dasaavatharam · dasara padagalu · kolu haadu · MADHWA · prasanna venkata dasaru

Kolu kamana geddha(Prasanna venkata dasaru)

ಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದ
ಕೋಲು ಆನಂದಮುನಿ ಪಿಡಿದಿಹ ಕೋಲೆ ||pa||

ತಮನೆಂಬುವನ ಕೊಂದು ಕಮಲಜನಿಗೆ ವೇದ
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ||1||

ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆ
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ||2||

ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆ
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾನoಗ ಶ್ರೀವರಾಹ ಮನೆದೈವ ಕೋಲೆ ||3||

ಒಂದೆ ಮನದೊಳಂದು ಕಂದ ನೆನೆಯಲಾಗ
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ||4||

ಎದುರಿಲ್ಲವೆನಗೆಂದು ಮದವೇರಿದವನ ತ್ರಿ
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ||5||

ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತ
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ||6||

ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿ
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ||7||

ಗೋಕುಲದಲಿ ಬೆಳೆದು ಪೋಕ ದನುಜರ ಅ
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ||8||

ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿ
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ||9||

ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆ
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ||10||

ಹತ್ತವತಾರದಿ ಭಕ್ತಜನರ ಹೊರೆದ
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ||11||

kOlu kAmana gedda kOlu mAygaLanodda
kOlu Anandamuni piDidiha kOle ||pa||

tamaneMbuvana kondu kamalajanige vEda
kramadinda koTTu jagavanu kOle
kramadinda koTTu jagavanu rakShisida
vimala SrI matsya manedaiva kOle ||1||

surapana viBavella SaradhIli muLugire
girigahi sutti kaDeyalu kOle
girigahi sutti kaDeyalu naga jAre
dharisida SrI kUrma manedaiva kOle ||2||

hongaNNinavanu BUvengaLaneLedoyye
mangaLamahima dayadiMda kOle
mangaLa mahima dayadinda negahidya
jnangaa SrIvarAha manedaiva kOle ||3||

onde manadoLandu kanda neneyalAga
bandavanayyannodedanu kOle
bandavanayyannodedanu animitta
bandhu narahariyu manedaiva kOle ||4||

edurillavenagendu madavEridavana tri
pada BUmi bEDi gelidanu kOle
pada BUmi bEDi gelidA trivikrama
mudada vAmana manedaiva kOle ||5||

kujanaraLidu BAgya sujanarigoliditta
nija tAtanAj~ja salahida kOle
nija tAtanAj~ja salahida SuBaguNa
dvijarAma namma manedaiva kOle ||6||

kausalye garBadi janisida kRupeyalli
kauSika kratuva kAydanu kOle
kauSika kratuva kAyda rAvaNAMtaka
SrI sItArAma manedaiva kOle ||7||

gOkuladali beLedu pOka danujara a
nEka pariyali sadedanu kOle a
nEka pariyali sadeda pAMDavapAla
SrIkRuShNa namma manedaiva kOle ||8||

mithyAvAdigaLige mithyavane kalisi
satyavAdigaLa poredanu kOle
satyavAdigaLa poredanu ajavaMdya
karta bauddhanu manedaiva kOle ||9||

svAhA svadhAkAravu mahiyoLilladAge
suhayavEri kaliyanu kOle
suhayavEri kaliyaneLedu konda
mahAkalki namma manedaiva kOle ||10||

hattavatAradi Baktajanara horeda
mattAvakAladi rakShipa kOle
mattAva kAladi rakShipa prasanvenkaTa
kartana naMbi suKiyAde kOle ||11||

dasaavatharam · dasara padagalu · kolu haadu · Vadirajaru

Kolu kolenna kole(Vadirajaru)

ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲೆ||pa||

ತಮನ ಕೊಂದನ ಕೋಲೆ ಕಮಠನಾದನ ಕೋಲೆ
ಕ್ಷಮೆಯನೆತ್ತಿದನ ಕೋಲೆ ಕೋಲು
ಕಮನೀಯ ನರಸಿಂಹರೂಪನಾದನ ಕೋಲೆ
ಸುಮುಖ ವಾಮನನ ಕೋಲೆ ||1||

ಪರಶುರಾಮನ ಕೋಲೆ ರಘುಕುಲದಲುದಿಸಿ ದಶ-
ಶಿರನ ಕೊಂದವನ ಕೋಲೆ ಕೋಲು
ಸಿರಿಕೃಷúರಾಯನ ಸುಕೋಲೆ ಬುದ್ಧನ ಕೋಲೆ
ತುರಗವೇರಿದನ ಕೋಲೆ ||2||

ವಾದಿರಾಜನಿಗೊಲಿದು ಸೋದೆಪುರದಿ ನಿಂದು
ಮೋದಿ ತ್ರಿವಿಕ್ರಮನ ಕೋಲೆ ಕೋಲು
ಕಾದಿ ಖಳರನು ಕೊಂದ ವೇದಗಳ ತಂದ ವಿ
ನೋದಿ ಹಯವದನ ಕೋಲೆ ||3||

kOlu kOlenna kOlu
kOlu kOlenna kOlu
kOlu kOlenna kOle|| pa||

tamana kondana kOle kamaThanAdana kOle
kShameyanettidana kOle kOlu
kamanIya narasiMharUpanAdana kOle
sumuKa vAmanana kOle ||1||

paraSurAmana kOle raGukuladaludisi daSa –
Sirana kondavana kOle kOlu
sirikRuSha úrAyana sukOle buddhana kOle
turagavEridana kOle ||2||

vAdirAjanigolidu sOdepuradi nindu
mOdi trivikramana kOle kOlu
kAdi KaLaranu konda vEdagaLa tanda vi
nOdi hayavadana kOle ||3||

dasaavatharam · dasara padagalu · MADHWA · mangalam · purandara dasaru

mangalaM jayamangalaM (carisuva jaladali)

ಮಂಗಳಂ ಜಯಮಂಗಳಂ ||ಪ||

ಚರಿಸುವ ಜಲದಲಿ ಮತ್ಸ್ಯವತಾರನಿಗೆ
ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಹವತಾರನಿಗೆ
ತರಳನ ಕಾಯ್ದ ನರಸಿಂಹಗೆ ||1||

ಭೂಮಿಯ ದಾನವ ಬೇಡಿದಗೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯರಸ ಗೋಪಾಲಕೃಷ್ಣಗೆ ||2||

ಬತ್ತಲೆ ನಿಂತಿದ್ದ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತು ಶ್ರೀಪುರಂದರವಿಠಲನಿಗೆ ||3||

mangalaM jayamangalaM ||pa||

carisuva jaladali matsyavatAranige
giriya bennili potta kUrmanige
dhareyanuddharisida varahavatAranige
taraLana kAyda narasiMhage ||1||

BUmiya dAnava bEDidage
A mahA kShatriyara gelidavage
rAmachandraneMba svAmige satya-
BAmeyarasa gOpAlakRuShNage ||2||

battale nintidda bauddhanige
uttama hayavErida kalkige
hattavatAradi Baktara salahuva
kartu SrIpurandaraviThalanige ||3||

dashavatharam · MADHWA · Vadirajaru

Dashavatara sthuthi

ಓಂ ಮತ್ಸ್ಯಾಯ ನಮಃ
ಪ್ರೋಷ್ಠೀಶ ವಿಗ್ರಹ ಸುನಿಷ್ಠೀವನೋದ್ಧೃತವಿಶಿಷ್ಟಾಂಬುಚಾರಿಜಲಧೇ ಕೋಷ್ಠಾಂತರಾಹಿತವಿಚೇಷ್ಟಾಗಮೌಘಪರಮೇಷ್ಠೀಡಿತ ತ್ತ್ವಮವ ಮಾಮ್ |
ಪ್ರೇಷ್ಠಾರ್ಕಸೂನುಮನುಚೇಷ್ಟಾರ್ಥ ಮಾತ್ಮವಿದತೀಷ್ಟೋ ಯುಗಾಂತಸಮಯೇ ಸ್ಥೇಷ್ಠಾತ್ಮಶೃಂಗಧೃತಕಾಷ್ಠಾಂಬುವಾಹನ ವರಾಷ್ಟಾಪದಪ್ರಭತನೋ    || 1 ||

ಓಂ ಶ್ರೀ ಹಯಗ್ರೀವಾಯ ನಮಃ
ಖಂಡೀಭವದ್ಬಹುಲಡಿಂಡೀರಜೃಂಭಣ ಸುಚಂಡೀ ಕೃತೋ ದಧಿ ಮಹಾ ಕಾಂಡಾತಿ ಚಿತ್ರ ಗತಿ ಶೌಂಡಾದ್ಯ ಹೈಮರದ ಭಾಂಡಾ ಪ್ರಮೇಯ ಚರಿತ |
ಚಂಡಾಶ್ವಕಂಠಮದ ಶುಂಡಾಲ ದುರ್ಹೃದಯ ಗಂಡಾ ಭಿಖಂಡಾಕರ ದೋಶ್ಚಂಡಾ ಮರೇಶಹಯ ತುಂಡಾಕೃತೇ ದೃಶಮ ಖಂಡಾ ಮಲಂ ಪ್ರದಿಶ ಮೇ || 2 ||

ಓಂ ಕೂರ್ಮಾಯ ನಮಃ
ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮ ಮಂದರ ಗಿರೇ ಧರ್ಮಾವಲಂಬನ ಸುಧರ್ಮಾ ಸದಾಕಲಿತ ಶರ್ಮಾ ಸುಧಾವಿತರಣಾತ್ |
ದುರ್ಮಾನ ರಾಹುಮುಖ ದುರ್ಮಾಯಿ ದಾನವಸುಮರ್ಮಾ ಭಿಭೇದನ ಪಟೋಘರ್ಮಾರ್ಕ ಕಾಂತಿ ವರ ವರ್ಮಾ ಭವಾನ್ ಭುವನ ನಿರ್ಮಾಣ ಧೂತ ವಿಕೃತಿಃ || 3 ||

ಓಂ ಧನ್ವಂತರೇ ನಮಃ

ಧನ್ವಂತರೇಂಗರುಚಿ ಧನ್ವಂತರೇ„ರಿತರು ಧನ್ವಂಸ್ತರೀಭವಸುಧಾಭಾನ್ವಂತರಾವಸಥ ಮನ್ವಂತರಾಧಿಕೃತ ತನ್ವಂತರೌಷಧನಿಧೇ |
ಧನ್ವಂತರಂಗಶುಗುಧನ್ವಂತಮಾಜಿಶುವಿ ತನ್ವನ್ಮಮಾಬ್ಧಿ ತನಯಾಸೂನ್ವಂತಕಾತ್ಮಹೃದತನ್ವಂತರಾವಯವ ತನ್ವಂತರಾರ್ತಿಜಲಧೌ || 4 ||

ಓಂ ಶ್ರೀ ನಾರಾಯಣಾಯೈ ನಮಃ
ಯಾಕ್ಷೀರವಾರ್ಧಿಮದನಾಕ್ಷೀಣದರ್ಪದಿತಿಜಾಕ್ಷೋಭಿತಾಮರಗಣಾ ಪೇಕ್ಷಾಪ್ತಯೇ„ಜನಿವಲ­ಕ್ಷಾಂಶುಬಿಂಬಜಿದತೀಕ್ಷ್ಣಾ­ಕಾವೃತಮುಖೀ |
ಸೂಕ್ಷಮಾವ­ಗ್ನವಸನಾ„„ಕ್ಷೇಪಕೃತ್ಕುಚ ಕಟಾಕ್ಷಾಕ್ಷಮೀಕೃತಮನೋ ದೀಕ್ಷಾಸುರಾಹೃತಸುಧಾ„ಕ್ಷಾಣಿನೋ„„ವತು ಸುರೂಕ್ಷೇಕ್ಷಣಾದ್ಧರಿತನುಃ || 5 ||

ಓಂ ಶ್ರೀ ನಾರಾಯಣಾಯೈ ನಮಃ
ಶಿಕ್ಷಾದಿಯುಜ್ಞಗಮ ದೀಕ್ಷಾಸುಲಕ್ಷಣ ಪರೀಕ್ಷಾಕ್ಷಮಾವಿಧಿಸತೀ ದಾಕ್ಷಾಯಣೀ ಕ್ಷಮತಿ ಸಾಕ್ಷಾದ್ರಮಾಪಿನಯ ದಾಕ್ಷೇಪವೀಕ್ಷಣವಿಧೌ    |
ಪ್ರೇಕ್ಷಾಕ್ಷಿಲೋಭಕರಲಾಕ್ಷಾರ ಸೋಕ್ಷಿ ತಪ ದಾಕ್ಷೇಪಲಕ್ಷಿತಧರಾ ಸಾ„ಕ್ಷಾರಿತಾತ್ಮತನು ಭೂಕ್ಷಾರಕಾರಿನಿಟಿ ಲÁಕ್ಷಾ„ಕ್ಷಮಾನವತು ನಃ    || 6 ||

ಓಂ ಶ್ರೀ ವರಾಹಾಯ ನಮಃ
ನೀಲಾಂಬುದಾಭಶುಭ ಶೀಲಾದ್ರಿದೇಹಧರ ಖೇಲಾಹೃತೋದಧಿಧುನೀ ಶೈಲಾದಿಯುಕ್ತ ನಿಖಿಲೇಲಾ ಕಟಾದ್ಯಸುರ ತೂಲಾಟವೀದಹನ ತೇ    |
ಕೋಲಾಕೃತೇ ಜಲಧಿ ಕಾಲಾಚಯಾವಯವ ನೀಲಾಬ್ಜದಂಷ್ಟ್ರ ಧರಿಣೀ ಲೀಲಾಸ್ಪದೋರುತಲಮೂಲಾಶಿಯೋಗಿವರಜಾಲಾಭಿವಂದಿತ ನಮಃ || 7 ||

ಓಂ ಶ್ರೀ ನರಸಿಂಹಾಯ ನಮಃ
ದಂಭೋಲಿತೀಕ್ಷ್ಣನಖ ಸಂಭೇದಿತೇಂದ್ರರಿಪು ಕುಂಭೀಂದ್ರ ಪಾಹಿ ಕೃಪಯಾ ಸ್ತಂಭಾರ್ಭ ಕಾಸಹನಡಿಂಭಾಯ ದತ್ತವರ ಗಂಭೀರ ನಾದ ನೃಹರೇ |
ಅಂಭೋದಿಜಾನುಸರಣಾಂಭೋಜಭೂಪವನ ಕುಂಭೀನ ಸೇಶ ಖಗರಾಟ್ ಕುಂಭೀಂದ್ರ ಕೃತ್ತಿಧರ ಜಂಭಾರಿ ಷಣ್ಮುಖ ಮುಖಾಂಭೋರು ಹಾಭಿ ನುತ ಮಾಂ || 8 ||
ಓಂ ಶ್ರೀ ವಾಮನಾಯ ನಮಃ
ಪಿಂಗಾಕ್ಷ ವಿಕ್ರಮ ತುರಂಗಾದಿ ಸೈನ್ಯ ಚತುರಂಗಾ ವಲಿಪ್ತ ದನುಜಾ ಸಾಂಗಾ ಧ್ವರಸ್ಥ ಬಲಿ ಸಾಂಗಾವಪಾತ ಹೃಷಿತಾಂಗಾ ಮರಾಲಿನುತ ತೇ |
ಶೃಂಗಾರ ಪಾದನಖ ತುಂಗಾಗ್ರಭಿನ್ನ ಕನ ಕಾಂಗಾಂಡಪಾತಿ ತಟಿನೀ ತುಂಗಾತಿ ಮಂಗಲ ತರಂಗಾ ಭಿಭೂತ ಭಜ ಕಾಂಗಾಘ ವಾಮನ ನಮಃ || 9 ||

ಓಂ ಶ್ರೀ ವಾಮನಾಯ ನಮಃ
ಧ್ಯಾನಾರ್ಹ ವಾಮನ ತನೋನಾಥ ಪಾಹಿ ಯಜಮಾನಾ ಸುರೇಶವಸುಧಾ ದಾನಾಯ ಯಾಚನಿಕ ಲೀನಾರ್ಥ ವಾಗ್ವಶಿತ ನಾನಾಸದಸ್ಯ ದನುಜ |
ಮೀನಾಂಕ ನಿರ್ಮಲ ನಿಶಾನಾಥ ಕೋಟಿಲ ಸಮಾನಾತ್ಮ ಮೌಂಜಿಗುಣಕೌ ಪೀನಾಚ್ಛ ಸೂತ್ರಪದ ಯಾನಾತ ಪತ್ರಕರ ಕಾನಮ್ಯದಂಡವರಭೃತ್ || 10 ||

ಓಂ ಶ್ರೀ ಪರಶುರಾಮಾಯ ನಮಃ
ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತಖಲ ವರ್ಯಾವನೀಶ್ವರ ಮಹಾ ಶೌರ್ಯಾಭಿಭೂತಕೃತ ವೀರ್ಯಾತ್ಮಜಾತಭುಜ ವೀರ್ಯಾವಲೇಪನಿಕರ |
ಭಾರ್ಯಾಪರಾಧಕುಪಿತಾರ್ಯಾಜ್ಞಯಾಗಲಿತನಾರ್ಯಾತ್ಮ ಸೂಗಲ ತರೋ ಕಾರ್ಯಾ„ಪರಾಧಮವಿಚಾರ್ಯಾರ್ಯ ಮೌಘಜಯಿ ವೀರ್ಯಾಮಿತಾ  ಮಯಿ ದಯಾ || 11 ||

ಓಂ ಶ್ರೀ ರಾಮಾಯ ನಮಃ
ಶ್ರೀರಾಮಲಕ್ಷ್ಮಣಶುಕಾರಾಮ ಭೂರವತುಗೌರಾಮಲಾಮಿತಮಹೋ ಹಾರಾಮರಸ್ತುತ ಯಶೋರಾಮಕಾಂತಿಸುತ ನೋರಾಮಲಬ್ಧಕಲಹ     |
ಸ್ವಾರಾಮವರ್ಯರಿಪು ವೀರಾಮಯಾರ್ಧಿಕರ ಚೀರಾಮಲಾವೃತಕಟೇ ಸ್ವಾರಾಮ ದರ್ಶನಜಮಾರಾಮಯಾಗತಸುಘೋರಾಮನೋರಥಹರ || 12 ||

ಓಂ ಶ್ರೀ ರಾಮಾಯ ನಮಃ
ಶ್ರೀಕೇಶವಪ್ರದಿಶನಾಕೇಶ ಜಾತಕಪಿಲೋಕೇಶ ಭಗ್ನರವಿಭೂಸ್ತೋಕೇತರಾರ್ತಿಹರಣಾಕೇವಲಾರ್ತಸುಖಧೀಕೇಕಿಕಾಲಜಲದ     |
ಸಾಕೇತನಾಥವರಪಾಕೇರಮುಖ್ಯಸುತ ಕೋಕೇನ ಭಕ್ತಿಮತುಲಾಂ ರಾಕೇಂದು ಬಿಂಬಮುಖ ಕಾಕೇಕ್ಷಣಾಪಹ ಹೃಷೀಕೇಲಿÀ ತೇಂ„ಘ್ರಿಕಮಲÉೀ || 13 ||

ಓಂ ಶ್ರೀ ರಾಮಾಯ ನಮಃ
ರಾಮೇನೃಣಾಂ ಹೃದಭಿರಾಮೇನರಾಶಿಕುಲ ಭೀಮೇಮನೋದ್ಯರಮತಾಂ ಗೋಮೇದಿನೀಜಯಿತಪೋ„ಮೇಯಗಾಧಿಸುತ ಕಾಮೇನಿವಿಷ್ಟ ಮನಸೀ |
ಶ್ಯಾಮೇ ಸದಾ ತ್ವಯಿಜಿತಾಮೇಯ ತಾಪಸಜ ರಾಮೇ ಗತಾಧಿಕಸಮೇ ಭೀಮೇಶಚಾಪದಲನಾಮೇಯಶೌರ್ಯಜಿತ ವಾಮೇ ಕ್ಷಣೇ ವಿಜಯಿನೀ     || 14 ||

ಓಂ ಶ್ರೀ ಸೀತಾಸ್ವರೂಪಿಣೈ ಶ್ರೀಯೈ ನಮಃ
ಕಾಂತಾರಗೇಹಖಲ ಕಾಂತಾರಟದ್ವದನ ಕಾಂತಾಲಕಾಂತಕಶರಂ ಕಾಂತಾರ„„ಯಾ„ಂಬುಜನಿ ಕಾಂತಾನ್ವವಾಯವಿಧು ಕಾಂತಾಶ್ಮಭಾದಿಪಹರೇ |
ಕಾಂತಾಲಿಲೋಲದಲ ಕಾಂತಾಭಿಶೋಭಿತಿಲ ಕಾಂತಾಭವಂತಮನುಸಾ ಕಾಂತಾನುಯಾನಜಿತ ಕಾಂತಾರದುರ್ಗಕಟ ಕಾಂತಾರಮಾತ್ವವತು ಮಾಂ || 15 ||

ಓಂ ಶ್ರೀ ರಾಮಾಯ ನಮಃ
ದಾಂತಂ ದಶಾನನ ಸುತಾಂತಂ ಧರಾಮಧಿವಸಂತಂ ಪ್ರಚಂಡ ತಪಸಾ ಕ್ಲಾಂತಂ ಸಮೇತ್ಯ ವಿಪಿನಾಂತಂ ತ್ವವಾಪ ಯಮನಂತಂ ತಪಸ್ವಿ ಪಟಲಮ್|
ಯಾಂತಂ ಭವಾರತಿ ಭಯಾಂತಂ ಮಮಾಶು ಭಗವಂತಂ ಭರೇಣ ಭಜತಾತ್ ಸ್ವಾಂತಂ ಸವಾರಿ ದನುಜಾಂತಂ ಧರಾಧರನಿಶಾಂತಂ ಸ ತಾಪಸವರಮ್    || 16 ||

ಓಂ ಶ್ರೀ ರಾಮಾಯ ನಮಃ
ಶಂಪಾಭಚಾಪಲವ ಕಂಪಾಸ್ತ ಶತೃಬಲ ಸಂಪಾದಿತಾಮಿತಯಶಾಃ ಶಂ ಪಾದ ತಾಮರಸ ಸಂಪಾತಿ  ನೋ„­ ಮನು ಕಂಪಾರ ಸೇನ ದಿಶಮೇ |
ಸಂಪಾತಿ ಪಕ್ಷಿ ಸಹಜಂಪಾಪ ರಾವಣ ಹತಂ ಪಾವನಂ ಯದ ಕೃಥಾ ತ್ವಾಂ ಪಾಪ ಕೂಪ ಪತಿ ತಂ ಪಾಹಿ ಮಾಂ ತದಪಿ ಪಂಪಾ ಸರಸ್ತ ಟಚರ || 17 ||

ಓಂ ಶ್ರೀ ರಾಮಾಯ ನಮಃ
ಲೊಲಾಕ್ಶ್ಯಪೇಕ್ಷಿತಸುಲೀಲಾಕುರಂಗವದ ಖೇಲಾಕುತೂಹಲ ಗತೇ ಸ್ವಾಲಾಪಭೂಮಿಜನಿಬಾಲಾಪಹಾರ್ಯನುಜ ಪಾಲಾದ್ಯಭೋ ಜಯ ಜಯ    |
ಬಾಲಾಗ್ನಿದಗ್ಧಪುರ ಶಾಲಾನಿಲಾತ್ಮಜನಿ ಫಾಲಾತ್ತಪತ್ತಲರಜೋ ನೀಲಾಂಗದಾದಿಕಪಿ ಮಾಲಾಕೃತಾಲಿಪಥ ಮೂಲಾಭ್ಯತೀತ ಜಲಧೇ || 18 ||

ಓಂ ಶ್ರೀ ರಾಮಾಯ ನಮಃ

ತೂಣೀರಕಾರ್ಮುಕಕೃಪಾಣೀಕಿಣಾಂಕಭುಜ ಪಾಣೀ ರವಿಪ್ರತಿಮಭಾಃ ಕ್ಷೋಣಿಧರಾಲಿನಿಭ ಘೋಣೀ ಮುಖಾದಿಘನವೇಣೀಸುರಕ್ಷಣಕರಃ    |
ಶೋಣಿಭವನ್ನಯನ ಕೋಣೀ ಜಿತಾಂಬುನಿಧಿ ಪಾಣೀ ರಿತಾರ್ಹಣಮಣೀ ಶ್ರೇಣೀವೃತಾಂಘ್ರಿರಿಹ ವಾಣೀಶಸೂನುವರ ವಾಣೀಸ್ತುತೋ ವಿಜಯತೇ    || 19 ||

ಓಂ ಶ್ರೀ ರಾಮಾಯ ನಮಃ
ಹುಂಕಾರಪೂರ್ವಮಥಟಂಕಾರನಾದಮತಿ ಪಂಕಾ„ವಧಾರ್ಯ ಚಲಿತಾಲಂಕಾಶಿಲೋಚ್ಚಯವಿಶಂಕಾ ಪತದ್ಭಿದುರ ಶಂಕಾಸಯಸ್ಯ ಧನುಷಃ |
ಲಂಕಾಧಿಪೋಮನುತಯಂಕಾಲರಾತ್ರಿಮಿವ ಶಂಕಾಶತಾಕುಲಧಿಯಾ ತಂಕಾಲದಂಡಶತ ಸಂಕಾಶಕಾರ್ಮುಖ ಶರಾಂಕಾನ್ವಿತಂ ಭಜ ಹರಿಂ || 20 ||

ಓಂ ಶ್ರೀ ರಾಮಾಯ ನಮಃ
ಧೀಮಾನಮೇಯತನುಧಾಮಾ„„ರ್ತಮಂಗ­ದನಾಮಾ ರಮಾಕಮ­ಭೂ ಕಾಮಾರಿಪನ್ನಗಪ ಕಾಮಾಹಿ ವೈರಿಗುರು ಸೋಮಾದಿವಂದ್ಯ ಮಹಿಮ |
ಸ್ಥೇಮಾದಿನಾಪಗತ ಸೀಮಾ„ವತಾತ್ಸಖ­ ಸಾಮಾಜ ರಾವಣರಿಪೂ ರಾಮಾಭಿದೋ ಹರಿರಭೌಮಾಕೃತಿಃ ಪ್ರತನ ಸಾಮಾದಿ ವೇದವಿಷಯಃ || 21 ||

ಓಂ ಶ್ರೀ ರಾಮಾಯ ನಮಃ
ದೋಷಾ„ತ್ಮಭೂವಲಿÀತುರಾಷಾಡತಿಕ್ರಮಜ ರೋಷಾತ್ಮಭರ್ತೃವಚಸ ಪಾಷಾಣಭೂತಮುನಿಯೋಷಾವರಾತ್ಮತನುವೇಶಾದಿದಾಯಿಚರಣಃ    |
ನೈಷಾಧಯೋಷಿಧಸುಭೇಷಾಕೃದಂಡಜನಿ ದೋಷಾಚರಾದಿ ಸುಹೃದೋ ದೋಷಾಗ್ರಜನ್ಮಮೃತಿಲಿÉೂೀಷಾಪಹೋ„ವತು ಸುದೋಷಾಂಘ್ರಿಜಾತಹನನಾತ್ || 22 ||

ಓಂ ಶ್ರೀ ಕೃಷ್ಣಾಯ ನಮಃ
ವೃಂದಾವನಸ್ಥಪಶು ವೃಂದಾವನಂ ವಿನುತ ವೃಂದಾರಕೈಕಶರಣಂ ನಂದಾತ್ಮಜಂ ನಿಹತ ನಿಂದಾ ಕೃದಾ ಸುರಜನಂದಾಮಬದ್ಧ ಜಠರಮ್    |
ವಂದಾಮಹೇ ವಯಮ ಮಂದಾವದಾತರುಚಿ ಮಂದಾಕ್ಷಕಾರಿವದನಂ ಕುಂದಾಲಿದಂತಮುತ ಕಂದಾಸಿತಪ್ರಭತನುಂದಾವರಾಕ್ಷಸಹರಮ್    || 23 ||

ಓಂ ಶ್ರೀ ಕೃಷ್ಣಾಯ ನಮಃ
ಗೋಪಾಲಕೋತ್ಸವಕೃತಾಪಾರಭಕ್ಷ್ಯರಸ ಸೂಪಾನ್ನಲೋಪಕುಪಿತಾ ಶಾಪಾಲಯಾಪಿತಲಯಾಪಾಂಬುದಾಲಿಸಲಿಲಾಪಾಯಧಾರಿತಗಿರೇ    |
ಸಾಪಾಂಗದರ್ಶನಜತಾಪಾಂಗ ರಾಗಯುತ ಗೋಪಾಂಗ ನಾಂಶುಕ ಹೃತಿ ವ್ಯಾಪಾರ ಶೌಂಡವಿವಿಧಾಪಾಯ ತಸ್ತ್ವಮವ ಮವ ಗೋಪಾರಿಜಾತಹರಣ    || 24 ||

ಓಂ ಶ್ರೀ ಕೃಷ್ಣಾಯ ನಮಃ
ಕಂಸಾದಿಕಾಸದವತಂಸಾ ವನೀಪತಿವಿಹಿಂಸಾಕೃತಾತ್ಮಜನುಷಂ ಸಂಸಾರಭೂತಮಿಹ ಸಂಸಾರಬದ್ಧಮನ ಸಂಸಾರಚಿತ್ಸುಖತನುಮ್    |
ಸಂಸಾಧಯಂತಮನಿಶಂಸಾತ್ವಿಕವ್ರಜಮಹಂಸಾದರಂ ಭತ ಭಜೇ ಹಂಸಾದಿತಾಪಸರಿರಂಸಾಸ್ಪದಂ ಪರಮಹಂಸಾದಿ ವಂದ್ಯ ಚರಣಮ್ || 25||

ಓಂ ಶ್ರೀ ಕೃಷ್ಣಾಯ ನಮಃ
ರಾಜೀವ ನೇತ್ರವಿದುರಾಜೀವಮಾಮವತು ರಾಜೀವ ಕೇತನವಶಂ ವಾಜೀಭಪತ್ತಿನೃಪರಾಜೀ ರಥಾನ್ವಿತಜ ರಾಜೀವ ಗರ್ವಶಮನ|
ವಾಜೀಶವಾಹಸಿತ ವಾಜೀಶ ದೈತ್ಯ ತನು ವಾಜೀಶ ಭೇದಕರದೋ- ರ್ಜಾಜೀಕದಂಬನವ ರಾಜೀವ ಮುಖ್ಯಸುಮ ರಾಜೀಸುವಾಸಿತಶಿರಃ    || 26 ||

ಓಂ ಶ್ರೀ ಕೃಷ್ಣಾಯ ನಮಃ
ಕಾಲೀಹೃದಾವಸಥ ಕಾಲೀಯಕುಂಡಲಿಪ ಕಾಲೀಸ್ಥಪಾದನಖರಾ ವ್ಯಾಲೀನವಾಂಶುಕರ ವಾಲಿಗಣಾರುಣಿತ ಕಾಲೀರುಚೇ ಜಯ ಜಯ |
ಕೇಲೀಲವಾಪಹೃತ ಕಾಲೀಶದತ್ತವರ ನಾಲೀಕದೃಪ್ತದಿತಿಭೂ ಚೂಲೀಕಗೋಪಮಹಿಲಾಲೀತನೂಘಸೃಣಧೂಲೀಕಣಾಂಕಹೃದಯ    || 27 ||

ಓಂ ಶ್ರೀ ಕೃಷ್ಣಾಯ ನಮಃ
ಕೃಷ್ಣಾದಿ ಪಾಂಡುಸುತ ಕೃಷ್ಣಾ ಮನಃಪ್ರಚುರ ತೃಷ್ಣಾ ಸುತೃಪ್ತಿಕರವಾಕ್ ಕೃಷ್ಣಾಂಕಪಾಲಿರತ ಕೃಷ್ಣಾಭಿಧಾಘಹರ ಕೃಷ್ಣಾದಿಷಣ್ಮಹಿಲ ಭೋಃ |
ಪುಷ್ಣಾತು ಮಾಮಜಿತ ನಿಷ್ಣಾದ ವಾರ್ಧಿಮುದ ನುಷ್ಣಾಂಶು ಮಂಡಲ ಹರೇ ಜಿಷ್ಣೋ ಗಿರೀಂದ್ರ ಧರ ವಿಷ್ಣೋ ವೃಷಾವರಜ ಧೃಷ್ಣೋ ಭವಾನ್ ಕರುಣಯಾ || 28 ||

ಓಂ ಶ್ರೀ ಕೃಷ್ಣಾಯ ನಮಃ
ರಾಮಾಶಿರೋಮಣಿಧರಾಮಾಸಮೇತಬಲರಾಮಾನುಜಾಭಿಧರತಿಂ ವ್ಯೋಮಾಸುರಾಂತಕರ ತೇ ಮಾರತಾತ ದಿಶಮೇ ಮಾಧವಾಂಘ್ರಿಕಮಲೆ |
ಕಾಮಾರ್ತಭೌಮಪುರ ರಾಮಾವಲಿಪ್ರಣಯ ವಾಮಾಕ್ಷಿಪೀತತನುಭಾ ಭೀಮಾಹಿನಾಥಮುಖವೈಮಾನಿಕಾಭಿನುತ ಭೀಮಾಭಿವಂದ್ಯ ಚರಣ    || 29 ||

ಓಂ ಶ್ರೀ ಕೃಷ್ಣಾಯ ನಮಃ
ಸ್ವಕ್ಷ್ವೇಲಭಕ್ಷ್ಯಭಯ ದಾಕ್ಷಿಶ್ರವೋ ಗಣಜ ಲಾಕ್ಷೇಪಪಾಶಯಮನಂ ಲಾಕ್ಷಗೃಹಜ್ವಲನ ರಕ್ಷೋ ಹಿಡಿಂಬಬಕ ಭೈಕ್ಷಾನ್ನಪೂರ್ವವಿಪದಃ |
ಅಕ್ಷಾನುಬಂಧಭವರೂಕ್ಷಾಕ್ಷರಶ್ರವಣ ಸಾಕ್ಷಾನ್ಮಹಿಷ್ಯವಮತೀ ಕಕ್ಷಾನುಯಾನಮಧಮಕ್ಷ್ಮಾಪಸೇವನಮಭೀಕ್ಷ್ಣಾಪಹಾಸಮಸತಾಂ || 30 ||

ಚಕ್ಷಾಣ ಏವನಿಜ ಪಕ್ಷಾಗ್ರಭೂದಶಶತಾಕ್ಷಾತ್ಮಜಾದಿ ಸುಹೃದಾ ಮಾಕ್ಷೇಪಕಾರಿಕುನೃಪಾಕ್ಷೌಹಿಣೀಶತಬಲಾಕ್ಷೋಭದೀಕ್ಷಿತಮನಾಃ |
ತಾಕ್ಷ್ರ್ಯಾಸಿಚಾಪಶರತೀಕ್ಷ್ಣಾರಿಪೂರ್ವನಿಜ ಲಕ್ಷ್ಮಾಣಿಚಾಪ್ಯಗಣಯನ್ ವೃಕ್ಷಾಲಯಧ್ವಜರಿರಕ್ಷಾಕರೋ ಜಯತಿ ಲಕ್ಷ್ಮೀಪತಿರ್ಯದುಪತಿಃ || 31 ||

ಓಂ ಶ್ರೀ ಬುದ್ಧಾಯ ನಮಃ, ಓಂ ಶ್ರೀ ಕಲ್ಕಿನೇ ನಮಃ
ಬುದ್ಧಾವತಾರಕವಿ ಬದ್ಧಾನುಕಂಪಕುರು ಬದ್ಧಾಂಜಲೌ ಮಯಿ ದಯಾಂ ಶೌದ್ಧೋದನಿಪ್ರಮುಖ ಸೈದ್ಧಾಂತಿಕಾ ಸುಗಮ ಬೌದ್ಧಾಗಮಪ್ರಣಯನ |
ಕೃದ್ಧಾಹಿತಾಸುಹೃತಿಸಿದ್ಧಾಸಿಖೇಟಧರ ಶುದ್ಧಾಶ್ವಯಾನಕಮಲಾ ಶುದ್ಧಾಂತಮಾಂರುಚಿಪಿ ನದ್ಧಾಖಿಲಾಂಗ ನಿಜ ಮದ್ಧಾ„ವ ಕಲ್ಕ್ಯಭಿಧ ಭೋಃ    || 32 ||

ಓಂ ಶ್ರೀ ಬದರೀ ನಾರಾಯಣ ನಮಃ
ಸಾರಂಗ ಕೃತ್ತಿಧರ ಸಾರಂಗ ವಾರಿಧರ ಸಾರಂಗ ರಾಜವರದಾ ಸಾರಂಗ ದಾರಿತರ ಸಾರಂಗ ತಾತ್ಮಮದ ಸಾರಂಗತೌಷಧಬಲಂ |
ಸಾರಂಗ ವತ್ಕುಸುಮ ಸಾರಂ ಗತಂ ಚ ತವ ಸಾರಂಗ ಮಾಂಘ್ರಿಯುಗಲಂ ಸಾರಂಗ ವರ್ಣಮಪ ಸಾರಂಗ ತಾಬ್ಜಮದ ಸಾರಂಗ ದಿಂಸ್ತ್ವಮವ ಮಾಮ್ || 33 ||

ಮಂಗಳಾ ಚರಣ
ಗ್ರೀವಾಸ್ಯ ವಾಹತನು ದೇವಾಂಡಜಾದಿದಶ ಭಾವಾಭಿರಾಮ ಚರಿತಂ ಭಾವಾತಿಭವ್ಯಶುಭ ದೀವಾದಿರಾಜಯತಿ ಭೂವಾಗ್ವಿಲಾಸ ನಿಲಯಂ    |
ಶ್ರೀವಾಗಧೀಶಮುಖ ದೇವಾಭಿನಮ್ಯ ಹರಿಸೇವಾರ್ಚನೇಷು ಪಠತಾಮಾವಾಸ ಏವಭವಿತಾ„ವಾಗ್ಭವೇತರಸುರಾವಾಸಲೋಕನಿಕರೇ    || 34 ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣ ವಿರಚಿತಂ ಶ್ರೀದಶಾವತಾರಸ್ತುತಿಃ ಸಂಪೂರ್ಣಂ ||
|| ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

OM matsyAya namaH
prOShThISa vigraha suniShThIvanOddhRutaviSiShTAMbucArijaladhE kOShThAntarAhitavicEShTAgamauGaparamEShThIDita ttvamava mAm |
prEShThArkasUnumanucEShTArtha mAtmavidatIShTO yugAMtasamayE sthEShThAtmaSRungadhRutakAShThAMbuvAhana varAShTApadapraBatanO || 1 ||

OM SrI hayagrIvAya namaH
KanDIBavadbahulaDinDIrajRuMBaNa sucaMDI kRutO dadhi mahA kAnDAti citra gati SaunDAdya haimarada BAnDA pramEya carita |
canDASvakanThamada SunDAla durhRudaya gaMDA BiKanDAkara dOScanDA marESahaya tunDAkRutE dRuSama KanDA malaM pradiSa mE || 2 ||

OM kUrmAya namaH
kUrmAkRutE tvavatu narmAtma pRuShThadhRuta BarmAtma mandara girE dharmAvalaMbana sudharmA sadAkalita SarmA sudhAvitaraNAt |
durmAna rAhumuKa durmAyi dAnavasumarmA BiBEdana paTOGarmArka kAMti vara varmA BavAn Buvana nirmANa dhUta vikRutiH || 3 ||

OM dhanvaMtarE namaH

dhanvantarEMgaruci dhanvantarE„ritaru dhanvaMstarIBavasudhABAnvaMtarAvasatha manvantarAdhikRuta tanvantarauShadhanidhE |
dhanvantarangaSugudhanvantamAjiSuvi tanvanmamAbdhi tanayAsUnvantakAtmahRudatanvaMtarAvayava tanvaMtarArtijaladhau || 4 ||

OM SrI nArAyaNAyai namaH
yAkShIravArdhimadanAkShINadarpaditijAkShOBitAmaragaNA pEkShAptayE„janivala-kShAMSubiMbajidatIkShNA¬kAvRutamuKI |
sUkShamAva¬gnavasanA„„kShEpakRutkuca kaTAkShAkShamIkRutamanO dIkShAsurAhRutasudhA„kShANinO„„vatu surUkShEkShaNAddharitanuH || 5 ||

OM SrI nArAyaNAyai namaH
SikShAdiyuj~jagama dIkShAsulakShaNa parIkShAkShamAvidhisatI dAkShAyaNI kShamati sAkShAdramApinaya dAkShEpavIkShaNavidhau |
prEkShAkShilOBakaralAkShAra sOkShi tapa dAkShEpalakShitadharA sA„kShAritAtmatanu BUkShArakAriniTi laÁkShA„kShamAnavatu naH || 6 ||

OM SrI varAhAya namaH
nIlAMbudABaSuBa SIlAdridEhadhara KElAhRutOdadhidhunI SailAdiyukta niKilElA kaTAdyasura tUlATavIdahana tE |
kOlAkRutE jaladhi kAlAcayAvayava nIlAbjadaMShTra dhariNI lIlAspadOrutalamUlASiyOgivarajAlABivandita namaH || 7 ||

OM SrI narasiMhAya namaH
daMBOlitIkShNanaKa saMBEditEMdraripu kuMBIndra pAhi kRupayA staMBArBa kAsahanaDiMBAya dattavara gaMBIra nAda nRuharE |
aMBOdijAnusaraNAMBOjaBUpavana kuMBIna sESa KagarAT kuMBIndra kRuttidhara jaMBAri ShaNmuKa muKAMBOru hABi nuta mAM || 8 ||
OM SrI vAmanAya namaH
piMgAkSha vikrama turaMgAdi sainya caturaMgA valipta danujA sAMgA dhvarastha bali sAMgAvapAta hRuShitAngA marAlinuta tE |
SRungAra pAdanaKa tuMgAgraBinna kana kAMgAMDapAti taTinI tuMgAti maMgala taraMgA BiBUta Baja kAngAGa vAmana namaH || 9 ||

OM SrI vAmanAya namaH
dhyAnArha vAmana tanOnAtha pAhi yajamAnA surESavasudhA dAnAya yAcanika lInArtha vAgvaSita nAnAsadasya danuja |
mInAnka nirmala niSAnAtha kOTila samAnAtma mauMjiguNakau pInAcCa sUtrapada yAnAta patrakara kAnamyadanDavaraBRut || 10 ||

OM SrI paraSurAmAya namaH
dhairyAMbudhE paraSucaryAdhikRuttaKala varyAvanISvara mahA SauryABiBUtakRuta vIryAtmajAtaBuja vIryAvalEpanikara |
BAryAparAdhakupitAryAj~jayAgalitanAryAtma sUgala tarO kAryA„parAdhamavicAryArya mauGajayi vIryAmitA mayi dayA || 11 ||

OM SrI rAmAya namaH
SrIrAmalakShmaNaSukArAma BUravatugaurAmalAmitamahO hArAmarastuta yaSOrAmakAMtisuta nOrAmalabdhakalaha |
svArAmavaryaripu vIrAmayArdhikara cIrAmalAvRutakaTE svArAma darSanajamArAmayAgatasuGOrAmanOrathahara || 12 ||

OM SrI rAmAya namaH
SrIkESavapradiSanAkESa jAtakapilOkESa BagnaraviBUstOkEtarArtiharaNAkEvalArtasuKadhIkEkikAlajalada |
sAkEtanAthavarapAkEramuKyasuta kOkEna BaktimatulAM rAkEMdu biMbamuKa kAkEkShaNApaha hRuShIkEliÀ tEM„Grikamala; || 13 ||

OM SrI rAmAya namaH
rAmEnRuNAM hRudaBirAmEnarASikula BImEmanOdyaramatAM gOmEdinIjayitapO„mEyagAdhisuta kAmEniviShTa manasI |
SyAmE sadA tvayijitAmEya tApasaja rAmE gatAdhikasamE BImESacApadalanAmEyaSauryajita vAmE kShaNE vijayinI || 14 ||

OM SrI sItAsvarUpiNai SrIyai namaH
kAntAragEhaKala kAntAraTadvadana kAntAlakAntakaSaraM kAntAra„„yA„Mbujani kAntAnvavAyavidhu kAntASmaBAdipaharE |
kAntAlilOladala kAntABiSOBitila kAntABavaMtamanusA kAntAnuyAnajita kAntAradurgakaTa kAntAramAtvavatu mAM || 15 ||

OM SrI rAmAya namaH
dAntaM daSAnana sutAntaM dharAmadhivasantaM pracanDa tapasA klAntaM samEtya vipinAntaM tvavApa yamanaMtaM tapasvi paTalam|
yAntaM BavArati BayAntaM mamASu BagavantaM BarENa BajatAt svAntaM savAri danujAntaM dharAdharaniSAntaM sa tApasavaram || 16 ||

OM SrI rAmAya namaH
SaMpABacApalava kaMpAsta SatRubala saMpAditAmitayaSAH SaM pAda tAmarasa saMpAti nO„¬ manu kaMpAra sEna diSamE |
saMpAti pakShi sahajaMpApa rAvaNa hataM pAvanaM yada kRuthA tvAM pApa kUpa pati taM pAhi mAM tadapi paMpA sarasta Tacara || 17 ||

OM SrI rAmAya namaH
lolAkSyapEkShitasulIlAkuraMgavada KElAkutUhala gatE svAlApaBUmijanibAlApahAryanuja pAlAdyaBO jaya jaya |
bAlAgnidagdhapura SAlAnilAtmajani PAlAttapattalarajO nIlAMgadAdikapi mAlAkRutAlipatha mUlAByatIta jaladhE || 18 ||

OM SrI rAmAya namaH

tUNIrakArmukakRupANIkiNAMkaBuja pANI ravipratimaBAH kShONidharAliniBa GONI muKAdiGanavENIsurakShaNakaraH |
SONiBavannayana kONI jitAMbunidhi pANI ritArhaNamaNI SrENIvRutAMGririha vANISasUnuvara vANIstutO vijayatE || 19 ||

OM SrI rAmAya namaH
hunkArapUrvamathaTaMkAranAdamati pankA„vadhArya calitAlankASilOccayaviSaMkA patadBidura SankAsayasya dhanuShaH |
lankAdhipOmanutayaMkAlarAtrimiva SankASatAkuladhiyA tankAladanDaSata saMkASakArmuKa SarAMkAnvitaM Baja hariM || 20 ||

OM SrI rAmAya namaH
dhImAnamEyatanudhAmrtamanga¬danAmA ramAkama¬BU kAmAripannagapa kAmAhi vairiguru sOmAdivaMdya mahima |
sthEmAdinApagata sImA„vatAtsaKa¬ sAmAja rAvaNaripU rAmABidO hariraBaumAkRutiH pratana sAmAdi vEdaviShayaH || 21 ||

OM SrI rAmAya namaH
dOShA„tmaBUvaliÀturAShADatikramaja rOShAtmaBartRuvacasa pAShANaBUtamuniyOShAvarAtmatanuvESAdidAyicaraNaH |
naiShAdhayOShidhasuBEShAkRudaMDajani dOShAcarAdi suhRudO
dOShAgrajanmam Rutil ;ShApahO„vatu sudOShAMGrijAtahananAt || 22 ||

OM SrI kRuShNAya namaH
vRundAvanasthapaSu vRundAvanaM vinuta vRuMdArakaikaSaraNaM naMdAtmajaM nihata
nindA kRudA surajanandAmabaddha jaTharam |
vandAmahE vayama mandAvadAtaruci mandAkShakArivadanaM kundAlidaMtamuta kandAsitapraBatanundAvarAkShasaharam || 23 ||

OM SrI kRuShNAya namaH
gOpAlakOtsavakRutApAraBakShyarasa sUpAnnalOpakupitA SApAlayApitalayApAMbudAlisalilApAyadhAritagirE |
sApAngadarSanajatApAMga rAgayuta gOpAnga nAMSuka hRuti vyApAra SaunDavividhApAya
tastvamava mava gOpArijAtaharaNa || 24 ||

OM SrI kRuShNAya namaH
kaMsAdikAsadavataMsA vanIpativihiMsAkRutAtmajanuShaM saMsAraBUtamiha saMsArabaddhamana saMsAracitsuKatanum |
saMsAdhayaMtamaniSaMsAtvikavrajamahaMsAdaraM Bata BajE haMsAditApasariraMsAspadaM paramahaMsAdi vandya caraNam || 25||

OM SrI kRuShNAya namaH
rAjIva nEtravidurAjIvamAmavatu rAjIva kEtanavaSaM vAjIBapattinRuparAjI rathAnvitaja rAjIva garvaSamana|
vAjISavAhasita vAjISa daitya tanu vAjISa BEdakaradO- rjAjIkadaMbanava rAjIva muKyasuma rAjIsuvAsitaSiraH || 26 ||

OM SrI kRuShNAya namaH
kAlIhRudAvasatha kAlIyakunDalipa kAlIsthapAdanaKarA vyAlInavAnSukara vAligaNAruNita kAlIrucE jaya jaya |
kElIlavApahRuta kAlISadattavara nAlIkadRuptaditiBU cUlIkagOpamahilAlItanUGasRuNadhUlIkaNAMkahRudaya || 27 ||

OM SrI kRuShNAya namaH
kRuShNAdi pAnDusuta kRuShNA manaHpracura tRuShNA sutRuptikaravAk kRuShNAMkapAlirata kRuShNABidhAGahara kRuShNAdiShaNmahila BOH |
puShNAtu mAmajita niShNAda vArdhimuda nuShNAMSu manDala harE jiShNO girIndra dhara viShNO vRuShAvaraja dhRuShNO BavAn karuNayA || 28 ||

OM SrI kRuShNAya namaH
rAmASirOmaNidharAmAsamEtabalarAmAnujABidharatiM vyOmAsurAMtakara tE mAratAta diSamE mAdhavAMGrikamale |
kAmArtaBaumapura rAmAvalipraNaya vAmAkShipItatanuBA BImAhinAthamuKavaimAnikABinuta BImABivandya caraNa || 29 ||

OM SrI kRuShNAya namaH
svakShvElaBakShyaBaya dAkShiSravO gaNaja lAkShEpapASayamanaM lAkShagRuhajvalana rakShO hiDiMbabaka BaikShAnnapUrvavipadaH |
akShAnubaMdhaBavarUkShAkSharaSravaNa sAkShAnmahiShyavamatI kakShAnuyAnamadhamakShmApasEvanamaBIkShNApahAsamasatAM || 30 ||

cakShANa Evanija pakShAgraBUdaSaSatAkShAtmajAdi suhRudA mAkShEpakArikunRupAkShauhiNISatabalAkShOBadIkShitamanAH |
tAkShryAsicApaSaratIkShNAripUrvanija lakShmANicApyagaNayan vRukShAlayadhvajarirakShAkarO jayati lakShmIpatiryadupatiH || 31 ||

OM SrI buddhAya namaH, OM SrI kalkinE namaH
buddhAvatArakavi baddhAnukaMpakuru baddhAnjalau mayi dayAM SauddhOdanipramuKa saiddhAntikA sugama bauddhAgamapraNayana |
kRuddhAhitAsuhRutisiddhAsiKETadhara SuddhASvayAnakamalA SuddhAMtamAMrucipi naddhAKilAMga nija maddhA„va kalkyaBidha BOH || 32 ||

OM SrI badarI nArAyaNa namaH
sAranga kRuttidhara sAranga vAridhara sAranga rAjavaradA sAranga dAritara sAranga tAtmamada sArangatauShadhabalaM |
sAranga vatkusuma sAraM gataM ca tava sAranga mAnGriyugalaM sAranga varNamapa sAraMga tAbjamada sAraMga diMstvamava mAm || 33 ||

mangaLA caraNa
grIvAsya vAhatanu dEvAMDajAdidaSa BAvABirAma caritaM BAvAtiBavyaSuBa dIvAdirAjayati BUvAgvilAsa nilayaM |
SrIvAgadhISamuKa dEvABinamya harisEvArcanEShu paThatAmAvAsa EvaBavitA„vAgBavEtarasurAvAsalOkanikarE || 34 ||

|| iti SrImadvAdirAjapUjyacaraNa viracitaM SrIdaSAvatArastutiH saMpUrNaM ||
|| BAratIramaNamuKyaprANAntargata SrIkRuShNArpaNamastu ||

dasaavatharam · dasara padagalu · MADHWA · purandara dasaru

Mangalam jaya mangalam

ಮಂಗಳಂ ಜಯ ಮಂಗಳಂ||pa||

ನಿಗಮವ ತಂದಾ ಮತ್ಸ್ಯಾವತಾರಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ
ಜಗವನುದ್ಧರಿಸಿದ ವರಾಹಾವತಾರಗೆ
ಮಗುವಿನ ಕಾಯ್ದ ಮುದ್ದು ನರಸಿಂಹಗೆ||1||

ಭೂಮಿಯ ದಾನವ ಬೇಡಿದಗೆ
ಆ ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯ ಅರಸ ಗೋಪಾಲಕೃಷ್ಣಗೆ||2||

ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ನಿತ್ಯ ಶ್ರೀ ಪುರಂದರವಿಠಲನಿಗೆ||3||

Mangalam jaya mangalam||pa||

Nigamava tanda matsyavatarage
Nagava bennali potta kurmanige
Jagavanuddharisida varahavatarage
Maguvina kayda muddu narasimhage||1||

Bumiya danava bedidage
A maha arasara gelidavage
Raamachandranemba svamige satya-
Bameya arasa gopalakrushnage||2||

Battale nintiha buddhanige
Uttama hayavanerida kalkige
Hattavataradi Baktara salahida
Nitya sri purandaravithalanige||3||

 

 

 

 

 

 

 

 

 

 

 

 

aarathi · dasaavatharam · dasara padagalu · MADHWA · Vadirajaru

aa mahimege mangalaarathi

ಆ ಮಹಿಮಗೆ ಮಂಗಳಾರತಿಯ ಎತ್ತಿದರು ||

ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು
ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ ||

ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು
ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ ||

ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು
ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ ||

ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು
ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ ||

ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು
ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ ||

ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು
ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ ||

ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು
ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ ||

ಗೋಪಿ ಮುದ್ದಾಡಿದ ಬೆಳಕು
ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ ||

ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು
ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ ||

ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು
ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ ||

A mahimage mangalaratiya ettidaru ||

Matsyavatara srihariya akshagangaladondu belaku
Nityavedava tanda belaku tumbitu dvaravatige ||

Kurmavatara srihariya hemagiriya tanda belaku
Ballida kayanna belaku tumbitu dvaravatige ||

Varahavatara srihariya holeda koredadeya belaku
Dharuniya negavida belaku tumbitu dvaravatige ||

Naramrugarupa srihariya merevo nakada belaku
Urigannu jvaleya belaku tumbitu dvaravatige ||

Vamanavatara srihariya bumiyanaledondu belaku
Balaka tanayana belaku tumbitu dvaravatige ||

Bargavavatara srihariya mereévo balubujadondu belaku
Durula kshatre;ra gedda belaku tumbitu dvaravatige ||

Dasarathatanaya srihariya esevo billubanada belaku
Sasivadaneya tanda belaku tumbitu dvaravatige ||

Gopi muddadida belaku
Devakkitanayana belaku tumbitu dvaravatige ||

Bauddhavatara srihariya buddhipallatadondu belaku
Rudranna gelidondu belaku tumbitu dvaravatige ||

Kalkyavatara srihariya holevakandadondu belaku
Guru hayavadananna belaku tumbitu dvaravatige ||

 

dasara padagalu · MADHWA · sripadarajaru

shreepaadaraja guruve

ಶ್ರೀಪಾದರಾಜ ಗುರುವೆ | ನತಸುರ ತರುವೆ ||pa||

ಶ್ರೀಪಾದರಾಜ ನಿನ್ನ ನಾ ಪೊಂದೊದೆನು ತ್ರಯ
ತಾಪಗಳೋಡಿಸಿ | ನೀ ಪಾಲಿಸು ಅನುದಿನ ||a.pa||

ಪಂಡಿತಾಗ್ರಣಿ ಕರ್ಣ | ಕುಂಢಲ ಮುಕುಟಾಭರಣ
ಮಂಡಿತವಾಗಿ ಮಾರ್ತಂಡನಂತೆ ಪೊಳೆವ ||1||

ಪವನ ದೇವನೆ ಶಾಸ್ತ್ರ | ಸುವಿಛಾರ ಭರಿತ ವಾಕ್
ಪವಿಯಾಖ್ಯ ಗ್ರಂಧ ಕೃತ | ಕವಿಕುಲೋತ್ತಂಸ ಹಂಸ ||2||

ಮೃಷ್ಟಾನ್ನ ನಾನಾವಿಧ ಷಷ್ಟಿ ಶಾಕಂಗಳ
ನಿಷ್ಟೀಲಿ ಸದಾ ರಂಗವಿಠಲಗರ್ಪಿಸಿದ ||3||

ಇಳೆಯ ಸುರಗೆ ಹತ್ಯ | ಸತಿ ಕರುಣದಿ ಕಂಡು
ಜಲವ ಪ್ರೋಕ್ಷಿಸಿ ಕಳೆದು | ಸಲಹಿದ ಸನ್ಮಹಿಮ ||4||

ತಂದೆ ಜರಿಯೆ ವನದಿ | ನಿಂತು ಭಜಿಸಿ ಶಾಮ
ಸುಂದರನೊಲಿಸಿ ಸ್ಥಿರಾನಂದ ಪದವಿ ಪಡೆದ ||5||

Shreepaadaraaja guruve natasura taruve || pa ||

Shreepaadaraaja ninna naa pondidenu trayataapagalodisi | neepaalisanudina || a.pa.||

Panditaagrani karna kundala mukutaabharana |
manditanaagi maartaandanante poleva || 1 ||

Pavana devana shaastra suvicaara bharita vaak |
paviyaakhya grantha kruta kavi kulottamsa hamsa || 2 ||

Mrushtaanna naanaavidha shashthi shaakangala |
nishthili sadaa rangaviththalagarpisida || 3 ||

Iliya surage hatya sale karunadi shamkha jala |
prokshisi kaledu salahida sanmahima || 4 ||

Tande jariye vanadi nimdu bhajisi |
shyaamasundaranolisi sthiraananda padavi padeda || 5 ||

dasaavatharam · dasara padagalu · kanakadasaru · MADHWA

Govinda hari govindha

ಗೋವಿಂದ ಹರಿ ಗೋವಿಂದ ||
ಗೋವಿಂದ ಪರಮಾನಂದ ಮುಕುಂದ||

ಮಚ್ಛ್ಯಾವತಾರದೊಳಾಳಿದನೆ – ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಛ ಸೂಕರನಾಗಿ ಬಾಳಿದನೆ – ಮದಹೆಚ್ಚೆ ಹಿರಣ್ಯಕನ ಸೀಳಿದನೆ||1||

ಕುಂಭಿನಿ ದಾನವ ಬೇಡಿದನೆ – ಕ್ಷಾತ್ರ-ರೆಂಬುವರನು ಹತ ಮಾಡಿದನೆ|
ಅಂಬುಧಿಗೆ ಶರ ಹೂಡಿದನೆ – ಕಮ-ಲಾಂಬಕ ಗೊಲ್ಲರೊಳಾಡಿದನೆ ||2||

ವಸುದೇವನುದರದಿ ಪುಟ್ಟಿದನೆ – ಪಲ್‍ಮಸೆವ ದನುಜರೊಡೆಗುಟ್ಟಿದನೆ|
ಎಸೆವ ಕಾಳಿಂಗನ ಮೆಟ್ಟಿದನೆ – ಬಾ-ಧಿಸುವರ ಯಮಪುರಕಟ್ಟಿದನೆ ||3||

ಪೂತನಿಯ ಮೈ ಸೋಕಿದನೆ – ಬಲುಘಾತದ ಮೊಲೆಯುಂಡು ತೇಕಿದನೆ
ಘಾತಕಿಯನತ್ತ ನೂಕಿದನೆ – ಗೋಪವ್ರಾತ ಗೋಗಳನೆಲ್ಲ ಸಾಕಿದನೆ||4||

ಸಾಧಿಸಿ ತ್ರಿಪುರರ ಗೆಲಿದವನೆ – ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆ
ಸಾಧುಸಂತರೊಡನೆ ನಲಿದವನೆ – ಬಾಡದಾದಿಕೇಶವ ಕನಕಗೊಲಿದವನೆ ||5||

Govinda Hari Govinda Keshava Krishna Janaardana||pa||

Matsyaavataradolaadidne mandaraacala bennolu taalidane
Accasookaranaagi baalidane madahecce hiranyana seelidane || 1 ||

Kumbhini daanava bedidane kshaatrarembuvaranu hata maadidane
Ambudhige shara hoodidane kamalaambaka gollarolaadidane || 2 ||

Vasudevanudaradi puttidane palmaseva danujarodaguttidane
Eseva kaalingana mettidane bhaadisuvara yamapurakattidane || 3 ||

Pootaniya maiya sokidane mahaa ghaatada moleyundu tegidane
Ghaatakiyanatta nookidane gopa vraata gogalanella saakidane || 4 ||

Saadhisi tripurava gelidavane mlecchara bhedisi hayaveri meredavane
Saadhisi sakalava tilidavane baadadaadikeshaava bhaktigolidavane || 5 ||

dasaavatharam · dasara padagalu · kanakadasaru · MADHWA

Devi namma devaru bandaru bannire

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ||pa||

ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾ
ಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ||1||

ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ|
ಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ ||2||

ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾ
ಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ ||3||

ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4||

ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ
ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ ||5||

ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾ
ಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ ||6||

ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾ
ಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ||7||

ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾ
ಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ ||8||

ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ|
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ||9||

ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾ
ಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ ||10||

ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾ|
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ||11||

Devi namma devaru bandaru bannire

Kenganna minanagi namma ranga gungadi somana kondanmya
gungadi somana kondu vedavanu bangara dodalanigittanmya||1||

Dodda maduvinolu namma ranga guddava hottukondu nintanmya
guddava hottukondu nintu suraranu doddavarannu madyanmya||2||

Cennakadina handiyagi namma ranga cinnada kannana kondanmya
cinnana kannana kondu bhumiya vanaja sambhavagittanmya||3||

Sittinda simhanagi nammaranga hotteya karula bagedanmya
hotteya karula harava madi puttage varava kottanmya||4||

Huduga haruvanagi namma ranga bedagili mugilige beladanmya
bedagili mugilige beladu baliyanu adiyinda patalakottanmya||5||

Taya matanu keli savira tolina Avina kallana kondanmya
Avina kallanu kondu bhumiya avaniya surarigittanmya||6||

Tingala kannina kongagalanu kudi changane lankege podanmya
changane lankege pogi namma ranga hengasugallana kondanmya||7||

Kariya holeyali turugala kayuta uragana maduva dhumuktyanma
urugana hedemale harihari kunivaga varava naryarige kottanmya||8||

Kanda kandalli kundeya bittukondu bhandatanadali nintanmya
bhandatanadali nintu tripurara hendiranella kedisanmya||9||

Celva hendatiya kudureya madi olleya ravutanadanmya
olleya ravutanagi mleccara dolla hotteyamele voddanmya||10||

Dollinamel; kaiya bharamappa hakyanu talava shivanappa tattanmya
ollolle padagala hanumappa hadyanu celuva kanakappa kunidanmya||11||

dasaavatharam · dasara padagalu · DEVOTIONAL · MADHWA · mahipathi dasaru

Kolu Kolenna Kole

Those who have gifted with  attending Mysore Ramachandra dasaru kacheri, Would know this wonderful Kolu song composed by Mahipathi dasaru which celebrates dashavaathara. This is one of the master piece song of Ramachandra dasaru which he sings at the end.Audience gets excited  and right from Kids to the eldest person in the hall starts Kolu dance and It is a sheer Joy to watch this sambrama.

kolu-haadu

Kolu kolenna kole | kolu cinnada kole | kole || pa||

Shikshisi nigamacora, raakshasana kondu |
Rakshisi vedanuluhida kole |
Rakshisi vedanuluhida kshitiyolu
Matsyaavataarana balagombe kole || 1 ||

Dharmavanaliyalaagi marmava taalida karmahara
Shreemoortiya kole |
Karmahara shreemoortiyu dhareya potta
Koormaavataarana balagombe kole||2||

Dhareya kaddasurana kore daadimda seeli | hore
Hoydaadida narahari kole |
Hore hoydaadida narahari dhareya gedda
Varahaavataarana balagombe kole ||3||

Tarala pralhaadanaagi durula daityana kondu
Karalu vanamaale dharisidda kole |
Karalu vana maale dharisidda narahari
Narasimhaa avataaranna balagombe kole ||4||

Nemisi mooru paada bhoomiya bedidaa |
Hemmeya taa pariharisidda kole |
Hemmeya taa pariharisidda
Braahmananaagi|vaamanaavataranna balagombe kole ||5||

Aagneya meerade agrajara shira |
Sheeghrradimdali iluhida kole |
Sheeghrradimdali iluhida shiravannu bhaargava
Raamana balagombe kole || 6 ||

Kaamadi seeteyanoyda taamarasadavana
Kondu|nema sthaapisida ileyolu kole|
Nema sthaapisida ileyolu shyaamavarna |
Raamana balagombe kole || 7 ||

Dushta daityaranella kutti maduhida | nettane
Giriya ettida kole |
Nettane giriyanettida bottile
Krushnaavataaranna balagombe kole || 8 ||

Kaddu tripura pokku idda satiyara vruta | siddiya
Taanu alidaanu kole |
Siddiya taanu alidaanu buddiyali
Bouddhaavataaranna balagombe kole || 9 ||

Malla maanyaranella hallu muriyalaagi | nalla
Tejiya-nerida kole |
Nalla tejiya- nerida ballidanaagi kalkyaavataarana
Balagombe kole || 10 ||

Vastu paraatpara vistaara toralaagi |
Hattaavataarava dharisida kole |
Hattaavataarava dharisida mahipati
Antaraatmanna balagombe kole || 11 ||