige jAji sEvantige
molle gulAbi tAvare pArijAta
ellavidhada manaHklESa kaLeyuva
pullalOcana namma kRuShNanu dharisida | 1 |

dAradi kaTTilla mAruhAkuvudilla
kEri kErigaLali mAruvudilla
BUri BakutiyeMbo BAriya belegida
mArendu pELida Sauriya sobagina | 2 |

rangurangugaLinda kangoLisuva svacCa
bangArada Cavi hangisuva
SRungArasindhu prasanna SrImAdhavana
anGriya sangadi mangaLakaravAda | 3 |

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s