dasara padagalu · hanuma · MADHWA · Mukhya praana · purandara dasaru

mangalaM mangalaM muKyaprANarAyage

ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ||

ಮಂಗಳಂ ಮಂಗಳಂ ಕವಿಜನಗೇಯಗೆ ||ಅ||

ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ
ಮುದದಿಂದ ವಾರಿಧಿಯ ಲಂಘಿಸಿ ಲಂಕೆಯ ಸುಟ್ಟವಗೆ
ಪದುಮಾಕ್ಷಿ ಜಾನಕಿಯ ನೋಡುತ ಮೋದವ ಪಟ್ಟವಗೆ
ಹದುಳದಿ ರಘುನಾಥನ ಪದದಲಿ ಶಿರವಿಟ್ಟವಗೆ ||1||

ಪುಂಡರೀಕನಯನ ಸುಪ್ರಚಂಡ ಭೀಮಗೆ
ಪುಂಡರ ಶಿರಗಳ ರಣದಿ ಚೆಂಡನಾಡ್ದವಗೆ
ಚಂಡಿಸಿ ಶಿವನ ವರಗಳನೆಲ್ಲ ಖಂಡಿಸಿದಾತಗೆ
ಶುಂಡಾಲಪುರದರಸನೆಂದು ಮಂಡಿಸಿ ಮೆರೆದಗೆ ||2||

ದುರುಳ ಮಾಯಾವಾದಿಗಳನ್ನು ಮರುಳ ಮಾಡ್ದವಗೆ
ಮುರಳೀಧರನೆ ಪರನೆಂದಾಗ ಧರೆಗೆ ತೋರಿದಗೆ
ಶರಣಾಗತರನು ಪೊರೆವನೆಂದು ಬಿರುದು ಪೊತ್ತವಗೆ
ಧರೆಯೊಳು ಪುರಂದರವಿಠಲನ ನೆನೆಯುವ ಕರುಣಾಸಾಗರಗೆ ||3||

mangalaM mangalaM muKyaprANarAyage ||pa||

mangalaM mangalaM kavijanagEyage ||a||

padumamitraputrage rAjyava sAdhisikoTTavage
mudadinda vAridhiya lanGisi lankeya suTTavage
padumAkShi jAnakiya nODuta mOdava paTTavage
haduLadi raGunAthana padadali SiraviTTavage ||1||

punDarIkanayana supracanDa BImage
punDara SiragaLa raNadi cenDanADdavage
canDisi Sivana varagaLanella KanDisidAtage
SunDAlapuradarasanendu manDisi meredage ||2||

duruLa mAyAvAdigaLannu maruLa mADdavage
muraLIdharane paranendAga dharege tOridage
SaraNAgataranu porevanendu birudu pottavage
dhareyoLu purandaraviThalana neneyuva karuNAsAgarage ||3||

dasara padagalu · jagannatha dasaru · MADHWA · raghavendra

mangaLa guru rAGavEndrage jaya

ಮಂಗಳ ಗುರು ರಾಘವೇಂದ್ರಗೆ ಜಯ ||ಪ||

ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ||

ಶ್ರೀಸುಧೀಂದ್ರಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನಜಾರ್ಕಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||೧||

ವೃಂದಾವನಭುವಿಯೊಳಗೆ ಸುರದ್ರುಮ-
ದಂದದಿ ರಾಜಿಸುವಗೆ ಮಂಗಳ
ಅಂಧ ಪಂಗು ಮೂಕ ಬಧಿರರ ಈಪ್ಸಿತ
ಸಂದೋಹ ಸಲಿಸುವ ಮುನಿವರಗೆ ||೨||

ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ||೩||

mangaLa guru rAGavEndrage jaya ||pa||

mangaLa sujanAnbudhicandrage ||a.pa||
SrIsudhIndrakumArage mangaLa
BUsuranuta mahimage mangala
dESika kulavanajArkage mangala
BAsura kIrtiya paDedavage ||1||

vRundAvanaBuviyoLage suradruma-
dandadi rAjisuvage mangala
andha pangu mUka badhirara Ipsita
sandOha salisuva munivarage ||2||

BUtaprEtabEtALa Bayavipina
vItihOtranenipage mangala
vAtajanuta jagannAthaviThalana
dUtara salahuva dAtanige||3||

dasara padagalu · Vadirajaru

laali sri hayavadhana

ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ||pa||

ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ
ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ|
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನ ಎತ್ತಿಕೊ ನಂದಗೋಪಾಲ||1||

ಮನೆಯೊಳಗೆ ಇರನೀತ ಬಹು ರಚ್ಚೆವಂತ
ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ|
ಗುಣ ಗುಣಗಳೊಳಗಿಪ್ಪ ಬಹು ಗುಣವಂತ
ಗುಣ ಬದ್ಧ ನಾಗದಿಹ ಶ್ರೀ ಲಕ್ಷ್ಮೀಕಾಂತ||2||

ಕ್ಷೀರಾಂಬು ನಿಧಿಯೊಳಗೆ ಸಜ್ಜೆಯೊಳಗಿರುವ
ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ|
ಕಾರುಣ್ಯ ಹಯವದನ ಕಾಯ್ವ ತುರುಕರುವ
ನೀರೆ ಗೋಪಿಯರೊಳು ಮೆರೆವ ಕಡು ಚೆಲುವ||3||

lAli SrI hayavadana lAli ranga viThala
lAli gOpinAtha lakShmI samEta||pa||

muttu mANika bigida toTTiloLagolla
ettidaru ennaya kaiyoLage nilla|
Baktarige varagaLanu koDuva hottilla
putrana ettiko nandagOpAla||1||

maneyoLage iranIta bahu raccevanta
manevArte yAru mADuvaru SrIkAnta|
guNa guNagaLoLagippa bahu guNavanta
guNa baddha nAgadiha SrI lakShmIkAnta||2||

kShIrAMbu nidhiyoLage sajjeyoLagiruva
SrI ramaNa Baktariccege nalidu baruva|
kAruNya hayavadana kAyva turukaruva
nIre gOpiyaroLu mereva kaDu celuva||3||

dasara padagalu · MADHWA · sampradaaya haadu

Sampradaaya Haadugalu/ಸಂಪ್ರದಾಯ ಹಾಡುಗಳು

My sincere thanks for everyone who is visiting my blog and supporting me to improve my content and for the constant encouragement

I have received so many request(Through comments, messages and mails) regarding the need of mp3(Audio format) files of these sampradaaya haadugalu

I was constantly searching for mp3 audio online. And I am happy to tell you finally, With the grace of Hari Vayu Gurugalu, i found a link where you can find Sampradaya haadugalu for various festivals categorized under month wise. Please click the following link and download the required Mp3s.

Sampradaaya Haadugalu(Mp3)

also check my posts on Rangoli which is useful for festivals and every day pooja


  1. Enne acchuva haadu
  2. Bhooma haadu
  3. Hoova mudiva haadu
  4. Huva mudisuva haadu(2)
  5. Harshina kuttuva haadu/Turmeric grinding ceremony song
  6. Udi Thumbuva haadu
  7. Dhristi parihara haadu
  8. Biksha (Upanayana haadu)Kavala Thayi kavala amma
  9. Seemantha/Bale torsana haadu(Baby shower)
  10. Hasege kereyuva haadu
  11. Rukmini devi Gowriyannu poojisida haadu
  12. Traditional gowri pooje haadu
  13. Aarathi songs
  14. Mangala haadugalu
  15. Jo Jo / Laali haadugalu
  16. Neivedhya haadugalu
  17. ವೆಂಕಟೇಶನ ಉರುಟಣೆಯ ಹಾಡು / Venkatesana Urutani Haadu

Pooja/Kathe haadugalu

  1. Chaithra maasa gowri tritheeya haadu
  2. Traditional arati song of Jyeshta Gouri
  3. Dhivasi gowri haadu/Bheemana amavasya haadu
  4. Mangala gowri Haadu
  5. Budha brahaspathi haadu
  6. Maagha maasa gowri haadu
  7. sankara gandana haadu
  8. Ele Ashtami Gowri haadu
  9. Sravana sampathu sukravara haadu
  10. Sravana Shanivaara haadu
  11. Sravana aidu sukravara haadu
  12. Naaga panchami haadu
  13. Ananta vrata suladhi
  14. Jyeshta Gowri haadu
  15. Vigneshwara kathe
  16. Varalakshmi Aarathi haadu
  17. Dhanur maasadalli pandavaru sri krishnannu karedaddu(Invitation)

Year around:

dasara padagalu · Harapanahalli bheemavva · MADHWA

dEvEndrana sose dEvakki tanayaLu

ದೇವೇಂದ್ರನ ಸೊಸೆ ದೇವಕ್ಕಿ ತನಯಳು
ಏನೇನು ಬಯಸಿದಳು ||pa||

ಒಂದು ತಿಂಗಳು ತುಂಬಲು ಸುಭದ್ರ
ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು
ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ-
ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು||1||

ಎರಡು ತಿಂಗಳು ತುಂಬಲು ಸುಭದ್ರ
ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು
ಪರಿವೇಶನ ತಂಗಿ ಹರಡಿ ಕಂಕಣ ಹಸ್ತ
ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು ||2||

ಮೂರುತಿಂಗಳು ತುಂಬಲು ಸುಭದ್ರ
ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು
ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ
ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು ||3||

ನಾಲ್ಕು ತಿಂಗಳು ತುಂಬಲು ಸುಭದ್ರ
ಆಕಳ ತುಪ್ಪ ಅನಾರಸ ಬಯಸಿದಳು
ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು
ಏಕಾವಳಿಯ ಸರ ಹಾಕೇನೆಂಬುವಳು ||4||

ಐದು ತಿಂಗಳು ತುಂಬಲು ಸುಭದ್ರ
ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು
ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು
ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು ||5||

ಆರು ತಿಂಗಳು ತುಂಬಲು ಸುಭದ್ರ
ಚೌರಿ ರಾಗಟೆ ಜಡೆಬಂಗಾರ ಬಯಸಿದಳು
ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು
ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು ||6||

ಏಳು ತಿಂಗಳು ತುಂಬಲು ಸುಭದ್ರ
ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು
ಕಾಳಿಮರ್ದನನ ತಂಗಿ ಕಮಲ ಕ್ಯಾದಿಗೆ ಮುಡಿಯ
ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು||7||

ಎಂಟು ತಿಂಗಳು ತುಂಬಲು ಸುಭದ್ರ
ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು
ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು
ಸೀಮಂತದುತ್ಸವ ಮಾಡೆ ಸುಖದಿಂದಿರುವಳು ||8||

ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ
ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು
ಮಂಗಳಮಹಿಮ ಭೀಮೇಶಕೃಷ್ಣನ ತಂಗಿ
ಕಂದ ಅಭಿಮನ್ಯು ಎಂಬುವನ ಪಡೆದಳು ||9||
dEvEndrana sose dEvakki tanayaLu
EnEnu bayasidaLu ||pa||

ondu tingaLu tuMbalu suBadra
anjUri drAkShi kittaLe jaMbunEraLu bayasidaLu
aMbujAkShana tangi paijaNa ruLi gejje kA-
luMgura kirupilya iTTEneMbuvaLu||1||

eraDu tingaLu tuMbalu suBadra
paraDi mAlati saNNa SyAvige bayasidaLu
parivESana tangi haraDi kankaNa hasta
kaDaga hiMbaLe dvArya iTTEneMbuvaLu ||2||

mUrutingaLu tuMbalu suBadra
vAlya paccada candra bALyava bayasidaLu
mAranayyana tangi tOLigvajrada vanki
mANikyadvoDyANa iTTEneMbuvaLu ||3||

nAlku tingaLu tuMbalu suBadra
AkaLa tuppa anArasa bayasidaLu
SrIkAntana tangi tUkada sarigeyiTTu
EkAvaLiya sara hAkEneMbuvaLu ||4||

aidu tingaLu tuMbalu suBadra
kenemosarhAkida butti citrAnnava bayasidaLu
asurAntakana tangi hasurupattalanuTTu
kusuma malligemoggu muDidEneMbuvaLu ||5||

Aru tingaLu tuMbalu suBadra
cauri rAgaTe jaDebangAra bayasidaLu
mAranayyana tangi nAgamurigeniTTu
jAji malligemoggu muDidEneMbuvaLu ||6||

ELu tingaLu tuMbalu suBadra
kShIra manDige bundya PENiya bayasidaLu
kALimardanana tangi kamala kyAdige muDiya
niMbAvaLi pattala niriduTTEneMbuvaLu||7||

enTu tingaLu tuMbalu suBadra
cintAku padaka kaTTANiya bayasidaLu
vaikunThapatiya tangi inTar pappuLinuTTu
sImantadutsava mADe suKadindiruvaLu ||8||

oMbattu tingaLu tuMbalu suBadrege
bangArad~horasinallirisi Arati mADalu
mangaLamahima BImESakRuShNana tangi
kanda aBimanyu eMbuvana paDedaLu ||9||

dasara padagalu · Harapanahalli bheemavva · MADHWA

Udiya tumbire namma

ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ-
ಳ್ವುಡಿಯ ತುಂಬಿರೆ ನಮ್ಮ ||pa||

ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||1||

ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು||2||

ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ
ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ||3||

uDiya tuMbire namma uDurAjamuKige
uDiya tuMbire namma
kaDale kobbari baTTaloLu bALePalaga-
LvuDiya tuMbire namma ||pa||

jaMbunErala gone jAMbUPalagaLu
niMbe dALiMbra auduMbra PalagaLu ||1||

uttatti drAkShi kittaLe sItAPalavu
akki aMjUra uttatti PalagaLu||2||

SrEShTha BImESa kRuShNana paTTadarasi
g~hacci kuMkuma vILya koTTu rukmiNige ||3||

dasara padagalu · Harapanahalli bheemavva · MADHWA

hUva muDisida svAmi

ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ
ಭಾಮೇರಿಬ್ಬರಿಗೆ ರಂಗಯ್ಯ ||pa||

ಬಂದು ರುಕ್ಮಿಣಿ ಭಾಮೇರಿಂದತಿ
ಸಂಭ್ರಮ್ಮದಿಂದ ರಂಗಯ್ಯ
ಕುಂದಣದ ಹಸೆಮ್ಯಾಲೆ ಕುಳಿತಿರೆ
ಚೆಂದದಲಿ ನಗುತ
ಚಂದ್ರವದನ ತಾ ಚತುರ್ಭುಜದಿಂದಲಿ
ಅಂಗನೆಯರ ಆಲಿಂಗನೆ ಮಾಡುತ ||1||

ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ
ನೋಡಿ ನಗುತ ರಂಗಯ್ಯ
ಸಾರಸಮುಖಿ ಸಹಿತ ಸರಸ-
ವಾಡುತ ನಾರದರು
ನಮ್ಮಿಬ್ಬರ ಕದನಕೆ ಹೂಡಿದರೆ
ಹುಚ್ಚಾದಿರೆಂದೆನುತ ||2||

ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ
ಕಲ್ಲಾ ್ಹರದ ಕಮಲ ರಂಗಯ್ಯ
ಒಳ್ಳೆ ತಾವರೆ ಅರಳು ಮೊಗ್ಗುಗಳು
ಝಲ್ಲೆ ಕುಸುಮಗಳು
ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ-
ಮೇಶ ಕೃಷ್ಣ ರುಕ್ಮಿಣಿಗೆ ||3||

hUva muDisida svAmi rukmiNi
BAmEribbarige rangayya ||pa||

bandu rukmiNi BAmErindati
saMBrammadinda rangayya
kundaNada hasemyAle kuLitire
cendadali naguta
chanravadana tA caturBujadindali
anganeyara Alingane mADuta ||1||

hUva muDisuta vArijAkShEra vArenOTadi
nODi naguta rangayya
sArasamuKi sahita sarasa-
vADuta nAradaru
nammibbara kadanake hUDidare
huccAdirendenuta ||2||

malle malligemoggu SAvantige
kallA;harada kamala rangayya
oLLe tAvare araLu moggugaLu
Jalle kusumagaLu
ella tanakaiyalli piDidu celva BI-
mESa kRuShNa rukmiNige ||3||

dasara padagalu · Gowri · MADHWA · Vijaya dasaru

naari gowri kowmaari

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ
ವಾರಿಯನು ಧರಿಸುವ ನಾರಿ ಗೌರಿ ಕೌಮಾರಿ||pa||

ಬಾಣ ಕುಂಭನೆಂಬೊ ದಾನವರೀರ್ವರು
ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ
ಕಮಲ ಗರ್ಭನವೊಲಿಸಿ ವೇಗದಲಿ
ಏನು ವರ ಬೇಡೆನಲು ನಗುತಲವನು ಸುರಿದನು ||1||

ಜಗಕ್ಕೊಡಿಯನಾವಾತ ಆತನ ತನು
ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ
ಬಗಿಯದಂತೆ ವರವನು ಪಾಲಿಸೆನಲು
ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2||

ಚತುರ್ದಶ ಲೋಕವನು ಗೆದ್ದು ತ್ರಿದಶರಾ
ಮಿತಿಯಿಲ್ಲದೆ ಮಾನಭಂಗ ಮಾಡಿ
ಪತಿತರು ಈ ತೆರದಲಿರುತಿರಲು ವಿಬುಧರು
ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3||

ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ
ಖಳ ಕಂಸನೆಂಬುವನು ಪುಟ್ಟಿ ತನ್ನ
ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು
ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ ||4||

ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ
ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ
ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು
ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ||5||

ಇಂತು ಪೇಳಲಿ ಅಜನು ಸಂತೋಷದಿರಲಿತ್ತ
ದಂತಿ ಗಮನಳು ಉದುಭವಿಸಿ ಬಂದು
ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ
ಅಂತಕರಾಗಿದ್ದ ಖೂಳರ ಸದೆ ಬಡಿದು ||6||

ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು
ಪರಮ ಮುನಿ ಅಗಸ್ತ್ಯ ಪೂಜಿಸಿದನು
ಶರರಾಜ ಬಂದು ಮದುವೆನೈದಲು
ಪರಮೇಷ್ಠಿ ಹರನ ಸಹಿತಲಿ ನಡೆತಂದಾ ||7||

ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ
ಮರಳೆನಿಂದರು ವರ ಸುಧೇಂದ್ರವೆಂಬೊ
ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ
ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ||8||

ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ
ಬಂದು ನವತೀರ್ಥದಲಿ ಯಾತ್ರೆ ಜನರು
ಮಿಂದಾಗಲೆ ಮನದಂತೆ ಭಕುತಿಯನಿತ್ತು
ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ||9||
nAri gauri kaumAri vArijAkShana caraNa
vAriyanu dharisuva nAri gauri kaumAri||pa||

bANa kuMBaneMbo dAnavarIrvaru
kShONiyoLu bandalli tapava mADi
kamala garBanavolisi vEgadali
Enu vara bEDenalu nagutalavanu suridanu ||1||

jagakkoDiyanAvAta Atana tanu
saMbandhigaLemma kollalli uLidavara
bagiyadante varavanu pAlisenalu
naguta lOkESa duruLarige sale ittA ||2||

caturdaSa lOkavanu geddu tridaSarA
mitiyillade mAnaBnga mADi
patitaru I teradalirutiralu vibudharu
catura muKage moreyiDalu harige binnaisi||3||

tiLidu kunDalanolidu dvApArAntyadali
KaLa kaMsaneMbuvanu puTTi tanna
baladali tanna anujeyara SareyuyiTTu
baLalisuvavaLigolidu avatAra mALpa yudakuladali ||4||

enna kUDalI durgi janisi baralu ava
Lanna kolluveneMdu kaMsa muniye
tanna SaktiyindA gaganakke pAri baralu
Ganna GAtukaranna maDuhi biDuvaLenalu ||5||

intu pELali ajanu santOShadiralitta
danti gamanaLu uduBavisi bandu
pinte mADida tapasu siddhisitu enagenuta
antakarAgidda KULara sade baDidu ||6||

harikRupeyiMda dakShiNa Saradhiyali nillalu
parama muni agastya pUjisidanu
SararAja baMdu maduvenaidalu
paramEShThi harana sahitali naDetandA ||7||

baralAkShaNadalli kaliyuga prAputavAge
maraLeniMdaru vara sudhEndraveMbo
puradalli pUjegoLLutalliralu itta sun
dara kanyAmaNiyAgi daSadiSige poLeyutire||8||

andAraByanAgi kanyAkumAri enisi
bandu navatIrthadali yAtre janaru
mindAgale manadante Bakutiyanittu
pondisuve vijayaviThThalana pAdadalli||9||

dasara padagalu · Gowri · MADHWA

Parvathy daksha kumaari ninna

ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||
ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||
ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||pa||

ದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ ||
ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||
ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ ||1||

ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನಸೊಸೆ | ಯಮ್ಮಾ |
ನಾಡೆಕಂಡು ಭಜಿಪೆನಿತ್ಯನಿಮ್ಮ |ಪಾದಪುಂಡರೀಕದ್ವಯವಮ್ಮಾ ||ಆಹಾ||
ಉಂಡು ವಿಷವ ನಿನ್ನಗಂಡಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ ||2||

ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ |
ಯಲ್ಲಿಭಾವನೆ ಕೊಡೆಪ್ರತಿಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||
ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ ||3||

ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರಕರಪಿಡಿವೆ |
ದೋಷಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||
ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ ||4||

ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |
ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||
ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯಘಾಸಿಮಾಡುವನನ್ನು||5||
pArvati dakShakumAri ninna | sArve santata kujanArI ||AhA||
dUrvAsanardhAngi sarvajeÕ yannaya ||
cArvAka mati kILi tOrvadu supathava ||pa||

durge BavAni rudrANi gauri | svargajinArAdhya-mAni ||
sEredurguNadavara suj~jAni | Baktavarga pOShaka Suka-vANI ||AhA||
nirguNarAduttamargevoliva apa |vargada nALe nararge maNisadire ||1||

canDi kAtyAyini ummA nAlku | manDeyavanasose | yammA |
nADekanDu Bajipenityanimma |pAdapunDarIkadvayavammA ||AhA||
unDu viShava ninnaganDabaLali kai |konDauShadha tanDa tanDadalenagIye ||2||

pAvakanoLu pokka pativrate | yAvAga mAnisatkathe |
yalliBAvane koDepratiprati | jAva jAvake ShaNmuKamAte ||AhA||
kOvidaroDati kELAvAga vairAgya |vIvadu durApEkShe nAvollenendendU ||3||

bEDidaBIShTava koDuve | daya mADi BaktarakarapiDive |
dOShakADuLiyadante suDuve | nina | gIDe mahadBayakaDive ||AhA||
roDhISa Sivanendu ADisadiru buddhi |gEDi dAnavarante nIDu SrIhari sEve ||4||

mESa prANESa viThThalane | jagadISaneMbuva divya-j~jAne | koTTu |
pOShipudenna sujANe | nInudAsise nAnArakANe ||AhA||
ISe panca mahAdOShi biDade nityA |I SarIradoLihyaGAsimADuvanannu||5||