

Find Madhwa philosophy slokas, festivals and dasara padagalu


ಹರಿಹರರು ಸರಿಯೆಂಬ ಮರುಳು ಜನರು
ಹರಿಹರರ ಚರಿತೆಯನು ತಿಳಿದು ಭಜಿಸುವುದು || ಪ ||
ಸುರರು ಮುನಿಗಳು ಕೂಡಿ ಪರದೈವವಾರೆಂದು
ಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು
ಸಂಗರವ ಮಾಡಿಸಿ ನೋಡೆ
ಮುರಹರನು ಪುರಹರನ ಗೆಲಿದುದರಿಯಾ || 1 ||
ಹರನ ಕುರಿತ ಸುರ ಮಹತಪವ ಮಾಡಲು
ಮೆಚ್ಚಿವರವನವಗಿತ್ತು ಹರ ಬಳಲಿ ಓಡಿಬರಲು
ಹರಿ ಬಂದವನ ಕರವ ಶಿರದ ಮ್ಯಾಲಿರಿಸಿ
ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ || 2 ||
ದೂರ್ವಾಸರೂಪ ಹರನಂಬರೀಷನ ಮುಂದೆ
ಗರ್ವವನು ಮೆರೆಸಿ ಜಡೆಯನು ಕಿತ್ತಿಡೆ
ಸರ್ವಲೋಕದೊಳವನ ಚಕ್ರನಿಲಲೀಯದಿರೆ
ಉರ್ವೀಶನನು ಸಾರಿ ಉಳಿದನರಿಯಾ || 3 ||
ಹರನಂಶ ದ್ರೋಣಸುತನು ಪಾಂಡವಾ ಎಂದು
ಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು
ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದು
ಶರಣಾಗತರ ಕಾಯಿದ ಕಥೆಯನರಿಯಾ || 4 ||
ನರನಾರಾಯಣರು ಬದರಿಕಾಶ್ರಮದಲಿರೆ
ಹರನು ಹರಿಯೊಡನೆ ಕದನವನು ಮಾಡೆ
ಹರಿ ಹರನ ಕಂಠವನು ಕರದಲಿ ಪಿಡಿದು ನೂಕೆ
ಕೊರಳ ಕಪ್ಪಾದ ಕಥೆ ಕೇಳಿ ಅರಿಯಾ || 5 ||
ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆ
ಹರ ನೋಡುವೆನೆಂದು ಸಂಪ್ರಾರ್ಥಿಸೆ
ಪರಮ ಮೋಹನ ರೂಪಲಾವಣ್ಯವನು ಕಂಡು
ಹರ ಮರಳುಗೊಂಡ ಕಥೆ ಕೇಳಿ ಅರಿಯಾ || 6 ||
ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆ
ಗರುಡವಾಹನನಾಗಿ ಕೃಷ್ಣ ಬಂದು
ಹರನ ಧುರದಲಿ ಜಯಿಸಿ ಅವನ ಕಿಂಕರನ
ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ || 7 ||
ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆ
ಹರನು ಹರಿಯೊಡನೆ ಕದನವನು ಮಾಡೆ
ತರಹರಿಸಲಾರದೋಡಿದ ಕಥೆಯ ನೀನೊಮ್ಮೆ
ಹಿರಿಯರ ಮುಖದಿ ಕೇಳಿ ನಂಬು ಹರಿಯಾ || 8 ||
ಹರಸುತನು ತಪದಿಂದ ಹರಿಯ ಚಕ್ರವ ಬೇಡೆ
ಪರಮ ಹರುಷದಲಿ ಚಕ್ರವನೀಯಲುಭರದಿಂದ
ಧರಿಸಲಾರದೆ ಚಕ್ರವನಂದುಹರನು
ಭಂಗಿತನಾದನೆಂದರಿಯಲಾ || 9 ||
ರಾವಣಾಸುರ ಕುಂಭಕರ್ಣ ನರಕಾದಿಗಳು
ಶೈವತಪವನು ಮಾಡಿ ವರವ ಪಡೆಯೆ
ಅವರುಗಳನು ವಿಷ್ಣು ನರರೂಪಿನಿಂದರಿದು
ದೇವರ್ಕಳನು ಕಾಯಿದ ಕಥೆಯ ನೀನರಿಯಾ || 10 ||
ಗಂಗಾಜನಕನ ಸನ್ಮಂಗಲ ಚರಿತ್ರ್ರೆಗಳ
ಹಿಂಗದಲೆ ಕೇಳಿ ಸುಖಿಸುವ ಜನರಿಗೆ
ಭಂಗವಿಲ್ಲದ ಪದವನಿತ್ತು ಸಲಹುವ
ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ || 11 ||
Harihararu sariyemba maruḷu janaru hariharara cariteyanu tiḷidu bhajisuvudu || pa ||
suraru munigaḷu kūḍi paradaivavārendu ariyabēkenderaḍu varadhanugaḷaharihararigittu saṅgarava māḍisi nōḍe muraharanu puraharana gelidudariyā || 1 ||
harana kurita sura mahatapava māḍalu meccivaravanavagittu hara baḷali ōḍibaralu hari bandavana karava śirada myālirisi khaḷa-nuruhi harananu kāyida katheya nīnariyā || 2 ||
dūrvāsarūpa haranambarīṣana munde garvavanu meresi jaḍeyanu kittiḍe sarvalōkadoḷavana cakranilalīyadire urvīśananu sāri uḷidanariyā || 3 ||
harananśa drōṇasutanu pāṇḍavā endu uravaṇisi nārāyaṇāsttravanu biḍalu hari bandu bēga tannastravanu tā seḷedu śaraṇāgatara kāyida katheyanariyā || 4 ||
naranārāyaṇaru badarikāśramadalire haranu hariyoḍane kadanavanu māḍe hari harana kaṇṭhavanu karadali piḍidu nūke koraḷa kappāda kathe kēḷi ariyā || 5 ||
hari surarigamr̥tavanu ereda rūpavanom’me hara nōḍuvenendu samprārthise parama mōhana rūpalāvaṇyavanu kaṇḍu hara maraḷugoṇḍa kathe kēḷi ariyā || 6 ||
hariya mom’mana bāṇāsuranu sereviḍiye garuḍavāhananāgi kr̥ṣṇa bandu harana dhuradali jayisi avana kiṅkarana sā-vira tōḷugaḷa tarida katheya nīnariyā || 7 ||
surataruva kittu hari suralōkadinda bare haranu hariyoḍane kadanavanu māḍe taraharisalāradōḍida katheya nīnom’me hiriyara mukhadi kēḷi nambu hariyā || 8 ||
harasutanu tapadinda hariya cakrava bēḍe parama haruṣadali cakravanīyalubharadinda dharisalārade cakravananduharanu bhaṅgitanādanendariyalā || 9 ||
rāvaṇāsura kumbhakarṇa narakādigaḷu śaivatapavanu māḍi varava paḍeye avarugaḷanu viṣṇu nararūpinindaridu dēvarkaḷanu kāyida katheya nīnariyā || 10 ||
gaṅgājanakana sanmaṅgala caritrregaḷa hiṅgadale kēḷi sukhisuva janarige bhaṅgavillada padavanittu salahuva nam’maraṅgaviṭhṭhalarāyana nere nambirō || 11 ||
೧).ಶ್ರೀಮದಅನಂತ ಕೋಟಿ ಬ್ರಹ್ಮಾಂಡನಾಯಕ ೨).ರಮಾಬ್ರಹ್ಮರುದ್ರೆಂದ್ರಾದಿ ವಂದ್ಯ ೩)ಭಕ್ತ ವತ್ಸಲ ೪)ಭವರೋಗ ವೈಧ್ಯ ೫)ಶರಣಾಗತ ವಜ್ರಪಂಜರ ೬)ಆಪದ್ ಬಾಂಧವ ೭)ಅನಾಥಬಂಧೋ ೮)ಅನಿಮಿತ್ತ ಬಂಧೋ ೯)ಪತಿತಪಾವನಾ ೧೦)ಮಹಾರೋಗ ನಿವಾರಣಾ೧೧)ಮಹಾದುರಿತ ನಿವಾರಣಾ ೧೨)ಮಹಾಭಯ ನಿವಾರಣಾ ೧೩)ಮಹಾಬಂಧ ವಿಮೋಚನಾ೧೪)ಭಯಕೃತ್ ಭಯವಿನಾಶನಾ ೧೫)ಕೃಪಾವಾರಿಧಿ೧೬)ದೇವದೇವೋತ್ತಮಾ ೧೭)ದೇವಶಿಖಾಮಣಿ ೧೮)ಕಪಟನಾಟಕ ಸೂತ್ರಧಾರೀ ೧೯) ನಿತ್ಯರೊಳುನಿತ್ಯ೨೦)ಸತ್ಯಸಂಕಲ್ಪ ೨೧)ಮುಕ್ತಾಮುಕ್ತ ನಿಯಾಮಕ ೨೨)ಮೋಕ್ಷಧರಾ ೨೩)ಸುವೈಕುಂಠಪತಿ ೨೪)ವೈಕುಂಠವಿಹಾರಿ ೧೫)ತ್ರಿಧಾಮಾ ೨೬)ತ್ರಿಗುಣವರ್ಜಿತ ೨೭)ಜಗಜ್ಜನ್ಮಾದಿಕಾರಣಾ ೨೮)ಜಗತ್ಪತೆ ೨೯)ಜಗದತ್ಯಂತ ಭಿನ್ನ೩೦)ಜಗದೀಶ ೩೧)ಜಗದುದ್ಧಾರ ೩೨)ಜಗತ್ಸ್ವಾಮಿ
೩೩)ಜಗದ್ ವಿಲಕ್ಷಣ ೩೪)ಜಗನ್ನಾಥ. ೩೫) ವಿಶ್ವಕುಟುಂಬಿ ೩೬)ವಿರಾಟಮೂರ್ತಿ ೩೭)ಹೇ ಮಂಗಳಾಂಗ ೩೮)ಹೇ ಶುಭಾಂಗ ೩೯)ಪರಾಮಮಂಗಳಮೂರ್ತಿ ೪೦) ಕೋಮಲಾಂಗಾ ೪೧)ನೀಲಮೆಘ ಶ್ಯಾಮಾ ೪೨)ಇಂದುವದನಾ೪೩)ಬಹುಸುಂದರಾ ೪೪) ಇಂದಿರಾ ವಂದಿತ ಚರಣಾ ೪೫) ವೃಕೊರವಂಧ್ಯ೪೬)ಕೇಶವಾದಿ ರೂಪ ೪೭) ಅಜಾದಿ ರೂಪ ೪೮)ವಿಶ್ವಾದಿ ರೂಪ ೪೯) ಆತ್ಮಾದಿ ರೂಪ ೫೦)ಅನಿರುದ್ಧಾದಿರೂಪ ೫೧) ಅನ್ನಮಾದಿ ರೂಪ ೫೨)ಅನೇಕ ಮಂತ್ರ ಪ್ರತಿಪಾದ್ಯಾ ೫೩)ಸರ್ವಸಾರ ಭೋಕ್ತ ೫೪) ಅಷ್ಟೈಶ್ವರ್ಯಪ್ರದಾತಾ ೫೫)ಓಂಕಾರ ಶಬ್ದವಾಚ್ಯ ೫೬)ವಿಶಿಷ್ಟ ತಾರತಮ್ಯ ವಾಚ್ಯ ೫೭)ಅನಂತಾನಂತ ಶಬ್ದವಾಚ್ಯ ೫೮)ಅಣು ಮಹದ್ರೂಪ ೫೯)ಶಂಖಚಕ್ರಪೀತಾಂಬರ ಧಾರಿ ೬೦)ಕಮಲಾಕ್ಷ ೬೧)ಕಮಲನಾಭ ೬೨) ವೈಜಯಂತಿ ವನಮಾಲ ಶೋಭಿತ ೬೩)ಕೌಸ್ತುಭ ಭೂಷಿತ ೬೪)ಸುವರ್ಣವರ್ಣ
೬೫)ನವರತ್ನ ಕುಂಡಲಧಾರಿ ೬೬)ಕಸ್ತೂರಿ ಶ್ರೀಗಂಧ ಲೇಪನ ೬೭) ಗರುಡಾರೂಢ ಶೋಭಿತ ೬೮)ಕಾಮಧೇನು. ೬೯) ಶ್ರೀವತ್ಸ ಲಾಂಛನ ೭೦) ಕಲ್ಪವೃಕ್ಷ ೭೧)ಚಿಂತಾಮಣಿ ೭೨) ಕ್ಷಿರಾಬ್ಧೀಶಾಯಿ೭೩) ಶೇಷಶಾಯಿ ೭೪)ವಟಪತ್ರಶಾಯಿ ೭೫) ಖಗವಾಹನಾ ೭೬)ದೇಶಕಾಲ ಗುಣಾತೀತ ೭೭) ಅನಂತ ಬ್ರಹ್ಮಾ ೭೮)ಅನಂತಶಕ್ತಿ ೭೯)ಅನಂತ ಮೂರ್ತಿ ೮೦)ಅನಂತಕೀರ್ತಿ
೮೧)ಪುರಾಣಪುರುಷೋತ್ತಮಾ ೮೨) ಅಕ್ರೂರವರದಾ ೮೩)ಅಂಬರೀಷವರದಾ ೮೪)ನಾರದವರದಾ ೮೫)ಪ್ರಲ್ಹಾದವರದಾ ೮೬)ಗಜೇಂದ್ರವರದಾ ೮೭)ಮುಚಕುಂದ ವರದಾ ೮೮)ಧ್ರುವವರದಾ ೮೯)ಬಿಭೀಷಣ ವರದಾ ೯೦)ಕುಲಾಲಭೀಸಂರಕ್ಷಕಾ ೯೧)
ಪುಂಡರೀಕ ವರದಾ ೯೨)ಪರಾಶರ ವರದಾ
೯೩)ಪಾರ್ಥಸಾರಥೀ ೯೪)ಪಾಪವಿದೂರ ೯೫)ಅರಿಜನ ಪ್ರಚಂಡಾ ೯೬)ಚಾಣೂರ ಮಲ್ಲ ಮುಷ್ಟಿಕಾಸುರ ಮರ್ದನಾ ೯೭)ಕಾಳಿಂದೀ ಕುಲನ ಕಂಠೀರವ ೯೮) ಮದನ ಗೊಪಾಲ ೯೯)ವೇಣುಗೋಪಾಲ ೧೦೦) ವೇಣು ನಾದಪ್ರೀಯ ೧೦೧)ಷೋಡಶ ಸಹಸ್ರ ಗೋಪಿಕಾ ಸ್ರ್ತಿಯರವಿಲಾಸ ೧೦೨) ಅಹಲ್ಯಾ ಶಾಪ ವಿಮೋಚನ ೧೦೩) ದ್ರೌಪದಿ ಅಭಿಮಾನ ರಕ್ಷಕಾ ೧೦೪)ದುಷ್ಟಜನ ಮರ್ದನ ೧೦೫) ಶಿಷ್ಟಜನ ಪರಿಪಾಲಾ೧೦೬)ಮುಕುಂದಾ ೧೦೭)ಮುರಾರೆ ೧೦೮) ಕಂಸಾರೆ ೧೦೯)ಅಸುರಾರೆ ೧೧೦) ದೈತ್ಯ ಕುಲ ಸಂಹಾರಾ ೧೧೧)ಕ್ಷಾತ್ರಕುಲಾಂತಕಾ೧೧೨)ಸೋಮಕಾ ಸುರಾಂತಕಾ ೧೧೩) ಹಿರಣ್ಯಾಕ್ಷಾ ಹಿರಣ್ಯಕಶಿಪು ಸಂಹಾರ ೧೧೪)ರಾವಣಾ ಕುಂಭಕರ್ಣಮರ್ದನ ೧೧೫)ಶಿಶುಪಾಲ ದಂತವಕ್ರಶಿರಚ್ಛೆದನ೧೧೬)ರಘುಕುಲೋದ್ಭವ ೧೧೭) ದಶರಥ ಕೌಸಲ್ಯಾನಂದನ ೧೧೮)ಸಿಂಧೂರ ವರದಾ
೧೧೯ )ಸೀತಾಪತೆ ಶ್ರೀರಾಮಚಂದ್ರ೧೨೦) ಯದುಕು ಲೋತ್ಪನ್ನ ೧೨೧) ಯದುಕುಲೋದ್ಧಾರಿ ೧೨೨) ಯದು ಕುಲತಿಲಕಾ ೧೨೩) ಯದುಕುಲಸ್ರೇಷ್ಠಾ ೧೨೪)ವಸುದೇವ ದೇವಕೀನಂದನ ೧೨೫) ಯಶೋದಕಂದಾ ೧೨೬)ವೃಂದಾವನವಾಸಿ ೧೨೭) ಗೋಪ ಕುಮಾರ ೧೨೮) ಗೋಕುಲ ದ್ವಾರಕಾವಾಸಾ ೧೨೯)ಗೋವರ್ಧನೋದ್ಧಾರೀ ೧೩೦) ಕಾಲಿಯಾಮರ್ದನಾ ೧೩೧) ಪೂತನಾ ಪ್ರಾಣಾಪಹಾರಿ ೧೩೨)ಶಕಟಾಸುರ ಮರ್ದನಾ ೧೩೩) ಪಾಂಡವಬಂಧೋ ೧೩೪)ಪಾಂಡವಪರಿಪಾಲಾ ೧೩೫) ಪಾಂಡವ ಪ್ರೀಯಾ ೧೩೬)ಸುಧಾಮಸಖಾ ೧೩೭) ರುಕ್ಮಿಣೀವಲ್ಲಭಾ೧೩೮)ಸತ್ಯಭಾಮಾಪ್ರೀಯ ೧೩೯)ಗೋಪೀಜನಜಾರಾ ೧೪೦)ನವನೀತ ಚೋರ ೧೪೧)ಗೋಪಾಲಕೃಷ್ಣಾ ೧೪೨)ಗಂಗಾಜನಕಾ ೧೪೩)ಪ್ರಯಾಗ ಮಾಧವಾ೧೪೪)ಕಾಶೀ ಬಿಂದುಮಾಧವಾ ೧೪೫) ಪಂಪಾಪತಿ ಗುಲಗಂಜೀ ಮಾಧವಾ ೧೪೬) ರಾಮೇಶ್ವರಸೇತುಮಾಧವಾ ೧೪೭)ಬದರೀ ನಾರಾಯಣಾ ೧೪೮)ಶ್ರೀರಂಗನಾಥಾ ೧೪೯)ವಡ್ಡಿ ಜಗನ್ನಾಥ ೧೫೦)ಉಡುಪಿ ಶ್ರೀಕೃಷ್ಣ ೧೫೧)ಮೇಲುಕೋಟಿ ಚೆಲುವರಾ ಯಾ ೧೫೨)ಬೇಲೂರ ಚೆನ್ನಿಗರಾಯಾ ೧೫೩)ಅಹೋಬಲನರಸಿಂಹ ೧೫೪) ಪಾಂಡುರಂಗ ವಿಠಲಾ ೧೫೫) ಶ್ರೀಶೈಲವಾ ಸಾ ೧೫೬)ಅರುಣಾಚಲ ನಿಲಯಾ ೧೫೭)ವೃಷಭಾಚಲ ವಿಹಾರೀ ೧೫೮) ಅನಂತ ಶಯನಾ ೧೫೯)ದರ್ಭಶಯನಾ ೧೬೦) ಕಪಿಲ ೧೬೧)ಹಯಗ್ರೀವ ೧೬೨)ದತ್ತಾತ್ರೇಯ ೧೬೩)ಶಿಂಶುಮಾರ ೧೬೪)ಧನ್ವಂತರಿ ೧೬೫)ಮಮಸ್ವಾಮಿ ೧೬೬)ಸರ್ವಸ್ವಾಮಿ ೧೬೭)ಜಗದಂತರ್ಯಾಮಿ ೧೬೮)ಜಗದೀಶ ೧೬೯)ಪ್ರಾಣೇಶ ೧೭೦)ದ್ವಿಜಫಣಿಪ ಮೃಡೇಶ ೧೭೧) ಶ್ರೀರಮಣ ೧೭೨)ಭೂರಮಣ ೧೭೩)ದುರ್ಗಾರಮಣಾ ೧೭೪)ಶ್ರೀಲಕ್ಷ್ಮೀ ವೆಂಕಟರಮಣ ೧೭೫) ಭಾರತಿರಮಣ
ಮುಖ್ಯಪ್ರಾಣಾಂತರ್ಗತ೧೭೬) ಸೀತಾಪತೆ ಶ್ರೀರಾಮಚಂದ್ರ ೧೭೭)ಸಾಕ್ಷಾತ್ ಮನ್ಮಥನ್ಮಥ ೧೭೮)ಹರೀವಿಠಲಾ ೧೭೯) ಪುಂಡರೀಕ ವರದ ಪಾಂಡುರಂಗ ವಿಠಲಾ ೧೮೦)ಪುರಂದರಾ ವಿಠಲಾ.
1).Śrīmada’ananta kōṭi brahmāṇḍanāyaka 2).Ramābrahmarudrendrādi vandya 3)bhakta vatsala 4)bhavarōga vaidhya 5)śaraṇāgata vajrapan̄jara 6)āpad bāndhava 7)anāthabandhō 8)animitta bandhō 9)patitapāvanā 10)mahārōga nivāraṇā11)mahādurita nivāraṇā 12)mahābhaya nivāraṇā 13)mahābandha vimōcanā14)bhayakr̥t bhayavināśanā 15)kr̥pāvāridhi16)dēvadēvōttamā 17)dēvaśikhāmaṇi 18)kapaṭanāṭaka sūtradhārī 19) nityaroḷunitya20)satyasaṅkalpa 21)muktāmukta niyāmaka 22)mōkṣadharā 23)suvaikuṇṭhapati 24)vaikuṇṭhavihāri 15)tridhāmā 26)triguṇavarjita 27)jagajjanmādikāraṇā 28)jagatpate 29)jagadatyanta bhinna30)jagadīśa 31)jagadud’dhāra 32)jagatsvāmi 33)jagad vilakṣaṇa 34)jagannātha. 35) Viśvakuṭumbi 36)virāṭamūrti 37)hē maṅgaḷāṅga 38)hē śubhāṅga 39)parāmamaṅgaḷamūrti 40) kōmalāṅgā 41)nīlamegha śyāmā 42)induvadanā43)bahusundarā 44) indirā vandita caraṇā 45) vr̥koravandhya46)kēśavādi rūpa 47) ajādi rūpa 48)viśvādi rūpa 49) ātmādi rūpa 50)anirud’dhādirūpa 51) annamādi rūpa 52)anēka mantra pratipādyā 53)sarvasāra bhōkta 54) aṣṭaiśvaryapradātā 55)ōṅkāra śabdavācya 56)viśiṣṭa tāratamya vācya 57)anantānanta śabdavācya 58)aṇu mahadrūpa 59)śaṅkhacakrapītāmbara dhāri 60)kamalākṣa 61)kamalanābha 62) vaijayanti vanamāla śōbhita 63)kaustubha bhūṣita 64)suvarṇavarṇa 65)navaratna kuṇḍaladhāri 66)kastūri śrīgandha lēpana 67) garuḍārūḍha śōbhita 68)kāmadhēnu. 69) Śrīvatsa lān̄chana 70) kalpavr̥kṣa 71)cintāmaṇi 72) kṣirābdhīśāyi73) śēṣaśāyi 74)vaṭapatraśāyi 75) khagavāhanā 76)dēśakāla guṇātīta 77) ananta brahmā 78)anantaśakti 79)ananta mūrti 80)anantakīrti 81)purāṇapuruṣōttamā 82) akrūravaradā 83)ambarīṣavaradā 84)nāradavaradā 85)pral’hādavaradā 86)gajēndravaradā 87)mucakunda varadā 88)dhruvavaradā 89)bibhīṣaṇa varadā 90)kulālabhīsanrakṣakā 91) puṇḍarīka varadā 92)parāśara varadā 93)pārthasārathī 94)pāpavidūra 95)arijana pracaṇḍā 96)cāṇūra malla muṣṭikāsura mardanā 97)kāḷindī kulana kaṇṭhīrava 98) madana gopāla 99)vēṇugōpāla 100) vēṇu nādaprīya 101)ṣōḍaśa sahasra gōpikā srtiyaravilāsa 102) ahalyā śāpa vimōcana 103) draupadi abhimāna rakṣakā 104)duṣṭajana mardana 105) śiṣṭajana paripālā106)mukundā 107)murāre 108) kansāre 109)asurāre 110) daitya kula sanhārā 111)kṣātrakulāntakā112)sōmakā surāntakā 113) hiraṇyākṣā hiraṇyakaśipu sanhāra 114)rāvaṇā kumbhakarṇamardana 115)śiśupāla dantavakraśiracchedana116)raghukulōdbhava 117) daśaratha kausalyānandana 118)sindhūra varadā 119)sītāpate śrīrāmacandra120) yaduku lōtpanna 121) yadukulōd’dhāri 122) yadu kulatilakā 123) yadukulasrēṣṭhā 124)vasudēva dēvakīnandana 125) yaśōdakandā 126)vr̥ndāvanavāsi 127) gōpa kumāra 128) gōkula dvārakāvāsā 129)gōvardhanōd’dhārī 130) kāliyāmardanā 131) pūtanā prāṇāpahāri 132)śakaṭāsura mardanā133) pāṇḍavabandhō 134)pāṇḍavaparipālā 135) pāṇḍava prīyā 136)sudhāmasakhā 137) rukmiṇīvallabhā138)satyabhāmāprīya 139)gōpījanajārā 140)navanīta cōra 141)gōpālakr̥ṣṇā 142)gaṅgājanakā 143)prayāga mādhavā144)kāśī bindumādhavā 145) pampāpati gulagan̄jī mādhavā 146) rāmēśvarasētumādhavā 147)badarī nārāyaṇā 148)śrīraṅganāthā 149)vaḍḍi jagannātha 150)uḍupi śrīkr̥ṣṇa 151)mēlukōṭi celuvarā yā 152)bēlūra cennigarāyā 153)ahōbalanarasinha 154) pāṇḍuraṅga viṭhalā 155) śrīśailavā sā 156)aruṇācala nilayā 157)vr̥ṣabhācala vihārī 158) ananta śayanā 159)darbhaśayanā 160) kapila 161)hayagrīva 162)dattātrēya 163)śinśumāra 164)dhanvantari 165)mamasvāmi 166)sarvasvāmi 167)jagadantaryāmi 168)jagadīśa 169)prāṇēśa 170)dvijaphaṇipa mr̥ḍēśa 171) śrīramaṇa 172)bhūramaṇa 173)durgāramaṇā 174)śrīlakṣmī veṅkaṭaramaṇa 175) bhāratiramaṇa mukhyaprāṇāntargata176) sītāpate śrīrāmacandra 177)sākṣāt manmathanmatha 178)harīviṭhalā 179) puṇḍarīka varada pāṇḍuraṅga viṭhalā 180)purandarā viṭhalā.
Bhaktānāṁ mānasāmbhōjabhānavē kāmadhēnavē |
namatāṁ kalpataravē jayīndraguravē nama: |
| Period | 1517 – 1614 |
| Birth Name | Vittalacharya |
| Ashrama Name | Vishnu Tirtha |
| Ashrama Guru | Sri Vyasarajaru |
| Vidya Gurugalu | Sri Vyasarajaru |
| Successor | Sudheendra Tirtharu |
| Brindavana | Kumbakona |
| Aradhana Day | Jyesta Krishna Trayodashi |
| Vidya Shishyaru | Sri Sudheendraru, Sri Kambaluru Ramachandra Tirtharu |
| Ankitha | Vijayeendra Raama |
Dasara pada on Sri Vijayeendra theertharu
few works of Sri vijayeendra thirtharu:
Works of Sri Vijayeendra thirtharu
Mastered in 64 arts:
ಪಾರು ಮಾಡೋ ಸತ್ಯಧೀರನೆ ನಿನ್ನಯ ಚಾರು
ಚರಣಗಳಿಗೆರಗುವೆನು ||ಪ||
ಘೋರಮಾಯದ ಸಂಸಾರದೊಳಗೆ ಈಸಲಾರೆನೊ
ವರಮತಿಗುಣಗನ ಮಣಿಯೆ ||ಅ.ಪ||
ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ
ಮತಿಹೀನರಪಹಾಸ್ಯ ಮಾಡಿದರೆ
ಸತತ ದಶಮಾಷ್ಟ ವರ್ಷಗಳ ಪರಿಯಂತ ಹರಿಸೇವೆಯಾ
ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ
ಹಿತದಿಂದ ಕೈಗೊಂಡ ದಶರಥನಂದ ರಘುರಾಯ
ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ
ಭಕುತರನು ಕರೆವುತಲಿ ಬರುತಿರುವಂತೆ ನಿನ್ನಯ
ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ ||
ವರಮಧ್ವಮತಾಭಿಮಾನಿಯೆ ನಿನ್ನಯ
ದರುಶನದಿಂದ ಪಾವನನಾದೆನೋ
ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ
ವರಸೇವಾ ಸರ್ವಜ್ಞ ಪೀಠಕೆ
ಸರಸ ಶೋಭಿಸುವಾ ಹರಿವಾಯುಗಳಲಿ
ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ
ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ
ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ ||
ಆನಂದ ಜ್ಞಾನದಾಯಕನಾಜ್ಞೆಯಿಂ ಸತ್ಯ ಜ್ಞಾನಾ-
ನಂದಗಿತ್ತಿ ಉತ್ತಮಪದವಾ
ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ
ಅನುಮಾನ ಮಾಡದೇ ಪಾಲಿಸೋ ದೇವಾ
ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ
ಬಿಡಿಸೊ ದುರ್ಭಾವನಜ ಸಂಭವಾ ಧೀರ ಶ್ರೀಹನುಮೇಶವಿಠಲ
ಸೇವಕನೋ
ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ ||
Pāru māḍō satyadhīrane ninnaya cāru caraṇagaḷigeraguvenu ||pa||
ghōramāyada sansāradoḷage īsalāreno varamatiguṇagana maṇiye ||a.Pa||
yati āśramadi sītā patiya pūjisutire matihīnarapahāsya māḍidare satata daśamāṣṭa varṣagaḷa pariyanta harisēveyā ati bhakutiyindali māḍidyō jīyā hitadinda kaigoṇḍa daśarathananda raghurāya yativarane ninnaya kṣitiyoḷage hari bhakutaranu karevutali barutiruvante ninnaya prati diganta pariharisida varakīrti āśrayadinda bande ||
varamadhvamatābhimāniye ninnaya daruśanadinda pāvananādenō dorakādo yandigellarige ī gurugaḷa varasēvā sarvajña pīṭhake sarasa śōbhisuvā harivāyugaḷali niścayada bhakutiyanu pālisuvā nirutadali kāvā paramabhaktara bhāgyanidhiyandaridu hambalisutali ninnaya caraṇakeragide tvaradi karuṇisi poreyo śaraṇara san̄jīvā ||
ānanda jñānadāyakanājñeyiṁ satya jñānā- nandagitti uttamapadavā gānalōlana jagatpālana priyanē tava sēvā anumāna māḍadē pālisō dēvā tanuvanoppisi iḍuve ninnaḍigaḷa mēle śiravā biḍiso durbhāvanaja sambhavā dhīra śrīhanumēśaviṭhala sēvakanō anucitōcitakarma kr̥ṣṇārpaṇavenuva sumanava koḍu nī ||
ಮಧ್ವ ಸರೋವರದ ಸ್ನಾನವ ಮಾಡಿರೊ
ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ||pa||
ಕೃತಯುಗದಲಿ ಇದೇ ಅನಂತ ಸರೋವರ
ತ್ರೇತಾಯುಗದಲ್ಲಿ ವರುಣತೀರ್ಥ
ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-
ನ್ನತ ಕಲಿಯುಗದಲ್ಲಿ ಮಹಾ ತೀರಿಥ ||1||
ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-
ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ
ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ
ನಿರುತದಲ್ಲಿ ತೀವ್ರಗತಿ ಕೊಡುವಳೂ||2||
ಸಕಲ ವೇದಶಾಸ್ತ್ರ ಓದಿದವನಾದರೂ
ಶಕುತಿವಂತನಾಗಿ ಇದ್ದನಾಗೆ
ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು
ಶಕಲ ಮತಿಯಲಿ ಮಹಾನರಕ ಭುಂಜಿಸುವಾ ||3||
ಒಂದೆ ಮಜ್ಜನ ಮಾಡೆ ಅನಂತ ಜನುಮಕೆ
ತಂದು ಕೊಡುವದು ನರಗೆ ಮಿಂದ ಫಲವೊ
ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ
ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು ||4||
ಆದಿಯಲ್ಲಿ ಇದ್ದ ಲಿಂಗ ಶರೀರವು
ಛೇದಿಸುವದಕೆ ಇದೇ ಸ್ನಾನವೆನ್ನಿ
ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ
ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ||5||
Madhva sarōvarada snānava māḍiro bud’dhivantaru kēḷi idara mahātmeyanu ||pa||
kr̥tayugadali idē ananta sarōvara trētāyugadalli varuṇatīrtha kṣitiyoḷage dvāparadi candra puṣkaraṇi u- nnata kaliyugadalli mahā tīritha ||1||
suranadī mikkāda sthānadali sēve vi- staravāgi koḷutippaḷu upēkṣadi dhareyoḷage illi guru madhvamuni sarvārtha nirutadalli tīvragati koḍuvaḷū||2||
sakala vēdaśāstra ōdidavanādarū śakutivantanāgi iddanāge sukha tīrtha sarōvarada snāna māḍadiralu śakala matiyali mahānaraka bhun̄jisuvā ||3||
onde majjana māḍe ananta janumake tandu koḍuvadu narage minda phalavo endendige illi biḍade vāsavāda mandigaḷa puṇya pratāpa eṇisuvarāru ||4||
ādiyalli idda liṅga śarīravu chēdisuvadake idē snānavenni mōda mūruti nam’ma vijayaviṭhṭhala kr̥ṣṇa bhēdārtha matikoṭṭa bhēdavanu tolagisuvā||5||


